Author: roovari

ಮಂಗಳೂರು : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಗಳೂರು ಕೆನರಾ ಪ್ರೌಢ ಶಾಲೆಯ ಶಿಕ್ಷಕಿ ರಾಜೇಶ್ವರಿ ಕುಡುಪು ಇವರು ರಚಿಸಿರುವ ‘ಕಲಾ ಸಂಪದ’ ಕೃತಿ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 18-10-2023ರಂದು ಬುಧವಾರ ನಡೆಯಿತು. ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಅರುಣಾ ಕುಮಾರಿ ಸಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಕಲಾ ಸಂಪದ ಲೇಖಕಿಯಾದ ಶ್ರೀಮತಿ ರಾಜೇಶ್ವರಿ ಕುಡುಪು ಇವರ ಪರಿಚಯ ಮತ್ತು ಸಾಧನೆಯ ಬಗ್ಗೆ ಹೇಳಿದರು. ಕೆನರಾ ಹೈಸ್ಕೂಲಿನ ಸಂಚಾಲಕರಾದ ಶ್ರೀ ಕೆ. ಸುರೇಶ್ ಕಾಮತ್ ಇವರು ಕಲಾ ಸಂಪದ ಕೃತಿಯನ್ನು ಬಿಡುಗಡೆ ಮಾಡಿ ತಮ್ಮ ಮೆಚ್ಚುಗೆ ವ್ಯಕಪಡಿಸಿದರು. ಆ ನಂತರ ಶ್ರೀಮತಿ ರಾಜೇಶ್ವರಿ ಕುಡುಪು ಇವರು ಒಂಬತ್ತನೇ ತರಗತಿಯ ಕಲಾ ಸಂಪದ ಪುಸ್ತಕ ರಚನೆಯ ಹಿಂದೆ ಪ್ರೋತ್ಸಾಹ ನೀಡಿದ ಅವರ ಪತಿ ಶ್ರೀ ಕೆ. ರಮಾನಂದ ರಾವ್ ಮತ್ತು ಕೆನರಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅರುಣ ಕುಮಾರಿ ಹಾಗೂ ಕೆನರಾ ಪ್ರೌಢ ಶಾಲೆಯ…

Read More

ಉಡುಪಿ : ನವರಾತ್ರಿಯ ಸಂದರ್ಭದಲ್ಲಿ “ಸಿಂಧೂರ” ಎನ್ನುವ ಶೀರ್ಷಿಕೆಯಡಿಯಲ್ಲಿ ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ (ರಿ.) ಉಡುಪಿಯ ಸಹಯೋಗದಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನ ದಿನಾಂಕ 20-10-2023ರಂದು ಉದ್ಘಾಟಣೆಗೊಂಡಿತು. ಕುಂಜಿಬೆಟ್ಟಿನ ಶಾರದಾ ಮಂಟಪದ ಕೆ. ಆನಂದ ರಾವ್ ಸಭಾಂಗಣದ ಗ್ಯಾಲರಿಯಲ್ಲಿ ಡಾ.ಜನಾರ್ದನ ಹಾವಂಜೆಯವರ ನವದುರ್ಗೆಯರ ಕಾವಿ ವರ್ಣದ ಕಲಾಕೃತಿಗಳ ಈ ಪ್ರದರ್ಶನವನ್ನು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಸಿ. ಎಸ್. ರಾವ್ ಉದ್ಘಾಟಿಸಿದರು. “ಭಾರತೀಯ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲೊಂದಾದ ಪುರಾತನವಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಾವಂಜೆಯವರ ಶ್ರಮ ನಿಜಕ್ಕೂ ಸ್ತುತ್ಯಾರ್ಹವಾದುದು. ಕೆಂಪು ಹಾಗೂ ಬಿಳಿ, ಸುಣ್ಣ ಮತ್ತು ಕೆಮ್ಮಣ್ಣು ಇವನ್ನಷ್ಟೇ ಬಳಸಿ ರಚಿಸುವ ಈ ಕಲಾಪ್ರಕಾರಕ್ಕೆ ಇನ್ನಾದರೂ ತಕ್ಕುದಾದ ಪ್ರಾಶಸ್ತ್ಯ ದೊರೆತು ಇನ್ನಷ್ಟು ಕಲಾಕಾರರು ಈ ಕೊಂಕಣ ಕರಾವಳಿಯ ಭಾಗದ ಕಲೆಯನ್ನು ಬೆಳೆಸುವಂತಾಗಲಿ” ಎಂದು ಶುಭ ಹಾರೈಸಿದರು. ಖ್ಯಾತ ಲೆಕ್ಕಪರಿಶೋಧಕರಾದ ಗಣೇಶ್ ಹೆಬ್ಬಾರ್‌ ಮಾತನಾಡಿ “ನಮ್ಮ ಸಮಾಜದ ಹಾವಂಜೆಯವರು ಕಳೆದ ಇಪ್ಪತ್ತು…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕವಿಗೋಷ್ಠಿಯು ದಿನಾಂಕ 21-10-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾಕುಮಾರಿ “ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ನಾಟಕ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ ಮೂಡುತ್ತದೆ.” ಎಂದು ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ತಾಲ್ಲೂಕಿನ ಕ.ಸಾ.ಪ ಅಧ್ಯಕ್ಷ ಹಾಗೂ ಕಾಲೇಜು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀ ರವಿರಾಜ್ ಹೆಚ್.ಪಿ ಮಾತನಾಡಿ “ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ ಎಂದರು. ಕ.ಸಾ.ಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಶ್ರೀ ಮನೋಹರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯಡ್ಕದ ಕವಯಿತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ಕವಿಗೋಷ್ಠಿಯ ಆಶಯ ಭಾಷಣದಲ್ಲಿ “ಕವಿತೆಯ ಮೂಲಕ ಭಾವನೆಗಳನ್ನು ಪ್ರಕಟ ಮಾಡುವವರು ಕವಿಗಳು, ಬಾಲ್ಯದಿಂದ…

