Subscribe to Updates
Get the latest creative news from FooBar about art, design and business.
Author: roovari
ವಿದ್ಯಾಗಿರಿ : ಆಳ್ವಾಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ : 24-06-2023ರಂದು ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದ ಕಾರ್ಯಕ್ರಮ ನಡೆಯಿತು. ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದದಲ್ಲಿ ಕಾದಂಬರಿಕಾರ ಶ್ರೀ ಸತೀಶ್ ಚಪ್ಪರಿಕೆ ಮಾತನಾಡಿ “ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ? ಎಂಬುದು ‘ಘಾಂದ್ರುಕ್’ ಕೃತಿಯ ಒಳನೋಟವೂ ಹೌದು’ ಎಂದು ಹೇಳಿದರು. ಧರ್ಮ ಇಂದು ವ್ಯಾಪಾರಿ ಸರಕಾಗುತ್ತಿದೆ. ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗುತ್ತಿಲ್ಲ. ಒಕ್ಕಲೆಬ್ಬಿಸುವುದೂ ಹಿಂಸೆ. ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದ ಅವರು ಮುಂದುವರಿದು ಕೃತಿಕಾರನ ಬದುಕು ಆತನ ಬರಹದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಂಬಿತವಾಗಿರುತ್ತದೆ. ‘ಇಲ್ಲ’ ಎನ್ನುವುದಾದದರೆ, ಆತ ಸುಳ್ಳು ಹೇಳುತ್ತಿರಬಹುದು ಅಥವಾ ಬರಹ ಕದ್ದಿರಬಹುದು. ಪುಸ್ತಕದಷ್ಟು ದೊಡ್ಡ ಆಸ್ತಿ ಬೇರೆ ಇಲ್ಲ. ಪುಸ್ತಕ ಓದಿ. ಬರಹ ತೃಪ್ತಿ ನೀಡುತ್ತದೆ. ಬರೆಯಿರಿ, ಓದಿ. ನಿಮ್ಮ…
ಪ್ರೇಕ್ಷಕರ ಮನಸೂರೆಗೊಂಡ ಲಾವಣ್ಯ ಮಕ್ಕಳ ನಾಟಕ ತಂಡ ಪ್ರದರ್ಶಿಸಿದ ‘ಜುಂ ಜುಂ ಆನೆ ಮತ್ತು ಪುಟ್ಟಿ’, ನಾಟಕದ ರಚನೆ ವೈದೇಹಿ ಹಾಗೂ ನಿರ್ದೇಶನ ಗಣೇಶ್ ಕಾರಂತ್. ಪ್ರತಿ ವರ್ಷ ಲಾವಣ್ಯ ಕಲಾ ತಂಡ ಮಕ್ಕಳಿಗಾಗಿ ನಾಟಕ ರಂಗ ತರಬೇತಿ ಶಿಬಿರವನ್ನ ಆಯೋಜಿಸುತ್ತದೆ. ಹಲವಾರು ಶಾಲೆಯ ಮಕ್ಕಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಕೂಡಿ ಕಲಿಯುವ ವಿಶೇಷ ಅನುಭವವನ್ನು ಪಡೆಯುತ್ತಾ ಕಲಿಕೆಗೆ ಪೂರಕವಾದಂತ ಸಾಕಷ್ಟು ಪಠ್ಯೇತರ ಚಟುವಟಿಕೆಗಳನ್ನು ಇಲ್ಲಿ ಪಡೆಯುತ್ತಾರೆ. ಲಾವಣ್ಯ ಬೈಂದೂರು ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ರಂಗ ತರಬೇತಿಯನ್ನು ಆಯೋಜಿಸುತ್ತಾ ಹಲವಾರು ವರ್ಷಗಳಿಂದ ಜನರ ಪ್ರೀತಿಗೆ ಪಾತ್ರವಾದ ತಂಡವಾಗಿ ಗುರುತಿಸಿದೆ. ಈ ವರ್ಷ ತರಬೇತಿಯ ಜೊತೆಯಲ್ಲೇ ಪ್ರದರ್ಶನಗೊಂಡಂತಹ ನಾಟಕ ‘ಜುಮ್ ಜುಮ್ ಆನೆ ಮತ್ತು ಪುಟ್ಟಿ’. ಮಕ್ಕಳ ನಾಟಕ ರಂಗದ ಮೇಲೆ ಮಕ್ಕಳು ಹಬ್ಬದ ರೀತಿಯಲ್ಲಿ ಆಚರಿಸಬೇಕೆನ್ನುವುದು ಖ್ಯಾತ ರಂಗ ಚಿಂತಕ ಬಿ.