Subscribe to Updates
Get the latest creative news from FooBar about art, design and business.
Author: roovari
ಗಾವಳಿ : ಗಾವಳಿಯ ಯಕ್ಷ ಕುಟೀರದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ಸಂಸ್ಮರಣೆ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರಿಗೆ ಅರಾಟೆ ಮಂಜುನಾಥ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಮಾತನಾಡಿ “ಕರಾವಳಿ ಮತ್ತು ಮಲೆನಾಡಿನ ಜನರ ಬೌದ್ಧಿಕ ಶ್ರೀಮಂತಿಕೆಗೆ ಕಾರಣವಾದದ್ದು ಯಕ್ಷಗಾನ ಕಲೆ. ಆನಂದದ ಅನುಭೂತಿಯೊಂದಿಗೆ ಬುದ್ಧಿಯ ವಿಕಸನಕ್ಕೆ ಯಕ್ಷಗಾನ ದಾರಿಯಾಗಿದೆ. ರಂಗಸ್ಥಳದಲ್ಲಿ ಕಲೆಯ ಸಾಕ್ಷಾತ್ಕಾರಕ್ಕೆ ಕಾರಣರಾದ ಕಲಾವಿದರನೇಕರು ಪ್ರಾತಃಸ್ಮರಣೀಯರು. ಅಂತಹ ಮೇರು ಕಲಾವಿದರ ಸಾಲಿನಲ್ಲಿ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರು ಅಭಿವಂದನೀಯರು. ಕಲಾವಿದನಾಗಿ, ಸಂಘಟಕನಾಗಿ, ಕಲಾವಿದರ ನೋವಿನ ಧ್ವನಿಯಾಗಿ, ಸಿಡಿಲಾಗಿ ಗುರುತಿಸಿಕೊಂಡವರು ಅರಾಟೆಯವರು. ಹಲವು ಕಲಾವಿದರ ಪ್ರತಿಭಾ ಅನಾವರಣಕ್ಕೆ ಕಾರಣರಾದ ಅರಾಟೆಯವರ ಹೆಸರಿನ ಪ್ರಶಸ್ತಿ ಅರ್ಹರಿಗೆ ದೊರೆತಿದೆ” ಎಂದು ಹೇಳಿದರು. ಗಣೇಶ್ ಪ್ರಸಾದ್ ಅರಾಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ…
ಉಡುಪಿ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಎರಡು ದಿನಗಳ ‘ಕಲೋತ್ಸವ -2024’ ಸಮಾರಂಭವು ದಿನಾಂಕ 11-02-2024 ಮತ್ತು 12-02-2024ರಂದು ಕೋಟ ಪಟೇಲರ ಮನೆ ಆವರಣದಲ್ಲಿ ನಡೆಯಲಿರುವುದು. ದಿನಾಂಕ 11-02-2024ರಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಂಬೈ ಒ.ಎನ್.ಜಿ.ಸಿ.ಯ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬನ್ನಾಡಿ ನಾರಾಯಣ ಆಚಾರ್ ಸಂಸ್ಮರಣ ನುಡಿಗಳನ್ನಾಡಲಿದ್ದಾರೆ. ಯಕ್ಷಗಾನ ಕಲಾವಿದ ಕೋಟ ಸುರೇಶ್ ಇವರಿಗೆ ಉಡುಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಜೆ ಗಂಟೆ 4ಕ್ಕೆ ವಿದ್ವಾನ್ ಅಶೋಕ್ ಆಚಾರ್ಯ ಮತ್ತು ಬಳಗದವರಿಂದ ‘ನಿನಾದ’ ಲಘು ಸಂಗೀತ ಮತ್ತು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಶ್ವೇತ ಅರೆಹೊಳೆ ನಿರ್ದೇಶನದಲ್ಲಿ ‘ನೃತ್ಯ ಸಂಭ್ರಮ’ ಪ್ರಸ್ತುತಗೊಳ್ಳಲಿದೆ. ದಿನಾಂಕ 12-02-2024ರಂದು ನಡೆಯಲಿರುವ ಯಕ್ಷ ಕಲಾವಿದರಿಗೆ ಗೌರವ ಪ್ರದಾನ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಇವರು ವಹಿಸಲಿದ್ದಾರೆ.…
