Subscribe to Updates
Get the latest creative news from FooBar about art, design and business.
Author: roovari
ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಎರಡನೇ ಶನಿವಾರ ಆಯೋಜಿಸುವ ರಂಗ ಮಾಲೆ – ನಾಟಕ ಸರಣಿ ಕಾರ್ಯಕ್ರಮವು ದಿನಾಂಕ 10-11-2023 ಮತ್ತು 11-11-2023 ರಂದು ನಡೆಯಿತು. ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭಕ್ಕಾಗಿ ಈ ಬಾರಿ ನಾಡಿನ ಖ್ಯಾತ ರೆಪರ್ಟಿಗಳಲ್ಲಿ ಒಂದಾದ ನಿನಾಸಂ ಹೆಗ್ಗೂeಡು ತಿರುಗಾಟ – 2023-24. ರ ಎರಡು ನಾಟಕಗಳನ್ನು ವೇದಿಕೆಯ ಅಧ್ಯಕ್ಷ ಕೆ. ವಿ ವೆಂಕಟರಮಣಪ್ಪ. ಪಾಪಣ್ಣ ಕಾಟಂ ನಲ್ಲೂರು ಉದ್ಘಾಟಿಸಿದರು. ಮೊದಲ ದಿನ ಜ್ಞಾನಪೀಠ ಪ್ರಶಸ್ತಿ ವಿಜೇತ. ಡಾ. ಚಂದ್ರಶೇಖರ ಕಂಬಾರರ ‘ಹುಲಿಯ ನೆರಳು’ ನಾಟಕವನ್ನು ಕೆ.ಜಿ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು. ರಂಗ ಮಾಲೆ – 76 ರಲ್ಲಿ. ಎರಡನೇ ದಿನ ದಕ್ಷಿಣ ಆಫ್ರಿಕ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆ. ಲೂಯಿ ನಕೋಶಿ ರಚಿಸಿ. ನಟರಾಜ ಹೊನ್ನವಳ್ಳಿ ಅನುವಾದಿಸಿದ ನಾಟಕ ‘ಆ ಲಯ ಈ ಲಯ’ ವನ್ನು ಶ್ವೇತಾರಾಣಿ ಹೆಚ್. ಕೆ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು. ಎರಡೂ ನಾಟಕಗಳು ನೆರದ ಪ್ರೇಕ್ಷಕರನ್ನ…
ಉಪ್ಪೂರು : ಮಯ್ಯ ಯಕ್ಷ ಬಳಗ ಹಾಲಾಡಿ ಕುಂದಾಪುರ, ಕರ್ನಾಟಕ ಯಕ್ಷಧಾಮ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇದರ ಸಂಯೋಜನೆಯಲ್ಲಿ ಪ್ರಾಚಾರ್ಯ ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಯಜಮಾನ ‘ಪಿ ಶ್ರೀಧರ ಹಂದೆಯವರ ನೆನಪು’ ಶಿಷ್ಯ ಭಾಗವತ ‘ಜಿ. ರಾಘವೇಂದ್ರ ಮಯ್ಯರ ಕನಸು’ ಯಕ್ಷಗಾನ ಸಭಾವಂದನ, ಸಂಸ್ಮರಣೆ ಸಮ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 02-12-2023 ರಂದು ಮದ್ಯಾಹ್ನ ಘಂಟೆ 3.00 ರಿಂದ. ಮುದೂರಿ (ಮಯ್ಯರ ಮನೆ) ಶಾಲೆಯ ನಾರಣಪ್ಪ ಉಪ್ಪರರ ವೇದಿಕೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಗೌರವ ಅಭ್ಯಾಗತರಾಗಿ ಶ್ರೀ ಕಿರಣ್ ಕುಮಾರ್ ಕೊಡ್ಲಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಶ್ರೀ ಕೃಷ್ಣಮೂರ್ತಿ ಉಪ್ಪೂರ, ಶ್ರೀ ಪಿ. ವೆಂಕಟೇಶ್ ಹಂದೆ, ಶ್ರೀ ಅಶೋಕ ಶೆಟ್ಟಿ ಚೋರಾಡಿ, ಶ್ರೀ ಸಂಜೀವ ನಾಯ್ಕ, ಶ್ರೀ ಆನಂದ ಕುಂದರ್, ಡಾ. ನಾಗೇಶ್ ಕುಂದಾಪುರ, ಶ್ರೀ ಜನಾರ್ದನ ಹಂದೆ, ಶ್ರೀ ಪ್ರಕಾಶ ಶೆಟ್ಟಿ ಗೈನಾಡಿ,…
ಬಂಟ್ವಾಳ : ಅಮ್ಮುಂಜೆಯಲ್ಲಿ ದಿನಾಂಕ 12-11-2022 ಹಾಗೂ 13-11-2022 ರಂದು ನಡೆದ 22ನೆಯ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ‘ಸವಿನೆನಪು’ ಕಾರ್ಯಕ್ರಮಮವು ದಿನಾಂಕ 11-11-2023 ರಂದು ಅಮ್ಮುಂಜೆ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನದ ಅವಲೋಕನ ಗೈದು ಮಾತನಾಡಿದ ಮೊಡಂಕಾಪು ದೀಪಿಕಾ ಪ್ರೌಢಶಾಲಾ ವಿಶ್ರಾಂತ ಮುಖ್ಯ ಶಿಕ್ಷಕ, ಚಿಂತಕ ಹಾಗೂ ರಂಗಭೂಮಿ ತಜ್ಞ ಮಹಾಬಲೇಶ್ವರ ಹೆಬ್ಬಾರ್ “ಕವಿಯೊಬ್ಬ ಕವಿತೆಯನ್ನು ಬರೆದು ಅದರ ನಾನಾರ್ಥಗಳನ್ನು ಗ್ರಹಿಸಲು ಓದುಗರಿಗೆ ಬಿಟ್ಟುಕೊಡುವಂತೆ,ಅಮ್ಮುಂಜೆಯ ಸಾಹಿತ್ಯ ಸಮ್ಮೇಳನದ ಅರ್ಥ ವ್ಯಾಪ್ತಿಯನ್ನು ತಾವೇ ಹೇಳಿಕೊಳ್ಳದೆ ಜನತೆಯ ಮುಂದೆ ಬಿಟ್ಟು ಕೊಟ್ಟವರು ಇಲ್ಲಿನ ಸ್ವಾಗತ ಸಮಿತಿಯ ಮಹಾನುಭಾವರು. ಜನರ ದೃಷ್ಟಿ ಬೇರೆ ಬೇರೆ ಇರುತ್ತದೆ.ಆದರೆ ಅದರಲ್ಲಿನ ಅಂತಿಮ ವಿಮರ್ಶೆ ಬಹಳ ಉತ್ತಮವಾಗಿರುತ್ತದೆ. ಅದಕ್ಕೆ ಸಾಕ್ಷಿಯಾಗಿ ಅಮ್ಮುಂಜೆಯ ಬಡಕಬೈಲು ಪರಮೇಶ್ವರ ರಾವ್ ಮಹಾದ್ವಾರದ ಬಳಿಯಿಂದ ಸಂಭ್ರಮದಿಂದ ನಡೆದ ಮೆರವಣಿಗೆಯಿಂದ ತೊಡಗಿ ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲಾ ವಠಾರದಲ್ಲಿ ಕಳೆದ ವರ್ಷ ಜರುಗಿದ ಸಾಹಿತ್ಯ ಸಮ್ಮೇಳನ ಎಂದೆಂದೂ ಸ್ಮೃತಿ ಪಟಲದಲ್ಲಿದೆ” ಎಂದರು. ಸಮಾರಂಭದಲ್ಲಿ…
ನಾನು ಇದುವರೆಗೆ ಕಂಡ best ineractive childrens’ activity. ‘ಲಾ ಪೋ ಲಾ’ ಎಂಬ ಮಕ್ಕಳಾಟ, ಈ ಆಟ ಸುರುವಾಗೋದೇ ಸುತ್ತಲಿದ್ದ ಮಕ್ಕಳ ಗುಜು ಗುಜು ತಾರಕಕ್ಕೇರಿದ ಮೇಲೆ. ಗೌಜಿ ಯ ಮಧ್ಯದಲ್ಲೇ ಮಕ್ಕಳ ಮಧ್ಯೆ ಇದ್ದ ರಟ್ಟಿನ ಪೆಟ್ಟಿಗೆಯೊಳಗಿಂದ ಧಡಕ್ ಅಂತ ಸದ್ದು. ಪೆಟ್ಟಿಗೆ ಅಲ್ಲಾಡ್ತದೆ. ಗೌಜಿಯೆಲ್ಲ ಬಂದ್! ಏಕ್ ದಂ ಮೌನ. ಸ್ವಲ್ಪ ಸಮಯದ ನಂತರ ಮತ್ತೆ ಸದ್ದು. ಈಗ ಸ್ವಲ್ಪ ಧೈರ್ಯಸ್ಥೆ ಹುಡುಗಿಯೊಬ್ಬಳು ಪೆಟ್ಟಿಗೆಯ ಹತ್ತಿರ ಹೋಗಿ ಇಣುಕ್ತಾಳೆ. ನಿಧಾನಕ್ಕೆ ಕೈಯೊಂದು ಹೊರಬರ್ತದೆ. ಮತ್ತೆ ಕಾಲು…ಮತ್ತೆ ಎರಡೂ ಕೈ, ಎರಡೂ ಕಾಲು. ಮತ್ತೆ ತಲೆ…ಹೀಗೆ ಮಕ್ಕಳ ಕುತೂಹಲ ಉತ್ತುಂಗಕ್ಕೆ ಏರ್ತಿದ್ದಂತೆ ಹೊರಬರ್ತಾನೆ ಕ್ಲೌನ್. ‘ಲಾ ಪೋ ಲಾ’ ಆದರೆ ಅವನಿಗೆ ಪೆಟ್ಟಿಗೆಯಿಂದ ಹೊರ ಬರೋದಕ್ಕಾಗಲ್ವೇ! ಅದಕ್ಕೆ ಮಕ್ಕಳ ಸಹಾಯವೇ ಬೇಕು. ಹೇಗೋ ಹೇಗೋ ಮಾಡಿ ಅವನನ್ನ ಹೊರತಂದ ಮೇಲೆ ನೋಡಿ, ಸುರುವಾಗುತ್ತೆ ಆಟ. ಇಡೀ ಒಂದು ಘಂಟೆಯ ಮಕ್ಕಳಾಟ. ಈ ‘ಲಾ ಪೋ ಲಾ ನಮ್ಮೊಳಗಿನದೇ ಮಗು’.