Subscribe to Updates
Get the latest creative news from FooBar about art, design and business.
Author: roovari
27 ಮಾರ್ಚ್ 2023, ಮಂಗಳೂರು: ಕದಂಡಲೆ ನಾರಾಯಣರವರು 1955ರಲ್ಲಿ ಮಂಗಳೂರಿನ ರಥಬೀದಿಯಲ್ಲಿ “ಕೆ.ಎನ್.ಟೈಲರ್” ಹೆಸರಿನ ಟೈಲರಿಂಗ್ ಅಂಗಡಿ ತೆರೆದು ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಇದು ಮಂಗಳೂರಿನ ನಾಟಕಾಸಕ್ತರಿಗೆ ಸೇರುವ ತಾಣವಾಯಿತು. ಕೆಮ್ತೂರು ದೊಡ್ಡಣ್ಣ ಶೆಟ್ಟಿ, ರಮಾನಂದ ಚೂರ್ಯ ಮುಂತಾದವರ ನಾಟಕಗಳಿಂದ ಪ್ರಭಾವಿತರಾಗಿ ನಾಟಕಾಸಕ್ತಿ ಬೆಳೆಸಿ ಮುಂದೆ 14-04-1958ರಲ್ಲಿ ಯುಗಾದಿ ಸಂದರ್ಭದಲ್ಲಿ “ಶ್ರೀ ಗಣೇಶ್ ನಾಟಕ ಸಭಾ” ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ತುಳು ನಾಟಕ ರಂಗದ ಇತಿಹಾಸವನ್ನೇ ಬದಲಿಸಿದರು. ತನ್ನ ವಿಭಿನ್ನ ನಾಟಕಗಳಿಂದ “ಕೆ.ಎನ್.ಟೈಲರ್” ಎಂಬ ನಾಟಕಗಾರ, ನಿರ್ದೇಶಕ, ನಟ, ಸಂಘಟಕರಾಗಿ ಪ್ರಸಿದ್ಧಿ ಪಡೆದರು. ಕರಾವಳಿ ಭಾಗದಲ್ಲಿ ಕಾಸರಗೋಡಿನಿಂದ ಕುಂದಾಪುರದವರೆಗೆ ತನ್ನ ತುಳು ನಾಟಕಗಳ ಪ್ರದರ್ಶನವಿತ್ತು ಜನ ಮೆಚ್ಚುಗೆ ಗಳಿಸಿದರು. ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ, ದೂರದ ಮುಂಬೈ, ಡೆಲ್ಲಿ, ಚೆನ್ನೈ, ಪುಣೆ, ಬೆಂಗಳೂರು, ಧಾರವಾಡ, ಮೈಸೂರು ಮುಂತಾದ ಪಟ್ಟಣಗಳಲ್ಲಿ ತುಳು ನಾಟಕಗಳ ಕಂಪನ್ನು ಪಸರಿಸಿ ಜನ ಮನ್ನಣೆ ಗಳಿಸಿದವರು ಕೆ.ಎನ್.ಟೈಲರ್ ಇವರು ಹಲವಾರು ನಾಟಕಗಳನ್ನು ರಚಿಸಿ, ನಾಟಕದ ಹೆಸರಲ್ಲೇ…
27 ಮಾರ್ಚ್ 2023, ಮಂಗಳೂರು: ಕಲಾಭಿ ಮಂಗಳೂರು ಪ್ರಸ್ತುತ ಪಡಿಸುವ ಬುನ್ರಾಕು ಗೊಂಬೆಯಾಟ ಕಾರ್ಯಾಗಾರದ ಕಲಿಕಾ ಪ್ರಸ್ತುತಿ ‘’ಪುರ್ಸನ ಪುಗ್ಗೆ‘’ ಇದೇ ಬರುವ ದಿನಾಂಕ 28-03-2023ರಂದು ಸಂಜೆ 6.30ಕ್ಕೆ ಕಲಾಭಿ ಥಿಯೇಟರ್, ಮಾಲೆಮಾರ್, ಮಂಗಳೂರು ಇಲ್ಲಿ ನಡೆಯಲಿದೆ. ಬುನ್ರಾಕು ಗೊಂಬೆಯಾಟ ಮೂಲತಃ ಜಪಾನಿನ ಜಾನಪದ ಕಲೆಯಾಗಿದ್ದು, ಜಪಾನಿನ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಕಲಾ ಪ್ರಕಾರವಾಗಿದೆ. ತನ್ನ ಉತ್ಕೃಷ್ಟ ಕಲಾತ್ಮಕ ತಂತ್ರಗಾರಿಕೆ ಹಾಗೂ ಸೂತ್ರಗಳು ಇಲ್ಲದೆಯೇ ನೇರ ಕೈಗಳ ಬಳಕೆಯಿಂದ ಗೊಂಬೆಗಳಿಗೆ ಜೀವ ತುಂಬುವ ಕ್ರಮದಿಂದಾಗಿ ರಂಗದ ಮೇಲೆ ನಮ್ಮ ವಾಸ್ತವಕ್ಕೆ ತೀರಾ ಹತ್ತಿರ ಎಂಬುವಷ್ಟು ಭಾವನೆ, ಚಲನವಲನಗಳ ಸಾದ್ಯತೆಗಳನ್ನು ಕಲ್ಪಿಸಿ ಬೇರೆ ಎಲ್ಲ ಮಾದರಿಯ ಗೊಂಬೆಗಳಿಂದ ಭಿನ್ನವಾಗಿ ನಿಲ್ಲುವುದು ಇದರ ವಿಶೇಷತೆ. ಇಲ್ಲಿ ಮೂರು ಜನ ಸೇರಿ ಒಂದು ಬೊಂಬೆಯನ್ನು ಅಡಿಸುತ್ತಿರುತ್ತಾರೆ. ಪ್ರಸ್ತುತ ನಾಟಕದಲ್ಲಿ ಬರುವ ಗೊಂಬೆಗಳು ಈ ಬುನ್ರಾಕು ಕಲಾಪ್ರಕಾರದ ಪ್ರಭಾವದಿಂದ ಹುಟ್ಟಿ ಕಥಾವಸ್ತುವಿಗನುಸಾರ ತನ್ನ ಕೆಲವು ಮೂಲ ಜಾನಪದ ಅಂಶಗಳನ್ನು ತೊರೆದು ಸಮಕಾಲೀನ ಶೈಲಿಯಲ್ಲಿ ವಿನ್ಯಾಸಗೊಂಡಿದೆ. ನಿರ್ದೇಶಕರು: ಶ್ರವಣ…
27 ಏಪ್ರಿಲ್ 2023, ಧಾರವಾಡ: ಕನ್ನಡ ಶ್ರೇಷ್ಠ ಕವಿಗಳಲ್ಲೊಬ್ಬರಾದ ದಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಧಾರವಾಡದ ಸಾಹಿತ್ಯ ಗಂಗಾ ಮತ್ತು ಹಂಸಭಾವಿಯ ವಾರಂಬಳ್ಳಿ ಪ್ರತಿಷ್ಠಾನದ ಸಹಯೋಗದಲ್ಲಿ ನೀಡಲಾಗುತ್ತಿರುವ ‘ಸು.ರಂ.ಎಕ್ಕುಂಡಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ – 2023’ಕ್ಕೆ ಶ್ರೀ ವಾಸುದೇವ ನಾಡಿಗರ ‘ಬಂದರಿಗೆ ಬಂದ ಹಡಗು’ ಮತ್ತು ಡಾ. ರತ್ನಾಕರ ಕುನಗೋಡು ಅವರ ‘ಎದೆನೆಲದ ಕಾವು’ ಕವನ ಸಂಕಲನಗಳು ಆಯ್ಕೆಯಾಗಿವೆ. ತೀರ್ಪುಗಾರರಾದ ಡಾ. ಸಂಕೇತ ಪಾಟೀಲ, ಡಾ. ಸುಭಾಷ್ ಪಟ್ಟಾಜೆ ಮತ್ತು ಡಾ. ರವಿಶಂಕರ ಜಿ. ಕೆ. ಈ ಎರಡು ಕೃತಿಗಳನ್ನು ಆಯ್ಕೆ ಮಾಡಿದ್ದಾರೆ. ಇದೇ ಏಪ್ರಿಲ್ 16ರಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿ 5000 ರೂಪಾಯಿಗಳ ನಗದು, ಸನ್ಮಾನ ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ ಎಂದು ಸಾಹಿತ್ಯ ಗಂಗಾ ಪ್ರತಿಷ್ಠಾನದ ಮುಖ್ಯಸ್ಥರಾದ ವಿಕಾಸ ಹೊಸಮನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
27 ಮಾರ್ಚ್ 2023, ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ನ ಸಭಾಂಗಣದಲ್ಲಿ ಗುರುವಾರ ದಿನಾಂಕ 23-03-2023ರ ಸಂಜೆ ನಡೆದ “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪನ್ಯಾಸ ನೀಡಿದರು. “ಅಸ್ಪೃಶ್ಯತೆಯು ಮಾನವ ಕುಲಕ್ಕೆ ಅಂಟಿದ ದೊಡ್ಡ ಕಳಂಕ. ಅದನ್ನು ನಿರ್ಮೂಲನಗೊಳಿಸಲು ಹೋರಾಟ ಅಥವಾ ಸಂಘರ್ಷದಿಂದ ಅಸಾಧ್ಯ. ಅದಕ್ಕೆ ಬೇಕಾದುದು ಮುಕ್ತ ಮನಸ್ಸು. ತೆರೆದ ಮನಸ್ಸಿಂದ ಮಾತ್ರ ಸಾಮರಸ್ಯ ಮೂಡಬಹುದು. ಸಾಮರಸ್ಯಕ್ಕೆ ನಮ್ಮ ಮನೆಯೇ ವೇದಿಕೆಯಾಗಬೇಕು. ಇದು ಕೇವಲ ಮಾತಿನಿಂದ ಮಾತ್ರವಲ್ಲದೆ ಅನುಷ್ಠಾನದಲ್ಲೂ ಕಾಣಬೇಕಾಗಿದೆ. ತಾನೇ ಇತರರಿಂದ ಶ್ರೇಷ್ಠ ಎನ್ನುವ ಸಂಕುಚಿತ ಭಾವನೆಯಿಂದ ಇತರ ವರ್ಗ ಅಥವಾ ವ್ಯಕ್ತಿಗಳನ್ನು ತುಚ್ಛವಾಗಿ ಅಥವಾ ಕೀಳಾಗಿ ಕಾಣುವುದೇ ಅಸ್ಪೃಶ್ಯತೆ. ತಮ್ಮತನವನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ತೊಡೆದು ಹಾಕಬೇಕು. ದೇವಾಲಯಗಳಿಗೆ ಎಲ್ಲರಿಗೂ ಮುಕ್ತವಾಗಿ ಪ್ರವೇಶ ದೊರೆಯಬೇಕು. ಶವ ಸಂಸ್ಕಾರದಲ್ಲೂ ಅಸ್ಪೃಶ್ಯತೆಯನ್ನು ಕಾಣುವ ಕೀಳು ಚಿಂತನೆ ನೀಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ. ನಿವೃತ್ತ ಉಪನ್ಯಾಸಕ,…
27 ಮಾರ್ಚ್ 2023, ಹೊಸಕೋಟೆ: ಬೆ೦ಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ತಾಲೂಕು ಹೊಸ ಕೋಟೆಯಲ್ಲಿ ಚಿತ್ರನಟಿ ಅನುತೇಜ ನೇತೃತ್ವದಲ್ಲಿ, ಬೆಂಗಳೂರು ಅನ್ನಪೂರ್ಣ ಟ್ರಸ್ಟ್ (ರಿ) ಇವರು ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಮೇಳ ಹಾಗೂ ಸಾಮಾಜಿಕ-ಕಲೆ-ಶಿಕ್ಷಣ–ಸಾಹಿತ್ಯ, ಯೋಧರು ಹಾಗೂ ಪೌರ ಕಾಮಿ೯ಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ ಕಾರ್ಯಕ್ರಮವು ದಿನಾಂಕ 24-03-2023 ಶುಕ್ರವಾರದಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕನಾ೯ಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿತ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರು ಮಾಜಿ ಸಚಿವರು ಆದ ಮಾನ್ಯ ಶ್ರೀ ಬಿ.ಎನ್. ಬಚ್ಚೇಗೌಡರು ಉದ್ಧಾಟಿಸಿದರು. ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಗಡಿ ಭಾಗದ ಅಭಿವೃದ್ಧಿಗೆ ಸಹಕರಿಸಲು ಕರೆ ನೀಡಿದರು. ವೇದಿಕೆಯಲ್ಲಿ ಮಾಜಿ ಜಿ.ಪಂ.ಅಧ್ಯಕ್ಷರಾದ ಮುನಿಯಪ್ಪ, ನಗರ ಅ.ಪ್ರಾ. ಮಾಜಿ ಅಧ್ಯಕ್ಷ ವಿಜಯಕುಮಾರ, ವೀ.ಸ.ಸಂ. ಹೊಸ ಕೋಟ, ಜಿಲ್ಲಾ ಅಧ್ಯಕ್ಷ ಡಿ.ಎಸ್. ರಾಜಕುಮಾರ್ ಹಾಜರಿದ್ದರು. ಈ ಸಂದರ್ಭದಲ್ಲಿ ಯೋಧರಾದ ಶ್ರೀ ನಾಗೇಶ್ ಕದಂ, ಸಾಹಿತಿಯಾದ ಶ್ರೀ ಜಗದೀಶ್ ಕಂಗನಾಳ್ ಹಾಗೂ ಕನ್ನಡ…
ಮೋಹನ ಬೆಳ್ಳಿಪ್ಪಾಡಿ 10.02.1982ರಂದು ಚೆನ್ನಮ್ಮ ಹಾಗೂ ಕೃಷ್ಣಪ್ಪ ಪೂಜಾರಿ ದಂಪತಿಯರ ಮಗನಾಗಿ ಜನನ. ಬೆಳ್ಳಿಪ್ಪಾಡಿಯವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಹಾಗೂ ಪ್ರಚೋದನೆ ಅಣ್ಣ (ವೀರಪ್ಪ ಸುವರ್ಣ ನಡುಬೈಲು – ಹವ್ಯಾಸಿ ಯಕ್ಷಗಾನ ಕಲಾವಿದ). ಪ್ರಾರಂಭಿಕ ದಿನಗಳಲ್ಲಿ ಬೆಳ್ಳಿಪ್ಪಾಡಿ ಹಳೆಮನೆ ವೆಂಕಪ್ಪ ಗೌಡರಿಂದ ನಾಟ್ಯ ತರಬೇತಿ, ಬಳಿಕ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ಸ್ಥಾಪಕರಾದ ಶ್ರೀ ಸಬ್ಬಣಕೋಡಿ ರಾಮ ಭಟ್ಟರಿಂದ ನಾಟ್ಯ ತರಬೇತಿ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:- ಪಾತ್ರದ ಪದ್ಯಗಳು ಹಾಗೂ ಸನ್ನಿವೇಶದ ಕುರಿತು ಭಾಗವತರಿಂದ ಮಾಹಿತಿಯನ್ನು ಪಡೆದು ಪಾತ್ರ ಪೋಷಣೆಯ ಬಗ್ಗೆ ಸಹ ಕಲಾವಿದರೊಂದಿಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಬೆಳ್ಳಿಪ್ಪಾಡಿ ಅವರು ಹೇಳುತ್ತಾರೆ. ಪಾರ್ತಿಸುಬ್ಬನ ಪ್ರಸಂಗಗಳು, ಮಾನಿಷಾದ, ಕಾಯಕಲ್ಪ, ಶ್ರೀ ದೇವಿ ಮಹಾತ್ಮೆ, ಮಹಾರಥಿ ಕರ್ಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಇಂದ್ರಜಿತು, ಹನುಮಂತ, ಚಂಡಮುಂಡರು, ಅಭಿಮನ್ಯು ಇತ್ಯಾದಿ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ…
25 ಮಾರ್ಚ್ 2023, ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮತ್ತು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 25, 26ರಂದು ಕಾಸರಗೋಡಿನ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆಯಲಿರುವ 2 ದಿನಗಳ ಪುಸ್ತಕ ಪ್ರೀತಿ ಬರಹ ಕಮ್ಮಟದ ಉದ್ಘಾಟನೆಯನ್ನು ಉದ್ಯಮಿ ಶ್ರೀಯುತ ರಾಮ ಪ್ರಸಾದ ಕಾಸರಗೋಡು ಅವರು ನೆರವೇರಿಸಿದರು. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ಓದುಗ ವಲಯದಲ್ಲಿ ಬೇಡಿಕೆ ಸೃಷ್ಠಿಸಿ ಬರಹ ಸಾಧ್ಯತೆಯನ್ನು ಕಂಡುಕೊಳ್ಳುವ ಬಗೆಯ ಹೊಸ ಪ್ರಯೋಗವನ್ನು ಮಾಡುವ ಬಗೆಗೆ ಮಾತನಾಡಿದರು. ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಕೆಳಚ್ಚಪ್ಪ ಗೋವಿಂದ ಭಟ್, ವಿಷ್ಣು ಕೆ. ಶ್ಯಾನುಭೋಗ್, ಜಾದೂಗಾರ ಮಾಧವ ಕಾಸರಗೋಡು, ಕಾರ್ಟೂನಿಸ್ಟ್ ವೆಂಕಟ ಭಟ್ ಎಡನೀರು ಅವರು ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಾಗಾರದಲ್ಲಿ ಸ್ಮರಣಶಕ್ತಿ, ಮನೋವಿಜ್ಞಾನ ಮತ್ತು ಕ್ರಿಯಾಶೀಲ ಬರಹ ಸಾಧ್ಯತೆಯ ಬಗೆಗೆ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಹಾಗೂ ಸುಮಾಡ್ಕರ್…
25 ಮಾರ್ಚ್ 2023, ಸುಳ್ಯ: ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏಪ್ರಿಲ್ 09ರಿಂದ 16ರವರೆಗೆ ನಡೆಯುವ ಚಿಣ್ಣರಮೇಳ 2023 ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ವಿಶೇಷ ಶಿಬಿರವಾಗಿರುತ್ತದೆ. ರಂಗಮಾಂತ್ರಿಕ ಡಾ. ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಕರ್ನಾಟಕದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾಗಿರುವ ಅರವಿಂದ ಕುಡ್ಲ, ನೀನಾಸಂ ಸಂಗೀತ ಭಿಡೆ, ನೀನಾಸಂ ಉಜ್ವಲ್ ಯು.ವಿ., ನೀನಾಸಂ ನವೀನ್ ಕಾಂಚನ, ಮೈಮ್ ರಾಮದಾಸ್, ನೀನಾಸಂ ಬಿಂದು ರಕ್ಷಿದಿ, ಅಕ್ಷತಾ ಕುಡ್ಲ , ಸುಮನಾ ಪ್ರಸಾದ್ ಮೂಡುಬಿದ್ರೆ, ತಾರಾನಾಥ ಕೈರಂಗಳ, ಝುಬೇರ್ ಖಾನ್ ಕುಡ್ಲ , ವಿ.ಕೆ.ವಿಟ್ಲ, ಹರೀಶ್ ಅರಸೀಕೆರೆ, ನೀನಾಸಂ ನವೀನ್ ಸಾಣಿಹಳ್ಳಿ, ಭಾಸ್ಕರ ನೆಲ್ಯಾಡಿ, ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಚಂದ್ರಾಡ್ಕರ್, ಧನಂಜಯ ಮರ್ಕಂಜ, ಶಿವಗಿರಿ ಕಲ್ಲಡ್ಕ, ಭಾರತಿ ಕೈರಂಗಳ, ಅತುಲ್ ಭಟ್ ಉಡುಪಿ, ನಾದಾ ಮಣಿನಾಲ್ಕೂರು ಮುಂತಾದವರು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಬಹಳ ಮುಖ್ಯವಾಗಿ ರಂಗಾಭಿನಯ, ಕಥಾರಚನೆ, ಮಾತುಗಾರಿಕೆ,…
25 ಮಾರ್ಚ್ 2023, ಕಾರ್ಕಳ: ಯಕ್ಷ ರಂಗಾಯಣ ಕಾರ್ಕಳ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ದಿ ಸಮಿತಿ, ರಂಗ ಸಂಸ್ಕೃತಿ ಕಾರ್ಕಳ ಇವರುಗಳ ಸಹಕಾರದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆ”ಯು ದಿನಾಂಕ 27-03-2023ರಂದು “ವನರಂಗ” ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಕಾರ್ಕಳ ಇಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀ ವಿ.ಸುನೀಲ್ ಕುಮಾರ್, ಮಾನ್ಯ ಸಚಿವರು, ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರು ಉದ್ಘಾಟಿಸಲಿದ್ದು, ಡಾ. ಬಿ.ವಿ.ರಾಜಾರಾಂ, ಬೆಂಗಳೂರು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ರಂಗಕರ್ಮಿ, ಕಿನ್ನರ ಮೇಳ ಸ್ಥಾಪಕರೂ ಆದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಹೆಗ್ಗೋಡು ಭಾಗವಹಿಸಲಿರುವರು. ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷರಾದ ಶ್ರೀ ಎನ್.ನಿತ್ಯಾನಂದ ಪೈ ಇವರ ಉಪಸ್ಥಿತಿ ಹಾಗೂ ಯಕ್ಷ ರಂಗಾಯಣದ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಮೂಲ ಸಿ.ಎಸ್. ಲೆವಿಸ್ ರವರ ಕೆ.ಜಿ.ಕೃಷ್ಣಮೂರ್ತಿ ರಚಿಸಿ,…
25 ಮಾರ್ಚ್ 2023, ಉಡುಪಿ: ಉಡುಪಿ ತುಳುಕೂಟ ವತಿಯಿಂದ ನೀಡಲಾಗುವ 2022-2023ನೇ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ಸ್ಮಾರಕ “ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ”ಗೆ ಮಂಗಳೂರು ಕಾವೂರಿನ ಕನ್ನಡ, ತುಳು ಸಾಹಿತಿ ಯಶೋದಾ ಮೋಹನ್ ಅವರ ‘ದೇರಮಾಮುನ ದೂರನೋಟೊಲು’ ಕಾದಂಬರಿ ಆಯ್ಕೆಯಾಗಿದೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳು ಕೂಟವು ಕಳೆದ 28 ವರ್ಷಗಳಿಂದ “ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ” ನೀಡುತ್ತಿದೆ. ಸಾಹಿತಿ ಯಶೋದಾ ಮೋಹನ್ ಮಂಗಳೂರು ಆಕಾಶವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಹಲವಾರು ಕಥೆ, ಕವನ, ಲೇಖನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ. ಇವರ ಕತೆಗಳು ತೆಲುಗು, ಕೊಂಕಣಿ ಭಾಷೆಗಳಿಗೆ ಅನುವಾದಗೊಂಡಿವೆ. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯರಾಗಿರುವ ಇವರು, ತುಳು ಐಸಿರಿ ಸಂಸ್ಥೆಯಲ್ಲಿ…