Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಮೈಸೂರಿನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಜೊತೆ ರಾಜ್ಯದ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ, ಮತ್ತು ಇತರ ಪ್ರದರ್ಶಕ ಕಲೆಗಳ ಕೋರ್ಸ್ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಂಗೀತ ಹಾಗೂ ಕಲಾಸಂಸ್ಥೆಗಳು 30-07-2023ರೊಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಡಾ.ಗಂಗೂಬಾಯಿ ಹಾನಗಲ್ ವಿ.ವಿಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಇವರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿ.ವಿ ಜೊತೆ ಒಡಂಬಡಿಕೆ ಮಾಡಿಕೊಂಡ ಸಂಸ್ಥೆಗಳು ನಡೆಸುವ ವಿವಿಧ ಕಲಾ ಪ್ರಕಾರಗಳಿಗೆ ಸಂಬಂಧಿಸಿ ನೀಡುವ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ನಿಯಮಾನುಸಾರ ಪರೀಕ್ಷೆಗಳನ್ನು ನಡೆಸಲಿದೆ. ಈವರೆಗೆ ಕರ್ನಾಟಕ ಸರಕಾರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತಿದ್ದ ಸಂಗೀತ ಪರೀಕ್ಷೆ ಮತ್ತು ಪ್ರದರ್ಶಕ ಕಲೆಗಳ ಪರೀಕ್ಷೆಗಳ ಸಂಪೂರ್ಣ ಜವಾಬ್ದಾರಿಯನ್ನು ಗಂಗೂಬಾಯಿ ಹಾನಗಲ್ ವಿ.ವಿ ವಹಿಸಲಿದೆ. ವಿವಿಯು ಈವರೆಗೆ ಕೇಂದ್ರ ಸ್ಥಾನದಲ್ಲಿ…
ಉಡುಪಿ: ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ‘ರಂಗ ಸಂಗಮ’ ವು ದಿನಾಂಕ 16-07-2023ರಂದು ಉಡುಪಿಯ ಎಂ.ಜಿ.ಎಮ್ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆರು ಭಿನ್ನ ನಾಟಕಗಳ ಆಯ್ದ ಭಾಗಗಳ ರಂಗ ಪ್ರಯೋಗ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ದ.ಕ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಲವಾರು ವೃತ್ತಿಪರ ನಾಟಕ ತಂಡಗಳಿದ್ದು ಅದರಲ್ಲಿ ಉಡುಪಿಯ ವೃತ್ತಿಪರ ನಾಟಕ ತಂಡಗಳ ಕಲಾವಿದರು ನಿರ್ಮಿಸಿದ ‘ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ’ವು ತನ್ನ ಪ್ರಥಮ ವರ್ಷಾಚರಣೆಯ ಸಂದರ್ಭದಲ್ಲಿ ವಿಭಿನ್ನ ಪ್ರಯೋಗವಾಗಿ ನವ್ಯ ರಂಗಭೂಮಿಯ ನಾಟಕಗಳ ತುಣುಕುಳನ್ನು ಅಭ್ಯಾಸಿಸಿ ಪ್ರದರ್ಶಿಸಿದರು. ವೃತ್ತಿಪರ ನಾಟಕಗಳು ಹೆಚ್ಚಾಗಿ ಹಾಸ್ಯ ಪ್ರಧಾನ ನಾಟಕಗಳಾಗಿದ್ದು ಅದರಲ್ಲಿ ಅಭಿನಯಿಸುವ ಕಲಾವಿದರು ಮೊದಲ ಬಾರಿಗೆ ನಿರ್ದೇಶಕ ವಿದ್ದು ಉಚ್ಚಿಲ್ ಮಾ ರ್ಗದರ್ಶನದಲ್ಲಿ 3 ಇಂಗ್ಲೀಷ್ ನಾಟಕಗಳ ತುಳು ಅನುವಾದ ಮತ್ತು 3 ನವ್ಯ ನಾಟಕಗಳ ತುಣುಕುಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ವಿಲಿಯಂ ಶೇಕ್ಸ್ ಪಿಯರ್ ಅವರ ‘ಮ್ಯಾಕ್ ಬೆತ್ ‘ನಾಟಕವನ್ನು…
ಉಡುಪಿ : ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು, ದೈನಂದಿನ ಜೀವನ ನಿರ್ವಹಣೆಗಾಗಿ ಇಷ್ಟವಿಲ್ಲದಿದ್ದರೂ ಅವಮಾನ ಪಡುವಂತಹ ಭಿಕ್ಷಾಟನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುವ ಅನಿವಾರ್ಯತೆಗೆ ಸಿಲುಕುವವರು ಲಿಂಗತ್ವ ಅಲ್ಪಸಂಖ್ಯಾತರು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಪಡೆಯುವುದರ ಮೂಲಕ ಮತ್ತು ತಮ್ಮಲ್ಲಿನ ಪ್ರತಿಭೆಯ ಮೂಲಕ ಗೌರವಯುತ ಜೀವನ ನಡೆಸುವುದು ಮತ್ತು ಅತ್ಯುನ್ನತ ಸಾಧನೆ ಮಾಡುವುದು ಸಾಧ್ಯವಿದೆ. ಇದಕ್ಕೆ ಉಡುಪಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅತ್ಯುತ್ತಮ ಅವಕಾಶ ಕಲ್ಪಿಸುವ ಮೂಲಕ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ಆಯೋಜಿಸಿದೆ. ಉಡುಪಿ ಜಿಲ್ಲಾಡಳಿತದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿಯಲ್ಲಿ ಜಿಲ್ಲೆಯಲ್ಲಿರುವ ಆಸಕ್ತ 19 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾರ್ಕಳದ ಸ್ತ್ರೀ ಶಕ್ತಿ ಭವನದಲ್ಲಿ ರೂ. 10,000ಗಳ ಸ್ಟೈಫಂಡ್‌ನೊಂದಿಗೆ ದಿನಾಂಕ 05-06-2023ರಿಂದ 04-07-2023ರವರೆಗೆ ಒಂದು ತಿಂಗಳ ಕಾಲ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನದ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ನೃತ್ಯ, ಅಭಿನಯ, ಸಂಭಾಷಣೆಯಲ್ಲಿ ಪರಿಣಿತ ಸಾಧಿಸಿರುವ ಲಿಂಗತ್ವ ಅಲ್ಪ ಸಂಖ್ಯಾತರು ತರಬೇತಿ ಅಂತ್ಯದಲ್ಲಿ ‘ಶ್ವೇತ ಕುಮಾರ ಚರಿತ್ರೆ’…
ಮಂಗಳೂರು : ಶ್ರೀ ದುರ್ಗಾ ಕಲಾ ತಂಡದ ‘ಪುಗರ್ತೆ’ ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸುವ ಹಾಗೂ ನಿತಿನ್ ಹೊಸಂಗಡಿ ಇವರ ನಿರ್ದೇಶನದ ‘ಕಲ್ಜಿಗದ ಕಾಳಿ ಮಂತ್ರದೇವತೆ’ ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕದ ಪ್ರದರ್ಶನವು ದಿನಾಂಕ 26-07-2023ಕ್ಕೆ ಬುಧವಾರ ಸಂಜೆ 6 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದ್ದು, ಈ ನಾಟಕದ ಪ್ರವೇಶ ಉಚಿತವಾಗಿದೆ. ಈ ನಾಟಕಕ್ಕೆ ವಿನೋದ್ ರಾಜ್ ಕೋಕಿಲ ಸಂಗೀತ ನೀಡಿದ್ದು, ಪಟ್ಲ ಸತೀಶ್ ಶೆಟ್ಟಿ, ಮೈಮ್ ರಾಮ್ ದಾಸ್ ಮತ್ತು ವಿನೋದ್ ರಾಜ್ ಕೋಕಿಲರವರ ಹಿನ್ನಲೆ ಗಾಯನವಿರುವ ಈ ನಾಟಕದ ಹಾಡುಗಳ ಸಾಹಿತ್ಯ ಕೆ.ಕೆ. ಪೇಜಾವರ್ ಇವರದ್ದು, ಸುಂದರ್ ರೈ ಮಂದಾರ ಮತ್ತು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಂಪೂರ್ಣ ಸಲಹೆ ಸಹಕಾರವಿದೆ.
ಮಂಗಳೂರು : 76ನೇ ವರ್ಷಾಚರಣೆಯಲ್ಲಿರುವ ‘ಯುಗಪುರುಷ’ದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ಅರ್ಚಕ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ, ಸಾಂಸ್ಕೃತಿಕ ಸಮಾರಂಭವು ದಿನಾಂಕ 24-07-2023ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ. ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿರುವರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಕದ್ರಿ ನವನೀತ ಶೆಟ್ಟಿ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯುಗಪುರುಷ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದ ಅರ್ಚಕರಾದ ರಾಘವೇಂದ್ರ ಉಡುಪ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕರ ನೆಲೆಯಲ್ಲಿ ಗೌರವಿಸಲಾಗುವುದು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕೆ. ಬಾಲಕೃಷ್ಣ ಉಡುಪ ರಚಿಸಿದ ‘ಸ್ಫೂರ್ತಿ’ ಹಾಗೂ ದೇವೇಂದ್ರ ಅಮೀನ್ ರಚಿಸಿದ ‘ಮಾಯದ ಮಾಣಿಕ್ಯ’ ಕೃತಿಗಳನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ…
ಸುಂಕದಕಟ್ಟೆ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡು ಸಂಸ್ಥೆಗಳ ಸಹಯೋಗದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 15-07-2023ರಂದು ‘ತುಳು ಅಧ್ಯಯನ ಕೇಂದ್ರ’ ಹಾಗೂ ‘ಬಲೆ ತುಳು ಲಿಪಿ ಕಲ್ಲುಗ’ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು. ಈ ಕಾರ್ಯಕ್ರಮವನ್ನು ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಳದ ಆಡಳಿತ ಸಮಿತಿಯ ಸದಸ್ಯ ಸುಕೇಶ್ ಮಾಣೈ ಉದ್ಘಾಟಿಸಿ ಮಾತನಾಡುತ್ತಾ “ತುಳು ಲಿಪಿಯ ಅಕ್ಷರಾಭ್ಯಾಸ ಮಾಡುವುದರ ಜೊತೆಗೆ ತುಳು ಲಿಪಿ ಕಲಿತು ತುಳು ಭಾಷೆಯನ್ನು ಉಳಿಸಬೇಕು. ತುಳು ಭಾಷೆಯನ್ನು ನಾವು ಮಾತನಾಡುತ್ತಿದ್ದರೂ ತುಳು ಲಿಪಿಯ ಬಗ್ಗೆ ಜ್ಞಾನ ಇಲ್ಲ. ಈ ಬಗ್ಗೆ ನಾವು ಕಲಿಯುವಂತಹ ಅಗತ್ಯತೆ ಇದೆ” ಎಂದು ಹೇಳಿದರು. ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಧಾಕರ ಶೆಟ್ಟಿಯವರು “ವಿದ್ಯಾರ್ಥಿಗಳು ತುಳು ಭಾಷೆ – ಸಾಹಿತ್ಯ -ಸಂಸ್ಕೃತಿಯ ಬಗ್ಗೆ ಅಧ್ಯಯನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ನಶಿಸುವ ಹಂತದಲ್ಲಿರುವ…
ಕಾಸರಗೋಡು : ಪೆರಿಯ ಅಲಕ್ಕೋಡ್ ಗೋಕುಲಂ ಗೋ ಶಾಲೆಯಲ್ಲಿ ದಿನಾಂಕ 15-07-2023ರಂದು ನಡೆದ ಮಲ್ಲಾಡಿ ಸಹೋದರರ ಸಂಗೀತ ಕಛೇರಿಯು ಅಕ್ಷರಶಃ ಅಪೂರ್ವ ರಾಗಗಳ ಅಮೃತವರ್ಷಿಣಿಯಂತಿದ್ದು ಗಮನ ಸೆಳೆಯಿತು. ಗೋವುಗಳಿಗಾಗಿ ನಡೆಸಿಕೊಂಡು ಬರುವ ಪ್ರತೀ ತಿಂಗಳ ಸಂಗೀತ ಕಛೇರಿಯಲ್ಲಿ ಮೂರೂವರೆ ಗಂಟೆಗಳ ಕಾಲ ಗೋವುಗಳು ಮೌನವಾಗಿ ಆಲಿಸಿ, ತಲೆ ಅಲ್ಲಾಡಿಸಿ, ನರ್ತನ ಮಾಡಿಯೂ ಸಂಗೀತ ಆಸ್ವಾದನೆ ಮಾಡಿದ್ದನ್ನು ಕಂಡು ಶ್ರೇಷ್ಠ ಗಾಯಕ ಸಹೋದರರಿಗೂ ಹಾಗೂ ಇತರ ಶೋತೃಗಳಿಗೂ ಸಂಭ್ರಮ ಉಂಟಾಗಿ ರೋಮಾಂಚನವಾಯಿತು. ಇದು ಸಾಮಾನ್ಯ ಸಂಗೀತ ಕಛೇರಿಯಲ್ಲ, ಪ್ರಕೃತಿಗೆ ಸಮರ್ಪಣೆ ಆಗಿದೆ. ಮತ್ತೊಮ್ಮೆ ದೀಪಾವಳಿ ಸಂಗೀತೋತ್ಸವಕ್ಕೆ ಬರುತ್ತೇವೆ ಎಂದು ಮಲ್ಲಾಡಿ ಸಹೋದರರು ಹೇಳಿದರು. ಮಲ್ಲಾಡಿ ಸಹೋದರರು ಹಂಸಧ್ವನಿ ರಾಗದಲ್ಲಿ ವರ್ಣದಿಂದ ಪ್ರಾರಂಭಿಸಿ ಅತೀ ಅಪೂರ್ವವಾದ ಸುಪ್ರದೀಪರಾಗದ ಏಕೈಕ ಕೃತಿಯಾದ ತ್ಯಾಗರಾಜ ಸ್ವಾಮಿಗಳ ‘ವರಶಿಕಿವಾಹನ’ ಮತ್ತು ಧೇನುಕರಾಗದಲ್ಲಿ ‘ಕಾಮಧೇನುಕಾಂ ಆಶ್ರಯೇ’ ಮೊದಲ್ಗೊಂಡು ನಂತರ ಗಾನಮೂರ್ತಿ-ಮೋಹನ ರಾಗವೂ ಬಳಿಕ ರೇವತಿ ರಾಗದ ‘ಜಯತಿ ಜಯತಿ ಗೋಮಾತೆ’, ಸೌರಾಷ್ಟ್ರ ರಾಗದಲ್ಲಿ ‘ಶಿವ ಶಿವ ಭವ ಶರಣಂ’ ಆಲಾಪಿಸಿ…
ಮೂಡುಬಿದಿರೆ : ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿನಾಂಕ 19-07-2023 ಬುಧವಾರ ನಡೆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಂತಾರದ ಕಮಲಕ್ಕ ಖ್ಯಾತಿಯ ವಿದುಷಿ ಮಾನಸಿ ಸುಧೀರ್ ಉದ್ಘಾಟಿಸಿ ಮಾತನಾಡಿ, “ಎಲ್ಲಾ ಕಲಾವಿದರ ಆರಾಧ್ಯ ದೈವ ಶಿವ. ಸತತ ಪ್ರಯತ್ನದಿಂದ ಕೌಶಲ್ಯ ಬರುತ್ತದೆ. ಕಲೆ ಕೌಶಲ್ಯವನ್ನು ಮೀರಿದ್ದು ಕಲಾ ಆರಾಧಕರಾಗಿ ಕಲೆಯನ್ನು ಪ್ರೀತಿಸಿದಾಗ ಮಾನಸಿಕ ನೆಮ್ಮದಿಯ ಜೊತೆಗೆ ಸಾಧಕರಾಗಲು ಸಾಧ್ಯವಾಗುತ್ತದೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಧನಾತ್ಮಕ ಚಿಂತನೆ ಹೊಂದಿದೆ. ಈ ಚಿಂತನೆಯಡಿಯಲ್ಲಿ ಪ್ರತಿಭಾವಂತ ಗುರುಗಳನ್ನು ಹೊಂದಿರುವುದು ಹೆಗ್ಗಳಿಕೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು. ತಂತ್ರಜ್ಞಾನಕ್ಕೂ ಮೀರಿದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು” ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, “ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಸ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ ಮಾಡುವುದು ನಮ್ಮ ಕನಸಾಗಿದೆ” ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಲೆ ಮನುಷ್ಯನನ್ನ ಸಂತೋಷವಾಗಿಡುತ್ತದೆ. ಪ್ರತಿದಿನ ತಮ್ಮ ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಇವರಿಗೆ ‘ಅಭಿನಯ…
ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ಕಾರ್ಯಾಗಾರವು ದಿನಾಂಕ 23-0 7-2023, ಭಾನುವಾರ ಬೆಳಗ್ಗೆ ಗಂಟೆ 9.30 ರಿಂದ ಸಂಜೆ 5.00ರ ವರೆಗೆ ಸುರತ್ಕಲ್ ನ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೇಯ ಕೊಳತ್ತಾಯ ಮತ್ತು ಶರಣ್ಯ ಕೆ ಎನ್ ಭಾಗವಹಿಸುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತರಿಗೆ ಮುಕ್ತ ಪ್ರವೇಶ. ಹೆಚ್ಚಿನ ವಿವರಗಳಿಗಾಗಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿಯಾದ ಪಿ ನಿತ್ಯಾನಂದ ರಾವ್ 9742792669 ಇವರನ್ನು ಸಂಪರ್ಕಿಸಬಹುದು.
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಎರಡು ದಿನಗಳ ತರಗತಿವಾರು ಸಾಂಸ್ಕೃತಿಕ ಸ್ಪರ್ಧೆ ‘ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮವು ದಿನಾಂಕ : 10-07-2023 ಮತ್ತು 11-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಕಾಮಿಡಿ ಕಿಲಾಡಿಗಳು ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಯೋಜಕ ವಿನ್ಯಾಸ್ ಹೊಸೊಳಿಕೆ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾ ಕೆ. ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ತದನಂತರ ದೀಕ್ಷಿತ್ ಗೌಡ ಇವರಿಂದ ಮಿಮಿಕ್ರಿ, ಪೂರ್ವ ವಿದ್ಯಾರ್ಥಿಗಳಾದ ಸ್ವರಾಜ್ ಇವರಿಂದ ಗಾಯನ, ದೇವಿ ದಾಸ್ ಇವರಿಂದ ಕೊಳಲು ವಾದನ, ಹರ್ಷಿತ್ ಇವರಿಂದ ತಬಲಾ ವಾದನ ನಡೆಯಿತು. ಸ್ಪರ್ಧೆಯಲ್ಲಿ ಒಂಬತ್ತು ತರಗತಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ದ್ವಿತೀಯ ಬಿಕಾಂ ‘ಎ’ – ಪ್ರಥಮ ಸ್ಥಾನ, ಪ್ರಥಮ ಬಿಎ – ದ್ವಿತೀಯ…