Subscribe to Updates
Get the latest creative news from FooBar about art, design and business.
Author: roovari
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾ ಕೇಂದ್ರ ಹಾಗೂ ಲಲಿತ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮವು ದಿನಾಂಕ 02-04-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಂಗಭೂಮಿಯ ವಿಕಾಸ, ರಂಗ ಭೂಮಿಯ ಪ್ರಕಾರಗಳು ಮತ್ತು ರೂಪಗಳು, ರಂಗ ಭೂಮಿಯ ಯಶಸ್ಸಿನಲ್ಲಿ ನಾಟಕಕಾರರು, ನಿರ್ದೇಶಕರು, ನಟರು ಮತ್ತು ವಿನ್ಯಾಸಕರ ಪಾತ್ರ, ರಂಗಭೂಮಿ ಸಂಸ್ಕೃತಿಯು ತೋರಿಸುವ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ಸಮಸ್ಯೆಗಳು, ಜನಸಾಮಾನ್ಯರ ಮೇಲೆ ರಂಗಭೂಮಿಯ ಪ್ರಭಾವ, ಹಾಗೂ ರಂಗಭೂಮಿಯು ಶಕ್ತಿಯುತ ಶೈಕ್ಷಣಿಕ ಸಾಧನವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ವಿಷಯಗಳ ಕುರಿತು ತಿಳಿಯಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ . ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ “ಡಿಜಿಟಲ್ ಮಾಧ್ಯಮಗಳ ಪ್ರಭಾವಕ್ಕೊಳಗಾದ ಜನತೆಯು ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಬಗ್ಗೆ…
ಬೆಂಗಳೂರು : ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ ಸಮಾರಂಭ’ ಕಾರ್ಯಕ್ರಮವು ದಿನಾಂಕ 03-04-2024ರ ಬುಧವಾರದಂದು ಜ್ಞಾನಜ್ಯೋತಿ ಸಭಾಂಗಣದ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿ ನಾಗಾಂಬಿಕಾ ದೇವಿ ಮಾತನಾಡಿ “ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ. ವಿದ್ಯೆಯ ಜೊತೆಗೆ ಸಶಕ್ತರಾಗುವುದನ್ನು ಮಹಿಳೆಯರು ಕಲಿಯಬೇಕು. ಹೆಣ್ಮಕ್ಕಳನ್ನು ಓದಿಸುವುದು, ಅವರನ್ನು ಕೆಲಸಕ್ಕೆ ಕಳುಹಿಸುವುದೇ ಬಹಳ ದೊಡ್ಡ ಉಪಕಾರ ಎಂದು ಹೆಚ್ಚಿನ ಮನೆಗಳಲ್ಲಿ ಹಿರಿಯರು ತಿಳಿದುಕೊಂಡಿದ್ದಾರೆ. ಇಂಥ ಮನಃಸ್ಥಿತಿಯಿಂದ ಹೊರಬರಬೇಕು. ಐ.ಎ.ಎಸ್. ಅಧಿಕಾರಿಯಾಗಲಿ, ಪತ್ರಕರ್ತರಾಗಲಿ ಕೆಲಸದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬುದಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಈ ತಾರತಮ್ಯ ಮತ್ಯಾಕೆ ಇರಬೇಕು. ದಾಸ್ಯ ಮನೋಭಾವದಿಂದ ಮಹಿಳೆಯರು ಹೊರಬರಬೇಕು. ಅವಕಾಶವನ್ನು ಬೇರೆಯವರು ನೀಡುವುದಲ್ಲ. ಅವಕಾಶ ಪಡೆಯುವುದು ನಿಮ್ಮ ಹಕ್ಕು” ಎಂದು ಪ್ರತಿಪಾದಿಸಿದರು. ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗ ಮಾತನಾಡಿ…
ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ 2024’ವು ದಿನಾಂಕ 13-04-2024ರಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಸಮರ್ಪಣಂ ಕಲೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ಅಯೋಧ್ಯಾ ಶ್ರೀ ರಾಮಲಲ್ಲಾ ವಿಗ್ರಹ ನಿರ್ಮಾತೃ ಅಭಿನವ ಅಮರಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಜೀ ಇವರಿಗೆ ‘ವಿಶ್ವಕರ್ಮ ಕುಲ ತಿಲಕ’ ಬಿರುದು ಪ್ರದಾನ ಹಾಗೂ ಗೌರವ ಸಂಮಾನ ನಡೆಯಲಿದೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ಕಲೋತ್ಸವಕ್ಕೆ ಚಾಲನೆ ನೀಡಲಿದ್ದು, ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾ ಸಾಧಕರಾದ ಹರೇಕಳದ ಕಾಷ್ಠಶಿಲ್ಪಿ ಶ್ರೀ ಬೈತಾರ್…
ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ.), ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಅರ್ಪಿಸುವ ನಾಟ್ಯಾರಾಧನಾ ತ್ರಿಂಶೋತ್ಸವದ ನೃತ್ಯಾಮೃತ -3ರಲ್ಲಿ ‘ಶ್ರೀ ರಾಮಾಭಿವಂದನಂ’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 09-04-2024ರಂದು ಸಂಜೆ ಗಂಟೆ 5-15ರಿಂದ ಮಂಗಳೂರಿನ ಕುದ್ಮುಲ್ ರಂಗ ರಾವ್ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ನಾರಾಯಣಗುರು ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಇವರ ಅಧ್ಯಕ್ಷತೆಯಲ್ಲಿ ಅಗರಿ ಎಂಟರ್ ಪ್ರೈಸಸ್ ಇದರ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಇವರು ಉದ್ಘಾಟಿಸಲಿರುವರು. ಗಂಟೆ 5.45ರಿಂದ ‘ಶ್ರೀ ರಾಮಾಭಿವಂದನಂ’ ಮತ್ತು ಮಾಯಾ ವಿಲಾಸ ನೃತ್ಯ ರೂಪಕ, ತಿಲ್ಲಾನ ಮತ್ತು ಮಂಗಲಂ ನೃತ್ಯ ಪ್ರಸ್ತುತಿ ನಡೆಯಲಿದೆ.
ಕುಂದಾಪುರ : ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಜಂಟಿಯಾಗಿ ಆಯೋಜಿಸುತ್ತಿರುವ 15 ದಿನಗಳ ವಸತಿ ಸಹಿತ ರಂಗ ತರಬೇತಿ ಕಾರ್ಯಾಗಾರ ಕಾಲದ ಜೊತೆಗಿನ ಕಲಿಕೆಯ ‘ಋತುಮಾನ’ವನ್ನು ದಿನಾಂಕ 25-04-2024ರಿಂದ 09-05-2024ರವರೆಗೆ ಅರೆಹೊಳೆ ನಂದಗೋಕುಲ ರಂಗ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದ ವಿಶೇಷತೆಗಳು : • ಎನ್.ಎಸ್.ಡಿ., ನೀನಾಸಂ ಹಾಗೂ ರಂಗಾಯಣ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ • ಸೌಪರ್ಣಿಕಾ ನದಿ ತಟದ ಮೇಲಿನ ಸುಸಜ್ಜಿತ ರಂಗ ಮಂದಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ • ಶಿಬಿರಾರ್ಥಿಗಳಿಗೆ ನಾಟಕದ ತಯಾರಿ • ಸುಂದರ ಹಳ್ಳಿಯ ಪರಿಸರದಲ್ಲಿ ದಿನ ಪೂರ್ತಿ ಕಾರ್ಯಾಗಾರ • 15 ವರ್ಷ ಮೇಲ್ಪಟ್ಟ ಆಸಕ್ತರಿಗೆ ಮಾತ್ರ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಉಜ್ಜಲ್ ಯು. ವಿ. 9900772221 ಮತ್ತು ಅರೆಹೊಳೆ ಸದಾಶಿವ ರಾವ್ 9632794477
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 08-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಚಿನ್ಮಯೀ ಸುರತ್ಕಲ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ನೃತ್ಯ ವಿದುಷಿ ಭಾರತಿ ಸುರೇಶ್ ಹಾಗೂ ಸುರೇಶ್ ರಾವ್ ಪಿ. ಇವರ ಸುಪುತ್ರಿಯಾಗಿರುವ ಈಕೆ ಓರ್ವ ಪ್ರತಿಭಾವಂತ ಕಲಾವಿದೆ. ಪುಟ್ಟ ಮಗುವಾಗಿದ್ದಾಗ ಇಡುತ್ತಿದ್ದ ಬಾಲ ಹೆಜ್ಜೆಗಳನ್ನು ಭರತನಾಟ್ಯದ ಪ್ರೌಢ ಹೆಜ್ಜೆಗಳಾಗಿ ರೂಪುಗೊಳ್ಳಲು ಕಾರಣರಾಗಿರುವವರು ಇವಳ ಅಮ್ಮ ‘ಶ್ರೀ ಶಾರದಾ ನಾಟ್ಯಾಲಯ’ದ ನೃತ್ಯ ಗುರು ವಿದುಷಿ ಭಾರತಿ ಸುರೇಶ್. ತನ್ನ ಐದೂವರೆ ವ್ಯಯಸ್ಸಿನಿಂದಲೂ ಇಂದಿನವರೆಗೆ ನಿರಂತರ ಅಭ್ಯಾಸದಿಂದ ನೃತ್ಯದ ಸೂಕ್ಷ್ಮಗಳನ್ನು ಅರಿತು ನರ್ತಿಸುವ ಜಾಣೆ. ಭರತನಾಟ್ಯದ ಸೀನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಇದೀಗ ವಿದ್ವತ್ ಪರೀಕ್ಷೆಯ ತಯಾರಿಯಲ್ಲಿದ್ದಾಳೆ. ಈಕೆ…
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವನದುರ್ಗ ದೇವಸ್ಥಾನದಲ್ಲಿ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಗಳ ಸ್ವರ್ಣ ಪಾದುಕ ಪೂಜೆಯ ಪ್ರಯುಕ್ತ ಗಮಕ ವಾಚನವು ದಿನಾಂಕ 02-04-2024 ರಂದು ನಡೆಯಿತು. ಗಮಕಿ ಶ್ರೀ ಎ. ಡಿ. ಸುರೇಶ್ ಅವರಿಂದ ನಿತ್ಯಾತ್ಮ ಶುಕಯೋಗಿಗಳ ಭಗವದ್ಗೀತಾ ಉಪದೇಶದ ಭಾಗದ ವಾಚನ ಮತ್ತು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಂದ ವ್ಯಾಖ್ಯಾನವು ನಡೆಯಿತು. ಬಾಸಮೆ ನಾರಾಯಣ ಭಟ್, ಶ್ರೀ ಗೋಪಾಲಕೃಷ್ಣ ಶರ್ಮ, ಕಾಂತಾಜೆ ಶ್ರೀ ಗಣೇಶ ಭಟ್ ಅವರು ಸ್ವಾಗತಿಸಿ ವಂದನಾರ್ಪಣೆಯನ್ನು ಮಾಡಿ ಗೌರವಿಸಿದರು .
ಪುತ್ತೂರು: ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನಾಟಕ ತರಬೇತಿ ‘ರಂಗ ನಟನಾ’ ಇದರ ಸಮಾರೋಪ ಸಮಾರಂಭ ದಿನಾಂಕ 22-03-2024ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಯದು ವಿಟ್ಲ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ. ದೀಪ ಪ್ರಜ್ವಲಿಸಿ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೋರಿದರು. ಶಾಲಾ ಸಹಶಿಕ್ಷಕಿ ಸೌಮ್ಯ ಸ್ವಾಗತಿಸಿ, ಕವಿತಾ ಸತೀಶ್ ಕಾರ್ಯಕ್ರಮ ನಿರ್ವಹಿಸಿ, ಜ್ಯೋತಿ ಲಕ್ಷ್ಮೀ ವಂದಿಸಿದರು. ಬಳಿಕ ಶಾಲಾ ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ಶಾಲಾ ಕಲಾ ಶಿಕ್ಷಕ ಕಾರ್ತಿಕ್ ಕುಮಾರ್ ವಿಟ್ಲ ಅವರ ಸಾರಥ್ಯದಲ್ಲಿ ‘ರಂಗ ನಟನಾ’ ನಾಟಕ ತರಗತಿಯ ವಿದ್ಯಾರ್ಥಿಗಳಿಂದ ‘ವೀರ ಸಾವರ್ಕರ್’, ‘ಹನುಮನ ಉಸಿರಲ್ಲಿ ರಾಮ’ ಹಾಗೂ ‘ಹರಿದ್ವರ್ಣ’ ಎಂಬ ಮೂರು ಕಿರು ನಾಟಕಗಳು ಪ್ರದರ್ಶನಗೊಂಡವು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರು, ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಸಂಧ್ಯಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ…
ಪುತ್ತೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ವತಿಯಿಂದ ಕೊಡಮಾಡುವ ಸ್ವರ್ಣ ಸಾಧನಾ ಪ್ರಶಸ್ತಿಗೆ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 04-05-2024ರಂದು ಪುತ್ತೂರಿನ ಜೈನ ಭವನದಲ್ಲಿ ಜರಗಲಿದೆ. ಪ್ರಶಸ್ತಿಯು ರೂಪಾಯಿ 15,000 ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ತಿಳಿಸಿದ್ದಾರೆ. ಸುಬ್ರಾಯ ಚೊಕ್ಕಾಡಿ : ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ತನ್ನ ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಪಂಜದಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ. ಎ. ಪದವಿ ಪಡೆದರು. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ…
ಮಂಗಳೂರು : ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠದ ಸಹಯೋಗದೊಂದಿಗೆ ಸಂಗೀತ ಪರಿಷತ್ ಮಂಗಳೂರು ಆಯೋಜಿಸುವ ಸಂಗೀತ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 07-04-2024ರಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ. ಸಂಜೆ 3.30ಕ್ಕೆ ಉಡುಪಿಯ ಕಡಿಯಾಳಿ ಸಹೋದರರಾದ ಪ್ರಭವ್ ಉಪಾಧ್ಯ ಮತ್ತು ಸೌರವ್ ಉಪಾಧ್ಯ ಅವರಿಂದ ಕೊಳಲು ವಾದನ ಕಛೇರಿಯು ನಡೆಯಲಿದ್ದು, ಧನಶ್ರೀ ಶಬರಾಯ ವಯೋಲಿನ್ ನಲ್ಲಿ ಹಾಗೂ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಬಳಿಕ ಬಾಲ ಪ್ರತಿಭೆ ಗಂಗಾ ಶಶಿಧರನ್ ಹಾಗೂ ಅವರ ಗುರುಗಳಾದ ಸಿ. ಎಸ್. ಅನುರೂಪ್ ಅವರಿಂದ ವಯೋಲಿನ್ ಕಚೇರಿ ನಡೆಯಲಿದ್ದು, ಕೆ. ಬಿ. ಗಣೇಶ್ ಮೃದಂಗದಲ್ಲಿ, ತ್ರಿಪುಣಿತ್ತುರ ಸಿ. ಎಚ್. ಶ್ರೀಕುಮಾರ್ ತವಿಲ್ ನಲ್ಲಿ , ವೆಲ್ಲಂತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕಾರ ನೀಡಲಿದ್ದಾರೆ.