Author: roovari

ಸುರತ್ಕಲ್: ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪುಸ್ತಕಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ದ್ವಿತೀಯ ಬಿ.ಎ. ವಿದ್ಯಾರ್ಥಿ ಎಲ್.ಕೆ. ಭೀಮರಾಜ್‌ರವರು, ಡಾ|| ಎಸ್. ನರೇಂದ್ರಕುಮಾರ್ ಬರೆದಿರುವ “ಮಹಾ ಮಾನವತಾವಾದಿ, ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್” ಪುಸ್ತಕದಲ್ಲಿ ಅಂಬೇಡ್ಕರ್‌ರವರ ಜೀವನ ಚರಿತ್ರೆಯನ್ನು ಪರಿಚಯಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ್‌ ಆಚಾರ್ಯ, ಉಪನ್ಯಾಸಕಿಯಾರಾದ ದಯಾ ಸುವರ್ಣ, ಕ್ಯಾ. ಸುಧಾಯು ಶೆಟ್ಟಿ, ಡಾ| ವಿಜಯಲಕ್ಷ್ಮಿ, ರಶ್ಮೀ, ಗ್ರಂಥಪಾಲಕಿ ಡಾ|| ಸುಜಾತ.ಬಿ, ಗ್ರಂಥಾಲಯ ಸಿಬ್ಬಂದಿ ಸುಮನ್ ಉಪಸ್ಥಿತರಿದ್ದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಶಿರಿನ್ ವಂದಿಸಿದರು. ಶಿಫ್ನಾಝ್ ಕಾರ್ಯಕ್ರಮವನ್ನು ನಿರೂಪಿಸಿದರು. ಪುಸ್ತಕ ಪರಿಚಯಿಸಿದ ಎಲ್.ಕೆ. ಭೀಮರಾಜ್‌ರವರಿಗೆ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಸ್ಮರಣಿಕೆ ನೀಡಿ ಗೌರವಿಸಿದರು.

Read More

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ಅಧ್ಯಾಯ ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಮಧುಬನಿ ಕಲಾವಿದ ಶ್ರವಣ್ ಕುಮಾರ್ ಪಾಸ್ವಾನ್ ಅವರಿಂದ ಎರಡು ದಿನಗಳ ಮಧುಬನಿ ಕಲಾ ಕಾರ್ಯಾಗಾರ ಮತ್ತು ಪ್ರದರ್ಶನವನ್ನು ನಗರದ ಬಲ್ಲಾಲ್‌ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಏಪ್ರಿಲ್ 25 ಮತ್ತು 26, 2023ರಂದು ಆಯೋಜಿಸಿತು. ಶ್ರವಣ್ ಕುಮಾರ್ ಪಾಸ್ವಾನ್ ಮಧುಬನಿ ಶೈಲಿಯ ನಿಪುಣ ಕಲಾವಿದ. ಅವರ ಸಂಬಂಧಿ ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಮಗಳು ಉಜಾಲಾ ಪಾಸ್ವಾನ್ ಅವರಿಗೆ ಸಹಾಯ ನೀಡಿದರು. ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಏಪ್ರಿಲ್ 29 ರವರೆಗೆ ತೆರೆದಿತ್ತು. ಎಪ್ರಿಲ್ 25ರ ಮಂಗಳವಾರದಂದು ಬೆಳಗ್ಗೆ 11:00 ಗಂಟೆಗೆ ಬರಹಗಾರ್ತಿ ಹಾಗೂ ಮಾನವ ಸಂಪನ್ಮೂಲ ತರಬೇತುದಾರರಾದ ಭಾರತಿ ಶೇವ್‌ಗೂರ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತಿ ಶೇವ್‌ಗೂರ ಅವರು ಬರಹಗಾರರಾಗಿ ತಮ್ಮ ದೃಷ್ಟಿಕೋನ ನೀಡಿದರು. ವಿವಿಧ ಕಲಾ ಶೈಲಿಗಳ ಬಗ್ಗೆ…

Read More

ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ 75ನೇ ವಾರ್ಷಿಕ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮ ದಿನಾಂಕ 18-02-2023 ಶನಿವಾರ ಆರಂಭಗೊಂಡಿದ್ದು, ಈ ಸರಣಿಯ ಕೊನೆಯ ಕಾರ್ಯಕ್ರಮ “ಮಂಗಳ ಸಂಗೀತ ನೃತ್ಯ ಧಾರೆ’ಯು ಇದೇ ಬರುವ 07-05-2023ರಂದು ಮಲ್ಲತ್ತ ಹಳ್ಳಿಯ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಉಂಚ್ಛ ವೃತ್ತಿಯಿಂದ ಕಾರ್ಯಕ್ರಮ ಆರಂಭಗೊಂಡು ಮೊದಲ ಸಂಗೀತ ಕಛೇರಿಯನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರ ನಡೆಸಿಕೊಡಲಿದ್ದು, ಸಂಗೀತ ನಿರ್ದೇಶಕ ವಿದ್ವಾನ್ ಶ್ರೀ ಎಂ. ಎಸ್. ತ್ಯಾಗರಾಜ ಸಹ ಗಾಯಕರಾಗಿ ಸಹಕರಿಸಲಿದ್ದಾರೆ. ನಂತರ ಶ್ರೀಮತಿ ಎಂ.ಎಸ್. ವಿದ್ಯಾಲಕ್ಷ್ಮಿ ಮತ್ತು ಕು. ಗೌರಿ ಮನೋಹರಿ ‘ವಾಗ್ಗೇಯ ನೃತ್ಯ ವೈಭವ’ ನಡೆಸಿ ಕೊಡಲಿದ್ದಾರೆ. ಇವರಿಗೆ ನಟುವಾಂಗದಲ್ಲಿ ಶ್ರೀಮತಿ ಹೇಮಲತ ಎಸ್.ಆರ್., ಹಾಡುಗಾರಿಕೆಯಲ್ಲಿ ಶ್ರೀ ರಘುರಾಮ್, ಮೃದಂಗದಲ್ಲಿ ಶ್ರೀ ವಿನಯ ನಾಗರಾಜನ್ ಹಾಗೂ ಕೊಳಲಿನಲ್ಲಿ ಶ್ರೀ ರಘುಸಿಂಹ ಇವರು ಸಹಕರಿಸಲಿದ್ದಾರೆ. ಗುರು ವಿದ್ವಾನ್ ಕೀರ್ತಿಶೇಷ ಶ್ರೀ ಕೆ. ಮಂಜಪ್ಪ…

Read More

ತುಳುನಾಡಿನಲ್ಲಿ ಕಂಡು ಬರುವ ಪ್ರದರ್ಶನ ಕಲೆಗಳಲ್ಲಿ ಕಂಗಿಲು ಕೂಡ ಒಂದು. ಕಂಗಿಲು ಕುಣಿತ ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಕರಾವಳಿ ಕರ್ನಾಟಕ ಭಾಗದಲ್ಲಿ ಈ ಕುಣಿತವನ್ನು ಒಂದು ನಿರ್ದಿಷ್ಟ ಜನಾಂಗದವರು ನಡೆಸುತ್ತಾರೆ. ಮುಖ್ಯವಾಗಿ ಮುಂಡಾಲ ಜನಾಂಗದವರು ಕಂಗಿಲು ಕುಣಿತವನ್ನು ಒಂದು ಆರಾಧನಾ ಪ್ರಕಾರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಕುಣಿತವನ್ನು ನಡೆಸುವ ಮುಖ್ಯ ಉದ್ದೇಶ ಸಸ್ಯ ಸಮೃದ್ಧಿ ಮತ್ತು ರೋಗ ನಿವಾರಣೆ. ತುಳುವಿನಲ್ಲಿ ಬರುವ ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ ಈ ಕುಣಿತವನ್ನು ನಡೆಸುವುದು ರೂಢಿ. ಈ ಆರಾಧನಾ ಪ್ರಕ್ರಿಯೆಯಲ್ಲಿ ಕುಣಿತ, ಹಾಡು, ಹಾಸ್ಯ, ವಾದ್ಯ ಪರಿಕರಗಳ ನುಡಿಸುವಿಕೆ, ಡೋಲು ನಾದಗಳ ಜೊತೆ ಕಾಣಿಕೆ ಒಪ್ಪಿಸುವ ಕ್ರಮಗಳು ನಡೆಯುತ್ತವೆ. ಕಂಗಿಲು ಕುಣಿತ ಅಥವಾ ಆರಾಧನಾ ಪದ್ಧತಿಯು ಮೂರು ಹಗಲು ಮೂರು ರಾತ್ರಿ ನಡೆಯುತ್ತದೆ. ಈ ಆರಾಧನಾ ಪರಂಪರೆಯನ್ನು ಉಳಿಸಿಕೊಂಡು ಹೋಗುವ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗೊಡ್ಡ ಹಾಗೂ ಮುಂಡಾಲ ಜನಾಂಗದವರು ತಮ್ಮ ಮಾತೃ ಭಾಷೆಯಾದ…

Read More

ಮಡಿಕೇರಿ : ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ದಿನಾಂಕ 30-04-2023ರಂದು ನಡೆದ ‘ವಸಂತ ವಿಹಾರ’ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ “ಜಿಲ್ಲೆಯಲ್ಲಿ ಬೇಕಾದಷ್ಟು ಬೇಸಿಗೆ ಶಿಬಿರಗಳು ನಡೆಯುತ್ತಿವೆ. ನೃತ್ಯ ಕಲಿಕೆ, ಚಿತ್ರಕಲಾ ಕಲಿಕೆ, ಕರಾಟೆ, ಈಜು, ಕ್ರೀಡೆ ಇವೆಲ್ಲವನ್ನೂ ಒಳಗೊಂಡಂತಹ ಬೇಸಿಗೆ ಶಿಬಿರಗಳು ಎಲ್ಲೆಡೆ ಆಗುತ್ತಿದ್ದರೂ ಮಕ್ಕಳಿಗೆ ಜೀವನದ ಮೌಲ್ಯ ಶಿಕ್ಷಣ ತರಬೇತಿ ಯೋಗಾಸನ, ಪ್ರಾಣಾಯಾಮ, ಏಕಾಗ್ರತೆಯನ್ನು ಬೆಳೆಸಿಕೊಳ್ಳುವ ವಿಧಾನ, ವ್ಯಕ್ತಿತ್ವ ವಿಕಸನ, ಆಟ, ಪ್ರವಾಸ, ಕ್ರೀಡೆ ಇವೆಲ್ಲವನ್ನು ಒಳಗೊಂಡಂತಹ ಮತ್ತು ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಹೆಚ್ಚು ಪ್ರಯೋಜನವಾಗುವಂತಹ ವಿಚಾರವನ್ನು ಒಳಗೊಂಡ ವಸಂತ ವಿಹಾರ ಶಿಬಿರವು ನಿಜಕ್ಕೂ ಪ್ರಶಂಸನಾರ್ಹ. ಆಶ್ರಮವು ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಜಿಲ್ಲೆಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಮತ್ತು ಕೋವಿಡ್ ದುಸ್ಥಿತಿಯ ಸಂದರ್ಭದಲ್ಲಿ ಜನಸ್ನೇಹಿಯಾಗಿ ಲಕ್ಷಾಂತರ ರೂಪಾಯಿಗಳ ಅಹಾರ, ಬಟ್ಟೆ ಬರೆಗಳನ್ನು ನೀಡಿ ಮಾನವೀಯತೆ ಮೆರೆದಿದೆ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 109ನೆಯ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ 05-05-2023ನೆಯ ಶುಕ್ರವಾರದಂದು ಎಲ್ಲೆಲ್ಲೂ ಸಂಭ್ರಮದಿಂದ ಅಚರಿಸಲಾಗುತ್ತಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಮಂಗಳೂರು ಇಲ್ಲಿ ಪೂರ್ವಾಹ್ನ ಗಂಟೆ 10-30ಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇಂದಾಜೆ ಶ್ರೀ ಶ್ರೀನಿವಾಸ ನಾಯಕ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಇತಿಹಾಸ ಸಂಶೋಧಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ‘ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾರೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಕ.ಸಾ.ಪ. ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರು ಶ್ರೀ ಮಂಜುನಾಥ ಎಸ್. ರೇವಣಕರ್…

Read More

ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಚೈತ್ರ ಹೆಚ್. 03.11.1998ರಂದು ಹೆಚ್ ಜಿತೇಂದ್ರಿಯ ರಾವ್ ಹಾಗೂ ವೀಣಾ ಜೆ.ಹೆಚ್ ಇವರ ಮಗಳಾಗಿ ಜನನ. Mcom ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದ ಯಕ್ಷಗಾನವನ್ನು ಟಿವಿಯಲ್ಲಿ ಹಾಗೂ ರಂಗದಲ್ಲಿ ಕಲಾವಿದರು ಕುಣಿವುದನ್ನು ನೋಡಿ ನಾನು ಕೂಡ ಯಕ್ಷಗಾನ ಕಲಿಯಬೇಕು ಎಂದು ಆಸೆ ಹುಟ್ಟಿತು. ೬ನೇ ತರಗತಿಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಮಾಡುವ ಎಂದು ಶಾಲೆಯಲ್ಲಿ ಹೇಳಿದರು, ಆಸಕ್ತಿ ಇರುವವರು ಬನ್ನಿ ಎಂದರು. ಹಾಗೆ ಯಕ್ಷಗಾನದ ರಂಗದ ಪಯಣ ಶುರುವಾಯಿತು ಹಾಗೂ ಮನೆಯಲ್ಲಿ ತಂದೆ ಹಾಗೂ ತಾಯಿಯ ಹತ್ತಿರ ಏನಾದರೂ ಕಲಿಯಬೇಕು ಎಂದು ಹೇಳಿದರೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಇದು ನಾನು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಲು ತುಂಬಾ ಪ್ರೇರಣೆ ಎಂದು ಹೇಳುತ್ತಾರೆ ಚೈತ್ರ. ರಮೇಶ್ ಶೆಟ್ಟಿ ಬಾಯಾರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ‘ರಂಗ ವಸಂತ’ವನ್ನು ದೀಪ ಬೆಳಗಿ ಉದ್ಘಾಟಿಸಿದ ನಟಿ ಪ್ರತಿಮಾ ನಾಯಕ್‌ ಕುಂದಾಪುರ ಇವರು ಮಾತನಾಡುತ್ತಾ “ಮಹಿಳೆಯರ ಮತ್ತು ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ನಾರಿ ಚಿನ್ನಾರಿ ವೇದಿಕೆಯನ್ನು ಸೃಷ್ಟಿಸಿದ ರಂಗ ಚಿನ್ನಾರಿಯನ್ನು ಶ್ಲಾಘಿಸಬೇಕಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಸಾಕಷ್ಟು ಸಾಧನೆ ಮಾಡಿದ್ದು, ಮಹಿಳೆಯರು ಇನ್ನಷ್ಟು ಸಬಲೀಕರಣಗೊಳ್ಳಬೇಕಾಗಿದೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿರುವ ಮಹಿಳೆಯರು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕಾಗಿದೆ.” ಎಂದು ಹೇಳಿದರು. ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿ ಚಿನ್ನಾರಿ ಗೌರವಾಧ್ಯಕ್ಷೆ ಶ್ರೀಮತಿ ತಾರಾ ಜಗದೀಶ್‌ ವಹಿಸಿದ್ದರು. ಗಮಕಿ ಹಾಗೂ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಕ್ಕಳ ಪೋಷಣೆಯಲ್ಲಿ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಭಾಷಾ ವಿಭಾಗ, ಉಡುಪಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಯಕ್ಷ ಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರ ಕಾರ್ಯಕ್ರಮವು ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಮೇ 5ರಂದು ಸಂಜೆ 5:30 ರಿಂದ 6:30ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ. ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಕ.ಸಾ.ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ಶ್ರೀ ರವಿರಾಜ್ ಎಚ್.ಪಿ. ವಹಿಸಲಿದ್ದು. ವಿಶೇಷ ಉಪನ್ಯಾಸವನ್ನು ಸಾಹಿತಿ ಶ್ರೀ ನಾರಾಯಣ ಮಡಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಶ್ರೀ ಭುವನ ಪ್ರಸಾದ್ ಹೆಗ್ಡೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ಶ್ರೀ ವಿಶ್ವನಾಥ…

Read More

ಎಡನೀರು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಎಡನೀರು ಸಂಸ್ಥೆಯ ನೇತೃತ್ವದಲ್ಲಿ ಎಡನೀರಿನಲ್ಲಿ ಐದು ದಿನಗಳ ಕನ್ನಡ ಸಂಸ್ಕೃತಿ ಶಿಬಿರವು ದಿನಾಂಕ 02-05-2023 ಮಂಗಳವಾರ ಉದ್ಘಾಟನೆಗೊಂಡಿದೆ. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅನುಪಮಾ ರಾಘವೇಂದ್ರ ಸ್ವಾಗತಿಸಿದರು. ನಿವೃತ್ತ ಶಿಕ್ಷಕರಾದ ಶ್ರೀಯುತ ಮಾಧವ ಹೇರಳ ಇವರು ದೀಪ ಬೆಳಗಿಸಿ ಮಕ್ಕಳಿಗೆ ಹಿತನುಡಿದರು. ಮೊದಲ ದಿನದ ಶಿಬಿರದ ಸಂಪನ್ಮೂಲ ವ್ಯಕ್ತಿ ನಿರ್ಮಲ್ ಕುಮಾರ್ ಜೀವನ ಮೌಲ್ಯ, ಜೀವನ ಪಾಠ, ಮಕ್ಕಳು ಬದುಕಬೇಕಾದ ರೀತಿ, ಒಬ್ಬ ಅಧ್ಯಾಪಕನ ಹೊಣೆಗಾರಿಕೆ, ತಂದೆ ತಾಯಿಗಳ ಕರ್ತವ್ಯ ಹೀಗೆ ಹತ್ತು ಹಲವು ವಿಷಯಗಳನ್ನು ಬಹು ಸರಳವಾಗಿ ಪುಟ್ಟಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟರು. ಒಂದಷ್ಟು ಆಟ, ಒಂದಷ್ಟು ಮಾತು, ಇನ್ನೊಂದಷ್ಟು ಚಿಂತಾನಾರ್ಹ ವಿಡಿಯೋ ತುಣುಕುಗಳು, ಮತ್ತೊಂದಷ್ಟು ಹಾಡು, ಕತೆ ಎಲ್ಲವನ್ನು ಸುಂದರವಾಗಿ ಪೋಣಿಸಿ ಮಕ್ಕಳ ಮುಂದೆ ತೆರೆದಿಟ್ಟರು.

Read More