Author: roovari

ಬೆಂಗಳೂರು : ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ.) ಇದರ ಸುವರ್ಣ ಸಂಭ್ರಮ 2025ರ ಪ್ರಯುಕ್ತ ‘ಯಕ್ಷ ಹಾಸ್ಯ ರಸ’ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025ರಂದು ಬೆಂಗಳೂರಿನ ವೈಟ್ ಪೆಟಲ್ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಶಾಂತ್ ಸಿ.ಕೆ. ಸಾರಥ್ಯದಲ್ಲಿ ದಯಾನಂದ ಕೋಡಿಕಲ್ ಭಾಗವತಿಕೆ ಕನ್ನಡ ಹಾಸ್ಯ ಯಕ್ಷಗಾನ ಪ್ರಸ್ತುತಗೊಳ್ಳಲಿದ್ದು, ಆಚಾರ ವಿಚಾರ ಪುಸ್ತಕ – ಸ್ಮರಣ ಸಂಚಿಕೆ ಬಿಡುಗಡೆ, ಜಾನಪದ ಕಲರವ, ಕಲಿವಲಿ ಕಾಮಿಡಿ, ಕಿಲಾಡಿ ದರ್ಬಾರ್, ಮನಮೋಹಕ ನೃತ್ಯ, ಆಹಾರ ಮಳಿಗೆ, ಸ್ತಬ್ಧ ಚಿತ್ರ ಪ್ರದರ್ಶನ, ಗೊಂಬೆ ಪ್ರದರ್ಶನ ನಡೆಯಲಿದೆ.

Read More

ಮಡಿಕೇರಿ : 2025ನೇ ಸಾಲಿನ ಐತಿಹಾಸಿಕ ಮಡಿಕೇರಿ ದಸರಾ ಬಹುಭಾಷೆ ಕವಿಗೋಷ್ಠಿಗೆ ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ, ಕವಯತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಯತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ದಿನಾಂಕ 06 ಸೆಪ್ಟೆಂಬರ್ 2025ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6ರಿಂದ 14 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಕವನ ಕಳುಹಿಸುವವರು ತರಗತಿ ಹಾಗೂ ಶಾಲೆಯ ವಿವರವನ್ನು ನಮೂದಿಸಬೇಕು. ಕವನಗಳನ್ನು ಕಳುಹಿಸುವವರು ತಮ್ಮ…

Read More

ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ಗುರುಗಳ ಸಭೆಯು ದಿನಾಂಕ 07 ಆಗಸ್ಟ್ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ “ಈ ಬಾರಿ 94 ಪ್ರೌಢಶಾಲೆಗಳಲ್ಲಿ 41 ಗುರುಗಳಿಂದ ಯಕ್ಷಗಾನ ಕಲಿಕೆ ಆರಂಭಗೊಂಡಿದ್ದು, ನವಂಬರ್ ಕೊನೆಯ ವಾರ ಬ್ರಹ್ಮಾವರದಲ್ಲಿ ಪ್ರದರ್ಶನವನ್ನು ಆರಂಭಿಸಿ, ಬಳಿಕ ರಾಜಾಂಗಣದಲ್ಲಿ ಪ್ರದರ್ಶನ, ಅದೇ ಸಂದರ್ಭದಲ್ಲಿ ಸಮಾನಾಂತರವಾಗಿ ಕಾಪು ಕ್ಷೇತ್ರದ ಶಾಲೆಗಳ ಪ್ರದರ್ಶನವನ್ನು ಆಯೋಜಿಸೋಣ. ಆ ಬಳಿಕ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ಶಾಲೆಗಳ ಪ್ರದರ್ಶನಗಳನ್ನು ನಡೆಸೋಣ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಪ್ರದರ್ಶನಗಳನ್ನು ಮುಗಿಸೋಣ” ಎಂದು ನುಡಿದರು. ಗುರುಗಳು ತಮ್ಮ ತಮ್ಮ ಶಾಲೆಯ ಯಕ್ಷಶಿಕ್ಷಣದ ಕುರಿತಾಗಿ, ಶಾಲೆಯ ಪ್ರತಿಸ್ಪಂದನೆಯ ಬಗೆಗೂ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಕೋಶಾಧಿಕಾರಿ ಗಣೇಶ್ ಬ್ರಹ್ಮವಾರ, ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ವಿದ್ಯಾಪ್ರಸಾದ್, ನಟರಾಜ ಉಪಾಧ್ಯಾಯ, ನಾಗರಾಜ ಹೆಗಡೆ ಹಾಗೂ ಗುರುಗಳು…

Read More

ಒಡಿಯೂರು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಶ್ರೀಕ್ಷೇತ್ರದ ರಾಜಾಂಗಣದಲ್ಲಿ ದಿನಾಂಕ 06 ಮತ್ತು 07 ಆಗಸ್ಟ್ 2025ರಂದು ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತವೆ. ಡಾ. ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ ‘ದೇವವೃದ್ಧರು’ ಪ್ರದರ್ಶನವು ಅತ್ಯುತ್ತಮ ನಾಟಕ ರೂ.50,000 ನಗದು ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕದ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಸುಳ್ಯ ರಂಗಮನೆಯ ಮನುಜ ನೇಹಿಗ ಪಡೆದುಕೊಂಡರು. ದ್ವಿತೀಯ ಪ್ರಶಸ್ತಿ ರೂ.30,000/- ಪಡೆದ ಆಳ್ವಾಸ್ ನ ‘ಮಗು ಮತ್ತು ಮರ’ ನಾಟಕವನ್ನು ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದರು. ಈ ನಾಟಕದ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ತೇಜಸ್ಸಿನಿ ತರೀಕೆರೆ ಪಡೆದುಕೊಂಡರು. ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು ನೀಡಿದರು. ವೇದಿಕೆಯಲ್ಲಿ ಒಡಿಯೂರು ಸಾದ್ವಿ ಶ್ರೀಮಾತಾನಂದಮಯಿ,…

Read More

ಬೆಂಗಳೂರು : ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಕಿರಂ ಪ್ರಕಾಶನ ಇವರ ಜಂಟಿ ಸಹಯೋಗದಲ್ಲಿ ದಿನಾಂಕ 07 ಆಗಸ್ಟ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ. ನಾಗರಾಜ ಇವರ ಸ್ಮರಣಾರ್ಥ 14ನೇ ವರ್ಷದ ‘ಅಹೋರಾತ್ರಿ ಕಾಡುವ ಕಿರಂ’ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಿ, ‘ಕಾಡುವ ಕಿರಂ ಹೊಸ ಕವಿತೆಗಳು 2025’ ಕೃತಿಯನ್ನು ಡಾ. ಎಂ.ಎಸ್. ಮೂರ್ತಿ ಬಿಡುಗಡೆ ಮಾಡಿದರು. ಕವಿಗೋಷ್ಠಿ, ಜನಪದ ಗಾಯನ ಮತ್ತು ಉಪನ್ಯಾಸಗಳೊಂದಿಗೆ ಸಾಧಕರಾದ ಎಂ. ಗೋಪಾಲ್ (ಜನಪರ ಹೋರಾಟ), ಡಾ. ಎಂ. ಉಷಾ (ಸ್ತ್ರೀವಾದ, ಸಾಹಿತ್ಯ), ಪ್ರೊ. ಎಂ.ಜಿ. ಚಂದ್ರಶೇಖರಯ್ಯ (ಸಾಹಿತ್ಯ), ಶ್ರೀನಿವಾಸ ನಟೇಕರ್ (ವೈಚಾರಿಕತೆ, ರಂಗಭೂಮಿ), ಡಾ. ಕೂಡ್ಲೂರು ವೆಂಕಟಪ್ಪ (ಸಾಹಿತ್ಯ, ಸಂಶೋಧನೆ) ಮತ್ತು ಟಿ. ನಾರಾಯಣ್ (ಚಿತ್ರಕಲೆ) ಇವರುಗಳಿಗೆ ‘ಕಿರಂ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಪ್ರಸ್ತಾವನೆಗೈದ ಜನಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ, ಸಂಶೋಧಕ ಮತ್ತು ಪತ್ರಕರ್ತ…

Read More

ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ಮುಂದಾಳುವಾಗಿ, ಕನ್ನಡ ಕಾವ್ಯ ಪರಂಪರೆಯ ಪ್ರತಿನಿಧಿಯಾಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕರಾಗಿ, ಕನ್ನಡಿಗರಿಗೆ ಹಿರಿಯಣ್ಣನಾಗಿ ಪ್ರೇರಣೆಯನ್ನು ನೀಡಿದ ಕಯ್ಯಾರ ಕಿಂಞಣ್ಣ ರೈಯವರು ಶತಮಾನ ಕಂಡ ಅಪರೂಪದ ಕವಿ. “ಇವರ ಕವನಗಳು ಪಾರಿವಾಳದ ಹಿಂಡಿನಂತೆ ರೂಪದಲ್ಲಿ ಮಾತ್ರ ಸಾಹಜಿಕವಾಗಿ ಭಿನ್ನವೇ ಹೊರತು ಧ್ವನಿಯಲ್ಲಿ ಏಕಪ್ರಕಾರವಾದ ಕಲಕಂಠ” ಎಂದು ಮಂಜೇಶ್ವರ ಗೋವಿಂದ ಪೈಗಳು ‘ಪುನರ್ನವ’ ಸಂಕಲನಕ್ಕೆ ಸಂಬಂಧಿಸಿ ಹೇಳಿದ ಮಾತುಗಳನ್ನು ಕಯ್ಯಾರರ ಒಟ್ಟು ಕವನಗಳಿಗೆ ಅನ್ವಯಿಸಹುದು. ‘ಶ್ರೀಮುಖ’, ‘ಐಕ್ಯಗಾನ’, ‘ಪುನರ್ನವ’, ‘ಚೇತನ’, ‘ಪಂಚಮಿ’, ‘ಕೊರಗ’, ‘ಗಂಧವತಿ’ ಎಂಬ ಆರು ಕವನ ಸಂಕಲನಗಳ ಜೊತೆಗೆ 111 ಕವನಗಳ ಸಂಕಲನ ‘ಶತಮಾನದ ಗಾನ’, ಅವುಗಳನ್ನು ಒಳಗೊಂಡ ‘ಪ್ರತಿಭಾ ಪಯಸ್ವಿನಿ’ಯೂ ಸೇರಿದಂತೆ ‘ಕುಮಾರನ್‌ ಆಶಾನ್‌ ಅವರ ಮೂರು ಕವಿತೆಗಳು’ (ಅನುವಾದ) ಮತ್ತು ‘ಮಕ್ಕಳ ಪದ್ಯ ಮಂಜರಿ ಭಾಗ 1 ಮತ್ತು ಭಾಗ 2’ ಎಂಬ ಕೃತಿಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ. “ಆಗ ಕನ್ನಡದಲ್ಲಿ ನವೋದಯ ಸಾಹಿತ್ಯ ಕೃಷಿಯ ಕಾಲವಾಗಿತ್ತು. ನನ್ನ ಒಲವು ಆ…

Read More

ಮಂಗಳೂರು: ಯಕ್ಷಭವನ ಟ್ರಸ್ಟ್ ಆಕಾಶಭವನ ಮಂಜಲ್‌ಕಟ್ಟೆ ಕಾವೂರು ವತಿಯಿಂದ ಆಯೋಜಿಸಿದ ‘ಯಕ್ಷ ಮುಂಗಾರು’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 03 ಆಗಸ್ಟ್ 2025ರ ಭಾನುವಾರದಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್ ಕಾವೂರು ಮಾತನಾಡಿ “ಯುವ ಪೀಳಿಗೆಗೆ ಯಕ್ಷಗಾನ ತರಬೇತಿ ನೀಡಿ ಕಲೆಯನ್ನು ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಯಕ್ಷಭವನ ಟ್ರಸ್ಟ್ ಕಾರ್ಯೋನ್ಮುಖವಾಗಿ ಎಳೆಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ಮಾತನಾಡಿ “ಶಾಲಾ ಹಂತದಲ್ಲೇ ಮಕ್ಕಳನ್ನು ಯಕ್ಷಗಾನದತ್ತ ಆಕರ್ಷಿಸಲು ಪೋಷಕರು ಬೆಂಬಲ ನೀಡಬೇಕು” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ ‘ಯಕ್ಷ ಭವನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಶಂಕರ ಶೆಟ್ಟಿ ನಂದನಕೆರೆ, ಕಾವೂರು ಬಂಟರ ಸಂಘದ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ (ಸ್ವಾಯತ್ತ) ರೋಶನಿ ನಿಲಯ, ಮಂಗಳೂರು ಆಯೋಜಿಸುವ ‘ಅಕಾಡೆಮಿಡ್ ಒಂಜಿ ದಿನ – ಬಲೆ ತುಳು ಓದುಗ’ ಸ್ಕೂಲ್ ಆಫ್ ಸೋಶಿಯಲ್ ವರ್ಕ್ (ಸ್ವಾಯತ್ತ) ರೋಶನಿ ನಿಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಅಕಾಡೆಮಿ ಗ್ರಂಥಾಲಯಕ್ಕೆ ಭೇಟಿ ಹಾಗೂ ಅಧ್ಯಯನ ಕಾರ್ಯಕ್ರಮವು ದಿನಾಂಕ 09 ಆಗಸ್ಟ್ 2025ರ ಶನಿವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಆಕಾಡಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಕಲಾ ನಂದಾವರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾರ್ತಾ ಭಾರತಿ ದೈನಿಕದ ಹಿರಿಯ ವರದಿಗಾರ್ತಿಯಾದ ಶ್ರೀಮತಿ ಸತ್ಯ ಕೆ. ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ…

Read More

ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರ ಪುರಸ್ಕಾರ ಸಮಾರಂಭ ದಿನಾಂಕ 19 ಆಗಸ್ಟ್ 2025ರಂದು ಪೂರ್ವಾಹ್ನ ಹನ್ನೊಂದು ಗಂಟೆಗೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ತಿಳಿಸಿದ್ದಾರೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ದತ್ತಣ್ಣ ಪುರಸ್ಕಾರ ಪ್ರದಾನ ಮಡುವರು. ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ‘ಜ್ಞಾನಪಥ ಮತ್ತು ಜ್ಞಾನರಥ’ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿರುವರು.

Read More

ಕಾಸರಗೋಡು : ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಬಡಗು ತಿಟ್ಟು ಯಕ್ಷಗಾನ ನಾಟ್ಯ ವಾಚ್ಯ ವೈಭವ ದಿನಾಂಕ 05 ಆಗಸ್ಟ್ 2025ರ ಮಂಗಳವಾರ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಪ್ರಾಯೋಜಕತ್ವದಲ್ಲಿ ಗಯಚರಿತ್ರೆ – ಉಗ್ರಸೇನ ರುಚಿಮತಿ ಯಕ್ಷಗಾನ ಪ್ರದರ್ಶನ ಗೊಂಡಿತು. ರವೀಂದ್ರ ದೇವಾಡಿಗ ಕಮಲಶಿಲೆ, ಕಾರ್ತಿಕ ಚಿಟ್ಟಾಣಿ, ಸುಧೀರ ಉಳ್ಳೂರು ಇವರು ಮುಮ್ಮೇಳದಲ್ಲಿ ಗಮನ ಸೆಳೆದರು. ಇವರಿಗೆ ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ಸುನೀಲ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ನಯನ ಕುಮಾರ ನಿಟ್ಟೂರು ಉತ್ತಮ ಸಾಥ್ ನೀಡಿದರು. ನಂತರ ಶಿವಾನಿ ಕೂಡ್ಲು ಅವರಿಂದ ಕೇರಳ ನಡನಂ ನೃತ್ಯರೂಪಕ ನಡೆಯಿತು.

Read More