Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ “ಯಕ್ಷ ದೀವಟಿಗೆ” ದಿನಾಂಕ 14-08-2023ರ ಸೋಮವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕರು, ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸರೂ ಆದ ಡಾ.ಎಂ.ಪ್ರಭಾಕರ ಜೋಷಿಯವರು “ಯಕ್ಷಗಾನವು ರೂಪ ಪ್ರಧಾನವಾದ ಕಲೆ. ಯಾವುದೇ ಕಲೆಯ ಸ್ವರೂಪ ಪ್ರಜ್ಞೆಯ ಅರಿವಿಲ್ಲದೆ ಮಾಡುವ ವಿಮರ್ಶೆ ಸಾಧುವಾದುದಲ್ಲ. ಕಲಾ ವಿಮರ್ಶೆಗೆ ಅನೇಕ ಮುಖಗಳಿವೆ. ಯಕ್ಷಗಾನದ ವಿಮರ್ಶೆಗೆ ಕಾರಂತರು, ಸೇಡಿಯಾಪು ಹಾಗೂ ರಾಘವನ್ ಮೊದಲಾದ ಹಿರಿಯರ ಪರಂಪರೆಯಿದೆ. ವಿಮರ್ಶೆಯು ಯಾವುದೇ ಕಲೆಯಲ್ಲಿ ಪ್ರೀತಿಯನ್ನು ಮತ್ತು ತಿಳುವಳಿಕೆಯನ್ನು ಬೆಳೆಸಬೇಕು. ಆಳಕ್ಕಿಳಿಯದೆ ತಳಮಟ್ಟದ ಅಧ್ಯಯನ ಇಲ್ಲದೆ ಸರಿ ತಪ್ಪುಗಳ ವಿವೇಚನೆ ಕೂಡದು. ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನವೆಂದರೆ ಅದು ಯಕ್ಷಗಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಖ್ಯವಾಗಿ ಇತ್ತೀಚೆಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಅಸಮತೋಲನದ ಸಮಸ್ಯೆಯಿದೆ. ‘ಯಕ್ಷಗಾನ’ ಎಂಬುದು ಒಂದು ಸಮಷ್ಠಿ ಕಲೆ.…
ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಮತ್ತು ವಿಶ್ವಮಂಗಳ ಪ್ರೌಢಶಾಲೆ ಮಂಗಳ ಗಂಗೋತ್ರಿ, ಕೊಣಾಜೆ ಇವರ ಸಹಯೋಗದೊಂದಿಗೆ ವಿಶ್ವಮಂಗಳ ಶಾಲಾ ಸಭಾಂಗಣದಲ್ಲಿ ದಿನಾಂಕ 18-08-2023ರಂದು ‘ಕನ್ನಡ ಸಂಭ್ರಮ – ಕುವೆಂಪು ಕಂಪು’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ, ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆಯವರು ಕುವೆಂಪು ಸಾಹಿತ್ಯದ ಕುರಿತು ಉಪನ್ಯಾಸ ನೀಡಿ “ಕುವೆಂಪು, ಕಾರಂತ, ಕಯ್ಯಾರರಂತಹ ಮಹತ್ವದ ಲೇಖಕರು ಮಕ್ಕಳ ಸಾಹಿತ್ಯದಲ್ಲಿ ವಿಪುಲ ಕೃಷಿ ಮಾಡಿದ್ದು, ಅವುಗಳಲ್ಲಿ ಮೌಲ್ಯ ಪ್ರತಿಪಾದನೆ ಮುಖ್ಯ ಉದ್ದೇಶವಾಗಿದೆ. ಸರಳವಾದ ನಿರೂಪಣೆಯಲ್ಲಿ ಮಕ್ಕಳ ಮನಸ್ಸಿಗೆ ಮುಟ್ಟುವ ರೀತಿಯ ಸಾಹಿತ್ಯ ರಚನೆಗಳಾಗಿವೆ. ಇದಕ್ಕೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಉತ್ತಮ ಉದಾಹರಣೆ. ಸಾಹಿತ್ಯದ ಉದ್ದೇಶ ಮನುಷ್ಯ ಮನಸ್ಸಿನ ಸಂಕುಚಿತ ಆಲೋಚನೆಗಳನ್ನು ದೂರಮಾಡಿ ಪ್ರತಿಯೊಬ್ಬನನ್ನೂ ವಿಶ್ವ ಮಾನವನನ್ನಾಗಿಸುವುದಾಗಿದೆ. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳು ಈ ವಿಶ್ವಮಾನವತೆಯ…
ಉಡುಪಿ : ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆಯಲ್ಲಿ ಕಾಪು ವಿಧಾನಸಭಾ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಯಕ್ಷಗಾನ ತರಗತಿಯನ್ನು ದಿನಾಂಕ 22-08-2023ರಂದು ಹಿರಿಯ ಯಕ್ಷಗಾನ ಕಲಾವಿದ ಡಾ. ಕೊಳ್ಯೂರು ರಾಮಚಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಸದಸ್ಯರಾದ ಸುಬ್ರಹ್ಮಣ್ಯ ಬೈಪಡಿತ್ತಾಯ ಶುಭ ಹಾರೈಸಿದರು. ಶಾಲಾ ನಿವೃತ್ತ ಉಪನ್ಯಾಸಕ ನಂದನ್ ಕುಮಾರ್, ಪ್ರಾಚಾರ್ಯರಾದ ಪುಂಡರೀಕಾಕ್ಷ ಕೊಡಂಚ, ಆಡಳಿತಾಧಿಕಾರಿ ಮಂಜುಳ ಎಸ್. ನಾಯಕ್ ಹಾಗೂ ಯಕ್ಷಗುರು ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಟರಾಜ ಉಪಾಧ್ಯ ಸ್ವಾಗತಿಸಿ, ಪ್ರಭಾಕರ ಭಟ್ ವಂದಿಸಿ, ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.
ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ ‘ಅರ್ಥಾಂಕುರ’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 20-08-2023ರಂದು ಜರಗಿತು. ಈ ಕಾರ್ಯಕ್ರಮವನ್ನು ಉಪನ್ಯಾಸಕ ಸುಜಯೀಂದ್ರ ಹಂದೆಯವರು ಮದ್ದಳೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ “ನಾಟ್ಯ ಶಾಸ್ತ್ರದ ಭರತ ಹೇಳಿದ ಚಾಕ್ಷುಸೀ ಯಜ್ಞ ಯಕ್ಷಗಾನಕ್ಕೆ ಬಹಳ ಸೂಕ್ತವಾಗುತ್ತದೆ. ಕಣ್ಣುಗಳಿಗೆ ಯಜ್ಞ, ಕಣ್ಣುಗಳಿಗೆ ಸುಖವನ್ನು ನೀಡುವಂತಹ ಕಲೆ ಯಕ್ಷಗಾನ. ತಾಳಮದ್ದಳೆ ಯಕ್ಷಗಾನದ ಒಂದು ಪ್ರಕಾರ. ತಾಳಮದ್ದಳೆಯಲ್ಲಿ ಸಾಹಿತ್ಯ ಎಂಬ ಲತೆಯಲ್ಲಿ ನವರಸಗಳೆಂಬ ಹೂವರಳಿ ಅರ್ಥಾಂಕುರವೆಂಬ ಚಿಗುರು ಈ ವೇದಿಕೆಯಲ್ಲಿ ಆಗಾಗ ಫಸಲನ್ನು ಕೊಡುತ್ತಿರುವಂತಾಗಬೇಕು. ತಾಳಮದ್ದಳೆಯು ವಾಚಿಕ ಕಲೆ ಎನ್ನುವುದನ್ನು ಯಕ್ಷಗಾನದಲ್ಲಿ ಹಿಂದಿನ ಅನೇಕರು ಪ್ರಬುದ್ಧವಾಗಿಸಿದ್ದಾರೆ. ಇಂತಹ ಪ್ರಕಾರಕ್ಕೆ ಹೊಸ ತಲೆಮಾರಿನ ಅರ್ಥಧಾರಿಗಳು ಈ ವೇದಿಕೆಯಲ್ಲಿ ಬೆಳೆಯಬೇಕು, ಬೆಳಗಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಂದಟ್ಟು ಸುದರ್ಶನ ಉರಾಳ, ಡಾ. ಗಣೇಶ್ ಯು, ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಉಪನ್ಯಾಸಕ ರಾಘವೇಂದ್ರ ತುಂಗ, ಕೈಲಾಸ ಕಲಾಕ್ಷೇತ್ರದ…
ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ದಶಕದ ಸಂಭ್ರಮದಲ್ಲಿ ನಾಟಕ, ರಂಗಗೀತೆ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 25-08-2023, 26-08-2023 ಮತ್ತು 27-08-2023ರಂದು ಬೆಂಗಳೂರಿನ ಹನುಮಂತನಗರ, ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ. ದಿನಾಂಕ 25-08-2023ರಂದು ಸಂಜೆ 5:30ಕ್ಕೆ ದಶಕದ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮ. ಅತಿಥಿಗಳಾಗಿ ಹಿರಿಯ ರಂಗಕರ್ಮಿಗಳಾದ ಶ್ರೀ ಗುಂಡಣ್ಣ ಸಿ.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶ್ವನಾಥ್ ಹಿರೇಮಠ, ಕನ್ನಡ ಪ್ರಭದ ಜೋಗಿ ಬರಹಗಾರರು ಮತ್ತು ಪುರವಣಿ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಜಯ್ ಪ್ರಕಾಶ್ ಬಿ.ವಿ. ಭಾಗವಹಿಸಲಿದ್ದಾರೆ. ಘಂಟೆ 6ರಿಂದ ಬೆಂಗಳೂರಿನ ರಂಗ ತಂಡಗಳಿಂದ ರಂಗ ಗೀತೆಗಳು ಹಾಗೂ 7.15ಕ್ಕೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತ ಪಡಿಸುವ ನಾಟಕ ‘ಗಾಯಗಳು’. ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪಕ ಇದಾಗಿದೆ. ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಇವರದ್ದು. ದಿನಾಂಕ 26-08-2023ರಂದು ಸಂಜೆ 5:30ಕ್ಕೆ ಸಂವಾದ ಕಾರ್ಯಕ್ರಮ ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು…
ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ಬಂಟ್ವಾಳ ಇದರ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸೇವೆಯ ಪ್ರಯುಕ್ತ ದಿನಾಂಕ 26-08-2023ರಂದು ಸಂಜೆ 6-30ಕ್ಕೆ ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಚಂದ್ರಹಾಸ ಚರಿತ್ರೆ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು ಶ್ರೀ ಹರೀಶ ಬಳಂತಿಮುಗರು ಮತ್ತು ಶ್ರೀ ವಿಶ್ವಾಸ್ ಭಟ್ ಕರ್ಬೆಟ್ಟು, ಚೆಂಡೆಯಲ್ಲಿ ಶ್ರೀ ರಾಮ್ ಪ್ರಸಾದ್ ವದ್ವ ಮತ್ತು ಮದ್ದಳೆಯಲ್ಲಿ ಶ್ರೀ ಮುರಳೀಧರ ಹಳೆನೇರೆಂಕಿ. ಮುಮ್ಮೇಳದಲ್ಲಿ ಚಂದ್ರಹಾಸನಾಗಿ ಶ್ರೀಮತಿ ರಾಜಶ್ರೀ ನಾವಡ, ಕಪ್ಪದ ದೂತನಾಗಿ ಶ್ರೀಮತಿ ಸುಲೋಚನ ನಾವಡ, ದುಷ್ಟಬುದ್ಧಿಯಾಗಿ ಶ್ರೀಮತಿ ಸರಸ್ವತಿ ಹೊಳ್ಳ, ವಿಷಯೆಯಾಗಿ ಶ್ರೀಮತಿ ಶ್ರೀಲತಾ ನಾವಡ, ಕುಳಿಂದ ಮತ್ತು ಕಾಳಿಕಾದೇವಿಯಾಗಿ ಶ್ರೀಮತಿ ಜಯಲಕ್ಷ್ಮೀ ಮಯ್ಯ ಮತ್ತು ಮದನನಾಗಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಸಹಕರಿಸಲಿದ್ದಾರೆ.
ಕಾಸರಗೋಡು : ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನು ಆಧರಿಸಿ ‘ಮಂಜುನಾದ’ 15ನೇ ಸಂಗೀತ ಕಚೇರಿಯು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ದಿನಾಂಕ 20-08-2023ರಂದು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನೇತೃತ್ವದಲ್ಲಿ ನಡೆಯಿತು. ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮತ್ತು ಆಶ್ವೀಜಾ ಉಡುಪ, ವಯಲಿನ್ ನಲ್ಲಿ ಸುಪ್ರೀತಾ ಪಿ.ಎಸ್, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಮತ್ತು ತಂಬೂರದಲ್ಲಿ ಸುಜಾತ ಎಸ್. ಭಟ್ ಸಹಕರಿಸಿದರು. ಕೃತಿಗಳ ಪ್ರಸ್ತುತಿಯು ಸಂಗೀತ ರಸಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಮಂಗಳೂರು : ಕಲ್ಕೂರ ಪ್ರತಿಷ್ಠಾನವು ಆಯೋಜಿಸುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಶ್ರೀ ಕೃಷ್ಣನ ಕುರಿತಾದ ‘ಸ್ವರಚಿತ ಬಹುಭಾಷಾ ಕವನ ರಚನಾ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ. ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ, ತುಳು, ಸಂಸ್ಕೃತ, ಹಿಂದಿ, ಮಲಯಾಳ ಸಹಿತ ಯಾವುದೇ ಭಾಷೆಗಳ ಸ್ವರಚಿತ ಕವನಗಳನ್ನು ಕಳುಹಿಸಬಹುದು. ಸೆಪ್ಟಂಬರ್ 1ರೊಳಗಾಗಿ ಕವನಗಳನ್ನು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ವಾಟ್ಸಪ್ಪ್ ಮಾಡಬಹುದಾಗಿದೆ. ಆಯ್ದ ಕವನಗಳನ್ನು ಮುದ್ರಿಸಿ ಶ್ರೀ ಕೃಷ್ಣ ವೇಷ ಸ್ಪರ್ಧೆಯ ದಿನದಂದು ಕೃತಿ ರೂಪದಲ್ಲಿ ಪ್ರಕಟಿಸಲಾಗುವುದು. ಕವನ ಕಳುಹಿಸಬೇಕಾದ ವಿಳಾಸ : ಶ್ರೀಮತಿ ಗೀತಾ ಲಕ್ಷ್ಮೀಶ್, ಶ್ರೀ ಕೃಷ್ಣ ಕವನ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು, 575003. ವಾಟ್ಸಪ್ ನಂ.9535656805.
ಬೆಂಗಳೂರು : ಬೆಂಗಳೂರಿನ ಇನ್ ಫಾರ್ಮ್ ಥಿಯೇಟರ್ ಅಭಿನಯಿಸುವ ‘ಸರಸತಿಯಾಗಲೊಲ್ಲೆ’ ಸಾವಿತ್ರಿಬಾಯಿ ಫುಲೆಯವರ ಅಕ್ಷರಯಾನದ ಕಥಾ ಹಂದರವುಳ್ಳ ನಾಟಕವು ದಿನಾಂಕ 25-08-2023ರಂದು ಸಂಜೆ 7.30ಕ್ಕೆ ಬೆಂಗಳೂರಿನ ಕಲಾಗ್ರಾಮ ಮಲ್ಲತಳ್ಳಿ ಇಲ್ಲಿ ನಡೆಯಲಿದೆ. ಡಾ. ಎಂ.