Subscribe to Updates
Get the latest creative news from FooBar about art, design and business.
Author: roovari
7 ಮಾರ್ಚ್ 2023, ಮಂಗಳೂರು: ‘ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ’ – ಲೀಲಾಕ್ಷ ಕರ್ಕೇರ ‘ಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರವು 150 ವರ್ಷಗಳ ತುಂಬಿದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮ ಜೋಡಿಸಲು ಅವಕಾಶ ಸಿಕ್ಕಿರುವುದು ಚುಟುಕು ಸಾಹಿತ್ಯ ಪರಿಷತ್ತಿನ ಭಾಗ್ಯ. ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ ಕಾರ್ಯ. ನಿರಂತರ ಚಟುವಟಿಕೆಯ ಪರಿಷತ್ತಿಗೆ ಉಜ್ವಲ ಭವಿಷ್ಯವಿದೆ’ ಎಂದು ನಮ್ಮ ಕುಡ್ಲ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು. ಅವರು 06-03-2023 ಸೋಮವಾರ ಕಂಕನಾಡಿ ಶ್ರೀ ಕ್ಷೇತ್ರ ಬ್ರಹ್ಮ ಬೈದ್ಯರ್ಕಳ ಗರಡಿಗೆ 150 ವರ್ಷಗಳು ತುಂಬಿದ ಪ್ರಯುಕ್ತ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಚುಟುಕಿನೈಸಿರಿ’ ಕವಿ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ವಹಿಸಿದ್ದರು. ಹಿರಿಯ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು, ಮಂಗಳೂರು ಮಹಾನಗರ ಪಾಲಿಕೆಯ…
7 ಮಾರ್ಚ್ 2023, ಮಂಗಳೂರು: ಕೇವಲ ಮಾತಿನಲ್ಲೇ ಪೌರಾಣಿಕ ಲೋಕವನ್ನು ಸೃಷ್ಟಿಸುವ ಕಲೆ ತಾಳಮದ್ದಳೆ – ವಿಶ್ವನಾಥ ಪೈ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ದಿನಾಂಕ 05-03-2023ರಂದು ಜರಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಶ್ವನಾಥ ಪೈ, ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್, ಎ. ಪಿ. ಜೆ., ತಾಳಮದ್ದಳೆ ಧರ್ಮ, ಸಂಸ್ಕೃತಿಗಳನ್ನು ಪ್ರಚಾರ ಮಾಡುವ ಅದ್ಭುತ ಕಲೆ ಎಂದು ನುಡಿದರು. ಡಾ. ದಿನಕರ ಎಸ್. ಪಚ್ಚನಾಡಿ ಮತ್ತು ಮಿತ್ತಬೈಲು ಗಿರಿಧರ್ ನಾಯಕ್ ಇವರನ್ನು ಸಂಮಾನಿಸಲಾಯಿತು. ಪ್ರಸಂಗ ಕರ್ತ, ಅರ್ಥಧಾರಿ, ವೇಷಧಾರಿ, ಸಂಘಟಕ ಡಾ. ದಿನಕರ ಪಚ್ಚನಾಡಿಯವರನ್ನು ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು. ಛಂದೋಬ್ರಹ್ಮ ಡಾ. ಸೀಮಂತೂರು ನಾರಾಯಣ ಶೆಟ್ಟರಲ್ಲಿ ಯಕ್ಷಗಾನ ಛಂದಸ್ಸಿನ ಆಳವಾದ ಅಧ್ಯಯನ ಮಾಡಿ 25ಕ್ಕೂ ಹೆಚ್ಚು ಜನಪ್ರಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು ದಿನಕರರು. ಅರ್ಥಧಾರಿಯಾಗಿ, ವೇಷಧಾರಿಯಾಗಿ, ಹಲವು ಯಕ್ಷಗಾನ…
7 ಮಾರ್ಚ್ 2023, ಉಡುಪಿ: ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಉದ್ಯಮದೊಂದಿಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿಕೊಂಡವರು. ಇದಕ್ಕಾಗಿ “ತಲ್ಲೂರು ಫ್ಯಾಮಿಲಿ ಟ್ರಸ್ಟ್” (ರಿ) ಅನ್ನು ಹುಟ್ಟು ಹಾಕಿ ತನ್ನ ಪರಿವಾರದ ಜೊತೆಗೆ ಸಮಾಜದ ಕೈಂಕರ್ಯಕ್ಕೆ ಟೊಂಕ ಕಟ್ಟಿದವರು. ಯಕ್ಷಗಾನ, ರಂಗಭೂಮಿ ಕಲಾವಿದರಿಗೆ ಗೌರವಾರ್ಪಣೆಯ ಜೊತೆಗೆ ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದು ಹೋಗದೆ, ತಮ್ಮ ಹಿರಿಯರ ಈ ಮಣ್ಣಿನ ಉದಾತ್ತ ಶ್ರೀಮಂತ ಪರಂಪರೆಯನ್ನು ಮನಗಾಣಬೇಕು ಎಂಬ ತುಡಿತ ಇವರದ್ದು. ಅದರಲ್ಲಿಯೂ ಯುವ ಪೀಳಿಗೆ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಅಡ್ಡದಾರಿ ಹಿಡಿಯಬಾರದು ಎಂಬ ಸಾಮಾಜಿಕ ಕಳಕಳಿ ಇವರನ್ನು ಸಾಹಿತ್ಯ ಕ್ಷೇತ್ರಕ್ಕೆ ಸೆಳೆದು ತಂದಿದೆ. ಹೀಗಾಗಿ ಇವರ ಬಹುತೇಕ ಕೃತಿಗಳು ನೈತಿಕ ಶಿಕ್ಷಣ ನೀಡುವ ಸಾರವನ್ನೇ ಒಳಗೊಂಡಿದೆ. ‘ಮುಂಬೆಳಕು’, ‘ಹೊಂಬೆಳಕು’, ‘ದಾರಿದೀಪ’, ‘ಪಾಥೇಯ’, ‘ಹೊಂಗಿರಣ’, ‘ಪಥ ದೀಪಿಕಾ’, “ಧರ್ಮಾಂಚರ-ನಿತ್ಯ ಸತ್ಯಗಳು’ ಹಾಗೂ ‘ಕಲಾ ಸಂಚಯ’ – ‘ದಕ್ಷಿಣ…
06 March 2023, Mangaluru: Institute of Aviation Studies, Srinivas University organized Mehendi Competition for its students on 4th March 2023 in their campus. The students from B.B.A. Aviation Studies, Srinivas University with great enthusiasm participated in the Mehendi competition. Mehndi is extremely important in Indian culture and festivals. Without its presence, no festival or ritual can be completed. This competition also aimed to instill in the students an interest in Indian traditions and customs displayed on various festive occasions. They showcased their talent in large numbers by making beautiful and intricate designs. The program was organized by the Cultural Coordinators…
06-03-2023,ಬಳ್ಳಾರಿ: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಸಂಸ್ಥೆಯು ದತ್ತು ಪಡೆದ ಶಾಲೆ ಸ.ಮಾ.ಹಿ.ಪ್ರಾ.ಶಾಲೆ ಡಿಎಆರ್ ಪೊಲೀಸ್ ಲೈನ್ ಬಳ್ಳಾರಿಯಲ್ಲಿ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಮತ್ತು ಮಕ್ಕಳ ಆಶಯದಂತೆ ನನ್ನ ಶಾಲೆ ಹಬ್ಬ ಕಾರ್ಯಕ್ರಮವನ್ನು ದಿನಾಂಕ 04.03.2023ರ ಸಂಜೆ 05:45ಕ್ಕೆ ಸ.ಮಾ.ಹಿ.ಪ್ರಾ.ಶಾಲೆ ಡಿಎಆರ್ ಪೊಲೀಸ್ ಲೈನ್ ಬಳ್ಳಾರಿ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಶಾಲೆಯ ಹಳೆಯ ವಿಧ್ಯಾರ್ಥಿಯಾದ ಶ್ರೀ ಜಿ ಸೋಮಶೇಖರರೆಡ್ಡಿ ಮಾನ್ಯ ಶಾಸಕರು ಬಳ್ಳಾರಿ ನಗರ, ಶ್ರೀ ಅಂದಾನಪ್ಪ ಎಂ ವಡಗೇರಿ ಮಾನ್ಯ ಉಪ ನಿರ್ಧೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಳ್ಳಾರಿ ಹಾಗು ಶ್ರೀಮತಿ ಕೆ ಈರಮ್ಮ ಮುಖ್ಯಗುರುಗಳು ರವರು ಉಧ್ಭಾಟಿಸಿದರು ಮುಖ್ಯ ಅತಿಥಿಗಳಾಗಿ ಶ್ರೀ ಶಿವಾಜಿರಾವ್ ಜಿಲ್ಲಾಧ್ಯಕ್ಷರು ಕ.ರಾ.ಸ.ನೌ.ಸಂ ಶ್ರೀ ಎನ್ ವರಪ್ರಸಾದ್ ಉಪ ತಹಶೀಲ್ದಾರ್ ಸಿಂಧನೂರು ಶ್ರೀಮತಿ ಬಿ ಶ್ರೀದೇವಿ ಎಸ್ಡಿಎಂಸಿ ಅಧ್ಯಕ್ಷಕರು ರವರು ಆಗಮಿಸಿದ್ದರು. ಉಧ್ಘಾಟಕರಾದ ಶ್ರೀ ಜಿ ಸೋಮಶೇಖರರೆಡ್ಡಿ ಮಾನ್ಯ ಶಾಸಕರು ಮಾತಾಡಿ ಸಂಸ್ಥೆಯ ಕೆಲಸಗಳನ್ನು ಗಮನಿಸುತ್ತಾ ಬಂದಿದ್ದು ನಾವು ಓದಿದ ಶಾಲೆಯನ್ನು ದತ್ತು…
6 ಮಾರ್ಚ್ 2023, ಮಂಗಳೂರು: ಗಾಯಕರು ಸಾಹಿತ್ಯಕ್ಕೆ ಗಮನಕೊಡಿ: ಶಶಿಧರ್ ಕೋಟೆ ಕಲಾವಿದನಾಗಲಿ ಗಾಯಕನಾಗಲಿ ಸಂಗೀತದ ಎಲ್ಲಾ ಪ್ರಕಾರಗಳನ್ನು ಒಂದೇ ರೀತಿ ಇಷ್ಟಪಡಬೇಕು. ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಜ್ಞಾನ ಅರಿತುಕೊಂಡು ಬೆಳೆದರೆ ಯಶಸ್ಸು ಸಾಧ್ಯ. ಸಂಗೀತ ಮತ್ತು ಸಾಹಿತ್ಯ ಎನ್ನುವಂತದ್ದು ಸಾಗರ. ಅದರಲ್ಲಿಯೂ ಕನಕದಾಸರು ಹಾಗೂ ಪುರಂದರದಾಸರ ರಚನೆಗಳು ಅಪೂರ್ವ. ಗಾಯಕರು ಸಾಹಿತ್ಯಕ್ಕೆ ಗಮನಕೊಟ್ಟು ಹಾಡಿದರೆ ಅದರ ಚಂದವೇ ಬೇರೆ ಎಂದು ಬೆಂಗಳೂರಿನ ಖ್ಯಾತ ಗಾಯಕರಾದ ಗಾನ ಗಂಧರ್ವ ಶಶಿಧರ್ ಕೋಟೆ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ 03-03-2023 ಶುಕ್ರವಾರದಂದು ನಡೆದ ಕನಕ ಪುರಸ್ಕಾರ ಕಾರ್ಯಕ್ರಮದಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಸಂಗೀತಾಂಶಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಭಾರತೀಯ ಸಂಸ್ಕೃತಿಗೆ ಮತ್ತು ಕನ್ನಡ ಸಂಸ್ಕೃತಿಗೆ ಹರಿದಾಸರು ನೀಡಿದ ಕೊಡುಗೆ ಭವ್ಯವಾದದ್ದು. ಆಧ್ಯಾತ್ಮದ ದರ್ಶನ, ಭಕ್ತಿಯ ಜಾಗೃತಿ, ಸಾಮಾಜಿಕ ಸುಧಾರಣೆ, ಮಾನವೀಯ ಮೌಲ್ಯಗಳು ಈ ಎಲ್ಲಾ ಅಂಶಗಳನ್ನು ಹರಿದಾಸರ ಕೀರ್ತನೆಗಳು…
06 ಮಾರ್ಚ್ 2023 ತುಮಕೂರು: ತುಮಕೂರು ಜಿಲ್ಲೆಯ ಸದ್ಯದ ಸಾಂಸ್ಕೃತಿಕ ರಾಯಭಾರಿಯಂತೆ ಮೆಳೇಹಳ್ಳಿ ದೇವರಾಜ್ ನಿರಂತರವಾಗಿ ರಂಗತರಬೇತಿ ನೀಡುತ್ತಾ ನೂರಾರು ವಿದ್ಯಾರ್ಥಿಗಳಿಗೆ ಬಣ್ಣದ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಜೊತೆ ಕೈಜೋಡಿಸಿರುವ ಅವರ ಕುಟುಂಬದ ಎಲ್ಲಾ ಸದಸ್ಯರು ಅಭಿನಂದನಾರ್ಹರು. ಇಂತಹ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತುಮಕೂರು ವಿ.ವಿ. ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ ಅಭಿಪ್ರಾಯಪಟ್ಟರು. ಅವರು ಡಮರುಗ ತಂಡವು ದಿನಾಂಕ 04-03-2023 ಶನಿವಾರ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಪ್ರಯೋಗಿಸಿದ ಟಿ.ಪಿ. ಕೈಲಾಸಂರವರ ಟೊಳ್ಳು ಗಟ್ಟಿ ನಾಟಕ ಉದ್ಘಾಟಿಸಿ ಮಾತನಾಡಿದರು. ನಂತರ ಮಾತನಾಡಿದ ಉಪನ್ಯಾಸಕ ಡಾ. ಶಿವಣ್ಣ ಬೆಳವಾಡಿಯವರು ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಚಿಕಿತ್ಸಕ ರೀತಿಯಲ್ಲಿ ಕೈಲಾಸಂ ನಾಟಕ ನಿಲ್ಲುತ್ತದೆ. ಇಂದಿನ ಯುವಕರಿಗೆ ನಾಟಕದ ಆಶಯಗಳು ದಕ್ಕುವಂತಾಗಲಿ ಎಂದರು. ಸಭಾರಂಭದಲ್ಲಿ ಹೋಬಳಿ ಕ.ಸಾ.ಪ. ಅಧ್ಯಕ್ಷ ಬಿ. ವಜ್ರಪ್ಪ, ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜು ಉಪಸ್ಥಿತರಿದ್ದರು. ನಂತರ ಸಮಸಮಾಜವನ್ನು ಕಟ್ಟಿದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲದ, ಸ್ವಾರ್ಥವನ್ನು ಕಟ್ಟಿಕೊಂಡು…
6 ಮಾರ್ಚ್ 2023, ಉಡುಪಿ: ಜನಪದ ಉಳಿಸಲು ಜಾನಪದ ಹಬ್ಬ – ತಲ್ಲೂರು ನಮ್ಮ ಜನಪದ ಕಲೆಗಳನ್ನು ಉಳಿಸಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಜಿಲ್ಲೆಯಾದ್ಯಂತ ಜಾನಪದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು. ಸುಮನಸಾ ಕೊಡವೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ನಡೆದ ಜಾನಪದ ಹಬ್ಬ–2023 ಹಾಗೂ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಮನಸಾದ ರಂಗಹಬ್ಬದ ವೇದಿಕೆಯಲ್ಲಿ ಅವರು ಏಳು ದಿನ ಕಾರ್ಯಕ್ರಮ ನಡೆಸಿದ್ದರು. ಅಲ್ಲಿಯೇ ಒಂದು ದಿನ ಕಾರ್ಯಕ್ರಮ ಮಾಡಲು ವೇದಿಕೆ ಒದಗಿಸಿ ಎಂದು ಕೇಳಿದಾಗ ಅವಕಾಶ ಮಾಡಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 25ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಎಲ್ಲರ ಸಹಕಾರವನ್ನು ಪಡೆದು ಇನ್ನಷ್ಟು ಕಡೆಗಳಲ್ಲಿ ಜಾನಪದ ಹಬ್ಬ ನಡೆಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ್ ಜಿ. ಕೊಡವೂರು ಮಾತನಾಡಿ, ಕರ್ನಾಟಕದ ಕಲೆಗಳಲ್ಲಿ…
6 ಮಾರ್ಚ್ 2023, ಮಂಗಳೂರು: ಇದೊಂದು ವಿಶೇಷ ಸಂದರ್ಭ, ಒಂದು ಅಪೂರ್ವ ಸಂಗೀತ ಕಾರ್ಯಕ್ರಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ. ವರಾಹ ರೂಪಂ ವ್ಹಾ..ಪೊರ್ಲುಯಾ ಕಾರ್ಯಕ್ರಮದ ಈ ಶೀರ್ಷಿಕೆಯೇ ಕುತೂಹಲ ಹುಟ್ಟಿಸಿದೆ. ಜಗತ್ತಿನಾದ್ಯಂತ ತುಳುವರನ್ನು ರೋಮಾಂಚನ ಗೊಳಿಸಿದ್ದ “ವ್ಹಾ ಪೊರ್ಲುಯಾ” ಎಂಬ ಹಾಡು ಆಗಲೇ “ಇದು ಹೇಗೆ ಎಲ್ಲಿಂದ ಯಾರಿಂದ ಹುಟ್ಟಿಕೊಂಡಿತು”..? ಎಂಬ ಊಹೆಗಳನ್ನು ಹುಟ್ಟಿಸಿಹಾಕಿತ್ತು. ಹಿರಿಯರೋರ್ವರು ಇದು ಶತಮಾನದ ಹಾಡು ಎಂದಿದ್ದರು. ಈಗ ಹಲವಾರು ವರ್ಷಗಳ ಬಳಿಕ (15 ಅಥವಾ 16 ವರ್ಷಗಳು) “ವರಾಹ ರೂಪಂ” ಎನ್ನುವ ಹಾಡು ಜಗತ್ತಿನಾದ್ಯಂತ ಇಡೀ ದೇಶದ ಸಂಗೀತ ಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದೆ. ಸಂಗೀತ, ಸಾಹಿತ್ಯ, ಹಾಡುಗಾರಿಕೆ ಒಂದಕ್ಕೊಂದು ಮಿಗಿಲು. ಈ ಹಾಡಿನಿಂದ ಪ್ರೇರಣೆಗೊಂಡ ಸಂಗೀತಕಾರರುಗಳು ತಾವೂ ತಮ್ಮದೇ ರೀತಿಯಲ್ಲಿ ಹಾಡಿ, ಭಾರಿಸಿ ಆಸ್ವಾದಿಸಿಕೊಂಡಿದ್ದಾಗಿದೆ. ಈ ಎರಡೂ ಹಾಡುಗಳಲ್ಲಿ ಜಾನಪದ ಮತ್ತು ಶಾಸ್ತ್ರೀಯ ಸಂಗೀತದ ಮೂಲ ಸತ್ವಗಳು ಅಡಕವಾಗಿರುವುದು ಮತ್ತೊಂದು ವಿಶೇಷ. ಎರಡೂ ಹಾಡುಗಳ ಮೂಲ ಗಾಯಕರು, ಹಾಡು ಬರೆದಿರುವ ಸಾಹಿತಿ ಇವರ ಒಗ್ಗೂಡುವಿಕೆಯ ಸಂಗೀತ ಕಾರ್ಯಕ್ರಮ…
06 ಮಾರ್ಚ್ 2023, ಮಂಗಳೂರು: ಕಣ್ಣೂರು ವಿಶ್ವವಿದ್ಯಾನಿಲಯದ 2022-2023ರ ಸಾಲಿನ ವಿವಿಧ ವಿಭಾಗಗಳ ಕಲೋತ್ಸವ ಸ್ಪರ್ಧೆಗಳು ತಲಶ್ಯೇರಿ ಬ್ರನ್ನನ್ ಕಾಲೇಜಿನಲ್ಲಿ ಮಾರ್ಚ್ 1ರಿಂದ ನಡೆಯುತ್ತಿದ್ದು, ಸದಾಶಿವ ಮಾಸ್ಟರ್ ಪೊಯ್ಯೆ ಇವರ ನಿರ್ದೇಶನದಲ್ಲಿ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ‘ಬಲಿ’ ನಾಟಕ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ತಂಡದ ಸ್ವರ್ಣ ಕೆ.ಎಸ್. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಅಕ್ರಮ ಭೂ ಕಬಳಿಕೆ, ನಗರೀಕರಣದ ಸೋಗಿನಲ್ಲಿ ಕಳೆದುಹೋಗುತ್ತಿರುವ ಪಾರಂಪರಿಕ ಬದುಕಿನ ಕುರಿತಾಗಿರುವ ‘ಬಲಿ’ ನಾಟಕ ಮೂಲತ: ಅಕ್ಷತಾರಾಜ್ ಪೆರ್ಲರ ‘ಬೇಲಿ’ ತುಳು ನಾಟಕವಾಗಿದೆ. ‘ಬೇಲಿ’ 2020ರ ಕುಡ್ಲ ತುಳುಕೂಟ ಆಯೋಜನೆಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಹಸ್ತಪ್ರತಿ ಪ್ರಶಸ್ತಿ ಪುರಸ್ಕೃತ ನಾಟಕವಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಮಂಜುನಾಥೇಶ್ವರ ತುಳುಪೀಠ ಪ್ರಕಟಿಸಿದ್ದು, 2021ರ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಿತ ಕೃತಿಯಾಗಿದೆ. ಮೂಲ ತುಳುನಾಟಕ ಮಂಗಳೂರು ಆಕಾಶವಾಣಿಯ ತುಳು ನಾಟಕ ಸರಣಿಯಲ್ಲಿ ಶಶಿರಾಜ್ ಕಾವೂರು ನಿರ್ದೇಶನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ…