Subscribe to Updates
Get the latest creative news from FooBar about art, design and business.
Author: roovari
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಆಗಸ್ಟ್ ತಿಂಗಳ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರು ನೇತಾಜಿ ಕಮಿಟಿ ಫ್ರೆಂಡ್ಸ್ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪ್ರಯೋಜಕತ್ವದಲ್ಲಿ ‘ವೈವಿಧ್ಯಮಯ ಕಾರ್ಯಕ್ರಮ’ವನ್ನು ದಿನಾಂಕ 15 ಆಗಸ್ಟ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸುಳ್ಯ : ‘ಚಂದನ ಸಾಹಿತ್ಯ ವೇದಿಕೆ’ಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಇವರಿಗೆ ಸುಳ್ಯದ ‘ಭೀಮರಾವ್ ವಾಷ್ಠರ್ ಅಭಿಮಾನಿ ಬಳಗ’ದ ವತಿಯಿಂದ ‘ಅಭಿನಂದನಾ ಕಾರ್ಯಕ್ರಮ’ ಮಾಡುವ ಬಗ್ಗೆ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 10 ಆಗಸ್ಟ್ 2025ರಂದು ಪೂರ್ವಭಾವಿ ಸಭೆ ಜರುಗಿತು. ದಿನಾಂಕ 24 ಆಗಸ್ಟ್ 2025ರಂದು ನಡೆಸಲಾಗುವ ಸಮಾರಂಭದಲ್ಲಿ ‘ಅಭಿನಂದನಾ ಕಾರ್ಯಕ್ರಮ’ ಜೊತೆ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಗಳು ಕ.ಸಾ.ಪ. ಕನ್ನಡ ಭವನದಲ್ಲಿ ದಿನಪೂರ್ತಿ ನಡೆಯಲಿವೆ ಎಂದು ವಾಷ್ಠರ್ ಅಭಿನಂದನಾ ಬಳಗದ ನೇತೃತ್ವ ವಹಿಸಿದ್ದ ಪೆರುಮಾಳ್ ಲಕ್ಷ್ಮಣ್ ಇವರು ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸುಳ್ಯದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಉಮಾದೇವಿ ಇವರು ರಕ್ಷಾ ಬಂಧನದ ನಿಮಿತ್ತ ರಕ್ಷಾಕವಚವನ್ನ ಕಟ್ಟಿ ಆಶೀರ್ವದಿಸಿ, ಧ್ಯಾನದ ಉಪಯೋಗವನ್ನು ವಿವರಿಸಿ, ಎಚ್. ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮತ್ತು ವೇದಿಕೆಯಲ್ಲಿ ತಮಗೆ ನೀಡುತ್ತಿದ್ದ ಅವಕಾಶವನ್ನು ನೆನಪಿಸಿಕೊಂಡರು. ಹಿರಿಯ ಸಾಹಿತಿಗಳಾದ ವೈಲೇಶ್ ಪಿ.ಎಸ್. ಕೊಡಗು ಇವರು ಸಭೆಯನ್ನು ಉದ್ದೇಶಿಸಿ “ಚಂದನ…
ವಿರಾಜಪೇಟೆ : ಮನೆ ಮನೆ ಕಾವ್ಯ ಗೋಷ್ಠಿ ಪರಿಷತ್ತು ಮತ್ತು ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಇವರ ಸಹಯೋಗದೊಂದಿಗೆ ದಿನಾಂಕ 31 ಆಗಸ್ಟ್ 2025ರ ಭಾನುವಾರದಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು 8861405738 : ವೈಲೇಶ ಪಿ.ಎಸ್. ಕೊಡಗು, 91413 95426 : ಗಿರೀಶ್ ಕಿಗ್ಗಾಲು : 98454 75153 : ಭಾಗ್ಯವತಿ ಅಣ್ಣಪ್ಪ, 97410 00410 : ಕೋಮಲ ಕಮರವಾಡಿ, 90086 13729 : ವಿಮಲ ದಶರಥ, 96322 02820 : ಸುಪ್ರೀತ ದಿಲೀಪ್ ಮತ್ತು +91 81050 96936 : ಲವಿನ್ ಲೋಪೇಸ್ ಇವರ ದೂರವಾಣಿ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸಿ ನೊಂದಣಿ ಮಾಡಿಕೊಳ್ಳಲು ಕೋರಿಕೆ.
ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಕೀರ್ತಿಶೇಷ ಕರ್ನಾಟಕ ಕಲಾಶ್ರೀ ವಿದುಷಿ ಕಮಲ ಭಟ್ ಸಂಸ್ಮರಣೆಯೊಂದಿಗೆ ‘ಕಮಲಾಂಜಲಿ’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 13 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರ ಕಟೀಲು ವೇದಮೂರ್ತಿ ಶ್ರೀಹರಿನಾರಾಯಣ ದಾಸ ಅಸ್ರಣ್ಣ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಗೆ ಗೌರವಾಭಿನಂದನೆ ನಡೆಯಲಿದ್ದು, ಸಂಸ್ಕಾರ ಭಾರತಿ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಮತ್ತು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ‘ನೃತ್ಯಾರ್ಚನೆ’ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಮಂಗಳೂರು ತಾಲೂಕು ಸಮಿತಿಯ ಸಹಯೋಗದೊಂದಿಗೆ ವೀರ ರಾಣಿ ಅಬ್ಬಕ್ಕ 500ನೇ ಜನ್ಮವರ್ಷಾಚರಣೆಯ ಪ್ರಯುಕ್ತ ಲೇಖನ ಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮೂರು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ನಿಯಮಗಳು : • ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು. • ರಾಣಿ ಅಬ್ಬಕ್ಕಳ ಕುರಿತಾಗಿ ಲೇಖನವನ್ನು ಬರೆಯಬೇಕು. • ಲೇಖನವು ಕನಿಷ್ಠ 800 ಗರಿಷ್ಟ 1500 ಪದಗಳನ್ನು ಹೊಂದಿರಬೇಕು. • 30 ಸೆಪ್ಟೆಂಬರ್ 2025 ಲೇಖನ ಕಳಿಸಿಕೊಡಲು ಕೊನೆಯ ದಿನಾಂಕವಾಗಿರುತ್ತದೆ. • ಲೇಖನವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿ ವರ್ಡ್ ಮತ್ತು ಪಿ.ಡಿ.ಎಫ್. ಎರಡೂ ರೂಪದಲ್ಲಿ ಕಳುಹಿಸಿಕೊಡಬೇಕು. • ಲೇಖನವು ಇಲ್ಲಿಯವರೆಗೆ ಯಾವುದೇ ರೂಪದಲ್ಲಿ ಪ್ರಕಟವಾಗಿರಬಾರದು. • ಲೇಖನದ ಕೊನೆಯಲ್ಲಿ ಕಡ್ಡಾಯವಾಗಿ ಆಕರಗಳನ್ನು ತಿಳಿಸಬೇಕು. • ಪ್ರತ್ಯೇಕ ಪುಟದಲ್ಲಿ ಹೆಸರು, ಕಾಲೇಜು, ಫೋನ್ ನಂಬರ್ ಮತ್ತು ಕಾಲೇಜು ಐಡಿ…
ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಪ್ರಸ್ತುತ ಪಡಿಸುವ ‘ಅಭಿನಯ ಕಾರ್ಯಾಗಾರ’ವು ದಿನಾಂಕ 01 ಸೆಪ್ಟೆಂಬರ್ 2025ರಿಂದ 19 ಸೆಪ್ಟೆಂಬರ್ 2025ರವರೆಗೆ ಪ್ರತಿದಿನ ಬೆಳಿಗ್ಗೆ 6-30ರಿಂದ 9-30 ಗಂಟೆ ತನಕ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆಯಲಿದೆ. ಕುಮಾರಿ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರುಗಳು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 8050157443 ಮತ್ತು 9448276776 ಸಂಖ್ಯೆಯನ್ನು ಸಂಪರ್ಕಿಸಿರಿ. ಶ್ವೇತಾ ಶ್ರೀನಿವಾಸ್ (ನಿರ್ದೇಶಕರು) : ಶ್ವೇತಾ ಶ್ರೀನಿವಾಸ್ ಅವರು ಕನ್ನಡ ರಂಗಭೂಮಿಯ ಒಬ್ಬ ಚಿರಪರಿಚಿತ ಪ್ರತಿಭಾನ್ವಿತ ನಟಿ. ಬಾಲ್ಯದಿಂದಲೂ ರಂಗಭೂಮಿಯ ಒಡನಾಟ ಹೊಂದಿರುವ ಇವರು, ನಟನೆಯ ಜೊತೆಗೆ ಸೃಜನಶೀಲ ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆಗೆ ದೇಶಾದ್ಯಂತ ಹೆಸರಾದವರು. ಇದಕ್ಕಾಗಿ ಇವರು ಹಲವು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ನೀನಾಸಂ ಪದವೀಧರರಾದ ಇವರು, 60ಕ್ಕೂ ಹೆಚ್ಚು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಲ್ಲದೇ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ…
ನಗುವಿನ ಬೀಜಗಳ ನಾಟಿದ ವಸಂತದ ಹೂತೋಟವೊಂದು ಬೇಕು ನನಗೆ. ಚಿಕ್ಕ ಮಗುವಿನ ಹೆಜ್ಜೆ ಇಟ್ಟಂತೆ ಆ ನೆಲ ಪವಿತ್ರವಾಗಬೇಕು. ಅಮ್ಮನ ನೋಟದಂತೆ ಬೆಣ್ಣೆಯಂತಹ ಬೆಳದಿಂಗಳು ತೋಟದಲ್ಲಿ ಅರಳಬೇಕು. ತೀರದ ಬಾಯಾರಿಕೆಯಿಂದ ಬಿರುಕುಬಿಟ್ಟ ಕಪ್ಪು ಎರೆಭೂಮಿಯ ಮೇಲೆ, ಕರುಣೆಯ ಕಣ್ಣೀರ ಹನಿಗಳ ಸುರಿಸಿ, ಅದು ಭರವಸೆಯ ಚಿಗುರು ಮೂಡಿಸಬೇಕು. ತಾಯಿಯ ಕಣ್ಣುಗಳಲ್ಲಿ ಕಾಣುವ ಮುನಿಸು ಇಲ್ಲದ ಅಮಾಯಕ ಬೆಳಕಿನಂತೆ, ಹೃದಯದಲ್ಲಿ ಭದ್ರವಾಗಿರುವ ಸ್ವಚ್ಚ ಆನಂದ ತುಂಬಿ ಹರಿಯಬೇಕು. ನಗುವಿನ ಹೂವಾಗಿ ಅರಳುವ ಆ ಕ್ಷಣದವರೆಗೂ ಸಹನೆಯಿಂದ ಕಾಯಬೇಕು. ಜಗತ್ತಿನ ಗ್ರಂಥಗಳ ಸಾರವನ್ನು ಸೇರಿಸಿ ಎಲ್ಲ ಧರ್ಮಗಳ ಏಕತೆಯನ್ನು ಸಾರಿ, ಜಾತಿ, ಧರ್ಮಗಳ ಭೇದಗಳಿಲ್ಲದ ಮಾನವೀಯತೆಯ ನಗುವಿನ ಹೂಗಳು ಪರಿಮಳಿಸಬೇಕು. ಸ್ವಚ್ಚ ನಗುವಿನ ನೀರ ಕುಡಿದು, ಅಜ್ಞಾನದ ಕಳೆಗಿಡ ಕಿತ್ತು ಹಾಕಿ, ಜ್ಞಾನದ ಪರಿಮಳವನ್ನು ಹರಡಬೇಕು. ನನಗೊಂದು ನಗುವಿನ ಹೂತೋಟ ಬೇಕು. ಅದು ಕೇವಲ ಹೂತೋಟವಲ್ಲ. ಮಾನವತೆಯನ್ನು ಮರೆಯದ, ಬಂಧಗಳಿಗೆ ಸಂಕೇತವಾದ ತೋಟ ಬೇಕು. ಮಾನವ ಸಂಬಂಧಗಳ ಮೌಲ್ಯಗಳನ್ನು ಮರೆಯದ, ಮಧುರ ಪರಿಮಳದೊಂದಿಗೆ ನಿತ್ಯ…
ಕುಂದಾಪುರ: 2025ನೇ ಸಾಲಿನ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ತುಂಬಾಡಿ ರಾಮಯ್ಯ ಅವರ “ಜಾಲ್ಗಿರಿ” ಕಾದಂಬರಿಗೆ ಆಯ್ಕೆಯಾಗಿದೆ. ತಮ್ಮ ಆತ್ಮಕಥನ ‘ಮಣೆಗಾರ’ದ ಮೂಲಕ ಕನ್ನಡ ಓದುಗರಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ ತುಂಬಾಡಿಯವರ ಅನುಭವ ಪ್ರಪಂಚ ಬಹು ದೊಡ್ಡದು. ‘ಮಣೆಗಾರ’ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ನಾಟಕವಾಗಿಯೂ ಜನಪ್ರಿಯವಾಗಿದೆ. ‘ಮುತ್ತಿನ ಜೋಳ ‘ ಮಣೆಗಾರ ಕೃತಿಯ ಮುಂದುವರಿದ ಭಾಗ. ‘ಸ್ಪರ್ಶ’ ಮತ್ತು ‘ದಲಿತಕಾರಣ’ ಅವರ ಲೇಖನಗಳ ಸಂಗ್ರಹವಾದರೆ, ‘ಓದೋ ರಂಗ ‘ ಮೊದಲ ಕಾದಂಬರಿ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಬೆಳ್ಳಿಯ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಈ ಪ್ರಶಸ್ತಿ ಪ್ರದಾನವು 13 ಆಗಸ್ಟ್ 2025ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯಲಿರುವ ಸಾಹಿತ್ಯ ಸಮಾರಂಭದಲ್ಲಿ ನಡೆಯಲಿದೆ.
ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ದಿನಾಂಕ 23 ಸೆಪ್ಟೆಂಬರ್ 2025ರಿಂದ 02 ಅಕ್ಟೋಬರ್ 2025ರವರೆಗೆ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಕಲಾತಂಡಗಳು ತಾವು ಪ್ರದರ್ಶಿಸುವ ಕಲಾ ಪ್ರಕಾರ, ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಅಪೇಕ್ಷಿತ ದಿನಾಂಕ, ಮೊಬೈಲ್ ಸಂಖ್ಯೆಯೊಂದಿಗಿನ ವಿಳಾಸವನ್ನು ದಿನಾಂಕ 25 ಆಗಸ್ಟ್ 2025ರೊಳಗಾಗಿ ಅಧ್ಯಕ್ಷರು, ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ ಕಛೇರಿ, ನಗರಸಭಾ ಸಂಕೀರ್ಣ, ಮುಖ್ಯರಸ್ತೆ, ಮಡಿಕೇರಿ – 571201 ಈ ವಿಳಾಸಕ್ಕೆ ತಲುಪಿಸಬೇಕು. ಅಥವಾ [email protected] ಇಮೇಲ್ ಮೂಲಕ ಕಳುಹಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕಲಾಪ್ರದರ್ಶನದ ಆಯ್ಕೆಯಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯ…
ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ದಿನಾಂಕ 08 ಆಗಸ್ಟ್ 2025ರಿಂದ 10 ಆಗಸ್ಟ್ 2025ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼಕ್ಕೆ ದಿನ್ನಕ 08 ಆಗಸ್ಟ್ 2025ರಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ಚಾಲನೆ ದೊರೆಯಿತು. ಕಾರ್ಯಕ್ರಮದ ಕುರಿತು ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ನಿರ್ದೇಶಕ, ಬುಕ್ ಬ್ರಹ್ಮ ಸಂಸ್ಥಾಪಕ ಸತೀಶ್ ಚಪ್ಪರಿಕೆ ಅವರು ಉತ್ಸವದ ಕುರಿತು ಪರಿಚಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಪ್ರಸಿದ್ದ ರಂಗಕರ್ಮಿ ಬಿ. ಜಯಶ್ರೀ ಸೇರಿದಂತೆ ಪ್ರಮುಖ ಕಾದಂಬರಿಕಾರರು, ಕವಿಗಳು, ವಿಮರ್ಶಕರು ಹಾಗೂ ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು. ಬುಕ್ ಬ್ರಹ್ಮ ಸಾಹಿತ್ಯ ಉತ್ಸವವು ದಕ್ಷಿಣ ಭಾರತದ ಹಲವು ಭಾಷೆಗಳನ್ನು, ಹಲವು ಸಾಹಿತಿಗಳನ್ನು ಮತ್ತು ಸಾಹಿತ್ಯಾಭಿಮಾನಿಗಳನ್ನು ಒಂದೇ ಸೂರಿನಡಿ ಸೇರಿಸುವ ಮಹಾಸಂಗಮವಾಗಿದೆ. ಸಾಹಿತ್ಯ, ರಂಗಭೂಮಿ ಮತ್ತು ಕಲೆಯ ಸಮ್ಮಿಲನವಾದ ಈ ಉತ್ಸವದ ಮೊದಲನೇ ದಿನವು 53 ಗೋಷ್ಠಿಗಳು, 5 ಮಕ್ಕಳ ಸಾಹಿತ್ಯಿಕ ಚಟುವಟಿಕೆಗಳು ಹಾಗೂ 12…