Author: roovari

ಉಡುಪಿ : ಗಾಂಧಿ ಆಸ್ಪತ್ರೆ ಉಡುಪಿ ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂ ಅವರ ಆಶೀರ್ವಾದದೊಂದಿಗೆ ‘ವಯೋಲಿನ್ ಕಛೇರಿ’ಯನ್ನು ದಿನಾಂಕ 15-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಛೇರಿಯನ್ನು ಖ್ಯಾತ ಬಾಲ ಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಮತ್ತು ಅವರ ಮಾರ್ಗದರ್ಶಕ ಶ್ರೀ ಸಿ.ಎಸ್. ಅನುರೂಪ್ ಅವರು ನಡೆಸಿಕೊಡಲಿದ್ದಾರೆ.

Read More

ಬೆಳ್ತಂಗಡಿ : ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಸ ಆಂದೋಲನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಆರಂಭಿಸಿದೆ. ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸುವ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ದಿನಾಂಕ 07-05-2024ರಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು. ಬೆಳ್ತಂಗಡಿ ತಾಲೂಕು ಘಟಕದ ಗಮಕ ಪರಿಷತ್ತಿನ ಪೂರ್ವಾಧ್ಯಕ್ಷರು ಮತ್ತು ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ಮನೆಮನೆ ಗಮಕದ ಕಾರ್ಯಕ್ರಮವನ್ನು ಕಲಾಪೋಷಕರಾದ ಶ್ರೀ ಭುಜಬಲಿಯವರು ಉದ್ಘಾಟಿಸಿದರು. ನಂತರ ಶುಭಾಶಯಗಳನ್ನು ಕೋರಿದ ಅವರು “ಎಲ್ಲಾ ಕಲೆಗಳಿಗೂ ಸಂಗೀತವು ಮೂಲವಾಗಿದ್ದು, ವಾಚನ ಪ್ರಧಾನವಾದ ಗಮಕ ಕಲೆಯು ನಮ್ಮ ಸಂಸ್ಕೃತಿಯನ್ನು ಉಳಿಸಲು ಬಲು ಮುಖ್ಯ ಕಾರಣವಾಗಿದೆ. ಇಂತಹ ಗಮಕ ಕಲೆಯ ಮೂಲಕ ಕನ್ನಡದ ಕಾವ್ಯ ಸಂಪತ್ತನ್ನು ಮನೆ ಮನೆಗೆ ತಲುಪಿಸುವ ಕಾರ್ಯವು ಸ್ತುತ್ಯರ್ಹವಾಗಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು. ನಂತರ ಕುಮಾರವ್ಯಾಸ ವಿರಚಿತ ಕರ್ಣಾಟಕ ಕಥಾಮಂಜರಿಯ ಉದ್ಯೋಗ…

Read More

ಕೋಟ: ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದ ಅಂಗವಾದ ‘ಶ್ವೇತಸಂಜೆ-27’ ಕಾರ್ಯಕ್ರಮವು ದಿನಾಂಕ 10-05-2024 ರಂದು ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಇದರ ಸಹಯೋಗದೊಂದಿಗೆ ಕೋಟದ ಹರ್ತಟ್ಟು ಎಂಬಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಲಾವಿದ ಹಾಗೂ ಕಲಾ ಪ್ರೋತ್ಸಾಹಕ ಗೋಪಾಲ ಮೈಯ್ಯ ಹರ್ತಟ್ಟು ಮಾತನಾಡಿ “ಕಲಾ ಪ್ರತಿಭೆಗಳ ಜನ್ಮದಾತವಾಗಿರುವ ಸಂಸ್ಥೆ ಯಶಸ್ವೀ ಕಲಾವೃಂದ. ನಿರಂತರ ಸಾಂಸ್ಕೃತಿಕ ತರಗತಿಗಳನ್ನು ನಡೆಸುತ್ತಾ ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ಪಳಗಿಸಿ, ಅವರಿಗೆ ಅವಕಾಶ ನೀಡುತ್ತಾ ಪ್ರತಿಭೆಗಳನ್ನು ಬೆಳೆಸುತ್ತಾ ಸಾಧನೆ ಗೈಯುತ್ತಿರುವುದು ಶ್ಲಾಘನೀಯ ಕಾರ್ಯ. ಭವಿಷ್ಯದ ಕಲಾ ಪ್ರತಿಭೆಗಳಿಗೆ ನಿರಂತರ ವೇದಿಕೆ ಒದಗುತ್ತಿರಬೇಕು. ಈ ನಿಟ್ಟಿನಲ್ಲಿ 25ನೇ ವರ್ಷಾಚರಣೆಯ ಸಂದರ್ಭ ಸಮಾಜದ ಸನ್ಮಿತ್ರರು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ.” ಎಂದರು. ಮತ್ತೋರ್ವ ಅತಿಥಿ ಗುರು ಲಂಬೋದರ ಹೆಗಡೆ ಮಾತನಾಡಿ “ರಂಗ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವಲ್ಲಿ ಸಮಾಜದ ಗಣ್ಯರು ಮನಸ್ಸು ಮಾಡಬೇಕು. ಕಲಿಯುವ ಮನಸ್ಸುಗಳಿಗೆ ಅವಕಾಶದ ಪ್ರೋತ್ಸಾಹ ದೊರೆತರೆ ನೂರಾರು ಕಲಾವಿದರು…

Read More

ಮಂಗಳೂರು : ಮಾಂಡ್ ಸೊಭಾಣ್ ಪ್ರಕಾಶನದ 22ನೇ ಪುಸ್ತಕ ಲೇಖಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ದಿನಾಂಕ 09-05-2024 ರಂದು ಉಳ್ಳಾಲ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕರಾದ ರೋಹಿತ್ ಸಾಂಕ್ತುಸ್ ಶುಭ ಹಾರೈಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು. ಲೇಖಕ ರೊನಿ ಅರುಣ್ ಪ್ರಸ್ತಾವನೆಗೈದು ವಿತೊರಿ ಕಾರ್ಕಳ ನಿರೂಪಿಸಿದರು. ರಿಕ್ಷಾ ಡೈರಿ ‘ದಿರ್ವೆಂ’ ಕೊಂಕಣಿ ಮಾಸಿಕದಲ್ಲಿ ಪ್ರಕಟವಾದ 44 ಲೇಖನಗಳ ಸಂಗ್ರಹ. ಕಲಾವಿದ ವಿಲ್ಸನ್ ಕಯ್ಯಾರ್ ಮುಖಪುಟ ರಚಿಸಿದ್ದಾರೆ. ಈ ಮೊದಲು ʻಬಿಡಾರ್ʼ ಕಥಾಸಂಕಲನ ಹಾಗೂ ʻಥಕಾನಾತ್ಲೋ ಝುಜಾರಿʼ (ಜೀವನ ಚರಿತ್ರೆ) ಪುಸ್ತಕಗಳನ್ನು ರೊನಿ ಅರುಣ್ ಬರೆದಿದ್ದು ʻಥಕಾನಾತ್ಲೋ ಝುಜಾರಿʼ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ…

Read More

ಸುಳ್ಯ : ಹಿರಿಯ ಸಾಹಿತಿ, ವಿದ್ವಾಂಸ, ಸಂಶೋಧಕ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾ‌ರ್ ಇವರಿಗೆ ಸುಳ್ಯ ತಾಲೂಕು ಜಾನಪದ ಕೂಡುಕಟ್ಟು ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 09-05-2024ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ “ತುಳು ಭಾಷೆ ಮತ್ತು ತುಳು ಸಂಸ್ಕೃತಿಯ ಉಳಿವಿಗಾಗಿ ನಿರಂತರ ಕೆಲಸ ಮಾಡಿದ ಪಾಲ್ತಾಡಿ ರಾಮಕೃಷ್ಣ ಆಚಾ‌ರ್ ತುಳುವಿಗೆ ಒಂದು ಗೌರವದ ಸ್ಥಾನಮಾನ ದೊರಕಿಸಿಕೊಟ್ಟವರು. ಅಧ್ಯಯನದ ಮೂಲಕ ತನ್ನ ಜ್ಞಾನ ಶಕ್ತಿಯನ್ನು ವೃದ್ಧಿಸಿಕೊಂಡು ಅದನ್ನು ಸಾಹಿತ್ಯ ಲೋಕಕ್ಕೆ ವಿಸ್ತರಿಸಿ ಹಲವರಿಗೆ ಮಾರ್ಗ ದರ್ಶಕರಾಗಿ ಬೆಳೆಸಿದ ಕೀರ್ತಿ ಅವರದು.” ಎಂದು ಹೇಳಿದ್ದಾರೆ. ಜಾನಪದ ಸಂಶೋಧಕ ಡಾ. ಸುಂದರ್ ಕೇನಾಜೆ ಮಾತನಾಡಿ “ಅಕಾಡೆಮಿಗಳು ಹೇಗೆ ಕೆಲಸ ಮಾಡಬೇಕು ಎಂಬುದನ್ನು ರಾಜ್ಯಕ್ಕೆ ಮಾದರಿಯಾಗಿ ತೋರಿಸಿಕೊಟ್ಟವರು ಪಾಲ್ತಾಡಿಯವರು. ಜಾನಪದ ಉತ್ಸವಗಳನ್ನು ಸಂಘಟಿಸಿ ತಳ ಸಮುದಾಯದ ಜನರಿಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರು. ಆ ಮೂಲಕ ಸಮಾಜವನ್ನು ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 13-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೇಯಾ ಬಾಲಾಜಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೇಯಾ ಬಾಲಾಜಿ ಇವರು ಭರತನಾಟ್ಯ ಅಭ್ಯಾಸವನ್ನು ತಮ್ಮ ಆರನೇ ವಯಸ್ಸಿನಲ್ಲಿ ವಿದುಷಿ ಕೆ. ಬೃಂದಾ ಮತ್ತು ವಿದುಷಿ ಅನನ್ಯ ಎಂ. ಇವರಿಂದ ಪ್ರಾರಂಭಿಸಿರುತ್ತಾರೆ. ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಇವರು ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಕಾರ್ಯಕ್ರಮ ನೀಡಿರುತ್ತಾರೆ. ಪ್ರಸ್ತುತ ‘ಬೃಂದಾವನ ಕಲಾನಿಕೇತನ’ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ‘ಡಾ. ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ’, ‘ಚೈತ್ರಶ್ರೀ ಪ್ರಶಸ್ತಿ’, ‘ರಾಜೀವ್ ಗಾಂಧಿ ಪ್ರತಿಭಾ ಪುರಸ್ಕಾರ’, ಕಲಾ ಸ್ಪೂರ್ತಿ ಪ್ರಶಸ್ತಿ’, ‘ನಾಟ್ಯ ಮಯೂರಿ ಪ್ರಶಸ್ತಿ’, ‘ಅಂತರರಾಷ್ಟ್ರೀಯ…

Read More

ಕೋಟ : ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ ಹಂದಟ್ಟು –ಕೋಟ ಇಲ್ಲಿ ವರ್ಷಂಪ್ರತಿ ಅಕ್ಷಯ ತೃತೀಯಾದಂದು ನಡೆಯುವ ರಥೋತ್ಸವದ ಮುನ್ನಾ ದಿನದ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ದಿನಾಂಕ 09-05-2024ರಂದು ಸಂಪನ್ನಗೊಂಡಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಅಮರ ಹಂದೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಧಾರ್ಮಿಕ ಉಪನ್ಯಾಸ ನೀಡಿದರು. ಯಕ್ಷಗಾನ ಕಲಾ ಸಂಘಟಕ ಹಾಗೂ ಚಿಂತಕರಾದ ಜನಾರ್ದನ ಹಂದೆ, ಹಂದೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಹಂದೆ, ಕಟ್ಟೆ ಗೆಳೆಯರು ಹಂದಟ್ಟು ಕೋಟ ಇದರ ಸುರೇಶ ಪೂಜಾರಿ, ಉದಯ ಹಂದೆ ಬೆಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಮೂರ್ತಿ ಉರಾಳ, ಜಯರಾಮ ಶೆಟ್ಟಿ, ಯಕ್ಷಗಾನ ನೇಪಥ್ಯ ಕಲಾವಿದರಾದ ರಾಜು ಪೂಜಾರಿ, ಸಮಾಜ ಸೇವಾ ನಿರತೆ ಭಾರತಿ ವಿ. ಮಯ್ಯ,…

Read More

ಮಂಗಳೂರು : ವಳಚ್ಚಿಲ್ ಶ್ರೀನಿವಾಸ ಶಿಕ್ಷಣ ಸಮೂಹ ಸಂಕೀರ್ಣದ ವೈಕುಂಠ ಶ್ರೀನಿವಾಸ ದೇವಾಲಯದಲ್ಲಿ “ದೇವಾಲಯದಲ್ಲಿ ಸ್ವರಾಲಯ” ಎನ್ನುವ ದೈವಿಕ ಸಾರದ ಸಂಗೀತ ಕಾರ್ಯಕ್ರಮವು ದಿನಾಂಕ 04-05-2024 ರಂದು ನಡೆಯಿತು. ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬೇರೂರಿರುವ ‘ಸಂಗೀತ ಮತ್ತು ಆಧ್ಯಾತ್ಮಿಕತೆ’ ಪರಿಕಲ್ಪನೆಯು ದೇವಾಲಯದ ದೈವತ್ವ ಹಾಗೂ ಶಾಸ್ತ್ರೀಯ ಸಂಗೀತದ ಸಮ್ಮಿಲನದಿಂದ ಭಕ್ತಿ ಆರಾಧನೆಯನ್ನು ಇಮ್ಮಡಿಗೊಳಿಸುತ್ತದೆ. ಭಕ್ತಿ ಸ್ವರಸಂಗೀತ ಸಂಗಮದ ಮೂಲಕ ಭಕ್ತ ಸಮೂಹದಲ್ಲಿ ದೈವಿಕ ಸಾರ ಬಿತ್ತುವ ಸಲುವಾಗಿ ಕಲಾ ಆರಾಧಕ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಈ “ದೇವಾಲಯದಲ್ಲಿ ಸ್ವರಾಲಯ” ಎಂಬ ವಿನೂತನ ಕಾರ್ಯಕ್ರಮವನ್ನು ಶ್ರೀನಿವಾಸ ಫಾರ್ಮಸಿ ಕಾಲೇಜು ತಮ್ಮ ವಳಚ್ಚಿಲಿನ ವೈಕುಂಠ ಶ್ರೀನಿವಾಸ ದೇಗುಲದ ಪ್ರಾಂಗಣದಲ್ಲಿ ಸ್ವರಾಲಯ ಸಾಧನ ಫೌಂಡೇಶನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮೀ ಆರ್. ರಾವ್ ಸಂಗೀತ ವಾದಕರ ತಂಡಕ್ಕೆ ಶುಭ ಹಾರೈಸಿದರು. ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸದಸ್ಯರಾದ…

Read More

ತೆಕ್ಕಟ್ಟೆ: ‘ಶ್ವೇತಸಂಜೆ-26’, ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಆಯೋಜಿಸಿಕೊಂಡಿರುವ ‘ರಜಾರಂಗು-24’ ಶಿಬಿರದ ಮುಕ್ತಾಯದಲ್ಲಿ ನಡೆದ “ತ್ರಿವಳಿ ನಾಟಕೋತ್ಸವ”ದ ಸಮಾರೋಪ ಸಮಾರಂಭವು ದಿನಾಂಕ 08-05-2024 ರಂದು ತೆಕ್ಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ರಂಗ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ ಹಾಗೂ ಅಶೋಕ್ ಮೈಸೂರು ಇವರನ್ನು ಅಭಿವಂದಿಸಿ ಮಾತನಾಡಿ “ಮಕ್ಕಳ ಮನಸ್ಸುಗಳು ಕಾಲಿ ಪುಟದ ಹಾಗೆ. ನಿರ್ಮಲ ಮನಸ್ಸುಗಳಲ್ಲಿ ಸಫಲತೆಯ ಬೀಜ ಬಿತ್ತಬೇಕು. ಅದು ಮೊಳಕೆ ಒಡೆದು ಭವಿಷ್ಯದಲ್ಲಿ ಹೆಮ್ಮರವಾಗಿ ಸಮಾಜವನ್ನು ಬೆಳಗಬೇಕಾದರೆ ಇಂತಹ ಶಿಬಿರದಿಂದ ಸಾಧ್ಯ. ರಜಾರಂಗು ಶಿಬಿರ ಹಲವು ವರ್ಷಗಳಿಂದ ಪರಿಸರದ ಮಧ್ಯದಲ್ಲಿ ನೆರವೇರಿಸಿಕೊಂಡು ಬಂದಿದೆ. ನೀನಾಸಂ, ಸಾಣೆಹಳ್ಳಿ, ರಂಗಾಯಣದಲ್ಲಿನ ನುರಿತ ರಂಗ ನಿರ್ದೇಶಕರಿಂದ ಈ ಶಿಬಿರ ಸಂಪನ್ನಗೊಂಡಿರುವುದು ಸಣ್ಣ ವಿಷಯವಲ್ಲ. ಇಂತಹ ದೊಡ್ಡ ಮಟ್ಟದ ಶಿಬಿರವನ್ನು ಏರ್ಪಡಿಸಿಕೊಂಡು ಸುಧೀರ್ಘ ಕಾಲ ನಡೆಸುವ ಸಂಸ್ಥೆಯನ್ನು ಶ್ಲಾಘಿಸಲೇ ಬೇಕು. ಸಮಾಜಕ್ಕೆ ದೊಡ್ಡ ಕೊಡುಗೆಯಾದ ಯಶಸ್ವೀ…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿಯಲ್ಲಿ ಕುಂದಾಪುರದ ಶ್ರೀ ವೇಣುಗೋಪಾಲ ಭಜನಾ ಮಂಡಳಿಯವರಿಂದ ‘ಭಜನ್ ಸಂಧ್ಯಾ’ ಕಾರ್ಯಕ್ರಮವು ದಿನಾಂಕ 19-05-2024ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ.

Read More