Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಆಯೋಜಿಸಿದ ‘ದತ್ತಿ ಉಪನ್ಯಾಸ’ ಕಾರ್ಯಕ್ರಮವು ದಿನಾಂಕ 19-05-2023ರಂದು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೊ. ಉಪೇಂದ್ರ ಸೋಮಯಾಜಿಯವರು “ಓದುಗರೆಲ್ಲ ವೀಕ್ಷಕರಾಗಿ ಬದಲಾದ ಈ ಕಾಲಘಟ್ಟದಲ್ಲಿ ದತ್ತಿ ಉಪನ್ಯಾಸಗಳು ಮಹತ್ವವನ್ನು ಪಡೆಯುತ್ತಿದೆ. ಕಾದಂಬರಿಗಳ ಮರು ಓದು ಮತ್ತು ವಿಮರ್ಶೆ ಮಹತ್ವವನ್ನು ಪಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗಳಲ್ಲಿ ನಡೆದರೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಜನರು ಇನ್ನಷ್ಟು ಸ್ಪಂದಿಸುತ್ತಾರೆ” ಎಂದು ಹೇಳಿದರು. ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕ.ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್ ಭಾಗವಹಿಸಿದರು. ಸಭಾ ಕಾರ್ಯಕ್ರಮದ…
ಮಸ್ಕತ್: ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೇಳ ಕಲಾವಿದರಾಗಿ, ಸಂಘಟಕರಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಓಮನ್ ಮಸ್ಕತ್ ನಲ್ಲಿ ಬಿರುವ ಜವನೆರ್ ಮಸ್ಕತ್ ನಲ್ಲಿ ಸನ್ಮಾನಿಸಿ ಗೌರವಿಸಿದರು. ಸಹೋದರ ನೋಣಯ್ಯ ಶೆಟ್ಟಿಗಾರ್ ಅವರಿಂದ ಬಾಲ ಪಾಠ, ಮುಂದೆ ದಿವಾಣ ಭೀಮ ಭಟ್ ಅವರಿಂದ ಚೆಂಡೆ ಮದ್ದಳೆ ಕಲಿತು ಹವ್ಯಾಸಿ ವಲಯದಲ್ಲಿ ಹಲವಾರು ಸಂಘಗಳಲ್ಲಿ ತಾಳಮದ್ದಳೆ, ಬಯಲಾಟಗಳಲ್ಲಿ ಹಿಮ್ಮೇಳ ವಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ಎಂಬ ತಂಡ ಕಟ್ಟಿ ಮಸ್ಕತ್, ದುಬೈ, ಅಬುದಾಬಿ, ಮುಂಬೈ ಹೀಗೆ ಊರು ಪರವೂರುಗಳಲ್ಲಿ ಶನಿ ಪೂಜೆ ತಾಳಮದ್ದಳೆ ಸಂಘಟಿಸಿದ್ದಾರೆ. ಎರಡನೇ ಸಲ ಮಸ್ಕತ್ ಗೆ ತಂಡ ಸಂಯೋಜಕರಾಗಿ ಆಗಮಿಸಿ ಸ್ವಾಮಿ ಕೊರಗಜ್ಜ, ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ನಡೆಸಿಕೊಟ್ಟ ಪದ್ಮನಾಭ ಅವರನ್ನು ಕದ್ರಿ ನವನೀತ ಶೆಟ್ಟಿ ಹಾಗೂ ದಯಾನಂದ ಜಿ. ಕತ್ತಲ್ ಸಾರ್ ಪರಿಚಯಿಸಿ ಅಭಿನಂದಿಸಿದರು. ಬಿರುವ ಜವನೆರ್ ಸಂಘಟನೆಯ ಗುರುಪ್ರಸಾದ್ ರಾಮ…
ಕಾಸರಗೋಡು: ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿ ಚಿನ್ನಾರಿಯ 5ನೆಯ ಸರಣಿ ಕಾರ್ಯಕ್ರಮ ‘ವೈಶಾಖ ಲಹರಿ’ಯು ದಿನಾಂಕ 20-05-2023ರಂದು ಎಡನೀರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು. ಸಭಾ ಕಾರ್ಯಕ್ರಮ ಆರಂಭವಾಗುವ ಮೊದಲು ಸುದೀರ್ಘಕಾಲ ಸೂಲಗಿತ್ತಿಯಾಗಿ ಕತ೯ವ್ಯ ನಿವ೯ಹಿಸಿ ಸೇವೆಯಿಂದ ನಿವೃತ್ತರಾದ ಬಳಿಕವೂ ಸಮಾಜ ಸೇವೆಯಲ್ಲಿ ಪ್ರವೃತ್ತರಾಗಿ ಪ್ರಸ್ತುತ ವಯೋಸಹಜ ಅನಾರೋಗ್ಯದಿಂದಿರುವ ಎಡನೀರು ನಿವಾಸಿ ಕಮಲಮ್ಮನವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಂಗ ಚಿನ್ನಾರಿಯ ಕಾಸರಗೋಡು ಚಿನ್ನಾ, ಕೋಳಾರು ಸತೀಶ್ ಚಂದ್ರ ಭಂಡಾರಿ, ಸತ್ಯನಾರಾಯಣ ಮಾಸ್ಟರ್, ನಾರಿ ಚಿನ್ನಾರಿಯ ಸವಿತಾ ಟೀಚರ್, ತಾರಾ ಜಗದೀಶ್, ದಿವ್ಯಾ ಗಟ್ಟಿ ಮತ್ತಿತರರು ಹಾಗೂ ಕಮಲಮ್ಮನವರ ಕುಟುಂಬದವರು ಉಪಸ್ಥಿತರಿದ್ದರು. ಮುಂದೆ ನಡೆದ ಸಭಾ ಕಾರ್ಯಕ್ರಮವು ಪೂಜಾ ಅವರ ಪ್ರಾಥ೯ನೆಯ ಮೂಲಕ ಆರಂಭಗೊಂಡಿತು. ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಚಾಲನೆಯನ್ನು ನೀಡಿದರು. ವಿದುಷಿ ಮತ್ತು ಖ್ಯಾತ ಅಭಿನೇತ್ರಿ ಮಾನಸಿ ಸುಧೀರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾಂಸ್ಕೃತಿಕ ಕೇಂದ್ರ ಎಡನೀರಿನಲ್ಲಿ ನಡೆಯುವ…
ಮುಂಬಯಿ: ಮೈಸೂರು ಅಸೋಸಿಯೇಶನ್ ಮುಂಬಯಿ ದಿನಾಂಕ 28-05-2023ರಂದು ಸಂಜೆ ಗಂಟೆ 6ಕ್ಕೆ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ‘ಬಹುಮಾನ ವಿತರಣಾ ಸಮಾರಂಭ’ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಬೇಲೂರು ರಘುನಂದನ್ ರಚನೆಯ ಶ್ರೀ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ‘ಚಿಟ್ಟೆ’ ನಾಟಕ ಪ್ರದರ್ಶನವಿದೆ. ಬೆಂಗಳೂರಿನ ಹೆಸರಾಂತ ಬಾಲ ಕಲಾವಿದ ಮಾಸ್ಟರ್ ಗೋಕುಲ ಸಹೃದಯ ಅವರ ಏಕಪಾತ್ರ ಅಭಿನಯ ಈ ನಾಟಕದ ವೈಶಿಷ್ಟ್ಯ. ಡಾ. ಬೇಲೂರು ರಘುನಂದನ್ ಅವರ “ಶರ್ಮಿಷ್ಟೆ” ನಾಟಕಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ನಾಟಕಕಾರ, ನಟ, ನಿರ್ದೇಶಕ, ಲೇಖಕ ಡಾ. ಬೇಲೂರು ರಘುನಂದನ್ ಬೆಂಗಳೂರಿನ ವಿಜಯನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ಇವರಿಗೆ ಕಾಜಾಣ ಬಳಗದ ಮೂಲಕ ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವವಿದೆ. 1996ರಲ್ಲಿ ರಂಗಭೂಮಿ ಪ್ರವೇಶಿಸಿದ ಇವರು ನಾಟಕ ನಿರ್ದೇಶನ ಮಾಡುವಲ್ಲಿಂದ ಬಣ್ಣ ಹಚ್ಚಿ ಅಭಿನಯ ಮಾಡುವುದರಲ್ಲೂ ಸೈ ಅನ್ನಿಸಿ ಕೊಂಡವರು. ಸುಮಾರು 27ಕ್ಕೂ ಮಿಕ್ಕಿ ನಾಟಕ…
ಕಾಸರಗೋಡು : ಕಲಾಕುಂಚ ದಾವಣಗೆರೆ ಸಂಸ್ಥೆಯ ಕಾಸರಗೋಡು ಗಡಿನಾಡು ಶಾಖೆಯ ವತಿಯಿಂದ 21-05-2023ರಂದು ಮಂಗಲ್ಪಾಡಿ ಶಾರದಾ ಭಜನಾ ಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರ ರಚನಾ ತರಬೇತಿ ಶಿಬಿರವು ನಡೆಯಿತು. ಖ್ಯಾತ ಕವಿ ಶ್ರೀ ವಿ.ಬಿ.ಕುಳಮರ್ವರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ವಿಶ್ರಾಂತ ಕನ್ನಡ ಪ್ರೊಫೆಸರ್ ಹಾಗೂ ಪ್ರಿನ್ಸಿಪಾಲ್ ಶ್ರೀ ಪಿ.ಎನ್ ಮೂಡಿತ್ತಾಯರವರು ಸುಂದರವಾದ ರೇಖಾ ಚಿತ್ರವೊಂದನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿರಾಜ್ ಅಡೂರು ಅವರು ತರಬೇತಿ ನೀಡಿದರು. ಕಲಾಕುಂಚ ಕೇರಳ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ಶ್ರೀ ರಾಮ ಕಾರಂತ್ ಕೋರ್ತಿಮಾರು ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲಾ ಮಯ್ಯ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ವಂದಿಸಿದರು. ಸಾಧಾರಣ ಇಪ್ಪತ್ತೊಂದು ಮಕ್ಕಳು ಶಿಬಿರಾರ್ಥಿಗಳಾಗಿ ಆಸಕ್ತಿಯಿಂದ ಭಾಗವಹಿಸಿದ್ದ, ಅದೊಂದು ಸುಂದರ ಶಿಬಿರ ಮತ್ತು ಬೇಸಿಗೆಯ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಈ ರೀತಿಯ ಶಿಬಿರಗಳು ಸಹಕಾರಿ. ಶ್ರೀ ವಿರಾಜ್ ಅಡೂರು ಸರ್ ರವರು ಮಕ್ಕಳಿಗೆ…
ಉಡುಪಿ: ಉಡುಪಿ ಜಿಲ್ಲೆಯ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದಲ್ಲಿ ಮೇ 21ರಂದು ಜರಗಿದ ನೂತನ ಗರ್ಭಗುಡಿಯ ಷಢಾಧಾರ, ನಿಧಿ ಕುಂಭ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಮುಂಬೈ ಅವರ ಸಂಪೂರ್ಣ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 8 ಹಾಡುಗಳ ‘ಪುಣ್ಯನೆಲ ಪೆರಣಂಕಿಲ’ ತುಳು-ಕನ್ನಡ ಭಕ್ತಿಗೀತಾ ಸಂಗಮದ ಧ್ವನಿ ಕರಂಡಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು “ಶ್ರೀ ಮಹಾಲಿಂಗೇಶ್ವರ ಮತ್ತು ಉದ್ಭವ ಗಣಪತಿಯ ಸಾನಿಧ್ಯವಿರುವ ಪೆರ್ಣಂಕಿಲ ಕ್ಷೇತ್ರವು ಅತ್ಯಂತ ಪುರಾತನವಾಗಿದ್ದು ಅದರ ಮಹಿಮೆಯನ್ನು ಎಲ್ಲರೂ ತಿಳಿಯುವಂತಾಗಬೇಕು. ಅದಕ್ಕಾಗಿ ಗೀತಾ ಸಾಹಿತ್ಯವನ್ನು ರಚಿಸಿ ನಾಡಿನ ಶ್ರೇಷ್ಠ ಸಂಗೀತಜ್ಞರ ಧ್ವನಿಯಲ್ಲಿ ಭಕ್ತಿ ಕರಂಡಿಕೆಯನ್ನು ಸಿದ್ಧಗೊಳಿಸಿರುವುದು ಶ್ಲಾಘನೀಯ. ಇದರಿಂದ ಕ್ಷೇತ್ರದ ಪುರಾಣ-ಇತಿಹಾಸಗಳು ಜನಮಾನಸಕ್ಕೆ ತಲುಪಲಿ” ಎಂದು ಹೇಳಿದ್ದಾರೆ. ಸಮಾರಂಭದಲ್ಲಿ 2 ತುಳು ಹಾಗೂ 6 ಕನ್ನಡ ಹಾಡುಗಳ ಭಕ್ತಿಗೀತಾ ಸಾಹಿತ್ಯವನ್ನು ರಚಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ,…
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಪುತ್ತಿಗೆಯ ಗೋಪಾಲಕೃಷ್ಣ ಭಟ್ ಹಾಗೂ ರೂಪಾ ಭಟ್ ಇವರ ಮಗಳಾಗಿ 24.05.2004ರಂದು ದಿವ್ಯಶ್ರೀ ಭಟ್ ಪುತ್ತಿಗೆ ಅವರ ಜನನ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಆಸಕ್ತಿ ತುಂಬಾನೇ ಇದ್ದ ಇವರಿಗೆ ಮೂಡಬಿದ್ರೆಯ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಗುರುಗಳಾದ ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು ಯಕ್ಷಗಾನ ಭಾಗವತಿಕೆ ಹಾಗೂ ಚೆಂಡೆ ಮದ್ದಳೆ ತರಬೇತಿ ನೀಡುವುದಗಿ ಹೇಳಿದರು. ಆಗಲೇ ಕುಶಿಯಿಂದ ಭಾಗವತಿಕೆಗೆ ಸೇರಿಕೊಂಡ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಗುರುಗಳಾದ ಲೀಲಾವತಿ ಬೈಪಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಅವರು ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತರಬೇತಿ ಮಾಡುವುದನ್ನು ನಿಲ್ಲಿಸಿದ ಮೇಲೆ ಮನೆಯ ಹತ್ತಿರದಲ್ಲೇ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಾವಿದರಾದ ಕೌಶಿಕ್ ರಾವ್ ಪುತ್ತಿಗೆ ಅವರ ಹೆಂಡತಿ ಅಮೃತ ಅಡಿಗ ಅವರೊಡನೆ ಯಕ್ಷಗಾನ ಭಾಗವತಿಕೆ ತರಬೇತಿಯನ್ನು ಪಡೆದುಕೊಂಡರು. ಹಾಗಾಗಿ ಇವರ ನಂತರದ ಗುರುಗಳು ಶ್ರೀಮತಿ ಅಮೃತ ಅಡಿಗ.…
ಕಾಸರಗೋಡು : ಜೋನ್ ಡಿ ಸೋಜಾ ಅವರ ಸಂಪಾದಕೀಯದ ಪೊಸಡಿಗುಂಪೆ ಮಾಸ ಪತ್ರಿಕೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮವು ದಿನಾಂಕ 20-05-2023ರಂದು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಸದಾಶಿವ ಮುಖ್ಯೋಪಾಧ್ಯಾಯರು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ರಾಮಚಂದ್ರ ಭಟ್ ಪ್ರಾಂಶುಪಾಲರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ವಾಣಿಶ್ರೀ ಕಾಸರಗೋಡು (ವೈದ್ಯರು, ಸಾಹಿತಿಗಳು, ಸಂಘಟಕರು), ಶ್ರೀ ಮಹಾಲಿಂಗ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ. ಶಾಲೆ ಧರ್ಮತ್ತಡ್ಕ, ಶ್ರೀ ಶಾರದಾ ತನಯ ಬಾಯಾರು ಭಾಗವಹಿಸಿದ್ದರು. ಎಡ್ವಕೇಟ್ ಥಾಮಸ್ ಡಿಸೋಜಾ ಸೀತಾಂಗೋಳಿ, ಶ್ರೀ ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ, ಶುಭಾಶಾಂಸನೆಗೈದರು. ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ…
ಬೆಂಗಳೂರು: ರಂಗಮಂಡಲ – ಸಿವಗಂಗ ಟ್ರಸ್ಟ್ ಪ್ರಸ್ತುತ ಪಡಿಸುವ ‘ಮ್ಯಾಳ ಕಲಿಯೋಣ ಬಾರ’ ದೊಡ್ಡಾಟ-ಮೂಡಲಪಾಯ ಯಕ್ಷಗಾನ ಉಚಿತ ಶಿಬಿರವು 28 ಮೇ 2023ರಿಂದ 4 ಜೂನ್ 2023ರವರೆಗೆ ಬೆಂಗಳೂರಿನ ಕೆಂಗೇರಿಯ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ದೊಡ್ಡಾಟ/ಅಟ್ಟದಾಟ/ಬಯಲಾಟ/ಮೇಳೆ ಎಂಬ ದೃಶ್ಯ ಕಲಾಪ್ರಕಾರ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನದಷ್ಟೇ ಪುರಾತವಾದ ಶ್ರೀಮಂತವಾದ ದೃಶ್ಯ ಮಾದ್ಯಮ. ಬಯಲುಸೀಮೆಯ ಅಭಿಜಾತ ರಂಗವೈಭವ. ಹಳೆಯ ಮೈಸೂರು ಭಾಗದಲ್ಲಿ ‘ಮ್ಯಾಳ’ ಎಂದೇ ಪ್ರಸಿದ್ಧವಾಗಿರುವ ಶುದ್ಧ ಯಕ್ಷಗಾನ. ಅಧ್ಯಯನ/ಸಂಶೋಧನೆ ಹಾಗೂ ಗುರುತಿಸಲ್ಪಡುವ ಕಾರಣಕ್ಕಾಗಿ ವಿದ್ವಾಂಸರಿಂದ ‘ಮೂಡಲಪಾಯ ಯಕ್ಷಗಾನ’ ಎಂದು ಕರೆಯಲ್ಪಡುವ ‘ಮೇಳ – ಮ್ಯಾಳ’ದ ಕಲಿಕಾ ಶಿಬಿರ. ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5ರಿಂದ 8ರವರೆಗೆ ಹಿರಿಯ ಕಲಾವಿದರಾದ ಅರಳಗುಪ್ಪೆ ಕಲ್ಮನೆ ನಂಜಪ್ಪನವರ ಶಿಷ್ಯರಾದ ಯುವ ಭಾಗವತರೂ ಹಾಗೂ ಕಲಾವಿದರಾದ ಎ.ಆರ್. ಪುಟ್ಟಸ್ವಾಮಿ ಅರಳಗುಪ್ಪೆ ಅವರ ನಿರ್ದೇಶನದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಖ್ಯಾತ ಕಾದಂಬರಿಗಾರ್ತಿಯಾದ ಆಶಾ ರಘುರವರ ‘ಪೂತನಿ’ಯನ್ನು ರಂಗರೂಪಕ್ಕೆ ಸಜ್ಜುಗೊಳಿಸಲಾಗುತ್ತಿದ್ದು, ಯುವ ಕಲಾವಿದೆ ನಿರ್ಮಲಾ ನಾದನ್…
ಮಂಗಳೂರು: ಸುದೀರ್ಫ ಕಾಲ ಯಕ್ಷಗಾನ ರಂಗದಲ್ಲಿ ಕಲಾಸೇವೆಗೈದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಕಲಾವಿದ ನೆಡ್ಲೆ ಗೋವಿಂದ ಭಟ್ಟರನ್ನು ಅವರ ಸ್ವಗೃಹದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. ಧರ್ಮಸ್ಥಳ ಮೇಳ ಸಹಿತ ಇತರ ಮೇಳಗಳಲ್ಲೂ 4 ದಶಕಗಳ ಕಾಲ ತಿರುಗಾಟ ನಡೆಸಿರುವುದಲ್ಲದೆ, ಮಳೆಗಾಲದಲ್ಲೂ ತಂಡಕಟ್ಟಿಕೊಂಡು, ಮುಂಬೈ, ಚೆನ್ನೈ, ಕೊಯಂಬತ್ತೂರು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಯಕ್ಷಗಾನ ಪ್ರದರ್ಶನಗಳನ್ನೂ ನೀಡಿರುವ ಯಕ್ಷ ಸಂಘಟಕರೂ ಎನಿಸಿರುವ ನೆಡ್ಲೆ ಗೋವಿಂದ ಭಟ್ಟರನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿಸಿದರು. ಪ್ರತಿಷ್ಠಾನದ ವಿಶ್ವಸ್ಥರಲ್ಲೋರ್ವರಾಗಿರುವ ಜನಾರ್ದನ ಹಂದೆ ಉಪಸ್ಥಿತರಿದ್ದರು.