Author: roovari

22 ಫೆಬ್ರವರಿ 2023, ಮುಡಿಪು: ಕವಿ, ತುಳು – ಕನ್ನಡ ಬರಹಗಾರ್ತಿ, ಸಂಶೋಧಕಿ ವಿಜಯಲಕ್ಷ್ಮಿ ರೈ ಕಲ್ಲಿಮಾರ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷರಾಗಿ ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ನೇಮಕ ಮಾಡಿದ್ದಾರೆ ಎಂದು ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಪ್ರಕಟಿಸಿದ್ದಾರೆ. ವಿಜಯಲಕ್ಷ್ಮಿ ರೈ ಇವರು ಸಾಮಾಜಿಕ ಸಂಘಟನೆ, ತುಳು- ಕನ್ನಡ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ತುಳು ಎಂ ಎ ಪದವೀಧರರೂ ಆಗಿರುವ ಇವರ ಹಲವು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೊಣಾಜೆ ಬಂಟರ ಸಂಘ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಇದರ ಸಕ್ರಿಯ ಸದಸ್ಯೆ. ಅಬ್ಬಕ್ಕ ಪ್ರಶಸ್ತಿ, ಲಯನ್ ಇಂಟರ್ ನ್ಯಾಶನಲ್ ಮಲ್ಟಿಪಲ್ ಅವಾರ್ಡ್ ಮೊದಲಾದ ಗೌರವಗಳು ಇವರಿಗೆ ಸಂದಿವೆ. ಇವರು ಸಾಮಾಜಿಕ ಮುಖಂಡ ಪ್ರಸಾದ್ ರೈ ಕಲ್ಲಿಮಾರ್ ಇವರ ಪತ್ನಿ.

Read More

22, ಫೆಬ್ರವರಿ 2023, ಮಂಗಳೂರು: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 13ನೇ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂರು ಕಲಾ ಸಾಧಕರನ್ನು ಗುರುತಿಸಿ, ಗೌರವಿಸಲಾಯಿತು. ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನೃತ್ಯ ಗುರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಮಲಾಕ್ಷ ಆಚಾರ್, ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ, ರಾಜ್ಯದ ಸ್ಯಾಕ್ಸೋಫೀನ್ ವಾದನದಲ್ಲಿ ಏಕೈಕ ಆಕಾಶವಾಣಿ ಎ ಗ್ರೇಡ್ ಕಲಾವಿದ ಪ್ರಕಾಶ್ ದೇವಾಡಿಗರು ಸೇರಿ ಮೂರು ಮಂದಿಗೆ ಫೆಬ್ರವರಿ 20ರಂದು ಸುವರ್ಣ ರಂಗ ಸಮ್ಮಾನ್ 2023 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಗಣ್ಯರು ವಿತರಿಸಿದರು. ಕಲಾ ಸಾಧಕರಿಗೆ ಸುವರ್ಣ ರಂಗ ಸನ್ಮಾನ – 2023 – Roovari

Read More

22 ಫೆಬ್ರವರಿ 2023, ಮೈಸೂರು: ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ ‘ರಜಾಮಜಾ’. ಎಪ್ರಿಲ್ 12ರಿಂದ ಮೇ 07ರವರೆಗೆ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ. ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು. ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ , ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ. ವಿವರಗಳಿಗಾಗಿ ಸಂಪರ್ಕಿಸಿ: 9480468327, 7259537777, 9845595505, 0821- 2564455

Read More

22 ಫೆಬ್ರವರಿ 2023, ಉಡುಪಿ: ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 20 ರಂದು ಶ್ರೀ ಅನಂತೇಶ್ವರ ದೇವಸ್ಥಾನ,ಉಡುಪಿ ಇಲ್ಲಿ ನಡೆದ ಮಹೋತ್ಸವದಲ್ಲಿ ಸಂಗೀತ ಗುರುಗಳಾದ ಶ್ರೀಯುತ ಕೆ.ವಿ ರಮಣ್ ಅವರ ವಿಭಿನ್ನ ಪರಿಕಲ್ಪನೆ “ನಾಟ್ಯಾಯನ” –  ವಿಶಿಷ್ಟ ನೃತ್ಯ ಕಾರ್ಯಕ್ರಮವು ಸುಸಂಪನ್ನಗೊಂಡಿತು. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದ್ವಾನ್ ಮಂಜುನಾಥ್  ಎನ್ ಪುತ್ತೂರು ಮತ್ತು ವಿದುಷಿ ಅಯನ ವಿ ರಮಣ್ ಇವರ ಯುಗಳ ನೃತ್ಯವು ಜನಮನಸೂರೆಗೊಂಡಿತು.

Read More

22 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಕಲಾವಿದರ ಕಲಾ ಪ್ರೀತಿ ಅನನ್ಯ- ಗಣೇಶ್ ಕಾಮತ್ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಶ್ರೀ ಕುಡ್ತೇರಿ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ಇತ್ತೀಚಿಗೆ ಜರಗಿತು.ವಾಲ್ಪಾಡಿ ಮುರಳಿ ಭಟ್ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸಂಮಾನ ಕಾರ್ಯಕ್ರಮದಲ್ಲಿ ಮಾರುತಿ ನ್ಯೂಸ್ ಏಜೆನ್ಸಿಯ ಗಣೇಶ್ ಕಾಮತ್ ಅಧ್ಯಕ್ಷರಾಗಿದ್ದರು. ಸುಮಾರು ಐವತ್ತು ವರುಷಗಳ ಹಿಂದೆ ಅತೀ ಕಡಿಮೆ ಸಂಭಾವನೆ ಪಡೆದೂ, ಕಷ್ಟಕರ ಜೀವನ ನಡೆಸಿಯೂ ಕಲೆಯ ಮೇಲಿನ ಪ್ರೀತಿಯಿಂದ ದುಡಿದ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತನ್ನ ತಂದೆಯವರು ಮೇಳದ ಆಟಗಳನ್ನು ಆಡಿಸುತ್ತಿದ್ದುದು ತನಗೂ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಲು ಕಾರಣವಾಯಿತೆಂದರು. ಯಕ್ಷಗಾನ ಅರ್ಥಧಾರಿ, ವೇಷಧಾರಿ ಸಂಘಟಕ ಮುರಳಿ ಭಟ್ ವಾಲ್ಪಾಡಿ ಯವರನ್ನು ಸಂಘಟಕ ಬಿ. ಟಿ. ಕುಲಾಲ್ ಅಭಿನಂದಿಸಿದರು. ಭಾರತೀಯ ವಿದ್ಯಾಭವನದಲ್ಲಿ ಯಕ್ಷಗಾನ ಕಲಿತ ಬಳಿಕ ನಮ್ಮ ಸಂಘದಲ್ಲಿ ಅರ್ಥ ಹೇಳುತ್ತಾ, ವೇಷ ಮಾಡುತ್ತಾ ಕಲಾ…

Read More

22 ಫೆಬ್ರವರಿ 2023, ತಮಿಳುನಾಡು: ಶಿವರಾತ್ರಿಯ ಪ್ರಯುಕ್ತ ತಮಿಳುನಾಡಿನ ಚಿದಂಬರಂ ಮತ್ತು ತಂಜಾವೂರಿನ ಪ್ರತಿಷ್ಠಿತ ನಾಟ್ಯಾಂಜಲಿ 2023 ಕಾರ್ಯಕ್ರಮದಲ್ಲಿ ದಿನಾಂಕ 18 ಮತ್ತು 19ರಂದು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಅವರು ತಮ್ಮ ಏಕವ್ಯಕ್ತಿ  ನೃತ್ಯವನ್ನು ಪ್ರದರ್ಶಿಸಿದರು ಮತ್ತು ನಟುವಾಂಗ ಕಲಾವಿದರಾಗಿಯೂ ಭಾಗವಹಿಸಿದರು.ಮಂಜುನಾಥ್ ಅವರು 66ಕ್ಕೂ ಹೆಚ್ಚಿನ ನೃತ್ಯ ಮತ್ತು ತಾಳದ ಕಾರ್ಯಾಗಾರಗಳನ್ನು ನಡೆಸಿದ್ದು,ನೃತ್ಯ ಸಾಹಿತ್ಯ ಸಂಯೋಜಕರಾಗಿ ಗುರುತಿಸಿಕೊಂಡಿದ್ದಾರೆ.

