Subscribe to Updates
Get the latest creative news from FooBar about art, design and business.
Author: roovari
21 ಫೆಬ್ರವರಿ 2023, ಮಂಗಳೂರು: ಅತ್ಯಂತ ವಿನೀತ, ಮೃದು ಭಾಷಿ, ಸಾತ್ವಿಕ ಮನೋಭಾವದ ಸಹೃದಯಿ ವಿದ್ವಾಂಸ ಹರಿದಾಸ ಅಂಬಾತನಯ ಮುದ್ರಾಡಿ ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ. ಶಿಕ್ಷಕ, ವೇಷಧಾರಿ, ಹರಿದಾಸ, ಅರ್ಥದಾರಿ, ಪ್ರವಚನಕಾರ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ್ಯ ಪೂರ್ಣವಾದ ಸಾಧನೆಯನ್ನು ಮಾಡಿದ, ಸಮಾಜದ ಎಲ್ಲಾ ಮಂದಿಗೆ ಮನೆಯ ಸದಸ್ಯರಂತೆ ಇದ್ದು ಮಾರ್ಗದರ್ಶನ ಮಾಡಿ ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ. ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಪಾಲ್ಗೊಂಡದ್ದು ಕೊನೆಯ ಕಾರ್ಯಕ್ರಮವಾಗಿತ್ತು. ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಗೌರವ ಅವರಿಗೆ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ಈ ದಿಗ್ಗಜ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನ ಹಾಗೂ ಕೃತಿಗಳ ರಚನೆ ಮಾಡಿದ ಧೀಮಂತ. ಜನಮಾನಸದ ಹಿರಿಮೆಯಂತಿದ್ದ ಮಾರ್ಗದರ್ಶಕರೂ ಹಿರಿಯರೂ ಆದ ಇವರು ಕನ್ನಡ…
20 ಫೆಬ್ರವರಿ 2023, ಮಂಗಳೂರು: “ಗುರವರ”ದಲ್ಲಿ ಸಂಸ್ಕಾರ ಭಾರತಿ ಮಂಗಳೂರು ವತಿಯಿಂದ “ಭರತ ಮುನಿ ಸ್ಮೃತಿ ದಿವಸ”ವನ್ನು ದಿನಾಂಕ 19-02-2023ನೇ ಭಾನುವಾರ ಸಂಜೆ 6-30 ಗಂಟೆಗೆ ಆಚರಿಸಲಾಯಿತು. ವಿದುಷಿ ರೂಪಶ್ರೀ ಮಧುಸೂದನ್ ನಿರ್ದೇಶಕರು ನೃತ್ಯಾಂಗನ ಪ್ರದರ್ಶನ ಕೇಂದ್ರ, ನಾಗರಬಾವಿ, ಬೆಂಗಳೂರು ಇವರು ಭರತಮುನಿಗೆ ನುಡಿನಮನ ಸಲ್ಲಿಸುತ್ತಾ “ಭಾರತ ಮಾತೆಯನ್ನು ವೈಭವೀಕರಿಸಿದ ಮುನಿಪುಂಗವ ಭರತ ಮುನಿಗಳು” ಎಂದರು. ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್ ಇಲ್ಲಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ್ ನಾವಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಇವರು ಮಾತನಾಡಿ “ಮನಸ್ಸನ್ನು ಕೆರಳಿಸುವ ನೃತ್ಯದಲ್ಲಿ ಮಕ್ಕಳನ್ನು ತೊಡಗಿಸದೆ, ಸಂಸ್ಕಾರ ಉಳಿಸುವ ಬೆಳೆಸುವ ಲಲಿತ ಕಲೆಗಳ ಕಡೆಗೆ ಮಕ್ಕಳ ಒಲವು ಹರಿಯುವಂತೆ ಮಾಡಿ” ಎಂದು ಕಿವಿಮಾತು ಹೇಳಿದರು. ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಸ್ವಾಗತಿಸಿ ಮಾಧವ ಭಂಡಾರಿ ವಂದಿಸಿದರು. ಸಭಾ ಕಾರ್ಯಕ್ರಮದ ಕೊನಯಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು…
‘ತ್ರಿಪದಿ ಕವಿ’ ಸರ್ವಜ್ಞ ಜಯಂತಿಯಾದ ಇಂದು, ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಿಕೆ ಡಾ| ಮೀನಾಕ್ಷಿ ರಾಮಚಂದ್ರರ ಈ ಲೇಖನದ ಮೂಲಕ ಕವಿಗೆ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಸುಮಾರು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞನನ್ನು ‘ತ್ರಿಪದಿ ಕವಿ’ ಎಂದು ಕರೆಯುತ್ತಾರೆ. ಈತ ಓರ್ವ ಶ್ರೇಷ್ಠ ವಚನಕಾರ ಹಾಗೂ ದಾರ್ಶನಿಕ. ಹಾವೇರಿ ಜಿಲ್ಲೆಯ ಅಂಬಲೂರು ಈತನ ಜನ್ಮಸ್ಥಳ. ತಂದೆ ಬಸವರಸ ತಾಯಿ ಕುಂಬಾರ ಮಾಳಿ. ಈತನ ಹುಟ್ಟಿನ ಬಗ್ಗೆ ಹಲವಾರು ಊಹಾಪೋಹಗಳು ಇವೆ. ಈತನ ಪೂರ್ವಾಶ್ರಮದ ಹೆಸರು ಪುಷ್ಪದತ್ತ ಎಂದೂ ಹೇಳಲಾಗುತ್ತದೆ. ‚ಸರ್ವಜ್ಞ‛ ಎನ್ನುವ ಅಂಕಿತದಲ್ಲಿ ಸರ್ವಜ್ಞ ಎನ್ನುವ ಅಂಕಿತದಲ್ಲಿ ದೊರೆಯುವ ಆತನ ವಚನವೊಂದರಲ್ಲಿ ತಾನು ಏಳು ಲಕ್ಷದ ಎಪ್ಪತ್ತೇಳು ಸಾವಿರದ ಏಳುನೂರ ಎಪ್ಪತ್ತೇಳು ವಚನಗಳನ್ನು ಬರೆದಿರುವೆ ಎಂದು ಆತ ಹೇಳಿಕೊಂಡಿದ್ದರೂ ಸಹಸ್ರಾರು ವಚನಗಳನ್ನು ಈತ ಬರೆದಿರುವನೆಂಬುದು ವೇದ್ಯವಾಗುತ್ತದೆ. ಅವುಗಳಲ್ಲಿ ಕೆಲವು ಪ್ರಕ್ಷಿಪ್ತವಾಗಿ ಸೇರಿಕೊಂಡಿರುವ ಸಾಧ್ಯತೆಗಳೂ ಇವೆ. ‘ಪರಮಾರ್ಥ’ ಎನ್ನುವ ಅಂಕಿತದಲ್ಲೂ ಈತ ಬರೆದಿದ್ದನು ಎನ್ನುವ ಊಹೆಯೂ ಇದೆ. ಸಮಾಜದ ಅಂಕುಡೊAಕುಗಳನ್ನು ಚಿಕಿತ್ಸಕ ದೃಷ್ಟಿಯಿಂದ ತನ್ನ…
19 ಫೆಬ್ರವರಿ 2023, ಮಂಗಳೂರು: 05.05.1997ರಂದು ವಿನಯ ಆಚಾರ್ಯ ಹಾಗೂ ಸುಮ ಆಚಾರ್ಯ ಇವರ ಮಗಳಾಗಿ ಅಶ್ವಿನಿ ವಿ ಭಟ್ ಅವರ ಜನನ. MSC chemistry, B.Ed ಇವರ ವಿದ್ಯಾಭ್ಯಾಸ. ತಂದೆ ವಿನಯ ಆಚಾರ್ಯ ಹಾಗೂ ಮನೆಯವರಲ್ಲಿದ್ದ ಯಕ್ಷಗಾನದ ಮೇಲಿನ ಒಲವು ಅಶ್ವಿನಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಪೂರ್ಣಿಮಾ ಯತೀಶ್ ರೈ ಹಾಗೂ ರಮೇಶ್ ಶೆಟ್ಟಿ ಬಾಯಾರು ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಭಾಗವತರಲ್ಲಿ ಪ್ರಸಂಗ ನಡೆ ಬಗ್ಗೆ ತಿಳಿದು, ಪದ್ಯಗಳನ್ನು ನೋಡಿಕೊಂಡು ಬಳಿಕ ಸಹ ಕಲಾವಿದರಲ್ಲಿ ಪೂರ್ವಭಾವಿ ಚರ್ಚೆ ಮಾಡಿ ತಯಾರಿ ಮಾಡಿಕೊಳ್ತೇನೆ ಎಂದು ಅಶ್ವಿನಿ ಅವರು ಹೇಳುತ್ತಾರೆ. ಸುಧನ್ವ ಮೋಕ್ಷ, ದಕ್ಷಾಧ್ವರ, ಜಾಂಬವತಿ ಕಲ್ಯಾಣ, ಸುದರ್ಶನ ಗರ್ವ ಭಂಗ, ದೇವಿ ಮಹಾತ್ಮೆ, ಕನಕಾಂಗಿ ಕಲ್ಯಾಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ದಾಕ್ಷಾಯಿಣಿ, ಸುಧನ್ವ, ಕೃಷ್ಣ, ಲಕ್ಷ್ಮೀ, ಸುಭದ್ರೆ ಇತ್ಯಾದಿ ಇವರ ನೆಚ್ಚಿನ ವೇಷಗಳು. ಶ್ರೀ ಮಹಾ…
19 ಫೆಬ್ರವರಿ 2023, ಮಂಗಳೂರು: ಹಿಂದಿಯ ಸೆಲೆಬ್ರೇಶನ್ ಪ್ರಾದೇಶಿಕ ಭಾಷೆಯಲ್ಲಿ ಇಲ್ಲ: ನಟ ರಿಷಬ್ ಹಿಂದಿ ಸಿನಿಮಾಗಳಲ್ಲಿ ಪ್ರೇಕ್ಷಕನಿಗೆ ಸೆಲೆಬ್ರೇಶನ್ ಕಾಣಿಸಿಕೊಂಡರೆ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ಸಂಸ್ಕೃತಿಯನ್ನು ನೋಡುವ ಜತೆಗೆ ಅಷ್ಟೇ ಸಮರ್ಥವಾಗಿ ತೋರಿಸುವ ಕೆಲಸವನ್ನು ಮಾಡುವುದರಿಂದ ಕಾಂತಾರದಂತಹ ಸಿನಿಮಾ ಗೆಲುವಿನ ಹಾದಿಯನ್ನು ಹಿಡಿಯಿತು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಅವರು ಭಾನುವಾರ ನಗರದ ಡಾ.ಟಿಎಂಎ ಪೈ ಕನ್ವೆನ್ಶನ್ ಸೆಂಟರ್‍ನಲ್ಲಿ ಭಾರತ್ ಫೌಂಡೇಶನ್ ಆಯೋಜಿಸಿರುವ ಐದನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ 2023ನಲ್ಲಿ `ಸಿನಿಮಾ ಮತ್ತು ಸಂಸ್ಕೃತಿ ಸ್ಥಳೀಯವು ಸಾರ್ವತ್ರಿಕವಾದಾಗ’ ಎನ್ನುವ ವಿಚಾರದಲ್ಲಿ ಮಾತನಾಡುತ್ತಾ, ಕೋವಿಡ್ ಬಳಿಕ ಒಟಿಟಿ ಬಹಳ ದೊಡ್ಡದಾಗಿ ಕ್ರಾಂತಿಯನ್ನೇ ಎಬ್ಬಿಸಿದೆ. ಹಿಂದಿಯ ಸಿನಿಮಾ ಪ್ರೇಕ್ಷಕರು ರಷ್ಯನ್, ಹಾಲಿವುಡ್‍ನ ಸಿನಿಮಾಗಳನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಒಟಿಟಿ ಬಂದ ಬಳಿಕವಂತೂ ಹಾಲಿವುಡ್ ಸೇರಿದಂತೆ ಇತರ ಭಾಷೆಯ ಸಿನಿಮಾಗಳನ್ನು ತಕ್ಷಣವೇ ನೋಡುವ ಅವಕಾಶ ಇರುತ್ತದೆ. ಆದರೆ ನಮ್ಮ ನೆಲೆದ ಹಾಗೂ ಸಂಸ್ಕೃತಿಯ ಎಳೆಯನ್ನು ಇಟ್ಟುಕೊಂಡು ಬಂದ ಸಿನಿಮಾಗಳನ್ನು ಒಟಿಟಿಯಲ್ಲಿ…
19 ಫೆಬ್ರವರಿ 2023, ಮಂಗಳೂರು: ಸಂಸ್ಕೃತಿಯ ಪ್ರತೀಕ ಯಕ್ಷಗಾನ ಕಲೆ: ಡಾ. ತಲ್ಲೂರು ಶಿವರಾಮ ಶೆಟ್ಟಿ ಮಂಗಳೂರು: ನಗರದ ಪುರಭವನದಲ್ಲಿ ನಡೆದ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಇದರ ದಶಮಾನೋತ್ಸವದ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಅವರು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಿ, ಬಾಲಕಲಾವಿದರನ್ನು ಪುರಸ್ಕರಿಸುವುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ಕಾರ್ಯವಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕ ಯಕ್ಷಗಾನ ಕಲೆ. ಇದನ್ನು ಪ್ರೇರೇಪಿಸಿ ಬೆಳೆಸುವಲ್ಲಿ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಪಾತ್ರದ ಬಗ್ಗೆ ಮೆಚ್ಚಿಗೆ ಸೂಚಿಸಿದರು. ಯಕ್ಷಗಾನ ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ಕಲೆ ಉಳಿದು ಬೆಳೆಯಲು ಕಲಾವಿದರು, ಸಂಘಟಕರು, ಪೋಷಕರು ಮತ್ತು ಪ್ರೇಕ್ಷಕರು ಕೂಡಿದಾಗ ಮಾತ್ರ ಸಾಧ್ಯ ಎಂದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಪಾಲಕರು ಕರೆ ತರಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು. ಈ ಸಂದರ್ಭದಲ್ಲಿ ಹಿರಿಯ ಪ್ರಸಿದ್ಧ…
