Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಸುವರ್ಣ ಪರ್ವ -8ರ ಸರಣಿಯಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ನೆರವಿನೊಂದಿಗೆ ‘ಮಕ್ಕಳ ಯಕ್ಷಗಾನ ರಂಗಭೂಮಿ’ ಒಂದು ದಿನದ ಯಕ್ಷಗಾನ ಗೋಷ್ಠಿಯನ್ನು ದಿನಾಂಕ 16 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರಿನ ಯಕ್ಷಗಾನ ವಿದ್ವಾಂಸರು ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ ಇವರು ಪ್ರಧಾನ ದಿಕ್ಸೂಚಿ ಭಾಷಣ ಮಾಡಲಿದ್ದು, ಮಕ್ಕಳ ಯಕ್ಷಗಾನ ಕ್ಷೇತ್ರದ ಸಾಧಕರಾದ ಬಿ. ಕೇಶವ ಬಡಾನಿಡಿಯೂರು ಇವರಿಗೆ ‘ಸುವರ್ಣಪರ್ವ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. 11-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಯಕ್ಷಗಾನ ಗುರು ವಿದ್ವಾಂಸ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಇವರು ವಹಿಸಲಿದ್ದು,…
ಕಲಬುರಗಿ : ವಿಶ್ವರಂಗ (ರಿ.) ಕಲಬುರಗಿ ಇದರ ವತಿಯಿಂದ ‘ಚಿಣ್ಣರ ಮೇಳ 2025’ ಹತ್ತು ಹಲವು ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 05 ಮೇ 2025ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4-30 ಗಂಟೆಗೆ ತನಕ ಕಲಬುರಗಿಯ ಜಗತ್, ಲೇಕ್ ರೋಡ್, ಕಾರ್ಪೊರೇಷನ್ ಹತ್ತಿರ, ಎಂ.ಎಂ.ಕೆ. ಕಾಲೇಜ್ ಆಫ್ ವಿಷುವಲ್ ಆರ್ಟ್ ಇಲ್ಲಿ ಆಯೋಜಿಸಲಾಗಿದೆ. ಅನುಭವಿ ರಂಗ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ ಇವರ ಸಾರಥ್ಯದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 5 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದು. ನಾಟಕ, ಸಂಗೀತ, ನೃತ್ಯ, ಕರಕುಶಲ ಕಲೆ, ಚಿತ್ರಕಲೆ, ಅಜ್ಜಿ ಕಥೆಗಳು, ದೇಸಿ ಸಂತೆ, ವಾದ್ಯ ಮೇಳ, ಮೂಕಾಭಿನಯ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 9901495905 ಮತ್ತು 8660926667 ಮತ್ತು 7022220144 ಸಂಖ್ಯೆಗಳನ್ನು ಸಂಪರ್ಕಿಸಿರಿ.
ಚುಟುಕು ಕವಿ, ಹಾಸ್ಯ ಕವಿ, ಹನಿಗವನಗಳ ಕವಿಗಳೆಂದೇ ಜನಪ್ರಿಯರಾದ ಡುಂಡಿರಾಜ್ ಇಪ್ಪತ್ತಕ್ಕೂ ಮಿಕ್ಕಿ ಹಾಸ್ಯ ನಾಟಕಗಳನ್ನು ಬರೆದಿದ್ದಾರೆಂಬುದು ಅನೇಕರಿಗೆ ತಿಳಿದಿಲ್ಲ. ಅರ್ಧ ಅಥವಾ ಒಂದು ಗಂಟೆಯ ಅವಧಿಯಲ್ಲಿ ರಂಗದ ಮೇಲೆ ಆಡಬಹುದಾದ ಅವರ ಹಲವು ಕಿರುನಾಟಕಗಳನ್ನು ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅನೇಕ ವರ್ಷಗಳಿಂದ ರಂಗಾಸಕ್ತರು ಆಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಂಕಲನ ‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’ ಅಂಕಿತ ಪುಸ್ತಕದ ಮೂಲಕ ಹೊರ ಬಂದಿದೆ. ಅವರ ಹನಿಗವನಗಳಂತೆಯೇ ನವಿರಾದ ಹಾಸ್ಯ ಸಂಭಾಷಣೆಗಳಿಂದ ಮತ್ತು ಆಧುನಿಕ ಬದುಕಿನ ಸಂದರ್ಭ-ಸನ್ನಿವೇಶಗಳಿಗೆ ಸಂಬಂಧಿಸಿದ ವಿಚಾರಗಳಿಂದ ತುಂಬಿರುವ ನಾಟಕಗಳು ಇಲ್ಲಿವೆ. ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ದರ್ಶನವೀಯಲು ಬರುವ ಗಣಪನನ್ನು ಅಧುನಿಕ ದೃಷ್ಟಿಕೋನದಿಂದ ಮಾತನಾಡಿಸುತ್ತ ಸಾಮಾಜಿಕ ಸ್ಥಿತಿಗತಿಗಳನ್ನು, ರಾಜಕೀಯದ ಓರೆಕೋರೆಗಳನ್ನು, ಗಣಪನ ಮೂರ್ತಿಗೆ ರಾಸಾಯನಿಕ ಬಣ್ಣಗಳನ್ನು ಬಳಸಿ ಜನರು ಪರಿಸರಕ್ಕೆ ಉಂಟು ಮಾಡುವ ಹಾನಿಗಳನ್ನು ಹಾಸ್ಯ ಮಿಶ್ರಿತ ಮಾತುಗಳಿಂದ ಚಿತ್ರಿಸುವ ನಾಟಕ ‘ಅಸಲಿಯೋ ನಕಲಿಯೋ ?’. ಅನಾರೋಗ್ಯ ಸಮಸ್ಯೆಗೆ ಸರಿಯಾದ ಪರಿಹಾರವನ್ನೇ ನೀಡದ ಟಿ.ವಿ. ಕಾರ್ಯಕ್ರಮ ‘ಅನಾರೊಗ್ಯವೇ…
ಮಂಗಳೂರು : ತುಳು ಕೂಟ ಕುಡ್ಲ ಇದರ ‘ಬಂಗಾರ್ ಪರ್ಬ’ ಮಹೋತ್ಸವಾಚರಣೆ ಸಮಿತಿಯ ನೇತೃತ್ವದಲ್ಲಿ ‘ಬಂಗಾರ್ ಪರ್ಬಾಚರಣೆ’ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025 ರಂದು ಮಂಗಳೂರಿನ ಪುರಭವನದ ಕೀರ್ತಿಶೇಷ ಮರೋಳಿ ಬಿ.ದಾಮೋದರ ನಿಸರ್ಗ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಶಾಲೆಯಲ್ಲಿ ತುಳುವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಕಡ್ಡಾಯಗೊಳಿಸಬೇಕು. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು. ದಕ್ಷಿಣ, ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕೂಡ ತುಳು ಮಾತನಾಡುವವರು ಇದ್ದಾರೆ. ತುಳುವರು ಹೋರಾಟ ನಡೆಸಿದರೆ ತುಳು ರಾಜ್ಯ ರೂಪುಗೊಳ್ಳುವುದು ನಿಶ್ಚಿತ. ತುಳು ರಾಜ್ಯ ಆಗಲೇಬೇಕು. ಗೋವಾ ಪ್ರತ್ಯೇಕ ರಾಜ್ಯವಾಗಲು ಸಾಧ್ಯವಿದ್ದರೆ,ತುಳು ರಾಜ್ಯ ಯಾಕೆ ಸಾಧ್ಯವಿಲ್ಲ?. 1956ರಲ್ಲಿ ಭಾಷಾವಾರು ವಿಂಗಡಣೆ ಸಂದರ್ಭ ತುಳುವರು ಹೋರಾಟ ಮಾಡಲಿಲ್ಲ. ಪರಿಣಾಮ ತುಳುವನ್ನು ಕನ್ನಡದ ಜತೆಗೆ ಸೇರಿಸಲಾಯಿತು. ಶಿಕ್ಷಣ ಪಡೆದ ಪೋಷಕರು ಇಂದು ಮನೆಗಳಲ್ಲಿ ಕೂಡ ತಮ್ಮ ಮಕ್ಕಳ…
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಎರಡು ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಯಿ ಕಲಾವಿದೆರ್ ಕುಡ್ಲ ಇವರ ನೇತೃತ್ವದ ‘ಮೋಹಿನಿ’ ಕೌಟುಂಬಿಕ ಕುತೂಹಲಭರಿತ ತುಳು ನಾಟಕ ಇದರ ಸಂಭ್ರಮಾಚರಣೆಯು ದಿನಾಂಕ 08 ಮಾರ್ಚ್ 2025ರಂದು ಸಂಜೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಕಡಬ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರು ಇದರ ಕೇಶವ ಪಂಡಿತ್ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಇವರು ‘ಮೋಹಿನಿ’ ತುಳು ನಾಟಕದ ಸಂಭ್ರಮಾಚರಣೆಯ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಡಗನ್ನೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ, ಚಿತ್ರನಟ ಹಾಗೂ ಕಲಾವಿದ ಚೇತನ್ ಮಾಣಿ ಇವರು ‘ಮೋಹಿನಿ’ ನಾಟಕವು ತಂಡದಿಂದ ಯಶಸ್ವಿಯಾಗಿ ಪ್ರದರ್ಶನ ಮೂಡಿ ಬರಲಿ. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಯಶಸ್ವಿ ಪ್ರದರ್ಶನ…
ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ‘ವೈದ್ಯರ ಸಾಹಿತ್ಯ ಸಮ್ಮೇಳನದ -2025’ ದಿನಾಂಕ 15 ಮಾರ್ಚ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕಲಾ ಪ್ರದರ್ಶನ, ವಿಶೇಷ ಉಪನ್ಯಾಸ ಮತ್ತು ಗೌರವ ಪ್ರಶಸ್ತಿ ಪ್ರಧಾನ ಸನ್ಮಾನ ಸಮಾರಂಭ ನಡೆಯಲಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ವೈದ್ಯರು ಹಾಗೂ ಸಾಹಿತಿಗಳಾದ ಡಾ. ನೀರಜಾ ನಾಗೇಂದ್ರ ಕುಮಾರ್ ಇವರು ಆಯ್ಕೆಯಾಗಿದ್ದು, ಇವರ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ.
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಯುವಕವಿ ನಾರಾಯಣ ಕುಂಬ್ರ ಇವರ ‘ಹನಿದನಿ’ : ಇದು ಬರಹಗಳ ಮಣಿ ಎಂಬ ಕೃತಿ ದಿನಾಂಕ 08 ಮಾರ್ಚ್ 2025ರಂದು ಪುತ್ತೂರು ಅನುರಾಗ ವಠಾರದ ಅಟ್ಟದಲ್ಲಿ ಲೋಕಾರ್ಪಣೆಗೊಂಡಿತು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರು ಹಿರಿಯರಾದ ಬಿ. ಪುರಂದರ ಭಟ್ ಇವರ ಆಶೀರ್ವಾದದೊಂದಿಗೆ ಪುತ್ತೂರು ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದಾನ ಶಿಕ್ಷಣ ಸಂಸ್ಥೆಗಳು ನೆಹರು ನಗರ ಇಲ್ಲಿನ ಸಂಚಾಲಕರು ರೆ. ವಿಜಯ ಹಾರ್ವಿನ್ ಇವರ ಅಮೃತ ಹಸ್ತದಿಂದ ಬಿಡುಗಡೆಗೊಂಡಿತು. ಮಂಗಳೂರು ಕೆನರಾ ಕಾಲೇಜಿನ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಗೌರವಾಭಿನಂದನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಇದರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ವಿಂಧ್ಯಾ…
ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಲಯಾಳಂ – ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025ರಂದು ಕಾಸರಗೋಡಿನ ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಿತು. ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ .ಎಲ್. ಭೈರಪ್ಪ ಅವರ ‘ಯಾನ’ ಕಾದಂಬರಿಯನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಅನುವಾದ ಮಾಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕೆ. ವಿ. ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನದ ವತಿಯಿಂದ ಗೌರವ ಅಭಿನಂದನೆ ನೀಡಿ ಗೌರವಿಸಲಾಯಿತು. ಗೌರವ ಅಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷ ಸಾಹಿತಿ ರಾಧಾಕೃಷ್ಣ ಕೆ.…
ಬೆಂಗಳೂರು : ಅಂತರಂಗ ಇದರ 45ನೇ ವರ್ಷದ ರಂಗ ಯುಗಾದಿ ಪ್ರಯುಕ್ತ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 13 ಮಾರ್ಚ್ 2025ರಂದು ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ವಾಡಿಯಾ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ಸೂರ್ಯ ಸಾಥಿ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ…
ಉಪ್ಪಿನಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಹುಣ್ಣಿಮೆಯ 3ನೇ ಮಖೆ ಜಾತ್ರೆ ಪ್ರಯುಕ್ತ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪವಾಂಜೆ ಇವರಿಂದ ‘ಶ್ರೀದೇವಿ ಲಲಿತೋಪ ಖ್ಯಾನ’ ಯಕ್ಷಗಾನ ಬಯಲಾಟವು ದಿನಾಂಕ 13 ಮಾರ್ಚ್ 2025ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಕೆ. ಜಗದೀಶ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಯ ಹೊಳ್ಳ ಕಾಸರಗೋಡು ಮತ್ತು ಉಪ್ಪಿನಂಗಡಿಯ ಯಕ್ಷ ಸಂಗಮದ ಸಂಸ್ಥಾಪಕರಾದ ಯು. ಕೃಷ್ಣ ಕೋಟಿ ಇವರನ್ನು ಸನ್ಮಾನಿಸಲಾಗುವುದು.