Read More

ಜಮ್ಮು ಕಾಶ್ಮೀರ : ಶ್ರೀ ಮಾತಾ ವೈಶ್ಣೋದೇವಿ ಶ್ರೈನ್ ಬೋರ್ಡ್ ಕಟ್ರಾ, ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿಯಲ್ಲಿ ಆಯೋಜಿಸುವ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ಭಕ್ತಿ ಗೀತೆ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ದಿನಾಂಕ 15-10-2023 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಅವರ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ತಾಯಿ ವೈಶ್ಣೋದೇವಿಯ ಪದತಳ ಜಮ್ಮುವಿನ ಕಟ್ರಾದಲ್ಲಿ ಮೊದಲ ಬಾರಿಗೆ ನವರಾತ್ರಿ ಉತ್ಸವದ ಪ್ರಥಮ ದಿನ ಜಮ್ಮುವಿನ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರಿನ ವತಿಯಿಂದ ಪಾವಂಜೆ ಮೇಳದ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ 02-10-2023ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಂಡು ಪುಳಕಿತರಾದ ಮಾನ್ಯ ಗವರ್ನರ್ ಮನೋಜ್ ಸಿನ್ಹಾ ಅವರು ವೈಶ್ಣೋದೇವಿ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನ…

Read More

ಮಂಗಳೂರು : ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಪ್ರಕಟಣೆಗೊಂಡ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಚಂದ್ರಶೇಖರ ಶೆಟ್ಟಿ ಅವರು ರಚಿಸಿದ ‘ಹುಲಿವೇಷ’ ಕೃತಿಯ ಲೋಕಾರ್ಪಣೆ ಸಮಾರಂಭ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ದಿನಾಂಕ 18-10-2023ರಂದು ನಡೆಯಿತು. ಖ್ಯಾತ ರಂಗಕರ್ಮಿ, ನಾಟಕಗಾರ ಹಾಗೂ ಸಾಹಿತಿ ಡಾ. ನಾ.ದಾಮೋದರ ಶೆಟ್ಟಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ, “ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯದಲ್ಲಿ ಇಂತಹ ಪುಸ್ತಕಗಳು ಅನಿವಾರ್ಯ” ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಪುಸ್ತಕದ ಕುರಿತಾಗಿ ಮಾತನಾಡಿ, “ಈ ಕೃತಿ ಈಗಿನ ಕಾಲದ ಅನಿವಾರ್ಯತೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ವರಿಷ್ಠ ವಂ.ಫಾ. ಮೆಲ್ವಿನ್‌ ಜೋಸೆಫ್ ಪಿಂಟೋ ಅವರು ತನ್ನ ಬಾಲ್ಯ ಜೀವನವನ್ನು ನೆನಪು ಮಾಡಿಕೊಂಡು ಹುಲಿವೇಷ ಕೊಡುತ್ತಿದ್ದ ಉತ್ಸಾಹವನ್ನು ನೆನಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್‌.ಜೆ. ಅವರು ಇಂತಹ ಕೃತಿಗಳು ಇನ್ನೂ ಮೂಡಿಬರಲಿ ಎಂದು ತಿಳಿಸಿ…

