Subscribe to Updates
Get the latest creative news from FooBar about art, design and business.
Author: roovari
ಕನ್ನಡ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಕೆ.ವಿ. ತಿರುಮಲೇಶ್ ಇದುವರೆಗೆ ಕವಿತೆ, ಕತೆ, ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದ್ದಾರೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಭಾಷಾವಿಜ್ಞಾನಿಯಾಗಿ ಬಹುಕಾಲ ಕನ್ನಡ ನಾಡಿನ ಹೊರಗಿದ್ದುಕೊಂಡೇ ಬರೆದ ತಿರುಮಲೇಶರು ಮೂಲತಃ ಕಾಸರಗೋಡಿನ ಕಾರಡ್ಕ ಗ್ರಾಮದವರಾಗಿದ್ದು ಈಗ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಅವರ ‘ಅಕ್ಷಯ ಕಾವ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಷಯ. ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ವು ಕನ್ನಡ ಸಾಹಿತ್ಯದಲ್ಲೇ ಹೊಸ ಪ್ರಯೋಗ. ಧುಮ್ಮಿಕ್ಕಿ ಹರಿಯುವ ನದಿಯು ತನ್ನ ಸೆಳೆತಕ್ಕೆ ಸಿಕ್ಕಿದ್ದೆಲ್ಲವನ್ನೂ ಸ್ವೀಕರಿಸುವಂತೆ ಈ ಕಾವ್ಯ ನದಿಯು ಹಿರಿಕಿರಿದೆಂಬ ಭೇದವಿಲ್ಲದೆ ಸಕಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಭಸದಿಂದ ಹರಿದಿದೆ. ಎಲ್ಲೂ ನಿಲ್ಲದ ಈ ಪ್ರವಾಹವು ಒಂದರ್ಥದಲ್ಲಿ ಬತ್ತಲಾರದ ಗಂಗೆ. ಹಾಗಾಗಿ ಇದು ‘ಅಕ್ಷಯ ಕಾವ್ಯ’ ಈ ಕಾವ್ಯಕ್ಕೆ ಕೇಂದ್ರ ವಸ್ತು ಇಲ್ಲ. ಕಾವ್ಯವಿಡೀ ಕೇಂದ್ರವೇ. ಕ್ರಮಬದ್ಧತೆ-ಕಟ್ಟುಪಾಡುಗಳಿಗೆ ಒಗ್ಗದ, ಪ್ರತ್ಯೇಕ ಸೂತ್ರ-ಶೀರ್ಷಿಕೆಗಳಿಲ್ಲದ ಈ ಕಾವ್ಯವನ್ನು ಓದಿ ಆಸ್ವಾದಿಸಲು ಯಾವ…
ಬೆಂಗಳೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಆಸಕ್ತಿ ಹೊಂದಿರುವವರು ಕೂಡಲೇ ತಮ್ಮ ಪೂರ್ಣ ಹೆಸರು, ಸ್ಥಳ, ವೃತ್ತಿ, ಕಾರ್ಯಕ್ರಮದ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಕನ್ನಡ ಸಾಹಿತ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದವರು ಕೂಡಲೇ ಪೂರ್ಣ ಹೆಸರು, ಸ್ಥಳ, ಇತ್ತೀಚಿನ ಉತ್ತಮ ಫೋಟೋ, ವೃತ್ತಿಯೊಂದಿಗೆ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವಂತಹವರು ಪೂರ್ಣ ಹೆಸರು (ಆಧಾರ್ ಪ್ರತಿಯಲ್ಲಿ) ಇರುವಂತೆ ಮತ್ತು ಪೂರ್ಣ ಸೇವಾ ವಿವರಗಳು, ವಿಳಾಸ, ಇತ್ತೀಚಿನ ಉತ್ತಮವಾದ ಫೋಟೋವನ್ನು ನಮ್ಮ ಕಛೇರಿ ಸಂಖ್ಯೆಗೆ ವ್ಯಾಟ್ಸ್ ಆಫ್ ಮಾಡಿ. ಕಚೇರಿ ಮೊಬೈಲ್ ಸಂಖ್ಯೆ 7406401473 ಮತ್ತು ಇ-ಮೇಲ್ [email protected] ರಾಸಾ ಆರ್. ಈಶ್ವರ, ಅಭಯ್ ಸಂಸ್ಥಾಪಕ ಅಧ್ಯಕ್ಷರು ಪ್ರಕಾಶಕರು, ಸಾಹಿತ್ಯ, ಸಾಮಾಜಿಕ ಸೇವೆ ಬೆಂಗಳೂರು
