Author: roovari

ಬೈಲೂರು : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ 5ನೇ ಕಾರ್ಯಕ್ರಮ ದಿನಾಂಕ 15-09-2023 ಶುಕ್ರವಾರ ಸಂಜೆ ಗಂಟೆ 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯರವರಿಂದ ಹಾಗೂ ಅವರ ಶಿಷ್ಯರಿಂದ ನೆರವೇರಿತು. ವಯೊಲಿನ್ ನಲ್ಲಿ ಶ್ರೀಧರ್ ಆಚಾರ್ ಮತ್ತು ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಸಹಕರಿಸಿದರು. ಕಾರ್ಯದರ್ಶಿ ಶ್ರೀಯುತ ನಾರಾಯಣ ದಾಸ್ ಉಡುಪ ಕಲಾವಿದರನ್ನು ಸ್ವಾಗತಿಸಿ, ದೀಪ ಬೆಳಗಿಸುವುದರೊದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹೆಚ್ಚು ದೇವಿ ಕೃತಿಗಳನ್ನು ಶಿಷ್ಯೆಯರಿಂದ ಹಾಡಿಸಿ, ಕೊನೆಗೆ ಫರಸ್ ರಾಗದ ಅದಿತಾಳದ ತಿಲ್ಲಾನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಕು.ಶ್ರಾವಣಿ ಶಾಸ್ತ್ರಿ, ಕು.ಜೇತ್ರ ಮಯ್ಯ, ಕು.ಹಿತಾ ಮಯ್ಯ, ಡಾ.ರಶ್ಮಿ ನಾಯಕ್, ಮಾ.ಯಶಸ್ವೀ ನಾಯಕ್, ಸ್ವಾತಿ ರಾವ್, ಸರಸ್ವತಿ ಉಡುಪ, ಸಪ್ನಾ ಕೊಳತ್ತಾಯ, ಶ್ರಾವ್ಯ ಬಾಸ್ತ್ರಿ, ರಂಜನಿ ಸಾಮಗ ಇವರೆಲ್ಲಾ ಇಂದು ಗುರುಗಳ ಜೊತೆಯಲ್ಲಿ ಹಾಡಿ ಮಹಿಷ ಮರ್ದಿನಿ ದೇವರ ಸನ್ನಿಧಿಯಲ್ಲಿ ಸಂಗೀತ ಸೇವೆ ಅರ್ಪಣೆ ಮಾಡಿದಾಗ, ರಾಮಕೃಷ್ಣ ಕೊಡಂಚರು ಧನ್ಯವಾದ ಸಮರ್ಪಸಿದರು.

Read More

ಮಂಗಳಗಂಗೋತ್ರಿ : ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಸಿದ್ಧಪಡಿಸಿದ ಶ್ರೀ ನಾಗೇಶ್ ಕಾಲೂರು ಇವರ ‘ಶ್ರೀಕಾವೇರಿ ದರ್ಶನಂ’ ಮತ್ತು ಅವರೇ ಅನುವಾದಿಸಿದ ‘ಕೊಡಗಿನಿಂದ ಗಿರಿತನಕ’ ಎಂಬ ಎರಡು ಕೃತಿಗಳು ಸಿಂಡಿಕೇಟ್ ಸಭಾಂಗಣದಲ್ಲಿ ದಿನಾಂಕ 15-09-2023ರಂದು ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಇವರು ಮಾತನಾಡುತ್ತಾ “ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆಯಂತಹ ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ಸಿಗಬೇಕೇ ಹೊರತು ಇತರ ವಿಷಯಗಳಿಗಲ್ಲ. ವಿವಿಯ ಪ್ರಕಟಣೆಗಳು ಸಮಾಜಕ್ಕೆ ಉಪಯುಕ್ತವಾಗುವಂತಿದ್ದು ಸಾಮಾಜಿಕ ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಉತ್ತಮಪಡಿಸಬೇಕು. ಕಾವೇರಿ ನಮಗೆ ನದಿ ಮಾತ್ರವಲ್ಲ. ಅದರೊಂದಿಗೆ ನಮಗೊಂದು ಭಾವನಾತ್ಮಕವಾದ ನಂಟಿದೆ. ಅದರ ಒಳಹೊರಗನ್ನು ಕಾವ್ಯಾತ್ಮಕವಾಗಿ ಶ್ರೀಕಾವೇರಿ ದರ್ಶನಂ ಕಾವ್ಯ ಹಿಡಿದಿಟ್ಟಿದೆ. ಪ್ರಸಾರಾಂಗ ಇಂತಹ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ವಿವಿಯ ಗೌರವವನ್ನು ಹೆಚ್ಚಿಸಿದೆ” ಎಂದು ಹೇಳಿದರು. ಸಮಾರಂಭದಲ್ಲಿ ವಿವಿಗೆ ನೂತನ ಕುಲಸಚಿವರಾಗಿ ಬಂದು ಅಧಿಕಾರ ಸ್ವೀಕರಿಸಿದ ಕೆ.ರಾಜು ಕೆ.ಎ.ಎಸ್. ಇವರು…

Read More

ಮಂಗಳೂರು : ಗಾಂಧಿನಗರದ ಶ್ರೀ ಗೋಕರ್ಣನಾಥೆಶ್ವರ ಕಾಲೇಜಿನ ಲಲಿತಾ ಕಲಾ ಸಂಘ ಹಾಗೂ ಮಹಿಳಾ ಘಟಕದ ನೇತ್ರತ್ವದಲ್ಲಿ ಸಾಮಾಜಿಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಪ್ಲಾಸ್ಟಿಕ್ ಮುಕ್ತ ಭಾರತ’ ಎಂಬ ವಿಷಯದ ಕುರಿತು ಬೀದಿ ನಾಟಕ ಪ್ರದರ್ಶನವು ದಿನಾಂಕ 14-09-2023ರಂದು ಗಾಂಧಿ ಪಾರ್ಕ್ ಸಮೀಪದಲ್ಲಿ ಜರುಗಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 25 ವಿದ್ಯಾರ್ಥಿಗಳು ಬೀದಿನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದರು. ಲಲಿತ ಕಲಾ ಸಂಘ ಮತ್ತು ಮಹಿಳಾ ಘಟಕದ ಮುಖ್ಯಸ್ಥೆಯಾದ ಡಾ. ನಿಶಾ ಯುವರಾಜ್ ಮತ್ತು ಕುಮಾರಿ ಸಂಗೀತ ಸಾಲ್ಯಾನ್ ಭಾಗವಹಿಸಿದ್ದರು.

Read More

ಮಣಿಪಾಲ : ಡಾ. ಟಿಎಂಎ ಪೈ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕಾಗಿ ಕೊಂಕಣಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ದಿನಾಂಕ 01-01-2019ರಿಂದ 31-12-2021ರ ಮಧ್ಯೆ ಪ್ರಕಟಿತ ದೇವನಾಗರಿ, ಕನ್ನಡ, ಮಲಯಾಳಂ, ರೋಮನ್ ಲಿಪಿಯ ಪುಸ್ತಕಗಳು ಪ್ರಶಸ್ತಿಗೆ ಅರ್ಹ. 4 ಪ್ರತಿಗಳನ್ನು ದಿನಾಂಕ 31-10-2023ರೊಳಗೆ ಅಧ್ಯಕ್ಷರು, ಡಾ. ಟಿ.ಎಂ.ಎ. ಪೈ ಫೌಂಡೇಶನ್, ಸಿಂಡಿಕೇಟ್ ಹೌಸ್, ಮಣಿಪಾಲ-576104 ಇಲ್ಲಿಗೆ ಕಳುಹಿಸಿ, www.drtmapaifoundation.com ಸಂಪರ್ಕಿಸಬಹುದು.

Read More

ಮಡಿಕೇರಿ : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಯೋಜನೆ ಮತ್ತು ಸೇವೆಗಳ ಕುರಿತು ಜನ ಜಾಗೃತಿ ಮೂಡಿಸಲು ಕೊಡಗು ಜಿಲ್ಲೆಯಲ್ಲಿನ ಜಾನಪದ ಕಲಾ ತಂಡ (ಬೀದಿ ನಾಟಕ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಬೀದಿ ನಾಟಕ ಜಾನಪದ ಕಲಾ ತಂಡದಲ್ಲಿ 8 ಜನ (ಸ್ಥಳೀಯ ಕಲಾವಿದರು) ಸದಸ್ಯರು ಇರಬೇಕು. ಇವರಲ್ಲಿ 2 ಮಹಿಳಾ ಕಲಾವಿದರಿರಬೇಕು. ಇಲಾಖೆಯ ಯೋಜನೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶನದ ಅನುಭವವಿರಬೇಕು. ಆಸಕ್ತ ಜಾನಪದ ಕಲಾತಂಡಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಐ.ಇ.ಸಿ. ವಿಭಾಗ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿಯನ್ನು ಪಡೆದುಕೊಂಡು ಸೆಪ್ಟೆಂಬರ್ 21ರೊಳಗೆ ಸಲ್ಲಿಸಬೇಕು.

Read More

ಕಾಸರಗೋಡು : ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಡಾ.ರಮಾನಂದ ಬನಾರಿಯವರ ನೂತನ ಕವಿತೆ, ಖಂಡ ಕಾವ್ಯಗಳ ಸಂಕಲನವಾದ ‘ಸದ್ದಾಗಿಯು ಸದ್ದಾಗದ ಸದ್ದುಗಳು’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಖ್ಯಾತ ವಿದ್ವಾಂಸ ಡಾ. ವಸಂತಕುಮಾರ್ ತಾಳ್ತಜೆಯವರು ಮಾತನಾಡುತ್ತಾ “ಡಾ. ರಮಾನಂದ ಬನಾರಿ ಮಂಜೇಶ್ವರ ಅವರದು ಸಹಜ ಕಾವ್ಯ. ಸಾಮಾಜಿಕ ಸಂಗತಿಗಳಿಗೆ, ಸಮಾಜದ ಏರುಪೇರುಗಳಿಗೆ, ಕಾಲಾನುಗತ ಬದಲಾವಣೆಗಳಿಗೆ ಅವರ ಕವಿ ಹೃದಯ ಮಿಡಿದಿದೆ. ಮೌಲ್ಯಗಳಲ್ಲಿ ಆದ ಬದಲಾವಣೆಗಳಿಗೆ ಅವರ ಕವಿತೆಗಳು ಸ್ಪಂದಿಸಿವೆ” ಎಂದು ಹೇಳಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, “ಕುಟುಂಬ ವೈದ್ಯರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಸಾಹಿತಿಯಾಗಿ ಡಾ. ರಮಾನಂದ ಬನಾರಿ ಕನ್ನಡಕ್ಕೆ ಸಲ್ಲಿಸಿದ ಸೇವೆ ಮಹತ್ತರವಾದುದು. ಗಡಿನಾಡಿನಲ್ಲಿ ಸಾಹಿತ್ಯದ ಜೊತೆಗೆ ಕನ್ನಡದ ಜ್ಯೋತಿ ನಿರಂತರ ಉರಿಯುತ್ತಿರಬೇಕು ಹಾಗೂ ಕನ್ನಡ…

Read More

ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗದ 22ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ದಿನಾಂಕ 10-09-2023ರಂದು ನಡೆಯಿತು. ಮುಂಬಯಿ ಕುರ್ಲಾ ಬಂಟರ ಸಂಘದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಹಾಗೂ ‘ಅರುವ’ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಬಾಸ್ ಗ್ರೂಫ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕರಾದ ಮಹೇಶ್ ಎಸ್.ಶೆಟ್ಟಿ “ಕಳೆದ 22 ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ತಮ್ಮ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ತವರೂರ ಅದೆಷ್ಟೋ ಕಲಾವಿದರನ್ನು ಈ ಮುಂಬಯಿ ಮಾಹಾನಗರಕ್ಕೆ ಆಹ್ವಾನಿಸಿ, ಯಕ್ಷಗಾನ ಮತ್ತು ತಾಳ ಮದ್ದಳೆಯನ್ನು ಪ್ರದರ್ಶಿಸುತ್ತಾ ಬಂದವರಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಹಿರಿಮೆ ಇವರೊಂದಿಗಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ನನ್ನನ್ನು ಸೇರಿಸಿ ಬಂಟರ ಸಂಘದ ಅನೇಕ ಪದಾಧಿಕಾರಿಗಳಿಗೆ ಯಕ್ಷಗಾನವನ್ನು ಕಲಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.…

Read More

ಉಡುಪಿ : ದಿನಾಂಕ 23-09-2023 ಮತ್ತು 24-09-2023ರಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ಹೇವಾರ್ಡ್‌ನ ಶಾಬೂ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಕೂಟದ ಆಯೋಜನೆಯಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ‘ಯಕ್ಷಗಾನ ತರಬೇತಿ’ ನೀಡಲು ಯಕ್ಷಗುರು ಕೆ.ಜಿ. ಗಣೇಶ್‌ ಅಮೆರಿಕಾಕ್ಕೆ ತೆರಳಿದ್ದಾರೆ. ಕೆ.ಜೆ. ಗಣೇಶ್‌ ಇವರು ಈ ಹಿಂದೆ ಏಳು ಬಾರಿ ಅಮೇರಿಕಾಕ್ಕೆ ತೆರಳಿ, ಅಲ್ಲಿ ವಾಸವಿರುವ ನಮ್ಮ ಊರಿನವರಿಗೆ ಯಕ್ಷಗಾನ ತರಬೇತಿ ನೀಡಿರುತ್ತಾರೆ. ಈ ಬಾರಿ ‘ಚಕ್ರವ್ಯೂಹ’ ಎಂಬ ಪ್ರಸಂಗವನ್ನು ನಿರ್ದೇಶಿಸಿ, ಭಾಗವತರಾಗಿ ಭಾಗವಹಿಸಲಿದ್ದಾರೆ. ದಿನಾಂಕ 01-10-2023ರಂದು ಸಾನ್ವಾನ್ಯ ಸನಾತನ ಧರ್ಮಕೇಂದ್ರದಲ್ಲಿ ಗಣೇಶೋತ್ಸವ ಪ್ರಯುಕ್ತ ‘ಮೀನಾಕ್ಷಿ ಕಲ್ಯಾಣ’ ಹಾಗೂ ದಿನಾಂಕ 07-10-2023ರಂದು ‘ವೀರಮಣಿ ಕಾಳಗ’ ಎಂಬ ಪ್ರಸಂಗಗಳನ್ನು ನಿರ್ದೇಶಿಸಲಿದ್ದಾರೆ.

Read More

ಸುರತ್ಕಲ್ : ಕೃಷ್ಣಾಪುರ–ಕಾಟಿಪಳ್ಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 45ನೇ ಗಣೇಶೋತ್ಸವದ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲವು ಕೇಂದ್ರ ಮೈದಾನದಲ್ಲಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಕಾಲೇಜು ಯಕ್ಷತಂಡಗಳ ಅಂತರ್ ಜಿಲ್ಲಾ, ಅಂತರ್ ಕಾಲೇಜು ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯು ದಿನಾಂಕ 10-09-2023ರಂದು ಜರಗಿತು. ಈ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಉದ್ಘಾಟಿಸಿ ಮಾತನಾಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಕಲೆಗಳ ಅಧ್ಯಯನ ಹಾಗೂ ಕಾರ್ಯ ವಿಸ್ತಾರಕ್ಕೆ ಮಹತ್ವ ನೀಡಲಾಗಿದ್ದು, ಯಕ್ಷ ಶಿಕ್ಷಣ ಪರಿಗಣನೆಗೆ ಸೂಕ್ತವಾಗಿದೆ. ಯಕ್ಷಗಾನ ಸರ್ವಾಂಗ ಸುಂದರ ಕಲೆ, ಕಲಾ ಪೋಷಣೆಗೆ ಪ್ರೇಕ್ಷಕರ ಪ್ರೋತ್ಸಾಹವು ಅಗತ್ಯ. ಪಟ್ಲ ಫೌಂಡೇಶನ್ ವತಿಯಿಂದ 37 ಶಾಲೆಗಳಲ್ಲಿ ಉಚಿತ ಯಕ್ಷ ಶಿಕ್ಷಣ ಪ್ರಾರಂಭಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 15,000 ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಗುರಿಯಿದೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್…

Read More

ಕುಂದಾಪುರ : ಸೀತಾಲಕ್ಷ್ಮೀ ಮತ್ತು ಬಿ.ಎಮ್.ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ ಬೀಜಾಡಿಯಲ್ಲಿ ದಿನಾಂಕ 09-09-2023ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರಿಂದ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವ ಮೂಲಕ ಮರುಚಾಲನೆ ಮಾಡಿ ಮಾತನ್ನಾಡಿದ ಬೀಜಾಡಿ ಶೇಷಗಿರಿ ಗೋಟ “ಎಳೆವೆಯಲ್ಲಿ ಯಕ್ಷಗಾನದ ಆಟ ಆಡಿದ್ದು ನೆನಪಾಗುತ್ತಿದೆ. ಯಕ್ಷಗಾನದಿಂದಲೇ ಹಳ್ಳಿಯಲ್ಲಿ ಸಂಸ್ಕೃತಿ ಉಳಿದಿದೆ. ಪ್ರಾಚೀನ ಕಲೆಯಾದ ಯಕ್ಷಗಾನ ಪಾಶ್ಚಾತ್ಯ ದೇಶಗಳಲ್ಲೂ ಹೆಸರು ಮಾಡಿದೆ. ಯಕ್ಷಗಾನ ವಿದ್ಯಾಭ್ಯಾಸಕ್ಕೂ ಪೂರಕ. ಇಂತಹ ಕಲೆಯನ್ನು ಬೆಳೆಸಿ, ತಲೆಯಲ್ಲಿ ಹೊತ್ತು ಅಳಿದ ಭಾಗಕ್ಕೆ ಪುನಃಶ್ಛೇತನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಸಾಧಿಸುತ್ತಿರುವುದು ಯೋಗ್ಯ ಬೆಳವಣಿಗೆ. ಮಕ್ಕಳಿಗೆ ಕಲಿಸಿ, ಮಕ್ಕಳಿಂದಲೇ ಮಕ್ಕಳಿಗಾಗಿ ಶಾಲೆಗಳಲ್ಲಿ ಪ್ರದರ್ಶಿಸುವ ಕಾರ್ಯ ಸ್ತುತ್ಯರ್ಹ” ಎಂದರು. “ಕಾರ್ಯಕ್ರಮದ ಹಿಂದಿನ ಖರ್ಚುಗಳಿಂದೊಡಗೂಡಿದ ತಯಾರಿಯೊಂದಿಗೆ ಜಿಲ್ಲೆಯ ಐದು ಶಾಲೆಗಳಲ್ಲಿ ಉಚಿತವಾಗಿ ಯಾವುದೇ ಸಂಸ್ಥೆಗೆ ಹೊರೆ ಆಗದ ಹಾಗೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಅದ್ಭುತ ಕಾರ್ಯ” ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದ ಅಭಿಪ್ರಾಯಪಟ್ಟರು. ಶಾಲಾಭಿವೃದ್ಧಿ…

Read More