Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮವು ದಿನಾಂಕ 20-03-2024ರಂದು ಗೋವಿಂದ ದಾಸ ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ಪೂರ್ವಿ ಅಶೋಕ ಕುಮಾರ ಇವರು ಖಾಲಿದ್ ಹುಸೇನಿ ಬರೆದ ‘ದಿ ಕೈಟ್ ರನ್ನರ್’ ಎಂಬ ಪುಸ್ತಕವನ್ನು ಪರಿಚಯಿಸಿ “ಸಾಮಾಜಿಕ ಸ್ಥಿತ್ಯಂತರಗಳ ನಡುವೆ ಮಾನವೀಯ ಸಂಬಂಧಗಳ ಚರ್ಚೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು, ಪೂರ್ವಿ ಅಶೋಕ ಕುಮಾರ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಪ್ರಾಧ್ಯಾಪಕರುಗಳಾದ ಡಾ. ಆಶಾಲತಾ ಪಿ., ಡಾ. ಸಂತೋಷ ಆಳ್ವ, ಪುನೀತಾ, ಶಿಲ್ಪಾರಾಣಿ, ಪ್ರತಿಕ್ಷಾ, ದಯಾ ಸುವರ್ಣ, ಗ್ರಂಥಪಾಲಕಿ ಡಾ. ಸುಜಾತಾ ಬಿ., ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಂತಿಮ ಬಿ. ಬಿ. ಎ. ವಿದ್ಯಾರ್ಥಿನಿ ರಿಯಾ ಸ್ವಾಗತಿಸಿದರು.
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ‘ಕ್ರಿಯೇಟಿವ್ ನಿನಾದ ಸಂಚಿಕೆ-6’ ಬಿಡುಗಡೆ ಕಾರ್ಯಕ್ರಮವು ದಿನಾಂಕ 16-03-2024 ರಂದು ನಡೆಯಿತು. ಸಂಚಿಕೆ-6ನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ “ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬೆಳೆಯಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದ ಅಧ್ಯಯನ ನಡೆಸಬೇಕು. ಹಿರಿಯರ ಜೀವನ ದರ್ಶನವನ್ನು ಅನುಸರಿಸಬೇಕು. ಆಗ ಬದುಕಿನ ಹೊಸತನಗಳು ತೆರೆದುಕೊಳ್ಳುತ್ತವೆ. ಜೀವನವನ್ನು ಧೈರ್ಯದಿಂದ ಎದುರಿಸುವ ದೃಢತೆ ನಮ್ಮಲ್ಲಿ ಉಂಟಾಗುತ್ತದೆ. ಶಿಕ್ಷಣವಂತ ಸಮಾಜವು ದೇಶದ ಉನ್ನತಿಗೆ ಕಾರಣೀಕರ್ತವಾಗುತ್ತದೆ. ಯುವ ಸಮುದಾಯ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶ್ರೀ ಎಸ್. ಭೋಜೆಗೌಡ ಮಾತನಾಡಿ “ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಣದ ಪಠ್ಯಕ್ರಮ ರಚನೆಯಾಗಿ ಮೌಲ್ಯಗಳನ್ನು ಅಳವಡಿಸುವಂತಾಗಲಿ.” ಎಂದು ಆಶಿಸಿದರು. ಕಾರ್ಯಕ್ರಮಾದಲ್ಲಿ ಕ. ಸಾ. ಪ. ದ ವಿವಿಧ ಪದಾಧಿಕಾರಿಗಳು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್.…
ದಿನಾಂಕ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಸಹಯೋಗದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಸಂಸ್ಮರಣೆ ಹಾಗೂ ‘ಕನಕ ಚಿಂತನ ವಿಸ್ತರಣ-1’ ಉಪನ್ಯಾಸ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 23-03-2024ರ ಬೆಳಿಗ್ಗೆ ಘಂಟೆ 10.೦೦ರಿಂದ ಉಡುಪಿಯ ಎಂ. ಜಿ. ಎಂ. ಕಾಲೇಜಿನ ಆವರಣದಲ್ಲಿರುವ ಧನ್ಯಾಲೋಕ (ಆರ್. ಆರ್. ಸಿ.) ದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿ. ವಿ. ಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ವಿ. ನಾವಡ ವಹಿಸಲಿದ್ದು, ವಿಶ್ರಾಂತ ಕುಲಪತಿಗಳು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಬಿ. ಎ. ವಿವೇಕ ರೈ ಕೃತಿ ಅನಾವರಣಗೊಳಿಸಲಿರುವರು. ನಂತರ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪತಿ ಭಟ್ ಮೂಡಬಿದಿರೆ ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ. ಶಿವಾಜಿ ಜೋಯಿಸ್ ಮೈಸೂರು ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ‘ಮಲಬಾರ್ ವಿಶ್ವರಂಗ ಪುರಸ್ಕಾರ 2024’ ದಿನಾಂಕ 26-03-2024ರಂದು ಸಂಜೆ ಗಂಟೆ 4:00ಕ್ಕೆ ಗೀತಾಂಜಲಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಾಟಕ ಸಾಹಿತ್ಯ ಕ್ಷೇತ್ರದ ಪ್ರೊ. ಆರ್.ಎಲ್. ಭಟ್, ರಂಗ ನಿರ್ದೇಶಕರಾದ ಕೆ.ವಿ. ರಾಘವೇಂದ್ರ ಐತಾಳ್, ರಂಗ ಸಂಘಟಕರಾದ ಕಜೆ ರಾಮಚಂದ್ರ ಭಟ್, ರಂಗ ನಿರ್ದೇಶಕರಾದ ಎಸ್.ವಿ. ರಮೇಶ್ ಬೇಗಾರ್ ಮತ್ತು ರಂಗ ನಟಿ ಸುಜಾತ ಶೆಟ್ಟಿ ರಂಗ ಸಾಧಕರಿಗೆ ಗೌರವ ಪುರಸ್ಕಾರ ಮಾಡಲಾಗುವುದು. ಡಿಡಿ ನ್ಯಾಷನಲ್ ‘ಭಾರತ್ ಕಾ ಅಮೃತ್ ಕಲಷ್’ ಇದರ ರಿಯಾಲಿಟಿ ಶೋ ಸ್ಪರ್ಧಾಳು ಹೊನ್ನಾವರದ ಕುಮಾರಿ ಅಖಿಲ ಹೆಗಡೆ ಇವರು ರಂಗ ಗೀತೆಯನ್ನು ಪ್ರಸ್ತುತ ಪಡಿಸಲಿದ್ದಾರೆ.
ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮವು ದಿನಾಂಕ 14-03-2024ರಂದು ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ರಚಿತ ‘ಅಷ್ಟ ದ್ರವ್ಯ’ ಹಾಗೂ ‘ಝೇಂಕಾರ’ ಕೃತಿಗಳು ಲೋಕಾರ್ಪಣೆಗೊಂಡವು. ಡಾ. ಧನಂಜಯ ಕುಂಬ್ಳೆ ‘ಅಷ್ಟ ದ್ರವ್ಯ’ ಕೃತಿಯನ್ನು ಲೋಕಾರ್ಪಣೆಗೈದು ಕೃತಿ ಅವಲೋಕನ ಮಾಡುತ್ತಾ, “ಈ ಕೃತಿಯು ಹೊಸ ಬರಹಗಾರರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಸಾಹಿತ್ಯಾಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಈ ಕೃತಿಯೇ ಒಂದು ಪಠ್ಯಪುಸ್ತಕವಿದ್ದಂತೆ” ಎಂದು ನುಡಿದರು. ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿಯವರು ‘ಝೇಂಕಾರ’ ಕೃತಿಯನ್ನು ಲೋಕಾರ್ಪಣೆ ಮಾಡಿ, “ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯಮೂಲ್ಯ ಕೊಡುಗೆ” ಎಂದು ಬಣ್ಣಿಸಿದರು. ಡಾ. ಮೀನಾಕ್ಷಿ ರಾಮಚಂದ್ರ ಇವರು ‘ಝೇಂಕಾರ’ ಕೃತಿ ಅವಲೋಕನ ಮಾಡಿ, “ತ್ರಿಪದಿಗಳು ಮಹಿಳೆಯರ ಗಾಯತ್ರಿ ಎಂಬುದು ಮತ್ತೊಮ್ಮೆ ಲಕ್ಷ್ಮೀಯ ಮೂಲಕ ಸಾಬೀತಾಯಿತು.…
ಕಾಂತಾವರ : ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕ ಕಲಾ ಪ್ರವಚನ’ ಪ್ರಶಸ್ತಿಗೆ ಪ್ರಸಿದ್ಧ ವಾಗ್ಮಿಗಳಾಗಿರುವ, ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಸ್ಥಾಪಿಸಿರುವ ದತ್ತಿನಿಧಿಯ ವತಿಯಿಂದ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಗಮಕಿ ಶ್ರೀ ಸುರೇಶ್ ರಾವ್ ಅತ್ತೂರು ಮತ್ತು ಕೆ. ಶಾಮರಾಯ ಆಚಾರ್ಯ ಅವರ ದತ್ತಿನಿಧಿಯಿಂದ ನೀಡುವ ಶಿಲ್ಪಕಲಾ ಪ್ರಶಸ್ತಿಗೆ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶ್ರೀ ಲೋಹಶಿಲ್ಪಿ ಪ್ರಕಾಶ್ ಆಚಾರ್ಯ ಅವರು ಆಯ್ಕೆಯಾಗಿರುವುದಾಗಿ ತಿಳಿಸಿದೆ. ದಿನಾಂಕ 24-03-2024ರಂದು ಕಾಂತಾವರದ ‘ಕನ್ನಡ ಭವನ’ದಲ್ಲಿ ಈಗಾಗಲೇ ಘೋಷಣೆಯಾಗಿರುವ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಡಾ. ವಿ. ಎ. ಲಕ್ಷ್ಮಣ ಅವರಿಗೆ ನೀಡುವುದರ ಜೊತೆಗೆ ಈ ಮೂರು ಪ್ರಶಸ್ತಿಗಳನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಮೂಲಕ ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ತಿಳಿಸಿದ್ದಾರೆ. ಪ್ರತಿ ಪ್ರಶಸ್ತಿಯೂ ತಲಾ ಹತ್ತು ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಶ್ರೀ ಮುನಿರಾಜ ರೆಂಜಾಳ ಶ್ರೀ…
ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ ಟ್ರಸ್ಟ್ (ರಿ.) ಆಯೋಜಿಸಿರುವ ‘ವಿಶ್ವ ರಂಗಭೂಮಿ ದಿನಾಚರಣೆ’ಯು ದಿನಾಂಕ 27-03-2024ರಂದು ಸಂಜೆ 6.30ರಿಂದ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ.ಅಶ್ವತ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಕರ್ನಾಟಕ ರಾಜ್ಯ ಸಮುದಾಯದ ರಂಗ ಸಂಘಟಕರು ಹಾಗೂ ಉಪಾಧ್ಯಕ್ಷರಾದ ಶ್ರೀ ಗುಂಡಣ್ಣ ಚಿಕ್ಕಮಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಾಟಕಕಾರರು ಹಾಗೂ ರಂಗ ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರಿಗೆ ಅಭಿನಂದನೆ, ಭರತನಾಟ್ಯ ಕಲಾವಿದೆ ಕುಮಾರಿ ಚಿತ್ರಾ ರಾವ್ ಇವರಿಗೆ ರಂಗ ಗೌರವ ನಡೆಯಲಿದೆ. ರಂಗ ನಿರ್ದೇಶಕರಾದ ಶ್ರೀ ಶಶಿಧರ್ ಭಾರೀಘಾಟ್ ಇವರು ವಿಶ್ವ ರಂಗಭೂಮಿ ಸಂದೇಶ ಪ್ರಸ್ತುತ ಪಡಿಸುವರು. ಬೆಂಗಳೂರಿನ ರಂಗ ವಿಜಯ ತಂಡದವರು ರಂಗ ಗೀತೆ ಹಾಗೂ ಮೈಸೂರಿನ ನಟನ ತಂಡದವರು ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ನೀಡಲಿದ್ದಾರೆ.
ಮಂಗಳೂರು : ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಬಿರುವೆರ್ ಕುಡ್ಲದ ವತಿಯಿಂದ ಮಂಗಳೂರಿನ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ದಿನಾಂಕ 03-03-2024ರಂದು ಬ್ರಹ್ಮಶಶ್ರೀ ನಾರಾಯಣಗುರು ಅವರ ಭಾವಚಿತ್ರ, ರೇಷ್ಮೆ ಪಂಚೆ ಹಾಗೂ ಶಾಲು ನೀಡುವ ಮೂಲಕ ಸಮ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು “ನಮ್ಮ ರಾಷ್ಟ್ರೀಯ ಅಸ್ಮಿತೆಯಾಗಿರುವ ಶ್ರೀ ರಾಮ ಮಂದಿರ ನಿರ್ಮಾಣದಲ್ಲಿ ದೇವರ ಇಚ್ಛೆಯಂತೆ ನಾನು ನಿರ್ಮಿಸಿದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಆಗಿರುವುದು ಪುಣ್ಯವೇ ಸರಿ. ಈ ಹಿಂದೆ ಹಲವು ಮೂರ್ತಿ ನಿರ್ಮಿಸಿದ್ದರೂ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ದೇಶದ ಹಳ್ಳಿ ಹಳ್ಳಿಗಳಲ್ಲಿ ರಾಮಭಕ್ತರು ನನಗೆ ಆಶೀರ್ವಾದಿಸಿದ್ದಾರೆ. ಮರ್ಯಾದಾಪುರುಷನ ಮಂದಿರ ಮರು ನಿರ್ಮಾಣವಾಗಿದ್ದು, ದೇಶವು ರಾಮ ರಾಜ್ಯವಾಗಿ ರೂಪುಗೊಳ್ಳಲಿ. ‘ಬಿರುವೆರ್ ಕುಡ್ಲ’ ಸಂಘಟನೆಯ ಬಗ್ಗೆ ನನಗೆ ಮಾಹಿತಿ ಸಿಕ್ಕಾಗ ಯುವ ಸಮೂಹವು ಒಟ್ಟುಸೇರಿ ಸಮಾಜದ ಸೇವೆಗೆ ಇಳಿದಿರುವುದು ನಿಜಕ್ಕೂ ಶ್ಲಾಘನೀಯ. ಎಂದರು. ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್…
ಮಡಿಕೇರಿ : ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ ‘ಕೂಪದಿ’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 20-03-2024ರ ಬುಧವಾರದಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ 2024 ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಕೋಳಂಡ ರಮೇಶ್ ಮುದ್ದಯ್ಯ “ಸಾಹಿತ್ಯ ಕೃಷಿ ಉಳಿದೆಲ್ಲ ಕೃಷಿಗಿಂತ ಕಠಿಣವಾದುದು. ಬೇರೆ ಕೃಷಿಯಲ್ಲಿ ತಪ್ಪಾದರೂ ಸರಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಸಾಹಿತ್ಯ ಕೃಷಿಯಲ್ಲಿ ತಪ್ಪಾಗದಂತೆ ಬರೆಯಬೇಕಿದೆ. ಅದೊಂದು ಬಗೆಯ ತಪಸ್ಸು ಇದ್ದಂತೆ.” ಎಂದು ಹೇಳಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ “ಕೊಡಗಿನಲ್ಲಿ ಸಂಶೋಧನಾ ಕೃತಿಗಳು ರಚನೆಯಾಗಬೇಕಿದೆ. ಈ ಕುರಿತು ಲೇಖಕರು ಗಮನ ಹರಿಸಬೇಕು. ಕೊಡವ ಭಾಷೆಯಲ್ಲಿ ಪುಸ್ತಕ ಬರೆಯಲು ಯುವಪೀಳಿಗೆ ಮುಂದಾಗಬೇಕು.ವಿಶೇಷವಾಗಿ ಸಂಶೋಧನಾ ಕೃತಿಗಳು ಹೆಚ್ಚು ಹೆಚ್ಚು ಹೊರಬೇಕಾದ ಅನಿವಾರ್ಯತೆ ಇದೆ. ಕೊಡಗಿನಲ್ಲಿ ಸಂಶೋಧನೆಗೆ ವಿಫುಲವಾದ ಅವಕಾಶವೂ ಇದೆ. ಇವುಗಳನ್ನು ಅರಿತು ಯುವಪೀಳಿಗೆ ಸಂಶೋಧನೆಗೆ…
ಮಂಗಳೂರು : ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರಿಂಜದ ಯಕ್ಷಾವಾಸ್ಯಮ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ದಿನಾಂಕ 16-03-2024ರಂದು ರಾಜ್ಯ ಮಟ್ಟದ ಮಹಿಳಾ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ ‘ಯಕ್ಷ ಸುಮತಿ’ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ “ಭರತನಾಟ್ಯ ಮತ್ತು ಯಕ್ಷಗಾನದಂತಹ ಕಲೆಗಳು ಜೀವನಕ್ಕೊಂದು ಶಿಸ್ತು, ತಾಳ್ಮೆಯನ್ನು ಕಲಿಸುತ್ತವೆ. ಯಕ್ಷಗಾನ ಮತ್ತು ಭರತನಾಟ್ಯ ಕಲೆಗಳು ಕರಾವಳಿ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಇದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಒಂದು ಕಲೆಯು ಸ್ವಯಂ ನಿಯಂತ್ರಣದ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳುವ ಪಾಠ ಕಲಿಸುತ್ತದೆ. ಹಿಂದಿನ ಯಕ್ಷಗಾನ ತಂಡಗಳು ಬಹಳ ಶ್ರಮಪಟ್ಟು ಕಲೆಯೊಂದಿಗಿನ ಭಾವನಾತ್ಮಕ ಸಂಬಂಧದಿಂದಾಗಿ ದೊಡ್ಡ…