ಬೈರೇಗೌಡ (ಮುದ್ದುಶ್ರೀ ದಿಬ್ಬ) ಇವರು ರಚಿಸಿದ ಈ ನಾಟಕವನ್ನು ನವೀನ್ ಭೂಮಿ ಇವರು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಸಂಗೀತ ಉಮೇಶ್ ಸಂಗಪ್ಪ ಪತ್ತಾರ ಮತ್ತು ಶುಭಕರ ಬಿ.ಯವರದ್ದು, ನಿರ್ಮಾಣ ನಿರ್ವಹಣೆ ರಂಗನಾಥ ಶಿವಮೊಗ್ಗ, ಮೂಡಲಪಾಯ ಯಕ್ಷಗಾನದ ಹೆಜ್ಜೆಗಳು ಎ.ಬಿ. ಶಂಕರಪ್ಪ, ಭಾಗವತ ಬಸವರಾಜು. ರಂಗದ ಮೇಲೆ ಕಲಾವಿದರಾಗಿ ಲೀನಾ ಆರ್ಯ, ಅಕ್ಷಯ್ ರಾಜ್ ಎನ್.ಆರ್., ರಾಘವ್, ಕೌಸಲ್ಯ, ಶಶಾಂಕ್, ಎಂ. ಶ್ರೀನಿವಾಸ್ ರಾವ್, ವಿಷ್ಣು ಅವನೀಷಾಗೌಡ, ಚರನ್ ಗೌಡ ಮತ್ತು ಪ್ರಜ್ವಲ್ ಕುಮಾರ್ ಗೌಡ ಇವರುಗಳು ಅಭಿನಯಿಸಲಿದ್ದಾರೆ. ಟಿಕೇಟ್ ದರ : 150/- ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ 7829444660 ನಿರ್ದೇಶಕ ನವೀನ್ ಭೂಮಿ ತಿಪಟೂರು : ಮೂಲತಃ ತಿಪಟೂರಿನವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎಸ್.ಸಿ ಎಲೆಕ್ಟ್ರಾನಿಕ್ ಮೀಡಿಯಾ ಪದವಿ…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ‘ತುಳುವರೆ ಹಳ್ಳಿ ಗೊಬ್ಬುಲು’ ಕಾರ್ಯಕ್ರಮ ದಿನಾಂಕ 18-08-2023ರಂದು ಕೊಡ್ಮಣ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡ್ಮಣ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಭಾಸ್ಕರ ರಾವ್ ಇವರು ಮಾತನಾಡುತ್ತಾ “ಇಂದು ಭಾಷಾ ಗೊಂದಲಗಳ ಮಧ್ಯೆ ತುಳುವನ್ನು ಬಡವಾಗಲು ಬಿಡಬಾರದು. ತುಳುವಿಗೆ ಅದರದೇ ಆದ ವೈಶಿಷ್ಟವಿದೆ. ಈ ಮಣ್ಣಿನ ಕಂಪನ್ನು ಪಸರಿಸಲು ತುಳು ಕಾರಣವಾಗುತ್ತದೆ. ಇಂದಿನ ಯುಗದಲ್ಲಿ ಯಾವುದೇ ದೇಶದಲ್ಲಿದ್ದರೂ ನಾವು ಪ್ರತಿಯೊಬ್ಬನನ್ನೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಭಾಷಾ ವಿನಿಮಯದಿಂದ ವಿಚಾರಗಳನ್ನೂ ಅವರಿಗೆ ತಿಳಿಸಬಹುದು. ಆಗ ತುಳುವರು ತಮ್ಮ ತಮ್ಮ ಆಚಾರ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಭಾಷಾ ಪ್ರೇಮವನ್ನು ವೃದ್ಧಿಗೊಳಿಸಬಹುದು. ಭಾಷಾ ಬಳಕೆ ಹೆಚ್ಚಿದಷ್ಟೂ ಅದು ವೃದ್ಧಿಸುತ್ತದೆ” ಎಂದು ಹೇಳಿದರು. ಕೂಟದ ಅಧ್ಯಕ್ಷರಾದ ಬಿ.ದಾಮೋದರ ನಿಸರ್ಗರವರು “ಮರೆಯಾಗುತ್ತಿರುವ ಹಳ್ಳಿ ಆಟಗಳು, ಗ್ರಾಮೀಣ ಕ್ರೀಡೆಗಳು ಇಂದಿನ ಜನಾಂಗಕ್ಕೆ ಪರಿಚಯಿಸಲ್ಪಡಬೇಕು ಎಂಬ ಕಾರಣಕ್ಕಾಗಿ ಇಂದು ಈ…