Author: roovari

ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ದಕ್ಲಕಥಾ ದೇವಿಕಾವ್ಯ’ ನಾಟಕದ ಪ್ರದರ್ಶನವು ಬೆಂಗಳೂರಿನ ರಂಗಶಂಕರದಲ್ಲಿ ದಿನಾಂಕ 12-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ. ಕೆ.ಬಿ. ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ.ಪಿ.ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀಹರ್ಷ ಜಿ.ಎನ್. ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಎಚ್.ಕೆ. ಅವರದ್ದು. ನಾಟಕದಲ್ಲಿ ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಹಾಗೂ ಭರತ್ ಡಿಂಗ್ರಿ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ. ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ…

Read More

ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ನಾಟಕದ ಪ್ರದರ್ಶನವು ದಿನಾಂಕ 08-09-2023 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನ ಗೊಳ್ಳಲಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ  ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ.

Read More

ಉಡುಪಿ : ಉಡುಪಿಯ 26 ಬಡಗುಬೆಟ್ಟು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಐದು ಶುಕ್ರವಾರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಸರಣಿಯ ಮೂರನೆಯ ಶುಕ್ರವಾರ ದಿನಾಂಕ 01-09-2023ರ ಸಂಜೆ ಕುಮಾರಿ ಹಿತಾ ಮಯ್ಯ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಲಿಟ್ಟಲ್ ರಾಕ್ ಇಂಡಿಯನ್ ಸ್ಕೂಲ್ ಇಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ರಾಘವೇಂದ್ರ ಮಯ್ಯ ಮತ್ತು ರಮಣಿ ಮಯ್ಯ ಇವರ ಸುಪುತ್ರಿ. ಸನಾತನ ನಾಟ್ಯಾಲಯದ ವಿದುಷಿ ವಾಣಿಶ್ರೀ ಇವರ ಶಿಷ್ಯೆಯಾಗಿರುವ ಕುಮಾರಿ ಹಿತಾ ಮಯ್ಯ ಕಳೆದ ಏಳು ವರ್ಷಗಳಿಂದ ಭಾರತ್ಯನಾಟ್ಯ ಅಭ್ಯಾಸ ಮಾಡುತಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಮಧೂರು ಬಾಲಸುಬ್ರಮಣ್ಯಂ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಐದನೇ ವಯಸ್ಸಿನಿಂದ ಭಾರತ್ಯನಾಟ್ಯ ಕಾರ್ಯಕ್ರಮ ನೀಡಲು ಆರಂಭಿಸಿರುವ ಈಕೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈಕೆಯ ಸಾಧನೆಗೆ ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ಆರ್ಟ್ಸ್ ನಿಂದ ಕಲಾಯಶಸ್ವಿ ಪ್ರಶಸ್ತಿ , ಎ.ಐ.ಡಿ.ಎ ಇಂದ ಬಾಲಶ್ರೀ ಪ್ರಶಸ್ತಿ ಹಾಗೂ ವಿಜಯಕರ್ನಾಟಕದಿಂದ ವಿಕ…

Read More

ಕಾಸರಗೋಡು: ಬೆಂಗಳೂರಿನ ವೀರಲೋಕ ಪ್ರಕಾಶನದ ದೇಸಿ ಜಗಲಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕಥಾ ಕಮ್ಮಟವು ದಿನಾಂಕ 23-09-2023 ಮತ್ತು 24-09-2023 ರಂದು ಉಪ್ಪಳದ ಬಾಯಿಕಟ್ಟೆ ಸಮೀಪದ ಲಕ್ಷ್ಮಿ ಮಿಲ್ಸ್‌ ಸಭಾಭವನದಲ್ಲಿ ನಡೆಯಲಿದೆ. ಖ್ಯಾತ ಸಂಶೋಧಕ ಮತ್ತು ಅನುವಾದಕ ಡಾ.ಮೋಹನ ಕುಂಟಾರು ಕಥಾ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವರು. ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, 40 ವರ್ಷದೊಳಗಿನ ಆಸಕ್ತ ಬರಹಗಾರರು ಈ ಕಥಾ ಕಮ್ಮಟದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಬಹುದು. ಈ ಕಮ್ಮಟದ ಎರಡು ದಿನಗಳ ಕಾಲ ಊಟ ಮತ್ತು ಉಪಹಾರಗಳ ವ್ಯವಸ್ಥೆಯಿದ್ದು ಪ್ರವೇಶವು ಉಚಿತವಾಗಿದೆ. ಆಸಕ್ತ ಬರಹಗಾರರು ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಡಾ.ಸುಭಾಷ್‌ ಪಟ್ಟಾಜೆ 9645081966, ಹಿರಿಯ ಲೇಖಕ ಪ್ರೊ.ಪಿ.ಎನ್.ಮೂಡಿತ್ತಾಯ 9495296720 ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.

