Author: roovari

ಕೋಟ: ಕೋಟದ ಮಣೂರು ಪಡುಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಸಿ.ಕುಂದರ್ ಸ್ಮಾರಕ ಭವನದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ “ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ” ಕಾರ್ಯಕ್ರಮವು ದಿನಾಂಕ 09-09-2023ರಂದು ನಡೆಯಿತು. ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಚಾಲನೆ ನೀಡಿದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ “ಯಕ್ಷಗಾನ ಪೂರ್ವರಂಗ ಎನ್ನುವಂತದ್ದು ನಶಿಸಿ ಹೋದ ಕಾಲದಲ್ಲಿ ಯಶಸ್ವೀ ಕಲಾವೃಂದದ ಬಳಗ ಶಾಲೆಗಳಿಗೆ ತೆರಳಿ ಭವಿಷ್ಯದ ರೂವಾರಿ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಎಳೆ ಎಳೆಯಾಗಿ ಹೇಳಿ ಕೊಡುವ ಕಾರ್ಯ ಮಾಡುತ್ತಿದೆ. ಕೋಡಂಗಿಯಿಂದ ಹಿಡಿದು ಪಾಂಡವರ ಒಡ್ಡೋಲಗದ ವರೆಗಿನ ಪೂರ್ವರಂಗದ ಭಾಗವಷ್ಟೇ ಅಲ್ಲದೇ ಕೃಷ್ಣನ ಒಡ್ಡೋಲಗ, ಕಿರಾತ ಒಡ್ಡೋಲಗವನ್ನು ಅಚ್ಚು ಕಟ್ಟಾಗಿ ಚಿಣ್ಣರೇ ರಂಗದಲ್ಲಿ ಅಭಿನಯಿಸಿ, ಶಾಲಾ ಚಿಣ್ಣರಿಗೆ ಮನದಟ್ಟು ಮಾಡುವ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಅವಿರತ ಪ್ರಯತ್ನದಿಂದ ಯಶಸ್ಸು ಸಾಧಿಸಿದ ಸಂಸ್ಥೆ ಯಶಸ್ವೀ ಕಲಾವೃಂದ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿರುವುದು ಶ್ಲಾಘನೀಯ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವ ಉಪಸ್ಥಿತಿಯಲ್ಲಿ…

Read More

ಮೂಡುಬಿದಿರೆ : ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜೈನ ಪಾಠ ಉದ್ಘಾಟನೆ ಹಾಗೂ ಜಿನಧರ್ಮ ದೀಪಿಕೆ ಕೃತಿ ಬಿಡುಗಡೆಯ ಸಮಾರಂಭ ದಿನಾಂಕ 09-09-2023ರಂದು ಜರಗಿತು. ಈ ಸಮಾರಂಭದಲ್ಲಿ ಜೈನಮಠ ಕಂಬದ ಹಳ್ಳಿಯ ಸ್ವಸ್ತಿ ಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಮ ಸ್ವಾಮೀಜಿಯವರು ಜೈನ ಪಾಠ ಉದ್ಘಾಟಿಸಿ, ‘ಜಿನಧರ್ಮ ದೀಪಿಕೆ’ ಕೃತಿ ಬಿಡುಗಡೆಗೊಳಿಸಿ ಅಶೀರ್ವಚನಗಳನ್ನು ನೀಡಿ “ಅಹಿಂಸಾ ಪರಮೋಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಅನುಸರಿಸುವುದೇ ವೃತ, ಮನುಷ್ಯ ಜನ್ಮ ಸಿಗುವುದು ತುಂಬಾ ವಿರಳ. ಈ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಜೈನಧರ್ಮದ ತತ್ವಗಳನ್ನು ವಿಜ್ಞಾನವೂ ಕೂಡ ಒಪ್ಪುತ್ತದೆ. ಪ್ರತಿಯೊಂದು ಜೀವಿಯೂ ದೇವರಾಗಬಹುದು. ಅದ್ವೈತ ಜ್ಞಾನದ ಮೂಲಕ ಮೋಕ್ಷವನ್ನು ಸಾಧಿಸುವ ಬದಲಾಗಿ, ಅಹಿಂಸೆಯ ಮೂಲಕ ಮೋಕ್ಷವನ್ನು ಸಂಪಾದಿಸುವುದು ಜೈನಧರ್ಮದ ಉದ್ದೇಶವಾಗಿದೆ. ಆ ಜೈನ ಧರ್ಮದ ಮೂಲಗಳು ಪಂಚಪರಮೇಷ್ಠಿಗಳ ಉಪದೇಶಗಳ ಮೇಲೆ ನಿರೂಪಿತವಾಗಿವೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, “ವಿದ್ಯೆಗೆ ಸಂಸ್ಕಾರ ಭೂಷಣ, ಜೈನ ಧರ್ಮದಲ್ಲಿ…

Read More

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ಇದರ 16ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23-09-2023ರಂದು ಬೆಳಿಗ್ಗೆ ಗಂಟೆ 9.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ದಿನಾಂಕ 17-09-2023ರಂದು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ‘ಸ್ವರ ಕುಡ್ಲ’ ಸೀಸನ್-5 ಸಂಗೀತ ಸ್ಪರ್ಧೆಯು ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ದಿ. ಲಿಯಾಂಡರ್ ವರ್ನನ್ ನೊರೊನ್ಹಾ ಇವರ ಸ್ಮರಣಾರ್ಥ ‘ಸಿಂಫನಿ ಮ್ಯೂಸಿಕಲ್ ಇನ್ ಸ್ಟ್ರುಮೆಂಟ್ ಮಳಿಗೆಯ ಶ್ರೀ ಲಾಯ್ ನೊರೊನ್ಹಾ ಇವರ ಸಹಕಾರದೊಂದಿಗೆ ಈ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ದಿನಾಂಕ 23-09-2023ರಂದು ಪುರಭವನದಲ್ಲಿ ‘ಸ್ವರ ಕುಡ್ಲ’ ಸೀಸನ್-5 ಇದರ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಗೌರವ ಜರಗಲಿದೆ. ಈ ಕಾರ್ಯಕ್ರಮವು ಬೆಳಗ್ಗೆ 9ಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಚರಣ್ ಕುಮಾರ್ ರಾಗದೇವ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವರು ಅಧ್ಯಕ್ಷತೆ…

Read More

ಮಂಗಳೂರು : ಅಶೋಕ ನಗರದಲ್ಲಿರುವ ಶ್ರೀಕೃಷ್ಣ ಮಂದಿರದ ಬೆಳ್ಳಿ ಹಬ್ಬ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಗೋಕುಲ ಕಲ್ಯಾಣ ಮಂಟಪದಲ್ಲಿ ದಿನಾಂಕ 07-09-2023ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡುಬಿದರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ಡಾ. ವಿನಾಯಕ ಭಟ್ ಗಾಳಿಮನೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಉರ್ವದ ಯಕ್ಷಾರಾಧನ ಕಲಾ ಕೇಂದ್ರದ ನಿರ್ದೇಶಕಿ, ನೃತ್ಯ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಮತ್ತು ಬಳಗದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು. ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀಮತಿ ಸುಮಾಡ್ಕರ್, ಕುಮಾರಿ ಛಾಯಾಲಕ್ಷ್ಮೀ ಆರ್.ಕೆ., ಆದಿಸ್ವರೂಪ, ಸನತ್ ಆಚಾರ್ಯ, ಸಾಕ್ಷಿ ಶೇಷಾದ್ರಿ, ವೈಶಾಕ್ ರಾವ್, ಸಂಪ್ರೀತ್ ಹಂದೆ, ಪೂರ್ವಿ ಗಟ್ಟಿ, ಪ್ರಜ್ಞಾಶ್ರೀ ಸಾಮಗ, ವರುಣ್ ಕಾರಂತ್, ಸೂರಜ್ ಸಾಮಗ, ಸಮೀಕ್ಷಾ ಆಚಾರ್ಯ, ಪ್ರತೀಕ್ ಜಗತಾಪ್, ಸ್ವಸ್ತಿಕ್ ರಾವ್, ಹಿಮ್ಮೇಳದಲ್ಲಿ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ, ಶಿತಿಕಂಠ ಭಟ್ ಉಜಿರೆ, ಶ್ರೀ ಸುಬ್ರಹ್ಮಣ್ಯ…

Read More

ಧಾರವಾಡ : ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವ ವಿದ್ಯಾನಿಲಯ ಧಾರವಾಡ, ಚೇತನಾ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಆಯೋಜನೆಯಗೊಂಡ ‘ಧಾರವಾಡ ನುಡಿ ಸಡಗರ-ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ಎರಡನೆಯ ದಿನದ ಗಮಕ ವಾಚನ, ಮುಕ್ತ ಗಜ್‌ಲ್, ಕವಿಗೋಷ್ಠಿ ಅಂಗವಾಗಿ ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ. ಪದವೀಧರೆ ಗಮಕಿ ಕುಮಾರಿ ಕಾವ್ಯ ಹಂದೆಯವರಿಂದ ಗಮಕ ವಾಚನ ವ್ಯಾಖ್ಯಾನ ಪ್ರಾತ್ಯಕ್ಷಿಕೆಯು ದಿನಾಂಕ 09-09-2023ರಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾನಿಲಯದ ಕನಕ ಪೀಠದ ಕನಕ ಭವನದಲ್ಲಿ ನಡೆಯಿತು. ಕುಮಾರಿ ಕಾವ್ಯ ಅವರು ನಾಟಿ, ಹಂಸಧ್ವನಿ, ಹಿಂದೋಳ, ಅಮೀರ್ ಕಲ್ಯಾಣಿ, ಕಲ್ಯಾಣಿ, ಶಿವರಂಜಿನಿ, ಜೋಗ್ ಮೊದಲಾದ ರಾಗಗಳ ಮೂಲಕ ಗಮಕ ವಾಚನದಲ್ಲೂ, ಸುಜಯೀಂದ್ರ ಹಂದೆ ವ್ಯಾಖ್ಯಾನಕಾರರಾಗಿಯೂ ದಾಸ ವರೇಣ್ಯ, ಭಕ್ತಿ ಕಾವ್ಯ ಪರಂಪರೆಯ ಕನಕದಾಸರ ನಳಚರಿತ್ರೆಯ ಆರನೇಯ ಸಂಧಿಯ ಕಾರ್ಕೋ ಟಕ ದಂಶನ ಪ್ರಸಂಗವನ್ನು ಕನಕ ಪೀಠದ ವಿದ್ಯಾರ್ಥಿ ಮತ್ತು…

Read More

ಕಾಸರಗೋಡು : ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  ಆಯೋಜಿಸಿದ ‘ನೃತ್ಯ ವಂದನಾ’ ಕಾರ್ಯಕ್ರಮವು ದಿನಾಂಕ 08-09-2023 ರ ಶುಕ್ರವಾರದಂದು ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದಲ್ಲಿ ನಡೆಯಿತು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ, ಗುರು ಶ್ರೀಧರ ಹೊಳ್ಳ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕಲಾವಿದೆಯರಾದ ವಿದುಷಿ ಪ್ರಕ್ಷಿಲಾ ಜೈನ್,  ಶಿವಪ್ರಣಾಮ್ ಸಂಸ್ಥೆಯ ವಿದುಷಿ ಅನ್ನಪೂರ್ಣ ರಿತೇಶ್, ವಿದುಷಿ ಮಾನಸ ಕುಲಾಲ್, ವಿದುಷಿ ಅದಿತಿ ಸಹಕರಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಹಾಡುಗಾರಿಕೆಯಲ್ಲಿ ಸ್ವರಾಗ್ ಕಣ್ಣೂರು, ಮೃದಂಗನಲ್ಲಿ ವಿದ್ವಾನ್ ಸುರೇಶ್ ಬಾಬು, ಕೊಳಲಿನಲ್ಲಿ ರಾಹುಲ್ ಕಣ್ಣೂರು ಸಹಕರಿಸಿದ್ದರು.  ವಿದುಷಿ ಮಧುರಾ ಕಾರಂತ್ ನಿರೂಪಿಸಿದರು.

Read More

ಬೆಂಗಳೂರು: ಪ್ರಕೃತಿ ಪ್ರತಿಯೊಬ್ಬರಿಗೂ ಒಂದೊಂದು ಕಾಯಕವನ್ನು ಕಲ್ಪಿಸಿದೆ. ಅದನ್ನು ಪ್ರಾಮಾಣಿಕವಾಗಿ, ನಿಯತ್ತಾಗಿ ಮಾಡಿದಲ್ಲಿ ಅದು ಒಂದು ರೀತಿಯ ಸಾರ್ಥಕ ಬದುಕೇ ಸರಿ. ಇದಕ್ಕೆ ಉದಾಹರಣೆ ಎಂಬಂತೆ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ, ಜಾಹೀರಾತು ಸಂಸ್ಥೆಗಳಲ್ಲಿ ಮತ್ತು ಇತರ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ‘ದಾವಣಗೆರೆ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ’ ಬೆಂಗಳೂರು ನಗರದಲ್ಲಿ ಕಲಾಪ್ರದರ್ಶನ ಹಮ್ಮಿಕೊಂಡಿತ್ತು. “ದಾಕಹವಿಸ” ಅಂತಲೇ ಕಲಾವಲಯದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ 40 ಕಲಾವಿದರಿರುವ ಈ ಸಂಘಟನೆ ಕಲೆಯ ಮೇಲಿನ ಪ್ರೀತಿಯಿಂದಾಗಿ ದಿನಾಂಕ 09-09-2023ರಿಂದ ಮೂರು ದಿನಗಳ ಕಾಲ ಚಿತ್ರಕಲಾ ಪರಿಷತ್ತಿನಲ್ಲಿ ‘Artspring’ ಎಂಬ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ನಡೆಸಿತು. ವಿವಿಧ ಮಾಧ್ಯಮಗಳನ್ನು ಉಪಯೋಗಿಸಿ ಕಲೆಯಲ್ಲಿ ಹೊಸ ನಾವೀನ್ಯತೆಯನ್ನು ತೋರಿಸಿದ್ದಾರೆ. ಪೇಪರ್ ರಟ್ಟನ್ನು ಇಟ್ಟಿಗೆಯಂತೆ ಸಿದ್ಧಗೊಳಿಸಿ ಅದರಲ್ಲಿ ರೇಖಾಚಿತ್ರಗಳನ್ನು ವರ್ಣಚಿತ್ರಗಳನ್ನು ಮೂಡಿಸಿ ಆ ಸೃಷ್ಟಿಸಿದ ಚಿತ್ರದ ರೂಪ ನೋಡುಗರನ್ನು ಗಮನ ಸೆಳೆಯುವಲ್ಲಿ ಶೀಲವಂತ ಯಾದಗಿರಿಯವರ ಕೆಲಸ ಸಾರ್ಥಕವಾಗಿತ್ತು. ವಿನೋದ್ ಕುಮಾರವರ 4×8 ಅಡಿ ಬೃಹತ್ ವುಡ್ ಪಟ್ಟಿಯ ಮೇಲೆ ಕೆತ್ತಿದ ಹಂಪಿಯ ಚಿತ್ರಗಳು…

Read More

ಮುಡಿಪು : ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಕಾಸರಗೋಡು ಬೀರಂತಬೈಲು ನಿವಾಸಿ ಎಸ್.ವಿ.ಭಟ್ ಎಂದೇ ಪರಿಚಿತರಾಗಿರುವ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್ (73) ದಿನಾಂಕ 10-09-2023ರಂದು ನಿಧನ ಹೊಂದಿದರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ನಿರಂತರ ನಡೆಸುತ್ತಾ ಗ್ರಾಮ ಗ್ರಾಮಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಎಸ್.ವಿ. ಭಟ್ಟರು ಕಾಸರಗೋಡು ಕನ್ನಡ ಚಳವಳಿಯನ್ನು ಜೀವಂತವಾಗಿರಿಸಿದ್ದರು. ಎಸ್.ವಿ. ಭಟ್ಟರು ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಗೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಸರಳವಾದ, ವಿದ್ಯಾರ್ಥಿಸ್ನೇಹಿಯಾದ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಎಳೆಯರ ಮನಸ್ಸಿನಲ್ಲಿ ಕನ್ನಡಾಭಿಮಾನವನ್ನು ಬಿತ್ತುವ ಕಾರ್ಯವನ್ನು ಮಾಡಿದ್ದಾರೆ. ಅವರ ಹಠಾತ್ ಅಗಲಿಕೆ ಕಾಸರಗೋಡು ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರ್, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಚಂದ್ರಹಾಸ…

Read More

ಕಾಸರಗೋಡು : ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ  ಆಯೋಜಿಸಲಾದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ದಿನಾಂಕ 03-09-2023 ರಂದು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಧಾರ್ಮಿಕ ಮುಂದಾಳು ಮತ್ತು ಸಮಾಜ ಸೇವಕಿಯಾದ  ಮೀರಾ ಕಾಮತ್‌ “ಭಗವಂತನನ್ನು ತೃಪ್ತಿಪಡಿಸಲು ಭಜನೆಯು ಪ್ರಮುಖ ಮಾರ್ಗಗಳಲ್ಲಿ ಒಂದು. ಸಂಕೀರ್ತನೆಯಲ್ಲಿ ಭಕ್ತಿಯೂ ಅಡಕವಾಗಿರಬೇಕು. ಭಕ್ತಿಪೂರ್ವಕವಾಗಿ ಭಗವಂತನನ್ನು ಭಜಿಸಿದರೆ ಎಲ್ಲಾ ದುರಿತಗಳು ಪರಿಹಾರಗೊಳತ್ತವೆ. ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡುತ್ತದೆ” ಎಂದು ಹೇಳಿದರು. ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ನಾಯ್ಕ, ರಾಮದಾಸ್, ನಿರ್ಮಲಾ, ಕುಶಲಕುಮಾರ್, ಮೇಘರಾಜ್, ಶ್ರೀಕಾಂತ್ ಕಾಸರಗೋಡು, ಯೋಗೀಶ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 28 ತಂಡಗಳು ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವು. ನೃತ್ಯ ಕಲಾವಿದೆ ಸುಚಿತ್ರಾ ಭಾರತಿ, ಭಜನಾ ಸಾಮ್ರಾಟ್ ಮೋಹನ ಆಚಾರ್ಯ ಪುಳ್ಳೂರು ಮತ್ತು  ಕವಿ ಹಾಗೂ…

Read More

ಮಂಗಳೂರು: ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ಅಂತರ್ ಕಾಲೇಜು ಮಟ್ಟದ ಶಾರದಾ ಮಹೋತ್ಸವ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 09-09-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಹರಿದಾಸರು ಮತ್ತು ನ್ಯಾಯವಾದಿಗಳಾದ ಶ್ರೀ ಕಲಾರತ್ನ ಶಂನಾಡಿಗ ಕುಂಬ್ಳೆ “ಶಿಕ್ಷಣದ ಗುರಿ ಕೇವಲ ಅಂಕಗಳಿಕೆ ಮತ್ತು ಉದ್ಯೋಗ ಸಂಪಾದನೆಗೆ ಮಾತ್ರ ಸೀಮಿತವಾಗಬಾರದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನಮ್ಮ ಪರಂಪರಾಗತ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆಯೂ ಅರಿವು ಹೊಂದಿರಬೇಕು. ಆಗ ಮಾತ್ರ ವ್ಯಕ್ತಿತ್ವ ಪರಿಪೂರ್ಣವಾಗಲು ಸಾಧ್ಯ.” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಅಪರ್ಣಾ, ಅನಘಾ, ಸಾಕ್ಷಿ ಪ್ರಾರ್ಥಿಸಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ಮಿತಾ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಮಹಾಬಲೇಶ್ವರ ಭಟ್ ಸೊಡಂಕೂರು ಪ್ರಸ್ತಾವಿಕ ಮಾತುಗಳನ್ನಾಡಿ, ಉಪ ಪ್ರಾಂಶುಪಾಲ ಪ್ರಕಾಶ್ ನಾಯ್ಡ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ರಮೇಶ ಆಚಾರ್ಯ…

Read More