Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವರ್ಣ ಕಲಾವಿದ ಪಣಂಬೂರು ರಾಘವರಾಯರ ಜನ್ಮ ಶತಮಾನೋತ್ಸವ 2022 – 23ರ ಅಗರಿ ಸಂಸ್ಮರಣೆ ಹಾಗೂ ಸಮಾರೋಪ ಕಾರ್ಯಕ್ರಮವು ದಿನಾಂಕ 09-10-2023ರಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಸೇರಾಜೆ ಸೀತಾರಾಮ ಭಟ್ “ ಅಗರಿ ಶ್ರೀನಿವಾಸ ಭಾಗವತರು ಬರೆದಿದ್ದ ಯಕ್ಷಗಾನ ಪ್ರಸಂಗಳು ಎಂದೂ ಸೋತಿಲ್ಲ. ಅಗರಿ ಅವರು ಬರೆದ ಪ್ರಸಂಗಗಳು ಕಾಲಾತೀತ. ಅವರು ಅದ್ಭುತ ಮೇಧಾಶಕ್ತಿ ಹೊಂದಿದ್ದು ಉತ್ತಮ ರಂಗ ನಿರ್ದೇಶಕ, ಪಾತ್ರಗಳ ಒಕ್ಕೂಟ ಉತ್ತಮವಾಗಿ ರೂಪಿಸಿಕೊಂಡಿರುವುದು ಇತಿಹಾಸವಾಗಿದೆ” ಎಂದು ಸ್ಮರಿಸಿದರು. ಕಟೀಲು ಮೇಳಗಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಕಲ್ಲಾಡಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಘವ ರಾಯರ ಜನ್ಮ ಶತಮಾನೋತ್ಸವ ಸಮಿತಿ ಸಂಚಾಲಕ, ಅವರ ಪುತ್ರ ಪಿ. ಮಧುಕರ್ ಭಾಗವತ್ ಪ್ರಾಸ್ತಾವಿಕ ಮಾತನ್ನಾಡಿದರು. ಜಿ.ಕೆ. ಭಟ್ ಸೇರಾಜೆಯವರು ರಾಘವ ರಾಯರನ್ನು ಸಂಸ್ಮರಿಸಿ ಮುಖವರ್ಣಿಕೆ, ಕಿರೀಟ ಇತ್ಯಾದಿಗಳ ಮೂಲಕ ಯಕ್ಷಗಾನ ಮಾತೆಯ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಗೈದಿದ್ದಾರೆ ಎಂದರು. ಈ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕವನ ರಚನಾ ಕಮ್ಮಟವು ದಿನಾಂಕ 01-11-2023ನೇ ಬುಧವಾರ ಪೂರ್ವಾಹ್ನ ಗಂಟೆ 10.00ಕ್ಕೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆಯಲಿದೆ. ಮಂಗಳೂರಿನ ಶ್ರೀ ಧ. ಮಂ. ಕಾನೂನು ಕಾಲೇಜು ಇದರ ಪ್ರಾಂಶುಪಾಲರಾದ ಡಾ. ತಾರನಾಥ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಬಂಟ್ಸ್ ಹಾಸ್ಟೇಲಿನಲ್ಲಿರುವ ಶ್ರೀ ರಾಮಕೃಷ್ಣ ಕಾಲೇಜು ಇದರ ಪ್ರಾಂಶುಪಾಲರುರಾದ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ರಾಜ್ಯೋತ್ಸವ ಸಂದೇಶ ನೀಡಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಲೇಖಕಿ ಶ್ರೀಮತಿ ಅಕ್ಷತಾರಾಜ್ ಪೆರ್ಲ ಭಾಗವಹಿಸಲಿದ್ದಾರೆ. ಕ. ಸಾ. ಪ ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಮಾಧವ ಎಂ. ಕೆ. ಕಾರ್ಯಕ್ರಮದಲ್ಲಿ …
ಮಂಗಳೂರು : ಮಂಗಳೂರಿನ ಶ್ರೀ ಶ್ರೀ ಕುರು ಅಂಬಾ ರಾಜರಾಜೇಶ್ವರಿ ಸುಬ್ರಮಣ್ಯ ದೇಗುಲದಲ್ಲಿ ಲಲಿತಾ ಪಂಚಮಿ ಪ್ರಯುಕ್ತ ಯಕ್ಷಗಾನ ಬಯಲಾಟ ‘ಇಳಾರಜತ’ವು ದಿನಾಂಕ 20-10-2023ರಂದು ಉಮೇಶ ಕರ್ಕೇರ ಮತ್ತು ಬಳಗದವರಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುರು ಅಂಬಾ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಪಿ. ಮಹಾ ಬಲ ಚೌಟ “ಯುಕ್ಷಗಾನವು ಇಂದು ವಿಶ್ವವ್ಯಾಪಿಯಾಗಿದೆ. ಪಂಡಿತ-ಪಾಮರರೂ ಇಂದು ಏಕ ಪ್ರಕಾರವಾಗಿ ಈ ರಂಗದಲ್ಲಿ ತಮ್ಮ ಚಾಕಚಾಕ್ಯತೆಯನ್ನು ತೋರಿಸುತ್ತಿದ್ದಾರೆ. ಶ್ರೀಕುರು ಅಂಬಾ ದೇವಳದ ಸಹಿತ ಅನೇಕ ಪುಣ್ಯಕ್ಷೇತ್ರಗಳಲ್ಲಿ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಇಂದು ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದಿಂದ ಉಮೇಶ ಕರ್ಕೇರ ಒಂದು ಉತ್ತಮ ಕಾರ್ಯಕ್ರಮ ನೀಡುತ್ತಿರುವುದು ಶ್ಲಾಘನೀಯ” ಎ೦ದು ಹೇಳಿದರು. ದೇವಳದ ಟ್ರಸ್ಟಿಗಳಾದ ಶ್ರೀ ಪುಷ್ಪರಾಜ್ ಶೆಟ್ಟಿ, ಜಾಹ್ನವಿ ರಮೇಶ್ ಶೆಟ್ಟಿ, ನಿರೂಪಕ ರಾಕೇಶ್ ಶೆಟ್ಟಿ, ಆಧ್ಯಾಪಿಕೆ ಶ್ರೀಮತಿ ಕೃಪಾ ಯನ್. ಖಾರ್ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಮೇಶ ಕರ್ಕೇರ ತಂಡದ ಸದಸ್ಯ ಚಿಂತನ್ ಆರ್.…
ಪುತ್ತೂರು : ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೌನೇಶ ವಿಶ್ವಕರ್ಮ ಇವರು ರಚಿಸಿದ ‘ತಂತ್ರಜ್ಞಾನದ ಮಾಯೆ’ ವಿಜ್ಞಾನ ನಾಟಕ ಪ್ರಥಮ ಸ್ಥಾನಗಳಿಸಿದ್ದು, ಜಿಲ್ಲಾಮಟ್ಟದ ಅತ್ಯುತ್ತಮ ಕೃತಿ ಪ್ರಶಸ್ತಿಗೂ ಆಯ್ಕೆಯಾಗಿದೆ. ಚಿತ್ರದುರ್ಗ ತಾಲೂಕು ಮಟ್ಟ ಹಾಗೂ ಚಿತ್ರದುರ್ಗ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಚವಲಿಹಟ್ಟಿಯ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ‘ತಂತ್ರಜ್ಞಾನದ ಮಾಯೆ’ ವಿಜ್ಞಾನ ನಾಟಕವನ್ನು ಅಭಿನಯಿಸಿ ಪ್ರಥಮ ಸ್ಥಾನಗಳಿಸಿ, ಬೆಂಗಳೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ನಾಟಕವನ್ನು ಶಾಲೆಯ ವಿಜ್ಞಾನ ಶಿಕ್ಷಕರಾದ ಸಿ.ಜಿ.ಹಾಲೇಶ್ ಇವರು ನಿರ್ದೇಶಿಸಿದ್ದು, ಉತ್ತಮ ನಿರ್ದೇಶನ, ಉತ್ತಮ ನಟಿ ಪ್ರಶಸ್ತಿಗೂ ಗೊಲ್ಲರಹಟ್ಟಿ ಶಾಲೆಯ ಮಕ್ಕಳ ತಂಡ ಆಯ್ಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಗೆ ಮೌನೇಶ ವಿಶ್ವಕರ್ಮ ಇವರು ಐದು ನಾಟಕಗಳನ್ನು ನಿರ್ದೇಶಿಸಿದ್ದರು. ಪುತ್ತೂರಿನಲ್ಲಿ ಸುದಾನ ವಸತಿ ಶಾಲೆಯಲ್ಲಿ ‘ರೋಗಗಳ ಮಾಯದಾಟ’, ಸವಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಸಿರಿಧಾನ್ಯ ಮಹಾತ್ಮೆ’ ಹಾಗೂ ಪೆರಿಯಡ್ಕದ ಸರ್ವೋದಯ ಅನುದಾನಿತ…
ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾ ರಾಮಕೃಷ್ಣ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ಉಪಕ್ರಮ ಆರಂಭವಾಗಿದ್ದು ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ವಿದ್ಯಾ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ತಾಂತ್ರಿಕ ಪದವಿ ಪಡೆದು ಸುಮಾರು ಎರಡು ದಶಕಗಳ ಕಾಲ ಐ.ಟಿ ಕ್ಷೇತ್ರದಲ್ಲಿ ವಿವಿಧೆಡೆ ಕಾರ್ಯ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಾಹಿತ್ಯಾಸಕ್ತಿಯಿಂದ ಇದೀಗ ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿಕೊಂಡ ಇವರು, ‘ಶಿವರಾಮ ಕಾರಂತರ ಪ್ರಬಂಧಗಳು – ಒಂದು…
ಮಂಗಳೂರು : ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠ ವಠಾರದ 101ನೇ ವರ್ಷದ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಯುವ ಕಲಾವಿದ ಸತೀಶ್ ಆಚಾರ್ಯ ಸುರುಳಿ ಮತ್ತು ಬಳಗದವರಿಂದ ‘ ಸ್ಯಾಕ್ಸೋಫೋನ್ ಕಛೇರಿ’ಯು ನಡೆಯಿತು. ವಿಜಯದಶಮಿಯ ಪ್ರಯುಕ್ತ ದಿನಾಂಕ 24-10-2023 ರಂದು ವಿಶೇಷ ದೀಪಾಲಂಕಾರ ಪ್ರಯುಕ್ತ ಆಯೋಜಿಸಲಾಗಿದ್ದ ‘ ಸ್ಯಾಕ್ಸೋಫೋನ್ ಕಛೇರಿ ‘ ಯಲ್ಲಿ ಯುವ ಕಲಾವಿದ ಸತೀಶ್ ಆಚಾರ್ಯ ಸುರುಳಿ ಇವರಿಗೆ ಸ್ಯಾಕ್ಸೋಫೋನ್ ನಲ್ಲಿ ರಾಜಶೇಖರ ಮೂರ್ತಿ ಮೈಸೂರು, ತವಿಲ್ ನಲ್ಲಿ ಮಹಾದೇವ ಸ್ವಾಮಿ ಮೈಸೂರು, ತಬಲಾದಲ್ಲಿ ಯತೀಶ್ ಆಚಾರ್ಯ ಸೂರಿಕುಮೇರು, ಕೀಬೋರ್ಡ್ ನಲ್ಲಿ ವಿಜಯ ಆಚಾರ್ಯ ಕುಳಾಯಿ, ರಿದಮ್ ಪ್ಯಾಡ್ ನಲ್ಲಿ ಉದಯ ಕುಮಾರ್ ಮತ್ತು ವೇಣುಗೋಪಾಲ, ಜ್ಯೋತಿ ಗುಡ್ಡೆ ಇವರೆಲ್ಲರೂ ಸಹಕಲಾವಿದರಾಗಿ ಸಹಕರಿಸಿದರು. ಸತೀಶ್ ಆಚಾರ್ಯ ಸುರುಳಿ ಇವರನ್ನು ಉತ್ಸವ ಸಮಿತಿಯ ಪದಾಧಿಕಾರಿಗಳು ಶಾಲು , ಫಲವಸ್ತು, ಸ್ಮರಣಿಕೆಗಳನ್ನಿತ್ತು ಗೌರವಿಸಿದರು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಶ್ರೀ ಅಲ್ಲಮಪ್ರಭು ಸಿದ್ಧಸಂಸ್ಥಾನಮಠ ಇಲ್ಲಿನ ಗಡಿಕನ್ನಡಿಗರ ಬಳಗ ಆಯೋಜಿಸುವ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02-11-2023ರ ಗುರುವಾರ ಬೆಳಗ್ಗೆ ಘಂಟೆ 10.00ಕ್ಕೆ ಚಿಂಚಣಿಯ ಕನ್ನಡ ಭವನದಲ್ಲಿ ನಡೆಯಲಿದೆ. ಚಿಂಚಣಿ ಸಿದ್ಧಸಂಸ್ಥಾನಮಠದ ಪರಮ ಪೂಜ್ಯಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾಗಿರುವ ಶ್ರೀ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಚಿಕ್ಕೋಡಿಯ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ ಇವರು ಲೇಖಕ ಎಲ್. ಎಸ್. ಶಾಸ್ತ್ರಿಯವರ ಕನ್ನಡ-ಮರಾಠಿ ಸ್ನೇಹಸೇತು ‘ಕೃ. ಶಿ. ಹೆಗಡೆ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ವಿಭೂಷಿತ ಹಿರಿಯ ರಂಗಭೂಮಿ ನಟಿ ಮಾತಾಶ್ರೀ ಮಂಜಮ್ಮ ಜೋಗತಿ ಭಾಗವಹಿಸಲಿಲಿರುವರು. ಇದೇ ಸಂದರ್ಭದಲ್ಲಿ ‘ಮರುಳ ಶಂಕರದೇವರು’ ಬೃಹತ್ ಕಾದಂಬರಿಯ ಕರ್ತೃ ಚಿಕ್ಕೋಡಿಯ ಡಾ. ದಯಾನಂದ ನೂಲಿ ಇವರನ್ನು ಸನ್ಮಾನಿಸಲಾಗುವುದು. ಕೃ. ಶಿ. ಹೆಗಡೆ…
ಕಾಸರಗೋಡು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆವಳಮಠ ಬಾಯಾರು ಕಾಸರಗೋಡು ಇಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 16-10-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಾಮ್ ಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಲಕ್ಮೀಶ ಬೇಂಗ್ರೋಡಿ ಮತ್ತು ಶ್ರೀ ಶ್ರೀಕುಮಾರ್ ಪಂಬೆತಡ್ಕ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಗಣೇಶ್ (ಶಂತನು), ಶ್ರೀಮತಿ ಶುಭಾ ಅಡಿಗ (ದಾಶರಾಜ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವವ್ರತ) ಮತ್ತು ಶ್ರೀಮತಿ ಮನೋರಮಾ ಜಿ. ಭಟ್ (ಸತ್ಯವತಿ )ಸಹಕರಿಸಿದರು. ನಿರ್ದೇಶಕರಾದ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಮನೋರಮಾ ಜಿ. ಭಟ್ ಹಾಗೂ ಶ್ರೀಮತಿ ನಿವೇದಿತಾ ತಿಲಕ್ ಪ್ರಾಯೋಜಿಸಿದರು. ಶ್ರೀ ದೇವಳದ ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು ಸಹಕರಿಸಿದರು.
ಬೆಂಗಳೂರು : ‘ಡಾ. ಸಿ.ಸೋಮಶೇಖರ – ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ’ ವತಿಯಿಂದ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಹೀ.ಚಿ. ಬೋರಲಿಂಗಯ್ಯ, ದಾಸ ಸಾಹಿತ್ಯಕ್ಕೆ ಪ್ರೊ. ಎ.ವಿ. ನಾವಡ ಹಾಗೂ ಸಂಗೀತ ಕ್ಷೇತ್ರದ ಸಾಧನೆಗೆ ಪಂಡಿತ್ ಡಾ. ನರಸಿಂಹಲು ವಡವಾಟಿ ಅವರಿಗೆ ‘ಸಂಸ್ಕೃತಿ ಸಂಗಮ-2023’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ದಿನಾಂಕ 21-10-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ. ಹಂಪಾ ನಾಗರಾಜಯ್ಯ ಇವರು ‘ಸಂಸ್ಕೃತಿ ಸಂಗಮ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸಿ ಆಯ್ಕೆ ಮಾಡುವ ಬದಲು, ಅರ್ಹ ಸಾಧಕರನ್ನು ತಜ್ಞರ ಸಮಿತಿಯ ಮೂಲಕ ಆಯ್ಕೆ ಮಾಡುವುದು ಸೂಕ್ತ. ‘ರಾಜ್ಯೋತ್ಸವ ಪ್ರಶಸ್ತಿ’ಗೆ ಆನ್ ಲೈನ್ ಮೂಲಕ ಅರ್ಜಿ ಕರೆದ ಕಾರಣ 2,500 ಅರ್ಜಿ ಬಂದಿವೆ. ಇದರಿಂದ ನಾನು ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದೇನೆ. ಸಾಧನೆ,…
ಕಾಸರಗೋಡು : ಶರದೃತುವಿನ ಅಶ್ವಯುಜ ಮಾಸದ ಮೊದಲ 9 ದಿನಗಳಲ್ಲಿ ನಡೆಯುವ ಶಕ್ತಿ ದೇವತೆ ದುರ್ಗಾದೇವಿಯ ಆರಾಧನೆಯ ಸಂದಭ೯ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ – 2023’ವು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ದಿನಾಂಕ 22-10-2023ರಂದು ನಡೆಯಿತು. ದ.ಕ. ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮಾತನಾಡಿ “ಮೌಲ್ಯಯುತ ಚಿಂತನೆಗಳೊಂದಿಗೆ ಬದುಕು ಸಾಕಾರಗೊಳಿಸಬೇಕು. ಸಂಸ್ಕೃತಿ ಸಂರಕ್ಷಣೆಯ ಜಾಗ್ರತಿ ನಮ್ಮ ಜವಾಬ್ದಾರಿ” ಎಂದು ನುಡಿದರು. ಅಂತರ್ ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ‘ಭರವಸೆಯ ಬೆಳಕು’ 2023 ಪ್ರಶಸ್ತಿ ಪ್ರಧಾನ ಮಾಡಿ ಯುವ ಪ್ರತಿಭೆಗಳಿಗೆ ಶುಭ ಹಾರೈಸಿದರು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶುಭಾಶೀರ್ವಚನ ನೀಡಿ ಯುವ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ…