Author: roovari

ಉಡುಪಿ : ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ, ಇಂದ್ರಾಳಿ ಕನ್ನಡ ವಿಭಾಗ ಎಂ.ಜಿ.ಎಂ. ಕಾಲೇಜು ಉಡುಪಿ, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಶಾರದಾ ಪ್ರತಿಷ್ಠಾನ (ರಿ.), ರಂಗ ಚಂದಿರ (ರಿ.) ಮತ್ತು ರಂಗ ಭೂಮಿ (ರಿ.) ಉಡುಪಿ ಸಹಕಾರದೊಂದಿಗೆ ಕಾಜಾಣ ಅರ್ಪಿಸುವ ಪದ್ಮಶ್ರೀ ಡಾ.ಮಂಜಮ್ಮ‌ ಜೋಗತಿ ಜೀವನಾಧಾರಿತ ಏಕ ವ್ಯಕ್ತಿ ನಾಟಕ ‘ಮಾತಾ’ ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಅರುಣ್ ಕುಮಾರ್ ಅಭಿನಯಿಸುವ ಈ ನಾಟಕಕ್ಕೆ ರಂಗಪಠ್ಯ, ವಿನ್ಯಾಸ, ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ಈ ನಾಟಕಕ್ಕೆ ಸಂಗೀತ ಸಂಯೋಜನೆ ಮತ್ತು ಗಾಯನ ಮಾಡಿದ್ದು ಶ್ರೀಮತಿ ಸವಿತಕ್ಕ, ಬೆಳಕು ಮತ್ತು ಪ್ರಸಾಧನ ರವಿ ಶಂಕರ್ ನಿರ್ವಹಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯಲ್ಲಿ ಶ್ರೀನಿ ಸಂಪತ್ ಮತ್ತು ಲಕ್ಷ್ಮೀ ಸಹಕರಿಸಲಿರುವರು. ಸಹ ನಿರ್ವಹಣೆ ಸುಬ್ರಮಣಿ ಬಯ್ಯಣ್ಣ ಅವರದ್ದು, ರಂಗಸಜ್ಜಿಕೆಯಲ್ಲಿ…

Read More

ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಇದರ ಆಶ್ರಯದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಲಿದೆ. ಸ್ಪರ್ಧೆಯಲ್ಲಿ ಭಾರತದ ಪರಂಪರೆ, ಪುರಾಣ, ಇತಿಹಾಸ, ಸಾಮಾಜಿಕ, ಜನಪದ, ಸಂಸ್ಕೃತಿಯ ದೃಶ್ಯ ವಿಚಾರಗಳನ್ನು ರೂಪಕದ ಮೂಲಕ ಸಂಯೋಜನೆ ಮಾಡಬಹುದು. ನಿಗದಿತ ಸಮಯದಲ್ಲಿ ಯಾವುದೇ ವಿಷಯಗಳ ಕುರಿತು ನೃತ್ಯ, ಸಂಗೀತ, ರೂಪಕ, ನವ್ಯ ವೈಭವೀಕರಣದ ಜೊತೆಗೆ ಮೌಲ್ಯಯುತ ಸಂದೇಶ ಸಾರುವ ಅಪೂರ್ವ ಕಲಾ ಸಂಗಮವೇ ಭಾರತ ದರ್ಶನವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ಪರ್ಧೆಯ ನಿಯಮಗಳು : ನಿಗದಿತ 20 ನಿಮಿಷಗಳ ಕಾಲಾವಕಾಶದಲ್ಲಿ ಪ್ರಹಸನ, ಸಮೂಹ ನೃತ್ಯ, ಉತ್ತಮ ಸಂದೇಶ ಒಳಗೊಂಡಂತ ಇತರ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಬೇಕು. ತಂಡಕ್ಕೆ 20+5 ನಿಮಿಷಗಳ ಅವಕಾಶ…