Read More

22 ಫೆಬ್ರವರಿ 2023, ಬೆಳ್ತಂಗಡಿ: ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ : ಡಾ|| ಮುರಳಿ ಮೋಹನ್ ಚೂಂತಾರು. “ಹುಟ್ಟೂರಿನಲ್ಲಿ ತಮ್ಮದೇ ಜನರ ನಡುವೆ ಊರಿನ ಹಿರಿಯರೊಂದಿಗೆ ಹಿರಿಯರಿಂದ ಸನ್ಮಾನ ಪಡೆಯುವುದು ಅತ್ಯಂತ ಸೌಭಾಗ್ಯ ಮತ್ತು ಅವಿಸ್ಮರಣೀಯ . ಈ ಸನ್ಮಾನದಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ, ಮತ್ತಷ್ಟು ಉತ್ಸಾಹ, ಹುಮ್ಮಸ್ಸಿನಿಂದ ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಣೆ ನೀಡಿದೆ” ಎಂದು ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳುತ್ವದಲ್ಲಿ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಾಟಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ. 5ರಂದು ನಡೆಯಿತು. ಸಮಾಜ ಸೇವೆ ಹಾಗೂ ವೈದ್ಯಕೀಯ ಲೇಖನಗಳ ಮೂಲಕ ಜನಜಾಗೃತಿಗೊಳಿಸಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ವಸಂತ ಶೆಟ್ಟಿ ಬೆಳ್ಳಾರೆ ಅವರ ಸಮರ್ಥ ಮುಂದಾಳತ್ವದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಮಕ್ಕಳ ಪ್ರತಿಭೆಯನ್ನು ನೀರೆರೆದು ಪೋಷಿಸುವ ಕೆಲಸ ನಿನಾದ ಸಂಸ್ಥೆ ತಂಟೆಪ್ಪಾಡಿ ಮಾಡುತ್ತಿದೆ. ಈ ನಿನಾದ ಸಂಸ್ಥೆ ಮುಂದೆ ನೀನಾಸಂ ಸಂಸ್ಥೆಯ…

Read More

ಪಂಜೆಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ 22ಫೆಬ್ರವರಿ 1874ರಂದು ಜನಿಸಿದರು. ತಂದೆ ರಾಮಪ್ಪಯ್ಯ, ತಾಯಿ ಶಾಂತಾದುರ್ಗಾ ಅಥವಾ ಸೀತಮ್ಮ, ಸರಳಜೀವಿಗಳು, ದೈವಭಕ್ತರು, ಶೀಲವಂತರು, ಬಡಕುಟುಂಬದ ಪಂಜೆಮಂಗೇಶರಾಯರು ಶ್ರಮವಹಿಸಿ ಬಿ.ಎ. ಪದವೀಧರರಾದರು. ಸೈದಾಪೇಟೆಯ ತರಬೇತಿ ಕಾಲೇಜಿನಲ್ಲಿ ಎಲ್.ಟಿ. ಪಾಸು ಮಾಡಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. ಅನಂತರ ಮಂಗಳೂರಿನ ಸಬ್ ಅಸಿಸ್ಟೆಂಟ್ ಶಾಲಾ ಇನ್‌ಸ್ಪೆಕ್ಟರರಾಗಿ, ಕೊಡಗಿನಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ, ಮಡಕೇರಿ ಸೆಂಟ್ರಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸಮಾಡಿದರು. ‘ಮಕ್ಕಳ ಸಾಹಿತ್ಯ ಪಿತಾಮಹ’ರೆನಿಸಿಕೊಂಡಿದ್ದ ಇವರು ಸಣ್ಣಕಥೆ, ಕಥನಕವನ, ಹರಟೆ ಮುಂತಾದ ಕ್ಷೇತ್ರಗಳಲ್ಲಿ ಸಾಹಿತ್ಯ ಕೈಂಕರ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಆರಂಭವಾದ ‘ಸುಹಾಸಿನಿ’ ಪತ್ರಿಕೆ ಇವರ ಸಾಹಿತ್ಯ ಕೆಲಸಕ್ಕೆ ಇಂಬುಕೊಟ್ಟಿತು. ಈ ಪತ್ರಿಕೆಯಲ್ಲಿ ಇವರು ಬರೆದ ‘ನನ್ನ ಚಿಕ್ಕ ತಂದೆ, ಕಮಲಾಪುರದ ಹೊಟ್ಟಿನಲ್ಲಿ’ ಮುಂತಾದ ಸರಸ, ವಿನೋದದ ಕಥೆಗಳು, ಮೃಥುಲಾ, ದುರ್ಗಾವತಿ ಮುಂತಾದ ಐತಿಹಾಸಿಕ ಕಥೆಗಳೂ ಪ್ರಕಟವಾಯಿತು. ಬ್ರಿಟಿಷ್ ವಸಾಹತುಶಾಹಿಗೆ ಬಹಳ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಕವಿಗಳಲ್ಲಿ ಪಂಜೆಯವರೂ ಒಬ್ಬರು. ಅವರ ನಾಗರಹಾವೆ ಹಾವೊಳು ಹೂವೆ,…