ವಿ ಕಾರಂತರ ಅನಿಸಿಕೆ. ಗಣೇಶ್ ಕಾರಂತರು ಮತ್ತು ಜೊತೆಯಾಗಿ ಸಹಕರಿಸಿದ ರೋಶನ್ ಬೈಂದೂರು ಇವರು ಮಕ್ಕಳ ನಾಡಿಮಿಡಿತವನ್ನು…
ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ : 28-06-2023 ರಂದು ಮಂಗಳೂರು ವಿವಿಯ ಯು.ಆರ್. ರಾವ್ ಸಭಾಂಗಣದಲ್ಲಿ ನಡೆಯಿತು. ಕಾಸರಗೋಡು ಸರಕಾರಿ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಇವರು ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಮಾತನಾಡುತ್ತಾ “ಆರ್ಯ ದ್ರಾವಿಡ ಚಿಂತನೆ ಬ್ರಿಟಿಷರ ಒಡಕಿನ ರಾಜಕೀಯ ದಾಳದ ಸೃಷ್ಟಿ. ಇದನ್ನು ಭಾರತೀಯ ಪರಂಪರೆ ಮತ್ತು ಇತಿಹಾಸ ಸಾಕ್ಷ್ಯಗಳ ಬೆಳಕಿನಲ್ಲಿ ವಿಶ್ಲೇಷಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಅವರ ತಥ್ಯದರ್ಶನ ಕೃತಿ ಇದನ್ನು ಅನಾವರಣ ಮಾಡಿದೆ. ಸೇಡಿಯಾಪು ಅವರು ಗಾಂಧೀವಾದಿಯಾಗಿ ಜೀವನದುದ್ದಕ್ಕೂ ನಡೆದು ಬಂದ ಹಾದಿ ವಿಶೇಷವಾದುದು. ದೇಶೀಯತೆಗೆ ಒತ್ತುಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಚಿಂತನೆ ನಮಗೆ ದಾರಿದೀಪ. ಗಡಿಪ್ರದೇಶದಲ್ಲಿ ಕನ್ನಡದ ಚಟುವಟಿಕೆಗಳಿಗೆ ಸಕ್ರಿಯತೆಯನ್ನು…
ಶ್ರೀ ಜಯಪ್ರಕಾಶ್ ಬಿ. ಶ್ರೀ ಜಯಪ್ರಕಾಶ್ ಬಿ. ಇವರು ಕಳೆದ 14 ವರ್ಷಗಳಿಂದ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಬಿಜೈ ಇಲ್ಲಿ ಆಯುರ್ವೇದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಕಡಬ ತಾಲೂಕಿನಲ್ಲಿ ಜನಿಸಿದ ಇವರು ಶ್ರೀ ಭಾಸ್ಕರನ್ ನಾಯರ್ ಮತ್ತು ಶ್ರೀಮತಿ ಶಾಂತಕುಮಾರಿ ಇವರ ಸುಪುತ್ರ. ಪ್ರಾಥಮಿಕ ಶಿಕ್ಷಣ ಕಡಬ ಹಾಗೂ ಆಲಂಕಾರಿನಲ್ಲಿ, ಪದವಿ ಪೂರ್ವ ಶಿಕ್ಷಣ ಉಜಿರೆಯಲ್ಲಿ ಹಾಗೂ ಮೈಸೂರಿನಲ್ಲಿ ಬಿ.ಎ.ಎಂ.ಎಸ್. ಪದವಿ ಪಡೆದಿದ್ದಾರೆ. ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇದ್ದು ಯಾವುದೇ ಕಲಾಶಾಲೆಯಲ್ಲಿ ಕಲಿಯದೇ ಸ್ವಂತವಾಗಿ ಚಿತ್ರಕಲೆ ಅಭ್ಯಾಸ ಮಾಡಿರುವ ಇವರು ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್ಯಾಂ ಕ್ ಪಡೆದಿದ್ದು, ಏಳನೇ ತರಗತಿಯ ಎಳವೆಯಲ್ಲಿಯೇ ಚಿತ್ರಕಲಾ ಪ್ರದರ್ಶನ ಮಾಡಿದ್ದು ಮೆಚ್ಚುವಂತ ವಿಚಾರ. ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿ ಅನುಭವಿಯಾದ ಇವರು ಕರಾವಳಿ ಕಲಾಮೇಳ ಕದ್ರಿ, ಫಿಷರಿಸ್ ಕಾಲೇಜು ಮಂಗಳೂರು ಹಾಗೂ ಬೊಕ್ಕಪಟ್ಣದಲ್ಲಿ ವಿಶ್ವಕಲಾ ದಿನದ ಪ್ರಯುಕ್ತ ನಡೆದ ಶಿಬಿರದಲ್ಲಿ ಭಾಗವಹಿಸಿದ್ದು, ದೆಹಲಿ, ಬೆಂಗಳೂರು ಮುಂತಾದ ಕಡೆ ಆನ್ಲೈನ್ ಚಿತ್ರಕಲಾ ಪ್ರದರ್ಶನದಲ್ಲಿಯೂ…
ಮುಂಬೈ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನವು ತನ್ನ 9ನೇ ವರ್ಷಾಚರಣೆಯ ಅಂಗವಾಗಿ ಜುಲೈ 01-07-2023ರಿಂದ 09-07-2023ರ ತನಕ ಮುಂಬೈ ಮಹಾನಗರದಲ್ಲಿ ‘ನವ ಯಕ್ಷ ಸಂಭ್ರಮ’ ಆಚರಿಸಲಿದ್ದು, ಪ್ರತಿದಿನ ಪ್ರತಿಷ್ಠಾನದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜು.01ರಂದು ಮುಂಬೈಯ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ, ಜು.02ರಂದು ಡೊಂಬಿವಲಿಯ ನ೦ದಿ ಪ್ಯಾಲೇಸ್ ಹತ್ತಿರ ಇರುವ ಎಂಐಡಿಸಿನ ಹೊಟೇಲ್ ನಲ್ಲಿ ಜು.03ರಂದು ಥಾಣೆಯ ಡಾ. ಕಾಶಿನಾಥ ಘಾನೆಕರ್ ನಾಟ್ಯಗೃಹದಲ್ಲಿ, ಜು.04ರಂದು ಪನ್ವೇಲ್ನ ಭಗತ್ ವಾಡಿಯ ರಾಜೀವ್ ಗಾಂಧಿ ಮೈದಾನದ ಹತ್ತಿರ, ಜು.05ರ೦ದು ನೆರೂಳ್ ನ ಶ್ರೀ ಶನಿ ಮಂದಿರದಲ್ಲಿ, ಜು.06ರಂದು ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಜು.07ರಂದು ಮೀರಾ ರೋಡ್ನ ಸೈಂಟ್ ಥಾಮಸ್ ಚರ್ಚ್ ಸಭಾಗೃಹದಲ್ಲಿ, ಜು.08ರಂದು ಐರೋಲಿಯ ಹೆಗ್ಡೆ ಭವನದಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜು.09ರ೦ದು ನವ ಮುಂಬೈಯ ಬಾಂಬೆ ಬಂಟ್ಸ್ ಅಸೋಸಿಯೇಶನ್ನಲ್ಲಿ ಯಕ್ಷಗಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಉಡುಪಿ : ರಥಬೀದಿ ಗೆಳೆಯರು ಉಡುಪಿ ಇದರ ರಥಬೀದಿ ಮಾತುಕತೆ ಸರಣಿ ಕಾರ್ಯಕ್ರಮದ ಅಂಗವಾಗಿ ‘ರಂಗಭೂಮಿ ಮತ್ತು ಮುದ್ರೆ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕವಿ, ನಾಟಕಗಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕರಾದ ರಘುನಂದನ ಇವರಿಂದ ದಿನಾಂಕ : 01-07-2023ರ ಸಂಜೆ 4.30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಹಾಗೂ ಕಾರ್ಯದರ್ಶಿಯಾದ ಸುಬ್ರಹ್ಮಣ್ಯ ಜೋಶಿಯವರು ಆತ್ಮೀಯ ಸ್ವಾಗತ ಬಯಸಿದ್ದಾರೆ. ಉಪನ್ಯಾಸಕರ ಬಗ್ಗೆ : ಕವಿ, ನಾಟಕಕಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕ ಶ್ರೀ ರಘುನಂದನ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಮುಗಿಸಿ, ಹೊಸದೆಹಲಿಯ ರಾಷ್ಟ್ರೀಯ ನಾಟ್ಯವಿದ್ಯಾಲಯದಲ್ಲಿ ಡಿಪ್ಲೊಮಾ ಮತ್ತು ಅಲ್ಲಿಯೇ ರಂಗನಿರ್ದೇಶನದ ವಿಶೇಷ ಅಧ್ಯಯನ ನಡೆಸಿದ್ದಾರೆ. ಅನೇಕ ಪ್ರತಿಷ್ಟಿತ ರಂಗ ಶಿಕ್ಷಣ ಕೇಂದ್ರ, ನಾಟಕ ಶಾಲೆ, ಸಂಸ್ಕೃತಿ ಶಾಲೆ, ನಾಟ್ಯ ವಿದ್ಯಾಲಯ, ನಾಟ್ಯ ಅಕಾಡಮಿಗಳಲ್ಲಿ ಅತಿಥಿ…
ಮಧ್ಯ ಪ್ರದೇಶ: ಮಧ್ಯ ಪ್ರದೇಶದ ಇಂದೋರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಹೋಳ್ಕರ್ ಸಂಗೀತ ಸಮ್ಮೇಳನಕ್ಕೆ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ಕುಮಾರಿ ವಾಣಿ ಹಂಚಿನಮನಿ ಆಯ್ಕೆಯಾಗಿದ್ದಾರೆ. ವಿಜ್ಞಾನ ಪದವೀಧರೆಯಾದ ವಾಣಿ ಹಿಂದೂಸ್ತಾನಿ ಸಂಗೀತದ ವಿದ್ಯಾರ್ಥಿನಿ. ಪ್ರತಿಭೆ, ಪರಿಶ್ರಮ ಮತ್ತು ವಿನಯವನ್ನು ಹೊಂದಿರುವ ವಾಣಿ ಬಡತನದಲ್ಲಿ ಅರಳಿದ ಪ್ರತಿಭೆ. ಕಲಾನಿಧಿ ಫೌಂಡೇಶನ್ ಚೆನ್ನೈ ವತಿಯಿಂದ ಯುವ ಸಂಗೀತಗಾರರಿಗೆ ನೀಡಲಾಗುವ ರೂ.25,000/-ಗಳ ಪ್ರೋತ್ಸಾಹ ಧನವನ್ನೂ ಪಡೆದಿರುವ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ. ಕುಮಾರಿ ವಾಣಿ ಹಂಚಿನಮನಿ ಅವರಿಗೆ ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ.ಸುಭಾಷ್ ಪಟ್ಟಾಜೆ ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ: ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ ಗೃಹ ಸಂಗೀತ ಕಾರ್ಯಕ್ರಮ ರಾಗರತ್ನಮಾಲಿಕೆ ಇದೇ ಜೂನ್ 17ರಂದು ಸಂಜೆ ಡಾ.ಕೃಷ್ಣಮೂರ್ತಿ ಅವರ ಆತಿಥ್ಯ ಹಾಗೂ ಸಹಪ್ರಾಯೋಜಕತ್ವದಲ್ಲಿ ವಿದುಷಿಯರಾದ ಕಾಂಚನ ಎಸ್. ಶ್ರೀರಂಜನಿ ಹಾಗೂ ಕಾಂಚನ ಎಸ್. ಶ್ರುತಿರಂಜನಿ ವಯೊಲಿನ್ ಪಕ್ಕವಾದ್ಯದಲ್ಲಿ ಶ್ರೀ ಶ್ರೀಜಿತ್ ತಿರುವನಂತಪುರ ಮೃದಂಗದಲ್ಲಿ ವಿದ್ವಾನ್ ಶ್ರೀ ಜಿ.ಯಸ್. ರಾಮಾನುಜನ್ ಮೈಸೂರು ಘಟಂನಲ್ಲಿ ಮೈಸೂರಿನ ಶ್ರೀ ಶರತ್ ಕೌಶಿಕ್ ಸಹಕರಿಸಿದ್ದಾರೆ. ಪೂರ್ವಭಾವಿಯಾಗಿ ಶ್ರೀಮತಿ ಹೇಮಲತಾ ರಾವ್ ಮತ್ತು ಅವರ ಶಿಷ್ಯೆಯರು, ವಯೊಲಿನ್ ಶ್ರೀ ವೈಭವ್ ಪೈ, ಮೃದಂಗದಲ್ಲಿ ಮಾಸ್ಟರ್ ಪ್ರಜ್ಞಾನ್ ಸಹಕರಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ಕೊಳಲು ವಿದ್ವಾಂಸರಾದ ಪ್ರೊ.