Read More

ಬೆಂಗಳೂರು : ಡಾ. ಶಿವರಾಮ ಕಾರಂತರಿಂದ ಉದ್ಘಾಟನೆಗೊಂಡು ‘ಜಾನಪದ ಜ್ಞಾನ ವಿಜ್ಞಾನ’ವನ್ನು ಭಾರತ ದೇಶದುದ್ದಗಲಕ್ಕೂ ಹರಡುತ್ತಲಿರುವ ‘ಜಾನಪದ ವಿಶ್ವ ಪ್ರತಿಷ್ಠಾನ’ವು 40 ವರ್ಷಗಳಿಂದ ‘ಜಾನಪದ ದೀಪಾರಾಧನೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಮತ್ತು ಜೊತೆಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಜನಾನುರಾಗಿ ಸೇವಾನಿರತರಿಗೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ. 2023ನೆಯ ಸಾಲಿನ ‘ಕುವೆಂಪು ದೀಪ ಪ್ರಶಸ್ತಿ’ಗೆ ಬಹುಮುಖಿ ಚಿಂತಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಡಾ. ಸಿ.ನಾಗಭೂಷಣ, ‘ಕಲಾದೀಪ ಪ್ರಶಸ್ತಿ’ಗೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಶ್ರೀ ಎಚ್.ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಶ್ರೀ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಕುಮಾರಿ ಶ್ರೀನಿಧಿ ಪ್ರಕಾಶ್ ಗೌಡ ಇವರುಗಳು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.6,000/- ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ. ಆಯ್ಕೆ ಸಮಿತಿಯಲ್ಲಿ ಡಾ. ಎನ್.ಆರ್. ನಾಯಕ, ನಾಗರಾಜ ಹೆಗಡೆ ಅಪಗಾಲ, ಅಭಿನವ ರವಿಕುಮಾರ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ಇದ್ದರು.…

Read More

ಬೆಂಗಳೂರು : ಅಯೋಧ್ಯಾ ಪಬ್ಲಿಕೇಷನ್ಸ್ ಪ್ರಕಟಿಸುವ ಡಾ. ಮೀನಾಕ್ಷಿ ರಾಮಚಂದ್ರ ಇವರ ‘ನರಾಧಮರ ನಡುವೆ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ದಿನಾಂಕ 02-09-2023ರಂದು ಸಂಜೆ ಗಂಟೆ 5ಕ್ಕೆ ನಡೆಯಲಿದೆ. ವಿಂಗ್ ಕಮಾಂಡರ್ ಬಿ. ಎಸ್. ಸುದರ್ಶನ್, ಕ್ಯಾಪ್ಟನ್ ನವೀನ ನಾಗಪ್ಪ, ರೋಹಿತ್‌ ಚಕ್ರತೀರ್ಥ ಹಾಗೂ ಮೋಹನ ವಿಶ್ವ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read More