ಉಜಿರೆ : ಉಜಿರೆಯ ಎಸ್ಡಿಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ 40ನೇ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಡಿ.ರತ್ನ ವರ್ಮ ಹೆಗ್ಗಡೆ ಸ್ಮಾರಕ ‘ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ’ಯ ಸಮಾರೋಪ ಸಮಾರಂಭವು ದಿನಾಂಕ 13-04-2024ರ ಶನಿವಾರದಂದು ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್. ಡಿ. ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ಸಾಹಿತ್ಯಿಕ ಕುತೂಹಲ ಉತ್ತಮ ಮಾತುಗಾರಿಕೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಓದಿನ ಮೂಲಕ ತಮ್ಮ ಭಾಷಣ ಕಲೆಯನ್ನು ಮೊನಚುಗೊಳಿಸಿಕೊಳ್ಳಬೇಕು. ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊರಕುವ ಓದಿನ ಮೂಲಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಬದಲಾಗಿ ಹೆಚ್ಚಿನ ಪುಸ್ತಕಗಳನ್ನು ಓದಬೇಕು. ಓದಿನ ತುಡಿತ ಮನುಷ್ಯನನ್ನು ಮಹತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಶ್ರೇಷ್ಠ ವಾಗ್ಮಿಗಳ ಕೃತಿಗಳು ವಿದ್ಯಾರ್ಥಿಗಳ ಭಾಷಣ ಕಲೆಯಲ್ಲಿ ಸಹಕಾರಿಯಾಗುತ್ತದೆ.” ಎಂದು ಅವರು ಅಭಿಪ್ರಾಯ ಪಟ್ಟರು. ನಿರ್ಣಾಯಕರಾದ ಕೃಷ್ಣಮೂರ್ತಿ ಮಾತನಾಡಿ “ಆಲೋಚನಾ ಶಕ್ತಿ ಭಾಷಣ ಕಲೆಗಳಿಗೆ ಸಹಾಯಕವಾಗಿದೆ. ವಿಷಯಗಳ ಅವಲೋಕನ ವಿಸ್ತಾರ ಮಂಡನೆಗೆ ಉಪಯುಕ್ತವಾಗಿದೆ. ಭಾಷಣ ಕಲೆಯು ವಿಚಾರಧಾರೆಯ…
ಚೆನ್ನೈ : ಐಐಟಿ ಮದ್ರಾಸು ಇದರ ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಕರಾವಳಿಯ ಗಂಡುಮೆಟ್ಟಿದ ಕಲೆ ಯಕ್ಷಗಾನ ರಮ್ಯಾದ್ಭುತ ಸೃಷ್ಟಿಸಿತು. ಐಐಟಿ ಸಭಾಂಗಣದಲ್ಲಿ ಕಾಸರಗೋಡಿನ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರು ‘ಮಹಿಷಾಸುರ ವಧೆ’ ಪ್ರಸಂಗವನ್ನು ದಿನಾಂಕ 31-03-2024ರ ಭಾನುವಾರದಂದು ಪ್ರಸ್ತುತ ಪಡಿಸಿ ಮಹಾನಗರದಲ್ಲಿ ಯಕ್ಷ ಗಂಧರ್ವಲೋಕ ಸೃಷ್ಟಿಸಿದರು. ಅಧ್ಯಯನ ಕೇಂದ್ರದ ರೂವಾರಿ, ಧಾರ್ಮಿಕ ಮುಂದಾಳು, ಗಡಿನಾಡ ಸಾಂಸ್ಕೃತಿಕ ರಾಯಭಾರಿ ಕೆ. ಎನ್. ವೆಂಕಟ್ರಮಣ ಹೊಳ್ಳ ಮತ್ತು ಸಹೋದರ ಕೆ.ಎನ್. ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನದಲ್ಲಿ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ‘ಎ’ ಗ್ರೇಡ್ ಪಡೆದ ಕಾಸರಗೋಡು ಬಿ. ಇ. ಎಂ. ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡ ಪ್ರತಿಭಾನ್ವಿತರ ತಂಡ ಭಾಗವಹಿಸಿತ್ತು. ರಾಕೇಶ್ ರೈ ಅಡ್ಕ ಅವರ ಸಮರ್ಥ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಯಕ್ಷಗಾನವು ನೆರೆದ ಅಸಂಖ್ಯ ಪ್ರೇಕ್ಷಕರನ್ನು ಮೂಕ ವಿಸ್ಮಯಗೊಳಿಸಿತು. ಕಂಚಿನ ಕಂಠದ ರಾಮಕೃಷ್ಣ ಮಯ್ಯ ಕೂಡ್ಲು ಭಾಗವತರಾಗಿ ಮಿಂಚಿದರು. ಚೆಂಡೆಯಲ್ಲಿ…
ಬಜಪೆ : ‘ಪಾಡ್ಡನ ಕೋಗಿಲೆ’ ಎಂದೇ ಪ್ರಸಿದ್ಧಿ ಪಡೆದ ಹಿರಿಯ ಜಾನಪದ ಕಲಾವಿದೆ, ಕರ್ನಾಟಕ ರಾಜ್ಯ ಸರಕಾರದಿಂದ 2015ರಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದ ಶತಾಯುಷಿ ಗಿಡಿಗೆರೆ ರಾಮಕ್ಕ ಮುಗೇರ್ತಿ(102) ಅವರು ಅನಾರೋಗ್ಯದಿಂದ ಕಟೀಲು ಗಿಡಿಗೆರೆಯ ತನ್ನ ನಿವಾಸದಲ್ಲಿ ದಿನಾಂಕ 15-04-2024ರಂದು ನಿಧನರಾದರು. ಮಂಗಳೂರು ತಾಲೂಕಿನ ವಾಮಂಜೂರಿನ ಕೂಕ್ರ ಮುಗ್ಗೇರ ಮತ್ತು ದುಗ್ಗಮ್ಮ ದಂಪತಿಯ ಸುಪುತ್ರಿಯಾಗಿದ್ದ ರಾಮಕ್ಕ 17ನೇ ವಯಸ್ಸಿನಲ್ಲಿ ಕಟೀಲು ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ಮದುವೆಯಾದರು. ಸತ್ಯದ ಸಿರಿ ಪಾಡ್ಡನ ಗಾಯನದಿಂದ ಖ್ಯಾತರಾಗಿದ್ದ ಅವರು ಓ ಬೇಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ ಕಾನಡ, ಮಾಲ್ಂಡ್ ಮರ, ಕುಮಾರ, ಸಿರಿ, ಅಬ್ಬಗ-ದಾರಗ, ಬಂಟರು ಹಾಗೂ ಅನೇಕ ದೈವ ಪಾಡ್ಡನಗಳಲ್ಲದೆ ಬೇಸಾಯದ ಸಂದರ್ಭ ಹಾಡುವ ಹತ್ತಾರು ಕೃಷಿ ಗೀತೆಗಳನ್ನು ನಿರರ್ಗಳವಾಗಿ ತನ್ನ ನೆನಪಿನಾಳದಿಂದ ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಅಕ್ಷರಾಭ್ಯಾಸ ಇಲ್ಲದಿದ್ದರೂ ಕವಿತೆಗಳನ್ನು ರಚಿಸಿದ್ದರು. ಜಾನಪದ, ದೈವಿಕ ಆಚರಣೆ, ಶ್ರಮಿಕ ಸಂಸ್ಕೃತಿಯ ಸಂಧಿ, ಸಂಧಿ-ಪಾಡ್ಡನಗಳು ಕಂಠಪಾಠವಾಗಿತ್ತು. ಹಂಪಿ ಕನ್ನಡ…
ಸುರತ್ಕಲ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ದಿನಾಂಕ 14-04-2024ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯು.ಎಸ್.ಎ. ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಯಕ್ಷಧ್ರುವ ಟ್ರಸ್ಟ್ ಈ ಮೂಲಕ ಸಾಗರದಾಚೆಗೂ ಯಕ್ಷಪ್ರೇಮಿಗಳ ಬಾಂಧವ್ಯವನ್ನು ಬೆಸೆದಿದೆ. ಯುರೋಪ್ ರಾಷ್ಟ್ರಗಳಲ್ಲಿ ಪಟ್ಲ ತಂಡದೊಂದಿಗೆ ಸಂಚಾರ ನಡೆಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನಗಳು. ಮುಂದೆಯೂ ಅಮೇರಿಕದಲ್ಲಿ ಪಟ್ಲರ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತೇನೆ” ಎಂದು ಹೇಳಿದರು. ಬಳಿಕ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, “ನನ್ನನ್ನು ತಾಯಿ ಕಟೀಲು ದುರ್ಗೆ ಯಕ್ಷಗಾನ ಕಲಾವಿದರ ಸೇವೆ ಮಾಡುವಂತೆ ಅನುಗ್ರಹ ನೀಡಿದ್ದಾಳೆ. ಅವಳ ಅಣತಿಯಂತೆ ನಾನಿಂದು ಯಕ್ಷಗಾನ…
ಮಂಗಳೂರು : ಉರ್ವಸ್ಟೋರ್ ಪರಿಸರದಲ್ಲಿ ಹಲವು ದಶಕಗಳಿಂದ ಯಕ್ಷಗಾನ ಕಲಾ ಸೇವೆ ಮಾಡುತ್ತಿದ್ದ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯನ್ನು ಉರ್ವಸ್ಟೋರ್ನ ಶ್ರೀ ಮಹಾಗಣಪತಿ ದೇವಸ್ಥಾನ ಸನ್ನಿಧಿಯಲ್ಲಿ ಮಂಡಳಿಯ ಯಕ್ಷಗಾನ ತಾಳಮದ್ದಳೆ ಸೇವೆಯೊಂದಿಗೆ ದಿನಾಂಕ 10-04-2024ರಂದು ಪುನರಾರಂಭ ಮಾಡಲಾಯಿತು. ಮಂಡಳಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಮಾತನಾಡಿ, “1932ರಲ್ಲಿ ದಿ. ಹೂವಪ್ಪ ಮಡಿವಾಳರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ ಮುಂದೆ ದಿ. ಕೃಷ್ಣಪ್ಪ ಕರ್ಕೇರರ ಸಂಚಾಲಕತ್ವದಲ್ಲಿ ಹಲವು ವರ್ಷ ಮುನ್ನಡೆಯಿತು. ಇತ್ತೀಚಿನ ಕೆಲವು ಸಮಯಗಳಿಂದ ಸ್ಥಗಿತಗೊಂಡಿದ್ದ ಈ ಮಂಡಳಿಗೆ ಈಗ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಯಕ್ಷಗಾನದ ಮೂಲಕ ಪುರಾಣ ಕಥೆಗಳ ಪ್ರಚಾರ ಸೇವೆಯನ್ನು ಮಾಡುವ ಭಾಗ್ಯ ದೊರಕಿದೆ.” ಹಲವು ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಈ ಮಂಡಳಿಗೆ ಬೆಂಬಲ ನೀಡಿ ಇನ್ನಷ್ಟು ಕಲಾವಿದರು ರೂಪುಗೊಳ್ಳಲು ಅನುವು ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿಗೆ ಕೃತಜ್ಞತೆ ಸೂಚಿಸಿದರು. ವಿದ್ವಾಂಸ ಎಂ. ಪ್ರಭಾಕರ ಜೋಷಿ ಮತ್ತು ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಮಾತನಾಡಿದರು. ಕೆನರಾ ಪದವಿ ಪೂರ್ವ…
ಪುತ್ತೂರು : ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮವು ದಿನಾಂಕ 11-04-2024ರಂದು ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರದ ಜಾತ್ರೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆದು ನೆರೆದಿದ್ದ ಅಸಂಖ್ಯಾತ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ಅವನಿ ಎಂ.ಎಸ್. ಸುಳ್ಯ, ಜ್ಞಾನ ರೈ ಪುತ್ತೂರು, ಪ್ರಥಮ್ಯ ಯು.ವೈ. ನೆಲ್ಯಾಡಿ, ಆಜ್ಞಾ ರೈ ಪುತ್ತೂರು, ಶ್ವೇತಾ ಯು.ವೈ. ನೆಲ್ಯಾಡಿ, ರಕ್ಷಿತಾ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ನಿರ್ವಹಿಸಿದ್ದರು. ಪುತ್ತೂರು ಕ್ಷೇತ್ರದ ವತಿಯಿಂದ ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಗೂ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾಸರಗೋಡು : ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ಗುರುತ್ವದಲ್ಲಿ ಪುತ್ತೂರಿನ ನಾಟ್ಯರಂಗದ ಎಡನೀರು ಶಾಖೆಯ ವಿದ್ಯಾರ್ಥಿನಿಯರಾದ ಮಧುಶ್ರೀ, ದೇವಾನಂದ, ಶ್ರೀನಂದ ಹಾಗೂ ನೃತ್ಯ ಗುರುಗಳ ಸಮನ್ವಯದಲ್ಲಿ ಎಡನೀರು ಮಠದ ಭಾರತೀ ಕಲಾಸದನದಲ್ಲಿ ‘ನೃತ್ಯಾವತರಣಂ’ ಪ್ರಸ್ತುತಿಯು ದಿನಾಂಕ 14-04-2024ರಂದು ಸಂಪನ್ನಗೊಂಡಿತು. ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಶುಭಾಶೀರ್ವಚನ ನೀಡಿ ಮಾತನಾಡುತ್ತಾ “ಕಲಾವಿದರಿಂದ ಕಲಾಪ್ರೇಕ್ಷಕರೆಡೆಗೆ ಕಲಾಪ್ರಜ್ಞೆ ಹರಿದು ಬರಬೇಕು. ಕಲೆ ವ್ಯಕ್ತಿಯನ್ನು ಅರಳಿಸುವ ಕಾರ್ಯದೊಂದಿಗೆ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸುತ್ತದೆ. ಮಠದ ಸಾನಿಧ್ಯವು ಕಲಾವಿದರಿಗೂ, ಕಲಾಪ್ರೇಕ್ಷಕರಿಗೂ, ಕಲಾ ಪೋಷಕರಿಗೂ, ಭಗವದ್ಭಕ್ತರಿಗೂ ಸದಾ ಆಶ್ರಯ ತಾಣವಾಗಬೇಕು ಎಂಬುದೇ ನಮ್ಮ ಸದಾಶಯ” ಎಂದು ಹೇಳಿದರು. ಮುಖ್ಯ ಅಭ್ಯಾಗತರ ನೆಲೆಯಲ್ಲಿ ಕೇರಳ ರಾಜ್ಯ ಬಯೋಡೈವರ್ಸಿಟಿ ಬೋರ್ಡ್ ಮೆಂಬರ್ ಸೆಕ್ರೆಟರಿ, ಡಿವೈಎಸ್ಪಿ ಡಾ. ಬಿ. ಬಾಲಕೃಷ್ಣನ್ ಮಾತನಾಡಿ “ಮಠದ ಆಶ್ರಯವು ತಮ್ಮ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು ಪ್ರಸಕ್ತ ಸನ್ನಿವೇಶಗಳಲ್ಲಿ ಕಲಾವಿದರನ್ನು ಸೃಷ್ಟಿಸುವಷ್ಟೇ ಆದ್ಯತೆ ಹಾಗೂ ಪ್ರಾಮುಖ್ಯತೆ ಕಲಾ ಆಸ್ವಾಧಕರನ್ನು ಸೃಷ್ಟಿಸುವಲ್ಲಿ ನೀಡುತ್ತಿರುವುದು ಶ್ಲಾಘನೀಯ” ಎಂದರು.…
ಮಂಗಳಾದೇವಿ : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಸ್ಮರಣಾರ್ಥ ಇಲ್ಲಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ವಿಶಿಷ್ಟ ಸಂಗೀತ ಕಛೇರಿಯನ್ನು ದಿನಾಂಕ 07-04-2024ರಂದು ಆಯೋಜಿಸಲಾಗಿತ್ತು. ಮೊದಲು ನಡೆದ ಉಡುಪಿಯ ಕಡಿಯಾಳಿ ಸಹೋದರರಾದ ಪ್ರಭವ್ ಉಪಾಧ್ಯ ಮತ್ತು ಸೌರವ್ ಉಪಾಧ್ಯ ಇವರ ಕೊಳಲು ವಾದನ ಕಛೇರಿಗೆ ಧನಶ್ರೀ ಶಬರಾಯ ವಯೋಲಿನ್ ಹಾಗೂ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಿದರು. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವ ಬಾಲಪ್ರತಿಭೆ 10 ವರ್ಷ ವಯಸ್ಸಿನ ಗಂಗಾ ಶಶಿಧರನ್ ಮತ್ತು ಅವರ ಗುರು ಸಿ. ಅನುರೂಪ್ ಅವರ ವಯೋಲಿನ್ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಕೃತಿ ವಾತಾಪಿಯಿಂದ ಕಛೇರಿ ಆರಂಭಿಸಿದ ತಂಡದ ಪ್ರಸ್ತುತಿ ಶೋತೃಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಮೃದಂಗ, ತವಿಲ್ ಮತ್ತು ಘಟಂಗಳ ಕಲಾವಿದರ ಚಾತುರ್ಯವನ್ನೂ ತೋರ್ಪಡಿಸಿದರು. ಪುಟ್ಟಬಾಲೆ ಗಂಗಾ ತನ್ನ ಚಾತುರ್ಯ, ಆಕರ್ಷಕ ನುಡಿಸಾಣಿಕೆ, ಭಾವಪೂರ್ಣ ಅಭಿವ್ಯಕ್ತಿಗಳಿಂದ ಪ್ರೇಕ್ಷಕರ ಮನಸೂರೆಗೊಂಡಳು. ಆನಂತರ ವಿಳಂಬ ಕಾಲದ…