Read More

ಮಂಗಳೂರು : ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನಲ್ಲಿ ದಿನಾಂಕ 19-10-2023ರಂದು ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹೊರತಂದ ಡಾ. ರೇಶ್ಮಾ ಉಳ್ಳಾಲ್ ಅವರ ‘ಬಿಂಬದೊಳಗೊಂದು ಬಿಂಬ’ ಸಂಶೋಧನಾ ಕೃತಿಯನ್ನು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿಯವರು ಬಿಡುಗಡೆಗೊಳಿಸಿ ಮಾತನಾಡುತ್ತಾ “ನನಗೆ ದೊರೆತ ಗೌರವ, ಸನ್ಮಾನ ನನ್ನ ಸಮುದಾಯಕ್ಕೆ ದೊರೆತಂತೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ, ಗ್ರಹಿಕೆ ದೂರವಾಗಬೇಕಾದರೆ ಇಂಥ ಕೃತಿ, ಸಿನಿಮಾಗಳು ಹೆಚ್ಚು ಬರಬೇಕು” ಎಂದು ಹೇಳಿದರು. ಈ ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್‌. ಲಿಂಗದೇವರು ಮಾತನಾಡಿ, “ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಂಘರ್ಷ, ಹೋರಾಟವನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಬೇಕಾದ ಅನಿವಾರ್ಯತೆ ಇದ್ದು, ರೇಶ್ಮಾ ಅವರ ಕೃತಿಯು ಅದಕ್ಕೆ ಪೂರಕ” ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, “ಮಂಜಮ್ಮ ಜೋಗತಿ ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ…

Read More

ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರದ ಯಕ್ಷಕೌಸ್ತುಭ ಯಕ್ಷಗಾನ ತರಬೇತಿ ಸಂಸ್ಥೆಯ ಚತುರ್ಥ ವರ್ಷದ ವಾರ್ಷಿಕೋತ್ಸವ ಸಂದರ್ಭ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಬಣ್ಣದ ಮನೆ ಪರಿಕಲ್ಪನೆಯೊಂದಿಗೆ ಸಂಯೋಜಿಸಿದ ಉಚಿತ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರವನ್ನು ಯುಗ ಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಇವರು ದಿನಾಂಕ 15-10-2023ರಂದು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಯಕ್ಷಗಾನದ ಮೂಲಚೌಕಟ್ಟಿಗೆ ಧಕ್ಕೆ ಬಾರದಂತೆ ಶಿಷ್ಟ ಪರಂಪರೆಯ ಕಲೆಯಾದ ಯಕ್ಷಗಾನವನ್ನು ಪೋಷಿಸುವಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಇಂತಹ ಕಮ್ಮಟಗಳು ಬಹಳ ಉಪಯುಕ್ತ” ಎಂದು ಹೇಳಿದರು. ಯಕ್ಷಗಾನ ಕಲಾವಿದರು ಹಾಗೂ ಬಣ್ಣಗಾರಿಕೆ ಶಿಬಿರದ ಪ್ರಧಾನ ಸಂಯೋಜಕರಾದ ಶರತ್ ಕೊಡೆತ್ತೂರು ಇವರು “ನಾಲ್ಕು ವರ್ಷದಿಂದ ಯಕ್ಷಕೌಸ್ತುಭ ಸಂಸ್ಥೆಯ ಆಶ್ರಯದಲ್ಲಿ ಯಕ್ಷನಾಟ್ಯ ತರಗತಿ ಯಶಸ್ವಿಯಾಗಿ ನಡೆಯುತ್ತಿದ್ದು, ಬಣ್ಣಗಾರಿಕೆ ತರಗತಿಗಳು ಪ್ರತೀ ಭಾನುವಾರ ಬೆಳಗ್ಗೆ 10ರಿಂದ ಎರಡು ಗಂಟೆಗಳ ಕಾಲ ವೃತ್ತಿಪರ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಬಣ್ಣಗಾರಿಕೆಯ ಪೂರ್ಣಪಾಠ ತರಬೇತಿಗೊಳಿಸುವ ಧ್ಯೇಯ ನಮ್ಮದು.” ಎಂದು ಹೇಳಿದರು. ಕಲಾಪೋಷಕ ಪೃಥ್ವಿರಾಜ ಆಚಾರ್ಯ, ಯಕ್ಷಗಾನ ಕಲಾವಿದ…

Read More

ವಿಶಾಖಪಟ್ಟಣ : ವಿಶಾಖಪಟ್ಟಣದ ಪ್ರತಿಮಾ ಟ್ರಸ್ಟ್ ಆಯೋಜಿಸಿದ ಶಾಸ್ತ್ರೀಯ ಸಂಗೀತವನ್ನು ಕುರಿತ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಕನ್ನಡತಿ ಕುಮಾರಿ ಭವ್ಯ ಭಟ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ‘Hindustani Music and Carnatic Music – A Comparative Study’ ಎಂಬ ದೀರ್ಘ ಪ್ರಬಂಧಕ್ಕೆ ಈ ಬಹುಮಾನವು ದೊರೆತಿದೆ. ಈ ಬಹುಮಾನವು ರೂ.25,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನ ಪಡೆದ ಕುಮಾರಿ ತ್ರಿಪುರನೇನಿ ಕೃತಿ ಶರ್ಮ ಗುಂಟೂರಿನವರು. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ ಗುಂಟೂರಿನಲ್ಲಿ ತಮ್ಮದೇ ಆದ ‘ಸಂಗೀತ ಸರಿತ’ ಎಂಬ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಈ ಬಹುಮಾನವು ರೂ.15,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ತೃತೀಯ ಬಹುಮಾನ ಗಳಿಸಿದ ಡಾ. ಅಂಜನಾ ಶ್ರೀನಿವಾಸಲು ತೆಲುಗು ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಚಿತ್ತೂರಿನ ಕಾಲೇಜೊಂದರಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.…

Read More

ಮಂಗಳೂರು : ತೆಂಕುತಿಟ್ಟು ಯಕ್ಷಗಾನದಲ್ಲಿ ಮರೆಯಾಗಿರುವ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವನ್ನು ಅಧ್ಯಯನ ಸಂಶೋಧನೆ ನಡೆಸಿ ದಾಖಲೀಕರಣ ಮಾಡುವ ಹೊಸ ಪ್ರಯತ್ನವನ್ನು ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ನಡೆಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಪಾರಂಪರಿಕ ಪ್ರದರ್ಶನದ ವೀಡಿಯೋ ಚಿತ್ರೀಕರಣ ಮೂಲಕ ದಾಖಲೀಕರಣ ನಡೆಸಲಾಗಿದೆ. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಶಿಷ್ಯವೃಂದದವರು ಭಾಗವಹಿಸಿದ್ದಾರೆ. ವಾಲಿ-ಸುಗ್ರೀವರ ಒಡ್ಡೋಲಗ ವಿಡಿಯೋ ಬಿಡುಗಡೆ ಮಂಗಳೂರಿನ ಪತ್ರಿಕಾಭವನದಲ್ಲಿ ದಿನಾಂಕ 19-10-2023ರಂದು ನಡೆಯಿತು. ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಅವರು ಮಾತನಾಡಿ, “ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲವು ಪ್ರಮುಖ ಅಂಶಗಳನ್ನು ಕಳೆದುಕೊಂಡಿದ್ದು ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದಾಗಿದೆ. ಇದನ್ನು ರಾಜಗೋಪಾಲ್ ಕನ್ಯಾನ ಅವರು ದಾಖಲಾತಿ ಮಾಡಿದ್ದಾರೆ” ಎಂದರು. ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ವೀಡಿಯೋ ದಾಖಲೀಕರಣವನ್ನು ಉದ್ಘಾಟಿಸಿ…

Read More

ಮಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ‘ಮಂಥನ 9ನೇ ಆವೃತ್ತಿ -2023’ ಭರತನಾಟ್ಯ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ದಿನಾಂಕ 03-11-2023ರಂದು ಮಂಗಳ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ. ಸಾಯಿಬೃಂದಾ ರಾಮಚಂದ್ರನ್ ಹೊಸೂರ್, ಪ್ರಿಯಾಂಜಲಿ ರಾವ್ ಮುಂಬೈ ಮತ್ತು ಧನ್ಯಶ್ರೀ ಪ್ರಭು ಉಡುಪಿ ಇವರುಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ‘ಮಂಥನ 2023’ ಭರತನಾಟ್ಯದ ಕಾರ್ಯಾಗಾರವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ದಿನಾಂಕ 04-11-2023 ಮತ್ತು 05-11-2023ರಂದು ನಡೆಸಿಕೊಡಲಿದ್ದಾರೆ. ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಜೀವನವನ್ನು ನೃತ್ಯ ಸೇವೆಗೆಂದೇ ಮುಡಿಪಾಗಿಟ್ಟವರು. ಇವರು ಖ್ಯಾತ ಗುರುಗಳಾದ ಎಸ್.ಕೆ. ರಾಜರತ್ನಂ ಹಾಗೂ ಅಭಿನಯದಲ್ಲಿ ಮೇರು ಸಾಧನೆಗೈದ ಶ್ರೀಮತಿ ಕಲಾನಿಧಿ ನಾರಾಯಣನ್ ಇವರಲ್ಲಿ ಭರತನಾಟ್ಯದ ವಳವೂರ್ ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಮಾಡಿದರು. ಇವರು ನರ್ತಿಸಿದ ರಾಧಾ ಮತ್ತು ಕೃಷ್ಣನ ನೃತ್ಯ ಹಾಗೂ ಅವರ ಅಂಗ ಶುದ್ಧಿ ಅಡವುಗಳನ್ನು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ಟೈಮ್ಸ್ ಆಫ್ ಇಂಡಿಯಾ’…

Read More