Author: roovari

ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದಲ್ಲಿ 3ರಿಂದ 15 ವರ್ಷದ ಮಕ್ಕಳಿಗೆ 2 ವಿಭಾಗಗಳಲ್ಲಿ ರಂಗ ತರಬೇತಿಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ‘ಮಂಗಳ ಅಂಗಳ’ ಮೊದಲ ವಿಭಾಗವು 3ರಿಂದ 8ನೇ ವರ್ಷದ ಮಕ್ಕಳಿಗಾಗಿದ್ದು, 4 ತಿಂಗಳ ಅವಧಿಯ ಈ ತರಗತಿಗಳಲ್ಲಿ ಅಭಿನಯ, ಆಟಗಳು, ಹಾಡುಗಳು, ಕಲೆ ಹಾಗೂ ಕರಕುಶಲದ ಬಗ್ಗೆ ಮಕ್ಕಳಿಗೆ ಪ್ರತಿಭಾವಂತ ನಿರ್ದೇಶಕರು ಮಾರ್ಗದರ್ಶನ ನೀಡಲಿದ್ದಾರೆ ಹಾಗೂ ಪ್ರತಿ 2 ತಿಂಗಳಿಗೊಮ್ಮೆ ಮಕ್ಕಳಿಂದ ವಿಶೇಷ ಪ್ರದರ್ಶನಗಳನ್ನು ನಡೆಸಲಾಗುವುದು. ಜೂನ್ 6ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ ಮಂಗಳವಾರ ಸಂಜೆ 5ರಿಂದ 6.30ರವರೆಗೆ ನಡೆಯಲಿದೆ. 2ನೇ ವಿಭಾಗವು 8ರಿಂದ 15ನೇ ವರ್ಷದ ಮಕ್ಕಳಿಗೆ 8 ತಿಂಗಳ ಅವಧಿಯ ತರಗತಿಗಳಾಗಿದ್ದು ಇದರಲ್ಲಿ ನಟನೆ, ಆಟಗಳು, ಕಲೆ ಹಾಗೂ ಕರಕುಶಲ, ಹಾಡು, ನೃತ್ಯ, ಚಿತ್ರಕಥನ ಇವುಗಳಲ್ಲಿ ಮುಂದುವರೆಯಲು ಮಕ್ಕಳಿಂದ ವಿಶೇಷ ಪ್ರದರ್ಶನ ಹಾಗೂ ‘ಬೊಂಬೆ ಹಬ್ಬ’ ನಡೆಯಲಿರುವುದು. ಜೂನ್ 4ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ…

Read More

ಮಂಗಳೂರು: ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಜೂನ್ 11ರಂದು ‘ನೃತ್ಯೋತ್ಸವ-2023’ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಮಧ್ಯಾಹ್ನ 2.45ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಲಾನಿಕೇತನ ಡಾನ್ಸ್ ಫೌಂಡೇಶನ್ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ಚಾಲನೆ ನೀಡುವರು. ಯುವ ನೃತ್ಯೋತ್ಸವ-2023ರ ಅಂತಿಮ ಸುತ್ತಿಗೆ ಆಯ್ಕೆಯಾದ ಕಲಾವಿದೆ ಅಪರ್ಣಾ ಮೋಹನ್, ಗಾಯತ್ರಿ ಜೋಶಿ, ಕಾರ್ತಿಕ್ ಮಣಿಕಂದನ್, ಮೀರಾ ಶ್ರೀ ದಂಡಪಾಣಿ, ಮೇಘಾ ಮಲರ್ ಪ್ರಭಾಕರ್, ಪಿ.ಜಿ.ಪನ್ನಗ ರಾವ್, ಪಿ.ಸ್ನವಜಾ ಕೃಷ್ಣನ್, ತ್ವಿಶಾ ವಧುಲ್ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಬಳಿಕ ಗುರು ವಿದ್ಯಾ ಮನೋಜ್ ಅವರ ಶಿಷ್ಯೆಯಂದಿರಾದ ಡಾ.ಮಹಿಮಾ ಪಣಿಕ್ಕರ್, ಅನುಷಾ ಎನ್.ರಾವ್ ಅವರ ಯುಗಳ ನೃತ್ಯ ಪ್ರದರ್ಶನ ಇರಲಿದೆ. ಅನಂತರ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯರು ಸಮೂಹ ನೃತ್ಯ ಪ್ರಸ್ತುತಪಡಿಸುವರು. ಆಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು: ತುಳು ಕೂಟ ಕುಡ್ಲದ ಆಶ್ರಯದಲ್ಲಿ 17-06-2023ರಂದು ಬೆಳಿಗ್ಗೆ 10 ಗಂಟೆಗೆ ನಂತೂರಿನ ಭಾರತೀ ಕಾಲೇಜಿನ ಶಂಕರ ಸದನದಲ್ಲಿ ‘ಬಂಗಾರ್ ಪರ್ಬ ಸರಣಿ ಕಾರ್ಯಕ್ರಮ-4’ದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಕಾರ್ಯಕ್ರಮವು ನಡೆಯಲಿದೆ. ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಎಂಬ ವಿಷಯದ ಬಗ್ಗೆ ಪರಿಚಯ ಕೊಡಲಿದ್ದಾರೆ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಸಾರ್. ನಂತೂರಿನ ಶ್ರೀ ಭಾರತೀ ಗ್ರೂಪ್ ಆಫ್ ಇನಿಸ್ಟಿಟ್ಯೂಷನ್ಸ್ ಇದರ ಕಾರ್ಯದರ್ಶಿಗಳಾದ ಶ್ರೀ ಶ್ರೀಕೃಷ್ಣ ಭಟ್ ನೀರಮೂಲೆ, ಶ್ರೀ ಭಾರತೀ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಂಗಾರತ್ನ, ಶ್ರೀ ಭಾರತೀ ಪ. ಪೂ ಕಾಲೇಜಿನ ಕೋಶಾಧಿಕಾರಿಗಳಾದ ಶ್ರೀ ಉದಯ ಶಂಕರ್ ನೀರ್ಪಾಜೆ ಹಾಗೂ ಹವ್ಯಕ ಮಹಾಮಂಡಲದ ಮುಷ್ಟಿಭಿಕ್ಷಾ ಪ್ರಧಾನದ ಶ್ರೀ ಸರವು ರಮೇಶ್ ಭಟ್ ಇವರೆಲ್ಲರೂ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 05.06.2023ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ‘ಮಾಯಾಮೃಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮ – ಭಾಸ್ಕರ್ ಬಾರ್ಯ, ಸೀತೆ – ಕು೦ಬ್ಳೆ ಶ್ರೀಧರ್ ರಾವ್, ರಾವಣ – ಪೂಕಳ ಲಕ್ಷ್ಮೀನಾರಾಯಣ ಭಟ್, ಮಾರೀಚ – ಭಾಸ್ಕರ್ ಶೆಟ್ಟಿ ಸಾಲ್ಮರ, ಸನ್ಯಾಸಿ ರಾವಣ – ಪಕಳಕುಂಜ ಶ್ಯಾಮ್ ಭಟ್, ಲಕ್ಷ್ಮಣ – ದುಗ್ಗಪ್ಪ ಎನ್. ಸಹಕರಿಸಿದರು. ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದರೂ ಸಂಘಟಕರೂ ಆದ ಎಸ್.ಎನ್. ಪಂಜಾಜೆಯವರಿಗೆ ಅಧ್ಯಕ್ಷರಾದ ಭಾಸ್ಕರ್ ಬಾರ್ಯ ಇವರು ನುಡಿನಮನ ಸಲ್ಲಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ, ಶ್ರೀಮತಿ ಶುಭಾ ಅಡಿಗ ವಂದಿಸಿದರು.

Read More

ಕಲಬುರಗಿ : ರಂಗಸಂಗಮ ಕಲಾವೇದಿಕೆ ನೀಡುವ ಎಸ್.ಬಿ. ಜಂಗಮ ಶೆಟ್ಟಿ ಮತ್ತು ಸುಭದ್ರಾ ದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರುಗಳನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಅಥವಾ ಅರ್ಜಿ ಹಾಕಬಹುದು ಎಂದು ರಂಗ ಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 10,000 ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನೊಳಗೊಂಡಿದ್ದು, ಜುಲೈ 18ರಂದು ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಾಗಿ ಅರ್ಜಿಗಳನ್ನಾಗಲಿ ಅಥವಾ ನಾಮ ನಿರ್ದೇಶನಗಳನ್ನಾಗಲಿ ಕಳಿಸುವ ಕೊನೆಯ ದಿನಾಂಕ 20-06-2023. ಕಳಿಸಬೇಕಾದ ವಿಳಾಸ: ಡಾ.ಸುಜಾತಾ ಜಂಗಮಶೆಟ್ಟಿ, ಓಂ ರೆಸಿಡೆನ್ಸಿ, ಗೋಕುಲ ಸೂಪರ್ ಬಜಾರಿನ ಎರಡನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ. ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ, ಕಲಬುರಗಿ 585102.

Read More

ಬೆಂಗಳೂರು : ‘ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ’ ಮತ್ತು ಕಲಾ ಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ‘ಮೋಹನ ತರಂಗಿಣಿ ಸಂಗೀತ ಸಭಾ’ ಇದರ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮವು ದಿನಾಂಕ 18-02-2023ರಿಂದ 07-05-2023ರವರೆಗೆ ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವ ಅಂಗವಾಗಿ ನಡೆಯುತ್ತಿರುವ 75ನೇ ವಾರ್ಷಿಕೋತ್ಸವಕ್ಕೆ 75 ಕಾರ್ಯಕ್ರಮಗಳ ‘ಮಂಗಳ ಸಂಗೀತ ನೃತ್ಯ ಧಾರೆ’ ಎಂಬ ಕಾರ್ಯಕ್ರಮವು ಕಲಾಗ್ರಾಮ ಸಮುಚ್ಛಯ ಭವನ, ಮಲ್ಲತ್ತ ಹಳ್ಳಿ, ಬೆಂಗಳೂರಿನಲ್ಲಿ ನಡೆಯಿತು.  ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರರೊಂದಿಗೆ ರಾಜ್ಯದ ಎಲ್ಲಾ ಸಂಗೀತ ಸಭಾದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಸೇರಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟಿನ ಪ್ರೊ. ವಿ ಅರವಿಂದ ಹೆಬ್ಬಾರ್ ಮಾತನಾಡಿ, “ವಿದ್ವಾನ್ ಮೋಹನ…

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳವಾಗಿದೆ. ಕದ್ರಿ ದೇವಳದ ಸಂಪೂರ್ಣ ಸಹಕಾರದೊಂದಿಗೆ ತನ್ನ 23ನೇ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಸರಯೂ ಸಪ್ತಾಹ -2023’ವು ಮೇ 25ರಿಂದ 31ರವರೆಗೆ ಕದ್ರಿ ದೇವಳದ ರಾಜಾಂಗಣದಲ್ಲಿ ಬಹಳ ವೈಭವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ದಿನಾಂಕ 25-05-2023ರಂದು ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ನರಸಿಂಹ ತಂತ್ರಿಗಳು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.  ದಿನಾಂಕ 26-05-2023ರಂದು 2ನೇ ದಿನದ ಕಾರ್ಯಕ್ರಮದಲ್ಲಿ ಶ್ರೇಷ್ಠ ಆರ್ಥಿಕ ತಜ್ಞ, ಕಲಾಪೋಷಕ ಎಸ್.ಎಸ್.ನಾಯಕ್ ಮಾತನಾಡುತ್ತಾ “ಭಾರತೀಯ ಲಲಿತಕಲೆಗಳೇ ಶ್ರೇಷ್ಠ. ಅದರಲ್ಲೂ ಇಂದು ಯಕ್ಷಗಾನ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ತೆಂಕು ಮತ್ತು ಬಡಗುಗಳ ಬೇಧವಿಲ್ಲದೇ ಜನ ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲೂ ಸರಯೂ ತಂಡ ಬೇರೆ ಬೇರೆ ಭಾಷೆಗಳಲ್ಲೂ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಸಂಸ್ಕೃತದಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನೀಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತಲುಪುವಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ನಮ್ಮ ಬೆಂಬಲ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2023ರ ಸಮಾರೋಪ ದಿನಾಂಕ 28-05-2023 ಭಾನುವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿ, “ಪಟ್ಲರು ಈ ತಮ್ಮ ಕಂಠಸಿರಿಯ ಮೂಲಕ ಮಾತ್ರ ಸಮಾಜವನ್ನು ರಂಜಿಸಿದ್ದಲ್ಲ. ಸಾಮಾಜಿಕ ಸಂಘಟನೆ ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿನ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಕೆಲವರಿಗೆ ದಾನ ಮಾಡುವ ಸಾಮರ್ಥ್ಯ ಇರುತ್ತದೆ. ಇನ್ನು ಕೆಲವರಿಗೆ ತಮಗೆ ದಾನ ಮಾಡುವ ಸಾಮರ್ಥ್ಯ ಇಲ್ಲದಿದ್ದರೂ ಹತ್ತು ಮಂದಿಯಿಂದ ದಾನ ಕೂಡಿಸುತ್ತಾರೆ. ಕೆಲವರು ತಾವೂ ದಾನ ಮಾಡುತ್ತಾರೆ. ಇತರರಿಂದಲೂ ಕೊಡಿಸುತ್ತಾರೆ. ಕೆಲವರಿಗೆ ಈ ಎಲ್ಲ ಸಾಮರ್ಥ್ಯವಿರುತ್ತದೆ. ಅಂತಹ ವಿಶೇಷ ಗುಣ ಪಟ್ಲ ಸತೀಶ್ ಶೆಟ್ಟಿ ಅವರಲ್ಲಿದೆ. ಅವರ ಸಮಾಜಮುಖಿ ಕಾರ್ಯ ನಿರಂತರ ಮುಂದುವರಿಯಲಿ,” ಎಂದರು. ಯಕ್ಷಗಾನ ರಂಗದ ಐದು ದಶಕಗಳ ಹಿರಿಯ ಸಾಧಕ ಪ್ರೊ. ಎಂ.ಎಲ್. ಸಾಮಗ-ಪ್ರತಿಭಾ ಸಾಮಗ ದಂಪತಿಗೆ ‘ಪಟ್ಟ ಪ್ರಶಸ್ತಿ -2023’ ನೀಡಿ ಗೌರವಿಸಲಾಯಿತು. ಪ್ರೊ. ಎಂ.ಎಲ್. ಸಾಮಗರವರು…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಯಕ್ಷಧ್ರುವ ಪಟ್ಲ ಸಂಭ್ರಮ-2023 ಕಾರ್ಯಕ್ರಮದ ಅಂಗವಾಗಿ ಅಡ್ಯಾರ್ ಗಾರ್ಡನ್‌ನಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯು ದಿನಾಂಕ 27-05-2023ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ್ ಜೋಷಿ “ಯಕ್ಷಗಾನದಲ್ಲಿ ಎಲ್ಲರೂ ಗೆಲ್ಲುವವರೇ ಇಲ್ಲಿ ಸೋಲುವವರು ಯಾರು ಇಲ್ಲ. ಸ್ಪರ್ಧೆಗಳಲ್ಲಿ ಗೆಲ್ಲುವ ಜತೆಗೆ ನಮ್ಮ ಸಂಸ್ಕೃತಿಯನ್ನು ಪಸರಿಸುವ, ಸಂಸ್ಕಾರವನ್ನು ಉಳಿಸುವ ಕೆಲಸವಾಗುತ್ತದೆ ಎಂಬುದು ಖುಷಿಯ ವಿಚಾರ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನಲ್ಲಿ ನಾನು ಒಂದು ಭಾಗ ಎಂದು ಹೆಮ್ಮೆಯಿದೆ. ಹೆಸರಿಗೆ ತಕ್ಕಂತೆ ಇಲ್ಲಿ ಸಂಭ್ರಮವೇ ನಡೆಯುತ್ತಿದೆ. ಮಹಿಳೆಯರು ಮತ್ತು ಪುರುಷರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಭಾಗವಹಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, “ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಬರುವಂತೆ ಉತ್ತೇಜನ ನೀಡಬೇಕು, ಪಾರಂಪರಿಕ ಸೊಗಡನ್ನು ಉಳಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಎಂದರು. ಕಲ್ಕೂರ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಇವುಗಳ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನಾಂಕ 01-06-2023ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ತುಳು ವೆಬಿನಾರ್ಗಳ ಸಂಗ್ರಹ ‘ಗೇನದ ಗೆಜ್ಜೆ – ನೂದನೆ ಪಜ್ಜೆ’, ಶ್ರೀ ಮಂಜುನಾಥೇಶ್ವರ ತುಳು ಪೀಠದ ಮೂವತ್ತನೇ ವರ್ಷದ ನೆನಪಿನ ಸಂಚಿಕೆ ‘ತ್ರಿಂಶತಿ ತಿರುಳು’ ಮತ್ತು ಶುಭಾಶಯ ಜೈನ್ ಬರೆದ ಕೃತಿ ‘ಅಪ್ಪೆ ಅಂಜನೆ’ ಈ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡುತ್ತಾ “ತುಳು ಸುಲಲಿತ ಭಾಷೆ, ಅದಕ್ಕೆ ಮತ ಮತ್ತು ಧರ್ಮದ ಹಂಗಿಲ್ಲ, ಯಾರೂ ಕೂಡ ಮಾತನಾಡಬಹದು. ಬೇರೆ ಭಾಷೆಗಳಿಗಿಂತ ಸುಲಲಿತ ಅನ್ನುವ ಕಾರಣಕ್ಕೆ ತುಳುವನ್ನು ಸುಲಭವಾಗಿ ಕಲಿತು ಮಾತನಾಡುತ್ತಾರೆ. ಇಂತಹ ತುಳು…

Read More