18 ಫೆಬ್ರವರಿ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜನೆಯಲ್ಲಿ ಸಂತ ಅಲೋಸಿಯಸ್ ಕಾಲೇಜು ಸಮುದಾಯ ಬಾನುಲಿ ರೇಡಿಯೋ ಸಾರಂಗ್ ಸಹಯೋಗದಲ್ಲಿ ಕಾಲೇಜು ಮಟ್ಟದ `ಏಕಾಂಕ ನಾಟಕ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ತುಳುನಾಡಿನ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿರುವ ಉಳ್ಳಾಲದ ಅಬ್ಬಕ್ಕ ರಾಣಿಯ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಐತಿಹಾಸಿಕ ಘಟನೆಗಳ ಮೂಲಕ ಏಕಾಂಕ ನಾಟಕ ಪ್ರದರ್ಶನ ನೀಡಬೇಕು. ಸ್ಪರ್ಧೆಯ ನಿಯಮಗಳು: 1. ದಿನಾಂಕ 18.03.2023 ಬೆಳಿಗ್ಗೆ 9.3೦ ರಿಂದ 2. ಸ್ಥಳ : ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಎಲ್ .ಸಿ. ಆರ್. ಸಭಾಂಗಣ 3. ಸ್ಪರ್ಧೆಯು ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳಿಗೆ ಸೀಮಿತವಾಗಿರುತ್ತದೆ. 4. ನಾಟಕದ ಅವಧಿ 20+5 ಅಂದರೇ 25 ನಿಮಿಷಗಳು . 5. ಭಾಗವಹಿಸುವ ಕಾಲೇಜು ತಂಡಗಳು ಫೆಬ್ರವರಿ 28ರ ಒಳಗೆ ತಮ್ಮ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪತ್ರದೊಂದಿಗೆ ನೋಂದಾವಣೆ ಮಾಡಿಕೊಳ್ಳಬೇಕು. 6. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಪ್ರಶಸ್ತಿ ಫಲಕ…
18 ಫೆಬ್ರವರಿ 2023, ಮಂಗಳೂರು: ಯಕ್ಷಗಾನದ ಹಿರಿಯ ತಲೆಮಾರಿನ ಕೊಂಡಿಯಂತಿದ್ದ ಬಲಿಪ ನಾರಾಯಣ ಭಾಗವತರು ತನ್ನ ಅಸಾಧಾರಣವಾದ ಜ್ಞಾನ ಸಂಪನ್ನತೆಯಿಂದ, ಎಲ್ಲರೊಂದಿಗೆ ಬೆರೆತು ಸಜ್ಜನಿಕೆಯಿಂದ ಕೂಡಿದ ಮಾತುಗಳಿಂದ ಜನಪ್ರೀತಿ ಗಳಿಸಿದ್ದರು. ತನ್ನ ಏರುಸ್ವರದ ಭಾಗವತಿಕೆಯಿಂದ ಯಕ್ಷಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರು ಯಕ್ಷರಂಗದಲ್ಲಿ ಮೂಡಿಸಿ ಹೋಗಿರುವ ಛಾಪು ಸದಾ ಕಾಲವೂ ಸ್ಮರಣೀಯವಾಗಿದೆ. ಪ್ರಸಂಗ ರಚನೆ, ಸಹಿತ ಅನೇಕ ಪ್ರಸಂಗಗಳ ಪದ್ಯಗಳನ್ನು ಕಂಠಸ್ಥಗೊಳಿಸಿದ್ದ ಅವರು ಓರ್ವ ಪ್ರೌಢ ಭಾಗವತರಾಗಿ ಕಿರಿಯ ಕಲಾವಿದರೆಲ್ಲರಿಗೂ ಮಾರ್ಗದರ್ಶಿಯಾಗಿದ್ದರೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸಿದರು. ಇಂದು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಬಲಿಪ ನಾರಾಯಣ ಭಾಗವತರಿಗೆ ‘ಸಾರ್ವಜನಿಕ ಶ್ರದ್ಧಾಂಜಲಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ನುಡಿನಮನ ಸಲ್ಲಿಸುತ್ತಾ ಬಲಿಪರ ಮತ್ತು ತನ್ನ ಯಕ್ಷಗಾನ ಒಡನಾಟವನ್ನು ಸ್ಮರಿಸಿದರು. ಮಗುವಿನ ಮುಗ್ಧತೆ ಬಲಿಪರಲ್ಲಿತ್ತು. ಭಾಗವತಿಕೆಯ ಹಾಗೂ ಯಕ್ಷಗಾನ ಕಲೆಯ ಕುರಿತ ಅವರಲ್ಲಿದ್ದ ಅಗಾಧವಾದ ಜ್ಞಾನ ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುವ…
18 ಫೆಬ್ರವರಿ 2023, ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ 2023 ಐದನೇಆವೃತ್ತಿಯು ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಶನಿವಾರದಂದು ವಿದ್ಯುಕ್ತವಾಗಿಆರಂಭಗೊಂಡಿತು. ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ಉಪಕುಲಪತಿ ವಿನಯ್ ಹೆಗ್ಡೆ ಅವರು ಮಾತನಾಡಿ ಮಂಗಳೂರು ನಗರವು ವಿದ್ಯಾಕ್ಷೇತ್ರ, ಆರೋಗ್ಯಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್ ಫೌಂಡೇಶನ್ ಮೂಲಕ ಆಯೋಜಿಸಲಾದ ಈ ಲಿಟ್ ಫೆಸ್ಟ್ ಕಾರ್ಯಕ್ರಮವು ಮಾರ್ಗದರ್ಶಿಯಾಗಿದೆ. ಮಂಗಳೂರು ಪ್ರದೇಶವು ಧಾರ್ಮಿಕವಾಗಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಏರಿದ ಸ್ಥಳವಾಗಿದೆ. ಸ್ವಾತಂತ್ರ‍್ಯಪೂರ್ವದಲ್ಲಿಯೇ ಮಂಗಳೂರು ಪ್ರದೇಶಕ್ಕೆ ವಿಶೇಷ ಸ್ಥಾನವಿತ್ತು. ಭೌಗೋಳಿಕವಾಗಿಯೂ ಶ್ರೀಮಂತಿಕೆ ಹೋಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್ ಫೆಸ್ಟ್ ವಿಶ್ವಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ವಾಣಿಜ್ಯ, ಉದ್ಯೋಗ ಕ್ಷೇತ್ರಗಳಲ್ಲೂ ಮಂಗಳೂರು ದೇಶದಲ್ಲೇ ಶ್ರೇಷ್ಠ ಸ್ಥಳವಾಗಿ ಮಾರ್ಪಡುತ್ತಿದೆ ಎಂದರು. ಎಲ್ಲರೂ ಅರಿಯಬೇಕಾದ, ತಿಳಿಯಬೇಕಾದ ಸ್ಥಳ ಇದಾಗಿದೆ ಎಂದರು. ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಹಿರಿಯ ಕಿರಿಯ ಉದ್ಯಮಿಗಳು…
17 ಫೆಬ್ರವರಿ 2023, ಕಾರ್ಕಳ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಪ್ರಸಿದ್ಧ ಗಮಕ ವಾಚನಕಾರರಾದ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, ಪ್ರಸಿದ್ಧ ಗಮಕಿ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ಗಮಕ ಕಲಾ ವಾಚನ ಪ್ರಶಸ್ತಿಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಅವರಿಗೆ ಮತ್ತು ಭಾರತ ಸರಕಾರದ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಶಿಲ್ಪಿ ಶ್ರೀ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಇದೇ ಫೆಬ್ರವರಿ 26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನದ ಜೊತೆ ಮೂರು ದತ್ತಿ ಪ್ರಶಸ್ತಿಗಳ…