Subscribe to Updates
Get the latest creative news from FooBar about art, design and business.
Author: roovari
ಮೂಡುಬಿದಿರೆ : ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗಭೂಮಿಯ ಅಭಿನಯ, ರಂಗಸಂಗೀತ, ವಾದ್ಯ ಪರಿಕರಗಳ ನಿರ್ವಹಣೆ, ರಂಗ ತಾಂತ್ರಿಕತೆ ಮತ್ತು ನಾಟಕ ಇವುಗಳಲ್ಲಿ ಆಸಕ್ತಿಯಿದ್ದು, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರೌಢಶಾಲೆ, ಪಿ.ಯು.ಸಿ. (ಕಲಾ ಮತ್ತು ವಾಣಿಜ್ಯ) ಹಾಗೂ ಪದವಿ ಕಾಲೇಜು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಆಸಕ್ತರು ದಿನಾಂಕ 30-04-2024ರ ಒಳಗೆ ತಮ್ಮ ಸ್ವ-ವಿವರಗಳನ್ನು ಕಳಿಸಿಕೊಡುವುದು. ಹೆಚ್ಚಿನ ವಿವರಗಳಿಗೆ ಡಾ. ಜೀವನ್ ರಾಂ ಸುಳ್ಯ – 9448215946 ಇವರನ್ನು ಸಂಪರ್ಕಿಸಬಹುದು.
ಪುತ್ತೂರು : ಪುತ್ತೂರು ಸಮೀಪದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು ಇದರ ಪುನರ್ ಪ್ರತಿಷ್ಠಾ ಆಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ದಿನಾಂಕ 22-04-2024ರಂದು ‘ಶ್ರೀ ರಾಮ ದರ್ಶನ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್, ಕಿಶೋರಿ ದುಗ್ಗಪ್ಪ ನಡುಗಲ್ಲು, ಹರಿಣಾಕ್ಷೀ ಜೆ. ಶೆಟ್ಟಿ, ಮನೋರಮಾ ಜಿ. ಭಟ್, ಭಾರತೀ ಜಯರಾಂ ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಬ್ರಹ್ಮಕಲಶೋತ್ಸವದ ಕಾರ್ಯಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು. ಅಧ್ಯಕ್ಷ ಬುಡಿಯಾರು ಬಾಲಕೃಷ್ಣ ರೈ ಪ್ರಾಯೋಜಿಸಿದ್ದರು.
ಬೆಂಗಳೂರು : ಕಲಾಸಿಂಧು ಅಕಾಡೆಮಿ ಆಫ್ ಡಾನ್ಸ್ ಆ್ಯಂಡ್ ರಿಲೇಟೆಡ್ ಆರ್ಟ್ಸ್ ಇವರ ವತಿಯಿಂದ ಕುಮಾರಿ ಅನಘಾ ಕೆ. ಇವರ ‘ರಂಗಾರ್ಪಣೆ’ ನೃತ್ಯ ಕಾರ್ಯಕ್ರಮವು ದಿನಾಂಕ 26-04-2024ರಂದು ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ಜಯನಗರ, 8ನೇ ಬ್ಲಾಕ್, 38ನೇ ಕ್ರಾಸ್, 1ನೇ ಮೈನ್ ರೋಡ್, ಜೆ.ಎಸ್.ಎಸ್. ಆಡಿಟೋರಿಯಮ್ ಇಲ್ಲಿ ನಡೆಯಲಿದೆ. ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀಮತಿ ಟಿ.ಎಸ್. ಸತ್ಯವತಿ, ಭರತನಾಟ್ಯ ಕಲಾವಿದ ಶ್ರೀ ಪ್ರವೀಣ್ ಕುಮಾರ್ ಮತ್ತು ಸಂಶೋಧನಾ ವಿದ್ವಾಂಸ, ಶಿಕ್ಷಣತಜ್ಞ ಮತ್ತು ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಶಿಲ್ಪಾ ನಂಜಪ್ಪ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 20-04-2024 ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ತೈತ್ತಿರೀಯ ಉಪನಿಷತ್’ ಇದರ ಕುರಿತು ಉಪನ್ಯಾಸ ನೀಡಿದ ನಾಡಿನ ಪ್ರಸಿದ್ಧ ವಿದ್ವಾಂಸ ಹಾಗೂ ವಾಗ್ಮಿಯಾಗಿರುವ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ “ಶೈಕ್ಷಣಿಕ ಮನೋವಿಜ್ಞಾನದ ನೆಲೆಯಲ್ಲಿ ಬಹಳ ಒಳನೋಟವನ್ನು ನೀಡುವ ಉಪನಿಷತ್ತೇ ‘ತೈತ್ತಿರೀಯ ಉಪನಿಷತ್’. ಲೌಕಿಕವನ್ನು ಅಲ್ಲಗಳೆಯದೆ ಪಾರಲೌಕಿಕ ಚಿಂತನೆಗಳ ರಹಸ್ಯಗಳನ್ನು ಪ್ರಾಚೀನ ಉಪನಿಷತ್ತುಗಳು ನಮಗೆ ತಿಳಿಸಿಕೊಡುತ್ತವೆ. ತೈತ್ತಿರೀಯ ಉಪನಿಷತ್ತಿನಲ್ಲಿ ಶಿಕ್ಷಾವಲ್ಲಿ, ಆನಂದವಲ್ಲಿ ಮತ್ತು ಭೃಗುವಲ್ಲಿ ಎಂಬ ಮೂರು ಪ್ರಮುಖ ಭಾಗಗಳಿದ್ದು ಶಿಕ್ಷಾವಲ್ಲಿಯಲ್ಲಿ ಶಿಕ್ಷಣ ಎಂದರೆ ಏನು? ಗುರುಶಿಷ್ಯರ ಸಂಬಂಧದ ವಿವರಣೆ, ಕಲಿಕಾ ವಿಧಾನದ ಬಗ್ಗೆ ಜ್ಞಾನವನ್ನು ಹೊಂದಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಗ್ಗೆ ಹೀಗೆ ಶಿಕ್ಷಣದ ಕುರಿತಾದ ಸಂಪೂರ್ಣ ಮಾಹಿತಿಯಿದ್ದು, ಆನಂದವಲ್ಲಿಯಲ್ಲಿ…
ಕುಂಬಳೆ : ಕಾಸರಗೋಡಿನ ರಂಗ ಚೇತನದ ವತಿಯಿಂದ ಕನ್ನಡ ಶಾಲಾ ವಿದ್ಯಾರ್ಥಿಗಳ ರಂಗ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯಲ್ಲಿ ಅಯೋಜಿಸಲಾದ ‘ಚಿತ್ತಾರ 2024’ ಎಂಬ ತ್ರಿದಿನ ಸಹವಾಸ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 12-04-2024ರಂದು ನಡೆಯಿತು. ರಂಗ ಚೇತನದ ಅಧ್ಯಕ್ಷ ಬಾಲಕೃಷ್ಣ ಅಡೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಅವರು ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್, ಯುಪಿ ಶಾಲಾ ಮುಖ್ಯೋಪಾಧ್ಯಾಯ ಎನ್. ಮಹಾಲಿಂಗ ಭಟ್, ಮಾತೃ ಸಂಘದ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಗೋಪಾಲ ಮಾಸ್ತರ್ ಕಾಟುಕುಕ್ಕೆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶುಭನುಡಿಗೈದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಜೀವನ್‌ಕುಮಾರ್ ಚಿಗುರುಪಾದೆ, ಸಾವಿತ್ರಿ ಟೀಚರ್ ಮೀಯಪದವು, ರಾಮಮೋಹನ್ ಚೆಕ್ಕೆ ಡಿಡಿಇ ಎನ್. ನಂದೀಕೇಶನ್, ರಘರಾಮ ಭಟ್, ಚಿಣ್ಣರ ಚಿಲುಮೆಯ ರಾಜೇಶ್…
ಉಪ್ಪಿನಂಗಡಿ : ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಪಾತಾಳ ಇವರಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡ ಮಾಡುವ ‘ಪಾತಾಳ ಕಲಾ ಮಂಗಳ ಪ್ರಶಸ್ತಿ’ಯನ್ನು ಈ ಬಾರಿ ಶ್ರೀ ಸಂಜಯ್ ಕುಮಾರ್ ಗೋಣಿಬೀಡು, ಶ್ರೀ ಸರವು ರಮೇಶ್ ಭಟ್ ಮತ್ತು ಶ್ರೀ ರಮೇಶ ಕುಲಶೇಖರ ಅವರಿಗೆ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಸಂಸ್ಥಾಪಕ ಪಾತಾಳ ವೆಂಕಟರಮಣ ಭಟ್ ತಿಳಿಸಿದ್ದಾರೆ. ದಿನಾಂಕ 26-04-2024ರಂದು ರಾತ್ರಿ ಉಪ್ಪಿನಂಗಡಿಯ ಪಾತಾಳ ಶ್ರೀ ದುರ್ಗಾಗಿರಿ ಭಜನಾ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಕೆ. ಶ್ರೀಪತಿ ಭಟ್ ಮೂಡಬಿದ್ರೆ, ಶ್ರೀ ಜನಾರ್ಧನ ಹಂದೆ ಮಂಗಳೂರು ಅವರ ಗೌರವ ಉಪಸ್ಥಿತಿಯಲ್ಲಿ ಉಜಿರೆ ಅಶೋಕ್ ಭಟ್ ಅವರ ಅಭಿನಂದನಾ ನುಡಿಯೊಂದಿಗೆ ‘ಪಾತಾಳ ಕಲಾ ಮಂಗಳ ಪ್ರಶಸ್ತಿ’ಯನ್ನು ಪ್ರಧಾನ ಮಾಡಲಾಗುವುದು. ಇದೇ ವೇಳೆ ಸ್ಥಳೀಯ ಸಮಾಜಸೇವಕರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಬೆತ್ತೋಡಿ ಲೋಕೇಶ್…
ಬೆಂಗಳೂರು : ಭಾರತೀಯ ಪ್ರದರ್ಶನ ಕಲಾಪ್ರಕಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ SEPI ಇದರ ಸಹಸಂಸ್ಥೆಯಾದ ‘ಸಂಗಮವು’ ಆಯೋಜಿಸಿದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನವು ದಿನಾಂಕ 20-04-2024ರಂದು ಬೆಂಗಳೂರು ದೊಂಬ್ಲೂರಿನಲ್ಲಿರುವ ‘ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್’ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕರಲೊಬ್ಬರಾದ ಶಿಬುಲಾಲ್‌ರವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಜೊತೆಯಲ್ಲಿ ಶಿಬುಲಾಲ್‌ರವರ ಪತ್ನಿ ಕುಮಾರಿ ಶಿಬುಲಾಲ್ ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಭಾಗವತ ಲಂಬೋದರ ಹೆಗಡೆ, ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ಉಪಸ್ಥಿತರಿದ್ದರು. ‘ಯಕ್ಷದೇಗುಲ’ ಬೆಂಗಳೂರು ತಂಡದವರಿಂದ ನಡೆದ ಈ ಪ್ರದರ್ಶನದಲ್ಲಿ ನುರಿತ ಕಲಾವಿದರಾದ ಲಂಬೋದರ ಹೆಗಡೆ, ರಾಜೇಶ್ ಆಚಾರ್ಯ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಮನೋಜ್ ಭಟ್, ಶ್ರೀನಿಧಿ, ಉದಯ ಭೋವಿ, ಪನ್ನಗ ಮಯ್ಯ, ಶ್ರೀರಾಮ ಹೆಬ್ಬಾರ್ ಇವರಿಂದ ಕೆ. ಮೋಹನ್ ನಿರ್ದೇಶನದಲ್ಲಿ ಮಧುಕುಮಾರ್ ಬೋಳಾರ್ ವಿರಚಿತ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ಬಲುವಾಗಿ ರಂಜಿಸಿತು. ಮೊದಲಿಗೆ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ‘ಧೀರ ವೈಯ್ಯಾರೋ ಬಹುಪರಾಕ್’…
ಸುರತ್ಕಲ್ : ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನ ರೋಟರಾಕ್ಟ್ ಕ್ಲಬ್, ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ಶಾಸ್ತ್ರ ವಿಭಾಗ ಹಾಗೂ ರೋಟರಿ ಕ್ಲಬ್ ಸುರತ್ಕಲ್ ಇದರ ಆಶ್ರಯದಲ್ಲಿ ‘ಮೈಂಡ್ ಮ್ಯಾಜಿಕ್’ ವಿಶೇಷ ಕಾರ್ಯಕ್ರಮವು ದಿನಾಂಕ 17-04-2024ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿರುವ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಭಾಗವಹಿಸಿದ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ “ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಸರಳ ತಂತ್ರಗಳ ಮೂಲಕ ಮನಸ್ಸಿನ ಏಕಾಗ್ರತೆ ಮತ್ತು ದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.” ಎಂದರು. ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಂತ್ರಗಳನ್ನು ಸರಳವಾದ ಜಾದೂಗಳ ಹಿನ್ನಲೆಯಲ್ಲಿ ಪ್ರಸ್ತುತ ಪಡಿಸಿದರು. ಸುರತ್ಕಲ್ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ. ಯೋಗೀಶ್ ಕುಳಾಯಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಮನಸ್ಸಿನ ಏಕಾಗ್ರತೆಯ ವಿಧಾನಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಲಿಕೆಯಲ್ಲಿ ಸಾಕರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.” ಎಂದರು. ಕಾರ್ಯಕ್ರಮದಲ್ಲಿ ಉಪ…
ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ಸಮಾಜಂ ಸಂಘದ ವತಿಯಿಂದ “ಕಲೋತ್ಸವಂ- 2024” ದಿನಾಂಕ 22-04-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ “ಕೇರಳದವರು ತಾವು ಎಲ್ಲೇ ನೆಲೆಸಿದ್ದರೂ ತಮ್ಮ ಆಚರಣೆ, ಸಂಸ್ಕೃತಿಯನ್ನು ಸದಾ ಪೋಷಿಸುತ್ತಾ ಸಾಗುತ್ತಾರೆ. ಕರಾವಳಿ ಹಾಗೂ ಕೇರಳದ ಆಚರಣೆಗಳಲ್ಲಿ, ಜನರ ನಡವಳಿಕೆಯಲ್ಲಿ ಅನೇಕ ಹೋಲಿಕೆಗಳು ಕಂಡು ಬರುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ಮಲಯಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಸಹಜೀವನ ನಡೆಸುತ್ತಿದ್ದಾರೆ. ನಮ್ಮ ಪ್ರತಿಷ್ಠಾನವು ಕೇರಳದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಿ ಪ್ರಚುರ ಪಡಿಸಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳ ಎಲ್ಲಾ ಸಾಂಸ್ಕೃತಿಕ ಆಚರಣೆಗಳಿಗೆ ಸರಿಯಾದ ಅವಕಾಶವನ್ನು ಕಲ್ಪಿಸಿದೆ. ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮದ ಜನರ ಆಚರಣೆಗಳಿಗೆ ಸಮಾನ ವೇದಿಕೆ…
ಕಾಸರಗೋಡು : ಬದಿಯಡ್ಕದ ಸಮೀಪದ ಮೂಲಡ್ಕ ಉದನೇಶ್ವರ ಪ್ರಸಾದ್ ಇವರ ಮಾತೃಶ್ರೀ ಲಕ್ಷ್ಮೀ ಅಮ್ಮನ 84ನೇ ಹುಟ್ಟುಹಬ್ಬದ ಧಾರ್ಮಿಕ ಕಾರ್ಯಕ್ರಮದ ಬಾಬ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆಯು ದಿನಾಂಕ 20-04-2024ರಂದು ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ, ಶುಭಾ ಗಣೇಶ್, ಕಿಶೋರಿ ದುಗ್ಗಪ್ಪ ನಡುಗಲ್ಲು, ಮನೋರಮಾ ಜಿ. ಭಟ್ ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮೂಲಡ್ಕ ಉದನೇಶ್ವರ ಪ್ರಸಾದ್ ವಂದಿಸಿದರು.