Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಯಕ್ಷಾರಾಧನಾ ಕಲಾ ಕೇಂದ್ರ (ರಿ.) ಇದರ 14ನೇ ‘ವರ್ಷಾಚರಣೆಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ : 15-07-2023ನೇ ಶನಿವಾರ ಅಪರಾಹ್ನ 3.30ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನ (ಪುರಭವನ)ದಲ್ಲಿ ನಡೆಯಲಿದೆ. ಮಧ್ಯಂತರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹಾಗೂ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಡಿ. ಶೆಟ್ಟಿ, ಮಂಗಳೂರಿನ ಸನಾತನ ಯಕ್ಷಾಲಯದ ನಿರ್ದೇಶಕರಾದ ಶ್ರೀ ರಾಕೇಶ್ ರೈ ಅಡ್ಕ, ಮಂಗಳೂರು ಮಹಾನಗರಪಾಲಿಕೆಯ ಕಾರ್ಪೋರೇಟರ್ ಗಳಾದ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಜಗದೀಶ್ ಶೆಟ್ಟಿ, ಸುರತ್ಕಲ್ ಮಹಿಳಾ ಯಕ್ಷಕಲಾ ಬಳಗದ ಮುಖ್ಯಸ್ಥೆಯಾದ ಶ್ರೀಮತಿ ಕೆ. ಕಲಾವತಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಮಂಗಳೂರಿನ ಸರಯೂ ಯಕ್ಷಕಲಾ ಕೇಂದ್ರದ ನಿರ್ದೇಶಕರಾದ ಶ್ರೀ ವರ್ಕಾಡಿ ರವಿ ಅಲೆವೂರಾಯರಿಗೆ ‘ಯಕ್ಷ…
ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ ಸುಬ್ಬಣ್ಣನವರ ನೆನಪಿನಲ್ಲಿ, ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಇದೇ ಜುಲೈ 14 ಮತ್ತು 15ರಂದು ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಕೃಷ್ಣೇಗೌಡರ ಆನೆ’ ನಾಟಕವು ಶ್ರೀ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ರಂಗರೂಪ ಶ್ರೀ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರದ್ದು. ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು ಶ್ಲಾಘನೀಯ. ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು ಹಾಗೂ ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ಇದು…
ಮಂಗಳೂರು : ಕಟೀಲು ಮೇಳಗಳ ಕಲಾವಿದರಿಂದ ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್ ಇವರಿಗೆ ‘ಮಂಡೆಚ್ಚ ಪ್ರಶಸ್ತಿ ಪ್ರದಾನ’ ಹಾಗೂ ‘ಕುಬಣೂರು ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ : 15-07-2023ರಂದು ಸಂಜೆ ಗಂಟೆ 4ಕ್ಕೆ ಕಟೀಲು ಸರಸ್ವತೀ ಸದನದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ವಾಸುದೇವ ಆಸ್ರಣ್ಣ, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀ ಸನತ್‌ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಶ್ರೀ ಐಕಳ ಗಣೇಶ ಶೆಟ್ಟಿ ಮುಂಬೈ, ಶ್ರೀ ದೊಡ್ಡಯ್ಯ ಮೂಲ್ಯ ಕಟೀಲು ಹಾಗೂ ಶ್ರೀ ಶ್ರೀಕಾಂತ ಕುಬಣೂರು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತರಾಗಿದ್ದ ದಾಮೋದರ ಮಂಡೆಚ್ಚ ಇವರ ಹೆಸರಿನಲ್ಲಿ ನೀಡಲಾಗುವ ಈ ವರುಷದ ‘ಮಂಡೆಚ್ಚ ಪ್ರಶಸ್ತಿ’ಯನ್ನು ಮಂಡೆಚ್ಚರ ಒಡನಾಡಿ ಖ್ಯಾತ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ನೀಡಿ ಗೌರವಿಸಲಾಗುವುದು. ಇವರು ಸುಂಕದಕಟ್ಟೆ, ಕರ್ನಾಟಕ, ಕದ್ರಿ, ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ…
ಮೂಡುಬಿದಿರೆ: ಯಕ್ಷದೇಗುಲ ಕಾಂತಾವರದ 21ನೇ ವಾರ್ಷಿಕ ಆಟ ಕೂಟ ಮತ್ತು ಬಯಲಾಟ ‘ಯಕ್ಷೋಲ್ಲಾಸ’ ಕಾರ್ಯಕ್ರಮವು ದಿನಾಂಕ 23-07-2023 ರಂದು ನಡೆಯಲಿದೆ. ಇದೇ ಸಂದರ್ಭದಲ್ಲಿ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣ ಪ್ರಶಸ್ತಿಯನ್ನು ಕಟೀಲು ಮೇಳದ ಕಲಾವಿದ ತಾರಾನಾಥ ವರ್ಕಾಡಿ ಅವರಿಗೆ ಹಾಗೂ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣ ಪ್ರಶಸ್ತಿಯನ್ನು ಹನುಮಗಿರಿ ಮೇಳದ ಕಲಾವಿದ ವೇಣೂರು ಸದಾಶಿವ ಕುಲಾಲ್ ಅವರಿಗೆ ನೀಡಲು ಸಂಸ್ಥೆಯ ಆಯ್ಕೆ ಸಮಿತಿ ತೀರ್ಮಾನಿಸಿದೆ. ಪ್ರಶಸ್ತಿಯು ನಗದು ಪುರಸ್ಕಾರ ಹಾಗೂ ಸಮ್ಮಾನ ಒಳಗೊಂಡಿದೆ ಎಂದು ಪ್ರಧಾನ ಸಂಚಾಲಕ ಮಹಾವೀರ ಪಾಂಡಿ ತಿಳಿಸಿದ್ದಾರೆ.