ಪುತ್ತೂರು : ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟಿನ 30ನೇ ವಾರ್ಷಿಕೋತ್ಸವ ‘ತ್ರಿಂಶತಿ ಸಂಭ್ರಮ’ವು ಪುತ್ತೂರು ಪುರಭವನದಲ್ಲಿ ಸಭೆ, ಗಾಯನ, ನರ್ತನ, ವಾದ್ಯ ವಾದನಗಳ ಪ್ರಸ್ತುತಿಗಳೊಂದಿಗೆ ದಿನಾಂಕ 28-01-2024ರಂದು ವಿಜೃಂಭಣೆಯಿಂದ ನೆರವೇರಿತು. ಹರೀಶ್ ಕಿಣಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ಗುರುಗಳಾದ ವಿದ್ವಾನ್ ಸುದರ್ಶನ್ ಭಟ್ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ತದನಂತರ ಕೊಳಲು ವಾದನ ಗುರು ಸುರೇಂದ್ರ ಆಚಾರ್ಯ ಅವರ ಶಿಷ್ಯ ವೃಂದದಿಂದ ಕೊಳಲು ವಾದನ ನಡೆಯಿತು. ಸಂಜೆ 6 ಗಂಟೆಗೆ ವಿದುಷಿ ನಯನಾ ವಿ. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅಂತರ್ಜಲ ಸಂಶೋಧಕ ಹಾಗೂ ವಾಹಿನಿ ದರ್ಬೆ ಕಲಾಸಂಘದ ರಾಜ್ಯಾಧ್ಯಕ್ಷ ಮಧುರಕಾನನ ಗಣಪತಿ ಭಟ್ ಪಾಲ್ಗೊಂಡರು. ನಂತರ ಹಿರಿಯ ವಿದ್ಯಾರ್ಥಿಗಳು, ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಹಾಗೂ ತಾಯಿ ಮಾಲಿನಿ ಭಟ್ ಅವರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆಯ ಜೂನಿಯರ್, ಸೀನಿಯರ್, ವಿದ್ವತ್…
ಮಂಗಲ್ಪಾಡಿ : ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಕಲಾಕುಂಚ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 28-01-2024ರಂದು ‘ಮಹಾಕವಿ ನಮನ’ ಸಮಾರಂಭವು ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು. “ಕುಮಾರವ್ಯಾಸನೆಂದರೆ ಜನಸಾಮಾನ್ಯರಿಗೂ ಮಹಾಕಾವ್ಯವನ್ನು ಸುಲಭವಾಗಿ ಮನದಟ್ಟು ಮಾಡಿಕೊಟ್ಟ ಮಹಾಕವಿ” ಎಂದು ಕರ್ನಾಟಕ ಕಾಲೇಜು ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಗಿರಿಧರ ಮಾಣಿಹಿತ್ತಿಲು ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ನುಡಿದರು. ಹಿರಿಯ ಸಾಹಿತಿ ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಅವರು ಕವಿಪುಂಗವನಿಗೆ ನುಡಿಕುಸುಮಗಳನ್ನರ್ಪಿಸಿ ನಮಿಸಿ ಮಾತನಾಡುತ್ತಾ “ಜನಸಾಮಾನ್ಯರಿಗೆ ಪ್ರವೇಶಿಸಲು ಅಸಾಧ್ಯವಾದ ಸಂಸ್ಕೃತ ಭಾಷೆಯ ವ್ಯಾಸ ಮಹಾಕವಿಯ ಮಹಾಭಾರತವೆಂಬ ಗಹನ ಗಹ್ವರವಾದ ಗೊಂಡಾರಣ್ಯ ಸಮಾನವಾದ ಮಹಾಕಾವ್ಯವನ್ನು ನಗುವ ನಂದನವನವನ್ನಾಗಿಸಿ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟ ಕುಮಾರವ್ಯಾಸ ನಿಜವಾಗಿಯೂ ಮಹಾಕವಿ ರತ್ನ. ಆತ ಅಪ್ಪಟ ಭಕ್ತಕವಿ. ಕೃಷ್ಣಪರಮಾತ್ಮನ ಮೇಲಿನ ಭಕ್ತಿಯ ಪರಾಕಾಷ್ಠೆಯನ್ನು ಒಳಗೊಂಡಿರುವ ಆತನ ಮಹಾಕಾವ್ಯವೇ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗು ಭಾರತ. ಕನ್ನಡ ಸಾಹಿತ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ಬಾಲ ಪ್ರತಿಭೆ ಕುಮಾರಿ ನಿಹಾರಿಕ ಹೆಚ್.ಎನ್. ಇವರನ್ನು ‘ಕರ್ನಾಟಕ ಸುವರ್ಣ ಸಿರಿ’ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ನವೀನ್ ಹೆಚ್.ಎಂ. ಮತ್ತು ಶ್ರೀಮತಿ ದೀಪಾ ಕೆ.ಹೆಚ್. ಇವರ ಸುಪುತ್ರಿಯಾಗಿರುವ ನಿಹಾರಿಕ ಹೆಚ್.ಎನ್. ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರಕಲೆ, ಭರತನಾಟ್ಯ, ಸಂಗೀತ, ಕೀಬೋರ್ಡ್ ಮುಂತಾದ ಲಲಿತ ಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಸೇರಿದಂತೆ ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕಾಸರಗೋಡು : ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 27ನೇ ವಾರ್ಷಿಕೋತ್ಸವವು ದಿನಾಂಕ 21-01-2024ರಂದು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಲಲಿತ ಕಲಾಸದನದಲ್ಲಿ ಜರಗಿತು. ಈ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು “ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಇಲ್ಲಿನ ವಿವಿಧ ಕಲಾಪ್ರಾಕಾರಗಳು ಕಾರಣವಾಗಿವೆ. ಈ ನಿಟ್ಟಿನಲ್ಲಿ ಸಂಗೀತ ಕಲಾಸೇವೆಯ ಮೂಲಕ ದೇಶಕ್ಕೆ ಅನನ್ಯ ಕೊಡುಗೆಯನ್ನು ನೀಡಿದ ಈ ಸಂಸ್ಥೆಯು ಇನ್ನಷ್ಟು ಬೆಳಗಲಿ” ಎಂದು ನುಡಿದರು. ಹಿರಿಯ ಸಂಗೀತ ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯ ಮಾತನಾಡುತ್ತಾ “ತಾನು ಕಲಿತ ವಿದ್ಯೆಯನ್ನು ತನ್ನ ಶಿಷ್ಯರಿಗೆ ನೀಡುವ ಮೂಲಕ ಗುರು ಋಣವನ್ನು ಉಷಾ ಈಶ್ವರ ಭಟ್ ಅವರು ತೀರಿಸುತ್ತಿದ್ದಾರೆ. ಶಿಷ್ಯಂದಿರಿಗೆ ವಿದ್ಯೆಯನ್ನು ನೀಡುವಲ್ಲಿಯೂ ಆನಂದವಿದೆ. ಗುರುಗಳನ್ನು ಮೀರಿಸುವ ಶಿಷ್ಯಂದಿರು ರೂಪುಗೊಂಡಾಗ ಲಭಿಸುವ ಸಂತೋಷ ಬೇರೆಲ್ಲೂ ಸಿಗದು. ಅಂತಹ ಶಿಷ್ಯಂದಿರನ್ನು ಇವರು ಹೊಂದಿದ್ದಾರೆ” ಎಂದರು. ಹಿರಿಯ ನ್ಯಾಯವಾದಿ ಎಂ. ನಾರಾಯಣ ಭಟ್ ಮಾತನಾಡಿ “27 ವರ್ಷಗಳಿಂದ ಕಾಸರಗೋಡಿನಲ್ಲಿ ಕಲಾಸೇವೆಯನ್ನು ನೀಡುತ್ತಾ…
ಮಹಾರಾಷ್ಟ್ರ : ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ದೀರ್ಘಕಾಲದಿಂದ ಉದ್ಯಮದೊಂದಿಗೆ ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ ನೆಲೆಯಲ್ಲಿ ತುಳುನಾಡ ಸಂಘ ಸ್ಥಾಪಿಸಿ ತುಳು ಸಾಂಸ್ಕೃತಿಕ ಭವನದ ರೂವಾರಿಯಲ್ಲಿ ಒಬ್ಬರಾದ ಶ್ರೀನಿವಾಸ ಮಂಕುಡೆ ಅವರಿಗೆ ‘ಪೆರ್ಮೆದ ತುಳುವೆ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಹಾರಾಷ್ಟ್ರದ ಮೀರಜ್ನಲ್ಲಿ ದಿನಾಂಕ 22-01-2024ರಂದು ನಡೆಯಿತು. ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಈ ಸಂದರ್ಭದಲ್ಲಿ ಮಾತನಾಡಿ “ಬಹಳ ವರ್ಷಗಳಿಂದ ಹೊರರಾಜ್ಯದಲ್ಲಿ ತುಳು ಭಾಷೆಗಾಗಿ ಶ್ಲಾಘನೀಯ ಕೆಲಸ ಮಾಡಿ, ತುಳುವರ ಅಭಿಮಾನ, ಪ್ರೀತಿಗೆ ಪಾತ್ರರಾದ ಮಂಕುಡೆಯವರಿಗೆ ಈ ಗೌರವ ಸಲ್ಲಲೇಬೇಕಿತ್ತು” ಎಂದರು. ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ ಮಾತನಾಡಿ, “ಶ್ರೀನಿವಾಸ ಮಂಕುಡೆ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕನ್ನಡಿಗ, ಕರ್ನಾಟಕ ದೇವಾಡಿಗ ಸಂಘದಿಂದ ಸಂಘಟನೆಗೊಬ್ಬ ಸರದಾರ ಹಾಗೂ ಮುಂಬೈ, ಸಂಘಟನೆಯಿಂದ ವರ್ಷದ ವ್ಯಕ್ತಿ ಮತ್ತಿತರ ಗೌರವ ಪ್ರಶಸ್ತಿ ಪಡೆದಿದ್ದಾರೆ” ಎಂದರು. ಸಮ್ಮಾನ ಸ್ವೀಕರಿಸಿದ ಮಂಕುಡೆ ಅವರು “ಪ್ರಾಮಾಣಿಕ ಸೇವೆಯನ್ನು…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಬನ್ನೂರು ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ 12 ಕಾರ್ಯಕ್ರಮವು ದ.ಕ.ಜಿ.ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರಲ್ಲಿ ದಿನಾಂಕ 27-01-2024ರಂದು ನಡೆಯಿತು. ಸಭಾ ಕಾರ್ಯಕ್ರಮವನ್ನು ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸ್ಮಿತಾ ಎನ್. ಉದ್ಘಾಟಿಸಿ “ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚು ಇರುವುದರಿಂದ ಇಂದು ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿದೆ. ಅಲ್ಲದೇ ಸಾಹಿತ್ಯ ಪರಿಷತ್ತಿನ ಈ ಗ್ರಾಮ ಸಾಹಿತ್ಯ ಸಂಭ್ರಮ ಅದಕ್ಕೆ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯ ಎ. ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ನಳಿನಿ ಕೆ. ಸಂದರ್ಭೋಚಿತವಾಗಿ ಮಾತನಾಡಿದರು. ಸರ್ವಾಧ್ಯಕ್ಷತೆ ವಹಿಸಿದ ಮಾ.…
ಕಾಸರಗೋಡು : ಹಿರಿಯ ಸಾಹಿತಿ, ಸಂಘಟಕ ಪ್ರೊ. ಪಿ.ಎನ್. ಮೂಡಿತ್ತಾಯ ಮತ್ತು ಶಕುಂತಲಾ ದಂಪತಿಯನ್ನು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ವತಿಯಿಂದ ಬಾಯಿಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ದಿನಾಂಕ 26-01-2024ರಂದು ಸನ್ಮಾನಿಸಿ ಗೌರವಿಸಲಾಯಿತು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ ಕುಮಾರ್ ಪೆರ್ಲ ಅಭಿನಂದನ ಭಾಷಣವನ್ನು ಮಾಡಿದರು. ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಶುಭ ಹಾರೈಸಿದರು. ಶಂಪಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಸ್.ಎಲ್. ಮಂಜುನಾಥ್ ಪ್ರಮಾಣ ಪತ್ರವನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳ ಮಾಧವ ಸ್ವಾಗತಿಸಿ, ಡಾ. ರಾಧಾಕೃಷ್ಣ ಬೆಳ್ಳೂರು ವಂದಿಸಿದರು. ಇದೇ ಸಂದರ್ಭದಲ್ಲಿ ಗುರುಗಳಾದ ಪ್ರೊ. ಪಿ.ಎನ್. ಮೂಡಿತ್ತಾಯಾರ ಬಗ್ಗೆ ಡಾ. ಪ್ರಮೀಳ ಮಾಧವ ಬರೆದ ‘ಸದ್ದಿಲ್ಲದ ಸಾಧಕ’ ಎಂಬ ಪುಸ್ತಕವನ್ನು ನಿವೃತ್ತ…
ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಹಿರಿಯ ಮಾರ್ಗದರ್ಶಕರು, ಯುವ ಕಾರ್ಯಕರ್ತರು, ಕನ್ನಡ ಪರ ಸಂಘಟಕರು, ಪತ್ರಕರ್ತರ ಸ್ನೇಹ ಸೇತುವೆಯಾಗಿ ‘ಕನ್ನಡ ಮೈತ್ರಿ ಸಂಗಮ’ ಕಾರ್ಯಕ್ರಮವು ಕಾಸರಗೋಡಿನ ಉಡುಪಿ ಗಾರ್ಡನ್ ಸಭಾಂಗಣ ‘ಮಥುರಾ’ದಲ್ಲಿ ದಿನಾಂಕ 30-01-2024ರಂದು ನಡೆಯಿತು. ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿ ಸದಸ್ಯ ಡಾ. ಮುರಲೀ ಮೋಹನ ಚೂಂತಾರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್. ಮೋಹನದಾಸ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ಗಡಿನಾಡ ಘಟಕದ ಪೂರ್ವಾಧ್ಯಕ್ಷ ನ್ಯಾಯವಾದಿ ಐ.ವಿ. ಭಟ್, ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಜಿ. ಕುಂದಣಗಾರ ಗಡಿನಾಡ ಪ್ರಶಸ್ತಿ ಪುರಸ್ಕೃತ ಡಾ. ರಮಾನಂದ ಬನಾರಿ ಅವರನ್ನುಅಭಿನಂದಿಸಲಾಯಿತು. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್, ಉಪನ್ಯಾಸಕ ರತ್ನಾಕರ ಮಲ್ಲಮೂಲೆ, ಅಧ್ಯಾಪಕ…