ರಾಘವೇಂದ್ರ ರಾವ್ ಹಾಗೂ ಅವರ ಪತ್ನಿ ಶ್ರೀಮತಿ ಪ್ರೇಮಾ ಅವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಮಿಜಾರು : ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನಂ’ ಕಾರ್ಯಕ್ರಮವು ದಿನಾಂಕ : 24-06-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ, ನಿವೃತ್ತ ಪ್ರಾಚಾರ್ಯ, ಬೆಂಗಳೂರಿನ ಎಸ್. ವ್ಯಾಸ ಇದರ ನಿವೃತ್ತ ಡೀನ್ ಪ್ರೊ. ಗೋಪಾಲಕೃಷ್ಣ ಎನ್. ಭಟ್ ಇವರು “ನಮ್ಮನ್ನು ನಾವು ಮೊದಲು ಅರಿತುಕೊಳ್ಳಬೇಕು. ಜ್ಞಾನಾಭಿವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು. ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಓಂ ಉಚ್ಛಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು” ಎಂದು ಹೇಳಿದರು. ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ…
ಉಪ್ಪಳ : ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಐದನೇ ದಿನದ ಕಾರ್ಯಕ್ರಮ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಭವನದಲ್ಲಿ ತರುಣ ಕಲಾ ವೃಂದ ಐಲ ಸಂಘಟನೆಯ ಪ್ರಾಯೋಜಕತ್ವದಲ್ಲಿ ದಿನಾಂಕ : 28-06-2023ರಂದು ಜರಗಿತು. ಐಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ದೀಪ ಬೆಳಗಿಸಿ ಹಬ್ಬವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶ್ರೀಯುತರು “ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸುವಲ್ಲಿ ಇಂತಹ ಕನ್ನಡ ಹಬ್ಬಗಳ ಅಗತ್ಯ ಹಿಂದಿನದಕ್ಕಿಂತ ಇಂದು ಅಧಿಕವಾಗಿದೆ. ಕಾಸರಗೋಡಿನ ಕನ್ನಡಿಗರು ತಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ನಿತ್ಯ ಸಮರ್ಪಣಾಭಾವದಿಂದ ಕನ್ನಡದ ಕೆಲಸವನ್ನು ಮಾಡಬೇಕಿದೆ. ಕಾಸರಗೋಡು ಚಿನ್ನಾರ ನೇತೃತ್ವದ ರಂಗಚಿನ್ನಾರಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದಿರುವ ಕನ್ನಡದ ಸೇವೆ ಎಲ್ಲರಿಗೂ ಅನುಕರಣೀಯ” ಎಂದರು. ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು…