Author: roovari

ಬೆಂಗಳೂರು : ಜತಿನ್ ಅಕಾಡಮಿ ಆಫ್ ಡ್ಯಾನ್ಸ್ (ರಿ.) ಪ್ರಸ್ತುತ ಪಡಿಸುವ ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್ ಇವರ ಶಿಷ್ಯೆಯಾದ  ಕುಮಾರಿ ಪ್ರಜ್ಞಾ.ಪಿ.ಶರ್ಮ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 29-07-2023ರ ಸಂಜೆ 5.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಚಾವ್ಯ ನೃತ್ಯ ನಿಕೇತನದ ನಿರ್ದೇಶಕಿಯಾದ ರಾಜ್ಯೋತ್ಸವ ಹಾಗೂ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀಮತಿ ಸುನಂದ ದೇವಿ ಹಾಗೂ ಮುಖ್ಯ ಅತಿಥಿಗಳಾಗಿ ಅಂಧ ನೃತ್ಯ ಕಲಾವಿದರ ಮಾರ್ಗದರ್ಶಕಿ, ನೃತ್ಯ ಶಿಕ್ಷಕಿ ಮತ್ತು ಸಂಯೋಜಕಿ, ಭರತನಾಟ್ಯ ಮತ್ತು ಕಥಕ್ ಕಲಾವಿದೆಯಾದ ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್, ಕಲಾಯೋಗಿ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಲಾವಿದರ ಸಂಘದ ಯುವ ಬರಹಗಾರ ಹಾಗೂ ಕಲಾ ವಿಮರ್ಶಕ ಶ್ರೀ.ಎಸ್.ನಂಜುಂಡ ರಾವ್, ಬೆಂಗಳೂರಿನ ಐ.ಸಿ.ಸಿ.ಆರ್. ದಕ್ಷಿಣ ವಲಯ ಕಚೇರಿಯ ವಲಯ ನಿರ್ದೇಶಕರರಾದ ಶ್ರೀ.ಕೆ.ಅಯ್ಯನಾರ್, ಕಲಬುರ್ಗಿಯ ಎಸ್‌.ಎಂ.ಎನ್‌.ಕೆ.ಎಸ್.ಇದರ ಭರತನಾಟ್ಯ ಕಲಾವಿದರಾದ ವಿದ್ವಾನ್ ಶ್ರೀ.ಮಂಜುನಾಥ್ ಎನ್…

Read More

ಮಂಗಳೂರು: ಸನಾತನ ನಾಟ್ಯಾಲಯ ಮಂಗಳೂರು ಆಯೋಜಿಸುವ 2022ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ‘ಸನಾತನ ನೃತ್ಯ ಪ್ರೇರಣಾ’ ದಿನಾಂಕ 29-07-2023ರ ಶನಿವಾರ ಸಂಜೆ 5.30ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿಯಾದ ಶ್ರೀ ಎಲ್.ದಿವಾಕರ್ ಹಾಗೂ ಉಡುಪಿ ಮಣಿಪಾಲದ ಹೆಜ್ಜೆ ಗೆಜ್ಜೆಯ ನೃತ್ಯ ಗುರುಗಳಾದ ವಿದುಷಿ ಯಶ ರಾಮಕೃಷ್ಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರೈಸಿದ ವಿದುಷಿ ಅಮೃತಾ.ವಿ, ಅನನ್ಯಾ ಕುಂಡಂತ್ತಾಯ, ಅಪೂರ್ವ ಅಲೆವೂರಾಯ, ನಾಗರಶ್ಮಿ, ತುಳಸಿ, ಸಾಹಿತ್ಯ ಸುರೇಶ್, ರೀನಾ ಕಿಶೋರ್ ಹಾಗೂ ರಿಯಾ ಕಿಶೋರ್ ಇವರನ್ನು ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Read More

ಮೂಡುಬಿದಿರೆ : ಶ್ರೀ ಯಕ್ಷದೇಗುಲ ಕಾಂತಾವರ (ರಿ.)ದ ಇಪ್ಪತ್ತೊಂದನೇ ವಾರ್ಷಿಕ ‘ಯಕ್ಷೋಲ್ಲಾಸ 2023’ ಕಾರ್ಯಕ್ರಮವು ಶ್ರೀ ಕ್ಷೇತ್ರ ಕಾಂತಾವರದಲ್ಲಿ ದಿನಾಂಕ 23-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಮಾತನಾಡುತ್ತಾ “ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿದ ಅದೆಷ್ಟೋ ಕಲಾವಿದರು ಈಗಿಲ್ಲ. ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತವಾಗಿದೆ. ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು. ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು.” ಎಂದು ಹೇಳಿದರು. ವರ್ಕಾಡಿ ತಾರಾನಾಥ ಬಲ್ಯಾಯರಿಗೆ ‘ಪುತ್ತೂರು ಶ್ರೀ ಶ್ರೀಧರ ಭಂಡಾರಿ ಸಂಸ್ಕರಣಾ ಪ್ರಶಸ್ತಿ’ ಹಾಗೂ ವೇಣೂರು ಶ್ರೀ ಸದಾಶಿವ ಕುಲಾಲ್ ಅವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಕರಣಾ ಪ್ರಶಸ್ತಿ’…

Read More

76ನೆಯ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಹಿತ್ಯ ಗಂಗಾ ಧಾರವಾಡ ಮತ್ತು ಗೋಲ್ಡನ್ ಗ್ಲೋಬ್ ಟ್ರಸ್ಟ್ ದೆಹಲಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ ಬಹುಮಾನ ರೂ.3000/-, ಎರಡನೆಯ ಬಹುಮಾನ ರೂ.2000/-, ಮೂರನೆಯ ಬಹುಮಾನ ರೂ.1000/- ಮತ್ತು ಎರಡು ಮೆಚ್ಚುಗೆ ಬಹುಮಾನ ರೂ.500/- ನಗದು ಮತ್ತು ಡಿಜಿಟಲ್ ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು, ಸ್ಪರ್ಧೆಯ ನಿಯಮಗಳು – * 18-45 ವರ್ಷದೊಳಗಿನ ಉದಯೋನ್ಮುಖ ಗಾಯಕ ಮತ್ತು ಗಾಯಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. * ಭಾವಗೀತೆ, ದೇಶಭಕ್ತಿಗೀತೆ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಗೀತೆಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. * ಗಾಯಕ ಮತ್ತು ಗಾಯಕಿಯರು ತಾವು ಹಾಡಿದ ಒಂದು ಹಾಡನ್ನು ವಿಡಿಯೋ ಮಾಡಿ ಕಳುಹಿಸಬೇಕು. * ಗಾಯಕ ಮತ್ತು ಗಾಯಕಿಯರು ತಮ್ಮ ಪರಿಚಯ, ಒಂದು ಫೋಟೋ, ವಯೋಮಿತಿ ತಿಳಿಸುವ ಒಂದು ದಾಖಲೆ ಮತ್ತು ಗೀತ ರಚನಾಕಾರರ ಪರಿಚಯವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಹಾಡು ಕಳುಹಿಸಲು…

Read More

ನವದೆಹಲಿ : ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ.ಎಸ್ಸಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಶ್ರೇಯ ಕೆ.ಎಚ್.ಗೆ ನವದೆಹಲಿಯ ‘ನವಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ’ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ ‘ಶಿಲ್ಪ್ ಆಕಾರ್’ನಲ್ಲಿ ಪ್ರಥಮ ಸ್ಥಾನ ದೊರೆತಿದೆ. ಇವರು ಕೆ.ಹರಿಶ್ಚಂದ್ರ ಆಚಾರ್ಯ ಕೋಡಂಬು ಹಾಗೂ ಶುಭ ದಂಪತಿಗಳ ಸುಪುತ್ರಿಯಾಗಿರುತ್ತಾರೆ. ‘ಶಿಲ್ಪ್ ಆಕಾರ್’ ಕಲೆ ಮತ್ತು ಕರಕುಶಲಕ್ಕೆ ಸಂಬಂಧಿಸಿದ ರಾಷ್ಟ್ರಮಟ್ಟದ ಸ್ಪರ್ಧೆಯಾಗಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ವಿವಿಧ ಸಾಂಪ್ರದಾಯಿಕ ಅಥವಾ ಸಮಕಾಲೀನ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ. ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಡ್ರಾಯಿಂಗ್, ಪೇಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್’ ಪ್ರದರ್ಶನದಲ್ಲಿ ಅವರ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಅರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ : 21-04-2023ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನವನ್ನು ವಿತರಿಸಲಾಗಿದೆ.

Read More

ಮಂಗಳೂರು: ಶಾರದಾ ಮಹೋತ್ಸವದ ಪ್ರಯುಕ್ತ ನಗರದ ಕೊಡಿಯಾಲ್‌ ಬೈಲಿನ ಶಾರದಾ ವಿದ್ಯಾಲಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅಗಸ್ಟ್ 5ರಂದು ‘ಸಾಂಸ್ಕೃತಿಕ ಸ್ಪರ್ಧೆ’ಗಳನ್ನು ಏರ್ಪಡಿಸಲಾಗಿದೆ. ‘ಪುಟಾಣಿ’, ‘ಶಿಶು’, ‘ಬಾಲ’ ಮತ್ತು ‘ಕಿಶೋರ’ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ. ‘ಪುಟಾಣಿ’ ವಿಭಾಗ ಯು.ಕೆ.ಜಿ. ಮಕ್ಕಳಿಗೆ, ‘ಶಿಶು’ ವಿಭಾಗ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ, ‘ಬಾಲ’ ವಿಭಾಗ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ‘ಕಿಶೋರ’ ವಿಭಾಗ 8ರಿಂದ 10ನೇ ತರಗತಿಯವರಿಗೆ ಬೆಳಿಗ್ಗೆ 9ರಿಂದ ಸ್ಪರ್ಧೆಗಳು ನಡೆಯಲಿವೆ. ಕಥೆ ಹೇಳುವುದು, ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಕುಣಿತ ಭಜನೆ, ಕೊಟ್ಟಿಗೆ ಕಟ್ಟುವ ಸ್ಪರ್ಧೆ, ಏಕಪಾತ್ರಾಭಿನಯ, ಭಾವಗೀತೆ, ಜಾನಪದ ನೃತ್ಯ ಹಾಗೂ ಗೀತಾ ಕಂಠ ಪಾಠ ಸ್ಪರ್ಧೆಗಳು ಇರುತ್ತವೆ. ಗೂಗಲ್ ಪಾರ್ಮ್ ಲಿಂಕ್ ಹಾಗೂ ಸ್ಪರ್ಧೆಯ ನಿಯಮಗಳು ಶಾಲಾ ವೆಬ್ ಸೈಟ್ www.sharadavidyalaya.inನಲ್ಲಿ ಲಭ್ಯವಿದೆ. ಮಾಹಿತಿಗೆ (0824- 2492628/2493089/9019730479) ಸಂಪರ್ಕಿಸಬಹುದು.

Read More

ಮಂಗಳೂರು : ಡಾ. ವಾಮನ ನಂದಾವರ ಅವರ ಬಹುಮಾನಿತ ಕೃತಿಯ ಮೂರನೇ ಮುದ್ರಣ ‘ಸಿಂಗ ದನ’ ಬಿಡುಗಡೆ ಸಮಾರಂಭವು ದಿನಾಂಕ 05-08-2023 ಶನಿವಾರ ಮಧ್ಯಾಹ್ನ 3.30 ಗಂಟೆಗೆ ಬಳ್ಳಾಲ್‌ಬಾಗ್‌, ಪತ್ತು ಮುಡಿ ಸೌಧದಲ್ಲಿ ನಡೆಯಲಿದೆ. ಮೈಸೂರು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನದ ನಿಕಟ ಪೂರ್ವ ಯೋಜನಾ ನಿರ್ದೇಶಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಡಾ. ವಾಮನ ನಂದಾವರ ಇವರ ಉಪಸ್ಥಿತಿಯಲ್ಲಿ ಶ್ರೀ ಮೌನೇಶ್ ಕುಮಾರ್ ಛಾವಣಿ ಮತ್ತು ಬಳಗದವರಿಂದ ವಚನ, ದಾಸ ಸಾಹಿತ್ಯ ಗಾಯನ ನಡೆಯಲಿದೆ. ಹೇಮಾಂಶು ಪ್ರಕಾಶನದ ಚಂದ್ರಕಲಾ ನಂದಾವರ ಮತ್ತು ಡಾ. ವಾಮನ ನಂದಾವರ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಕಲ್ಲೂರು ನಾಗೇಶ ಎಲ್ಲರಿಗೂ ಪ್ರೀತಿಯ ಸ್ವಾಗತ ಕೋರಿದ್ದಾರೆ.

Read More

ಬದಿಯಡ್ಕ : ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಬದಿಯಡ್ಕ ಶ್ರೀ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಜರಗುತ್ತಿರುವ ರಾಮಾಯಣ ವಾರಾಚರಣೆಯ ಮೂರನೇ ಕಾರ್ಯಕ್ರಮದ ಅಂಗವಾಗಿ ಯಕ್ಷವಿಹಾರಿ ಬದಿಯಡ್ಕ ಇದರ ಆಶ್ರಯದಲ್ಲಿ ‘ತರಣಿಸೇನ ಕಾಳಗ’ ಎಂಬ ಯಕ್ಷಗಾನ ತಾಳಮದ್ದಳೆ ದಿನಾಂಕ 23-07-2023ರಂದು ನಡೆಯಿತು. ಹಿಮ್ಮೇಳದಲ್ಲಿ ಉದಯಶಂಕರ ಭಟ್ ಪಟ್ಟಾಜೆ, ತಲ್ಲಣಾಜೆ ವೆಂಕಟ್ರಮಣ ಭಟ್, ಬೇಂದ್ರೋಡು ಗೋವಿಂದ ಭಟ್, ಅಂಬೆಮೂಲೆ ಶಿವಶಂಕರ ಭಟ್, ವೇಣುಗೋಪಾಲ ಬರೆಕರೆ ಮತ್ತು ಅರ್ಥಧಾರಿಗಳಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲು, ಡಾ. ಬೇ.ಸೀ. ಗೋಪಾಲಕೃಷ್ಣ ಶ್ಯಾಮ ಆಳ್ವ ಕಡಾರು, ವಿಷ್ಣುಪ್ರಕಾಶ ಪೆರ್ವ, ಗಣೇಶಪ್ರಸಾದ್‌ ಕಡಪ್ಪು, ಡಾ. ಶ್ರೀಶಕುಮಾರ ಪಂಜಿತ್ತಡ್ಕ ಭಾಗವಹಿಸಿದ್ದರು. ಕರಿಂಬಿಲ ಲಕ್ಷ್ಮಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ಕೃತಿ ಅನಾವರಣ’ ಹಾಗೂ ‘ಕವಿಗೋಷ್ಠಿ’ ಕಾರ್ಯಕ್ರಮ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯ ಧ್ಯಾನ ಮಂದಿರದಲ್ಲಿ ದಿನಾಂಕ 29-07-2023ರಂದು ಸಂಜೆ ಗಂಟೆ 4ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ ಇವರು ವಹಿಸಲಿದ್ದು, ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ವಿದ್ವಾನ್ ರಘುಪತಿ ಭಟ್ ರಚಿಸಿರುವ ಕೃತಿ ‘ನಾನು ಮತ್ತು ನಾನು’ ಎಂಬ ಭಾವ ಸಂಕಲನವನ್ನು ಅನಾವರಣಗೊಳಿಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಬರಹಗಾರರಾದ ಡಾ. ವಸಂತ ಕುಮಾರ್ ಪೆರ್ಲ ಮತ್ತು ಖ್ಯಾತ ಸಾಹಿತಿ, ನ್ಯಾಯವಾದಿಗಳಾದ ಶ್ರೀ ಶಶಿರಾಜ ರಾವ್ ಕಾವೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ಕವಿಗೋಷ್ಠಿಯಲ್ಲಿ ಕವಿಗಳಾದ ಡಾ. ಸುರೇಶ ನೆಗಳಗುಳಿ, ಶ್ರೀ ಸುಬ್ರಾಯ ಭಟ್‌, ಶ್ರೀ ಗಣೇಶ್ ಪ್ರಸಾದ್ ಜೀ, ಡಾ. ಮೀನಾಕ್ಷಿ ರಾಮಚಂದ್ರ, ಶ್ರೀ…

Read More

ಎಡನೀರು: ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಂಸ್ಥಾನ ಎಡನೀರು ಮಠ, ಇಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ 26-07-2023ರಂದು ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಲವ ಕುಮಾರ್ ಐಲ, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶಂತನು), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ದೇವವ್ರತ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ದಾಶರಾಜ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಸತ್ಯವತಿ) ಸಹಕರಿಸಿದರು. ಮಠದ ವತಿಯಿಂದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಶ್ರೀ ರಾಜೇಂದ್ರ ಕಲ್ಲೂರಾಯ ವಂದಿಸಿದರು.

Read More