Author: roovari

ಮಂಗಳೂರು : ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ 108ನೇ ಜನ್ಮ ದಿನಾಚರಣೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರಿನ ಮಂಜುನಾಥ್ ಎಜುಕೇಶನ್ ಟ್ರಸ್ಟಿನ ಸಹಯೋಗದಲ್ಲಿ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಜೋಡುಕಲ್ಲು ಕಯ್ಯಾರು ಗ್ರಾಮದ ಶ್ರೀ ರಾಮಕೃಷ್ಣ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 08-06-2023ರಂದು ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶ್ವನಾಥ ಹಿರೇಮಠ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಸಿ. ಸೋಮಶೇಖರ್, ಸಾಹಿತಿಗಳು ಮತ್ತು ಚಿಂತಕರಾದ ಪ್ರೊ. ಕೆ.ಇ. ರಾಧಾಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Read More

ಬೆಂಗಳೂರು : ಬೆಂಗಳೂರಿನ ನೃತ್ಯ ಸಂಸ್ಥೆಯಾಗಿರುವ ಸಂಸ್ಕೃತಿ ಡ್ಯಾನ್ಸ್ ಅಕಾಡೆಮಿಯು ವಿದ್ಯಾರಣ್ಯಪುರದ ತನ್ನ ಸಂಸ್ಥೆಯ ಸಭಾಂಗಣದಲ್ಲಿ ದಿನಾಂಕ 10-06-2023 ಮತ್ತು 11-06-2023ರಂದು ತಮ್ಮ ನೃತ್ಯ ವಿದ್ಯಾರ್ಥಿಗಳಿಗಾಗಿ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರ ‘ತಾಳ ಕಾರ್ಯಗಾರ’ವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ಶೃತಿ ನಾಯಕ್ ಅವರು ತಿಳಿಸಿದ್ದಾರೆ.

Read More

ಮಂಗಳೂರು : ನೆಹರು ಯುವ ಕೇಂದ್ರದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಒಳಗೊಂಡ ‘’ಜಿಲ್ಲಾ ಯುವ ಉತ್ಸವ’ ಜೂ.10ರಂದು ಬೆಳಿಗ್ಗೆ 10.30ಕ್ಕೆ ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಜಿಲ್ಲಾ ಯುವ ಉತ್ಸವವನ್ನು ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರು ಯುವ ಕೇಂದ್ರ ಕ್ಷೇತ್ರೀಯ ನಿರ್ದೇಶಕ ಎಂ.ಎನ್‌. ನಟರಾಜ್ ಭಾಗವಹಿಸುವರು. ಯುವ ಉತ್ಸವದ ಸ್ಪರ್ಧೆಗಳು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಲಿವೆ. ಚಿತ್ರಕಲೆ, ಕವನ ಬರವಣಿಗೆ, ಮೊಬೈಲ್‌ ಫೋಟೋಗ್ರಫಿ, ಸಾಂಸ್ಕೃತಿಕ ಜಾನಪದ ಗುಂಪು ನೃತ್ಯ, ಭಾಷಣ ಸ್ಪರ್ಧೆಗಳು ನಡೆಯಲಿದ್ದು ಈಗಾಗಲೇ 200ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಕಚೇರಿ, ಕಂದಾಯ ಭವನ, ಮಂಗಳೂರು (0824-2422264 ಅಥವಾ 9611134944) ಇಲ್ಲಿ ಸಂಪರ್ಕಿಸಬಹುದು. ಸ್ಪರ್ಧೆಯ ದಿನದಂದು ಬೆಳಿಗ್ಗೆ 9 ಗಂಟೆಯವರೆಗೆ ಸಳದಲ್ಲಿಯೇ ನೋಂದಣಿಗೂ ಅವಕಾಶವಿದೆ. 2023ರ ಏಪ್ರಿಲ್ 1ಕ್ಕೆ 15-29 ವರ್ಷ ವಯಸ್ಸಿನವರಾಗಿದ್ದು, ದ.ಕ. ಜಿಲ್ಲೆಯವರು ಮಾತ್ರ…

Read More

ಭಾರತವು ಹಲವಾರು ರೀತಿಯ ಕಲೆ, ಸಂಸ್ಕೃತಿ, ಸಾಹಿತ್ಯ, ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ಈ ಕಲೆ-ಸಾಹಿತ್ಯ ಮಾನವನೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಹಲವು ಜನರು ಇದರ ಮಹತ್ವವನ್ನು ಅರಿತುಕೊಳ್ಳದಿದ್ದರೂ ಅವುಗಳ ಬಗ್ಗೆ ವಿಶೇಷವಾದ ಒಲವನ್ನು ಮೂಡಿಸಿಕೊಳ್ಳಲು ಕಾತುರದಿಂದ ಇರುತ್ತಾರೆ. ಎಲ್ಲರಲ್ಲಿಯೂ ಈ ಕಲೆ ಸಾಹಿತ್ಯಗಳು ಹುಚ್ಚೆಬ್ಬಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅವಕಾಶ ಬಂದಾಗ ಅದನ್ನು ವ್ಯಕ್ತಪಡಿಸುವುದು ಕೂಡ ಒಂದು ಕಲೆಯಾಗಿರುತ್ತದೆ. ನಮ್ಮ ಜೀವನವೇ ಒಂದು ಸುಂದರವಾದ ಕಲೆ. ಆ ಕಲೆಯೇ ಸಾಹಿತ್ಯದ ಬೇರು. ಅದು ಅನೇಕ ಸಾಹಿತ್ಯದಿಂದ ಕೂಡಿರುತ್ತದೆ. ಸುಜ್ಞಾನಿಗಳ ಮನದಲ್ಲಿ ಬರಹಗಾರ ಅಥವಾ ಕವಿ ಸೃಷ್ಟಿಯಾದಲ್ಲಿ ಒಂದು ಸುಂದರ ಸಾಹಿತ್ಯ ಲೋಕ ಸೃಷ್ಟಿಯಾಗಬಲ್ಲದು. ಮಾತುಗಳಿಂದ, ರಚನೆಯ ಕಲೆಯಿಂದ ಅದ್ಭುತವಾದ ಸಾಹಿತ್ಯ ಲೋಕ ಗಮನಕ್ಕೆ ಬರಬಹುದು. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಕವಿಯಾದವನಿಗೆ ನಿರ್ಜೀವ ವಸ್ತುವಿಗೆ ಜೀವ ತುಂಬಿ ವರ್ಣಿಸುವ ಕಲೆ ಇರುತ್ತದೆ. ಒಂದು ಸಾಹಿತ್ಯ ರಚನೆಯಾಗಬೇಕಾದರೆ ಮನದ ಭಾವನೆಗಳಿಗೆ ಬರಹದ ರೂಪಕೊಟ್ಟು ಒಂದು ಸುಂದರ…

Read More

ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸುರ್ ಓ ಸಾಜ್’ ಸಂಗೀತ ಕಾರ್ಯಕ್ರಮವು ಜೂನ್ 11ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ. ದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಹಿರಿಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದು, ಸಂಗೀತಾಸಕ್ತರಿಗೆ ಮುಕ್ತ ಪ್ರವೇಶಾವಕಾಶವಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‌ ತಿಳಿಸಿದ್ದಾರೆ. ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಹೊಸದಿಲ್ಲಿಯ ಡಾ. ಬಿಪುಲ್‌ ಕುಮಾರ್ ರಾಯ್ ಅವರಿಂದ ಸಂತೂರ್ ವಾದನ ನಡೆಯಲಿದ್ದು, ತಬ್ಲಾ ವಾದಕ ಬೆಂಗಳೂರಿನ ಪಂಡಿತ್‌ ರಾಜೇಂದ್ರ ನಾಕೋಡ್ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಧಾರವಾಡದ ಡಾ. ವಿಜಯ್‌ ಕುಮಾರ್ ಪಾಟೀಲ್‌ ಮತ್ತು ಬೆಂಗಳೂರಿನ ಕೌಶಿಕ್‌ ಐತಾಳ್ ಅವರ ಜುಗಲ್‌ ಬಂದಿ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಬೆಂಗಳೂರಿನ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ಕೇಶವ ಜೋಶಿ ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ. ಡಾ. ಬಿಪುಲ್‌ ಕುಮಾರ್ ರಾಯ್ ಡಾ. ಬಿಪುಲ್ ಕುಮಾರ್ ಭಾರತದ…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ – ಸಾಹಿತ್ಯಿಕ ಸಂಘಟನೆ ‘ರಂಗಸ್ಪಂದನ ಮಂಗಳೂರು’ ಆಶ್ರಯದಲ್ಲಿ ‘ಸಾಂಸ್ಕೃತಿಕ ರಂಗ ದಿಬ್ಬಣ’ ಸರಣಿ ಕಾರ್ಯಕ್ರಮಗಳು ಜೂನ್ 12, 17, 18ರಂದು ನಡೆಯಲಿದೆ. ‘ಸಾಂಸ್ಕೃತಿಕ ರಂಗ ದಿಬ್ಬಣ’ ಎಂಬ ಸರಣಿ ಕಾರ್ಯಕ್ರಮದಲ್ಲಿ ದಿಬ್ಬಣ 1 ಪೌರಾಣಿಕ ತುಳುನಾಟಕ ಜೂನ್ 12ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರಂಗ ಜ್ಯೋತಿ ಬೆಳಗಿ ಹಿರಿಯ ರಂಗ ನಿರ್ದೇಶಕ ಶ್ರೀ ಕಾಸರಗೋಡು ಚಿನ್ನಾ ಉದ್ಘಾಟಿಸಲಿದ್ದಾರೆ. ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ಹಾಗೂ ನಮ್ಮ ಟಿವಿ ವಾಹಿನಿ ಆಡಳಿತ ನಿರ್ದೇಶಕರಾದ ಡಾ. ಶಿವಚರಣ್ ಶೆಟ್ಟಿಯವರು ಶುಭಾಶಂಸನೆಗೈಯಲಿದ್ದಾರೆ. ಬಳಿಕ ವಿಜಯ ಕುಮಾರ್ ಕೊಡಿಯಾಲಬೈಲ್ ಅವರ “ಶಿವದೂತೆ ಗುಳಿಗೆ” ಎನ್ನುವ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ದಿಬ್ಬಣ 2 ಯಕ್ಷವೈಭವ ಕಾರ್ಯಕ್ರಮ ಜೂನ್ 17ರಂದು ಸಂಜೆ 5.30ಕ್ಕೆ ಕಾವೂರು ಪದವಿನ ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಲಿದ್ದು, ಶ್ರೀ ಗುರುವೈದ್ಯನಾಥ…

Read More

ಬೆಂಗಳೂರು: ರಂಗಚಕ್ರ ತಂಡವು ಅಭಿನಯ ಕಾರ್ಯಾಗಾರದ ಮೂಲಕ ಹೊಸ  ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುತ್ತ ಹಲವಾರು ನಾಟಕಗಳನ್ನು ಪ್ರಸ್ತುತಪಡಿಸಿದೆ. ಇವರ ಈ ಬಾರಿಯ  ಅಭಿನಯ ಕಾರ್ಯಾಗಾರವು ರಂಗಕರ್ಮಿ ಮಧು ಮಳವಳ್ಳಿಯವರ ನಿರ್ದೇಶನದಲ್ಲಿ ಜೂನ್ 16 ರಿಂದ ಜುಲೈ 31ರ ವರೆಗೆ ನಡೆಯಲಿದೆ. ಈ ಕಾರ್ಯಾಗಾರವನ್ನು ಹಿರಿಯ ರಂಗತಜ್ಞ ಡಾ. ಬಿ. ವಿ. ರಾಜಾರಾಮ್ ಇವರು ಉದ್ಘಾಟನೆ ಮಾಡಲಿದ್ದಾರೆ. 18ವರ್ಷ ಮೇಲ್ಪಟ್ಟವರಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದ್ದು, ನಾಡಿನ ಹೆಸರಾಂತ ರಂಗಕರ್ಮಿಗಳಾದ ಡಾ. ರಾಜರಾಮ್, ಸುರೇಶ್ ಆನಗಳ್ಳಿ, ಬಿ. ಸುರೇಶ, ಪ್ರಸನ್ನಕುಮಾರ್ ಕೆರಗೂಡು, ಲವಕುಮಾರ್, ಗುಂಡಣ್ಣ ಚಿಕ್ಕಮಗಳೂರು ಮತ್ತು ಉಮಾಶ್ರೀ ಮಧು ಮಳವಳ್ಳಿ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಾಗಾರವು ಸಂಜೆ 6 ರಿಂದ 9ರ ವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಾಸ್ತಿ ರಂಗ ತಾಲೀಮು ಕೊಠಡಿಯಲ್ಲಿ ನಡೆಯಲಿದ್ದು ಹೆಚ್ಚಿನ ಮಾಹಿತಿ, ನೋಂದಣಿ ಹಾಗೂ ಪ್ರವೇಶಾತಿಗಾಗಿ ಮಹೇಶ್ ಕುಮಾರ್ 8971600558 ಇವರನ್ನು ಸಂಪರ್ಕಿಸಬಹುದು. ಮಧು ಮಳವಳ್ಳಿ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಗಸನಪುರದವರಾದ ಇವರು…

Read More

ಮಂಗಳೂರು : ಕಲೆ, ಸಾಂಸ್ಕೃತಿಕ ಪರಂಪರೆಗಾಗಿ ಭಾರತೀಯ ರಾಷ್ಟ್ರೀಯ ಟ್ರಸ್ಟ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಹಯೋಗದಲ್ಲಿ ‘ದೃಶ್ಯ– ಬಾಂಧವ್ಯ’ ಎಂಬ ಶೀರ್ಷಿಕೆಯಡಿ ಕಲಾ ಪ್ರದರ್ಶನವನ್ನು ದಿನಾಂಕ :03-06-2023ರಿಂದ 10-06-2023ರವರೆಗೆ ಆಯೋಜಿಸಿದೆ. 2021ರಲ್ಲಿ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಗ್ರಾಮದಲ್ಲಿ ನಡೆದ ಕಲಾಶಿಬಿರದಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಗರದ ಬಲ್ಲಾಳ್‌ ಬಾಗಿನ ಕೊಡಿಯಾಲ್ ‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆರಂಭಗೊಂಡಿದೆ. ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದ ಕ್ಯುರೇಟರ್ ಧನಲಕ್ಷ್ಮೀ ಅಮ್ಮಾಳ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರದರ್ಶನದಲ್ಲಿರುವ ವರ್ಣಚಿತ್ರಗಳ ಸಂಗ್ರಹವನ್ನು ಶ್ಲಾಘಿಸಿದರಲ್ಲದೆ ಶ್ರೀಮಂತಿ ಬಾಯಿ ವಸ್ತು ಸಂಗ್ರಹಾಲಯ, ಇಂಟಾಕ್ ಮತ್ತು ಆರ್ಟ್ ಕನರಾ ಟ್ರಸ್ಟ್ ನಡುವಿನ ಸಹಯೋಗದ ಸಾಧ್ಯತೆಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ಸಹಮತದ ಐವನ್ ಡಿ’ಸಿಲ್ವಾ ಅವರು 2021ರಲ್ಲಿ ನಡೆದ ಕಲಾ ಶಿಬಿರದ ಕಲ್ಪನೆ ಮತ್ತು ಅದರ ಮಹತ್ವವನ್ನು ವಿವರಿಸಿದರು. ಕಲಾವಿದ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ…

Read More

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ದುಬೈ ಘಟಕದ ವತಿಯಿಂದ ‘ದುಬೈ ಯಕ್ಷೋತ್ಸವ- 2023 ವಿಶ್ವ ಪಟ್ಲ ಸಂಭ್ರಮ’ ಜೂನ್ 11ರಂದು ಮಧ್ಯಾಹ್ನ 2 ಗಂಟೆಗೆ ದುಬೈನ ಕರಾಮ ಇಂಡಿಯನ್ ಸ್ಕೂಲಿನ ಶೇಖ್ ರಷೀದ್ ಸಭಾಂಗಣದಲ್ಲಿ ವಿಶ್ವದಲ್ಲಿ ಇರುವ ಪಟ್ಲ ಫೌಂಡೇಷನ್ನಿನ 38 ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಜರಗಲಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇವರು ದುಬೈ ಮತ್ತು ತಾಯಿ ನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುವ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಹಿರಿಯ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪಟ್ಲ ಫೌಂಡೇಷನ್ನಿನ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಉದ್ದಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಘಟಕದ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ, ಐಕಳ ಹರೀಶ್ ಶೆಟ್ಟಿ, ಪಟ್ಲ ಘಟಕ ಯುಎಇಯ ಗೌರವಾಧ್ಯಕ್ಷ ಪುತ್ತಿಗೆ ವಾಸುದೇವ ಭಟ್, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಭೀಮ್ ಜ್ಯುವೆಲ್ಲರ್ಸ್‌ ನ ಯು. ನಾಗರಾಜ…

Read More

ಬೆಂಗಳೂರು: ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ‘ ಮಹೇಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ -2023 ‘ (META)ಗೆ 393 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ “ದಕ್ಲಕಥಾ ದೇವಿಕಾವ್ಯ” ನಾಟಕವು ಒಂದು. ಮೆಟಾ ಅವಾರ್ಡ್ ನಲ್ಲಿ 10 ವಿಭಾಗಗಳಲ್ಲಿ ಆಯ್ಕೆಯಾದ ಕೆಲವೇ ನಾಟಕಗಳಲ್ಲಿ ಈ ನಾಟಕವು ಒಂದು. ಈ ನಾಟಕದಲ್ಲಿಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸಂತೋಷ್ ದಿಂಡ್ಗೂರು ಮತ್ತು ಭರತ್ ಡಿಂಗ್ರಿ ಈಗಾಗಲೇ ಪಡೆದಿದ್ದಾರೆ. 29-03-2023ರಂದು ನವದೆಹಲಿಯ ರಂಗದಲ್ಲಿ ಪ್ರದರ್ಶನ ಕಂಡ ಈ ನಾಟಕ ಭಾಷೆಯನ್ನು ಮೀರಿ ನೆರೆದಿದ್ದ ಅಷ್ಟೂ ಜನರನ್ನು ರಂಜಿಸಿ, ಮೆಚ್ಚುಗೆಗೂ ಪಾತ್ರವಾಯಿತು. ಕೆ. ಬಿ ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ. ಪಿ ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀ ಹರ್ಷ ಜಿ. ಎನ್ ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಹೆಚ್.ಕೆ…

Read More