Author: roovari

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗವು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳ್ತಂಗಡಿ ತಾಲೂಕು ಘಟಕದ ಸಹಯೋಗದಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಕರಣೆ ಮತ್ತು ತುಳುವ ಮೌಖಿಕ ಪರಂಪರೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 08-07-2023ರಂದು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಭಾಗವಹಿಸಿ ಮಾತನಾಡುತ್ತಾ “ಗೋಪಾಲ ನಾಯ್ಕ ಅವರು ಪ್ರತಿಭಾವಂತ ಕವಿಯಾಗಿದ್ದರು. ತುಳುವ ಮೌಖಿಕ ಪರಂಪರೆಯ ಸಮರ್ಥ ಕೊಂಡಿಯಾಗಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರೊಬ್ಬ ಅಂತಾರಾಷ್ಟ್ರೀಯ ಕವಿಯಾಗಿ ಹೊರಹೊಮ್ಮಿದ್ದಾರೆ, ತುಳುನಾಡಿನ ಜಾನಪದ ಅಷ್ಟೊಂದು ಶ್ರೀಮಂತವಾದುದು” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ವಹಿಸಿದ್ದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ. ಶ್ರೀನಾಥ ಹಾಗೂ ಗೋಪಾಲ ನಾಯ್ಕ ಅವರ ಪುತ್ರರಾದ ಸಿದ್ಧವನ ಗುರುಕುಲದ ಪ್ರಧಾನ ಪಾಲಕ ಕೇಶವ ನಾಯ್ಕ…

Read More

ಮೂಲ್ಕಿ: ಪಾವಂಜೆಯ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಇವರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸುವ ‘ರಜತ ಪರ್ವ ಸರಣಿ ಯಕ್ಷಗಾನ ತಾಳಮದ್ದಳೆ ಸಂಧಾನ ಸಪ್ತಕ’ದ ಉದ್ಘಾಟನಾ ಸಮಾರಂಭ ದಿನಾಂಕ 19-07-2023ರಂದು ನಡೆಯಿತು. ಶ್ರೀಯುತ ಪ.ರಾ.ಶಾಸ್ತ್ರಿಗಳು ಭಾಗವತ ಬಲಿಪ ಶಿವಶಂಕರ ಭಟ್ಟರಿಗೆ ವೀಳ್ಯವನ್ನು ಕೊಡುವ ಮೂಲಕ ಈ ಸಪ್ತಕವನ್ನು ಉದ್ಘಾಟಿಸಿದರು. ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತಪರ್ವ ಸರಣಿ ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಶುಭ ಹಾರೈಸಿದರು. ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ಕಲಾವಿದರನ್ನು ಗೌರವಿಸಿದರು. ಪ್ರತಿಷ್ಠಾನದ ಸರಣಿ ರಜತ ಪರ್ವದ 98ನೇ ಯಕ್ಷಗಾನ ತಾಳಮದ್ದಳೆ ‘ಸುಗ್ರೀವ ಕೌಶಿಕೆ’ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಟ್, ನೆಕ್ಕರೆಮೂಲೆ ಗಣೇಶ್ ಭಟ್ ಹಾಗೂ ಕೌಶಿಕ್…

Read More

ಬಂಟ್ವಾಳ: ಬಂಟ್ವಾಳದ ತುಂಬೆ ಕಡೆಗೋಳಿ ‘ನಿರತ ಸಾಹಿತ್ಯ ಸಂಪದ’ ಮತ್ತು ಗಲ್ಫ್ ಕನ್ನಡಿಗ ವತಿಯಿಂದ ಮೂರನೇ ವರ್ಷದ ಅತ್ಯುತ್ತಮ ವೆಬ್‌ಸೈಟ್ (ಅಂತರ್ಜಾಲ) ವರದಿಗೆ ನೀಡುವ ರಾಜ್ಯ ಮಟ್ಟದ ‘ಬಿ.ಜಿ.ಮೋಹನದಾಸ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಜೊತೆಗೆ ವರದಿಯ ಮೂರು ಪ್ರತಿಯನ್ನು ದಿನೇಶ್ ಎನ್. ತುಂಬೆ ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ, ಪ್ರಗತಿ ಪ್ರಿಂಟರ್ಸ್, ತುಂಬೆ – 574 143, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಆಗಸ್ಟ್ 10 ರೊಳಗೆ ಕಳುಹಿಸಿಕೊಡಬೇಕು. ವರದಿಯ ಲಿಂಕ್ ಅನ್ನು ಕಡ್ಡಾಯವಾಗಿ 9844619763 ಈ ನಂಬರ್‌ಗೆ ವಾಟ್ಸ್ಆ್ಯಪ್ ಮಾಡಬೇಕು.

Read More

ಯಲ್ಲಾಪುರ: ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ ಅನಾರೋಗ್ಯದಿಂದಾಗಿ ದಿನಾಂಕ 24-07-2023ರ   ಸೋಮವಾರ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪಟ್ಟಣದ ಹುಲ್ಲೂರ ಮನೆಯಲ್ಲಿರುವ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ಸಲ್ಲಿಸಲಾಯಿತು. ಮೃತರು ಮೂಲತ: ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನವರಾಗಿದ್ದು, ಮಡದಿ ಶ್ರೀಮತಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ ಹಾಗೂ ಓರ್ವ ಪುತ್ರ ಕಿರಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಶ್ರೀಯುತರು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ. ಯಕ್ಷಗಾನದ ಶ್ರೇಷ್ಠ ಕಲಾವಿದರೂ ಅರ್ಥಧಾರಿಗಳೂ ಆಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನೆಗಳನ್ನು ಸಂಗ್ರಹಿಸಿ ‘ಜ್ಞಾನಯಜ್ಞ’ ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದರು. ಇವರು ಬರೆದ ‘ಪಾದುಕಾ ಪ್ರಧಾನ’ ಗ್ರಂಥ ಕೆಲವು ವರ್ಷಗಳ ಹಿಂದೆ ಪ್ರಕಟಗೊಂಡಿದೆ. ಪುರಾಣ ಮತ್ತು ಭಾರತಗಳಲ್ಲಿನ ವಿಶಿಷ್ಟ ಸಂಗತಿಗಳನ್ನಾಧರಿಸಿದ ಅಂಕಣವನ್ನು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಬರೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿದ್ದ ಜ್ಞಾನಸಾಗರ ಅನಂತ ವೈದ್ಯರು. ಯಕ್ಷಗಾನದ ಮೊಟ್ಟಮೊದಲ…

Read More

ಪುತ್ತೂರು: ಡಿಸೆಂಬರ್ -2023ರಲ್ಲಿ ನಡೆಯಲಿರುವ ‘ಶ್ರೀ ಆಂಜನೇಯ 55’ರ ಸಂಭ್ರಮಕ್ಕೆ ಪೂರಕವಾಗಿ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ರೂಪುಗೊಂಡು ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ ತಾಳಮದ್ದಳೆ’ಎಂಬ ಕಾರ್ಯಕ್ರಮದಡಿಯಲ್ಲಿ ದಿನಾಂಕ 21-07-2023 ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಪತಿ ನಾಯಕ್ ಆಜೇರು, ಕುಸುಮಾಕರ ಆಚಾರ್ಯ ಹಳೇನೇರಂಕಿ, ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ಆದಿತ್ಯ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ “ಪೂಕಳ ಲಕ್ಷ್ಮೀ ನಾರಾಯಣ ಭಟ್ (ಭೀಮ), ಹರಿಣಾಕ್ಷಿ.ಜೆ.ಶೆಟ್ಟಿ( ದ್ರೌಪದಿ), ದಿವಾಕರ ಆಚಾರ್ಯ ಗೇರುಕಟ್ಟೆ ( ಲಕ್ಷ್ಮಣ), ಶುಭಾ ಗಣೇಶ್ (ಊರ್ಮಿಳೆ) ಸಹಕರಿಸಿ, ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Read More

ಬೆಂಗಳೂರು: ಜಯಚಾಮರಾಜೇಂದ್ರ ಒಡೆಯರ್ ಅವರ 104ನೇ ಜನ್ಮ ದಿನೋತ್ಸವವನ್ನು ದಿನಾಂಕ 18-07-2023ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಬಳಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿಯವರು “ಜಯಚಾಮರಾಜ ಒಡೆಯರ್ ಅವರು ಮೊದಲಿನಿಂದಲೂ ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಅಖಂಡ ಕರ್ನಾಟಕ ಅವರ ಕನಸಾಗಿತ್ತು. ಅದನ್ನು ನನಸಾಗಿಸಲು ರಾಜಪದವಿಯನ್ನು ತ್ಯಜಿಸಲೂ ಸಿದ್ಧರಾಗಿದ್ದರು. ಶ್ರೀ ಜಯಚಾಮರಾಜ ಒಡೆಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೂಡ ಆಗಿದ್ದರು. ಅವರ ಕಾಳಜಿಯಿಂದಲೇ ಬಿ.ಎಂ. ಶ್ರೀ ಅಚ್ಚಕೂಟ ಕನ್ನಡ ಮತ್ತು ಮಹಿಳಾ ಘಟಕದ ಯೋಜನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪನೆಯಾಯಿತು. ಮಹಾರಾಜರು ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದರು. ತಾವೇ ಕುವೆಂಪು ಅವರ ಮನೆಗೆ ಹೋಗಿ ಕನ್ನಡ ಕಲಿತಿದ್ದು ಅವರ ಹಿರಿಮೆ. ಹೀಗಾಗಿಯೇ ಕನ್ನಡ ಪ್ರೇಮ ಅವರಲ್ಲಿ ಮೂಡಿತ್ತು. ಜಯಚಾಮರಾಜೇಂದ್ರ ಗ್ರಂಥರತ್ನಮಾಲೆಯ ಮೂಲಕ ವೇದ, ಪುರಾಣ ಮತ್ತು ಇತಿಹಾಸಗಳ ಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಪಂಡಿತರಿಂದ ಅನುವಾದ ಮಾಡಿಸಿ…

Read More

ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ತೃತೀಯ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 19-07-2023 ರಂದು ಉಡುಪಿಯ ರಾಗಧನ ಸಂಸ್ಥೆಯ ಕಾರ್ಯದರ್ಶಿಯಾದ ವಿದುಷಿ ಉಮಾ ಉದಯ ಶಂಕರ್ ಮಣಿಪಾಲ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆಗೆ ಜೊತೆಯಾಗಿ ವಯೊಲಿನ್ ನಲ್ಲಿ ಕು. ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಶ್ರೀ ಅಜಯಕೃಷ್ಣ ಉಪ್ಪಂಗಳ ಸಹಕರಿಸಿದರು.

Read More

ಕಳೆದ ಎರಡು ದಶಕಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿ, 500ಕ್ಕೂ ಹೆಚ್ಚು ತಾಳಮದ್ದಳೆ ಮತ್ತು ಯಕ್ಷಗಾನಗಳಲ್ಲಿ ಭಾಗವಹಿಸಿ; “ಕಾಶ್ಯಪ ಮಹಿಳಾ ಯಕ್ಷಗಾನ ತಂಡ”ದ ಮುಂಚೂಣಿ ಕಲಾವಿದೆಯಾಗಿ ಮತ್ತು “ಯಕ್ಷ ಕಲಾಸಂಗಮ” ಎಂಬ ತಂಡವನ್ನು ಕಟ್ಟಿ ಪೋಷಿಸುತ್ತಿರುವ ಕಲಾವಿದೆ ಶ್ರೀಮತಿ ಸುಮಾ ವೆಂಕಟ್ರಮಣ ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಡುಗೋಡು ಎಂಬ ಪುಟ್ಟ ಗ್ರಾಮದ ಮಹಾಬಲೇಶ್ವರ ಭಟ್ಟ ಹಾಗೂ ಲಲಿತಾ ಭಟ್ ಇವರ ಮಗಳಾಗಿ 14.12.1973ರಂದು ಜನನ. ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಅವರಲ್ಲಿ ಯಕ್ಷಗಾನ ಸಾಹಿತ್ಯಾಭ್ಯಾಸ, ಹಿರಿಯ ಕಲಾವಿದ ಗಣಪತಿ ಭಾಗವತ್ ಕವ್ವಾಳೆ ಇವರಲ್ಲಿ ನೃತ್ಯಾಭ್ಯಾಸ. ನಾನಾಗ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಬೆಳಗಿನ ಜಾವ ಮೂರರವರೆಗೆ ಗದಾಯುದ್ಧ ಯಕ್ಷಗಾನ ಪ್ರಸಂಗವನ್ನು ನೋಡಿ ಬಂದು ಮಲಗಿದ್ದೆ. ಕನಸಿನಲ್ಲಿ ನಾನೇ ಭೀಮನ ಪಾತ್ರ ಕಟ್ಟಿದ್ದೆ. ಮುಖದ ಮೇಲೆ ಎರಡಿಂಚು ದಪ್ಪದ ಮೀಸೆ, ಮೈಮೇಲೆ ಮಿರಿ ಮಿರಿ ಮಿನುಗುವ ಆಭರಣಗಳು, ಹಳದಿ ಕೆಂಪು ಚೌಕುಳಿ ಬಟ್ಟೆಯ ಯಕ್ಷ ವೇಷ… ಹೀಗೆ ಸಾಗಿತ್ತು ನನ್ನ ಕನಸು.…

Read More

ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ದಿನಾಂಕ : 16-07-2023ರಂದು ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನಾ ಹಾಗೂ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನೆ ಕಾರ್ಯಕ್ರಮ ಜರಗಿತು. ನಂತರ ಇದೇ ವೇದಿಕೆಯಲ್ಲಿ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಹಾಗೂ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆಗಳು ನಡೆದವು.  ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಶ್ರೀ ಕೆ. ಶಾಂತಾರಾಮ್ ಸೂಡ “ಒಂದು ಸಮಿತಿ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಜನರನ್ನು ತಲುಪುವಲ್ಲಿ ಹಾಗೂ ಜನರ ಹೃದಯದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಮುಂದುವರೆಯುತ್ತಾ ಸಾಗುವುದು ಒಂದು ಮಹಾನ್ ತಪಸ್ಸು. ಅಂತಹ ಕಾರ್ಯವನ್ನು ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಕಳೆದ ಹನ್ನೊಂದು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ…

Read More

ಮಂಗಳೂರು: ಸಂಗೀತ, ನೃತ್ಯ, ತಾಳವಾದ್ಯ ಸಂಸ್ಥೆಗಳು ಹಾಗೂ ಶಿಕ್ಷಕರ ಜತೆ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ನಡೆಸಿದ ಸಂವಾದ ಕಾರ್ಯಕ್ರಮವು ದಿನಾಂಕ 15-07-2023ರಂದು ಮಂಗಳೂರಿನ ಹಂಪನಕಟ್ಟೆ ವಿವಿ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯನ್ನು ಈ ಬಾರಿ ಹಿಂದಿನಂತೆಯೇ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಸುವಂತೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಪದಾಧಿಕಾರಿಗಳು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ನಾಗೇಶ್ ಬೆಟ್ಟಕೋಟೆಯವರನ್ನು ವಿನಂತಿಸಿದ್ದಾರೆ. ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡ್ ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ವರ್ಷದಿಂದ ಈ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಡಾ.ಗಂಗೂಬಾಯಿ ಹಾನಗಲ್ ವಿವಿಗೆ ಸರ್ಕಾರ ವಹಿಸಿದೆ.ಈ ಹಿನ್ನೆಲೆಯಲ್ಲಿ ಈ ಬಾರಿಯ ಪರೀಕ್ಷೆಯನ್ನು ಸುಗಮ ಹಾಗೂ ಸುಸೂತ್ರವಾಗಿ ನಡೆಸುವ ಸಲುವಾಗಿ ಕಲಾ ಸಂಸ್ಥೆ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ವರ್ಷ ಪರೀಕ್ಷೆಗಳು ಸೆಕೆಂಡರಿ…

Read More