Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ 105ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 10 ಜೂನ್ 2025ರಂದು ಮಧ್ಯಾಹ್ನ 2-00 ಗಂಟೆಗೆ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಚೈರ್ ಮ್ಯಾನ್ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಹಾಗೂ ಲೇಖಕರಾದ ರವೀಂದ್ರ ರೈ ಕಳ್ಳಿಮಾರ್ ಮತ್ತು ನಿರೂಪಕಿ ವಾರ್ತಾ ವಾಚಕಿ ಡಾ. ಪ್ರಿಯ ಹರೀಶ್ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು.
ಗೋಣಿಕೊಪ್ಪ : ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’, ‘ಕಾವೇರಿ ಎಜುಕೇಷನ್ ಸೊಸೈಟಿಯ’ ಆಶ್ರಯದಲ್ಲಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 31 ಮೇ 2025ರಂದು ನಡೆದ ‘ಕೂಟ’ದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳು ಬಿಡುಗಡೆಗೊಂಡಿತು. ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆ’ಯ 190ನೇ ಹೆಜ್ಜೆಯ ಪುಸ್ತಕವಾಗಿ ಉಳುವಂಗಡ ಕಾವೇರಿ ಉದಯ ಬರೆದ ‘ಕಾಂಗತಾನ ಚುಳಿ’, 191ನೇ ಹೆಜ್ಜೆಯ ಪುಸ್ತಕವಾಗಿ 17 ಲೇಖಕರು ಬರೆದ ‘ಕಕ್ಕಡ ಕಥೆ’, 192ನೇ ಹೆಜ್ಜೆಯ ಪುಸ್ತಕವಾಗಿ ಕೊಟ್ಟಂಗಡ ಕವಿತ ಬೋಜಮ್ಮ ಬರೆದ ‘ನಾ ಬಯಂದ ಪೂ’ ಎಂಬ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಂಡವು. ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ ಇವರು ಪುಸ್ತಕ ಬಿಡುಗಡೆಗೊಳಿಸಿ “ಕೊಡವ ಭಾಷೆ, ಸಾಹಿತ್ಯ, ಕಲೆ ಸೇರಿದಂತೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಅತೀ ಹೆಚ್ಚು ಕೊಡುಗೆ ನೀಡಿರುವ ಕೊಡವ ತಕ್ಕ್ ಎಳ್ತ್ ಕಾರಡ ಕೂಟ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ…
ಗುಂಡ್ಮಿ ಕಾಳಿಂಗ ನಾವಡ ಅವರು ಯಕ್ಷಗಾನ ಲೋಕದ ರಸರಾಗ ಚಕ್ರವರ್ತಿ ಎಂದು ಪ್ರಸಿದ್ಧರಾಗಿದ್ದವರು. ತಾವು ಬದುಕಿದ್ದ ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಅವರು ಮಾಡಿ ಹೋದ ಸಾಧನೆ ಮಹತ್ತರವಾದದ್ದು. ಕಾಳಿಂಗ ನಾವಡರು 1958ರ ಜೂನ್ 6ರಂದು ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು. ತಂದೆ ,ರಾಮಚಂದ್ರ ನಾವಡ ಅವರು 1960 – 80ರ ದಶಕದಲ್ಲಿ ಪ್ರಸಿದ್ದ ಭಾಗವತರಾಗಿದ್ದರು. ತಾಯಿ ಪದ್ಮಾವತಿ. ತಮ್ಮ ತಂದೆಯವರಿಂದ ಶಿಕ್ಷಣ ಪಡೆದ ಕಾಳಿಂಗರು ‘ಹೂವಿನ ಕೋಲು’, ‘ಜಾಪು’, ‘ಚಾಪು’ ಗಳ ಮೂಲಕ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. 