Author: roovari

ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ 01-07-2023ರಂದು ನಾಡಿನ ಪ್ರಖ್ಯಾತ ರಂಗಕರ್ಮಿ ಕಲ್ಕತ್ತಾದ ಮನೀಶ್ ಮಿತ್ರ ಅವರಿಂದ ‘ಸಾವಯವ ರಂಗಭೂಮಿ’ಯ ಕುರಿತಾದ ಕಾರ್ಯಾಗಾರ ನಡೆಯಿತು. “ತಿಂಗಳಿಡೀ ನಡೆಯುವ ನಾಟಕ ಪ್ರದರ್ಶನಗಳು, ರಂಗಕಾರ್ಯಾಗಾರ, ರಾಷ್ಟ್ರೀಯ ವಿಚಾರ ಸಂಕಿರಣ, ರಂಗಚರ್ಚೆ, ರಂಗಗೀತೆಗಳು, ಸಾಕ್ಷಚಿತ್ರ ಪ್ರದರ್ಶನಗಳನ್ನು ಗುರು ಸುಬ್ಬಣ್ಣ ಅವರಿಗೆ ಅರ್ಪಿಸಲಾಗಿದೆ” ಎಂದು ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘಸಮೀರ ಅವರು ತಿಳಿಸಿದರು. ಮನೀಶ್ ಮಿತ್ರ ಅವರು ಭಾರತದಾದ್ಯಂತ ಹುಟ್ಟುಹಾಕಿರುವ ರಂಗಾಂದೋಲನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡ ಆಸಕ್ತ ಶಿಬಿರಾರ್ಥಿಗಳು ಅಭಿನಯದ ಹೊಸ ಹೊಸ ಮಜಲುಗಳನ್ನು ಹಾಗೂ ಸಾವಯವ ರಂಗಭೂಮಿಯ ಕುರಿತಾಗಿ ಪ್ರಾತ್ಯಕ್ಷಿಕೆಗಳ ಮೂಲಕ, ಉಸಿರಾಟದ ನಿಯಂತ್ರಣದ ಮೂಲಕ ಮತ್ತು ಮಾತಿನ ಗ್ರಹಿಕೆಗಳ ಮೂಲಕ ಮನೀಶ್ ಮಿತ್ರ ಅವರಿಂದ ಶಿಬಿರದಲ್ಲಿ ಅಭ್ಯಾಸ ಮಾಡಿ ತಿಳಿದುಕೊಂಡರು. ಇದೊಂದು ಅಪರೂಪದ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ನಟನದ ಸಂಸ್ಥಾಪಕರಾದ…

Read More

ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಬ್ರಹ್ಮಾವರ ಇದರ ವತಿಯಿಂದ ಮಳೆಗಾಲದ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾದ ಜನಮನದಾಟ ರಂಗತಂಡ ಮತ್ತು ಸತ್ಯಶೋಧನ ರಂಗಸಮುದಾಯ ಹೆಗ್ಗೋಡು ಪ್ರಸ್ತುತಪಡಿಸಿದ “ರೊಟ್ಟಿಯ ಸಲುವಾಗಿ ಇಷ್ಟೆಲ್ಲ” ಎಂಬ ನಾಟಕವು ದಿನಾಂಕ 01-07-2023 ರಂದು ಬ್ರಹ್ಮವಾರದ ಎಸ್. ಎಂ. ಎಸ್ ಪ. ಪೂ. ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಲಾಯಿತು. ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ್, ಲೇಖಕಿ ಸುಧಾ ಆಡುಕಳ, ರಾಘವೇಂದ್ರ ಶೆಟ್ಟಿ ಕರ್ಜೆ, ಬ್ರಹ್ಮಾವರದ ಎಸ್.ಎಮ್.ಎಸ್ ಪ‌.ಪೂ ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಉಪಸ್ಥಿತರಿದ್ದರು.

Read More

ಕಾಸರಗೋಡು : ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಬಾಲ ಪ್ರತಿಭಾ ಪುರಸ್ಕಾರವಾದ ‘ಭರವಸೆಯ ಬೆಳಕು’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 21 ವರ್ಷದೊಳಗಿರುವ ಪ್ರತಿಭೆಗಳು ಅರ್ಜಿ ಸಲ್ಲಿಸಬಹುದು. ಸಾಹಿತ್ಯ, ಕಲೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಯೋಗ, ಸಂಗೀತ, ಹರಿಕಥೆ, ಯಕ್ಷಗಾನ, ಭಾಷಣ, ಕ್ರೀಡೆ ಮುಂತಾದ ನಾಡು, ನುಡಿ, ಸಂಸ್ಕೃತಿಯಲ್ಲಿ ಅಪ್ರತಿಮ ಸಾಧನೆ ಮಾಡಿದ ಕೇರಳ ರಾಜ್ಯದ ಆಯ್ದ 10 ಮಂದಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಐವರಿಗೆ ಪ್ರಶಸ್ತಿ ನೀಡಲಾಗುವುದು. ಪ್ರತಿಭಾ ಸಾಕ್ಷಿ ಪ್ರಮಾಣಗಳನ್ನು ಹಾಗೂ ಭಾವಚಿತ್ರ, ಆಧಾರ್ ಕಾರ್ಡ್‌ ಪ್ರತಿಯೊಂದಿಗೆ ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ವಾಮನ್‌ ರಾವ್ ಬೇಕಲ್, ನುಳ್ಳಿಪ್ಪಾಡಿ, ಕಾಸರಗೋಡು -671121 ವಿಳಾಸಕ್ಕೆ ಅಥವಾ 9633073400, ಸಂಚಾಲಕಿ ಸಂಧ್ಯಾರಾಣಿ ಟೀಚರ್-9747093552, ಕಾರ್ಯದರ್ಶಿ ವಸಂತ ಕೆರೆಮನೆ-9995667277 ಅವರ ವಾಟ್ಸ್‌ ಅಪ್ ನಂಬರಿಗೆ ಕಳುಹಿಸಬಹುದು. ಆಗಸ್ಟ್ 15ರಂದು ನಡೆಯುವ ಕನ್ನಡ ಭವನ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರೊಫೈಲ್ ಗಳನ್ನು ಜು.20ರೊಳಗೆ ತಲುಪಿಸಬೇಕು ಎಂಬ ಸೂಚನೆಯೊಂದಿಗೆ ತಮ್ಮ…

Read More

ಕಾರ್ಕಳ : ಮಕ್ಕಳ ಸಾಹಿತ್ಯ ಸಂಗಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಲೇಖಕಿ ಶ್ರೀಮತಿ ಸಾವಿತ್ರಿ ಮನೋಹರ್ ಅವರ 22ನೇ ನಾಟಕ ಕೃತಿ “ನಮ್ಮ ಸಂಸಾರ ಅನ್ ಲೈನ್ ಅವಾಂತರ” ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ದಿನಾಂಕ :29-06-2023ರಂದು ಲೋಕಾರ್ಪಣೆಗೊಂಡಿತು. ಶ್ರೀಮತಿ ಸಾವಿತ್ರಿ ಮನೋಹರ್ ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ ಕೃತಿಯನ್ನು ಲೋಕಮುಖಕ್ಕೆ ಅನಾವರಣಗೊಳಿಸಿ ನಾಟಕದ ತುಂಬೆಲ್ಲ ಹರಡಿಕೊಂಡಿರುವ ಸಂಸಾರಿಕ ಬಂಧ ಹೊಸ ರೂಪ ಹೊತ್ತು ನಿಂತ ಸ್ತ್ರೀವಾದ ಹಾಸ್ಯ ಲೇಪದೊಂದಿಗೆ ಸುಖಾಂತ್ಯಗೊಂಡಿರುವ ಬಗೆಯನ್ನು ಮೆಚ್ಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, “ನಾಟಕದಲ್ಲಿ ವಾಸ್ತವ ಪ್ರಜ್ಞೆ ಹಾಸು ಹೊಕ್ಕಾಗಿರುವ ರೀತಿ, ಲೇಖಕಿಯ ಬರವಣಿಗೆಯ ಪ್ರೀತಿ, ಸಂಸಾರವೇ ಸಾಹಿತ್ಯವಾಗುವ ನೀತಿ ಇಲ್ಲಿ ನಾಟಕದ ರೂಪಕ್ಕೆ ಇಂಬು ಕೊಡುವಂತಿದೆ” ಎಂದರು. ಮುಖ್ಯ ಅತಿಥಿ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಶ್ರೀ ಅನಂತಪದ್ಮನಾಭ…

Read More

ಪೆರ್ಲ : ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಇವುಗಳ ಸಹಯೋಗದಲ್ಲಿ ಪೆರ್ಲದ ವ್ಯಾಪಾರಿ ಭವನದಲ್ಲಿ ನುಡಿನಮನ ಹಾಗೂ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ದಿನಾಂಕ 25-06-2023ರಂದು ಹಮ್ಮಿಕೊಳ್ಳಲಾಯಿತು. ಸಾಹಿತಿ, ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎನ್. ಭಟ್ ಸೈಪಂಗಲ್ಲು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ವ್ಯಕ್ತಿಯ ಸಾವು ಜನಮಾನಸದಲ್ಲಿ ಪರಿಣಾಮ ಬೀರಬೇಕು. ಈ ರೀತಿಯ ಶ್ರೀಮಂತ ಸಾವನ್ನು ಪಡೆಯಬೇಕಾದರೆ ಬದುಕಿನಲ್ಲಿ ಅಪಾರ ಪರಿಶ್ರಮಪಟ್ಟಿರಬೇಕು” ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ನಿಧನರಾದ ವ್ಯಾಪಾರಿ ಹಾಗೂ ಸಾಹಿತ್ಯ ಪೋಷಕರಾಗಿದ್ದ ಅಬ್ದುಲ್ ರಹಿಮಾನ್ ಅವರಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಪೆರ್ಲ ಘಟಕದ ಉಪಾಧ್ಯಕ್ಷ ಪ್ರಸಾದ್ ಟಿ. ಪೆರ್ಲ ಅವರು ನುಡಿನಮನ ಸಲ್ಲಿಸಿ ಅಬ್ದುಲ್ ರಹಿಮಾನ್ ಅವರ ಸಂಘಟನಾ ಸಾಮರ್ಥ್ಯ, ಸಾಧನೆ ಹಾಗೂ ನಿಸ್ವಾರ್ಥ ಮನೋಭಾವವನ್ನು ಸ್ಮರಿಸಿದರು. ಬಜಕೂಡ್ಲು ಕೃಷ್ಣ ಪೈ ಮಾತನಾಡಿ, ಅಬ್ದುಲ್ ರಹಿಮಾನ್ ಅವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಆ ಬಳಿಕ ನಡೆದ ಮುಂಗಾರು…

Read More

ಹಾಸನ ಜಿಲ್ಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಾ 2016ರಲ್ಲಿ ವರ್ಗಾವಣೆಗೊಂಡು ಬೆಳ್ತಂಗಡಿ ತಾಲೂಕಿನ ಬದನಾಜೆ ಶಾಲೆಗೆ ಸೇರಿದೆ. ತೆಂಕಕಾರಂದೂರಿನ ನನ್ನ ಬಂಧುಗಳಾದ ವಿಷ್ಣು ಸಂಪಿಗೆತ್ತಾಯರ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ನನ್ನ ತಮ್ಮ ಪ.ರಾ. ಶಾಸ್ತ್ರಿಗಳನ್ನು ಪರಿಚಯಿಸಿದಾಗ ಮೊದಲಿಗೆ ನನಗೆ ತೀರ ಆಶ್ಚರ್ಯವಾಯಿತು, ನಾನು ಚಿಕ್ಕಂದಿನಿಂದಲೂ ಕಥೆಗಳು, ಲೇಖನಗಳನ್ನು ಓದಿಕೊಂಡು ಬಂದಿದ್ದು ಇದೇ ಶಾಸ್ತ್ರಿಗಳು ಬರೆದದ್ದೆ ? ಎಂದು. ನನ್ನ ಕಲ್ಪನೆಯಲ್ಲಿ ಶಾಸ್ತ್ರಿಗಳು ಎಂದರೆ ದೊಡ್ಡ ನಿಲುವಿನ, ಲೇಖಕರು ಧರಿಸುವ ದೊಡ್ಡ ಧಿರಿಸಿನ, ಗಂಭೀರವಾದ ವ್ಯಕ್ತಿತ್ವವುಳ್ಳ, ಸಾಮಾನ್ಯ ಜನರಿಂದ ಒಂದಷ್ಟು ಅಂತರವನ್ನು ಇಟ್ಟುಕೊಂಡವರು ಎಂಬುದಾಗಿತ್ತು. ಆದರೆ ಸಾಮಾನ್ಯ ಫಕೀರರಂತೆ, ಸಣಕಲು ವ್ಯಕ್ತಿತ್ವದ, ಸಾಮಾನ್ಯರಲ್ಲೂ ಸಾಮಾನ್ಯರಂತೆ ಇರುವ, ನಗುಮುಖದಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡಿರುವ ಇವರನ್ನು ಕಂಡಾಗ ಹೊಸತೊಂದು ಸಾಹಿತ್ಯ ಲೋಕಕ್ಕೆ ನಾನು ಹೋದಂತೆ ಭಾಸವಾಯಿತು. ಯಕ್ಷಗಾನ ತಾಳಮದ್ದಳೆ ಮತ್ತು ಗಮಕದ ಕಾರ್ಯಕ್ರಮಗಳಲ್ಲಿ ಪ್ರೊ. ಮಧೂರು ಮೋಹನ ಕಲ್ಲೂರಾಯರ ಜೊತೆಯಾಗಿ ಹಲವಾರು ಕಾರ್ಯಕ್ರಮಗಳೊಂದಿಗೆ ಪಾಲ್ಗೊಂಡು ಸ್ನೇಹಾಚಾರ ಬೆಳೆಯುತ್ತಿದ್ದಾಗ ಅಲ್ಲಿ ಶಾಸ್ತ್ರಿಗಳ ಸಾಂಗತ್ಯ ಹೆಚ್ಚಾಗಿ, ಆತ್ಮೀಯತೆಯು ತಾನೇ ತಾನಾಗಿ ಬೆಳೆಯಿತು.…

Read More

ಬೆಂಗಳೂರು: ನೃತ್ಯರಂಗದಲ್ಲಿ ಎಲೆಮರೆಯ ಕಾಯಿಯಂತೆ ನಿಷ್ಠೆಯಿಂದ ಬದ್ಧತೆಯಿಂದ ಸಾಧನಗೈಯುತ್ತಿರುವ ಶ್ರೀ ‘ಶಾರದ ನೃತ್ಯಾಲಯ’ದ ನಾಟ್ಯಗುರು ವಿದುಷಿ. ಬಿ. ಎಸ್. ಇಂದು ನಾಡಿಗ್ ಇವರ ಅತ್ಯುತ್ತಮ ಕಲಾಮೂಸೆಯಲ್ಲಿ ರೂಪುಗೊಂಡಿರುವ ಕಲಾಶಿಲ್ಪ ವಿದುಷಿ. ಶ್ರೀಯಾ ಕಸ್ತೂರಿ ಪ್ರತಿಭಾವಂತ ಕಲಾವಿದೆ. ಶ್ರೀಮತಿ ಗೋದಾವರಿ ಮತ್ತು ಸುದರ್ಶನ್ ಕಸ್ತೂರಿಯವರ ಪುತ್ರಿಯಾದ ಶ್ರೀಯಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮ ಹೊಂದಿದ್ದು, ಸಂಸ್ಕಾರವಂಥ ಕುಟುಂಬದ ಹಿನ್ನಲೆಯುಳ್ಳವಳು. ಸತತ ಹದಿನಾರು ವರ್ಷಗಳ ನೃತ್ಯಾಭ್ಯಾಸದಿಂದ ಹದಗೊಂಡಿರುವ ಶ್ರೀಯಳ ಕಲಾಪ್ರತಿಭೆ ಇದೀಗ ಕಲಾರಾಧಕರ ಸಮ್ಮುಖ ಅನಾವರಣಗೊಳ್ಳುವ ಸುಸಮಯ ಒದಗಿದೆ. ಇದೇ ತಿಂಗಳ 9 ಭಾನುವಾರದಂದು ಸಂಜೆ 6 ಗಂಟೆಗೆ ಎ.ಡಿ.ಎ. ರಂಗಮಂದಿರದಲ್ಲಿ ಶ್ರೀಯಾ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ. ಬೆಂಗಳೂರಿನ ಶ್ರೀಮತಿ ಗೋದಾವರಿ ಮತ್ತು ಸುದರ್ಶನ್ ಎಸ್. ಕಸ್ತೂರಿ ಅವರ ಸುಪುತ್ರಿ ಶ್ರೀಯಾಗೆ ಬಾಲ್ಯದಿಂದ ನೃತ್ಯಾಸಕ್ತಿ. ಏಳನೆಯ ವಯಸ್ಸಿಗೇ ಭರತನಾಟ್ಯ ಕಲಿಯಲಾರಂಭಿಸಿದಳು. ಮೊದಲ ಗುರು ಸವಿತಾ ಅರುಣ್. ಅನಂತರ ಹೆಚ್ಚಿನ ಮಾರ್ಗದರ್ಶನಕ್ಕೆ, ನೃತ್ಯಾರಾಧನೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟ…

Read More

ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ ಸುಬ್ಬಣ್ಣನವರ ನೆನಪಿನಲ್ಲಿ, ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಇದೇ 08-07-2023 ಮತ್ತು 09-07-2023ರಂದು ಸಂಜೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು ಸಹಯೋಗದಲ್ಲಿ ‘ಮೂಲಂ 2023’ (ದಿ ರೂಟ್ಸ್) ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನೃತ್ಯೋತ್ಸವವನ್ನು ಆಯೋಜಿಸಲಾಗಿದೆ. 08-07-2023ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿನ್ನೆಲೆ ಗಾಯಕಿ, ಸಂಗೀತ ಸಂಯೋಜಕಿ ಮತು ಕವಯಿತ್ರಿ ಶ್ರೀಮತಿ ಹೆಚ್ ಆರ್ ಲೀಲಾವತಿ ಹಾಗೂ ರಂಗಕರ್ಮಿ ಶ್ರೀ ಮಂಡ್ಯ ರಮೇಶ್ ಭಾಗವಹಿಸಲಿರುವರು. ಕಾರ್ಯಕ್ರಮದ ಎರಡೂ ದಿನ ನೃತ್ಯ, ಸಂಗೀತ ಮತ್ತು ರಂಗಭೂಮಿಗಳಲ್ಲಿ ಗುರು-ಶಿಷ್ಯರ ನಡುವಿನ ಅನುಬಂಧ, ಪರಂಪರೆ ಮತ್ತು ತಲೆಮಾರುಗಳ ನಡುವಿನ ವ್ಯತ್ಯಾಸ, ಬೆಳವಣಿಗೆ ಮತ್ತು ಪ್ರಸ್ತುತಿ ಇವುಗಳ ಕುರಿತಾಗಿ ಅವಲೋಕಿಸಲು ವಿಚಾರ ಸಂಕಿರಣದ ಜೊತೆಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ದಿನಾಂಕ 08-07-2023ರಂದು ಮುಂಬೈನವರಾದ ಶ್ರೀಮತಿ ದಿವ್ಯ ವಾರಿಯರ್, ಶ್ರೀಮತಿ ನಮ್ರತಾ…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನೀಡುವ 2023ನೇ ಸಾಲಿನ ಟಿ.ಎಸ್. ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್. ರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ಆಕಾಶವಾಣಿಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ನಾಗಮಣಿ ಎಸ್. ರಾವ್ ಅವರು ತಮ್ಮ ಹೆಸರಿನ ದತ್ತಿನಿಧಿಯನ್ನು ಕರ್ನಾಟಕ ಲೇಖಕಿಯರ ಸಂಘದಲ್ಲಿ ಸ್ಥಾಪಿಸಿದ್ದು, ಈ ವರ್ಷದಿಂದ ಇದು ಪ್ರಾರಂಭವಾಗಿದ್ದು ಚೊಚ್ಚಲ ಪ್ರಶಸ್ತಿಗೆ ಆರ್. ಪೂರ್ಣಿಮಾ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಸಮಾರಂಭವು ದಿನಾಂಕ : 08-07-2023ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಜರುಗಲಿದ್ದು, ಹಿರಿಯ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಗಮಣಿ ಎಸ್. ರಾವ್ ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯವಾಗಿ ಕೆಲಸ ಮಾಡಿರುವ ಪತ್ರಕರ್ತೆಯೊಬ್ಬರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಬೇಕು ಮತ್ತು ಅವರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರಬೇಕು ಎಂಬುದು ಅವರ ಆಶಯವಾಗಿತ್ತು. ಈ ಆಶಯದಂತೆ ಕನ್ನಡ ಪತ್ರಿಕೋದ್ಯಮದಲ್ಲಿ ಸುಮಾರು 40 ವರ್ಷಗಳಿಗೂ ಅಧಿಕ ಕಾಲ…

Read More

ಮಂಗಳೂರು : ಭರತಾಂಜಲಿ ಕೊಟ್ಟಾರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ :08-07-2023ರಂದು ನಗರದ ಪುರಭವನದಲ್ಲಿ ಸಂಜೆ 5ಕ್ಕೆ ‘ನೃತ್ಯಾಮೃತಮ್’ ಸಮೂಹ ನೃತ್ಯ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ ಕುಮಾರ್ ಇವರು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಗೌರವ ಅತಿಥಿಯಾಗಿ ಕರ್ನಾಟಕ ಸರಕಾರದ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಜೇಶ್ ಜಿ., ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ, ನಾಟ್ಯಾಲಯದ ಗುರು ವಿದುಷಿ ಕಮಲಾ ಭಟ್ ಪಾಲ್ಗೊಳಲಿದ್ದಾರೆ. ಹಿಮ್ಮೇಳದಲ್ಲಿ ನೃತ್ಯ ನಿರ್ದೇಶನ ಹಾಗೂ ನಟವಾಂಗದಲ್ಲಿ ಗುರು ವಿದುಷಿ ಪ್ರತಿಮಾ ಶ್ರೀಧರ್, ಹಾಡುಗಾರಿಕೆಯಲ್ಲಿ ವಿದುಷಿ ವಂದನಾ ರಾಣಿ, ಮೃದಂಗಂನಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್, ವಯಲಿನ್‌ನಲ್ಲಿ ವಿದ್ವಾನ್‌ ಶ್ರೀಧರ ಆಚಾರ್ಯ ಭಾಗವಹಿಸಲಿರುವರು. ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ ಹಾಗೂ ವಿದುಷಿ ಪ್ರತಿಮಾ ಶ್ರೀಧರ್ ಈ…

Read More