Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶಗಳು ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಜನ್ಮ ದಿನಾಚರಣೆಯ ಅಂಗವಾಗಿ ‘ಗ್ರಂಥಪಾಲಕರ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನ’ ಕಾರ್ಯಕ್ರಮವು ದಿನಾಂಕ 12-08-2023ರಂದು ನಡೆಯಿತು. ಎಸ್.ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷೆ ಹಿರಿಯ ಸಂಶೋಧಕಿ ಇಂದಿರಾ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಗ್ರಂಥಾಲಯವು ಜ್ಞಾನ ಕೇಂದ್ರವಾಗಿದ್ದು, ಓದುಗರು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಗ್ರಂಥಪಾಲಕರ ಸೇವೆಯನ್ನು ಓದುಗರು ಕೃತಜ್ಞತೆಯಿಂದ ಸ್ಮರಿಸಬೇಕು” ಎಂದು ನುಡಿದ ಅವರು ಈ ಸಂದರ್ಭದಲ್ಲಿ ಎಸ್.ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗೋವಿಂದ ದಾಸ ಕಾಲೇಜಿನ ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಎಂ. ರಮೇಶ್ ರಾವ್, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಮುಖ್ಯ ಅತಿಥಿಗಳಾಗಿದ್ದರು. ಗ್ರಂಥಾಲಯದ ನಿವೃತ್ತ ಸಿಬ್ಬಂದಿ ಶ್ರೀ ಚಂದ್ರಶೇಖರ್ ಕೆ.,…
ಕಾಸರಗೋಡು : ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಶುಭಾಶೀರ್ವಾದದೊಂದಿಗೆ ಶ್ರೀ ಶ್ರೀಗಳವರ ತೃತೀಯ ಚಾತುರ್ಮಾಸ್ಯ ವ್ರತಾಚಾರಣೆಯ ಪ್ರಯುಕ್ತ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 20-08-2023 ಭಾನುವಾರ ಸಂಜೆ ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 14 ಕಛೇರಿಗಳು ನಡೆದಿದ್ದು, ಇದು 15ನೆಯ ಸಂಗೀತ ಕಛೇರಿಯಾಗಿರುತ್ತದೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಆಶ್ವೀಜಾ ಉಡುಪ ಕಿನ್ನಿಗೋಳಿ ಮತ್ತು ಶರಣ್ಯಾ ಕೆ.ಎನ್. ಸುರತ್ಕಲ್, ವಯಲಿನ್ ನಲ್ಲಿ ಸುಪ್ರೀತ ಪಿ.ಎಸ್. ಮುಳ್ಳೇರಿಯ, ಮೃದಂಗದಲ್ಲಿ…
ಮುಂಬಯಿ : ಭಾಂಡುಪ್ ಪಶ್ಚಿಮದ ಭಟ್ಟಿಪಾಡ ಶ್ರೀ ಶನೀಶ್ವರ ಮಂದಿರದಲ್ಲಿ ದಿನಾಂಕ 15-08-2023ರಂದು ಬೆಳಿಗ್ಗೆ 10 ಗಂಟೆಗೆ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಊರಿನ ಪ್ರಸಿದ್ಧ ಕಲಾವಿದರಿಂದ ‘ಸ್ವಾಮಿ ಕೊರಗಜ್ಜೆ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ತುಳುನಾಡಿನ ಕಾರಣೀಕ ದೈವ ಕೊರಗಜ್ಜನ ಮಹಿಮೆಯನ್ನು ಸಾರುವ ತಾಳಮದ್ದಳೆ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ಚಂಡೆಮದ್ದಳೆ ವಾದಕರಾಗಿ ದೇಲಂತಮಜಲು ಶ್ರೀ ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಶ್ರೀ ಸದಾಶಿವ ಆಳ್ವ ತಲಪಾಡಿ ಮತ್ತು ಶ್ರೀ ಹರಿರಾಜ ಕಿನ್ನಿಗೋಳಿ ಅರ್ಥಧಾರಿಗಳಾಗಿದ್ದರು. ಶನೀಶ್ವರ ಮಂದಿರದ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ ದಂಪತಿ ದೀಪ ಬೆಳಗಿದರು. ಶ್ರೀ ಸದಾನಂದ ಅಮೀನ್ ಸ್ವಾಗತಿಸಿದರು.
ಮಂಗಳೂರು : ಕರಾವಳಿ ಕರ್ನಾಟಕದಲ್ಲೇ ಪ್ರಸಿದ್ಧ ತಂಡ ಎಂದೇ ಗುರುತಿಸಿಕೊಂಡಿರುವ ತುಳು ಮತ್ತು ಕನ್ನಡ ಚಿತ್ರನಟ ಸಂದೀಪ್ ಶೆಟ್ಟಿ ರಾಯಿ ಇವರ ನಾಯಕತ್ವದ ಹಾಗೂ ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ‘ಕಲಾಶ್ರೀ ಕುಸಾಲ್ದ ಕಲಾವಿದೆರ್ ಬೆದ್ರ’ ಇದರ 5ನೇ ವಾರ್ಷಿಕೋತ್ಸವ ಹಾಗೂ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ದಿನಾಂಕ 11-08-2023ರಂದು ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್, ಡಾ.ದೇವದಾಸ್ ಕಾಮಿಕಾಡ್, ವಿಜಯ ಕುಮಾರ್ ಕೊಡಿಯಲ್ ಬೈಲ್, ಶಿವಶರಣ್ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಬಿ.ಜೆ.ಪಿ. ವಕ್ತಾರ ಕಿರಣ್ ರೈ, ಭೋಜರಾಜ್ ವಾಮಂಜೂರು, ಸುನಿಲ್ ಕುಮಾರ್ ನೆಲ್ಲಿಗುಡ್ಡೆ ಹಾಗೂ ಬ್ರಿಜೇಶ್ ಚೌಟ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ನಾಲ್ಕು ಜನ ಸಾಧಕರಾದ ಶ್ವಾನ ಪ್ರೇಮಿ ಶ್ರೀಮತಿ ರಜನಿ ಶೆಟ್ಟಿ, ಹಿರಿಯ ನಾಟಿ ವೈದ್ಯರಾದ ಶ್ರೀ ಉಗ್ಗಪ್ಪ ಪೂಜಾರಿ, ರಂಗಭೂಮಿ ಮತ್ತು ತುಳು ಸಿನಿಮಾ ರಂಗಕ್ಕೆ ಕೊಡುಗೆ…
ಬೆಂಗಳೂರು : ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಪ್ರಸ್ತುತಪಡಿಸುವ ದಾಸರ ಕೃತಿಗಳ ವಿಶೇಷ ಸಂಗೀತ ಕಾರ್ಯಕ್ರಮ ‘ಪುರಂದರ ನಾದೋಪಾಸನ’ ದಿನಾಂಕ 20-08-2023ರ ಭಾನುವಾರದಂದು ಬೆಂಗಳೂರಿನ ಔಟ್ ಹತ್ತಿರದ ಪುರಂದರ ಮಂಟಪದಲ್ಲಿ ನಡೆಯಲಿದೆ. ವಿದುಷಿ ಯಶಸ್ವಿ ಇವರ ಶಿಷ್ಯರಾದ ಪ್ರಣವಶ್ರೀ ವಿದ್ವಾನ್ ಯಶಸ್ವಿ ಸುಬ್ಬರಾವ್ ಮತ್ತು ವಿದ್ವಾನ್ ಅಭಿಜಿತ್ ಇವರಿಂದ ಯುಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯ : ಎಸ್.ಮೋಕ್ಷಿತ್ ಪಿಟೀಲಿನಲ್ಲಿ, ವಿದ್ವಾನ್ ನಾಗೇಂದ್ರ ಪ್ರಸಾದ್ ಮೃದಂಗದಲ್ಲಿ ಹಾಗೂ ವಿದ್ವಾನ್ ಸೋಮಶೇಖರ ಘಟಂನಲ್ಲಿ ಸಹಕರಿಸಲಿದ್ದಾರೆ.
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಯಕ್ಷಗಾನ ಸಸ್ತಾಹದ ಮೂರನೇ ದಿನ ದಿನಾಂಕ 13-08-2023 ರಂದು ಸರಯೂ ಯಕ್ಷ ಬಾಲ ವೃಂದ ಕೋಡಿಕಲ್ ಇದರ ಕಲಾವಿದರಿಂದ ‘ಪಂಚವಟಿ’ ಪ್ರಸಂಗದ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಶ್ರೀಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಶ್ರೀಸ್ಕಂದ ಕೊನ್ನಾರ್ ಮತ್ತು ಶ್ರೀ ಅನಂತ ಕೃಷ್ಣ ಹೊಳ್ಳ ಹಾಗೂ ಮುಮ್ಮೇಳದಲ್ಲಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಅಕ್ಷಯ ಸುವರ್ಣ, ನಿಹಾಲ್ ಪೂಜಾರಿ, ಯೂಶಾನ್.ಎಂ. ಪೂಜಾರಿ, ವಿಜಯಲಕ್ಷೀ.ಎಲ್.ನಿಡ್ವಣ್ಣಾಯ, ಕಾವ್ಯಾ ಗಾಣಿಗ ಮತ್ತು ವೀಣಾ ಕೆ. ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇವ ತಂಡದ ಕಲಾವಿದರನ್ನು ಗೌರವಿಸಿಸಿದರು.
ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಆರನೇ ವರ್ಷದ ಭ್ರಾಮರೀ ಯಕ್ಷವೈಭವ-2023 ಕಾರ್ಯಕ್ರಮ ದಿನಾಂಕ 12-08-2023ರಂದು ಜರಗಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರು ಮಾತನಾಡುತ್ತಾ “ಯಕ್ಷಗಾನ ಕಲೆ ವಿರೂಪಗೊಳ್ಳಲು ಅವಕಾಶ ನೀಡಲೇಬಾರದು. ಇದಕ್ಕಾಗಿ ಕಲಾವಿದರು ಹಾಗೂ ಮೇಳದ ಯಜಮಾನರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಬೇರೆಯವರನ್ನು ದೂರುವ ಬದಲು ನಾವೆಲ್ಲ ಸೇರಿ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಕಲೆಯನ್ನು ಒಳ್ಳೆಯದು ಮಾಡಲು ಎಲ್ಲರೂ ಜತೆಯಾಗಬೇಕು. ಕಲೆಗಳಲ್ಲಿ ಬೇಡದ್ದು ಬಂದರೆ ಅದು ಹೋಗುವುದಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಘನತೆ ಇದೆ. ಹೊಸ ಪ್ರೇಕ್ಷಕರನ್ನು ತಲುಪುವ ಕಾರ್ಯ ನಡೆಯಬೇಕಿದೆ” ಎಂದು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ಯಕ್ಷಗಾನ ಸಹಿತ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸುವ ಎಲ್ಲಾ ಆಯಾಮದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಿದೆ” ಎಂದು ಆಶಿಸಿದರು. ಮೇಯರ್ ಜಯಾನಂದ ಅಂಚನ್ ಶುಭ ಹಾರೈಸಿದರು. ಎಸ್.ಸಿ.ಡಿ.ಸಿ.ಸಿ.…
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೆಂಟನೇ ಉಪನ್ಯಾಸ ದಿನಾಂಕ 12-08-2023ರಂದು ಮಂಗಳೂರಿನ ನೀರುಮಾರ್ಗದ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಕುರಿತು ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಾನಂದಜಿ ಅವರು ಮಾತನಾಡುತ್ತಾ “ಸಮಾಜ ಕೆಟ್ಟದು ಎಂದು ದೂರುತ್ತ ಕೂರುವದು ನಮ್ಮ ಕೆಲಸವಲ್ಲ. ಅದನ್ನು ಹೇಗೆ ಸರಿಪಡಿಸುವುದು ಎಂದು ಆಲೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸಮಾಜಕ್ಕೆ ನಾವು ಉತ್ತಮವಾದ ಆಲೋಚನೆಗಳನ್ನು ನೀಡಬೇಕು. ಇದು ನಮ್ಮ ಕರ್ತವ್ಯ. ನಾವು ಕೇವಲ ಕೆಲಸವನ್ನು ನಮ್ಮ ಉದ್ಧಾರಕ್ಕಾಗಿ ಅಥವಾ ನಮ್ಮ ಉನ್ನತಿಗಾಗಿ ಮಾಡುತ್ತೇವೆ. ಆದರೆ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಅದು ಸೇವೆಯಾಗುತ್ತದೆ ಮತ್ತು ಇದರಿಂದ ಸಮಾಜದ ಉದ್ಧಾರ ಸಾಧ್ಯ. ಕೆಲಸದ ರೀತಿ ನೀತಿಗಳು ಬದಲಾಗುವುದಿಲ್ಲ. ಆದರೆ ನಾವು ಅದನ್ನು…
ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಯಿಂದ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್ ಅವರ ಸಹಕಾರದೊಂದಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮೇರು ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ಪ್ರದಾನ ಮಾಡಲಾಯಿತು. ಅಜ್ಜರಕಾಡಿನ ಪುರಭವನದಲ್ಲಿ ದಿನಾಂಕ 12-08-2023ರಂದು ನಡೆದ ಈ ಪ್ರಶಸ್ತಿ ಪ್ರದಾನ ಸಂಮಾರಂಭಕ್ಕೆ ಮಾಹೆಯ ಕುಲಪತಿಗಳಾದ ಡಾ. ಎಂ.ಡಿ ವೆಂಕಟೇಶ್ ಅವರು ಚೆಂಡೆ ವಾದನದ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ ‘ಯಕ್ಷಗಾನ ಎಂಬುದು ಒಂದು ಕಲೆ . ಇದು ಕರಾವಳಿ ಭಾಗದ ಸಾಂಸ್ಕೃತಿಕ ಪ್ರತೀಕವಾಗಿದೆ ಹಾಗೂ ಈಗಲೂ ಸಹ ಜನರ ಪ್ರೋತ್ಸಾಹ ಬೆಂಬಲದಿಂದ ಕಲೆ ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗಿದೆ” ಎಂದರು. ಸಮ್ಮಾನ ಸ್ವೀಕರಿಸಿದ ಕೊಂಡದಕುಳಿ ಅವರು ಯಕ್ಷಗಾನ ಕಲೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಾ “ಕಲಾವಿದರು ನಾವು ಯಕ್ಷಗಾನದಿಂದ ಏನನ್ನು ಪಡೆಯುತ್ತೇವೋ ಅದರಲ್ಲಿ ಒಂದು ಭಾಗವನ್ನು ಕಲೆಯ ಬೆಳವಣಿಗೆಗೆ…
ಧಾರವಾಡ : ಗೋಕಾಕದ ನಾಡಿನ ಸಮಾಚಾರ ಸೇವಾ ಸಂಘ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭವು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ದಿನಾಂಕ 29-07-2023ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರನ್ನು ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ’ಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಳುವಂಗಡ ಕಾವೇರಿಯವರು ಚಂಗುಲಂಡ ಸಿ. ಮಾದಪ್ಪ ಮತ್ತು ಸರಸ್ವತಿ ದಂಪತಿಯರ ಸುಪುತ್ರಿ. ಬಹುಭಾಷಾ ಕವಿಯಾಗಿ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವರು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಹುಮುಖ ಪ್ರತಿಭೆಯ ಕಾವೇರಿಯವರು ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರು. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಂಸ್ಥೆಯ ಸ್ಥಾಪಕ ಸದಸ್ಯೆ ಮತ್ತು ಕಾರ್ಯದರ್ಶಿಯಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು. ಕೊಡವ ತಕ್ಕ್ ಎಳ್ತ್’ಕಾರಡ ಕೂಟ ಮತ್ತು ಕೊಡವಾಮೆರ ಕೊಂಡಾಟ ಕೂಟದ ಸದಸ್ಯೆ, ಸಿರಿಗನ್ನಡ ವೇದಿಕೆ ಮಹಿಳಾ ಘಟಕ…