Subscribe to Updates
Get the latest creative news from FooBar about art, design and business.
Author: roovari
ಪೆರ್ಡೂರು: ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 16-07-2023ರ ರವಿವಾರ ಬೆಳಗ್ಗೆ ಅವಿಭಜಿತ ಉಡುಪಿ ಹಾಗೂ ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಜನಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯರಾದ ಬಾಲು ಕೋಟ್ಯಾನ್ ಬೆಳ್ಳಂಪಳ್ಳಿ, ರಾಘವೇಂದ್ರ ನಾಯಕ್ ದೊಂಡೇರಂಗಡಿ ಹಾಗೂ ವಿಶ್ವ ದಾಖಲೆಯ ಈಜುಪಟು ಗಂಗಾಧರ ಜಿ. ಕಡೆಕಾರು ಹಾಗೂ ಪ್ರಸಿದ್ಧ ರಂಗ ಮತ್ತು ಚಲನಚಿತ್ರ ಕಲಾವಿದ ಸತೀಶ್ ಆಚಾರ್ಯ ಪೆರ್ಡೂರು ಅವರನ್ನು ಗೌರವಿಸಲಾಗುವುದು. ಸ್ಪರ್ಧೆಯ ವಿಜೇತ ತಂಡಗಳಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ 13,000, ದ್ವಿತೀಯ ರೂ.11,000 ಹಾಗೂ ತೃತೀಯ ರೂ.9,000 ಇದರೊಂದಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ವೈಯಕ್ತಿಕ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಈ ಭಜನಾ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ,…
ಮಡಿಕೇರಿ : ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ವೆಂಕಟರಾಜು ಇವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದಿನಾಂಕ : 07-07-2023ರಂದು ಭೇಟಿಯಾಗಿ ಜಿಲ್ಲೆಗೆ ಸ್ವಾಗತ ಕೋರಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ಶಲ್ಯವನ್ನು ಮತ್ತು ಕನ್ನಡದ ಪುಸ್ತಕವನ್ನು ಜಿಲ್ಲಾಧಿಕಾರಿಯವರಿಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡರು ಹಾಗೂ ಕನ್ನಡದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ. ಮುನಿರ್ ಅಹ್ಮದ್ ಮತ್ತು ಶ್ರೀಮತಿ ರೇವತಿ ರಮೇಶ್ ಉಪಸ್ಥಿತರಿದ್ದರು.
ಹೊಸಕೋಟೆ: ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ‘ಜನಮನದಾಟ- ಹೆಗ್ಗೋಡು’ ವಿಶೇಷ ತಿರುಗಾಟ ಪ್ರಯುಕ್ತ ಏರ್ಪಡಿಸಿದ್ದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲಾ…’ ನಾಟಕದ ಪ್ರದರ್ಶನವು ದಿನಾಂಕ 09-07-2023 ರಂದು ನಡೆಯಿತು. ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಧ್ಯಕ್ಷರಾದ ಕೆ.ವಿ.ವೆಂಕಟರಮಣಪ್ಪ ಪಾಪಣ್ಣ ಕಾಟಂನಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಮೌಢ್ಯತೆ, ಅನಕ್ಷರತೆಯಂತಹ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರಂಗಕಲೆಯು ಪರಿಣಾಮಕಾರಿಯಾದ ಸಾಧನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಡಾ.ಎಂ.ಗಣೇಶ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ನವ್ಯ, ಪ್ರಗತಿಶೀಲ ಹಾಗೂ ಬಂಡಾಯದ ಮಹತ್ವದ ಲೇಖಕರಾದ ಪಿ.ಲಂಕೇಶರ ಕಥೆಗಳ ಸಂಕಲನದಲ್ಲಿನ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿವೆ” ಎಂದರು. ನಾಟಕವು ಸಮಾಜದಲ್ಲಿರುವ ಹಸಿವು ಹಾಗೂ ಭ್ರಷ್ಟಾಚಾರದಿಂದ ನಲುಗಿ, ಅಧಿಕಾರ ಶಾಹಿಯ ಬುದ್ಧಿಗೇಡಿತನವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಪ್ರಶಂಸೆ ಗಳಿಸಿತು. ಇದೇ ಸಂದರ್ಭದಲ್ಲಿ ನಿನಾಸಂ ಹೆಗ್ಗೋಡು ಇದರ ಪ್ರಾಂಶುಪಾಲರಾದ ಡಾ.ಎಂ.ಗಣೇಶ್ರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಓ ಸುರೇಶ್, ಸಿದ್ದೇಶ್ವರ…
ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಚೂಡಾಮಣಿ’ ಎಂಬ ತಾಳಮದ್ದಳೆ, ದಿನಾಂಕ : 10-07-2023ರಂದು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಎಲ್.ಎನ್. ಭಟ್ ಬಟ್ಯಮೂಲೆ, ಶ್ರೀ ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ದಂಬೆ ಈಶ್ವರ ಶಾಸ್ತ್ರಿ, ಶ್ರೀ ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರೀ ಅಮೋಘ ಶಂಕರ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ ಮತ್ತು ಶ್ರೀಮತಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಶ್ರೀ ಕುಂಬಳೆ ಶ್ರೀಧರ ರಾವ್ (ಸೀತೆ), ಶ್ರೀ ದುಗ್ಗಪ್ಪ ಎನ್. (ಶೃಂಗಾರ ರಾವಣ) ಸಹಕರಿಸಿದರು.
ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು ವತಿಯಿಂದ ‘ಸಂತ ಜ್ಞಾನೇಶ್ವರ -2 ಸಂಜೀವನ ಸಮಾಧಿ’ ಎಂಬ ಕೊಂಕಣಿ ಐತಿಹಾಸಿಕ ನಾಟಕ ದಿನಾಂಕ : 17-06-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಂಡಿತು. ಸಂತ ಜ್ಞಾನೇಶ್ವರರ ಜೀವನದ ಬಗ್ಗೆ ಸರಣಿ ನಾಟಕ ಪ್ರದರ್ಶನ ಮಾಡುವ ಉದ್ದೇಶವಿಟ್ಟುಕೊಂಡಿರುವ ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿ ಇವರ ‘ಜ್ಞಾತಿ ಜನಾಂಗೆಲೊ ರಾಯೋ ಜ್ಞಾನೇಶ್ವರು’ ಎಂಬ ನಾಟಕ 2018ರಲ್ಲಿ ಪುರಭವನದಲ್ಲಿ ಪ್ರದರ್ಶನಗೊಂಡಿತು. ಇದು ಸರಣಿ ಕಾರ್ಯಕ್ರಮದ ಪ್ರಥಮ ಕುಸುಮ. ಸಂತ ಜ್ಞಾನೇಶ್ವರರ 16ನೆಯ ಮಯಸ್ಸಿನವರೆಗಿನ ಜೀವನದ ಸಾರ ಇದರಲ್ಲಿದೆ. ಅವರು ಮಾಡಿದ ಸಮಾಜ ಸುಧಾರಣೆ ಮತ್ತು ಬದುಕಿನ ಬವಣೆಯೊಂದಿಗೆ 4 ವರ್ಷಗಳ ಅವಧಿಯಲ್ಲಿ ‘ಜ್ಞಾನೇಶ್ವರಿ’ ಕೃತಿ ರಚನೆ ಮಾಡಿ ತಮ್ಮ 16ನೆಯ ಮಯಸ್ಸಿನಲ್ಲಿ ಮುಗಿಸಿದ ವಿಚಾರವೂ ಈ ನಾಟಕದಲ್ಲಿದೆ. ಈಗ ಮತ್ತೆ ಪುರಭವನದಲ್ಲಿ ಪ್ರದರ್ಶನಗೊಂಡದ್ದು ಸಂತ ಜ್ಞಾನೇಶ್ವರ ಸರಣಿ ನಾಟಕ ಪ್ರದರ್ಶನ ಕುಸುಮ -2. ಇದರಲ್ಲಿ ಜ್ಞಾನೇಶ್ವರರು ಸಮಾಧಿಯಾಗುವವರೆಗಿನ ಕತೆ ಇದೆ. ಸಮಾಧಿಯಾಗುವಾಗ ಜ್ಞಾನೇಶ್ವರರು ತಾವು ರಚಿಸಿದ ಕೃತಿ…
ಮಂಗಳೂರು: ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ 2022ರ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ಗೆ ಯುವ ಲೇಖಕಿ ಗಡಿ ನಾಡು ಕಾಸರಗೋಡಿನ ಕಾಟುಕುಕ್ಕೆ ಪೆರ್ಲದ ರಾಜಶ್ರೀ ಟಿ. ರೈ ಪೆರ್ಲ ಆಯ್ಕೆಯಾಗಿದ್ದಾರೆ. ಸಂಶೋಧನಾ ಪ್ರಶಸ್ತಿಯು ರೂ.10 ಸಾವಿರ ನಗದು ಒಳಗೊಂಡಿದೆ. ಪುರಸ್ಕೃತ ಕೃತಿಯು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರದಾನ ಸಮಾರಂಭದಂದು ಬಿಡುಗಡೆಯಾಗಲಿದೆ. ವಿಜ್ಞಾನ ಪದವೀಧರೆಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಸಂಶೋಧನೆ, ಅಂಕಣ ಬರಹ, ಕಥೆ, ನಾಟಕ, ಕವಿತೆ ಸೇರಿದಂತೆ ಸಾಹಿತ್ಯಕ್ಕೆ ನಾನಾ ಪ್ರಕಾರಗಳ ಕೊಡುಗೆ ನೀಡಿದ್ದಾರೆ. ತುಳುವಿನಲ್ಲಿ ಪನಿಯಾರ, ಬಜಿಲಜ್ಜೆ, ಕೊಂಬು, ಚೌಕಿ ಎಂಬ ನಾಲ್ಕು ಕಾದಂಬರಿಗಳು, ಚವಲೊ ಎನ್ನುವ ಕಥಾ ಸಂಕಲನ, ‘ರಡ್ಡ್ ಕವುಲೆ’ ತುಳು ಅಂಕಣ ಬರಹ ಸಂಕಲನ ಮತ್ತು ಮಮಿನದೊ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ನಾಟಿ ಔಷಧಿಯ ಪರಂಪರೆಯ ಬಗ್ಗೆ ‘ಕಲ್ಪತರು’ ಎನ್ನುವ ಕೃತಿ, ತುಳು ನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ರಚಿಸಿದ್ದಾರೆ. ಒಟ್ಟು 11 ಕೃತಿಗಳನ್ನು…
ಚೆನ್ನೈ : ಶ್ರೀ ಶಂಕರ ಭಟ್ ಮತ್ತು ಶ್ರೀಮತಿ ಸುನೀತಾ ಭಟ್ ಇವರ ಸುಪುತ್ರಿ ಕುಮಾರಿ ಭವ್ಯ ಭಟ್. ಪ್ರಸ್ತುತ ಮಡಿಕೇರಿಯಲ್ಲಿ ವಾಸವಾಗಿರುವ ಇವರು ಮೈಸೂರು ವಿಶ್ವ ವಿದ್ಯಾನಿಲಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕರ್ನಾಟಕ ಸಂಗೀತದ ಕುರಿತು ‘ಚೆನ್ನೈ ಕಲಾನಿಧಿ ಫೌಂಡೇಶನ್’ ಆಯೋಜಿಸಿದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಬಹುಮಾನ ‘Carnatic Music – In Popular Culture’ ಎಂಬ ಪ್ರಬಂಧಕ್ಕೆ ಲಭಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನಿಂದ ಭಾಗವಹಿಸಿದ 150ಕ್ಕೂ ಮಿಕ್ಕ ಸ್ಪರ್ಧಿಗಳ ಲೇಖನಗಳ ಪೈಕಿ ಭವ್ಯ ಭಟ್ ಅವರ ಪ್ರಬಂಧವು ವಿದ್ವತ್ ಪೂರ್ಣವಾಗಿದ್ದು, ಕರ್ನಾಟಕ ಸಂಗೀತದ ಕುರಿತು ವಿಶೇಷ ಒಳನೋಟಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದಿರುವ ಲೇಖಕಿಗೆ ಉತ್ತಮ ಭವಿಷ್ಯವಿದೆ ಎಂದು ತೀರ್ಪುಗಾರರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಹುಮಾನವು 5000 ರೂಪಾಯಿಗಳ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಜುಲೈ ಕೊನೆಯ ವಾರದಲ್ಲಿ ಚೆನ್ನೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು…
ಡಾ. ಅಕ್ಷತಾ ರಾವ್ ಹುಟ್ಟಿ ಬೆಳೆದದ್ದು ಮಂಗಳೂರು. ಎಳವೆಯಲ್ಲಿಯೇ ಎಲ್ಲಾ ರಂಗದಲ್ಲೂ ಆಸಕ್ತಿ ಬೆಳೆಸಿಕೊಂಡು ಬಂದಿರುವ ಅಕ್ಷತಾ ಹುಟ್ಟು ಕಲಾವಿದೆ ಎಂದರೂ ತಪ್ಪಾಗಲಾರದು. ಇವರು ಕಾವಿನಕಲ್ಲು ಹೊಸಬೆಟ್ಟು ಶ್ರೀನಿವಾಸ್ ಪ್ರಸಾದ್ ಹಾಗೂ ಶ್ರೀಮತಿ ವೀಣಾ ದಂಪತಿಯ ಸುಪುತ್ರಿ. ಕುಟುಂಬದ ಏಕೈಕ ಕಣ್ಮಣಿಯಾದ ಅಕ್ಷತಾರ ಕಲಾಸಕ್ತಿಗೆ ಎಲ್ಲಾ ರೀತಿಯಿಂದ ನೀರೆರೆದು ಪೋಷಿಸಿದವರು ಹೆತ್ತವರು. ತನ್ನ ಬಾಲ್ಯದ ಶಿಕ್ಷಣವನ್ನು ತಿಪಟೂರು ಜಿಲ್ಲೆ ತುರುವೆಕೆರೆ ತಾಲೂಕಿನಲ್ಲಿ ಮತ್ತು ಬಾಗಲಕೋಟೆಯ ಇಲೆಕಲ್ ಗ್ರಾಮದಲ್ಲಿ ಮುಗಿಸಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮಂಗಳೂರಿನ ಕೆನರಾ ಉರ್ವ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದ ಅಕ್ಷತಾಳ ಪ್ರತಿಭೆಗೆ ಕೆನರಾ ಶಾಲೆ ಉತ್ತಮ ವೇದಿಕೆ ಆಗಿತ್ತು. ನಂತರ ಪದವಿ ಪೂರ್ವ ಅಧ್ಯಯನವನ್ನು ಕೆನರಾ ಕಾಲೇಜಿನಲ್ಲಿ ಮುಗಿಸಿ ತನ್ನ ಎಂ.ಬಿ.ಬಿ.ಎಸ್. ಪದವಿಯನ್ನು ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ (ಕಿಮ್ಸ್ ಬೆಂಗಳೂರು) 3 ಚಿನ್ನದ ಪದಕದೊಂದಿಗೆ ಮುಗಿಸಿ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರ ಬಂದವರು. ವಿದುಷಿ ಸತ್ಯವತಿ ಮೂಡಂಬಡಿತ್ತಾಯ ಹಾಗೂ ವಿದ್ವಾನ್ ಕೃಷ್ಣ ಪವನ್ ಕುಮಾರ…
