Subscribe to Updates
Get the latest creative news from FooBar about art, design and business.
Author: roovari
ಮೂಡುಬಿದಿರೆ : ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ದಿನಾಂಕ 18-02-2024ರ ಭಾನುವಾರ ನಿಧನರಾಗಿದ್ದಾರೆ. ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿಯವರ ಸುಪುತ್ರರಾಗಿರುವ ಐವತ್ತೆರಡು ವರ್ಷ ಪ್ರಾಯದ ವಸಂತ ಶೆಟ್ಟಿಯವರು ಕಳೆದ ಮೂರು ವರುಷಗಳಿಂದ ಅನಾರೋಗ್ಯದಿಂದಿದ್ದರು. ಸುರೇಂದ್ರ ಕುಮಾರ್ ಕಲತ್ರಪಾದೆಯವರ ರಚನೆಯ ಅತ್ಯುತ್ತಮ ನಾಟಕ ‘ಬೈರ ಕುರಲ್’ನಲ್ಲಿ ‘ಭಾಷಾ’ ಎಂಬ ಹೆಸರಿನೊಂದಿಗೆ ಖಳನಾಯಕನಾಗಿ ಹೆಸರು ಮಾಡಿದ ವಸಂತ್ ಶೆಟ್ಟಿ, ನಂತರ ತುಳು ರಂಗಭೂಮಿಯ ಪ್ರತಿಭಾನ್ವಿತ ಕಲಾವಿದನಾಗಿ ಬೆಳೆದು ಬಂದಿದ್ದರು. ತೋಡಾರು ಬಂಗಬೆಟ್ಟು ಶಾಲೆಯಲ್ಲಿ 5ನೇ ತರಗತಿಯಲ್ಲಿರುವಾಗಲೇ ನಾಟಕದಲ್ಲಿ ಅಭಿನಯಿಸಿ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಓದು ಮುಗಿಸಿದ ಬಳಿಕ ಅವರು ತುಳು ನಾಟಕಗಳಲ್ಲಿ ತೊಡಗಿಸಿಕೊಂಡರು. ‘ಯಶಸ್ವಿ ಕಲಾವಿದೆರ್’ ಮಂಗಳೂರು ತಂಡದ ಸದಸ್ಯರಾಗಿ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ‘ನಮ್ಮ ಕಲಾವಿದೆರ್ ಬೆದ್ರ’ ತಂಡಕ್ಕೆ ಸೇರ್ಪಡೆಯಾಗಿ ಜಿಲ್ಲೆಯಾದ್ಯಂತ ಅನೇಕ ತುಳು ನಾಟಕಗಳಲ್ಲಿ ಅಭಿನಯಿಸಿ ಯಶಸ್ವಿ…
ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ಭಾಷಾ ವಿಭಾಗಗಳು, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಮಾತೃಭಾಷೆ ದಿನಾಚರಣೆ’ಯು ದಿನಾಂಕ 21-02-2024ರಂದು ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಿ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಬಹು ಭಾಷಾ ಕಲಿಕೆಗೆ ತಂತ್ರಜ್ಞಾನ ಬಳಕೆಯ ಸವಾಲುಗಳ ಜೊತೆಯಲ್ಲಿ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಮಾತೃಭಾಷೆ ಬಳಕೆಗೆ ಒತ್ತು ನೀಡುವ ಅಗತ್ಯವಿದೆ. ಪ್ರಪಂಚದ ಎಲ್ಲಾ ಭಾಷೆಗಳು ಉಳಿಯಬೇಕು. ಅದನ್ನು ಮುಂದಿನ ತಲೆಮಾರಿಗೆ ಸಮರ್ಥವಾಗಿ ತಲುಪಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಅದನ್ನು ನೆನಪಿಸುವ ಸಲುವಾಗಿ ಈ ದಿನಾಚರಣೆ. ನಮ್ಮ ನಿತ್ಯದ ವ್ಯವಸ್ಥೆಯಲ್ಲಿ ಮಾತೃಭಾಷೆ ಹಾಗೂ ಪರಿಸರದ ಭಾಷೆಯನ್ನು ಚೆನ್ನಾಗಿ ಕಲಿಯಿರಿ. ಓದಲು, ಬರೆಯಲು ಬಾರದ ಕಳಪೆ ಶಿಕ್ಷಣವು ಭಾಷೆಯನ್ನು ಉಳಿಸದು. ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಅಲ್ಲಿ…
ಮೂಡುಬಿದಿರೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮೂಡುಬಿದಿರೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20-02-2024ರ ಮಂಗಳವಾರದಂದು ಮೂದಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ “ಕನ್ನಡ ಮಾಧ್ಯಮ ಶಾಲೆಗಳು ಸೋಲುವುದೆಂದರೆ ಅದು ಶ್ರೀ ಸಾಮಾನ್ಯನ ಸೋಲಾಗುತ್ತದೆ. ಕೇವಲ ಭಾವನಾತ್ಮಕವಾಗಿ ಮಾತನಾಡಿದರೆ ಸಾಲದು. ಸರ್ಕಾರ ಹಾಗೂ ಇಲಾಖೆ ಕನಿಷ್ಠ ತರಗತಿಗೊಂದು ಶಿಕ್ಷಕರನ್ನೂ ನೀಡಲಾಗದಿದ್ದರೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಹೇಗೆ ಸಾಧ್ಯ?. ನಾಡಿನಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಹೀನಾಯ ಪರಿಸ್ಥಿತಿಗೆ ಸರಕಾರವೇ ನೇರ ಹೊಣೆ ಎಂದು ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು. ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ ರಂಗಕರ್ಮಿ ಹಾಗೂ ನಟ ಶ್ರೀಪತಿ ಮಂಜನಬೈಲು ಮಾತನಾಡಿ “ಜಾಗತೀಕರಣದ ಫಲವಾಗಿ ಇಂಗ್ಲಿಷ್ ಎಲ್ಲೆಡೆ ವ್ಯಾಪಿಸಿ ಅಡುಗೆ ಮನೆವರೆಗೂ ವ್ಯಾಪಿಸಿದೆ. ಮುಖ್ಯವಾಗಿ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು.” ಎಂದು…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸುಂಟಿಕೊಪ್ಪದಲ್ಲಿ ನಡೆಸಲು ಜಿಲ್ಲಾ ಸಮಿತಿಯು ತನ್ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ. ಈ ಸಭೆಯು ದಿನಾಂಕ 16-02-2024ರಂದು ಮಡಿಕೇರಿಯ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆದಿದೆ. ಮಾರ್ಚ್ ಎರಡನೇ ವಾರದಲ್ಲಿ ಈ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರ ಸಮಿತಿ ನೀಡುವ ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಬರಹಗಾರ್ತಿ ಹಂಚೆಟೀರ ಫ್ಯಾನ್ಸಿ ಮುತ್ತಣ್ಣ ಇವರು ಆಯ್ಕೆಯಾಗಿದ್ದು, ಅವರು ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕರೂ ಆಗಿದ್ದು, ಅವರನ್ನು ಅವರ ಸಾಧನೆಗಾಗಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ “ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳೆಯ ಸಮಸ್ಯೆ ಬಗ್ಗೆ ವಿಶೇಷ ಅಧ್ಯಯನ…
ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕಲಾವಿದ/ಕಲಾವಿದೆಯರು ನಮ್ಮ ನಡುವೆ…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವವು ‘ಶತಕಂಠ ಗಾಯನ’ವು ದಿನಾಂಕ 09-02-2024ರಂದು ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಿತು. ಆ ಪ್ರಯುಕ್ತ ನಡೆದ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಶ್ರೀ ಪುರಂದರ ದಾಸರ ಒಂದೊಂದು ರಚನೆಯಲ್ಲೂ ದೈವಿಕತೆ ಮತ್ತು ದೇವರ ಸಾನ್ನಿಧ್ಯವಿದೆ. ಅವುಗಳನ್ನು ಬಹಳ ಭಕ್ತಿಯಿಂದ ಭಾವಪೂರ್ಣವಾಗಿ ರಚಿಸಿದ್ದಾರೆ. ಅವುಗಳು ಸುಲಲಿತ ಮತ್ತು ಭಾವಜನಕವಾಗಿದ್ದು, ಪ್ರಭಾವ ಬೀರುತ್ತವೆ. ನಿರಂತರ ಆಲಿಸುವಂತೆ ಮಾಡುವ ಶಕ್ತಿಯುಳ್ಳ ಶಾಸ್ತ್ರೀಯ ರಚನೆಗಳು ಪುರಂದರದಾಸರನ್ನು ಆದುದರಿಂದಲೇ ಅವರ ಹಾಡುಗಳು ಎಲ್ಲ ಕಾಲಕ್ಕೂ ಎಲ್ಲರ ಮೇಲೂ ಪ್ರಭಾವ ಬೀರುತ್ತದೆ” ಎಂದು ನುಡಿದರು. ಶ್ರೀಮನ್ ಮಾಧವತೀರ್ಥ ಸಂಸ್ಥಾನದ ಕಿರಿಯ ಪಟ್ಟದ ಯತಿ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಮಾತನಾಡಿ, ಭ – ಭಕ್ತಿ ಪೂರ್ವಕವಾಗಿ, ಜ – ಜನಾರ್ದನ ರೂಪಿಯಾದ ಕೃಷ್ಣನನ್ನು ಕೃಷ್ಣರೂಪಿ ಜನಾರ್ದನನ್ನು, ನೆ – ನಿರಂತರ ನೆನೆಯುವುದೇ…
ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ‘ಒಡಪುಗಳು’, ‘ಪ್ರತಿಮೆಗಳು’, ‘ದೇಸಗತಿ’, ‘ಮಾಯಿಯ ಮುಖಗಳು’, ‘ಎಷ್ಟು ಕಾಡತಾವ ಕಬ್ಬಕ್ಕೀ’ (ಕಥಾ ಸಂಕಲನಗಳು) ಬಾಳವ್ವನ ಕನಸುಗಳು, ತೇರು, ಅಮೃತವಾಹಿನಿ (ಕಾದಂಬರಿಗಳು) ಎಂಬ ಕೃತಿಗಳನ್ನು ಪ್ರಕಟಿಸಿದ ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಎಂಬ ಕಾದಂಬರಿಯು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತದೆ. ವ್ಯಾಸರಾಯ ಬಲ್ಲಾಳರ ‘ಹೆಜ್ಜೆ ಗುರುತು’, ಎಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಗಳನ್ನು ಹೊರತು ಪಡಿಸಿ ಹೇಳುವುದಾದರೆ, ವಿಧವೆಯರ ವೈಯಕ್ತಿಕ ಬಾಳಿನ ಮೇಲೆ ಮಾತ್ರ ಗಮನವನ್ನು ಹರಿಸಿಕೊಂಡು ಬೆಳಕು ಕಂಡ ಮಾಸ್ತಿಯವರ ‘ಶೇಷಮ್ಮ’, ಶಿವರಾಮ ಕಾರಂತರ ‘ನಿರ್ಭಾಗ್ಯ ಜನ್ಮ’, ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’, ‘ಸದಾನಂದ’, ನಿರಂಜನರ ‘ಸ್ಮರಣೆಯೊಂದೇ ಸಾಲದೇ?’ ಎಂಬ ರಚನೆಗಳಿಗಿಂತ ಹೆಚ್ಚಿನ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಈ ಕೃತಿಯು ಕಾದಂಬರಿಯ ಚೌಕಟ್ಟನ್ನು ಮೀರಿ ಬೆಳೆದಿದೆ. ಬೆಳಗಾವಿ ಪ್ರದೇಶದ ಆಡುಮಾತಿನ ಸೊಗಡಿನೊಂದಿಗೆ ಪೌರಾಣಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳು ಹಾಸು ಹೊಕ್ಕಿರುವುದರಿಂದ ಚರ್ಚಿತ ಸಮಸ್ಯೆಗಳನ್ನು ಕುಟುಂಬ, ಪ್ರಾಂತ್ಯಗಳ ಎಲ್ಲೆಗಳನ್ನು ಮೀರಿ, ದೇಶದ…
ಕಾಸರಗೋಡು : ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕಾಸರಗೋಡು ಮತ್ತು ಕನ್ನಡ ಭವನ ಪ್ರಕಾಶನ ಇದರ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ ಸಹಯೋಗದಲ್ಲಿ ಕಾಸರಗೋಡಿನ ನುಳ್ಳಿಪ್ಪಾಡಿಯ ಪಿ.ಎಂ.ಎಸ್. ರಸ್ತೆಯಲ್ಲಿರುವ ಕನ್ನಡ ಭವನ ಸಮುಚ್ಚಯ ಸಭಾಂಗಣದಲ್ಲಿ ದಿನಾಂಕ 22-02-2024ರಂದು ಅಪರಾಹ್ನ 3 ಗಂಟೆಗೆ ‘ಶ್ರೀಮಾನ್ ಪಂಜೆ ಮಂಗೇಶರಾಯರ 150ನೇ ಜನ್ಮದಿನ ಸಂಭ್ರಮ – 2024’ ಕಾರ್ಯಕ್ರಮವು ನಡೆಯಲಿದೆ. ಡಾ. ಪಿ. ಶ್ರೀಕೃಷ್ಣ ಭಟ್, ಡಾ. ಕೆ. ಕಮಲಾಕ್ಷ, ಡಾ. ಯು. ಮಹೇಶ್ವರಿ, ಡಾ. ರಾಧಾಕೃಷ್ಣ ಬೆಳ್ಳೂರು, ಪ್ರೊ. ನಾರಾಯಣ ಮೂಡಿತ್ತಾಯ, ಪ್ರೊ. ಎ. ಶ್ರೀನಾಥ್, ವಿ.ಬಿ. ಕುಳಮರ್ವ, ಅಡ್ವ ಥೋಮಸ್ ಡಿ’ಸೋಜಾ, ಪಿ.ವಿ. ಪ್ರದೀಪ್ ಕುಮಾರ್ ಮಂಗಳೂರು, ಡಾ. ಕೊಳ್ಚಪೆ ಗೋವಿಂದ ಭಟ್, ಎ.ಆರ್. ಸುಬ್ಬಯ್ಯಕಟ್ಟೆ, ಪ್ರದೀಪ್ ಬೇಕಲ್, ವಿಶಾಲಾಕ್ಷ ಪುತ್ರಕಳ, ಅರಿಬೈಲ್ ಗೋಪಾಲ ಶೆಟ್ಟಿ, ವೈ. ಸತ್ಯನಾರಾಯಣ ಮತ್ತು…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ‘ಚಾಂದ್ರ ಮಧ್ವನವಮಿ’ ಕಾರ್ಯಕ್ರಮವು ದಿನಾಂಕ 18-02-2024ರಂದು ಉಡುಪಿಯ ಮಧ್ವ ಮಂಟಪ ಹಾಗೂ ರಾಜಾಂಗಣದಲ್ಲಿ ನಡೆಯಿತು. ಮಧ್ವ ಮಂಟಪದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪೂರ್ವಾಹ್ನ ಘಂಟೆ 11.00ರಿಂದ ತೌಳವ ಮಾಧ್ವ ಒಕ್ಕೂಟದ ಸದಸ್ಯರಿಂದ ‘ಮಧ್ವನಾಮಾವಳಿ ಪಾರಾಯಣ’ ನಡೆಯಿತು. ಬಳಿಕ ವಿದ್ವಾನ್ ವಾಗೀಶ್ ಭಟ್ ಇವರಿಂದ ‘ಆಚಾರ್ಯ ಮಧ್ವ’ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಿತು. ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಸಪ್ರಶ್ನೆ ಆಯೋಜಿಸಲಾಗಿತ್ತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಜನಾ ಮಂಡಳಿಗಳಿಂದ ಮಧ್ವಾಚಾರ್ಯರ ಚರಿತ್ರೆಯ ಹಿನ್ನೆಲೆಯ ಸಾಮೂಹಿಕ ಮಧ್ವಗಾಯನ ಹಾಗೂ ಪರ್ಯಾಯ ಶ್ರೀ ಪಾದದ್ವಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಆಶೀರ್ವಚನ ಹಾಗೂ ವಿದ್ವಾಂಸರಿಗೆ ಅನುಗ್ರಹ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಿಯಾಂಜಲಿ ರಾವ್ ಹಾಗೂ ಶ್ರೀಸ್ವರಂ ಮುಂಬೈ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.
ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕಾಸರಗೋಡು ಕೋಟೆಕಣಿಯ ಭರವಸೆಯ ಕವಯತ್ರಿ ಚಂಚಲಾಕ್ಷಿ ಶ್ಯಾಮ್ ಪ್ರಕಾಶ್ ಇವರ ಕವನ ಸಂಕಲನ ‘ಮತ್ತೆ ಚಿಗುರಿದ ಭಾವ’ ದಿನಾಂಕ 22-02-2024ರಂದು ಅಪರಾಹ್ನ 2 ಗಂಟೆಗೆ ಕನ್ನಡ ಭವನ ಪ್ರಕಾಶನದಿಂದ ಕೃತಿ ಬಿಡುಗಡೆಗೊಳ್ಳಲಿದೆ. ಇದು ಕನ್ನಡ ಭವನ ಪ್ರಕಾಶನದಿಂದ ಬಿಡುಗಡೆಯಾಗುವ ನಾಲ್ಕನೇ ಕೃತಿಯಾಗಿದೆ. ಕಥಾಬಿಂದು ಪ್ರಕಾಶನದ ರೂವಾರಿ ಸಾಹಿತಿ ಪ್ರದೀಪ್ ಕುಮಾರ್, ಡಾ. ಕೊಳ್ಚಪೆ ಗೋವಿಂದ ಭಟ್, ಕವಯತ್ರಿ ರೇಖಾ ಸುದೇಶ್ ರಾವ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಜಿಲ್ಲಾ ಮಹಿಳಾ ಸಂಘ ಗೌರವಾಧ್ಯಕ್ಷೆ ಕವಯತ್ರಿ ಆಶಾ ರಾಧಾಕೃಷ್ಣ, ನಿಕಟಪೂರ್ವ ಅಧ್ಯಕ್ಷೆ ಉಷಾಕಿರಣ್, ಲೇಖಕ ಪ್ರದೀಪ್ ಬೇಕಲ್, ಜಗದೀಶ್ ಕೂಡ್ಲು, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮಮನೆ, ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಮುಂತಾದವರು ಉಪಸ್ಥಿತರಿರುವರು. ಕಲ್ಕೂರ ಪ್ರತಿಷ್ಠಾನ ಮಂಗಳೂರಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಗಂಟೆ 2ರಿಂದ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ…