Author: roovari

ರಂಗ ಚಿನ್ನಾರಿ ಕಾಸರಗೋಡು(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕಾಸರಗೋಡು ಚಿನ್ನಾ ಅವರ ಸಂಚಾಲಕತ್ವದಲ್ಲಿ , ಕಾಸರಗೋಡು ಕನ್ನಡ ಹಬ್ಬದ ಪ್ರಯುಕ್ತ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ, ಕಾಟುಕುಕ್ಕೆ ಭಜನಾ ಟ್ರಸ್ಟ್ (ರಿ) ಪ್ರಾಯೋಜಕತ್ವದಲ್ಲಿ ತಾರೀಖು 26.06.23 ಶನಿವಾರದಂದು ಸಾಯಂಕಾಲ 5.30ರಿಂದ ಶ್ರದ್ಧಾ ನಾಯರ್ಪಳ್ಳ ಹಾಗೂ ಮೇಧಾ ನಾಯರ್ಪಳ್ಳ ಸಹೋದರಿಯರಿಂದ ‘ಕರ್ಣಾವಸಾನ’ ಕಥಾನಕದ ಗಮಕ ವಾಚನ ವ್ಯಾಖ್ಯಾನ ಹಾಗೂ ಕಲಾರತ್ನ ಶ್ರೀ ಶಂ.ನಾ.ಅಡಿಗ ಇವರಿಂದ ‘ಶ್ರೀ ಸುಬ್ರಹ್ಮಣ್ಯ ಮಹಿಮೆ ಎಂಬ ಹರಿಕಥೆ ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ ಪುಣಿಚಿತ್ತಾಯರು ನೆರವೇರಿಸಿದರು. ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರರಾದ ತಾರಾನಾಥ್ ರೈ ಪಡ್ಡಂಬೈಲು ಗುತ್ತು ವಹಿಸಿದ್ದರು. ಗಡಿಪ್ರದೇಶದಲ್ಲಿ ಕನ್ನಡ ಕುಂಠಿತವಾಗುತ್ತಿರುವ ಇಂತಹ ಸಂದರ್ಭದಲ್ಲಿ ರಂಗ ಚಿನ್ನಾರಿಯು ಮಾಡುತ್ತಿರುವ ಈ ಕನ್ನಡ ಹಬ್ಬದ ಉತ್ಸವವು ನಿಜಕ್ಕೂ ಶ್ಲಾಘನೀಯ. ಇವರ ನಿರಂತರವಾದ ಕನ್ನಡ ಚಟುವಟಿಕೆಗಳು ಇತರರಿಗೆ ಮಾದರಿಯಾಗಬೇಕೆಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ…

Read More

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಗೀತ ರಚನೆಕಾರ, ನಿರ್ಮಾಪಕ ಮತ್ತು ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್ ದಿನಾಂಕ : 27-06-2023ರಂದು ನಿಧನರಾಗಿದ್ದಾರೆ. ಮೃತರಿಗೆ 90 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಪುತ್ರ ಇದ್ದಾರೆ. ಸಿ.ವಿ.ಶಿವಶಂಕ‌ರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ಅವರು 1933 ಮಾರ್ಚ್ 23ರಂದು ತಿಪಟೂರಿನಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷ್ಮಮ್ಮ. ತಂದೆ ರಾಮಧ್ಯಾನಿ ವೆಂಕಟ ಕೃಷ್ಣಭಟ್ಟ. ಇವರು ರಚಿಸಿರುವ ಚಿತ್ರಗೀತೆಗಳಲ್ಲಿ ‘ಸಿರಿವಂತನಾದರೂ ಕನ್ನಡ ನಾಡಲ್ಲೇ ಇರುವೆ’, ‘’ಬೆಳೆದಿದೆ ನೋಡಾ ಬೆಂಗಳೂರು ನಗರ’, ‘ಹೋಗದಿರಿ ಸೋದರರೇ, ಹೋಗದಿರಿ ಬಂಧುಗಳೇ’ ಮುಂತಾದ ಗೀತೆಗಳನ್ನು ರಚಿಸಿ ಖ್ಯಾತಿ ಗಳಿಸಿದ್ದರು. ಚಿಕ್ಕಂದಿನಿಂದ ಸಾಹಿತ್ಯ, ನಾಟಕ, ನಟನೆಯತ್ತ ಒಲವಿದ್ದ ಶಿವಶಂಕರ್, ವಂಶಪಾರಂಪರ್ಯವಾದ ಪೌರೋಹಿತ್ಯ, ಜ್ಯೋತಿಷ್ಯ, ಶಾಸ್ತ್ರಾಧ್ಯಯನವಿರಲಿ ಪ್ರೌಢಶಿಕ್ಷಣವನ್ನೂ ಅರ್ಧದಲ್ಲೇ ಬಿಟ್ಟು ಗುಬ್ಬಿ ವೀರಣ್ಣ ನಾಟಕ ಮಂಡಲಿ, ಅಲ್ಲಿಂದ ಸುಬ್ಬಯ್ಯನಾಯ್ಡುರವರ ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರಿದರು. ಹಲವಾರು ನಾಟಕಗಳನ್ನು ಬರೆದು, ಪ್ರಕಟಿಸಿ, ನಟಿಸಿ, ಭೇಷ್ ಎನಿಸಿಕೊಂಡವರು. ಹೊರಗಡೆ ಕಲ್ಲು ತೂರಾಟವಿದ್ದರೂ, ಮದರಾಸಿನಲ್ಲಿ ಕನ್ನಡ ನಾಟಕಗಳನ್ನಾಡಿಸಿದ ಕೀರ್ತಿಯೂ ಇವರಿಗಿತ್ತು.…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 24-06-2023ರ ಶನಿವಾರದಂದು ನಡೆಯಿತು. ಖ್ಯಾತ ಸಂಸ್ಕೃತ ವಿದ್ವಾಂಸರು ಹಾಗೂ ಉಪನ್ಯಾಸಕರೂ ಆಗಿರುವ ಶ್ರೀ ಜಿ.ಪಿ.ಪ್ರಭಾಕರ್ ತುಮರಿಯವರು ‘ ಸಂಸ್ಕೃತ ನಾಟಕಗಳು ಮತ್ತು ಆಧುನಿಕ ರಂಗಭೂಮಿ -ಹೊಸ ಸಾಧ್ಯತೆಗಳು ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ “ವೇದಮೂಲವಾದ ನಮ್ಮ ಎಲ್ಲಾ ಕಲಾಪ್ರಕಾರಗಳಲ್ಲಿ ನಾಟಕವೂ ಕೂಡಾ ಒಂದಾಗಿದ್ದು ವೇದಗಳಲ್ಲಿ ನಾಟಕದ ಬೀಜರೂಪದ ಅನೇಕ ಘಟನೆಗಳನ್ನು ಮತ್ತು ಕಥೆಗಳನ್ನು ಗಮನಿಸಬಹುದಾಗಿದ್ದು ಸಂಸ್ಕೃತ ನಾಟಕ ಪರಂಪರೆಯಲ್ಲಿರುವ ಕ್ರಾಂತಿಕಾರಕ ಹೆಜ್ಜೆಗಳನ್ನು ಕೂಡಾ ಗುರುತಿಸಬಹುದಾಗಿದೆ. ಭಾಸ, ಕಾಳಿದಾಸ ಮುಂತಾದ ಅನೇಕ ಕವಿಗಳು ರಚಿಸಿದ ಸಂಸ್ಕೃತ ನಾಟಕಗಳು ರಂಗದಲ್ಲಿ ಯಶಸ್ವಿಯಾಗಿದ್ದು ಭಕ್ತಿ ಚಳವಳಿಯ ಕಾಲಘಟ್ಟದಲ್ಲಿಯೂ ಸಂಸ್ಕೃತ ನಾಟಕಗಳು ಮತ್ತು ಕಾವ್ಯ ಪರಂಪರೆ…

