Author: roovari

ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕಾದಂಬರಿಗಳು ಬರುತ್ತಿವೆ. ನವ್ಯ ಮಾರ್ಗದ ಕೃತಿಗಳೂ ಬೆಳಕು ಕಾಣುತ್ತಿವೆ. ಡಾ. ಲಲಿತಾ ಎಸ್.ಎನ್. ಭಟ್ ಅವರ ‘ಅಪರಾಜಿತಾ’ ಎಂಬ ಕಾದಂಬರಿಯು ನವ್ಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಉದ್ಯೋಗಸ್ಥ ಮಹಿಳೆಯ ಜೀವನಕ್ರಮವನ್ನು ಹಿಡಿದಿಡುವ ಕೃತಿಯು ಮೀರಾ ಎಂಬ ವೈದ್ಯೆಯ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸುತ್ತದೆ. ಆಕೆಯ ಆತ್ಮಶೋಧನೆ, ದ್ವಂದ್ವ, ಸ್ವಗತಗಳಿಂದ ಆರಂಭಗೊಳ್ಳುವ ಕಾದಂಬರಿಯು ಆಪ್ತವಾದ ನಿರೂಪಣೆಯೊಂದಿಗೆ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ…

Read More

ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಇದರ ಆಶ್ರಯದಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಸಾಹಿತ್ಯ ಸಂಭ್ರಮ 2024’ವು ದಿನಾಂಕ 01-05-2024ರಂದು ಬೆಳಿಗ್ಗೆ ಗಂಟೆ 10-00ಕ್ಕೆ ಮೈಸೂರು ವಿಧ್ಯಾವರ್ಧಕ ಕಾಲೇಜು ರಸ್ತೆ, ಚಂದ್ರಕಲಾ ಆಸ್ಪತ್ರೆ ಹತ್ತಿರ, ವಿಜಯನಗರ 1ನೇ ಹಂತ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಡೆಯಲಿದೆ. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಾನಸ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಟಿ. ತ್ಯಾಗರಾಜು ಮೈಸೂರು ಇವರ ‘ಮನದ ಮಾತು’, ಪುಷ್ಪಾ ನಾಗತಿಹಳ್ಳಿಯವರ ‘ಅನುಗತ’ ಮತ್ತು ‘ಧರೆಯಂಚಿನ ಮರ’, ಶೋಭಿತಾ ಮೈಸೂರು (ಶೋಭ ಟಿ.ಆರ್.) ಇವರ ‘ಸಂಜೆಯ ಸೂರ್ಯ’, ಲತಾ ಕೆ.ಎಸ್. ಹೆಗಡೆಯವರ ‘ಕನ್ನಡದ ತರುಲತೆ’ ಮತ್ತು ‘ಗುಬ್ಬಿಯ ಗೂಡು’ ಮತ್ತು ಹಾ.ಮ. ಸತೀಶ್ ಬೆಂಗಳೂರು ಇವರ ‘ನುಡಿಹಾರ’…

Read More

ಬೆಂಗಳೂರು : ರಾಷ್ಟ್ರೀಯ ಸಾರ್ವಜನಿಕ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ರಾಸಾ ಪಬ್ಲಿಕೇಷನ್ಸ್ ಇದರ ಆಯೋಜನೆಯಲ್ಲಿ ಕನ್ನಡ ಸಾಹಿತ್ಯ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ – 2024 ಸಮಾರಂಭವು ದಿನಾಂಕ 25-05-2024 ರಂದು ಮೈಸೂರಿನಲ್ಲಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ವಾಚನ ಮಾಡಲು ಇಚ್ಚಿಸುವ ಕವಿಗಳು, ಸಾಹಿತಿಗಳು ಮತ್ತು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಸಕ್ತಿ ಹೊಂದಿರುವ ಮಕ್ಕಳು, ಕಲಾವಿದರು ಹಾಗೂ ಕಲಾಪೋಷಕರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ ತಮ್ಮ ಪೂರ್ಣ ಹೆಸರು (ಆಧಾರ್ ಪ್ರತಿಯಲ್ಲಿ ಇರುವಂತೆ) ವೃತ್ತಿ, ವಿಳಾಸ, ಇತ್ತೀಚಿನ ಉತ್ತಮ ಗುಣಮಟ್ಟದ ಫೋಟೊವನ್ನು ವ್ಯಾಟ್ಸ್ ಆಪ್ ಮೂಲಕ ಕಳುಹಿಸಿ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ – 7406401473 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಧಾರವಾಡ : ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು ಧಾರವಾಡ, ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿ ಧಾರವಾಡ ಮತ್ತು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಧಾರವಾಡ ಇವರುಗಳ ಸಹಯೋಗದಲ್ಲಿ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಮಹಾಧಿವೇಶನ -2024’ವು ದಿನಾಂಕ 29-04-2024 ಮತ್ತು 30-04-2024ರಂದು ಧಾರವಾಡ ವಿದ್ಯಾಗಿರಿ ಇಲ್ಲಿರುವ ಜನತಾ ಶಿಕ್ಷಣ ಸಮಿತಿಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 29-04-2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರ ಸರ್ವಾಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಹಿರಿಯ ವಿದ್ವಾಂಸರಾದ ಡಾ. ಬಿ.ವಿ. ಶಿರೂರ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಹನುಮಾಕ್ಷಿ ಗೋಗಿ ಇವರ ‘ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ’ ಮತ್ತು ‘ಮುದನೂರು ಮತ್ತು ಯಡ್ರಾಮಿ ಶಾಸನಗಳು’ ಹಾಗೂ ಪ್ರೊ. ಎಸ್.ಸಿ. ಪಾಟೀಲ ಇವರ ‘ದೃಶ್ಯಕಲಾ ಸಂಚಯ’, ‘ವಚನಕಾರ ಹಂಡೆ ಚಂದಿಮರಸನ ಶಾಸನಗಳು’ ಮತ್ತು ಹಂಡೆ ಅರಸರ ಸಾಂಸ್ಕೃತಿಕ ಚರಿತ್ರೆ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಶ್ರೀಮತಿ ಹನುಮಾಕ್ಷಿ ಗೋಗಿ…

Read More

ಶಿವಮೊಗ್ಗ : ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಹುಣ್ಣಿಮೆಯ 225ನೇ ಕಾರ್ಯಕ್ರಮ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಕ. ಸಾ. ಪ. ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರೊಂದಿಗೆ ನಡೆದ ಸಮಾಲೋಚನೆಯ ನಂತರ ಪೂಜ್ಯರ ಮಾರ್ಗದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ‌ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆದಿದೆ. ಅಲ್ಲಿ ಆಯ್ಕೆಯಾದವರು ಸೇರಿದಂತೆ ನಾಡಿನಾದ್ಯಂತ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಪಿ. ಯು. ವರೆಗೆ ಓದುತ್ತಿರುವ ಮಕ್ಕಳು ಭಾಗವಹಿಸಲು ಅವಕಾಶವಿದೆ. ಮಕ್ಕಳು ತಾವು ಬರೆದ ಸ್ವಂತ ಕವನ, ಕಥೆ, ಪ್ರಬಂಧಗಳ ಜೊತೆಗೆ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಶಾಲೆ ಮತ್ತು ತಂದೆ, ತಾಯಿಯ ಒಪ್ಪಿಗೆ ಪಡೆದು ಕಳುಹಿಸಲು ಕೋರಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳು,…

Read More

ಕಪ್ಪು ಮನುಜರು ನಾವು ಕಪ್ಪು ಮನುಜರು ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು… ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ ? ಇಲ್ಲ… ! ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು ಬೆಳೆದು ಬಂದಿದೆ. ದಲಿತ ಸಂಘಟನೆಗಳ ಯಾವುದೇ ಹೋರಾಟ, ಕಾರ್ಯಕ್ರಮಗಳಲ್ಲಿ ಈಗಲೂ ಹೋರಾಟದ ಹಾಡಿನೊಂದಿಗೆ ಶುರುವಾಗುವ ಪ್ರತೀತಿ ಮುಂದುವರಿದಿದೆ. ಇಂಥದ್ದೊಂದು ಪರಂಪರೆಯನ್ನು ಆಧರಿಸಿ ಹಾಡುಗಳೊಂದಿಗೆ ದಲಿತ ಚಳುವಳಿ ಬೆಳೆದು ಬಂದ ಕಥನವನ್ನು ರಂಗಭೂಮಿ ಮೂಲಕ ನಿರೂಪಿಸುವ ಪ್ರಯತ್ನ ನಡೆದಿರುವುದು ವರ್ತಮಾನದ ದೃಷ್ಟಿಯಿಂದ ಮಹತ್ವದ್ದು. ಶಂಕರ್ ನಾಗ್ ಪ್ರಶಸ್ತಿ ಪುರಸ್ಕೃತ ಉದಯೋನ್ಮುಖ ರಂಗಕರ್ಮಿ ಕೆ.ಪಿ. ಲಕ್ಷ್ಮಣ್ ವಿನ್ಯಾಸಗೊಳಿಸಿರುವ ’ಪಂಚಮ ಪದ’ ಎಂಬ ನಾಟಕ, ಚಂದ್ರಶೇಖರ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿದೆ. ದಲಿತ ಚಳುವಳಿಯ ಚರಿತ್ರೆಗೆ ಮಹತ್ವದ ದಾಖಲೆಯಾಗಿರುವ ಪಂಚಮ ಪತ್ರಿಕೆ ಮತ್ತು ಹಾಡು ಎರಡನ್ನೂ ಒಟ್ಟು ತಂದು ‘ಪಂಚಮ ಪದ’ ಆಗಿದೆ. ರಾಜ್ಯದ ಜನ ಚಳುವಳಿಗಳ ಇತಿಹಾಸದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕದ ಅವಧಿ ಗುರುತರವಾದುದು.…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಅವರ ಸಾರಥ್ಯದ ಸಾಹಿತಿ ಪರ ಅಮೃತಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ 40ನೇ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ರಾವ್ ವಿಟ್ಲ ಇವರ ‘ತಿರುವು’ ಕಥಾ ಸಂಕಲನದ ಲೋಕಾರ್ಪಣೆಯು ದಿನಾಂಕ 29-04-2024ರಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿರುವುದು. ಈ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ವಹಿಸಲಿದ್ದು, ನಿವೃತ್ತ ಶಿಕ್ಷಕರು, ಸಾಹಿತಿ, ವಿಮರ್ಶಕರಾದ ಶ್ರೀ ಕೆ. ರವೀಂದ್ರ ರೈ ಇವರು ಕೃತಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ಲಿನ ಅಗರಿ ಎಂಟರ್ ಪ್ರೈಸೆಸ್ ಇದರ ಮುಖ್ಯಸ್ಥರಾದ ಅಗರಿ ರಾಘವೇಂದ್ರ ರಾವ್ ಇವರು ಭಾಗವಹಿಸಲಿದ್ದು, ಡಾ. ಅರುಣಾ ನಾಗರಾಜ್, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಲೇಖಕಿ ಶ್ರೀಮತಿ ವೀಣಾ ರಾವ್ ವಿಟ್ಲ, ಕವಿಯತ್ರಿ ಮತ್ತು…

Read More

ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮಕ್ಕೆ 170 ವರ್ಷಗಳಿಗೂ ಮಿಕ್ಕ ಇತಿಹಾಸವಿದೆ. ಮಾಧ್ಯಮ ಶಿಕ್ಷಣಕ್ಕೆ 60ಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಆರಂಭದ ಅಸ್ತಿತ್ವದ ಪ್ರಶ್ನೆಗಳಿಂದ ಅದೆಷ್ಟೋ ದೂರ ಸಾಗಿರುವ ಪತ್ರಿಕೋದ್ಯಮವು ಈಗ ಮುಖ್ಯವಾಹಿನಿಯಲ್ಲಿ ಬಂದು ನಿಂತಿದ್ದು ಕಾಲೇಜುಗಳಲ್ಲಿ ಅಧ್ಯಯನದ ಭಾಗವಾಗಿದೆ. ಕನ್ನಡ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡು ಬಂದವರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಪರಾಮರ್ಶನ ಗ್ರಂಥಗಳು ಬೆಳೆಯದಿದ್ದರೂ ಕತ್ತಲಲ್ಲಿ ದಾರಿತೋರುವ ಪಂಜಿನಂತೆ ಅಲ್ಲಲ್ಲಿ ಪ್ರಯತ್ನಗಳು ನಡೆದಿವೆ. ಆಕಾಶವಾಣಿ, ದೂರದರ್ಶನ ಮತ್ತು ಇತರ ಆಧುನಿಕ ಸಂವಹನ ಮಾಧ್ಯಮಗಳ ನಡುವೆ ಜಗತ್ತಿನ ಅತ್ಯಂತ ಸೂಕ್ಷ್ಮವೂ, ಪರಿಣಾಮಕಾರಿಯೂ, ಸಾಂಸ್ಕೃತಿಕವೂ, ಸಾಮಾಜಿಕವೂ ಆದ ಅರಿವನ್ನು ಪ್ರಸಾರ ಮಾಡುವ ಮೂಲಕ ಜ್ಞಾನಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ಪತ್ರಿಕಾ ಬರವಣಿಗೆಯ ಬಗ್ಗೆ ವಿಶೇಷ ಧ್ಯಾನ-ಅಧ್ಯಯನಗಳು ಅಗತ್ಯವಾಗಿವೆ. ಸಂವಹನ ಮಾಧ್ಯಮಗಳು ಉಂಟು ಮಾಡುತ್ತಿರುವ ಮೌಲ್ಯ ಪ್ರಸಾರವು ಪ್ರಪಂಚದ ವಿವಿಧ ಸಮೂಹಗಳ ವಿಕಾಸದಲ್ಲಿ ವಹಿಸುವ ಪಾತ್ರದ ಕುರಿತು ಚಾರಿತ್ರಿಕವಾಗಿ, ಸಾಮಾಜಿಕವಾಗಿ ವಿಶ್ಲೇಷಿಸುವ ತುರ್ತು ಹೆಚ್ಚಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಪಡೆದು ಅಲ್ಲಿನ ಸಮಗ್ರ ಜ್ಞಾನವನ್ನು…

Read More

ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದ ದಂಪತಿಗಳಾದ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾ‌ರ್ ಪ್ರಸ್ತುತಿಯ ಒಂದು ದಿನದ ‘ನೃತ್ಯ ಕಾರ್ಯಾಗಾರ’ವು ದಿನಾಂಕ 21-04-2024ರಂದು ಪುತ್ತೂರಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ. ಸಾ. ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್ “ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ. ಶಾಸ್ತ್ರೀಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ತನ್ನದೇ ವಿಶಿಷ್ಟ ಸ್ಥಾನ ಇದೆ. ಅಂತಹ ಭರತನಾಟ್ಯವನ್ನು ಯುವ ಪೀಳಿಗೆ ಮುಂದುವರಿಸಬೇಕು. ಶಾಸ್ತ್ರೀಯ ನೃತ್ಯಗಳ ಉಳಿವಿಗೆ ಗುರುಗಳ ಶ್ರಮದಷ್ಟೇ ಶಿಷ್ಯರೂ ಕೂಡ ಅದನ್ನು ಅನುಸರಿಸುವುದರತ್ತ ಗಮನ ಹರಿಸಬೇಕು. ಸಿನಿಮಾ ಮತ್ತಿತರ ಮಾಧ್ಯಮಗಳಿಂದ ಸಿಗುವ ಕ್ಷಣಿಕ ಆನಂದದತ್ತ ವಾಲದೆ, ಕಲೆಯನ್ನು ಬೆಳೆಸಲು ಕಟಿಬದ್ದರಾಗಬೇಕು. ಅದಕ್ಕಾಗಿ ಇಂತಹ ಕಾರ್ಯಾಗಾರ ನಡೆಯುತ್ತಲೇ ಇರಲಿ.” ಎಂದು ಹಾರೈಸಿದರು. ವಿದುಷಿ ಸ್ನೇಹಾ…

Read More

ಉಡುಪಿ : ಉಡುಪಿ ಜಿಲ್ಲಾ ಹೊಟೇಲ್ ಮಾಲಕಾರ ಸಹಕಾರ ಸಂಘ, ರಂಗಭೂಮಿ ಉಡುಪಿ ಹಾಗೂ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ದಿನಗಳಲ್ಲಿ ತಲ್ಲೂರು ಶಿವರಾಮ ಶೆಟ್ಟರು “ಯಕ್ಷಗಾನ ಕಲಾವಿದರಲ್ಲ”ಎನ್ನುವ ಕೊಂಕು ಮಾತು ಕೇಳಿ ಬಂದಾಗ, ಅದನ್ನು ಸವಾಲಾಗಿ ಸ್ವೀಕರಿಸಿ, ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಅಭ್ಯಾಸ ಮಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮತ್ತು ಈವರೆಗೆ 400 ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಭಿಮಾನಿಗಳ ಅತೀವ ಮೆಚ್ಚುಗೆಗೆ ಪಾತ್ರರಾದದ್ದು ಇವರ ಮಹತ್ತರ ಸಾಧನೆ ಎಂದರೆ ತಪ್ಪಾಗಲಾರದು. ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಚಿಟ್ಟಾಣಿ ರಾಮಚಂದ್ರ ಹೆಗೆಡೆ ಯಕ್ಷಗಾನ ಸಪ್ತಾಹ, ಕೆ.ಗೋವಿಂದ ಭಟ್ಟ ಯಕ್ಷಗಾನ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ,…

Read More