Subscribe to Updates
Get the latest creative news from FooBar about art, design and business.
Author: roovari
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ” ಕ್ರಿಯೇಟಿವ್ ಪುಸ್ತಕ ಧಾರೆ – 2025″ ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕರ‍್ಯಕ್ರಮ ದಿನಾಂಕ 13 ಆಗಸ್ಟ್ 2025ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ” ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ “ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ ” ಎಂದರು. ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದ ಸಂಸ್ಥೆಯ ಸಹ ಸಂಸ್ಥಾಪಕರಾದ…
ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ನಾಟಕ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೇವಲ ಬದುಕುವುದು ನೀರಸ, ಅರ್ಥವಿಲ್ಲದ ಯಾತ್ರೆ. ಸ್ಮರಿಸಿ ಬದುಕುವುದು ಅರ್ಥಪೂರ್ಣ. ಹಾಗಂತ ಯಾರ್ಯಾರನ್ನೋ ಸ್ಮರಿಸಿ ಬದುಕುವುದರಲ್ಲಿ ಮತ್ತೆ ಅರ್ಥವಿಲ್ಲ. ಮಹಿಮೋಪೇತರಾದ ವಿಜಯದಾಸರಂತಹವರನ್ನ ಸ್ಮರಿಸಿ ಬದುಕಬೇಕು ಎಂದು ಕಂಡುಕೊಂಡವರು ಕಲ್ಲೂರು ಸುಬ್ಬಣ್ಣಾಚಾರ್ಯರು (ವ್ಯಾಸ ವಿಠ್ಠಲರು). ಕಲ್ಲೂರು ಸುಬ್ಬಣ್ಣಾಚಾರ್ಯರು ವ್ಯಾಸ ವಿಠ್ಠಲರಾದ ಸ್ವಾರಸ್ಯಕರ ಸನ್ನಿವೇಶವೇ ರೋಮಾಂಚನ ಮೂಡಿಸುವಂತಹದ್ದು. ಇದೇ ಸನ್ನಿವೇಶವನ್ನು ರಂಗಮಂಚದ ಮೇಲೆ ತಮ್ಮ ಸಂದರ್ಭೋಚಿತ ನಿಪುಣತೆಯೊಂದಿಗೆ ಇಳಿಸಿದ್ದಾರೆ ಶ್ರೀ ಅರವಿಂದ ಕುಲಕರ್ಣಿಯವರು. ತಮ್ಮ ಸುಂದರ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ ರಂಗಸಂಪದ ಬೆಳಗಾವಿಯ ಕಲಾವಿದರು. ಭಾವಾವೇಶ, ರೋಮಾಂಚನಗಳನ್ನೊಳಗೊಂಡ ಈ ಸುಂದರವಾಗಿ ನಿರೂಪಿತವಾದ ನಾಟಕ ಪ್ರತಿಯೊಬ್ಬರೂ ನೋಡಲೇಬೇಕು. 250 ವರ್ಷಕ್ಕೂ ಮೀರಿ ಹಿಂದೆ ನಡೆದ ಕಥೆಯನ್ನು ನಮ್ಮ ಕಣ್ಣ ಮುಂದೆ ಕಟ್ಟುವಂಥ ನಾಟಕವನ್ನು ನೋಡಿ ಮನಸ್ಸು ಮಿಡಿಯದೇ ಇರದು, ಅಂತರ್ಮನ ಹೇಳದೇ ಇರದು……
ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 16 ಆಗಸ್ಟ್ 2025ರಂದು ‘ನೃತ್ಯ ರೂಪಕ’ ಮತ್ತು ‘ನೃತ್ಯಾರ್ಪಣಂ’ ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ಸಂಜೆ 7-30 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಪುತ್ತೂರಿನ ವೈಷ್ಣವೀ ನಾಟ್ಯಾಲಯ (ರಿ.) ಪ್ರಸ್ತುತಪಡಿಸುವ ‘ಶ್ರೀರಾಮ ಪುನರಾಗಮನ’ ನೃತ್ಯ ರೂಪಕ ಮತ್ತು ನೃತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಪ್ರದರ್ಶನಕ್ಕೆ ಸಾಹಿತ್ಯ ಡಾ. ರಾಜೇಶ್ ಬೆಜ್ಜಂಗಳ, ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಸಹಕರಿಸಲಿದ್ದಾರೆ. ರಂಗ ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್ ಮತ್ತು ವಸಂತ ಕುಮಾರ್ ಗೋಸಾಡ ಮತ್ತು ಮೃದಂಗದಲ್ಲಿ ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ ಮತ್ತು ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ಕಾಞಂಗಾಡ್ ಸಹಕರಿಸಲಿದ್ದಾರೆ.
ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ವು ದಿನಾಂಕ 17 ಆಗಸ್ಟ್ 2025ರಂದು ಮೈಸೂರಿನ ಮಾನಸಗಂಗೋತ್ರಿ ಗಾಂಧಿಭವನ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಲಾಯ ಬೆಂಗಳೂರು ಇದರ ಸಹಕಾರದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಡಾ. ಸಿ. ಬಸವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನರೇಂದ್ರ ಕುಮಾರ್ ಮತ್ತು ಪ್ರಸಾದ್ ಕುಂದೂರು ಇವರುಗಳು ಭಾಗವಹಿಸಲಿದ್ದಾರೆ.
ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಆಯೋಜಿಸುವ ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ ಕಾರ್ಯಕ್ರಮದಡಿಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಗುಂಡೂ ಸೀತಾರಾಮ ರಾವ್ ತಲವಾಟ ರಚಿತ ‘ಬರ್ಬರೀಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸರ್ವಶ್ರೀಗಳಾದ ರಾಘವೇಂದ್ರ ಮಯ್ಯ, ಭರತ್ ಚಂದನ್, ಸಚಿನ್ ಆಚಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಚಿಟ್ಟಾಣಿ ಕಾರ್ತಿಕ ಹೆಗಡೆ, ಸುಧೀರ ಉಪ್ಪೂರು, ಯೋಗೀಂದ್ರ ಮರವಂತೆ, ಪ್ರಶಾಂತ ಮಯ್ಯ ದಾರಿಮಕ್ಕಿ, ಪುರಂದರ ಮೂಡ್ಕಣಿ ಕಿರಾಡಿ ವಿಶ್ವನಾಥ ಮತ್ತು ಅನುಪ್ ಉರಾಳ ಇವರುಗಳು ಸಹಕರಿಸಲಿದ್ದಾರೆ.
ಕುಂದಾಪುರ : ಕುಂದಾಪುರ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ ‘ನಮ್ ಕುಂದಾಪ್ರ’ ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು: ನಮ್ಮ ಮಣ್ಣಿನ ಗುಣವನ್ನು ಅರ್ಥೈಸುವುದರೊಂದಿಗೆ, ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ದಿನಾಂಕ 16 ಆಗಸ್ಟ್ 2025 ಶನಿವಾರ ಬೆಳಿಗ್ಗೆ ಗಂಟೆಗೆ 10-00ಕ್ಕೆ ಕುಂದಾಪುರದ ಹಳೆ ಬಸ್ ಸ್ಟಾಂಡ್ ಬಳಿ ಇರುವ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರರವರು ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲ್ ಮ್ಯಾನೆಜ್ಮೆಂಟಿನ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕುಂದಾಪುರದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್‌ರವರು ಉಪಸ್ಥಿತಲಿದ್ದು, ಕಲಾಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಭಾಗವಹಿಸುವ ಕಲಾ ವಿದ್ಯಾರ್ಥಿಗಳು : ಕುಂದಾಪುರ, ಮಣಿಪಾಲ ಮತ್ತು ಆನ್ ಲೈನ್ ತ್ರಿವರ್ಣ…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ವತಿಯಿಂದ ‘ಸೇಡಿಯಾಪು ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 16 ಆಗಸ್ಟ್ 2025 ಶನಿವಾರದಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ವರ್ಷದ ಸೇಡಿಯಾಪು ಪ್ರಶಸ್ತಿಯನ್ನು ಸಂಸ್ಕೃತ ವ್ಯಾಕರಣಶಾಸ್ತ್ರದ ಹಿರಿಯ ವಿದ್ವಾಂಸರಾದ ಡಾ. ಎಚ್.ವಿ. ನಾಗರಾಜ ರಾವ್ ಇವರಿಗೆ ಪ್ರದಾನ ಮಾಡಲಾಗುವುದು. 2025ರ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನಸಂಕಲನಕ್ಕೆ ನೀಡಲಾಗುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯ್ಕ್ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಸೇಡಿಯಾಪು ಪ್ರಶಸ್ತಿ ಸಮಿತಿಯ ಪ್ರಾಯೋಜಕರಾದ ಡಾ. ಎಸ್.ಜೆ ಭಟ್ ಉಪಸ್ಥಿತರಿರುವರು. ಅಕಾಡೆಮಿ…
ಪುತ್ತೂರು : ಶಿವಳ್ಳಿ ಸಂಪದ ಪುತ್ತೂರು (ರಿ.) ಇದರ ಬೊಳುವಾರು ವಲಯದ ನೇತೃತ್ವದಲ್ಲಿ ‘ಶ್ರೀಮದ್ಭಾಗವತ ಸಪ್ತಾಹ’ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2025ರಿಂದ 22 ಆಗಸ್ಟ್ 2025ರವೆರೆಗೆ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಡಾ. ಬೆ.ನಾ. ವಿಜಯೀಂದ್ರ ಆಚಾರ್ಯ ಇವರು ಭಾಗವತ ಪ್ರವಚನ ನೀಡಲಿದ್ದಾರೆ. ದಿನಾಂಕ 16 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಜಿ.ಎಲ್. ಬಲರಾಮ ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಈ ಸಪ್ತಾಹವನ್ನು ಉದ್ಘಾಟಿಸಲಿದ್ದು, ವಲಯ ಅಧ್ಯಕ್ಷರಾದ ಗಣೇಶ್ ಕೆದಿಲಾಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ದಿನಾಂಕ 22 ಆಗಸ್ಟ್ 2025ರಂದು ಸಮಾರೋಪ ಸಮಾರಂಭ ನಡೆಯಲಿದೆ.
“ಪ್ರಪಂಚದೊಂದಿಗೆ ಸ್ಪರ್ಧಿಸು, ಆದರೆ ಓಡಿ ಸುಸ್ತಾಗಬೇಡ!” – ಈ ಮಾತು ನನ್ನನ್ನು ಆಕರ್ಷಿಸಿತು. “ಕೇವಲ ಒಂದು ಹೆಜ್ಜೆ, ‘ಜಾಯ್ ಅಂಡ್ ಎಂಜಾಯ್’ಗೆ ಹಾಕಿದರೆ, ಮತ್ತೊಂದು ಹೆಜ್ಜೆ ಎಲ್ಲಿಯೂ ಹಾಕಬೇಕಾಗಿಲ್ಲ” – ನಾನು ಮತ್ತು ನನ್ನ ಪತ್ನಿ ಹೇಳಿದಾಗ, ನನ್ನ ಭಾವಮೈದುನ “ಇದೇನು ಜೈಲಾ?” ಅಂದ. ನಾನು ಹಿಂದೆ ಸರಿಯಲಿಲ್ಲ, “ಅದಕ್ಕಿಂತ ಹೆಚ್ಚೇ” ಅಂದೆ. ‘ಜಾಯ್ ಅಂಡ್ ಎಂಜಾಯ್’ ಎಂಬ ಪ್ರತಿಷ್ಠಿತ ವೆಂಚರ್‌ನಲ್ಲಿ ನಾವು ಮನೆ ಖರೀದಿಸಿದೆವು. ನಾವು ಪ್ರವೇಶಿಸುವ ಮೊದಲೇ ಅದರ ಬೆಲೆ ತುಂಬಾ ಹೆಚ್ಚಾಗಿತ್ತು. ಲಾಭ ತೋರಿಸಿ, ಮಾರಾಟ ಮಾಡಿದವನೇ ಮತ್ತೆ ಮನೆಯನ್ನು ಖರೀದಿಸಲು ಆಫರ್ ನೀಡಿದ. ಆರ್ಥಿಕ ಲಾಭಗಳನ್ನು ಬದಿಗಿಟ್ಟರೆ, ನಿಜ ಹೇಳಬೇಕೆಂದರೆ ತುಂಬಾ ಹೆಮ್ಮೆಪಡುವ ತರಾ ಇದೆ. ಹದಿನಾರು ಎಕರೆಗಳಲ್ಲಿ ವಿಸ್ತರಿಸಿದ್ದಕ್ಕೆ ‘ಗೇಟೆಡ್ ಕಮ್ಯುನಿಟಿ’ ಎಂದು ಹೆಸರಿಡುವುದು ಅದನ್ನು ಕೀಳಾಗಿ ಕಂಡಂತೆ. ಬ್ರ್ಯಾಂಾಡ್ ಹೆಸರಿನಿಂದಲೇ ಕರೆಯಬೇಕು, ಆಗಲೇ ಸಮರ್ಥನೆ ಸಿಗುತ್ತದೆ. ಅದು ‘ಹೆವನ್ ಆನ್ ಅರ್ಥ್’. ನಲವತ್ತೈದು ಮಹಡಿಗಳು. ಈ ಟವರ್‌ಗಳ ಮಧ್ಯೆ ಸಂಪರ್ಕವೂ ಇದೆ. ಇನ್ನೂರು…
ಮಂಗಳೂರು : ಎಸ್.ಆರ್. ಹೆಗ್ದೆ ಚಾರಿಟೇಬಲ್ ಟ್ರಸ್ಟ್ (ರಿ.) ಸುರತ್ಕಲ್ ಇದರ ವತಿಯಿಂದ ಚೇಳ್ಯಾರು ಗುತ್ತಿನ ಮನೆಯಲ್ಲಿ ದಿನಾಂಕ 16 ಆಗಸ್ಟ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಸೋಣದ ಸಂಕ್ರಾಂತಿ, ಆಗೋಳಿ ಮಂಜಣ್ಣ ನೆಂಪು ಮತ್ತು ಚೇಲ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ನಡೆಯಲಿದೆ. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಕೃಷ್ಣ ಮೂರ್ತಿ ಪಿ. ಇವರು ಉಪನ್ಯಾಸ ನೀಡಲಿದ್ದಾರೆ. ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷರಾದ ವೆಂಕಟೇಶ್ ಶೆಟ್ಟಿ, ಸದಸ್ಯ ಪುಷ್ಪರಾಜ್ ಶೆಟ್ಟಿ ಮತ್ತು ಸರಕಾರಿ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರಸಾ ವೇಗಸ್ ಮುಖ್ಯ ಅತಿಥಿಗಳಾಗಿರುತ್ತಾರೆ. ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳ್ಯಾರು ಹಾಗೂ ಚೇಳ್ಯಾರು ಗುತ್ತಿನ ಕಸ್ತೂರಿ ಇವರು…