Subscribe to Updates
Get the latest creative news from FooBar about art, design and business.
Author: roovari
12 ಫೆಬ್ರವರಿ 2023: ಉಡುಪಿ ಜಿಲ್ಲೆಯ ಪುತ್ತಿಗೆ ಗ್ರಾಮದ ಗಣೇಶ್ ನಾಯಕ್ ಹಾಗೂ ಸುಶೀಲಾ ನಾಯಕ್ ಇವರ ತೃತೀಯ ಪುತ್ರರಾಗಿ ೦೨.೦೭.೧೯೭೪ ರಂದು ನಿತ್ಯಾನಂದ ನಾಯಕ್ ಅವರ ಜನನ. ೬ ನೇ ತರಗತಿ ವರೆಗೆ ವಿದ್ಯಾಭ್ಯಾಸ. ಸ್ವಂತ ಆಸಕ್ತಿಯಿಂದ ಯಕ್ಷಗಾನ ರಂಗಕ್ಕೆ ಬಂದವರು ನಿತ್ಯಾನಂದ ನಾಯಕ್. ಸುಬ್ರಹ್ಮಣ್ಯ ಮುದ್ರಾಡಿ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :- ಭಾಗವತರ ನಿರ್ದೇಶನದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ನಾವು ರಂಗ ಪ್ರದೇಶದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ನಾಯಕ್ ಅವರು ಹೇಳುತ್ತಾರೆ. ಭಸ್ಮಾಸುರ ಮೋಹಿನಿ, ಮಹಿಷಮರ್ದಿನಿ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಪುಣ್ಯಕೋಟಿ, ಕಂಸವಧೆ, ದಕ್ಷ ಯಜ್ಞ, ಅಶೋಕ ಸುಂದರಿ, ಶನೀಶ್ವರ ಮಹಾತ್ಮೆ, ಹಿಡಿಂಬ ವಿವಾಹ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಭಸ್ಮಾಸುರ, ದೇವಿ, ಮಹಿಷಾಸುರ, ನಾರದ, ದೇವೇಂದ್ರ, ಪದ್ಮಗಂದಿನಿ, ಹುಲಿ, ಪಾರ್ವತಿ, ವೀರಭದ್ರ, ಚಾನುರರಮುಷ್ಟಿಕ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಯಕ್ಷಗಾನವು…
ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ ಸಿಗಲಿ – ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ 11 ಫೆಬ್ರವರಿ 2023 ಉಡುಪಿ: ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ, ಸಂಗೀತ ನಾಟಕ ಅಕಾಡೆಮಿಯಿಂದ ಶಾಸ್ತ್ರೀಯ ಪ್ರಕಾರಗಳ ಮನ್ನಣೆ ಜತೆಗೆ ಕಲಾಭಿಮಾನದ ಹೊಸ ಶಕ್ತಿಯ ಅಭಿಯಾನವಾಗಲಿ ಎಂದು ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು. ಅವರು ಕುಂಜಿಬೆಟ್ಟು ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಶನಿವಾರ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಂಸ್ಕತಿ, ಭಾರತೀಯ ಸಂಸ್ಕಾರದ ಧಾರ್ಮಿಕ ಸಾರವಾದ ಯಕ್ಷಗಾನಕ್ಕೆ 11ಆಧಾರ ಸ್ಥಂಭಗಳಿದ್ದು 50ರಷ್ಟು ಗುಣಮಟ್ಟದ ಸಂಶೋಧನಾ ಅಧ್ಯಯನ ನಡೆದಿದೆ. ಯಕ್ಷಗಾನ ಶಿಕ್ಷಣ ಪದ್ಧತಿ, ಸಂಘಟನೆಯ ಸ್ವರೂಪದಲ್ಲಿ ಆಮೂಲಾಗ್ರ ಪರಿಷ್ಕಾರಗಳಾಗಬೇಕು. ಯಕ್ಷಗಾನ ಶಿಕ್ಷಣದಲ್ಲಿ ಕಲಾತತ್ವ, ಅನ್ಯಕಲೆಗಳ ಪರಿಚಯ ಅಳವಡಿಕೆ ಅಗತ್ಯ. ಕಲೆಗೆ ಪಾರಂಪರಿಕ, ಸಾಂಸ್ಥಿಕ, ಸಾಮುದಾಯಿಕ ಪದ್ಧತಿಗಳ ಯೋಗ್ಯ ಸಮನ್ವಯದ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸರಕಾರಿ, ಖಾಸಗಿ ನೆರವು, ರಾಜ್ಯ ಸರಕಾರದಿಂದ ಯಕ್ಷಗಾನ ಕೇಂದ್ರಗಳಿಗೆ ಸಮಗ್ರ ಗೌರವಯುತ ಅನುದಾನ ನೀತಿ ರೂಪಿಸಿ, ಯಕ್ಷಗಾನ ಮೇಳ…
11 ಫೆಬ್ರವರಿ 2023, ಬೆಂಗಳೂರು: ಕನ್ನಡದ ಶ್ರೇಷ್ಠ ನಾಟಕ ಬರಹಗಾರರಲ್ಲಿ ಒಬ್ಬರಾದ ಡಿ ಆರ್ ನಾಗರಾಜ್ ರವರು ಆಂಟನ್ ಚೆಕಾವ್ ರವರು ಬರೆದಿರುವ ವಾರ್ಡ್ ನಂ. 6 ಎಂಬ ಕೃತಿಯನ್ನು ಕನ್ನಡಕ್ಕೆ ರೂಪಾಂತರ ಮಾಡಿ 1980ರ ದಶಕದಲ್ಲಿ ಕನ್ನಡದ ನಾಟಕ ಪ್ರಪಂಚಕ್ಕೆ ಪರಿಚಯಿಸಿದರು. ಕತ್ತೆಲೆ ದಾರಿ ದೂರ ಕನ್ನಡ ನಾಟಕ ರಂಗದಲ್ಲೆ ಅದರದ್ದೆ ಆದ ದೂರದ ದಾರಿಯನ್ನು ಹುಡುಕಿಕೊಂಡು ತನ್ನದೆ ಛಾಪನ್ನು ಮೂಡಿಸಿದೆ. ಈ ಕೃತಿಯು ಮಾನಸಿಕ ಸ್ತಿಮಿತ ಕಳೆದುಕೊಂಡಿರುವ ಮನಸುಗಳ ನಡುವೆ ನಡೆಯುವ ಒಂದು ಕಥೆ. ಅನ್ಯಾ ಯ, ಶೋ ಷಣೆ, ಭ್ರಷ್ಟಾಚಾರ, ಹಿಂಸೆ, ದೌರ್ಜ ನ್ಯ- ಇದೆಲ್ಲವು ಭ್ರಷ್ಟ ಅಧಿಕಾರಿಯ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುವ ಮೂಲ ಬೇರಾಗಿ ಈ ನಾಟಕದಲ್ಲಿ ಕಾಣುತೊ ಡಗುತ್ತದೆ. ಆಂಟನ್ ಚೆಕಾವ್ ಪ್ರಕಾರ ‘ಒಬ್ಬ ಪಾತ್ರಧಾರಿಯ ಕರ್ತ ವ್ಯ ಪ್ರಶ್ನೆಗಳನ್ನು ಹುಡುಕುವುದೇ ಹೊ ರತು ಉತ್ತರಗಳನ್ನು ಹುಡುಕುವುದಲ್ಲ’. ನಾಗರಾಜ್ ರವರ ಪ್ರಕಾರ ಮನುಷ್ಯ ತನ್ನ ಬುದ್ಧಿ ಮಟ್ಟದಲ್ಲಿ, ತನ್ನ ತೊ ಡಲಾಟದಲ್ಲಿ —— ತನ್ನ…
ಈ ನಾಟಕದ ಮೊದಲ ಪ್ರದರ್ಶನದಿಂದಲೇ ನಾಟಕದ ಕುರಿತು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಆವಾಗಿನಿಂದ್ಲೂ ನಾಟ್ಕ ನೋಡಲೇಬೇಕೆಂಬ ತೀವೃ ತುಡಿತವಿತ್ತು. ಆಗ ಮೈಸೂರಿನಲ್ಲಿ ಮಾತ್ರ ಪ್ರದರ್ಶನಗಳಾಗ್ತಿದ್ವು. ನಮ್ಮೂರಿಗೆ ಮೈಸೂರು ತುಂಬ ದೂರ. ಆದರೂ ಹೊಗೋ ಉಮೇದು ತುಂಬ ಇತ್ತು. ಯಾಕೋ ಸಧ್ಯವಾಗಲೇ ಇಲ್ಲ. ಈ ಮಧ್ಯೆ ನಾಟಕದ ಪ್ರದರ್ಶನಗಳೂ ನಡೆದಂತೆ ಕಾಣಲಿಲ್ಲ. ಇನ್ನೇನು ಇಂಥದೊಂದು ನಾಟ್ಕ ಕೈತಪ್ಪಿ ಹೋಯ್ತಲ್ಲ ಅಂದ್ಕೊಳ್ತಾ ಇರುವಾಗ್ಲೇ ಗೆಳೆಯ ಐಕೆ ಉಡುಪಿಯ ಪ್ರದರ್ಶನದ ಬಗ್ಗೆ ಹೇಳಿದ್ರು. ಮಗ್ಗುಲಲ್ಲೇ ಇರೋವಾಗ ಬಿಡೋದುಂಟೇ?. ಮೊನ್ನೆ ಉಡುಪಿಗೆ ಹೊರಟೇಬಿಟ್ಟೆ. ರಂಗಭೂಮಿ ಯ ನಾಟಕೋತ್ಸವದಲ್ಲಿ ನಾಟ್ಕ ನೋಡ್ದೆ. ಖರೇ ಹೇಳ್ತೇನೆ. ಅಷ್ಟು ದೂರ ಹೋಗಿ ನಾಟ್ಕ ನೋಡಿದ್ದಕ್ಕೆ ಸಾರ್ಥಕ ಅನ್ನಿಸ್ತು. ಮೊದಲಿಗೆ ಈ ನಾಟ್ಕ ಉಡುಪಿಗೆ ತಂದಿದ್ದಕ್ಕೆ ಪ್ರದೀಪ್ ಗೆ ಧನ್ಯವಾದ. ರಾಮಾಯಣ, ಮಹಾಭಾರತಗಳು ಭಾರತೀಯ ಸೃಜನಶೀಲ ಕಲೆಗಳನ್ನು ಕಾಡಿದಷ್ಟು ಇನ್ಯಾವುದೂ ಕಾಡಿಲ್ಲವೇನೋ. ಮೊಗೆದಷ್ಟೂ ಸಿಗುತ್ತ ಹೋಗುವ ಜೀವನಾನುಭವಗಳು, ಎಣೆಯಿಲ್ಲದಷ್ಟು ಸಂಘರ್ಷಗಳು. ನೂರಾರು ವ್ಯಾಖ್ಯಾನಗಳು. ಹಾಗೆಂತಲೇ ಶಾಸ್ತ್ರೀಯ ಮತ್ತು ಜಾನಪದೀಯ ಕಲಾಪ್ರಕಾರಗಳ ಫೇವರಿಟ್ ಅವು.…
10 February 2023, Mangaluru: The National School of Drama organizes a worldwide theatrical festival under the name “Bharat Rang Mahotsav,” every year. Now this festival is regarded as one of the biggest festivals in the entire world. The 22nd edition of this festival will take place from 14 to 26 February 2023. 77 plays have been chosen from the 960 submissions & they will be staged in 10 places throughout India, the play “Kendonians” which is produced by Astitva will be staged one among 77plays. Astitva, is a group of young men & women with a special passion for theatre…
10 ಫೆಬ್ರವರಿ 2023: ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆ ನಡೆದುಕೊಳ್ಳುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಎಂಥವರನ್ನೂ, ಗಂಡಾಗಿ ಹುಟ್ಟಿ ಹೆಣ್ಣಿನ ರೂಪದಲ್ಲಿ ಆಕರ್ಷಿಸಬಲ್ಲ ತಾಕತ್ತಿರುವುದು ಯಕ್ಷಗಾನ ಕಲಾವಿದರಿಗೆ ಮಾತ್ರ. ಈ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಕಲಾವಿದ ರಾಜೇಶ್ ನಿಟ್ಟೆ. 10.02.1992 ರಂದು ಸಂಜೀವ ಕೊಟ್ಟಾರಿ ಹಾಗೂ ಬೇಬಿ ಇವರ ಮಗನಾಗಿ ಜನನ. ಚಿಕ್ಕಂದಿನಿಂದಲೂ ಯಕ್ಷಗಾನ ಕಲೆಯ ಮೇಲೆ ಇದ್ದ ಆಸಕ್ತಿ; ಶಶಿಕಾಂತ್ ಶೆಟ್ಟಿ ಅವರ ಪಾತ್ರಗಳು; ನೀಲ್ಕೋಡು ಶಂಕರ ಹೆಗಡೆ ಅವರ ನಾಗವಲ್ಲಿ ಪಾತ್ರ ನೋಡಿ ಇದರಿಂದ ಪ್ರೇರಣೆಗೊಂಡು ಸ್ತ್ರೀವೇಷ ಮಾಡಬೇಕೆಂಬ ಆಸೆ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದರು. ನಿಟ್ಟೆ ಅವರ ಪ್ರಥಮ ಯಕ್ಷಗಾನ ಗುರುಗಳು ಕೆರ್ವಾಷೆ ಆನಂದ ಗುಡಿಗಾರ. ನಂತರ ಕೃಷ್ಣಪ್ಪ ಮೂಲ್ಯ ಕಟೀಲ್, ವಿಶ್ವರೂಪ ಮಧ್ಯಸ್ಥ ನೀಲಾವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:- ಹಿಂದೆ ಆದ ಯಕ್ಷಗಾನ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಅಥವಾ ಎಂ.ಕೆ…
10 ಫೆಬ್ರವರಿ 2023: ಚಿಕ್ಕ, ಚೊಕ್ಕ, ಶುದ್ಧ ಹಾಸ್ಯಭರಿತ ಸುಂದರ ಪ್ರಸ್ತುತಿ ಸೀತು ಮದುವೆ .ಅಂದಿನ ಕನ್ನಡದ ಹಾಸ್ಯ ಚಕ್ರವರ್ತಿ ಬೀಚಿ ಅವರ ಸಣ್ಮ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ ಶೈಲೇಶ್ ಅವರ ಸೈಡ್ ಸೈಡ್ ವಿಂಗ್ ತಂಡ ಅಭಿನಂದನಾರ್ಹರು. ಭಾಷಾ ಶುದ್ಧತೆ, ಸಮಯೋಚಿತ ಸಂಭಾಷಣೆ, ನಾಟಕವನ್ನು ಅಂತ್ಯದವರೆಗೂ ಜೀವಂತವಾಗಿಟ್ಟು ಹಾಸ್ಯದ ನಗೆಗಡಲಲ್ಲಿ ತೇಲಿಸುತ್ತದೆ. ಅಭಿನಯದಲ್ಲಿ ಭರತ್ ಅಜ್ಜಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಾಟಕದ ಜೀವಾಳವಾಗಿದ್ದಾನೆ. ನಟ ಭಯಂಕರ, ನಟ ರಾಕ್ಷಸ!!!! ತನ್ನ ಜೀವಂತಿಕೆಯಿಂದ ಮಿಕ್ಕೆಲ್ಲಾ ಪಾತ್ರಗಳನ್ನು ಬಡಿದು ಬಾಯಿಗೆ ಹಾಕ್ಕೊಂಡಿದ್ದಾನೆ. ವಿನಾ ವೆಂಕಟೇಶಂ ನನತೋ ನನಾತಃ ಅನ್ನುವ ಬದಲು ವಿನಾ ಭರತಂ ನನತೋ ನ ನಾಟಕಃ ಅನ್ನುವುದು ಸೂಕ್ತವೇನೋ. ಅಭಿನವ ಪಂಡರೀಬಾಯಿ ಆಸ್ಥಾನ ಕಲಾವಿದೆ ಲತಾ ಮೇಡಂ ಅವರು ಸೀತುನ ಶರೀರವನ್ನು ಆಗಾಗ ಕೆಡಿಸಿದ್ದರೂ ತಮ್ಮ ಅಭಿನಯವನ್ನು ಎಲ್ಲೂ ಕೆಡಿಸಲಿಲ್ಲ. ಸಿಂಚನ ಅಲಿಯಾಸ್ ಸೀತು ಹಿಂದಿ ಭಾಷೆಯಲ್ಲಿ ಪ್ರವೀಣೆ, ಸಂಗೀತ ಕಲಾನಿಧಿ ಪುರಂದರದಾಸರ ಕಾಲದ ಅಜ್ಜಿಯ ಮೊಮ್ಮಗಳು,…
08 ಫೆಬ್ರವರಿ 2023, ಮಂಗಳೂರು: “ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ, ಎಸ್.ವಿ.ಪಿ.ಯವರ ಎರಡು ತತ್ವಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದೇವೆ” – ಡಾ. ಬಿ. ಎ. ವಿವೇಕ ರೈ. ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ 2023 ಸೈಂಟ್ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾ ಭವನದಲ್ಲಿ ಫೆ.8ರಂದು ಸಂಪನ್ನಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬಿ.ಎ.ವಿವೇಕ ರೈಯವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ ಎಸ್.ವಿ.ಪಿ.ಯವರ ಎರಡು ತತ್ವಗಳನ್ನು ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದರು.”ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ” ಎಂಬ ಮಹಾ ಸಂಶೋಧನಾ ಗ್ರಂಥವನ್ನು ಬರೆದು ಬುದ್ಧನ ಅಹಿಂಸಾ ತತ್ವದ ಕಡೆ ಬೆಳಕು ಚೆಲ್ಲಿದ ತಾಳ್ತಜೆಯವರು ಒಂದು ಕಡೆ, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಕೃಷಿ ಮಾಡಿ ಕಾಯಕ ತತ್ವದ ಕಡೆಗೆ ಒತ್ತು ಕೊಟ್ಟ ಡಾ.ಒ.ಎಲ್.ನಾಗಭೂಷಣ ಸ್ವಾಮಿ ಇನ್ನೊಂದು ಕಡೆ. ಬುದ್ಧ ತತ್ವ ಮತ್ತು ಬಸವ ತತ್ವ ಎರಡನ್ನೂ ಎಸ್.ವಿ. ಪಿ.ಯವರು…
09 ಫೆಬ್ರವರಿ 2023, ಬೆಂಗಳೂರು: ಇಂದಿನ ಗ್ರಾಮ ಬದುಕಿನ ವಿನ್ಯಾಸಗಳ ಬಗೆಗೆ ಹಲವರಲ್ಲಿ ಹಲವು ತರಹದ ವಾದಗಳಿವೆ. ಜಾಗತೀಕರಣ ಎನ್ನುವುದು ಹಳ್ಳಿಗಳ ಸ್ವರೂಪವನ್ನು ಸಂಪೂರ್ಣ ಬದಲಿಸಿಬಿಟ್ಟಿದೆ ಎಂದು ಕೆಲವರು ಪುರಾವೆಗಳನ್ನು ಒದಗಿಸುತ್ತಾರೆ. ನಗರದ ಐಷಾರಾಮದ ಬದುಕು ಹಳ್ಳಿಗರನ್ನು ಇನ್ನಿಲ್ಲದಂತೆ ಸೆಳೆದು ಅವರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಹಳ್ಳಿಗರು ತಾವಾಗಿ ಉಳಿಯದೆ ನಗರದವರ ಬದುಕಿನ ಶೈಲಿಯನ್ನು ಹಳ್ಳಿಯಲ್ಲೇ ಅನುಕರಿಸಲು ಆರಂಭಿಸಿದ್ದಾರೆ ಎಂದು ಕೆಲವರು ದೂರುತ್ತಿರುವುದು ಕೇಳಿಬರುತ್ತಿದೆ. ಆದರೆ ಈ ವಾದಕ್ಕೆ ಪ್ರತಿವಾದ ಮಾಡುವ ಗುಂಪೂ ಇದೆ. ಅವರ ಪ್ರಕಾರ ಹಳ್ಳಿಯ ಬದುಕು ಎಂದಿನಂತೆಯೇ ಇದೆ. ನಗರದಲ್ಲಿ ವಾಸಿಸುವವರ ಮನೆಗೆ ಒಂದಷ್ಟು ಜನ ಬಂದುಬಿಟ್ಟರೆ ಅವರನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗುತ್ತದೆ, ಆದರೆ ಹಳ್ಳಿ ಮಂದಿ ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ; ಹಾಗಾಗಿ ಅವರಲ್ಲಿ ನಿಜವಾದ ದೃಢತ್ವ ಇದೆ ಎನ್ನುವುದು ಅವರ ವಾದ. ಮೇಲಿನ ಎರಡೂ ವಾದಗಳಿಗೆ ಕಿವಿಗೊಡುವವರಿಗೆ ನಿಜದ ವಾಸ್ತವ ಇನ್ನೂ ನಿಲುಕಿಲ್ಲ. ಹಳ್ಳಿಗಳು ಎಂದರೆ ಇಂಗ್ಲಿಷ್ ತೊಡಕು ಇರುವ ಮಕ್ಕಳು, ಅವರ…
ಕಲೆ ನೀವು ನೋಡುವುದಲ್ಲ ಆದರೆ ಇತರರರು ಕಲೆಯನ್ನು ನೋಡುವಂತೆ ಮಾಡುವುದು ಎಂಬ ಒಂದು ಮಾತಿದೆ. ಅದೇ ರೀತಿ ಮಂಡಲ ಆರ್ಟ್ ನಲ್ಲಿ ಸತತ ಪರಿಶ್ರಮ, ತಾಳ್ಮೆ, ಆಸಕ್ತಿಯಿಂದ ಕಲಿತು ಇಂದು ಈ ಕಲೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಓರ್ವ ಕಲಾವಿದೆ ರಾಧಿಕಾ ಮಕರಂದ ಬಾಯರಿ. ರಾಮಕೃಷ್ಣ ಹೆಬ್ಬಾರ್ ಮತ್ತು ಗೀತಾ ಇವರ ಮಗಳಾಗಿ 18.06.1994 ರಂದು ಜನನ. MSc (organic chemistry) ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದ ಆಸಕ್ತಿ ಇತ್ತು. ಲಾಕ್ ಡೌನ್ ಆಗಿದ್ದು, ಆಸಕ್ತಿ ಪೂರಕವಾಗಿ ಸಹಾಯವಾಯಿತು. ಯೂಟ್ಯೂಬ್ ಅಲ್ಲಿ “Goodness In You” ಎಂಬ ಆರ್ಟ್ ಚಾನೆಲ್ ನೋಡಿ ಅಭ್ಯಾಸ ಮಾಡಿ ಇಂದು ಒಳ್ಳೆಯ ಚಿತ್ರ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ರಾಧಿಕಾ ಅವರು ಹೇಳುತ್ತಾರೆ. ಡಾಟ್ ಮಂಡಲ ಆರ್ಟ್ ಇವರ ನೆಚ್ಚಿನ ಚಿತ್ರಕಲೆ.ಡೆಮಿ ಡೇವಿಡ್ಸನ್, ನೈರೋಬಿ, ಪ್ರಸುನ್ ಬಾಲಸುಬ್ರಮಣ್ಯಂ (Mandala Artist) ನೆಚ್ಚಿನ ಚಿತ್ರಕಲಾಕಾರರು. ಒಂದು ಡಾಟ್ ಮಂಡಲ ಆರ್ಟ್ ಮಾಡಲು 6 ರಿಂದ 8 ದಿನ…