Read More

ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ : ಡಾ| ಜಯಶ್ರೀ 22 ಫೆಬ್ರವರಿ 2023,  ಕಾಸರಗೋಡು: ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಸುಪ್ತ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಸೂಕ್ತ ವೇದಿಕೆ, ಪ್ರೋತ್ಸಾಹ ಅತ್ಯಗತ್ಯ. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಕಲ್ಪಿಸಿರುವ ನಾರಿ ಚಿನ್ನಾರಿ ವೇದಿಕೆ ಶ್ಲಾಘನೀಯ ಹಾಗೂ ಅಭಿನಂದನೀಯ ಎಂದು ಡಾ. ಜಯಶ್ರೀ ನಾಗರಾಜ್ ಹೇಳಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕವಾದ ನಾರಿ ಚಿನ್ನಾರಿಯನ್ನು ಫೆಬ್ರವರಿ 19ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಲೆ, ಸಂಸ್ಕೃತಿ ಪೋಷಣೆ ಮಾಡುತ್ತಿರುವ ರಂಗಚಿನ್ನಾರಿ ಇದೀಗ ನಾರಿ ಚಿನ್ನಾರಿ ಮಹಿಳಾ ಘಟಕದ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಬೆಳಕಿಗೆ ಬರಲು ಈ ವೇದಿಕೆ ಸೂಕ್ತ ಎಂದರು. ಕಾಸರಗೋಡು ನಗರಸಭೆ ಕೌನ್ಸಿಲರ್ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು.…

Read More

21 ಫೆಬ್ರವರಿ 2023, ಮಂಗಳೂರು: ಖ್ಯಾತ ನಾಟಕಕಾರ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ವಿರಚಿತ ‘ಬ್ರಹ್ಮ ಕಪಾಲ’ ತುಳು ಪೌರಾಣಿಕ ನಾಟಕವು ಈಗಾಗಲೇ ಹತ್ತಾರು ಪ್ರದರ್ಶನ ಕಂಡಿದೆ. ಪೂರ್ವ ಮುದ್ರಿತ ಧ್ವನಿ ಸಂಗೀತ ಬಳಸಿಕೊಂಡು ತಾರಾನಾಥ್ ಉರ್ವ ನಿರ್ದೇಶನದಲ್ಲಿ ಫೆಬ್ರವರಿ 17ರಂದು ಪ್ರದರ್ಶನವನ್ನು ಕಂಡಿತು ಮಂಗಳೂರಿನ ಪ್ರತಿಷ್ಠಿತ ಮಹಿಳಾ ನಾಟಕ ತಂಡ. ಕಾವುಬೈಲು ಪಂಚಲಿಂಗೇಶ್ವರ ಮಹಿಳಾ ಭಕ್ತ ವೃಂದ. ಆರತಿ ರಾಮಚಂದ್ರ ಆಳ್ವರ ಸಂಯೋಜನೆಯಲ್ಲಿ ಎರಡು ತಿಂಗಳ ರಂಗಾಭ್ಯಾಸದಿಂದ ಪರಿಪುಷ್ಟವಾದ ಈ ತಂಡ ಸತ್ಯೋದ ಸಿರಿ, ಭಗವತಿ, ಯಕ್ಷಮಣಿ, ಅಹಲ್ಯ, ನಳದಮಯಂತಿ ಮೊದಲಾದ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಅನುಭವ ಪಡೆದಿದೆ. ಬಜಾಜ್ ಕಾವುಬೈಲ್ ಪರಿಸರದ ದೇವಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮಹಿಳೆಯರು ರಂಗಾಸಕ್ತಿಯಿಂದ ಕಟ್ಟಿ ಬೆಳೆಸಿದ ಮಹಿಳಾ ಕಲಾವಿದರ ಕೂಟ ಇದು. ಪೌರಾಣಿಕ ನಾಟಕ ಪ್ರದರ್ಶನಕ್ಕೆ ಹೋಗಿಕೊಳ್ಳುವ ರಂಗ ನಡೆಯನ್ನು ಅಭ್ಯಾಸಿಸಿ ಪ್ರಸ್ತುತಪಡಿಸಿ ಜನಾನುರಾಗ ಪಡೆದು ಅಗ್ರಪಂಗ್ತಿಯ ಮಹಿಳಾ ನಾಟಕ ತಂಡವಾಗಿ ರೂಪುಗೊಂಡಿದೆ. ಪಂಚಲಿಂಗೇಶ್ವರನ ಸಾನಿಧ್ಯದಲ್ಲಿ ಶಿವಮಹಿಮೆಯನ್ನು…

Read More