Read More

ಮಂಜೇಶ್ವರ : ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಕಾಲೇಜಿನ ಸಭಾಭವನದಲ್ಲಿ ದಿನಾಂಕ 24-06-2023ರಂದು ಆಯೋಜಿಸಿದ್ದ ಒಂದು ದಿನದ ‘ಗಡಿನಾಡಿನಲ್ಲಿ ಕನ್ನಡೋತ್ಸವ’ ಇದರ ಅಂಗವಾಗಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರಿನ ಸಂಶೋಧಕಿ ಡಾ. ಲಕ್ಷ್ಮೀ ಪ್ರಸಾದ್ ಇವರು ಮಾತನಾಡುತ್ತಾ “ನಮಗೆ ಮಾತೃಭಾಷೆಯಲ್ಲೇ ಶಿಕ್ಷಣ ಬೇಕು. ಈಗ ಕನ್ನಡಕ್ಕೆ ಕುತ್ತು ಬಂದಿದೆ. ಇದು ಇಲ್ಲಿ ಮಾತ್ರವಲ್ಲ ವಿಶ್ವದ 200 ಭಾಷೆಗಳು ಕೆಂಪು ಪಟ್ಟಿಯಲ್ಲಿವೆ. ಇದು ತುಂಬಾ ಆತಂಕದ ವಿಚಾರ. ಇನ್ನು ಕೆಲವೇ ಸಮಯದಲ್ಲಿ ಈ ಭಾಷೆಗಳು ಮಾಯವಾಗಲಿವೆ. ಆ ಪಟ್ಟಿಯಲ್ಲಿ ತುಳು, ಕನ್ನಡ ಕೂಡಾ ಇದೆ. ಯಾಕೆ ಹೀಗಾಗುತ್ತಿದೆ ಎಂದು ನಾನು ಯೋಚಿಸಿದೆ. ಕನ್ನಡದ ಕುತ್ತಿಗೆ ಆ ಭಾಷೆ ಕಾರಣ ಈ ಭಾಷೆ ಕಾರಣವೆಂದು ನಾನು ಭಾವಿಸಿದ್ದೆ. ಕೇರಳದಲ್ಲಿ ಕನ್ನಡಕ್ಕೆ ಆಶ್ರಯವೇ ಇಲ್ಲವೆಂದು ಕೊಂಡಿದ್ದೆ. ಬೇರೆಯವರ ಬಗ್ಗೆ…

Read More

ಬೆಂಗಳೂರು: ದಿನಾಂಕ 23-06-2023 ರಂದು 80 ವಸಂತಗಳನ್ನು ಕಂಡ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ಕನ್ನಡ ಕಾವ್ಯಕ್ಕೆ ಹೊಸ ನೆಲೆಯನ್ನು ನೀಡಿದವರು. ತಮ್ಮ ಎಲ್ಲಾ ಅನುಭವಗಳನ್ನು ಸೂಕ್ಷ್ಮಗಳನ್ನು ಕವಿತೆಯ ಮೂಲಕವೇ ಹೇಳಿಕೊಂಡು ಬಂದಿರುವವರು. ಹಾಗಾಗಿ ʻಇದನ್ನು ನಿಲ್ಲಿಸಿದರೆ ನನ್ನ ಮಾತೂ ನಿಂತು ಹೋದಂತೆʼ ಎನ್ನುತ್ತಲೇ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಎಚ್‌.ಎಸ್‌.ವಿ. ಅವರಿಗೆ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅವರ ಸ್ವಗೃಹದಲ್ಲಿ ಅಭಿನಂದಿಸಿ ಶುಭ ಹಾರೈಸಿದರು. ಎಚ್.ಎಸ್.ವಿಯವರ ಬದುಕಿನ ಯಾನದತ್ತ  ಒಮ್ಮೆ ಕಣ್ಣು ಹಾಯಿಸಿದರೆ ಅವರದ್ದು ಪ್ರತಿ ಹಂತವೂ ಹೋರಾಟವೇ. ಸ್ವಯಂ ಪರಿಶ್ರಮದಿಂದ  ಎತ್ತರಕ್ಕೆ ಏರಿ, ಇನ್ನೇನು ಬದುಕು ಸಹನೀಯ ಎನ್ನುವಾಗ ಮಡದಿಯ ಅಗಲುವಿಕೆ, ಮಗನ ಅನಾರೋಗ್ಯ ಹೀಗೆ ಶೋಕದ ಸೆಲೆಗಳು ಅವರನ್ನು ಬೆನ್ನಟ್ಟಿದ್ದವು. ಅದನ್ನು ಸಹನೀಯವಾಗಿಸಿ ಬದುಕಿನ ‘ಸ್ಥಿತಿ’ಯನ್ನಾಗಿಸುವುದು ಎಚ್.ಎಸ್.ವಿ ಕಾವ್ಯದಲ್ಲಿ  ಹೆಚ್ಚು ಎದ್ದು ಕಾಣುತ್ತದೆ. ‘ಚಿನ್ನಾರಿ ಮುತ್ತ’ದ ಮೂಲಕ ಮಕ್ಕಳ ಮುಗ್ಧ ಲೋಕವನ್ನು…

Read More

ವರ್ಕಾಡಿ : ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು (ರಿ) , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜೂನ್ 24ರಿಂದ ಜೂನ್ 30ರವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಎರಡನೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಭಕ್ತಿ, ಭಾವ, ಜನಪದಗೀತೆಗಳ ‘ಕನ್ನಡ ಡಿಂಡಿಮ’ ದಿನಾಂಕ : 25-06-2023ರಂದು ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಜರಗಿತು. ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಪ್ರಾಯೋಜಿಸಿದ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಷ್ ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವರ್ಕಾಡಿ ಚರ್ಚ್‌ನ ಗುರುಗಳಾದ ರೆ|ಪಾ| ಬಾಸಿಲ್‌ವಾಜ್ ಆಶೀರ್ವದಿಸಿ ಮಾತನಾಡುತ್ತಾ “ರಂಗ ಚಿನ್ನಾರಿ ಸಂಸ್ಥೆ ಕಳೆದೆರಡು ದಶಕಗಳಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಕರ್ನಾಟಕ ಸರಕಾರ ಉತ್ತಮವಾಗಿ ಸಹಕಾರ ನೀಡುತ್ತಿರುವುದು ಸಂತಸದ…

Read More

ಕಣಿಯೂರು : ಕನ್ಯಾನದ ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಕಣಿಯೂರಿನಲ್ಲಿ ದಿನಾಂಕ : 25-06-2023 ಆದಿತ್ಯವಾರ ಅಪರಾಹ್ನ ಗಂಟೆ 2.30ಕ್ಕೆ ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು ಇವರಿಂದ ಮಾಸದ 9ನೇ ತಾಳಮದ್ದಳೆ ಕಾರ್ಯಕ್ರಮ ‘ಭೀಷ್ಮ ಪರ್ವ’ವು ಯಶಸ್ವಿಯಾಗಿ ನಡೆಯಿತು. ಹಿಮ್ಮೇಳದಲ್ಲಿ ಶ್ರೀಗಳಾದ ಸೂರ್ಯನಾರಾಯಣ ಭಟ್ ಕಣಿಯೂರು, ಡಾ. ವಿಶ್ವೇಶ್ವರ ಭಟ್ ಕನ್ಯಾನ, ಪ್ರಶಾಂತ್ ಶೆಟ್ಟಿ ವಗೆನಾಡು, ಮತ್ತು ಮಾ. ಅದ್ವೈತ್ ಕನ್ಯಾನ ಭಾಗವಹಿಸಿದರು. ಅರ್ಥಧಾರಿಗಳು ಶ್ರೀಗಳಾದ ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀಕ್ಷೇತ್ರ ಕಣಿಯೂರು, ಪಕಳಕುಂಜ ಶ್ಯಾಂ ಭಟ್, ವೆಂಕಟಕೃಷ್ಣ ಶರ್ಮಾ ಅಳಕೆ, ಜಯರಾಮ ಭಟ್ ದೇವಸ್ಯ ಮತ್ತಿತರರು ಭಾಗವಹಿಸಿದ್ದ ಈ ಕಾರ್ಯಕ್ರಮವು ಕಲಾಸಕ್ತರನ್ನು ರಂಜಿಸಿತು.

Read More

ಮೀಯಪದವು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ‘ರಂಗ ಚಿನ್ನಾರಿ’ ಕಾಸರಗೋಡು (ರಿ) ಆಯೋಜಿಸಿ, ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬವು ಜೂನ್ 24 ರಿಂದ ಜೂನ್ 30ರವರೆಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ದಿನಾಂಕ 24-06-2023ರಂದು ಶ್ರೀ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮೀಯಪದವಿನ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ವಿದ್ಯಾಸಂಸ್ಥೆಯ ‘ನಾರಾಯಣೀಯಂ’ ವೇದಿಕೆಯಲ್ಲಿ ವಿಕಾಸ ಸಂಘಟನೆಯ ಆಶ್ರಯದಲ್ಲಿ ದೀಪ ಬೆಳಗಿಸಿ ನೆರವೇರಿಸಿದರು. ಆಶಿರ್ವದಿಸಿ ಮಾತನಾಡಿದ ಎಡನೀರು ಶ್ರೀಗಳು ‘’ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಿತ್ಯ ಕನ್ನಡ ಹಬ್ಬ ನಡೆಯಲಿ, ಜಿಲ್ಲೆಯ ಗ್ರಾಮ ಗ್ರಾಮಗಳಲ್ಲೂ ಕನ್ನಡ ಧ್ವನಿ ಮೊಳಗುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು. ರಂಗ ಚಿನ್ನಾರಿ ಕಾಸರಗೋಡು ಸಂಸ್ಥೆ ಹಲವು ವರ್ಷಗಳಿಂದ ಕನ್ನಡದ ಸೇವೆಯನ್ನು ನಿರಂತರ ನಡೆಸುತ್ತಾ ಬಂದಿದೆ, ಸಂಸ್ಥೆಯ ರೂವಾರಿಗಳಾದ…

Read More

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಶಾನಭಾಗ ಇವರು ಸಂಪಾದಿಸಿದ ‘ಆನ್ವೀಕ್ಷಿಕೀ‘ ಸಮಕಾಲೀನ ಆಖ್ಯಾನಗಳು ಪುಸ್ತಕ ಲೋಕಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 28-06-2023ರ ಸಂಜೆ 06.30ಕ್ಕೆ ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯಲಿದೆ. ಮಂಗಳೂರು ಮಹಾನಗರದ ಮಾನ್ಯ ಸಂಘಚಾಲಕರಾದ ಡಾ.ಸತೀಶ್ ರಾವ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಪ್ರಾಧ್ಯಾಪಕರು ಮತ್ತು ಖ್ಯಾತ ಚಿಂತಕರಾದ ಡಾ. ಅಜಕ್ಕಳ ಗಿರೀಶ್ ಭಟ್ ವಕ್ತಾರರಾಗಿ ಭಾಗವಹಿಸಲಿದ್ದಾರೆ.

Read More

ಮುಂಬಯಿ : ಡೊಂಬಿವಲಿ ಪೂರ್ವದ ಮಂಜುನಾಥ ಸಭಾಗೃಹದಲ್ಲಿ ದಿನಾಂಕ :18-06-2023ರಂದು ನಡೆದ ಅನಿತಾ ಪಿ. ತಾಕೊಡೆಯವರ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿಯವರು “ನಮ್ಮ ಮುಖ್ಯ ಉದ್ದೇಶವೇ ಕನ್ನಡವನ್ನು ಉಳಿಸಿ ಬೆಳೆಸುವುದು. ಕನ್ನಡವು ನಿಂತ ನೀರಾಗಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಇದರ ಸಲುವಾಗಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘದ ಮುಖಾಂತರ ಸಹಕರಿಸುತ್ತಿದ್ದೇವೆ. ಇಂದಿನ ಕಾರ್ಯಕ್ರಮಕ್ಕೆ ಕನ್ನಡದ ಅಭಿಮಾನಿಗಳ ಬಳಗವೇ ಬಂದಿದೆ. ರಾಜಕಾರಣಿಗಳ ಹಿಂದೆ ಜನ ಹೋಗುವುದನ್ನು ನೋಡಿದ್ದೇನೆ. ಕವಿಗಳಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗವಿದೆಯೆಂದು ಇವತ್ತೇ ಗೊತ್ತಾಗಿದ್ದು. ಅನಿತಾ ತಾಕೊಡೆಯವರು ನಮ್ಮ ಡೊಂಬಿವಲಿಯ ಹೆಮ್ಮೆ. ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಸಾಹಿತ್ಯ ಕೈಂಕರ್ಯಕ್ಕೆ ಕರ್ನಾಟಕ ಸಂಘದ ಬೆಂಬಲ ಯಾವತ್ತಿಗೂ ಇದೆ” ಎನ್ನುತ್ತ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡುತ್ತ ಬಂದವರನ್ನು ಸ್ಮರಿಸಿದರು. ಸಂಘದ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ,…

Read More