Read More

ಕಾಪು : ಯಕ್ಷ ಶಿಕ್ಷಣ ಟ್ರಸ್ಟ್( ರಿ) ಉಡುಪಿ ಇವರು ಈ ವರ್ಷ ಕಾಪು ವಿಧಾನ ಸಭಾ ಕ್ಷೇತ್ತದ 15 ಪ್ರೌಢ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಆರಂಭಿಸಿದ್ದು, ಕುತ್ಯಾರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ  ಯಕ್ಷಗಾನ ತರಗತಿ ಉದ್ಘಾಟನೆ ದಿನಾಂಕ 02-09-2023 ರಂದು ಜರಗಿತು. ಜ್ಯೋತಿ ಬೆಳಗಿಸಿ ಶುಭ ಕೋರಿದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಇವರು  “ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷ ಶಿಕ್ಷಣವೂ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.” ಎಂದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಉಪಾಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಕುತ್ಯಾರು ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಹಾಗೂ ಯಕ್ಷಗುರು ನಂದಿಕೂರು ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಇಲ್ಲಿ 28 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ.

Read More

ಉಡುಪಿ : ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ ಅಶ್ರಯದಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್‌ (ರಿ.) ಮಂಗಳೂರು ಸಂಯೋಜಿಸುವ ‘ಕಿಶೋರ ನೃತ್ಯ ಪ್ರತಿಭೋತ್ಸವ’ ಕಾರ್ಯಕ್ರಮವು ದಿನಾಂಕ 10-09-2023ರ ಆದಿತ್ಯವಾರ ಸಂಜೆ ಘಂಟೆ 3.30ರಿಂದ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬಿ.ವಿಜಯ ಬಲ್ಲಾಳ ಉದ್ಘಾಟಿಸಲಿದ್ದು, ವಿದ್ವಾನ್ ಪಿ.ಕಮಲಾಕ್ಷ ಆಚಾ‌ರ್, ವಿದ್ವಾನ್‌ ಚಂದ್ರಶೇಖರ್ ನಾವಡ, ವಿದ್ವಾನ್ ಸುರೇಶ್ ಅತ್ತಾವರ್ ಉಪಸ್ಥಿತಲಿರುವರು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಯು.ಕೆ.ಪ್ರವೀಣ್, ಕಾರ್ಯದರ್ಶಿಯಾದ ಕೆ.ಸುಧೀರ್ ರಾವ್ ಕೊಡವೂರು ಹಾಗೂ ಪದಾಧಿಕಾರಿಗಳು ಎಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಶ್ರೀ ಕೃಷ್ಣ ಸಂಧಾನ’ ಎಂಬ ತಾಳಮದ್ದಳೆಯು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ದಿನಾಂಕ 04-09-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಜಯರಾಮ ಭಟ್ ಮತ್ತು ಶ್ರೀ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಪೂಕಳ ಲಕ್ಷ್ಮೀ ನಾರಾಯಣ ಭಟ್ (ವಿದುರ), ಶ್ರೀ ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಕೌರವ) ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು (ಭಾನುಮತಿ) ಸಹಕರಿಸಿದರು. ಈ ಸಂದರ್ಭದಲ್ಲಿ ದೇವಾಲಯದವರು ಹಮ್ಮಿಕೊಂಡ ಏಕಾದಶ ಕೋಟಿ ಜಪ ಯಜ್ಞದ ಪ್ರಯುಕ್ತ ‘ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಜಪದಲ್ಲಿ ಕಲಾವಿದರೆಲ್ಲ ಪಾಲ್ಗೊಂಡರು. ಶ್ರೀ ರಂಗನಾಥ ರಾವ್ ಬೊಳುವಾರು ಮತ್ತು ಶ್ರೀಮತಿ ಶುಭಾ ಅಡಿಗ ಸಹಕರಿಸಿದರು.

Read More

ಬೆಂಗಳೂರು: ದೇಶಹಳ್ಳಿ ಜಿ.ನಾರಾಯಣ ಇವರ 100ನೆಯ ಜನ್ಮದಿನದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 02-09-2023 ರಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರು “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣೀಕರ್ತರಾಗಿ, ಪರಿಷತ್ತಿನಲ್ಲಿ ಒಂದು ಹೊಸ ಶಕೆ ಪ್ರಾರಂಭಿಸಿದವರು ದೇಶಹಳ್ಳಿ ಜಿ.ನಾರಾಯಣರು. 1969 ರಿಂದ 1978ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀಯುತರು ಕನ್ನಡ ನಾಡು ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಇವರು 1942ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿʼ ಭಾಗವಹಿಸಿ ಸೆರೆಮನೆ ಸೇರಿದ್ದರು. 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ನಾರಾಯಣ ಅವರು 1964ರಲ್ಲಿ  ಬೆಂಗಳೂರಿನ ಮೇಯರಾಗಿ ಸೇವೆ ಸಲ್ಲಿಸಿದವರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು ನಿರಂತರ ಕನ್ನಡ…

Read More

ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ಚಂಡೆ ಮದ್ದಳೆ ತರಬೇತಿ ತರಗತಿಯು ದಿನಾಂಕ 22/8/2023 ಮಂಗಳವಾರ ಪ್ರಾರಂಭಗೊಂಡಿತು.ಈ  ಕಾರ್ಯಕ್ರಮವನ್ನು ಗಣಪತಿ ಸ್ತುತಿಯೊಂದಿಗೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ಯಕ್ಷಗಾನ ಮಂಡಳಿಯ ನಿರ್ದೇಶಕರು ಹಾಗೂ ಗುರುಗಳೂ ಆದ ಶ್ರೀ ಮುರಳೀಧರ ಭಟ್, ತರಬೇತಿ ಗುರುಗಳಾದ ಶ್ರೀ ಆನಂದ ಗುಡಿಗಾರ್ ಕೆರ್ವಾಶೆ,  ಭಾಗವತರಾದ ಶ್ರೀ ನಕ್ರೆ ನಾಗರಾಜ್ ಭಟ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯಕರ್ ಬೈಲೂರು, ಕಾರ್ಯದರ್ಶಿ ಶ್ರೀ ವಾದಿರಾಜ ಆಚಾರ್ಯ, ಕೋಶಾಧಿಕಾರಿ ಶ್ರೀ ಮೋಹನ ಆಚಾರ್ಯ, ಸಹ ಕಾರ್ಯದರ್ಶಿ ಶ್ರೀ ಪತಿ ನಾಯಕ್, ಶ್ರೀ ಕಿಶೋರ್.ಸಿ.ಉದ್ಯಾವರ, ರಾಮಕೃಷ್ಣ ಕೊಂಡಂಚ, ನಾರಾಯಣರಾವ್,  ಗೌರವಾಧ್ಯಕ್ಷ ಶ್ರೀ ಜಯರಾಮ ಆಚಾರ್ಯ ಹಾಗೂ ಸಂಘದ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ತರಗತಿಗಳು ಪ್ರತಿ ಮಂಗಳವಾರ ಸಂಜೆ 6.00ರಿಂದ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9844634464, 9481426796 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಸ್ವಚ್ಛ ಮಂಗಳೂರು ಫೌಂಡೇಷನ್ ಮತ್ತು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ವಿವೇಕಾನಂದ ಸಭಾಭವನದಲ್ಲಿ ‘ಜಿಜ್ಞಾಸಾ’ : ಸನಾತನ ಚಿಂತನ ಗಂಗಾ : ದ್ವೈಮಾಸ ಮೊದಲ ಸರಣಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಿಜ್ಞಾನಿ, ಲೇಖಕ  ಮತ್ತು ಸಂಶೋಧಕ ಡಾ. ಆನಂದ್ ರಂಗನಾಥನ್ ಇವರು ‘ಭಾರತ 2047 – ಅವಕಾಶಗಳ ತಾಣ’ ವಿಷಯದ ಕುರಿತು ಉಪನ್ಯಾಸ ನೀಡಿ “ಭಾರತವು ಹಿಂದೆ ಹಲವಾರು ಅವಕಾಶಗಳನ್ನು ಕೈ ಚೆಲ್ಲಿದೆ, ಆದರೆ ಇಂದು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ದೇಶವಾಗಿ ಮಾರ್ಪಾಟುಗೊಂಡಿದೆ. ಇಡೀ ವಿಶ್ವಕ್ಕೆ ಬಾಧಿಸಿದ ಕೋವಿಡ್-19 ಅನ್ನು ನಮ್ಮ ದೇಶವು ಸಮರ್ಥವಾಗಿ ಎದುರಿಸಿರುತ್ತದೆ. ಇದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ. ಇಂದು ನಮ್ಮ ಮುಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಮುಂದಿನ 25 ವರ್ಷಗಳು ನಿಜಕ್ಕೂ ಭಾರತದ ಇತಿಹಾಸದಲ್ಲಿ ಅಮೃತ ಕಾಲವಾಗಲಿದೆ” ಎಂದು ಹೇಳಿದರು. ಮಂಗಳೂರು ರಾಮಕೃಷ್ಣ…

Read More