ಮಂಗಳೂರು : ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಾಯೋಜಕತ್ವದಲ್ಲಿ, ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ, ದೇಶದ ಉದ್ದಗಲಕ್ಕೂ 1500ಕ್ಕೂ ಮಿಕ್ಕಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಕಾರ್ಕಳದ ಖ್ಯಾತ ಸುಮಧುರ ಕಂಠದ ಗಾಯಕಿ ಸುರಮಣಿ ಕುಮಾರಿ ಮಹಾಲಕ್ಷ್ಮೀ ಶೆಣೈರವರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ಹರಿದಾಸ ಗಾನ’ ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮವು ದಿನಾಂಕ : 15-07-2023ರಂದು ಶನಿವಾರ ಸಂಜೆ ಗಂಟೆ 5.15ರಿಂದ 7.30ರವರಿಗೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆಯಲಿದೆ. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಎಸ್. ಗುರುರಾಜ್ ತಮ್ಮೆಲ್ಲರಿಗೂ ಪ್ರೀತಿ ಪೂರ್ವಕವಾದ ಆಹ್ವಾನ ನೀಡಿದ್ದಾರೆ.
ಮಂಗಳೂರು : ಮಂಗಳೂರಿನ ಹಿಂದಿ ಪ್ರಚಾರ ಸಮಿತಿಯ ಆವರಣದಲ್ಲಿರುವ ‘ನಾದನೃತ್ಯ ಕಲಾ ಶಾಲೆ’ಯಲ್ಲಿ ದಿನಾಂಕ : 30-06-2023ರಂದು ತಿಂಗಳ ಸರಣಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಸುಲೋಚನಾ ವಿ. ಭಟ್ ಇವರು ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಅನುಭವದ ಮಾತುಗಳನ್ನು ಆಡಿದರು. ನೃತ್ಯ ಶಾಲೆಯ ಗುರುಗಳಾದ ಭ್ರಮರಿ ಶಿವಪ್ರಕಾಶರ ಶಿಷ್ಯೆಯಾದ ಸುಪುತ್ರಿ ಶುಕೀ ರಾವ್ ಇವರು ನೃತ್ಯ ಕಾರ್ಯಕ್ರಮವನ್ನು ನೀಡಿದರು. ಮೊದಲಿಗೆ ತಾಳ ಮಾಲಿಕೆಯ ಅಲರಿಪು, ಗಣಪತಿಯ ಸ್ತುತಿಯಿರುವ ಶಬ್ದಂ, ಗಂಗಾವತರಣದ ಕತೆಯಿರುವ ಮಹಾದೇವ ಶಿವ ಶಂಭೋ ಎಂಬ ಕೀರ್ತನೆ ಹಾಗೂ ಭಾವಯಾಮಿ ರಘುರಾಮಂ ಎಂಬ ಕೀರ್ತನೆಗೆ ನರ್ತಿಸಿದರು. ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ಎಂ.ಎಚ್. ಇವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾತೃಭಾಷೆಯ ಬಗ್ಗೆ ಹೊಂದಬೇಕಾದ ಪ್ರೀತಿಯ ಬಗ್ಗೆ ಅರಿವು ಮೂಡಿಸಿ, ನೃತ್ಯ ಪ್ರದರ್ಶಿಸಿದ ಶುಕೀ ರಾವ್ ಇವರನ್ನು ಅಭಿನಂದಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.…