Author: roovari

ಕನ್ನಡದ ಪಾಲಿಗೆ ಪೌರಾಣಿಕ ಕಾದಂಬರಿಗಳು ಹೊಸತೇನಲ್ಲ. ದೇವುಡು ಅವರಿಂದ ತೊಡಗಿ ಎಸ್.ಎಲ್. ಭೈರಪ್ಪನವರೆಗೆ ಅವುಗಳ ವ್ಯಾಪ್ತಿ ಇದೆ. ಮಾಸ್ತಿ, ಕುವೆಂಪು, ಪು.ತಿ.ನ., ಗೋಪಾಲಕೃಷ್ಣ ಅಡಿಗ ಮುಂತಾದವರು ಕತೆ, ಕಾವ್ಯ, ಮಹಾಕಾವ್ಯ, ನಾಟಕಗಳ ಮೂಲಕ ಪುರಾಣ ಕಥನವನ್ನು ಆಧುನಿಕ ಕಾಲಕ್ಕೆ ತಂದಿದ್ದಾರೆ. ಪೌರಾಣಿಕ ಪ್ರಸಂಗಗಳನ್ನು ಆಧರಿಸಿದ ಸಂಸ್ಕೃತ ಕೃತಿಗಳ ಅನುವಾದಗಳೊಂದಿಗೆ ಮೂಲ ಪುರಾಣಗಳ ಭಾಷಾಂತರಗಳಲ್ಲದೆ ಅವುಗಳನ್ನು ಕುರಿತ ಸಂಶೋಧನೆ, ವಿಮರ್ಶೆಗಳೂ ಅಧ್ಯಯನ ಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತೆಕ್ಕುಂಜ ಅವರ ‘ಮಂಡೋದರಿ’ ಎಂಬ ಕಾದಂಬರಿಯನ್ನು ಯಕ್ಷಗಾನ ಪರಂಪರೆಯ ಆಧಾರದಲ್ಲಿ ಮೂಡಿ ಬಂದ ರಚನೆ ಎನ್ನಬಹುದು. ಆದ್ದರಿಂದ ಅವರಿಗೆ ರಾಮಾಯಣದ ಪಾತ್ರಗಳ ಅತಿಮಾನುಷ ಗುಣಗಳನ್ನು ಬದಿಗಿರಿಸದೆ, ಅವರನ್ನು ಶಕ್ತಿ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯರಂತೆ ಕಾಣದೆ ಮೂಲಕ್ಕೆ ಹೆಚ್ಚು ನಿಷ್ಠರಾಗಿದ್ದುಕೊಂಡೇ ಪಾತ್ರಗಳನ್ನು ಚಿತ್ರಿಸಲು ಸಾಧ್ಯವಾಗಿದೆ. ಇದರ ಹಿಂದೆ ಲೇಖಕರ ವಿಶೇಷ ಧ್ಯಾನ- ಅಧ್ಯಯನ, ಇತಿಹಾಸ ಪ್ರಜ್ಞೆ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ. ಅನಲೆಯ ಪಾತ್ರ ಚಿತ್ರಣಕ್ಕೆ ಕುವೆಂಪು ಅವರ ‘ಶ್ರೀರಾಮಾಯಣ…

Read More

ಧಾರವಾಡ : ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಧಾರವಾಡ ಇವರಿಂದ ಹನುಮ ಜಯಂತಿ ಪ್ರಯುಕ್ತ ‘ಚೂಡಾಮಣಿ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 22-04-2024ರಂದು ಸಂಜೆ ಗಂಟೆ 6-30ಕ್ಕೆ ಧಾರವಾಡದ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮಂಜುನಾಥ ಹೆಗಡೆ ಮತ್ತು ಶ್ರೀ ನರಸಿಂಹ ಸ್ವಾಮಿ, ಮದ್ದಳೆಯಲ್ಲಿ ಶ್ರೀ ಶ್ರೀಪಾದ ಭಟ್ ಮೂಡಗಾರು ಹಾಗೂ ಚಂಡೆಯಲ್ಲಿ ಶ್ರೀ ನಾರಾಯಣ ಕೋಮಾರ್ ಮತ್ತು ಮುಮ್ಮೇಳದಲ್ಲಿ ರಾಮನಾಗಿ ಶ್ರೀ ಆನಂದ ಭಟ್, ಲಕ್ಷ್ಮಣನಾಗಿ ಶ್ರೀಮತಿ ವಾಸವಿ ಹೆಗಡೆ, ಸುಗ್ರೀವನಾಗಿ ಶ್ರೀಮತಿ ವಾಣಿಶ್ರೀ ಕೊಡ್ಲೆಕೆರೆ, ಹನುಮಂತನಾಗಿ ವಿದ್ವಾನ್ ವಿನಾಯಕ ಭಟ್ ಶೇಡಿಮನೆ, ಜಾಂಬವಂತನಾಗಿ ಶ್ರೀಮತಿ ಶಶಿಕಲಾ ಜೋಶಿ, ಸಂಪಾತಿಯಾಗಿ ಶ್ರೀ ಪ್ರಕಾಶ ಸಂಣಿಗಮ್ಯನವರ್, ರಾವಣನಾಗಿ ಶ್ರೀ ಎಸ್.ಆರ್. ಹೆಗಡೆ, ಸೀತೆಯಾಗಿ ಶ್ರೀ ವಿ.ಜಿ. ಭಟ್, ಸರಮೆಯಾಗಿ ಶ್ರೀ ಅಭಿನಂದನ, ಲಂಕಿಣಿಯಾಗಿ ಶ್ರೀ ಮಂಜುನಾಥ್ ಭಟ್ ಹೆಬ್ರೆ, ತ್ರಣಬಿಂದುವಾಗಿ ಶ್ರೀ ಸುರೇಶ್ ಭಟ್ ಧಾರವಾಡ ಇವರುಗಳು ಸಹಕರಿಸಲಿದ್ದಾರೆ.

Read More

ಉಡುಪಿ : ಉಡುಪಿ ಮಟಪಾಡಿಯ ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ಶ್ರೀ ಮಟಪಾಡಿ ಪ್ರಭಾಕರ್ ಆಚಾರ್ಯ ದಿನಾಂಕ 19-04-2024ರಂದು ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು ಅವರಿಗೆ 63ವರ್ಷ ವಯಸ್ಸಾಗಿತ್ತು. ಯಕ್ಷಗಾನದ ಖ್ಯಾತ ಮದ್ದಳೆವಾದಕ ಶ್ರೀ ಶಂಕರ ಆಚಾರ್ಯ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಯ ಪ್ರಥಮ ಮಗನಾಗಿ ದಿನಾಂಕ 01-06-1961ರಲ್ಲಿ ಜನಿಸಿದ ಇವರು  ತೋನ್ಸೆ ಜಯಂತ ಕುಮಾರ ಇವರ ಶಿಷ್ಯರಾಗಿ ಯಕ್ಷಗಾನದಲ್ಲಿ ಪ್ರಭುತ್ವವನ್ನು ಸಾಧಿಸಿದರು. ಉತ್ತಮ ಭಜನೆ ಗಾಯಕರಾಗಿದ್ದ ಇವರು ಹಲವಾರು ಭಜನೆ ಕಾರ್ಯಕ್ರಮಗಳಲ್ಲಿ ಹಾಗೂ ಶನಿಕಥಾ ಪಾರಾಯಣಗಳಲ್ಲಿ ಭಾಗವಹಿಸಿದ್ದರು.  ತಮ್ಮ 14ನೇ ವಯಸ್ಸಿನಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿದು ಹಾಸ್ಯ ಕಲಾವಿದ ಎಂದೇ ಪ್ರಸಿದ್ಧರಾಗಿದ್ದರೂ ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿ ಪಳಗಿದವರು. ಉತ್ತಮ ಅರ್ಥದಾರಿಯಾಗಿದ್ದ ಇವರು ಹಲವಾರು ತಾಳಮದ್ದಳೆ ಗಳಲ್ಲಿ ಭಾಗವಹಿಸಿದ್ದರು ಹಾಗೂ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದರು. ಶ್ರೀಯುತರು ಪತ್ನಿ ವಸಂತಿ ಆಚಾರ್ಯ, ಮಕ್ಕಳಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯ, ಶ್ರೀಮತಿ ಸುಕನ್ಯಾ ಆಚಾರ್ಯ, ಕುಮಾರಿ ಸುಮನಾ ಆಚಾರ್ಯ…

Read More

ಕುಂದಾಪುರ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಸಂಸ್ಥೆಯವರು ಏರ್ಪಡಿಸಿರುವ ‘ನಲಿ ಕುಣಿ’ ಯಕ್ಷಗಾನ ಅಭಿನಯ ಮತ್ತು ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ ದಿನಾಂಕ 13-04-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುಂದಾಪುರದ ಖ್ಯಾತ ಉದ್ಯಮಿ ಕೆ. ಆರ್. ನಾಯಕ್ “ಈ ಕಂಪ್ಯುಟರ್ ಯುಗದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಲೋಕದ ಬಗ್ಗೆ ಆಸಕ್ತಿಯನ್ನು ಮತ್ತು ಯಕ್ಷಗಾನದ ಉಪಯುಕ್ತತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಪ್ರಯತ್ನ ಶ್ಲಾಘನೀಯ ಹಾಗೂ ಸಂಸ್ಥೆಯ ಕಾರ್ಯ ಅಭಿನಂದನೀಯ. ಯಕ್ಷಗಾನ ಕಲಿಯುವುದರಿಂದ ಅವರ ವಿದ್ಯಾಭ್ಯಾಸ ಮುನ್ನೆಡೆಯಲು ಸಹಕಾರಿಯಾಗುತ್ತದೆ. ಮಾತ್ರವಲ್ಲ ಜೀವನವೂ ಯಶಸ್ವಿಯಾಗುವುದರೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನೊಳಗೊಂಡ ಸಮಾಜ ನಿರ್ಮಾಣವಾಗುತ್ತದೆ.” ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್ ಸಂಚಾರಿ ನಿಗಮ ಲಿಮಿಟೆಡನ ನಿವೃತ್ತ ಸಹಾಯಕ ಮಹಾ ಪ್ರಬಂಧಕರಾದ ಶ್ರೀ ಸತ್ಯನಾರಾಯಣ ಪುರಾಣಿಕ್ ಮಾತನಾಡಿ “ಉತ್ತಮವಾದ ಯಕ್ಷಗಾನ ಶಿಕ್ಷಣ ನೀಡುವ ಆಲೋಚನೆಯಿಂದ ನಡೆಸುತ್ತಿರುವ ಈ ಶಿಬಿರ ನಿಜಕ್ಕೂ ಶ್ಲಾಘನೀಯ.” ಎಂದು ಶುಭ…

Read More

ಮೂಡುಬಿದಿರೆ : ಯಕ್ಷರಂಗದ ಮೇರು ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ ಇವರಿಗೆ ಮೂಡುಬಿದಿರೆ ಸಮೀಪದ ಮಾರೂರು ನೂಯಿಯಲ್ಲಿರುವ ಬಲಿಪ ಭಾಗವತರ ಮನೆಯ ಆವರಣದಲ್ಲಿ ದಿನಾಂಕ 06-04-2024ರಂದು ನಡೆದ ಕಟೀಲು ಮೇಳದ ಹರಕೆ ಬಯಲಾಟದ ವೇದಿಕೆಯಲ್ಲಿ ‘ಬಲಿಪ ಭಾಗವತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಪತ್ರ ಮತ್ತು ಸಮ್ಮಾನವನ್ನು ಒಳಗೊಂಡಿದೆ. ಕಲಾವಿದ ಕೊಂಕಣಾಜೆ ಚಂದ್ರಶೇಖರ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, “ಬಲಿಪ ನಾರಾಯಣರು ‘ಭಾಗವತ ಬಲಿಪ’ರಾದರೆ, ಹಳತನ್ನು ಬದಿಗಿಡದೆ, ಹೊಸತನ್ನು ಅರಳಿಸುತ್ತ ಯಕ್ಷ ರಂಗವನ್ನು ತುಂಬಿಕೊಡುತ್ತ ಬಂದಿರುವ ಗೋವಿಂದ ಭಟ್ಟರು ‘ವೇಷಧಾರಿ ಬಲಿಪ’ ಸ್ಥಾನದಲ್ಲಿರುವವರು” ಎಂದು ಉದ್ಗರಿಸಿ ಉಭಯರನ್ನೂ ಕೊಂಡಾಡಿದರು. ಬಲಿಪ ಭಾಗವತರೊಂದಿಗೆ ಬಾಲ್ಯದ ಒಡನಾಟ ನೆನಪಿಸಿಕೊಂಡ ಗೋವಿಂದ ಭಟ್ಟರು “ಯಕ್ಷಗಾನ ಎಂದರೆ ಬಲಿಪರು, ಬಲಿಪರೆಂದರೆ ಯಕ್ಷಗಾನ ಎಂದು ತಿಳಿಸಿ, ಪ್ರಶಸ್ತಿಗಾಗಿ ತನ್ನನ್ನು ಆರಿಸಿರುವುದು ತನ್ನ ಜೀವನದ ಧನ್ಯತೆಯ ಕ್ಷಣವಾಗಿದೆ.” ಎಂದರು. ದಿ. ಬಲಿಪ ಪ್ರಸಾದ್ ಭಾಗವತರ ಪುತ್ರಿ ಅಪರ್ಣಾ ಅವರಿಗೆ…

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ಪಂಚಮ ಪದ’ ನಾಟಕ ಪ್ರದರ್ಶನವು ದಿನಾಂಕ 22-04-2024ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗ. ಇದು ಹೀಗೆ ಮುಂದೆ ಆಗಲಿರುವ ಹಲವು ಪ್ರಯೋಗಗಳ ಸರಣಿಯ ಆರಂಭ ಬಿಂದು.

Read More

ಬಂಟ್ವಾಳ : ಬಂಟ್ವಾಳ ಜೋಡುಮಾರ್ಗದ ನಿವೃತ್ತ ಶಿಕ್ಷಕ ರಾಜಮಣಿಯವರ ನಿವಾಸದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ‘ರಾಷ್ಟ್ರ – ರಾಷ್ಡ್ರೀಯತೆ – ಸಾಹಿತ್ಯ’ ಎಂಬ ವಿಚಾರದಲ್ಲಿ ವಿಚಾರ ಸಂಕಿರಣವು ದಿನಾಂಕ 18-04-2024 ರಂದು ನಡೆಯಿತು. ಬಂಟ್ವಾಳ ಸಮಿತಿಯ ಅಧ್ಯಕ್ಷ ಮಂಗಳೂರಿನ ಶಸ್ತ್ರ ಚಿಕಿತ್ಸಕ ಮತ್ತು ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ ಸಲಹೆಗಾರ ಡಾ. ಸುರೇಶ ನೆಗಳಗುಳಿಯವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ರಾಜಮಣಿಯವರು ವಹಿಸಿದ್ದರು. ಶ್ರೀಮತಿ ಭಾರತಿಯವರ ಪ್ರಾರ್ಥನೆಯೊಡನೆ ಪ್ರಾರಂಭವಾದ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಪಿಂಗಾರ ಸಾಹಿತ್ಯ ಬಳಗದ ಮುಖ್ಯಸ್ಥ ಹಾಗೂ ಅ.ಭಾ‌.ಸಾ‌.ಪ ಸದಸ್ಯ ರೇಮಂಡ್ ಡಿಕೂನಾ ತಾಕೊಡೆ ನೆರವೇರಿಸಿದರು. ಪ್ರಧಾನ ಉಪನ್ಯಾಸಕ ಜೋಡುಮಾರ್ಗದ ಶ್ರೀ ಮಹಾಬಲೇಶ್ವರ ಹೆಗಡೆಯವರು ಸವಿವರವಾಗಿ ರಾಷ್ಡ್ರ ಹಾಗೂ ರಾಷ್ಡ್ರೀಯತೆಯು ಸಾಹಿತ್ಯದೊಡನೆ ಹಾಸು ಹೊಕ್ಕಾಗಿರುವ ವಿಚಾರವನ್ನು ಹಲವು ಉದಾಹರಣೆ ಸಹಿತ ವಿಷದ ಪಡಿಸಿದರು. ಅವರು ಮುಂದುವರಿದು “ಡಿ.ವಿ.ಗುಂಡಪ್ಪನವರ ಸಾಹಿತ್ಯದಲ್ಲಿ ಬಂದ ನಾಲ್ಕನೆಯದಾದ ದೇಶ ಋಣವೂ ಸಹ ಅರ್ಥಗರ್ಭಿತ ವಾಗಿದೆ.” ಎಂದರು.…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಡಾ. ನಮೃತಾ ಬಿ. ಅವರು ಪ್ರಥಮ ಬಹುಮಾನದೊಂದಿಗೆ ಆಯ್ಕೆಯಾಗಿರುತ್ತಾರೆ. ಬಹುಮಾನವು ರೂಪಾಯಿ ಐದು ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ. ದ್ವಿತೀಯ ಬಹುಮಾನ ನಗದು ಮೂರು ಸಾವಿರದೊಂದಿಗೆ ಡಾ. ಜಿ.ಪಿ. ನಾಗರಾಜ್ ಆಯ್ಕೆಯಾಗಿರುತ್ತಾರೆ. ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕಾಗಿ ರಾಮಾಂಜಿ ನಮ್ಮಭೂಮಿ, ಮಂಜುನಾಥ ಕಾರ್ತಟ್ಟು ಹಾಗೂ ಮಂಜುನಾಥ ಹಿಲಿಯಾಣ ಆಯ್ಕೆಯಾಗಿರುತ್ತಾರೆ. ಪ್ರಸಿದ್ಧ ಕಥೆಗಾರ ಡಾ. ಬಿ. ಜನಾರ್ದನ ಭಟ್ ತೀರ್ಪುಗಾರರಾಗಿ ಸಹಕರಿಸಿದ್ದರು. ಮುಂದಿನ ಸಾಹಿತ್ಯ ಪರಿಷತ್ತಿನ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುವುದು ಎಂದು ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜಿನಿ ವಸಂತ್ ತಿಳಿಸಿರುತ್ತಾರೆ.

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವು ದಿನಾಂಕ 20-04-2024ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಈ ವರ್ಷದ ಪ್ರಶಸ್ತಿಯನ್ನು ಪ್ರಸಿದ್ಧ ಗಮಕ ವ್ಯಾಖ್ಯಾನಕಾರ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಆರ್‌.ಆರ್.ಸಿ.ಯ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ನಾಡೋಜ ಪ್ರೊ. ಕೆ.ಪಿ. ರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ವಹಿಸಲಿದ್ದಾರೆ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು ಅಭಿನಂದನಾ ಭಾಷಣ ಮಾಡಲಿರುವರು. ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಮನೋರಮಾ ಎಂ. ಭಟ್ ಹಾಗೂ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ…

Read More

ಕೊಡಗಿನ ರಾಮಸ್ವಾಮಿ ಕಣಿವೆಯ ಕೆ.ಎಸ್.ಭಗವಾನ್ ಮತ್ತು ಬಿ.ನೇತ್ರಾವತಿ ದಂಪತಿಗಳ ಪುತ್ರಿಯಾಗಿರುವ ಪೂರ್ಣಿಮಾ ಭಗವಾನ್ ಇವರು ಕಣಿವೆ ಸೂರ್ಯನಾರಾಯಣ ಶೆಟ್ಟಿಯವರ ಹಿರಿಯ ಮೊಮ್ಮಗಳು. ಮೈಸೂರಿನ ಚಂದ್ರಿಕಾ ಪಾಠಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದು ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ತಮ್ಮ ಎಮ್ಎಸ್‌ಸಿ ಸ್ನಾತಕೋತ್ತರ ಪದವಿಯನ್ನು ಪಡೆದರು . ಹೊಳೆನರಸೀಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಎಳವೆಯಿಂದಲೇ ಓದು ,ಬರೆಹ, ಅಂಚೆ ಚೀಟಿ ಸಂಗ್ರಹದಂತಹ ಹವ್ಯಾಸವನ್ನು ಬೆಳೆಸಿಕೊಂಡವರು. ನಾಟಕ , ನೃತ್ಯ, ಸಂಗೀತ ಕಾರ್ಯಕ್ರಮಗಳತ್ತ ತಮ್ಮ ಒಲವು ಹರಿಸಿಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಗೆ ಭಾಜನರಾಗಿದ್ದಾರೆ.ಇವರ ಕವನ,ಲೇಖನಗಳು ಈ ಸಂಜೆ ಮತ್ತು ನಿಮ್ಮ ವೈಶ್ಯವಾರ್ತೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎಂ. ಎಸ್ಸಿ. ಪದವೀಧರರಾದರೂ ಕನ್ನಡ ಪುಸ್ತಕಗಳ ಓದು ಮತ್ತು ಬರೆಯುವ ಹವ್ಯಾಸವನ್ನು ಚಿಕ್ಕಂದಿನಿಂದಲೂ ರೂಢಿಸಿಕೊಂಡು ಬಂದಿರುವುದರಿಂದ ಅಂತರ್ಜಾಲದ ಅನೇಕ ವಾಟ್ಸ್ಅಪ್ ಬಳಗಗಳಲ್ಲಿ ಕನ್ನಡ ಕವಿತೆಗಳು, ಚಿತ್ರಕವನ, ಚುಟುಕು, ವಚನ, ಲೇಖನ, ಕಿರುಗತೆ…

Read More