Author: roovari

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಹಿಳೆಯರ ಕನ್ನಡದ ಶ್ರೇಷ್ಠ ಕೃತಿಗಳಿಗೆ 2022 ನೇ ಸಾಲಿನ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ”ಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಮೂರು ಅತ್ಯುತ್ತಮ ಕೃತಿಗಳನ್ನು ಆಯ್ಕೆಮಾಡಿ, ಪ್ರತಿಯೊಂದು ಕೃತಿಗೂ ರೂ. 15,000(ಹದಿನೈದು ಸಾವಿರ)ವನ್ನು ಬಹುಮಾನ ನೀಡಿ ಗೌರವಿಸಲಾಗುವುದು. ನಿಯಮಗಳು 1. ಈ ಬಹುಮಾನಕ್ಕೆ ಮಸ್ತಕಗಳನ್ನು ಲೇಖಕಿಯರು ಮಾತ್ರ ಕಳುಹಿಸಬೇಕು. 2. ಕನ್ನಡ ಕೃತಿಗಳಿಗೆ ಮಾತ್ರ ಬಹುಮಾನ ಇರುವುದು. 3. ಅನುವಾದ ಕೃತಿಗಳಿಗೆ ಅವಕಾಶ ಇರುವುದಿಲ್ಲ. 4. ಬಹುಮಾನಕ್ಕೆ ಕಳುಹಿಸುವ ಕೃತಿಯು 01.01.2022 ರಿಂದ 31.12.2022 ರ ಒಳಗೆ ಪ್ರಕಟವಾದದ್ದಾಗಿರಬೇಕು. 5. ಪ್ರತಿಯೊಂದು ಕೃತಿಯ 9 ಪ್ರತಿಗಳನ್ನು ಕಳುಹಿಸಬೇಕು. 6. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನುಕಳುಹಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನ ಕೊಡಲಾಗುವುದು. 7. ಲೇಖಕಿಯರು ತಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಸ್ವಹಸ್ತಾಕ್ಷರದಲ್ಲಿ ಬರೆದು, ಭಾವಚಿತ್ರದೊಂದಿಗೆ ಸಂಪರ್ಕ ಸಂಖ್ಯೆ ಸಮೇತ ಕಳುಹಿಸಬೇಕು. 8. ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಿದರೂ, ಬಹುಮಾನ ಬಂದಲ್ಲಿ ಅದನ್ನು ಲೇಖಕಿಯರಿಗೇ ನೀಡಲಾಗುವುದು. 9.…

Read More

ಉಡುಪಿ: ಕೋಟೇಶ್ವರ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ’ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗ ನೆನಪಿನಲ್ಲಿ ನೀಡುವ ಕಾದಂಬರಿ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆ ಸಂಚಾಲಕ ಪ್ರೊ. ಉಪೇಂದ್ರ ಸೋಮಯಾಜಿ, ‘ಶ್ರೀ’ ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ-575225 (ಸಂಪರ್ಕ ಸಂಖ್ಯೆ :9740842722) ಅವರಿಗೆ ಆಗಸ್ಟ್ 30ರೊಳಗೆ ತಲುಪುವಂತೆ ಕಳಿಸಿಕೊಡಬೇಕು ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.

Read More

ಮೈಸೂರು: ನಟನ ರಂಗಶಾಲೆಯಲ್ಲಿ ರಂಗಭೂಮಿ ‘ಡಿಪ್ಲೊಮಾ 2023-24’ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಜೂನ್ 11 ರಂದು ನಡೆಯಲಿದೆ. ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆಯಡಿಯಲ್ಲಿ 16ರಿಂದ 30ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, 2023-24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ ದಿನಾಂಕ 11-06-2023 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 5.30ರಿಂದ 9ರ ವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ,…

Read More

ಮಂಜೇಶ್ವರ:  ಬಾಕುಡ ಸಮಾಜ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರಂಗ ಚೇತನ ಕಾಸರಗೋಡು ಇದರ ಸಹಬಾಗಿತ್ವದಲ್ಲಿ GWLPS ಮಂಜೇಶ್ವರ ಶಾಲೆಯಲ್ಲಿ ಮೇ 12 ಮತ್ತು 13 ರಂದು  ದ್ವಿದಿನ ಸಹವಾಸ ಶಿಬಿರ ಜರಗಿತು. ಬಾಕುಡ ಸಮುದಾಯದ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳು ದೀಪ ಪ್ರಜ್ವಲನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ಹಿರಿಯ ಸಾಮಾಜಿಕ ಮುಂದಾಳು ವಿಜಯ್ LIC ಅಂಬ್ಲಮೊಗರು ಸತ್ಯದ ಬೊಲ್ಪು ಫೋಟೋವನ್ನು ಅನಾವರಣ ಗೊಳಿಸಿ ಶಿಬಿರ ನಿರ್ದೇಶಕರಾದ ಅಶೋಕ್ ಕೊಡ್ಲಮೊಗರು ರವರಿಗೆ ಹಸ್ತಾಂತರಿಸುವುದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯ್  ಪಂಡಿತ್ ಮಂಗಲ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣವೇಣಿ ಟೀಚರ್,ಸದಾಶಿವ ಬಾಲಮಿತ್ರ ,ದೈವದ ಪಾತ್ರಿಗಳಾದ ಬಾಸ್ಕರನ್ ಪಚ್ಲಂಪಾರೆ,ಅಡ್ವಕೇಟ್ ಭರತ್ ರಾಜ್ ಅಟ್ಟೆಗೋಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಏಕಾನಂದ ಮಂಗಳೂರು, ಚಂದ್ರಶೇಖರ ಅಂಗಡಿಪದವು,ವಿಠಲ ನಾರಾಯಣ ಬಂಬ್ರಾಣ ಮೊದಲಾದವರು ಉಪಸ್ಥಿತರಿದ್ದರು.ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಂಗಳ ಪೊಸೋಟ್ ಮತ್ತು ಸುಮಿತ್ರಾ ಬ0ಬ್ರಾಣ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧಮಸ್ಥಳ ಮಂಜುನಾಥೇಶ್ವರ ತುಳುಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಮತ್ತು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಸಹಯೋಗದೊಂದಿಗೆ “ಗೇನದ ಗೆಜ್ಜೆ – ನೂದನೆ ಪಜ್ಜೆ’ ಹಾಗೂ ‘ತ್ರಿಂಶತಿ ತಿರುಳು’ ಮತ್ತು ‘ಅಪ್ಪೆ ಅಂಜನೆ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ :01-06-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಮಂಗಳೂರು ವಿ.ವಿ.ಯ ಗೌರವಾನ್ವಿತ ಕುಲಪತಿಯಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಂಗಳೂರಿನ ವಿ.ವಿ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಎಲ್., ವಂಡಾರಿನ ಎನ್.ವೈ.ಟಿ.ಯ ಸ್ಥಾಪಕ್ಷಾಧ್ಯಕ್ಷರಾದ ಶ್ರೀ ಗೋವಿಂದ ವಂಡಾರು, ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇದರ ವ್ಯವಸ್ಥಾಪಕರಾದ…

Read More

‘ಮಾತಾ’ ನಾಟಕವು ಮೇ 17ರಂದು ಬೆಂಗಳೂರಿನಲ್ಲಿ ಚೊಚ್ಚಲ ಪ್ರದರ್ಶನವನ್ನು ಕಂಡಿದ್ದು, ಮೇ 21ರಂದು 4ನೇ ಪ್ರಯೋಗವು ನೆರವೇರಿದೆ. ‘ಮಾತಾ’ ನಾಟಕದ ಬಗ್ಗೆ : ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತ ಮಹಿಳೆಯರ ಕುರಿತಾದ ನಾಟಕಗಳು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ, ಜೋಗತಿ ಸಂಪ್ರದಾಯ ಮತ್ತು ಜೋಗತಿ ಕಲೆಯನ್ನು ಕುರಿತಾದ ನಾಟಕದ ಹಿನ್ನೆಲೆಯಲ್ಲಿ ಹೇಳುವುದೇ ಆದರೆ ಕನ್ನಡದ ಮಟ್ಟಿಗೆ ‘ಮಾತಾ’ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿಯವರ ಜೀವನವನ್ನು ಆಧರಿಸಿದ ನಾಟಕವಾದರೂ ಗಂಡಿನ ಒಳಗಿರುವ ಹೆಣ್ತನ, ಜನಪದ ಕಲಾಸಕ್ತಿ, ರಂಗಭೂಮಿಯ ವಾತಾವರಣ, ಕೌಟುಂಬಿಕ ಸಾಮಾಜಿಕ ಹಿನ್ನಲೆ, ಸೃಜನಶೀಲತೆ ಮತ್ತು ಸಾಧನೆ ಹೀಗೆ ಮುಂತಾದ ನೆಲೆಗಳಲ್ಲಿ ಮಾತಾ ನಾಟಕ ಅನಾವರಣಗೊಳ್ಳುತ್ತದೆ. ಜೋಗತಿ ಹಾಗೂ ಎಲ್ಲವ್ವನ ಪರಂಪರೆ ನಾಟಕದ ಜೀವಾಳವಾಗಿದೆ. ಅಷ್ಟೆ ಅಲ್ಲದೇ ಮನುಷ್ಯನನ್ನು ಮನುಷ್ಯನೇ ಅತ್ಯಂತ ಹೀನವಾಗಿ ನೋಡುವ ಮನಸ್ಥಿತಿಯನ್ನು ಕನ್ನಡಿ ಹಿಡಿದಂತೆ ಮನುಷ್ಯನಿಗೇ ಅರ್ಥ ಮಾಡಿಸುತ್ತದೆ. ಅರುಣ್ ಜೋಳದ ಕೂಡ್ಲಿಗಿ ಅವರು ಮಂಜಮ್ಮ ಜೋಗತಿಯವರ ಆತ್ಮ ಕಥನ ‘ನಡುವೆ ಸುಳಿವ ಹೆಣ್ಣು’…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಸೂರಜ್ ಪದವಿ ಪೂರ್ವ ಕಾಲೇಜು ಮುಡಿಪು ಕುರ್ನಾಡು ಸಹಯೋಗದೊಂದಿಗೆ ದಿನಾಂಕ 25-05-2023ರಂದು ಮಂಗಳೂರು ತಾಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಕವನ ಸ್ಪರ್ಧೆ ಕಾರ್ಯಕ್ರಮ’ವು ಸೂರಜ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕೀರ್ತನ ಎಂ — ಪ್ರಥಮ ಪಾತಿಮಾತುಲ್ ಆಶಿಕಾ – ದ್ವಿತೀಯ ಪಾತಿಮಾತುಲ್ ಅಪೀಪಾ — ತೃತೀಯ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಬಿ.ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಗಳೂರು ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಇವರ ಅಧ್ಯಕ್ಷತೆಯಲ್ಲಿ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ 2021 ಇದರ ದತ್ತಿ ಕೊಡುಗೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಸುಮಾರು 35 ಮಂದಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ,…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ, ಡಾ.ಜಿ.ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಮತ್ತು ಅಜ್ಜರಕಾಡು ಸಾಹಿತ್ಯ ಸಂಘದ ಸಹಯೋಗದಲ್ಲಿ ದಿನಾಂಕ 24-05-2023ರಂದು ಡಾ.ಜಿ.ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಗಣನಾಥ ಶೆಟ್ಟಿ ಎಕ್ಕಾರು “ರಾಣಿ ಅಬ್ಬಕ್ಕ ತುಳುನಾಡಿನಲ್ಲಿ ಕೇವಲ ಪ್ರತಿಮೆಯಾಗಿ ಉಳಿದಿಲ್ಲ ಮಹಿಳಾ ಸ್ವಾಭಿಮಾನದ ಸಂಕೇತವಾಗಿ ತುಳುವರ ಬದುಕಿನ ಭಾಗವಾಗಿ ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳುವ ವೀರ ಮಹಿಳೆ” ಎಂದು ಅಭಿಪ್ರಾಯಪಟ್ಟರು. ಪ್ರೊ. ಭಾಸ್ಕರ ಶೆಟ್ಟಿ ಎಸ್. ಇವರ ಅಧ್ಯಕ್ಷತೆಯಲ್ಲಿ ‘ರಾಣಿ ಅಬ್ಬಕ್ಕ ಮತ್ತು ತುಳುನಾಡಿನ ಸಾಂಸ್ಕೃತಿಕ ಅನನ್ಯತೆ’ ಎಂಬ ವಿಷಯದ ಕುರಿತು ಡಾ.ಜ್ಯೋತಿ ಚೇಳಾಯರು ಉಪನ್ಯಾಸ ನೀಡಿದರು. ತುಳುನಾಡಿನಲ್ಲಿ ಸಮೃದ್ಧ ಜಾನಪದ ಇತಿಹಾಸ ಇದೆ. ಆದರೆ, ತುಳುನಾಡಿನ ಪಾಡ್ಡನಗಳಲ್ಲಿ ಎಲ್ಲಿಯೂ ಅಬ್ಬಕ್ಕ ರಾಣಿಯ ಕುರಿತು ಪ್ರಸ್ತಾಪ ಬಾರದಿರಲು ಕಾರಣ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟರು. ವಿದ್ಯಾರ್ಥಿ ಪ್ರತಿನಿಧಿ ಮಂಗಳ ಗೌರಿ…

Read More

ಉಡುಪಿ : ಉಡುಪಿ ರಥಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ಹಾಗೂ ಸಂಗಮ ಜಾನಪದ ಕಲಾಮೇಳ ಕಲ್ಮಾಡಿ ಉಡುಪಿ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ದಿನಾಂಕ 21-05-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ “ಭಗವಂತನನ್ನು ಒಲಿಸುವ ಸುಲಭ ಮಾರ್ಗವೇ ಭಜನೆ. ಭಗವಂತನ ನಾಮ ಸ್ಮರಣೆಯನ್ನು ನಿರಂತರ ಭಜಿಸುವವರಿಗೆ ಮೋಕ್ಷವನ್ನೂ ಕರುಣಿಸುವ ಶಕ್ತಿ ಭಜನೆಗಿದೆ. ಭಜನೆ ಭಕ್ತಿಮಾರ್ಗದ ಮುಖ್ಯ ಅಂಗ. ಭಜನೆ ಎಂದರೆ ಭಗವಂತನ ಸ್ತುತಿ ಎಂದರ್ಥ. ಕುಳಿತು ಏಕಾಗ್ರತೆಯಿಂದ ಭಗವನ್ನಾಮ ಸ್ಮರಣೆಯಲ್ಲಿ ಮೈಮರೆತರೆ, ಕುಣಿತ ಭಜನೆಯಲ್ಲಿ ಕುಣಿಯುತ್ತಾ ಹಾಡುತ್ತಾ ಮೈಮರೆಯುವುದು ಕೂಡಾ ಭಗವಂತನ ಸೇವೆಯೇ ಆಗಿದೆ. ಜಾನಪದ ಸೊಗಡಿನಿಂದ ಕೂಡಿರುವ ಈ ಭಜನೆ ಅಧ್ಯಾತ್ಮದ ಕೊಂಡಿಯಾಗಿದೆ. ಶ್ರೀಕೃಷ್ಣನ ಸನ್ನಿಧಾನದಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡ ತಲ್ಲೂರು ಫ್ಯಾಮಿಲಿ…

Read More

ಬೆಂಗಳೂರು : ಕನ್ನಡ ಸಾರಸ್ವತ ಲೋಕದ ವಿಮರ್ಶಕ ಎಂದು ಗುರುತಿಸಿಕೊಂಡ ವಿಶ್ರಾಂತ ಪ್ರಾಧ್ಯಾಪಕ 88 ವರ್ಷದ ಹಿರಿಯ ಸಾಹಿತಿ, ವಿದ್ವಾಂಸ ಪ್ರೊ. ಜಿ.ಎಚ್. ನಾಯಕ ಅವರು ದಿನಾಂಕ 26-05-2023ರಂದು ನಮ್ಮನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಜಿ.ಎಚ್. ನಾಯಕ ಎಂದೇ ಚಿರಪರಿಚಿತರಾಗಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು 1935 ಸೆಪ್ಟೆಂಬರ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಅಂಕೋಲೆಯಲ್ಲಿ ತನ್ನ ಬಾಲ್ಯವನ್ನು ಕಳೆದ ಅವರಲ್ಲಿ ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯದ ಕಿಚ್ಚು ಹತ್ತಿಕೊಂಡಿತ್ತು. ಪರಿಣಾಮವಾಗಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರೊ. ನಾಯಕರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಅವರು ನಾಡಿನಾದ್ಯಂತ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದು ತಮ್ಮ ನೇರ ನುಡಿಯಿಂದಲೇ ಪ್ರಖ್ಯಾತರಾಗಿದ್ದರು. ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಅನೇಕ ವಿದ್ವತ್ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದರು.…

Read More