Author: roovari

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ‘ಪರ್ವ’ವನ್ನು ಬರೆದ ಎಸ್.ಎಲ್. ಭೈರಪ್ಪನವರು ರಾಮಾಯಣದ ಸೀತೆಯ ಬದುಕು ಮತ್ತು ಚಿಂತನೆಗಳ ಆಧಾರದಲ್ಲಿ ‘ಉತ್ತರಕಾಂಡ’ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ರಾಮಾಯಣದ ಪಾತ್ರಗಳ ಅತಿಮಾನುಷ ಗುಣಗಳನ್ನು ಬದಿಗಿಟ್ಟು ಅವರನ್ನು ಶಕ್ತಿ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯರಂತೆ ಚಿತ್ರಿಸಿದ್ದಾರೆ. ಇದರ ಹಿಂದೆ ಲೇಖಕರ ಧ್ಯಾನ- ಅಧ್ಯಯನ, ಇತಿಹಾಸ ಪ್ರಜ್ಞೆ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ. ರಾಮಾಯಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ಸಂಘರ್ಷಗಳನ್ನು ಅವಲೋಕಿಸಿದ ಲೇಖಕರು ಸೀತೆಯ ಮನೋವೇದನೆಗಳನ್ನು ಸಾಮಾನ್ಯ ಹೆಣ್ಣಿನ ಬದುಕಿನೊಂದಿಗೆ ಸಮೀಕರಿಸಿ ಆಧುನಿಕ ಸಮಾಜವನ್ನು ವಿಮರ್ಶಿಸಿದ್ದಾರೆ. ವ್ಯಾಪಾರಿ ಮೌಲ್ಯಗಳು ಸಮಾಜವನ್ನು ಮುನ್ನಡೆಸುತ್ತಿರುವ ಈ ಸಂದರ್ಭದಲ್ಲಿ ಸತ್ಯ, ಸೌಂದರ್ಯ, ಪ್ರೀತಿ ವಿಶ್ವಾಸಗಳು ಬೆಲೆ ಕಳೆದುಕೊಳ್ಳುತ್ತಿವೆ. ವೈರತ್ವ ವಿಜೃಂಭಿಸುತ್ತಿದೆ. ಪ್ರತಿಯೊಬ್ಬರೂ ಗುಂಪಿನಲ್ಲಿ ಒಂಟಿಯಾಗುತ್ತಾರೆ ಎಂಬ ಸತ್ಯವನ್ನರಿತುಕೊಂಡ ಲೇಖಕರು ಹೆಜ್ಜೆಹೆಜ್ಜೆಗೂ ನೋವಿನ ಮಡುವಿನೊಳಗೆ ಮುಳುಗೇಳುವ ಸೀತೆಯನ್ನು ತಮ್ಮ ಕಾದಂಬರಿಯ ನಾಯಕಿಯನ್ನಾಗಿಸಿದ್ದಾರೆ. ಅವಳ ತಳಮಳ, ತುಡಿತ, ಪುರುಷ ಪ್ರಧಾನ ಸಮಾಜಕ್ಕೆ ಕೊಡುವ ತೀಕ್ಷ್ಣ ಪ್ರತಿಕ್ರಿಯೆಗಳು ಮುಖ್ಯವಾಗುತ್ತವೆ. ಆಕೆ ಅನುಭವಿಸುವ ತಬ್ಬಲಿತನದ ನೋವು ಇಡೀ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ಡಾ. ರಾಜಕುಮಾರ್ ಸಂಸ್ಕೃತಿ ದತ್ತಿ ಮತ್ತು ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರ ಶನಿವಾರ ಸಂಜೆ ಗಂಟೆ 5-00ಕ್ಕೆ ನಡೆಯಲಿದೆ. ಖ್ಯಾತ ನಿರ್ಮಾಪಕರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆದ ಶ್ರೀ ಎಸ್.ಎ. ಚಿನ್ನೇಗೌಡ ಅವರು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಹಿರಿಯ ಕಲಾವಿದರೂ, ನಿರ್ಮಾಪಕರೂ ಆದ ಶ್ರೀ ರಮೇಶ್ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು ದತ್ತಿ ದಾನಿಗಳ ಪರವಾಗಿ ಎಸ್. ರಾಜಶೇಖರ್ ಅವರು ಉಪಸ್ಥಿತರಿರುತ್ತಾರೆ. ಕನ್ನಡಿಗರ ಅಭಿಮಾನ ದೇವತೆ ಡಾ. ರಾಜ್ ಕುಮಾರ್ ಸರಳತೆ ಮತ್ತು ವಿನಯತೆಯ ಪ್ರತಿರೂಪದಂತಿದ್ದವರು. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಕೂಡ ಅಪಾರ ಕಾಳಜಿಯನ್ನು ಹೊಂದಿದವರು ತಮಗೆ ಭಾರತೀಯ ಚಿತ್ರರಂಗದ ಮೇರು ಪುರಸ್ಕಾರ ‘ದಾದಾ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲೆ ಮತ್ತು ಶ್ರೀ ರಾಮಕೃಷ್ಣ ಪದವಿ ಕಾಲೇಜು ಮಂಗಳೂರು ಇವುಗಳ ಸಹಯೋಗದಲ್ಲಿ ‘ಮತದಾನ – ಪ್ರದಾನ ಕವಿಗೋಷ್ಠಿ ಮತ್ತು ಸಂವಾದ’ ಕಾರ್ಯಕ್ರಮವನ್ನು ದಿನಾಂಕ 20-04-2024ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಬಂಟ್ಸ್ ಹಾಸ್ಟಲ್ ಇಲ್ಲಿರುವ ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಶೆಟ್ಟಿಯವರು ವಹಿಸಲಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಉದ್ಘಾಟಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲೆ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ ಇವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಸಮಿತಿ ಆಯೋಜಿಸಿದ ಅಯೋಧ್ಯೆಯಲ್ಲಿ ರಾಮಮಂದಿರ, ಮನೆಮನಗಳಲ್ಲಿ ರಾಮಚಂದಿರ ಕವಿತಾ ಸ್ಪರ್ಧೆಯ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 22-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀ ಕೃಷ್ಣರಾಜ ಭಟ್ ಮತ್ತು ಶ್ರೀಮತಿ ವಸುಧಾ ಭಟ್ ದಂಪತಿಯ ಸುಪುತ್ರಿಯಾದ ಕುಮಾರಿ ಶ್ರದ್ಧಾ ಕೆ. ಭಟ್ ಇವರು ಪ್ರಸ್ತುತ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ತೃತೀಯ ಬಿಸಿಎಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರುಗಳಾದ ನೃತ್ಯ ವಿದುಷಿ ಶ್ರೀಮತಿ ವೀಣಾ ಸಾಮಗ ಅವರ ಬಳಿ ನೃತ್ಯಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ…

Read More

ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕದ ಪ್ರದರ್ಶನವು ದಿನಾಂಕ 20-04-2024ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ಅಜಯ್ ಕುಮಾರ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9686869676. ಪ್ರವೇಶ ದರ ರೂ.150/- ಆಗಿರುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ…

Read More

ಮುಂಬಯಿ : ಮುಂಬೈ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ವಿಭಾಗದ 46ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 13-04-2024ರ ಶನಿವಾರದಂದು ಮುಂಬಯಿಯ ಕಲೀನಾ ಕ್ಯಾಂಪಸಿನಲ್ಲಿರುವ ಜೆ. ಪಿ. ನಾಯಕ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ “ಮುಂಬಯಿ ವಿಶ್ವವಿದ್ಯಾಲಯದ ಕಾರ್ಯಕ್ರಮ ಎಂದರೆ ಅದು ಅತ್ಯಂತ ಸರಳ, ಸುಂದರ. ಬುದ್ಧಿಜೀವಿಗಳು, ಅಕ್ಷರಜ್ಞಾನಿಗಳು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಅನ್ಯಗ್ರಹದಿಂದ ಬಂದಂತಾಗಿದೆ. ಇದೊಂದು ವಿಶೇಷ ಸಭೆ. ಮುಂಬೈ ವಿವಿ ಕನ್ನಡ ವಿಭಾಗದ ಮಹನೀಯರು ಕೃತಿರಚನೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೀವನವನ್ನು ಹತ್ತಿರದಿಂದ ನೋಡಿದರೆ ಮಾತ್ರ ಒಳ್ಳೆಯ ಪುಸ್ತಕ ಬರೆಯಬಹುದು.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗ ಪ್ರಮುಖರು ಮತ್ತು ಪ್ರಾಧ್ಯಾಪಕರಾದ ಪ್ರೊ . ಜಿ. ಎನ್. ಉಪಾಧ್ಯ ಮಾತನಾಡಿ “ ‘ಕನ್ನಡವು ಕನ್ನಡವ ಕನ್ನಡಿಸುತಿರಲಿ’ ಎಂಬ ಕವಿವಾಣಿಯ ಆಶಯದಂತೆ ಕನ್ನಡ ವಿಭಾಗವು ನಲ್ವತ್ತಾರು ವರ್ಷಗಳಿಂದ ಅಹರ್ನಿಶಿ…

Read More

ಈಗಾಗಲೇ ಏಪ್ರಿಲ್ 14 ರಂದು ‘ಬಿಸು’ ಹಬ್ಬವನ್ನು ತುಳುನಾಡಿನಾದ್ಯಂತ ಆಚರಿಸಿಯಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ತುಳುನಾಡು ಎಂದು ಕರೆಯುವ ವಿಸ್ತಾರ ಭೂ ಪ್ರದೇಶವನ್ನು ಹೊಂದಿದ ಮತ್ತು ತುಳುವನ್ನು ‘ಮಾತೃಭಾಷೆ ‘ಅಂತ ಕರೆಯಲ್ಪಡುವ ಒಂದು ಜನಸಮೂಹವಿದೆ. ಈ ಜನರು ಆಧುನಿಕ ಕ್ಯಾಲೆಂಡರಿನ ಪ್ರಕಾರ ವರ್ಷವನ್ನು ಆರಂಭಿಸುವುದಿಲ್ಲ. ಬದಲಾಗಿ ‘ಬಿಸು’ ಅನ್ನುವ ಹಬ್ಬದ ಆಚರಣೆಯ ಮೂಲಕ ಅವರು ತಮ್ಮ ಹೊಸ ವರ್ಷವನ್ನು ಆರಂಭಿಸುತ್ತಾರೆ. ಇಲ್ಲಿನ ಪ್ರದೇಶದಲ್ಲಿ ತುಳುವರು ಸೌರಮಾನದ ಹಿನ್ನೆಲೆಯಲ್ಲಿ, ಸಂಕ್ರಾಂತಿಯ ನೆಲೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿ, ಸೂರ್ಯನಿಗೆ ಸುತ್ತು ಬರುವ ದಿನವನ್ನು ಲೆಕ್ಕ ಹಾಕಿ, ಆ 365ದಿನಗಳನ್ನು ಒಂದು ವರ್ಷವೆಂದು ಪರಿಗಣಿಸಿ, ಅದನ್ನು ಹನ್ನೆರಡು ತಿಂಗಳುಗಳಾಗಿ ವಿಭಾಗಿಸಿ, ಒಂದು ತಿಂಗಳಿಗೆ ಒಂದು ರಾಶಿ ಎಂದು ಹೆಸರಿಟ್ಟು, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯ ಸಂಚರಿಸಲು ತೆಗೆದುಕೊಳ್ಳುವ ಒಂದು ತಿಂಗಳಿನ ಸಮಯವಕಾಶವನ್ನು ಬದಲಾವಣೆ ಎಂದು ಗುರುತಿಸಿ, ಈ ಪದ್ಧತಿ ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲವೆಂದು ತಿಳಿದು, ತುಳುವರು ಸೌರಮಾನದ ಬದಲಾವಣೆಗಳೇ…

Read More

ಸುರತ್ಕಲ್  : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭವು ದಿನಾಂಕ 14-04-2024ರಂದು  ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ “ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪ್ರಸರಣಕ್ಕೆ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಗ್ರಾಮ ಹಾಗೂ ಹೋಬಳಿ ಮಟ್ಟಗಳಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಾಂತರ ಹಂತದಲ್ಲಿ ಸಾಹಿತ್ಯದ ಪ್ರಸಾರ ಹಾಗೂ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ.” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕುಂತಲಾ ರಮಾನಂದ ಭಟ್ “ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಯುವ ಸಾಹಿತಿಗಳನ್ನು ಬೆಳೆಸಬೇಕು.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಾಹಿತಿ ಶಕುಂತಲಾ ಭಟ್ ಹಳೆಯಂಗಡಿ ಮಾತನಾಡಿ “ಸಾಹಿತ್ಯಾಭಿರುಚಿ ಮೂಡಿಸುವ ಮೂಲಕ ಸಾಹಿತಿಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಗಬೇಕು.”…

Read More

ಮಣಿಪಾಲ : ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಎನ್ನುವ ಕಾರ್ಯಕ್ರಮದ ನೂರ ಐವತೊಂದನೇ ಕಾರ್ಯಕ್ರಮವು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಸಾಯಿರಾಧಾ ಗ್ರೀನ್ ವೇಲಿಯ ಖ್ಯಾತ ಸಾಹಿತಿ, ಶ್ರೀಯುತ ಕಾಡಬೆಟ್ಟು ಮನೋಹರ ನಾಯಕ್ ಮತ್ತು ಶ್ರೀಮತಿ ಶೀಲಾ ನಾಯಕ್ ಇವರ ಆತಿಥ್ಯದಲ್ಲಿ ದಿನಾಂಕ 13-04-2024ರಂದು ಬೆಳಗ್ಗೆ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ‘ಘರ್ ಘರ್ ಕೊಂಕಣಿ’ ಇದರ ರೂವಾರಿ ಕಾಸರಗೋಡು ಚಿನ್ನಾ ಮಾತನಾಡಿ “ಮಾತೃ ಭಾಷೆಯೇ ಅತ್ಯಂತ ಶ್ರೇಷ್ಟವಾದ ಭಾಷೆ. ಅದನ್ನು ಕಲಿಸಿದ ತಾಯಿಯೇ ಈ ಜಗತ್ತಿನ ಅತ್ಯಂತ ಶ್ರೇಷ್ಟ ದೇವರು. ಆ ಋಣವನ್ನು ತೀರಿಸಲಸಾಧ್ಯ. ಕೊನೆ ಪಕ್ಷ ಮನೆಯಲ್ಲಿ ಭಾಷೆಗಾಗಿ ದೀಪ ಹಚ್ಚುವ ಕೆಲಸ ಮಾಡಬೇಕಾಗಿದೆ” ಎಂದು ತಿಳಿಸಿದರು. ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ, ಭಾಷಾ ಪ್ರೀತಿಯನ್ನು ಬೆಳೆಸುವುದಕ್ಕಾಗಿ ಹಾಗೂ ವಿವಿಧ ಪಂಗಡಗಳಲ್ಲಿ ಕೊಂಕಣಿ ಭಾಷಿಗರನ್ನು ಒಂದುಗೂಡಿಸುವುದಕ್ಕಾಗಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ತಮ್ಮ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ಅದ್ಭುತ ಪರಿಕಲ್ಪನೆಯ ಈ ‘ಘರ್…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗ ಇದರ ವತಿಯಿಂದ ‘ಚಿಲಿಪಿಲಿ’ ಮಕ್ಕಳ ಕವಿ ಮೇಳ ಮತ್ತು ‘ನಮ್ಮಾತು’ ಸಂವಾದ ಕಾರ್ಯಕ್ರಮವು ದಿನಾಂಕ 21-04-2024ರಂದು ಆರ್.ಪಿ.ಸಿ. ಲೇಔಟ್ ಇಲ್ಲಿರುವ ಚಿತ್ರಕೂಟ ಮಾಂಟೆಸ್ಸರಿ ಇಲ್ಲಿ ನಡೆಯಲಿದೆ. ಬೆಳಗ್ಗೆ 11-00 ಗಂಟೆಗೆ ನಡೆಯಲಿರುವ ಮಕ್ಕಳ ಕವಿ ಮೇಳದ ಅಧ್ಯಕ್ಷತೆಯನ್ನು ಮಕ್ಕಳ ಸಾಹಿತಿಯಾದ ಶ್ರೀ ತಮ್ಮಣ್ಣ ಬೀಗಾರ ಇವರು ವಹಿಸಲಿದ್ದಾರೆ. ಸಂಜೆ ಗಂಟೆ 5-30ಕ್ಕೆ ಅತಿಥಿಗಳು, ಮಕ್ಕಳು ಮತ್ತು ಪೋಷಕರ ನಡುವೆ ನಡೆಯಲಿರುವ ಸಂವಾದದಲ್ಲಿ ಡಾ. ವಸುಂಧರಾ ಭೂಪತಿ ಮತ್ತು ಶ್ರೀಯುತ ಶ್ರೀಧರ ಮೂರ್ತಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9845265967, 9844152967, 9845734967 ಮತ್ತು 9844017881

Read More