Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇದರ ಹದಿನೈದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎರಡು ದಿನಗಳ ನಾಟಕೋತ್ಸವವು ಜೂನ್ 29 ಮತ್ತು 30ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಉರ್ವದ ಶ್ರೀ ಗುರುಲೀಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದಿನಾಂಕ 29-06-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹಾಗೂ ಕಲಾಪೋಷಕರಾದ ಡಾ. ಹರಿಕೃಷ್ಣ ಪುನರೂರು, ಹಿರಿಯ ರಂಗ ನಿರ್ದೇಶಕರುಗಳಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀ ಮೋಹನಚಂದ್ರ ಯು., ಹಿರಿಯ ನಾಟಕಕಾರರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಲನಚಿತ್ರ ನಿರ್ಮಾಪಕರಾದ ಶ್ರೀ ಪ್ರಕಾಶ್ ಪಾಂಡೇಶ್ವರ, ಚಲನಚಿತ್ರ ನಟ ಶ್ರೀ ಅರವಿಂದ ಬೋಳಾರ್, ಉರ್ವದ ಕೊರಗಜ್ಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ರಾಜೇಶ್ ಉರ್ವ ಹಾಗೂ ಆರ್.ಟಿ.ಒ. ಉಡುಪಿಯ ಶ್ರೀ ರವಿಶಂಕರ್ ಬಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಸಾಧಕರಾದ ಕು. ಶಾಂತಾ ಕೆ., ಶ್ರೀ ಜಗನ್ನಾಥ ಕಲ್ಲಾಪು, ಶ್ರೀ ಲೋಕಯ್ಯ ಶೆಟ್ಟಿಗಾರ್…
ಬಾಳಿಲ: ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ವರ್ಷದ ಅಂಗವಾಗಿ ಸುವಿಚಾರ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಹಾಗೂ ರಂಗತರಬೇತಿ ತರಗತಿಗಳನ್ನು ದಿನಾಂಕ 17-06-2023 ಶನಿವಾರದಂದು ಆರಂಭಿಸಲಾಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಗಣಪಯ್ಯ ಕಾಯಾರ ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಂಗತರಬೇತಿ ಈ ಶಾಲೆಯಲ್ಲಿ ಹಿಂದೆ ಬಹಳಷ್ಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿರುವುದನ್ನು ಮೆಲುಕು ಹಾಕುತ್ತಾ ಅವರು ಶುಭ ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್. ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ರಾಧಾಕೃಷ್ಣ ರಾವ್ ಮಾತನಾಡುತ್ತಾ, ಎಲ್ಲ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಬಳಸಿಕೊಂಡು, ಮುಂದಿನ ದಿನಗಳಲ್ಲಿ ಸರ್ವತೋಮುಖ ಏಳಿಗೆಯನ್ನು ಕಾಣವಂತಾಗಲಿ ಎಂದು ಹಾರೈಸಿದರು. ಸಂಚಾಲಕ ಪಿ.ಜಿ.ಎಸ್.ಎನ್. ಪ್ರಸಾದ್ ಮಾತನಾಡುತ್ತಾ “ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಅವರ ಸರ್ವಾಂಗೀಣ ಯಶಸ್ಸಿಗಾಗಿ ಈ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ 60ನೇ ವರ್ಷದ…
ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕಾಸರಗೋಡು ಕನ್ನಡ ಹಬ್ಬದ ಪ್ರಯುಕ್ತ ‘ಭರತನಾಟ್ಯ ಕಾರ್ಯಕ್ರಮ’ವು ದಿನಾಂಕ : 27-06-2023ರಂದು ಪೆರ್ಲದ ನಾಲಂದಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಬೈಕಾಡಿ ಪ್ರತಿಷ್ಠಾನದ ಅಂಗವಾದ ರತ್ನಕಲಾಲಯದ ನಿರ್ದೇಶಕಿ ಅಕ್ಷತಾ ಬೈಕಾಡಿಯವರೊಂದಿಗೆ ರಶ್ಮಿ ಉಡುಪ ಹಾಗೂ ರಶ್ಮಿ ಭಟ್ ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಂಗ ಚಿನ್ನಾರಿಯ ಸಂಚಾಲಕರಾದ ಕಾಸರಗೋಡು ಚಿನ್ನಾ ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿʼ ಪ್ರಕಟವಾಗಿದ್ದು . 2022ನೆಯ ಸಾಲಿನ ಪ್ರಶಸ್ತಿಗೆ ನಾಡಿನ ಹಿರಿಯ ಲೇಖಕಿಯರಾದ, ದಾವಣಗೆರೆಯ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಹಾಗೂ 2023ನೆಯ ಸಾಲಿನ ಪ್ರಶಸ್ತಿಗಾಗಿ ಮೈಸೂರಿನ ಶ್ರೀಮತಿ ಚಂಪಾವತಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ. ನಾಡಿನ ಲೇಖಕಿಯರಿಗಾಗಿ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ಈ ದತ್ತಿ ಪ್ರಶಸ್ತಿಯು ಕನ್ನಡ ಸಾರಸ್ವತ ಲೋಕದಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳಾ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ಪ್ರದಾನ ಮಾಡುವ ಆಶಯವನ್ನು ಹೊಂದಿರುತ್ತದೆ. ಪ್ರಸ್ತುತ ಪ್ರಶಸ್ತಿಯು ರೂಪಾಯಿ 13,000/- (ಹದಿಮೂರು ಸಾವಿರ) ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಇದುವರೆಗೂ ನಾಡಿನ 8 ಜನ ಮಹಿಳಾ ಲೇಖಕಿಯರಿಗೆ ಪರಿಷತ್ತಿನ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು ಈ ಬಾರಿಯ ಆಯ್ಕೆ ಸಮಿತಿಯು 2022ನೆಯ ಸಾಲಿನ ಪ್ರಶಸ್ತಿ ಗಾಗಿ ಶ್ರೀಮತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್ ಅವರನ್ನು…
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ರಂಗಸ್ಪಂದನ ಮಂಗಳೂರು ಮತ್ತು ಬೈಕಾಡಿ ಪ್ರತಿಷ್ಠಾನ ವತಿಯಿಂದ ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಸಾಂಸ್ಕೃತಿಕ ರಂಗ ದಿಬ್ಬಣ -3 ನೃತ್ಯ, ಸಂಗೀತ ಸಿಂಚನ ಕಾರ್ಯಕ್ರಮ ದಿನಾಂಕ 18-06-2023ರಂದು ಜರಗಿತು. ಸಂಗೀತ ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ಲಕ್ಷಣ ಅಮೀನ್ ಮಾತನಾಡಿ “ಇಂದಿನ ಯುವಜನತೆಗೆ ಸಾಂಸ್ಕೃತಿಕ ಕಲೆಯನ್ನು ಪಸರಿಸಲು ಸಾಂಸ್ಕೃತಿ ರಂಗ ದಿಬ್ಬಣ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಸಂಸ್ಥೆಗಳ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ” ಎಂದು ಹೇಳಿದರು. ಮನಪಾ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ ಮಾತನಾಡಿ, “ವಿದ್ಯಾರ್ಥಿಗಳು ಶಿಕ್ಷಣದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು” ಎಂದರು. ಧಾರ್ಮಿಕ, ಸಾಂಸ್ಕೃತಿಕ ಚಿಂತಕರೂ, ಹಿರಿಯರೂ ಆದ ಶ್ರೀ ಮಾಧವ ಸುವರ್ಣ ಮಾತನಾಡುತ್ತಾ “ಜೀವನದ ಮೌಲ್ಯಗಳನ್ನು ತಲೆತಲಾಂತರಗಳಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಪ್ರಕಾರಗಳು ಜನಾಂಗ-ಜನಾಂಗ ನಿರ್ಮಾಣ…
ಮೂಡುಬಿದಿರೆ : ಕಳೆದ ನಲುವತ್ತೆರಡು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2022ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು, ದಕ್ಷಿಣ ಕನ್ನಡ ಮೂಲದವರಾದ ಡಾ. ಅಜಕ್ಕಳ ಗಿರೀಶ್ ಭಟ್ ಅವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಮತ್ತು ಬೆಂಗಳೂರಿನ ಎಂ.ಆರ್.ದತ್ತಾತ್ರಿ ಅವರಿಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರ ಗೌರವ ಧನ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂಪಾಯಿ ಹದಿನೈದು ಸಾವಿರ ಗೌರವ ಧನ, ತಾಮ್ರಪತ್ರದ ಜೊತೆ ಸನ್ಮಾನವನ್ನು ಒಳಗೊಂಡಿವೆ. ಮೂಡುಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಅಧ್ಯಕ್ಷರಾದ ಶ್ರೀ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ. ಬಿ. ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ. ಬಿ.ಪಿ. ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ…
ಹೂವೊಂದು ಸೂರ್ಯನ ಮೃದುಸ್ಪರ್ಶಕ್ಕೆ ಮೆಲ್ಲನೆ ಅರಳಿ ಸುತ್ತೆಲ್ಲ ಪರಿಮಳವನ್ನು ಹರಡುವಂತೆ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಪ್ರಭೆ ಹೊರ ಜಗತ್ತಿಗೆ ಹರಡಿ ತನ್ನ ಅಸ್ತಿತ್ವವನ್ನು ಸಾರುತ್ತದೆ. ತನ್ನತ್ತ ಆಕರ್ಷಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತಳಾಗಿ ತನ್ನ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯದಿಂದ ಹೆಜ್ಜೆ ಗುರುತು ಮೂಡಿಸುತ್ತಿರುವ ಪ್ರತಿಭೆ ಉಪಾಸನಾ ಪಂಜರಿಕೆ. 27.03.2008ರಂದು ಅರವಿಂದ ಪಂಜರಿಕೆ ಹಾಗೂ ಚಂದ್ರಿಕ ಇವರ ಮಗಳಾಗಿ ಉಪಾಸನ ಪಂಜರಿಕೆ ಜನನ. ೧೦ನೇ ತರಗತಿಯನ್ನು A+ ಗ್ರೇಡ್ ಗಳೊಂದಿಗೆ (97%) ಪೂರ್ಣಗೊಳಿಸಿರುತ್ತಾರೆ. ಸೂರ್ಯನಾರಾಯಣ ಪದಕಣ್ಣಾಯ ಅವರಿಂದ ಯಕ್ಷಗಾನ ಬಾಲಪಾಠ ಕಲಿತು, ರಕ್ಷಿತ್ ಪಡ್ರೆ ಅವರಿಂದ ಹೆಚ್ಚಿನ ಹೆಜ್ಜೆಗಾರಿಕೆ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರಿಂದ ಭಾಗವತಿಕೆ ಅಭ್ಯಾಸವನ್ನು ಮಾಡುತ್ತಿದ್ದಾರೆ. ಕಥೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು, ನಂತರ ಪಾತ್ರದ ಪೂರ್ವಾಪರಗಳ ಬಗ್ಗೆ ಅರಿತುಕೊಳ್ಳುವುದು. ಯಾವ ರೀತಿ ಪಾತ್ರ ಪ್ರಸ್ತುತಿ ಮಾಡುವುದೆಂದು ನಿರ್ಧರಿಸುವುದು. ಚೌಕಿಯಲ್ಲಿರುವ ಹಿರಿಯರಿಂದ ಸಲಹೆಗಳನ್ನು ಪಡೆದುಕೊಳ್ಳುವುದು. ಹೆಚ್ಚಿನ ವಿಷಯಗಳನ್ನು ಹಿಮ್ಮೇಳದವರಿಂದ ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ…
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಯೋಜಿಸಿರುವ ‘ಸಾಂಸ್ಕೃತಿಕ ರಂಗದಿಬ್ಬಣ’ದ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ : 17-06-2023ರಂದು ಕಾವೂರು ಪದವಿನ ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಯಕ್ಷವೈಭವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶ್ರೀ ಕುಸುಮಾಕರ್ ಯಕ್ಷಜ್ಯೋತಿ ಪ್ರಜ್ವಲನೆ ಮಾಡಿ ಶುಭ ಹಾರೈಸುತ್ತಾ “ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಮಕ್ಕಳಲ್ಲಿ ಕಲಾ ಪ್ರತಿಭೆ ಅರಳಿದಾಗಲೇ ಸಂಸ್ಕಾರದ ಅರಿವು ಮೂಡುತ್ತದೆ. ಹಾಗಾಗಿ ರಂಗಸ್ಪಂದನದ ಈ ಕಾರ್ಯ ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ, ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಸಾಲಿಯಾನ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಸಿ. ಕುಮಾರ್ ಹಾಗೂ ತುಳಸಿ ಮಹಾಬಲ ಉಪಸ್ಥಿತರಿದ್ದರು. ರಂಗಸ್ಪಂದನದ ಸಂಚಾಲಕ ವಿ.ಜಿ. ಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದಿನಕರ ಎಸ್. ಪಚ್ಚನಾಡಿ ಸ್ವಾಗತಿಸಿ, ಡಾ. ನಿವೇದಿತಾ ಹರೀಶ್ ನಿರೂಪಿಸಿದರು. ಹರೀಶ್ ಕಾವೂರು ವಂದಿಸಿದ…
ಉಡುಪಿ : ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಘಟಕದ ಸಹಭಾಗಿತ್ವದಲ್ಲಿ ಉಡುಪಿ ಅಂಬಾಗಿಲಿನ ಅಮೃತ ಗಾರ್ಡನ್ನಲ್ಲಿ ದಿನಾಂಕ : 18-06-2023ರಂದು ಬೆಳಿಗ್ಗೆ ಉಡುಪಿ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ “ನಮ್ಮ ಜಾನಪದ ಕಲೆಗಳು ಈ ಮಣ್ಣಿನ ಸತ್ವವನ್ನು ಹೀರಿಕೊಂಡು ಬೆಳೆದ ಸಂಸ್ಕೃತಿಯಾಗಿವೆ. ಆರಾಧನಾ ಕಲೆಗಳಿರಬಹುದು ಅಥವಾ ಪ್ರದರ್ಶನ ಕಲೆಗಳೇ ಆಗಿರಲಿ ಅವುಗಳಿಗೆ ಕಲಾವಿದನ ಬದುಕನ್ನು ರೂಪಿಸುವ ಶಕ್ತಿಯಿದೆ. ನಮ್ಮಲ್ಲಿ ಅದೆಷ್ಟೋ ಸಾಂಸ್ಕೃತಿಕವಾಗಿ ಶ್ರೀಮಂತವಾದ ಜಾನಪದ ಕಲೆಗಳಿವೆ, ಪ್ರತಿಭಾವಂತ ಕಲಾವಿದರಿದ್ದಾರೆ. ಕಲಾ ತಂಡಗಳಿವೆ. ಕಾಲಕಾಲಕ್ಕೆ ಈ ಕಲಾಪ್ರಾಕಾರಗಳನ್ನು ಯುವ ಪೀಳಿಗೆಗೆ ದಾಟಿಸದಿದ್ದರೆ ಅವು ತೆರೆಯ ಮರೆಯ ಕಾಯಿಗಳಾಗಿ ನಶಿಸಿ ಹೋಗುತ್ತವೆ. ಹೀಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಜಾನಪದ ಪರಿಷತ್ನ ಸಹಕಾರದಿಂದ ಇಂತಹ ಜಾನಪದ ಕಲೆಗಳನ್ನು ಉಳಿಸಿ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ, ಹೋರಾಟಗಾರ ಚಂದ್ರಶೇಖರ ಪಾಟೀಲ್ ಅವರ 84ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಪುಷ್ಪನಮನ ಕಾರ್ಯಕ್ರಮ ಪರಿಷತ್ತಿನ ಪಂಪ ಸಭಾಂಗಣದಲ್ಲಿ ದಿನಾಂಕ : 19-06-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ “ಕನ್ನಡವನ್ನು ಸದಾ ತಮ್ಮ ಸಂಗಡ ಇಟ್ಟುಕೊಂಡಿದ್ದ ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಹತ್ವದ ಕೊಡುಗೆಯನ್ನು ನೀಡುವುದರ ಜೊತೆ ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ’ ಎಂಬ ಕವಿತೆಯನ್ನು ನೀಡುವ ಮೂಲಕ ಸಮಸ್ತ ಕನ್ನಡ ನಾಡನ್ನು ಒಂದಾಗಿಸುವ ಮಹತ್ತರ ಕಾರ್ಯವನ್ನು ಮಾಡಿದ್ದ ಇವರು, ಕನ್ನಡ ನಾಡು, ನುಡಿ ಸಮುದಾಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಮ್ಮ ನಿಷ್ಠೂರ ವಾದದ ಮೂಲಕವೇ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಚಂಪಾರವರು ನೆಲೆ ನಿಂತಿದ್ದ ಚಂಪಾರವರು ಮೈಸೂರಿನಲ್ಲಿ ನಡೆದ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ…