Subscribe to Updates
Get the latest creative news from FooBar about art, design and business.
Author: roovari
ಮಂಗಳೂರು, ಫೆಬ್ರವರಿ 05: ವಿದ್ದು ಉಚ್ಚಿಲ್ ನಿರ್ದೇಶನದ, ರುದ್ರ ಥೇಟರ್ ಮಂಗಳೂರು ಅರ್ಪಿಸುವ ಕನ್ನಡ ನಾಟಕ ‘ಶೂದ್ರ ಶಿವ’ ಇಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಚೊಚ್ಚಲ ಪ್ರದರ್ಶನ ಕಂಡಿತು. ಕೇಂದ್ರ ಸರಕಾರದ ಮಾಜಿ ಸಚಿವ ಶ್ರೀ ಜನಾರ್ದನ ಪೂಜಾರಿ ಇವರು ನಗಾರಿ ಬಾರಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ಮೋಹನ್ ಬಿ. ಇವರ ಕೃತಿ ‘ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ – ಒಂದು ತೌಲನಿಕ ಅಧ್ಯಯನ’ವನ್ನು ಲೋಕಾರ್ಪಣೆಗೈಯ್ಯಲಾಯಿತು. ಖ್ಯಾತ ವಕೀಲರು ಮತ್ತು ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿಗಳು ಹಾಗೂ ಗುರು ಬೆಳದಿಂಗಳು ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಪದ್ಮರಾಜ್, ಹೆಸರಾಂತ ನಾಟಕ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್, ನಾರಾಯಣ ಗುರು ಅಧ್ಯಯನ ಪೀಠದ ನಿಕಟಪೂರ್ವ ನಿರ್ದೇಶಕರೂ ಹಿರಿಯ ಲೇಖಕರೂ ಆದ ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀಮತಿ ಊರ್ಮಿಳಾ ರಮೇಶ್, ರಾಮಕೃಷ್ಣ ಮಠದ ಶ್ರೀ ರಂಜನ್ ಬೆಲ್ಲರ್ಪಾಡಿ, ಡಾ. ಮೋಹನ್…
ಜಾನಪದ ಲೋಕಕ್ಕೆ ಏರ್ಯರು ಕೊಪ್ಪರಿಗೆ ಇದ್ದಂತೆ: ವಿವೇಕ ರೈ ಮಂಗಳೂರು, ಫೆಬ್ರವರಿ 05 : ದಕ್ಷಿಣ ಕನ್ನಡ ಜಾನಪದ ಲೋಕದ ಪರಂಪರೆಯನ್ನು ಅಧ್ಯಯನ ಮಾಡುವ ಪ್ರತಿಯೊಬ್ಬರಿಗೂ ಏರ್ಯ ಲಕ್ಷ್ಮಿನಾರಾಯಣ ಆಳ್ವರ ಕೆಲಸಗಳು ಮಹತ್ತರವಾಗಿದ್ದು, ಅವರು ದಕ ಜಾನಪದ ಲೋಕಕ್ಕೆ ಕೊಪ್ಪರಿಗೆ ಇದ್ದಂತೆ ಎಂದು ಹಿರಿಯ ವಿದ್ವಾಂಸ ಪ್ರೊ. ಬಿ.ಎ.ವಿವೇಕ ರೈ ಹೇಳಿದರು. ಅವರು ಭಾನುವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್‍ಸಿ ಆರ್ ಐ ಸಭಾಂಗಣದಲ್ಲಿ ರಂಗ ಸಂಗಾತಿ ಮಂಗಳೂರು ಆಶ್ರಯದಲ್ಲಿ ಕಪ್ಪಣ್ಣ -75 ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಏರ್ಯ ಅವರು ಸಾಹಿತ್ಯ, ಸಹಕಾರಿ, ಸಂಘಟನೆ ಜತೆಯಲ್ಲಿ ಜಾನಪದ ವಿಚಾರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದವರು. ವಿಶೇಷವಾಗಿ 6 ತುಳು ಸಂಪುಟಗಳನ್ನು ಹೊರತರುವ ವಿಚಾರದಲ್ಲಿ ಏರ್ಯರ ಕೊಡುಗೆ ಮೆರೆಯಲು ಸಾಧ್ಯವಿಲ್ಲ. ಅವರನ್ನು ತುಳು ಜಾನಪದ ಲೋಕದ ಕೊಪ್ಪರಿಗೆ ಎಂದರೆ ತಪ್ಪಾಗಲಾರದು. ದೈವ ಆರಾಧಕರಿಗೆ, ದೈವದ ಕೆಲಸ ಮಾಡುವವರಿಗೆ ಪ್ರಶಸ್ತಿ ಸೇರಿದಂತೆ…
04 ಫೆಬ್ರವರಿ 2023, ಉಳ್ಳಾಲ: ಉಲ್ಲಾಳದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ಉಳ್ಳಾಲ ನಗರ ಸಭೆಯ ಬಳಿ ಇರುವ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ನಡೆಯಿತು. ವಿವಿಧ ಗೊಂಬೆಗಳ ಬಳಗ, ಕರಾವಳಿಯ ಗಂಡು ಕಲೆ ಯಕ್ಷಗಾನ, ಚೆಂಡೆ,ವಾದ್ಯ, ತಾಸೆ, ಕೀಲು ಕುದುರೆ, ವೈವಿಧ್ಯಮಯ ವರ್ಣರಂಜಿತ ಉಡುಗೆ ತೊಡುಗೆಗಳು ಕೂಡಿದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಲಯ ಮತ್ತು ನಗರದ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಅಸಂಖ್ಯಾತ ಅಬ್ಬಕ್ಕಳ ಅಭಿಮಾನಿಗಳು, ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರನ್ನೊಳಗೊಂಡ ಜನಸ್ತೋಮದೊಂದಿಗೆ ಅದ್ಧೂರಿಯ ಮೆರವಣಿಗೆ ಉತ್ಸವದ ವೇದಿಕೆಯತ್ತ ಸಾಗುತ್ತಿರುವಾಗ, ವೇದಿಕೆಯಲ್ಲಿ ವಿದ್ವಾನ್ ಸಂಜೀವ್ ಉಳ್ಳಾಲ್, ಸ್ವರಸಂಜೀವಿನಿ ಸಂಗೀತ ಸಭಾ ತಂಡದಿಂದ ಮನಸ್ಸಿಗೆ ಮುದನೀಡುವ ವಂದನಾ ಕಾರ್ಯಕ್ರಮ ನಡೆಯುತ್ತಿತ್ತು. ಮೆರವಣಿಗೆ ಮಹಾತ್ಮಗಾಂಧಿ ರಂಗಮಂದಿರ ತಲುಪಿದ ಕೂಡಲೆ ಎಂದಿನ ವಾಡಿಕೆಯಂತೆ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀ ಸಂದೀಪ್ ಜಿ. ಎಸ್ ಧ್ವಜಾರೋಹಣಗೈದರು. ಮೆರವಣಿಗೆಯಲ್ಲಿದ್ದ ಪ್ರತೀ…
ಫೆಬ್ರವರಿ 04, ಕಾಸರಗೋಡು: ಕಾಸರಗೋಡು ಕೂಡ್ಲು ನಗರ ಕೊರಗಜ್ಜ ದೈವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ನಾಟ್ಯನಿಲಯಂ ಮಂಜೇಶ್ವರದ ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ. ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ ಶಿಷ್ಯ ಕಲಾ ತಪಸ್ವಿ, ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರ ನೇತೃತ್ವದಲ್ಲಿ 4 ದಶಕಗಳಿಂದ ನೃತ್ಯ ಕಲಾ ಸೇವೆ ನಡೆಸುತ್ತಿರುವ ‘ನಾಟ್ಯ ನಿಲಯಂ ಮಂಜೇಶ್ವರ’ ತನ್ನ ಶಾಸ್ತ್ರೀಯ ಶೈಲಿಯ ನೃತ್ಯ ಕಲೆಗೆ ಹೆಸರುವಾಸಿಯಾಗಿದೆ. ಹಲವು ನೃತ್ಯ ಕಲಾವಿದರನ್ನು ಸಮಾಜಕ್ಕೆ ನೀಡಿದ ಮತ್ತು ನೀಡುತ್ತಿರುವ ಈ ಸಂಸ್ಥೆ ಭರತನಾಟ್ಯ ಕಲಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ.
05 ಫೆಬ್ರವರಿ 2023: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಿಂದ ಮಾ. 5ರ ವರೆಗೆ ನೆರವೇರಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಅತಿರುದ್ರ ಮಹಾಯಾಗ ಸಮಿತಿ ಪ್ರಾಯೋಜಕತ್ವದಲ್ಲಿ ಆರ್ಟಿಸ್ಟ್ ಫೋರಮ್ ಸಹಯೋಗದೊಂದಿಗೆ ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಶಿವ ಚಿತ್ತಾರ” ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಂದಿ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಮಣಿಪಾಲ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸೌರಭಾ ಅವರು ಕಾರ್ಯಕ್ರಮ ಉದ್ಘಾಟಿಸಿ, ದೇವರ ಮೇಲಿನ ಅಪಾರ ಭಕ್ತಿಯನ್ನು ಕಲೆಯ ಮೂಲಕ ಭಗವಂತನಿಗೆ ಸಮರ್ಪಿಸಲು ಶಿವ ಚಿತ್ತಾರ ಚಿತ್ರಕಲಾ ಸ್ಪರ್ಧೆ ಒಂದು ಉತ್ತಮ ಮಾರ್ಗವಾಗಿದೆ. ಇದರಿಂದ ಮಕ್ಕಳಲ್ಲಿ ಕಲಾಸಕ್ತಿಯೊಂದಿಗೆ ಧಾರ್ಮಿಕ ಪ್ರಜ್ಞೆಯ ಉದ್ದೀಪನಗೊಳ್ಳಲಿದೆ. ಭಗವಂತನಿಗೆ ಪ್ರೀತಿ ಮತ್ತು ಭಕ್ತಿಯಿಂದ ಕಳೆಯನ್ನು ಸಮರ್ಪಿಸಿದಾಗ ನಮ್ಮೆಲ್ಲ ಕಾರ್ಯಗಳೂ ಯಶಸ್ವಿಯಾಗಲಿವೆ ಎಂದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳತಜ್ಞೆ ಡಾ| ಪುಷ್ಪಾ ಕಿಣಿ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಕಲೆಗೆ ಪ್ರಾಶಸ್ತ್ಯ ನೀಡಿದಾಗ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲಿದೆ.…
ಚೆನ್ನೈ, ಫೆಬ್ರವರಿ 04: ಕನ್ನಡ ಸೇರಿದಂತೆ ಇತರ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ಅವರು ಶನಿವಾರ ನಿಧನರಾಗಿದ್ದಾರೆ. ವಾಣಿ ಅವರು ಸಿನಿಮಾ ಹಿನ್ನೆಲೆ ಗಾಯಕಿಯಾಗಿದ್ದು, ಕನ್ನಡ, ತಮಿಳು ಹಿಂದಿ, ಉರ್ದು, ಮರಾಠಿ, ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಾಣಿ ಜಯರಾಮ್ ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಂಗಳೂರು, ಫೆಬ್ರವರಿ 04: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ಇದರ ಆಶ್ರಯದಲ್ಲಿ 25 ವರ್ಷಗಳಿಂದ ಅಬ್ಬಕ್ಕ ಉತ್ಸವ ನಡೆಯುತ್ತಾ ಬಂದಿದ್ದು 2022 – 23ನೆ ಸಾಲಿನ ಉತ್ಸವ ಇಂದು ನಡೆಯುತ್ತಿದೆ. ವೀರರಾಣಿ ಅಬ್ಬಕ್ಕ ಉತ್ಸವ 2022-23 ವೀರಮಾರುತಿ ವ್ಯಾಯಾಮ ಶಾಲೆ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಇಲ್ಲಿಂದ ಮಹಾತ್ಮಗಾಂಧಿ ರಂಗಮಂದಿರ ನಗರಸಭೆ ಉಳ್ಳಾಲದವರೆಗೆ ಆಕರ್ಷಕ ಜಾನಪದ ದಿಬ್ಬಣ ದೊಂದಿಗೆ ಆರಂಭವಾಯಿತು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಫೆಬ್ರವರಿ 4ರಂದು ಉಳ್ಳಾಲದಲ್ಲಿ ವಿದ್ಯುಕ್ತವಾಗಿ ಹಲವು ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.
ಮಂಗಳೂರು, ಫೆಬ್ರವರಿ 4: “ಕಾಲನಾಗಿಹ ಶಿವನು ಹಳೆ ಶಾಸ್ತ್ರಗಳ ಸುಡುತ ಹೊಸ ಚಿಗುರ ಚಿಗುರಿಸುತ ಜೊತೆಯಲಿರುವ” “ಶೂದ್ರ ಶಿವ” ಜಾತೀಯ ಕಟ್ಟುಪಾಡುಗಳು, ಅಸ್ಪೃಶ್ಯತೆಯನ್ನೊಳಗೊಂಡ ಭ್ರಮೆಯ ಸಮಾಜಕ್ಕೆ ಧಾರ್ಮಿಕ ನೆಲೆಗಟ್ಟಿನ ಮೂಲಕ ಸಾಮಾಜಿಕ ಸುಧಾರಣೆ ,ಶೈಕ್ಷಣಿಕ ಚಳುವಳಿಯ ಹಾದಿಯಲ್ಲಿ ದೀನ ದಲಿತರ ಏಳಿಗೆಗಾಗಿ ಹೊಸ ಅಧ್ಯಾಯವನ್ನು ರೂಪಿಸಿದ “ಬ್ರಹ್ಮಶ್ರೀ ನಾರಾಯಣ ಗುರುಗಳ” ತತ್ವ ಸಂದೇಶ ಸಂದೇಶವನ್ನೊಳಗೊಂಡ *ಶೂದ್ರಶಿವ* ಕನ್ನಡ ನಾಟಕ ಪ್ರಥಮ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ. ದಿನಾಂಕ 05, ಫೆಬ್ರವರಿ 2023ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳೂರು ಇಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಪ್ರತಿಭಾವಂತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದ ನಾರಾಯಾಣ ಗುರುಗಳ ಚಳವಳಿ ಆಧಾರಿತ ನಾಟಕ “ಶೂದ್ರ ಶಿವ” ತಿರುಗಾಟಕ್ಕೆ ಸಿದ್ದಗೊಂಡಿದೆ. ಕುತೂಹಲ, ನಿರೀಕ್ಷೆ ಹುಟ್ಟಿಸಿರುವ ಈ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಆಯೋಜಕರಾದ ರುದ್ರ ಥೇಟರ್, ಮಂಗಳೂರು ವಿನಂತಿಸಿದ್ದಾರೆ.
ಕನ್ನಡನಾಡು ಕಂಡ ಅದ್ಭುತ ರಂಗಸಂಘಟಕ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಇದೀಗ 75ರ ಹರೆಯ. ಜಾನಪದ, ಹವ್ಯಾಸೀ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಿ ಜಗತ್ತಿನಾದ್ಯಂತ ತಲುಪಿಸಿದ ಶ್ರೀನಿವಾಸ್ ಜಿ. ಅವರು ‘ಕಪ್ಪಣ್ಣ’ ಎಂದೇ ಪ್ರಖ್ಯಾತರು. ಕರ್ನಾಟಕದಲ್ಲಿ ಜಾನಪದ ಉತ್ಸವಗಳನ್ನು ಆಯೋಜಿಸಿ ಪ್ರಖ್ಯಾತರಾದವರು. ಕರಾವಳಿ ಜಿಲ್ಲೆಗಳಿಗೂ ಅವರ ಸೇವೆ ಸಂದ ಹಿನ್ನೆಲೆಯಲ್ಲಿ ರಂಗಸಂಗಾತಿ, ಮಂಗಳೂರು ತಂಡವು ಇದೇ ಫೆ. 5, 2023 ರಂದು ಭಾನುವಾರ ಸಂಜೆ 5ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ. ಆರ್. ಐ. ಸಭಾಂಗಣದಲ್ಲಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಿರಿಯ ವಿದ್ವಾಂಸರೂ ನಿವೃತ್ತ ಕುಲಪತಿಗಳೂ ಆಗಿರುವ ಪ್ರೊ. ಬಿ. ಎ. ವಿವೇಕ ರೈ, ಮಂಗಳೂರು ವಿಶ್ವ ವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ, ಏರ್ಯ ಆಳ್ವ ಫೌಂಡೇಶನ್ನಿನ ಅಧ್ಯಕ್ಷರಾದ ಏರ್ಯ ಬಾಲಕೃಷ್ಣ ಹೆಗ್ಡೆ ಹಾಗೂ ಶ್ರೀನಿವಾಸ ಜಿ ಕಪ್ಪಣ್ಣ…
ನಟನ ರಂಗಶಾಲೆಯ 2022-23 ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ‘ತ್ರಿಪುರಾಣ’. ಕನ್ನಡಕ್ಕೊಂದು ಹೊಸ ನಾಟಕ… ರಂಗ ಸಾಧ್ಯತೆಗಳ ಹೊಸ ಹುಡುಕಾಟ.. ಭಾರತದಲ್ಲಿ ನೂರೆಂಟಕ್ಕೂ ಹೆಚ್ಚು ಪುರಾಣಗಳಿವೆ. ಅಗಣಿತ ಅತಿಮಾನುಷ ದೇವ, ದಾನವ, ಯಕ್ಷ, ಗಂಧರ್ವ, ಕಿನ್ನರ, ಭೂತ, ಪ್ರೇತ, ಪಿಶಾಚಿ, ಅಪ್ಸರೆ, ಸುರ, ಅಸುರ, ಮಹಾಸುರ, ದೈವ… ಮುಂತಾದ ಶಕ್ತಿಗಳ ಕುರಿತ ನಂಬಿಕೆ, ಕಥೆ, ಐತಿಹ್ಯ, ಕಾರಣಿಕಗಳಿವೆ. ಆತ್ಮ, ಪರಮಾತ್ಮ, ಪ್ರಕೃತಿ, ಪುರುಷ… ಹೀಗೆ ವಿವಿಧ ವಿಂಗಡಣೆಗಳಿವೆ.ಆಸ್ತಿಕ, ನಾಸ್ತಿಕ, ಚಾರ್ವಾಕ, ಆಜೀವಿಕ, ಸಾಂಖ್ಯ, ಸಿದ್ಧ, ನಾಗ, ಲೋಕಾಯತ, ಅಘೋರಿ.. ಹೀಗೆ ನಂಬಿಕೆ, ಆಚರಣೆ, ಆಧ್ಯಾತ್ಮಕ್ಕೆ ಸಂಬಂಧಿಸಿದ ವಿಭಿನ್ನ ತತ್ವ ಪರಂಪರೆಗಳಿವೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಮಂತ್ರ ಮಾರ್ಗ, ತಂತ್ರ ಮಾರ್ಗ, ವಾಮ ಮಾರ್ಗ, ದಕ್ಷಿಣ ಮಾರ್ಗ ಮುಂತಾದ ಉಪಚಾರ, ಉಪಾಸನೆಯ ಪದ್ಧತಿಗಳಿವೆ. ಜನಪದ, ವೇದ, ಪುರಾಣ, ಮಹಾಕಾವ್ಯಗಳೇ ಮುಂತಾದ ಅನೇಕ ಆಖ್ಯಾನ, ವ್ಯಾಖ್ಯಾನಗಳಿವೆ. ಲೌಕಿಕ, ಅಲೌಕಿಕ, ಭೌತಿಕ, ಆದಿಭೌತಿಕ, ಆಧ್ಯಾತ್ಮಿಕ ಕಲ್ಪನೆಗಳಿವೆ.…