ಮಂಗಳೂರು : ತುಳುನಾಡ ತುಡರ್ (ರಿ.) ಪ್ರಸ್ತುತಪಡಿಸುವ ‘ದೈವೊದ ಬೂಳ್ಯ’ ನಾಟಕದ ಪ್ರದರ್ಶನವು ರೋಮಾಂಚನಕಾರಿ ರಂಗತಂತ್ರದೊಂದಿಗೆ ದಿನಾಂಕ 02-09-2023ರ ಸಂಜೆ 5.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ತುಳುನಾಡಿನ ಬೀಡೊಂದರಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಜರಗಿದ ಸತ್ಯಘಟನೆಯೊಂದರ ಪರತಿಮಂಗಣೆ ಪಾಡ್ದಣದ ಕಥಾನಕವನ್ನು ಆಧರಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದಲ್ಲಿ ಸಿನೆಮಾ ರೂಪದಲ್ಲಿ ನೋಮೊದ ಬೂಳ್ಯ ಪ್ರದರ್ಶನವಾಗಿತ್ತು. ಇದೇ ಕೃತಿ ದೈವೊದ ಬೂಳ್ಯ ಎಂಬ ಹೆಸರಿನಲ್ಲಿ ಕೆಲವು ದೃಶ್ಯಗಳ ಬದಲಾವಣೆಯೊಂದಿಗೆ ಹೊಸ ರೀತಿಯ ರೋಮಾಂಚನಕಾರಿ ರಂಗತಂತ್ರದೊಂದಿಗೆ ಗಂಗಾಧರ ಕಿರೋಡಿಯನ್ ನಿರ್ದೇಶನ ಹಾಗೂ ನಯನಾ ಕೋಟ್ಯಾನ್ ಸಹನಿರ್ದೇಶನದಲ್ಲಿ ಮೂಡಿಬಂದಿದೆ. ಈ ನಾಟಕಕ್ಕೆ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಶ್ರೀ ಬಿ.ಕೆ ಗಂಗಾಧರ ಕಿರೋಡಿಯಾನ್ ಗೀತೆ ರಚನೆ ಮಾಡಿದ್ದು, ಶ್ರೀ ಎ.ಕೆ ವಿಜಯ (ಕೋಕಿಲಾ) ಸಂಗೀತ ನೀಡಿರುವ ಈ ನಾಟಕಕ್ಕೆ ಶ್ರೀ ವಿದ್ದು ಉಚ್ಚಿಲ್ ಇವರ ಸಹಕಾರವಿದೆ.

Read More

ನಮ್ಮ ನಾಡಿನ ಗಂಡುಕಲೆ ಯಕ್ಷಗಾನ. ಹಿಮ್ಮೇಳದಲ್ಲಿ ಭಾಗವತರ ಭಾಗವತಿಕೆಗೆ ಮುಮ್ಮೇಳದ ಕಲಾವಿದರು ಭಾರೀ ವೇಷಧರಿಸಿ ನಾಟ್ಯ ಹಾಗೂ ಮಾತುಗಾರಿಕೆಯೊಂದಿಗೆ ಅಭಿನಯಿಸುವ ಅಬ್ಬರದ ಕಲೆ ಇದಾಗಿದೆ. ತಲೆತಲಾಂತರಗಳಿಂದ ಪುರುಷರೇ ಈ ಕಲೆಯನ್ನು ಅರಸಿಕೊಂಡು ಬಂದಿರುವರು. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರು ಸಹ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದು ಇಂದು ಯಕ್ಷಗಾನದಲ್ಲೂ ಅನನ್ಯ ಪ್ರತಿಭೆಯಾಗಿ ಹೊರಹೊಮ್ಮುತ್ತಿರುವರು. ಅಂತಹ ಅನನ್ಯ ಯಕ್ಷಗಾನ ಪ್ರತಿಭೆಯಲ್ಲಿ ನಾವಿಂದು ಓರ್ವ ಮಹಿಳಾ ಯಕ್ಷಗಾನ ಕಲಾವಿದೆಯ ಬಗ್ಗೆ ತಿಳಿಯೋಣ. ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರ ಟಿ.ಆರ್. ಸುಂದರ್ ಭಟ್ ಹಾಗೂ ಶ್ರೀಮತಿ ವಾರಿಜ ಎಸ್. ಭಟ್ ಇವರ ಮಗಳಾಗಿ 01.09.1974ರಂದು ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ಅವರ ಜನನ. ಬಿ.ಎ. ಇನ್ ಹೋಂ ಸೈನ್ಸ್ ಇವರ ವಿದ್ಯಾಭ್ಯಾಸ. ಪೂರ್ಣಿಮಾ ಅವರು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ. ಯಕ್ಷಗಾನ ಗುರುಗಳು:- ಶ್ರೀ ಬಾಲಸುಬ್ರಮಣ್ಯ ಭಟ್, ರಾಮಚಂದ್ರ ಭಟ್ ಎಲ್ಲೂರು, ರವಿ ಅಲೆವೂರಾಯ, ಶ್ರೀಮತಿ ಪೂರ್ಣಿಮಾ ಯತೀಶ್ ರೈ. ರಂಗಕ್ಕೆ ಹೋಗುವ…

Read More

ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ ಇದರ 8ನೇ ವರ್ಷದ ‘ವಿಟ್ಲ ಯಕ್ಷೋತ್ಸವ 2023’ ಕಾರ್ಯಕ್ರಮವು ವಿಟ್ಲ ಶ್ರೀ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2023ರಂದು ಮಧ್ಯಾಹ್ನ 3ರಿಂದ ಮಕ್ಕಳ ಯಕ್ಷಗಾನ, ತೆಂಕುತಿಟ್ಟಿನ ನುರಿತ ಕಲಾವಿದರಿಂದ ಯಕ್ಷಗಾನ, ಸಮ್ಮಾನ ಹಾಗೂ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನೂಳಗೊಂಡಿದೆ. ಅಂದು ಮದ್ಯಾಹ್ನ ಘಂಟೆ 3.00ಕ್ಕೆ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನಾಟ್ಯ ಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಘಂಟೆ 7.00ರಿಂದ ತೆಂಕು ತಿಟ್ಟಿನ ನುರಿತ ಕಲಾವಿದರಿಂದ ‘ಸುದರ್ಶನೋಪಖ್ಯಾನ’ ಎಂಬ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತಾರಾಗಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗೂ ದೇವರಾಜ್ ಆಚಾರ್ಯ, ಚಂಡೆ,ಮದ್ದಳೆಯಲ್ಲಿ ಶ್ರೀ ಚಂದ್ರಶೇಖರ ಸಾರಪಾಡಿ ಮತ್ತು ಶ್ರೀಧರ್ ವಿಟ್ಲ, ಚಕ್ರತಾಳದಲ್ಲಿ ವಸಂತ ವಾಮದಪದವು ಸಹಕರಿಸಲಿದ್ದಾರೆ. ಮುಮ್ಮೇಳದ ಪ್ರಧಾನ ಪಾತ್ರಗಳಲ್ಲಿ ವಸಂತ ಗೌಡ ಕಾಯರ್ತಡ್ಕ, ಚಂದ್ರಶೇಖರ ಧರ್ಮಸ್ಥಳ, ಹರೀಶ್ ಶೆಟ್ಟಿ ಮಣ್ಣಾಪು, ಬಾಲಕೃಷ್ಣ ಗೌಡ ಮಿಜಾರ್,…

Read More

ಮಂಗಳೂರು : ಶಕ್ತಿ ನಗರದಲ್ಲಿನ ಶಕ್ತಿ ವಿದ್ಯಾ ಸಂಸ್ಥೆಗಳು ಮತ್ತು ಮಂಗಳೂರು ಸಂಸ್ಕೃತ ಸಂಘ ಕೊಡಿಯಾಲ್ ಬೈಲ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 26-08-2023ರಂದು ‘ಸಂಸ್ಕೃತೋತ್ಸವ’ವು ಅದ್ದೂರಿಯಾಗಿ ನೆರವೇರಿತು. ಶಕ್ತಿ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ.ಸಿ. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ರವಿಶಂಕರ ಹೆಗಡೆ ಉಪಸ್ಥಿತರಿದ್ದು, ಸಂಸ್ಕೃತೋತ್ಸವದ ನಿಮಿತ್ತ ನಡೆದ ಎಲ್ಲಾ ಸಂಸ್ಕೃತ ಸ್ಪರ್ಧೆಗಳ ಉದ್ಘಾಟನೆಯನ್ನು ವಿದ್ವಾನ್ ಶ್ರೀ ಗಿರಿಧರ ಭಟ್ ಅವರು ನೆರವೇರಿಸಿದರು. ಮಂಗಳೂರು ಸಂಸ್ಕೃತ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ.ಪಿ. ವಾಸುದೇವ ರಾವ್, ಸಂತ ಆಲೋಶಿಯಸ್ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಪತಿ ರಾವ್ ಮತ್ತು ಕೆನರಾ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಜಯ ಕುಮಾರಿ ಇವರುಗಳ ಜೀವಮಾನದ ಸಂಸ್ಕೃತ ಸೇವೆಗಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉದ್ಘಾಟನೆಯ ಬಳಿಕ ಮಂಗಳೂರು ತಾಲೂಕಿನ ವಿವಿಧ…

Read More

ಮಂಗಳೂರು : ಪುರಭವನದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಾಯಿ ಶಕ್ತಿ ಬಳಗ ಚಿಲಿಂಬಿ ವತಿಯಿಂದ ಪುರಾಣ ಪುಣ್ಯ ಕಥೆ ‘ಬೊಳ್ಳಿ ಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರದರ್ಶನ ದಿನಾಂಕ 27-08-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವಧೂತ ವಿನಯ್ ಗುರೂಜಿಯವರು ಮಾತನಾಡುತ್ತಾ “ಯಕ್ಷಗಾನ, ನಾಟಕ ಕಲೆಯಲ್ಲ ಅದೊಂದು ತಪಸ್ಸು. ಮಂಗಳೂರಿನ ಜನರು ಎಲ್ಲರಿಗೂ ಮಂಗಳ ಬಯಸುವವರು, ಕೊರೊನಾ ಬಂದರೂ ತುಳುನಾಡಿನಲ್ಲಿ ಕೋಲ, ತಂಬಿಲ, ನಾಗಾರಾಧನೆ ನಿಂತಿಲ್ಲ. ಮಂಗಳೂರಿನ ಜನರು ಕಲಾವಿದರನ್ನು ಬೆಳೆಸುವ ರೀತಿ ಎಲ್ಲಿಯೂ, ಯಾರೂ ಬೆಳೆಸಲ್ಲ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಅಹಲ್ಯಾ, ನಟ ಭೋಜರಾಜ್ ವಾಮಂಜೂರು, ಬಿ.ಎಸ್. ಕಾರಂತ್, ನಿರೂಪಕಿ ಪ್ರಿಯಾ ಹರೀಶ್, ಸೌಂಡ್ ಎಂಜಿನಿಯ‌ರ್ ಅಶೋಕ್ ಕ್ರಾಸ್ತಾ ಇವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ನವೀನ್ ಶೆಟ್ಟಿ, ನಾಗೇಶ್ ದೇವಾಡಿಗ, ತಾರಾನಾಥ ಉರ್ವ, ಧನಪಾಲ್ ಶೆಟ್ಟಿ, ತಸ್ಮಯಿ ಕೊಡಿಯಾಲ್ ಬೈಲ್ ಇವರನ್ನು ಗೌರವಿಸಲಾಯಿತು. ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಸಚಿವ ರಮಾನಾಥ ರೈ,…

Read More

ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕೊಡವ ಮಕ್ಕಡ ಕೂಟ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ (ಮಹಾವೀರ ಚಕ್ರ ಪುರಸ್ಕೃತರು) ಅವರ 58ನೇ ಪುಣ್ಯಸ್ಮರಣೆ ದಿನಾಚರಣೆ ಸೆಪ್ಟೆಂಬರ್ 7ರಂದು ಜರುಗಲಿದ್ದು, ಆ ಪ್ರಯುಕ್ತ ಕೊಡಗು ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ‘ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ’ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸೆಪ್ಟೆಂಬರ್ 7ರಂದು ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿ ಪತ್ರಿಕಾ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಸೆಪ್ಟೆಂಬರ್ 4ರ ಒಳಗಾಗಿ ಪ್ರಬಂಧವನ್ನು ಪ್ರೆಸ್ ಕ್ಲಬ್‌ ಕಚೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ 9880778047 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Read More