ಮೆಲ್ಬೋರ್ನ್: ಆಸ್ಟ್ರೇಲಿಯಾ ಏಶಿಯಾದ ಬಸವ ಸಮಿತಿಯ ಮೆಲ್ಬೋರ್ನ್ ಘಟಕದಲ್ಲಿ ಹಮ್ಮಿಕೊಂಡ ‘ಮಹಾನ್ ಮಾನವತಾವಾದಿ ಬಸವಣ್ಣ’ ಎಂಬ ವಿಷಯದ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮವು ದಿನಾಂಕ 10-07-2023ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಭಾಗವಹಿಸಿ ಮಾತನಾಡುತ್ತಾ “1999ರ ಏಪ್ರಿಲ್ ತಿಂಗಳಿನಲ್ಲಿ ಮೆಲ್ಬೋರ್ನ್‌ನಲ್ಲಿ ಬಸವ ಸಮಿತಿ ಸ್ಥಾಪನೆಯಾದಾಗ ಡಾ. ಮಲ್ಲಿಕಾರ್ಜುನ ಮಾಲಿ ಪಾಟೀಲ್ ಅವರು ಸಂಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಗಂಗಾಧರ ಬೇವಿನಕೊಪ್ಪ ಅವರು ಉಪಾಧ್ಯಕ್ಷರಾಗಿ ಘಟಕವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಹಾನ್ ಮಾನವತಾವಾದಿ ಬಸವಣ್ಣನವರು ಕಾಯಕ ಧರ್ಮದ ತಿರುಳನ್ನು ಮನುಜಕುಲಕ್ಕೆ ತಿಳಿಸಿದ ವಿಶ್ವಮಾನವರು. ಅವರ ತತ್ವಗಳನ್ನು ಕಾಂಗರೂ ನಾಡಿನಲ್ಲಿ ಪಾಲಿಸುತ್ತಿರುವ ಆಸ್ಟ್ರೇಲಿಯನ್ ಏಷಿಯಾ ಬಸವ ಸಮಿತಿಯ ಮೆಲ್ಬೋರ್ನ್ ಘಟಕವು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ. ಮೆಲ್ಬೋರ್ನ್‌ನಲ್ಲಿರುವ ಬಸವ ಸಮಿತಿಯ ‘ಮಾಹಾಮನೆ’ಯಲ್ಲಿ ನಡೆಯುವ ಚಟುಟಿಕೆಗಳ ಬಗ್ಗೆ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವವನ್ನು ಒಪ್ಪಿಕೊಂಡು ಅದನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಈ ʻಮಹಾಮನೆʼ ಸಾರ್ಥಕತೆ ಮೆರೆಯುತ್ತಿದೆ. ಬಸವಣ್ಣನವರು ಕನ್ನಡದಲ್ಲಿ ವಚನಗಳನ್ನು…
ಬೈಲಹೊಂಗಲ: ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಅಕ್ಕಮಹಾದೇವಿ ವಿಮೆನ್ಸ್ ಆಂಡ್ ಕಾಮರ್ಸ್ ಪದವಿ ಕಾಲೇಜು ಸಹಕಾರದೊಂದಿಗೆ ಬೈಲಹೊಂಗಲದಲ್ಲಿ ಏರ್ಪಡಿಸಿದ ‘ರಂಗ ರಸಗ್ರಾಹಿ’ ಶಿಬಿರವು ದಿನಾಂಕ 08-07-2023 ಹಾಗೂ 09-07-2023 ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬೇವಿನಕೊಪ್ಪದ ಆನಂದಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಒರೆಗೆ ಹಚ್ಚಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾಡಿದ್ದಾರೆ. ಗಡಿನಾಡು ಕಾಸರಗೋಡಿನಿಂದ ‘ರಂಗ ಚಿನ್ನಾರಿ’ ತಂಡದ ನೇತೃತ್ವದಲ್ಲಿ ಬೆಳಗಾಂನ ಗಡಿಯಲ್ಲಿರುವ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ‘ರಂಗ ರಸಗ್ರಾಹಿ’ ಶಿಬಿರವನ್ನು ಮಾಡುವ ಮೂಲಕ ಹೊಸ ಸಾಹಸದೊಂದಿಗೆ ರಂಗಭಾಷೆಯನ್ನು ಬರೆದಿದ್ದಾರೆ. ರಂಗಭೂಮಿ ಅನ್ನುವುದು ಜಾತಿ, ಮತ ಮತ್ತು ಧರ್ಮವನ್ನು ಮೀರಿದ ವೇದಿಕೆ. ಅಲ್ಲಿ ಸಿಗುವ ಅನುಭವ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಪೂರ್ವಾಶ್ರಮದಲ್ಲಿ ದೇಶಪ್ರೇಮಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ ಮೂಲತಃ ಗಡಿಪ್ರದೇಶವಾದ ಮಂಜೇಶ್ವರದ ನಿವಾಸಿಯಾಗಿದ್ದ ನಾನು ಕಾಸರಗೋಡು ಚಿನ್ನಾ…
ಮಂಗಳೂರು: ಕೋಡಿಕಲ್‌ನ ವಿಪ್ರ ವೇದಿಕೆಯು ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ದಿನಾಂಕ 09-07-2023ರಂದು ವಿಶು ಕುಮಾರ್ ಜೋಯಿಸರ ಸಭಾಗೃಹದಲ್ಲಿ ನಡೆಯಿತು. “ಸಂಸ್ಕಾರ, ಸಂಸ್ಕೃತಿ ಮತ್ತು ಸಂಸ್ಕೃತ” ಎಂಬ ವಿಷಯದ ಅತಿಥಿಯಾಗಿ ಆಗಮಿಸಿದ ಶಕ್ತಿ ರೆಸಿಡೆನ್ಸಿಯಲ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ಮಾತನಾಡುತ್ತಾ ಈ ಮೂರು ಶಬ್ದಗಳೊಂದಿಗೆ ನಮ್ಮ ಸನಾತನ ಸಂಸ್ಕೃತಿ ಇನ್ನೂ ನಮ್ಮೆಲ್ಲರ ರಕ್ತದಲ್ಲಿ ಇದೆ. ಆದರೆ ಇಂದು ನಾವುಗಳು ಅದನ್ನು ಗುರುತಿಸಲು ಮರೆತಿದ್ದೇವೆ. ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ ಸಂಸ್ಕಾರದಿಂದ ಒಳಗೊಂಡ ಜ್ಞಾನವಿದ್ದಾಗ ಆತ ದೇಶಕ್ಕೆ ಒಂದು ಆಸ್ತಿಯಾಗಲು ಸಾಧ್ಯ. ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪರಂಪರೆಯ ಸಂಕೇತ. ಇದು ನಮ್ಮ ಪುರಾತನ ಗ್ರಂಥಗಳನ್ನು ರಕ್ಷಿಸುವ ಮತ್ತು ಪೋಷಿಸುವ ಮಾರ್ಗವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ವಿಪ್ರ ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು. ಕೋಶಾಧಿಕಾರಿ ಕಿಶೋರ್ ಕೃಷ್ಣ, ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್ ಪದಕಣ್ಣಾಯ, ನಿಕಟಪೂರ್ವ…
ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರ ‘ಅಪ್ಪಯ್ಯನ ಆಸ್ತಿಕತೆ’ ಎನ್ನುವ 680 ಪುಟಗಳ ಅಪ್ಪಟ ಕುಂದ ಕನ್ನಡದ ಅದ್ಭುತ ಪುಸ್ತಕವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಸುಮಾರು 70 ವರ್ಷಗಳ ಹಿಂದಿನ ಅಮೋಘ ಚಿತ್ರಣಗಳನ್ನು ಈ ಪುಸ್ತಕದಲ್ಲಿ ಉಪಾಧ್ಯಾಯರು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ಶ್ರೀ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀಮತಿ ಕಲ್ಯಾಣಿ ಇವರ ಸುಪುತ್ರ. ಸ್ವಂತ ಊರು ಕಟೀಲು ಆದರೂ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಸ್ವಯಂ ನಿವೃತ್ತಿ ಹೊಂದಿದ ಬಿ.ಎಸ್.ಎನ್.ಎಲ್. ಉದ್ಯೋಗಿ. ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯ ಇವುಗಳಲ್ಲಿ ಆಸಕ್ತಿ ಇರುವ ಇವರು ಪಿಟೀಲು ವಾದನವನ್ನು ಹವ್ಯಾಸವಾಗಿರಿಸಿಕೊಂಡಿದ್ದಾರೆ. ಡಾ. ಎಸ್.ಎಲ್. ಭೈರಪ್ಪ ಅವರ ಸರಸ್ವತೀ ಸಮ್ಮಾನ್ ಪ್ರಶಸ್ತಿ ಕೃತಿಯಾದ ‘ಮಂದ್ರ’ದ ರಂಗ ರೂಪಾಂತರ, ಭಾಸಕವಿಯ ‘ಮಧ್ಯಮವ್ಯಾಯೋಗ’ದ ಕನ್ನಡ ರೂಪ, ವಿಶಾಖದತ್ತನ ‘ಮುದ್ರಾರಾಕ್ಷಸ’ದ ಕನ್ನಡ ರೂಪ, ಕೆ.ಎಂ. ಮುನ್ಶಿ ಅವರ ‘ಸ್ವಾರ್ಥಸಿದ್ಧಿ’ಯ ಕನ್ನಡ ರೂಪ, ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತಿ’ ನಾಟಕ ರೂಪ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ಗೌರಮ್ಮ ದತ್ತಿ ಕಾರ್ಯಕ್ರಮವಾಗಿ ಈ ಸ್ಪರ್ಧೆ ನಡೆಯಲಿದೆ. ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಬೆಳವಣಿಗೆ ಉಂಟಾಗಲು ಮತ್ತು ಆಸಕ್ತಿ ಮೂಡಲು ಇದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. • ಕೊಡಗು ಜಿಲ್ಲೆಯ ಪ್ರೌಡಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. • ಸ್ಥಳದಲ್ಲೇ ಕತೆ ರಚಿಸತಕ್ಕದ್ದು. • ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ಕತೆ ರಚಿಸತಕ್ಕದ್ದು. • ಕತೆ ಬರೆಯಲು ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು. • ಕತೆಯ ವಿಷಯದ ಆಯ್ಕೆಗೆ ನಾಲ್ಕು ವಿಷಯ ನೀಡಲಾಗುವುದು. • ಒಂದು ಶಾಲೆಯಿಂದ…
ಕಟೀಲು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು, ಲಲಿತಕಲಾ ಸಂಘದ ಸಹಯೋಗದಲ್ಲಿ ಕನಕದಾಸರ ರಾಮಧಾನ್ಯ ಚರಿತೆ ಅರ್ಥಾನುಸಂಧಾನ – ಗಾಯನ ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ :04-07-2023ರಂದು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿ ಮಾತನಾಡುತ್ತಾ “ವರ್ಣಾಶ್ರಮದ ಹೆಸರಿನಲ್ಲಿ ನಾರಾಯಣಗುರು, ನಿತ್ಯಾನಂದರು. ದಾಸಶ್ರೇಷ್ಟರಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಮಾಜವನ್ನು ಒಂದಾಗಿಸುವ ಕನಕದಾಸರ ಕೀರ್ತನೆಗಳನ್ನು ಕೇಳುವ ಅರ್ಥೈಸುವ ಮೂಲಕ ಬದುಕನ್ನು ಅರಿಯುವ ಚಿಂತನೆಗಳಿಂದ ಬೆಳೆಯುವ ಅಗತ್ಯವಿದೆ” ಎಂದು ಹೇಳಿದರು. ಆಶಯ ಭಾಷಣ ಮಾಡಿದ ವಿವಿಯ ಕನಕದಾಸ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಕನಕದಾಸರ ಕೀರ್ತನೆಗಳು ಕಾವ್ಯಮೌಲ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದವು. ಅವರ ಕಾವ್ಯಗಳಿಗೆ ಭಕ್ತಿ ಮತ್ತು ಸಾಮಾಜಿಕ ಕಾಳಜಿಗಳೆಂಬ ಎರಡು ಧಾರೆಗಳಿವೆ. ಧಾನ್ಯಗಳ ಮೂಲಕ ಸಾಮಾಜಿಕ ಧ್ಯಾನವನ್ನು ಮಾಡಿದ…