1983ರಲ್ಲಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ ಆಗ್ನೇಯ ನಾವಡ ಎಂಬ ಮಗ ಇದ್ದಾರೆ. ತಂದೆ ರಾಮಚಂದ್ರ ನಾವಡರು, ಕಾಳಿಂಗ ನಾವಡರನ್ನು ಆಗಿನ ಪ್ರಸಿದ್ದ ಭಾಗವತರಾಗಿದ್ದ ನಾರಣಪ್ಪ ಉಪ್ಪೂರು ಅವರ ಬಳಿ ಸೇರಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಕಾಳಿಂಗ ನಾವಡರಲ್ಲಿ ಉಜ್ವಲವಾದ ಭವಿಷ್ಯವಿರುವುದನ್ನು ಕಂಡ ನಾರಣಪ್ಪ ಉಪ್ಪೂರು ಅವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದರು. ಕಾಳಿಂಗ ನಾವಡರು ಗುರು…
ಬೆಂಗಳೂರು : ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಹಮ್ಮಿಕೊಂಡಿದ್ದ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಂಪಾದಿಸಿರುವ ‘ದೇವುಡು ಹೇಳಿದ ಮಕ್ಕಳ ಕಥೆಗಳು’ ಶೀರ್ಷಿಕೆಯಡಿ ಐದು ಪುಸ್ತಕಗಳ ಲೋಕರ್ಪಣಾ ಸಮಾರಂಭವು ದಿನಾಂಕ 05 ಜೂನ್ 2025ರ ಗುರುವಾರದಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಮಾತನಾಡಿ ‘ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಗೊಂಡ ಅನೇಕ ಕೃತಿಗಳನ್ನು ಓದಿದ್ದೇನೆ. ಕನ್ನಡ ಭಾಷೆಯಲ್ಲಿರುವ ಸತ್ವ ತಮಿಳು ಭಾಷೆಯಲ್ಲಿಲ್ಲ. ಕಮಲ್ ಹಾಸನ್ ಅವರು ಅವಿವೇಕಿತನದ ಹೇಳಿಕೆ ನೀಡಿದ್ದಾರೆ. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹೇಗೆ ಹುಟ್ಟುತ್ತದೆ ಎಂಬ ಕಲ್ಪನೆಯೂ ಅವರಿಗಿಲ್ಲ. ಭಾಷೆಯ ಬಗ್ಗೆ ಸಂಶೋಧನೆ ನಡೆಸದೆ ಹೇಳಿಕೆ ನೀಡಿದ್ದಾರೆ. ಯಾರೋ ಬ್ರಿಟಿಷ್ ವಿದ್ವಾಂಸರು ಅರಿವಿಲ್ಲದೆ ಕೆಲ ತಪ್ಪುಗಳನ್ನು ಬರೆದಿದ್ದಾರೆ. ಅದನ್ನು ವಿಮರ್ಶಿಸಿಲ್ಲ. ಅದೇ ವಿದ್ವಾಂಸರು ಸಂಸ್ಕೃತದಿಂದ ತಮಿಳು…
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರವು ನೀಡುವ 2020-21ನೇ ಸಾಲಿನ ‘ಡಾ.ಜಿ.ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 04 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಸಮಾರಂಭದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 17 ವರ್ಷಗಳಿಂದ ನಡೆದುಕೊಂಡು ಬಂದ ‘ಆಳ್ವಾಸ್ ನುಡಿಸಿರಿ’, ಕನ್ನಡ ಸಾಹಿತ್ಯ ಸಮ್ಮೇಳನ, 30 ವರ್ಷಗಳಿಂದ ನಿರಂತರ ಆಯೋಜನೆಗೊಳ್ಳುತ್ತಿರುವ ‘ಆಳ್ವಾಸ್ ವಿರಾಸತ್’ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯದ ನಂ.1 ಕನ್ನಡ ಮಾಧ್ಯಮ ಶಾಲೆಯೆಂದು ಸತತ ಗೌರವಕ್ಕೆ ಪಾತ್ರವಾಗುತ್ತಿರುವ ಸಂಪೂರ್ಣ ಉಚಿತ ಶಿಕ್ಷಣದ ‘ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ’, ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಆಳ್ವಾಸ್ ಧೀಂಕೀಟ ಯಕ್ಷಗಾನ ಅಧ್ಯಯನ ಕೇಂದ್ರಗಳ ಮೂಲಕ ಕನ್ನಡ ನಾಡು- ನುಡಿ, ಕಲೆ, ಸಂಸ್ಕೃತಿಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿಲಾಗಿದೆ.
ಮಂಡ್ಯ : ‘ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 06 ಜೂನ್ 2025ರಂದು ಮಂಡ್ಯದ ಕರ್ನಾಟಕ ಸಂಘದ ಕೆ. ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ 08 ಜೂನ್ 2025ರ ಭಾನುವಾರ ಸಂಜೆ ಘಂಟೆ 5.00 ರಿಂದ ನಡೆಯಲಿದೆ. ‘ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ಗೆ ಮೈಸೂರಿನ ವಿಶ್ರಾಂತ ಕುಲಪತಿಗಳಾದ ಡಾ. ಪದ್ಮಾಶೇಖರ್ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ಗೆ ವಿಜಯನಗರ ಜಿಲ್ಲೆಯ ಖ್ಯಾತ ವಿದ್ವಾಂಸರಾದ ಡಾ. ಕೆ. ರವೀಂದ್ರನಾಥ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂಪಾಯಿ 15,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಕರ್ನಾಟಕ ಸಂಘ (ರಿ) ಮಂಡ್ಯ ಇದರ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರಿನ ಖ್ಯಾತ ಸಾಹಿತಿಗಳಾದ ಡಾ.ರಾಗೌ ಹಾಗೂ ನಾಗಮಂಗಲ ತಾಲ್ಲೂಕು ಕರಡಹಳ್ಳಿಯ ಶ್ರೀ ಕೆ. ಎಸ್.…
ವೆಂಕಟೇಶ ಹುಣಶೀಕಟ್ಟಿ ಸರ್ ನಮಗೆ ಕಾಲೇಜಿನಲ್ಲಿ ಭೌತ ರಸಾಯನಶಾಸ್ತ್ರ ಬೋಧಿಸಿದವರು. ಜೊತೆ ಜೊತೆಗೆ ಕಾವ್ಯ ಕೃಷಿಯಲ್ಲೂ ತೊಡಗಿದವರು. ಅವರು ಮತ್ತು ಅವರ ಸಮಕಾಲೀನ ಸಾಹಿತ್ಯ,ರಂಗಭೂಮಿಯನ್ನು ಪ್ರೀತಿಸುತ್ತಿದ್ದ, ತೊಡಗಿಕೊಂಡಿದ್ದ ಪ್ರೊಫೆಸರ್ ಗಳು ನಮ್ಮ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು. ಇವತ್ತು ನಾವು ಏನಾಗಿದ್ದೆವೋ ಅದಕ್ಕೆ ಅವರೂ ಕಾರಣರು. ಹುಣಶೀಕಟ್ಟಿ ಸರ್ ನಮ್ಮ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ ಅಪಾರ. ಮೊನ್ನೆ ಮೊನ್ನೆ ನಾನು ದೂರದರ್ಶನದ ಸಂದರ್ಶನ ಮುಗಿಸಿ ಹೊರಬರುತ್ತಿದ್ದಂತೆಯೇ ಕರೆ ಮಾಡಿದವರು ಅವರು. ಅವರ ಮಾತುಗಳಲ್ಲಿ ಅತೀವ ಪ್ರೀತಿಯಿತ್ತು. ಅಂಥ ಹುಣಶೀಕಟ್ಟಿ ಸರ್ ನನ್ನ ‘ ಹೌಸ್ ಫುಲ್’ ಕುರಿತು ಬರೆದಿದ್ದಾರೆ. ನನ್ನ ವಿದ್ಯಾರ್ಥಿ ಮಿತ್ರರಾದಂಥ ಕಿರಣ ಭಟ್ಟ (ಹೊನ್ನಾವರ )ಅವರು ಕಳುಹಿಸಿದ ಪುಸ್ತಕ “ಹೌಸ್ ಫುಲ್”–ಕೃತಜ್ಞತೆಗಳು. ಕಿರಣ ಭಟ್ಟ ಅವರ ಎರಡನೇ ಕೃತಿ ಇದು. ಮೊದಲನೆಯದು “ರಂಗಕೈರಳಿ” (ಇದರ ಕುರಿತೂ ಅಭಿಪ್ರಾಯ ತಿಳಿಸಿದ್ದೆ ).ಜಿ. ಎನ್. ಮೋಹನ್ ಅವರ ಪ್ರೋತ್ಸಾಹದಿಂದ, ಒತ್ತಾಸೆಯಿಂದ ಇವೆರಡೂ ಕೃತಿಗಳು ಹೊರಬಂದಿವೆ. ಇಲ್ಲದೇ ಹೋಗಿದ್ದರೆ ಕಿರಣ…
ತೆಕ್ಕಟ್ಟೆ : ಧಮನಿ (ರಿ.) ತೆಕ್ಕಟ್ಟೆ ಆಶ್ರಯದಲ್ಲಿ ನಡೆದ ‘ಚಿಗುರು’ ಮಕ್ಕಳ ವೃತ್ತಿಪರ ರಂಗ ತರಬೇತಿ ಶಿಬಿರದಲ್ಲಿ ಕೋಟ ಶಿವರಾಮ ಕಾರಂತರ ಮಕ್ಕಳ ನಾಟಕ “ಸೂರ್ಯ ಚಂದ್ರ” ಕುಂದಾಪುರ(ಕೋಟ) ಕನ್ನಡದಲ್ಲಿ ಸಿದ್ಧಗೊಂಡು 31 ಮೇ 2025ರ ಶನಿವಾರದಂದು ಪ್ರದರ್ಶನಗೊಂಡಿತು. ಈ ಪ್ರಯೋಗಕ್ಕೆ ಶುಭಕರ್ ಪುತ್ತೂರು ಸಂಗೀತ ನೀಡಿದ್ದು, ಬೆಳಕಿನಲ್ಲಿ ಶ್ರೀಶ ತೆಕ್ಕಟ್ಟೆ, ರಂಗಸಜ್ಜಿಕೆಯಲ್ಲಿ ಪ್ರಸಾದ್ ಬ್ರಹ್ಮಾವರ, ವಸ್ತ್ರ ವಿನ್ಯಾಸದಲ್ಲಿ ರಕ್ಷಿತಾ ಎಸ್. ಬೈಕಾಡಿ, ಪ್ರಸಾಧನದಲ್ಲಿ ರಮೇಶ್ ಕಪಿಲೇಶ್ವರ ಸಹಕರಿಸಿದರು. ರೋಹಿತ್ ಎಸ್. ಬೈಕಾಡಿ. ಈ ನಾಟಕವನ್ನು ಕುಂದಾಪ್ರ ಕನ್ನಡಕ್ಕೆ ಅನುವಾದಿಸಿ, ವಿನ್ಯಾಸ ಮಾಡಿ ನಿರ್ದೇಶಿಸಿದ್ದಾರೆ. ಶ್ರೀಶ ತೆಕ್ಕಟ್ಟೆ ನಿರ್ವಹಣೆ ಮಾಡಿದರು.
ಬೆಂಗಳೂರು : ಸ್ವಾಯಕ್ಷೇಮ ಫೌಂಡೇಷನ್, ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ಮತ್ತು ಅನೂರ್ ಅನಂತಕೃಷ್ಣ ಶರ್ಮ ಇವರ ಸಹಯೋಗದಲ್ಲಿ ‘ಸ್ವರೂಪಚಾರ’ ಚಿಕಿತ್ಸಕ ಸಂಗೀತ ಕಛೇರಿ ಸರಣಿಯನ್ನು ದಿನಾಂಕ 07 ಜೂನ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರಿನ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಶ್ರೀಮತಿ ಮೇಧಾ ಭಟ್ ಇವರ ಹಾಡುಗಾರಿಕೆಗೆ ಹರೀಶ್ ಕರ್ಣಂ ಇವರು ಹಾರ್ಮೋನಿಯಂನಲ್ಲಿ ಹಾಗೂ ವಿಘ್ನೇಶ್ ಕಾಮತ್ ಇವರು ತಬಲಾದಲ್ಲಿ ಸಾಥ್ ನೀಡಲಿದ್ದಾರೆ.
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 14 ಮತ್ತು 15 ಜೂನ್ 2025ರಂದು ಸಂಜೆ 7-00 ಗಂಟೆಯಿಂದ 8-15 ರವೆರೆಗೆ ಗೂಗಲ್ ಮೀಟ್ ನಲ್ಲಿ ನಡೆಯಲಿದೆ. ವಿದ್ವಾನ್ ಡೆಲ್ಲಿ ವಿ. ಮುತ್ತು ಕುಮಾರ್ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ಅಪರೂಪದ ಸಂಯೋಜನೆಯನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 7411916098 ಸಂಖ್ಯೆಯನ್ನು ಸಂಪರ್ಕಿಸಿರಿ.