…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 11-11-2023ರ ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪ್ರಸಿದ್ಧ ಉರಗ ತಜ್ಞ, ಸಾಹಿತಿ ಗುರುರಾಜ್ ಸನಿಲ್ ಮಾತನಾಡುತ್ತಾ “ಹಾವುಗಳ ಬಗ್ಗೆ ಬಹಳಷ್ಟು ತಪ್ಪು ನಂಬಿಕೆಗಳಿದ್ದು, ಅದನ್ನು ಹೋಗಲಾಡಿಸದಿದ್ದರೆ ಅದರ ಅಡ್ಡ ಪರಿಣಾಮ ಪರಿಸರ ಮತ್ತು ನಮ್ಮ ಮೇಲಾಗುವ ಸಾಧ್ಯತೆ ಇರುತ್ತದೆ. ಭಯವನ್ನು ಗೆಲ್ಲಲಿಕ್ಕೆ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಸಾಧ್ಯ. ತಮ್ಮ ಜೀವನದಲ್ಲಿ ಪ್ರಾರಂಭದಿಂದಲೇ ಭಯವನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಬೇಕು” ಎಂಬ ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಆಡಿಗ , ಕೋಶಾಧಿಕಾರಿ ವಿ…
ಮಂಗಳೂರು : ತುಳುಕೂಟ (ರಿ) ಕುಡ್ಲ ಇದರ ಬಂಗಾರ್ ಪರ್ಬೊ ಸರಣಿ ವೈಭವೊ -09 ಕಾರ್ಯಕ್ರಮವು ದಿನಾಂಕ 18-11- 2023ನೇ ಶನಿವಾರದಂದು ಅಪರಾಹ್ನ 1:30 ಗಂಟೆಗೆ ಸುರತ್ಕಲ್ಲಿನ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ತುಳುವೆರೆ ತುಡರ ಪರ್ಬೊ …. ಎಂಬ ಶಿರೋನಾಮೆಯೊಂದಿಗೆ ನಡೆಯಲಿದೆ. ಹೆಸರಾಂತ ಉದ್ಯಮಿ, ಅಗರಿ ಎಂಟರ್ ಪ್ರೈಸಸಿನ ಮಾಲಕ ಅಗರಿ ಶ್ರೀ ರಾಘವೇಂದ್ರರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಆದ ಲ. ಭಾಸ್ಕರ ಸಾಲ್ಯಾನ್, ವಿದ್ಯಾದಾಯಿನೀ ಪ್ರೌಢ ಶಾಲೆಯ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರೂ ಆದ ಶ್ರೀ ಸುಧಾಕರ ರಾವ್ ಪೇಜಾವರ, ವಿದ್ಯಾದಾಯಿನೀ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಕೆ.ಬಾಲಚಂದ್ರ ಇವರುಗಳು ಭಾಗವಹಿಸಲಿದ್ದಾರೆ. ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ವೆಂಕಟ್ರಮಣ ಭಟ್ ತುಳುವೆರೆ ತುಡರ ಪರ್ಬ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ತುಳು…
ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷ ಸಂಕ್ರಾಂತಿ’ ಭಾವ ಬಣ್ಣಗಳ ಒಡ್ಡೋಲಗ ದಿನಾಂಕ 18-11-2023ರಂದು ರಾತ್ರಿ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ‘ಭೀಷ್ಮ ಪರ್ವ’ ಯಕ್ಷಗಾನ ಪ್ರಸಂಗದಲ್ಲಿ ಭೀಷ್ಮನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ವಿಶ್ವನಾಥ್ ಹೆನ್ನಾಬೈಲ್, ಅರ್ಜುನನಾಗಿ ಚಂದ್ರಹಾಸ ಹೊಸಪಟ್ಣ ಮತ್ತು ಧರ್ಮರಾಯನಾಗಿ ಮಂಜುನಾಥ ರಾವ್ ಚೌಕುಳಮಕ್ಕಿ ಪಾತ್ರ ನಿರ್ವಹಿಸಲಿದ್ದಾರೆ. ಭೀಷ್ಮನ ಬದುಕು, ಅದೆಷ್ಟು ಒಗಟುಗಳ ಸಂಕಥನ ! ಭೀಷ್ಮನಿಗಿಂತ ಮುಂಚೆ ಹುಟ್ಟಿದ ಏಳು ಮಂದಿ ಮಕ್ಕಳನ್ನು ಹೆತ್ತಬ್ಬೆ ಗಂಗಾ ಭವಾನಿ ನದಿಗೆಸೆಯುವಾಗ, ಸ್ತ್ರೀ ವ್ಯಾಮೋಹದಿಂದ ಖಂಡಿಸದೇ ಉಳಿದವನು ಶಂತನು!. ಭೀಷ್ಮನ ಸರದಿ ಬಂದಾಗ, ಈ ಮಗು ಬೇಕು ಎನ್ನುತ್ತಾನೆ ಶಂತನು. ಆ ಕಾರಣಕ್ಕಾಗಿ ಗಂಗೆ ದೂರವಾಗುತ್ತಾಳೆ, ಮಗ ಬದುಕುಳಿಯುತ್ತಾನೆ!. ತಂದೆಗೋಸುಗ ಸತ್ಯವತಿಯನ್ನು ಕರೆ ತರುವಾಗ ಕಂದರನ ಇಚ್ಚೆಯಂತೆ ವ್ಯವಹರಿಸುತ್ತಾನೆ ದೇವವ್ರತ. ವಧುವನ್ನು ಮನೆ ತುಂಬಿಕೊಳ್ಳುವ ಸಲುವಾಗಿ, ಆಡಿದ ಮಾತಿನಂತೆ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾನೆ. ಆದರೆ ಹಸ್ತಿನಾವತಿಗೆ ಒಳಪಡದೆ ಸ್ವತಂತ್ರ ರಾಜ್ಯವಾಗಿದ್ದ ಕಾಶಿಯ…
ಉಡುಪಿ : ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ಕೊಡಲ್ಪಡುವ ಐದನೇ ವರುಷದ ‘ಕೃಷ್ಣಪ್ರೇಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 19-11-2023 ಆದಿತ್ಯವಾರದಂದು ಸಂಜೆ 5-30ರಿಂದ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯ ವಿಮರ್ಶಕರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿಕೊಳ್ಳಲಿದ್ದಾರೆ. ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಧು ಸಾಲ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿಯ ಹಿರಿಯ ಉದ್ಯಮಿಗಳಾದ ಶ್ರೀ ವಿಶ್ವನಾಥ್ ಶೆಣೈಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ನೃತ್ಯ ಸಾಹಿತ್ಯ ಕ್ಷೇತ್ರದ ಸಾಧಕಿ ವಿದುಷಿ ಬಿ.ಸುಮಂಗಲಾ ರತ್ನಾಕರ್ ಮಂಗಳೂರು, ನೃತ್ಯವಾದ್ಯ ಸಂಗೀತ ಕ್ಷೇತ್ರದ ಸಾಧಕರಾದ ಶ್ರೀ ಬಾಲಚಂದ್ರ ಭಾಗವತ್ ಉಡುಪಿ, ನೃತ್ಯವರ್ಣಾಲಂಕಾರ ಕ್ಷೇತ್ರದ ಸಾಧಕ ಶ್ರೀ ರಮೇಶ್ ಕೆ. ಪಣಿಯಾಡಿ, ನಾಟಕ, ಸಂಗೀತ ಮತ್ತು ನಿರ್ದೇಶನದ ಸಾಧಕ ಶ್ರೀ ಗುರುರಾಜ್ ಮಾರ್ಪಳ್ಳಿ, ನಾಟಕದ ನಟನಾ…
ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್, ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ‘ಮಂಗಳೂರು ಸಂಗೀತೋತ್ಸವ 2023’ ಕಾರ್ಯಕ್ರಮವನ್ನು ದಿನಾಂಕ 22-11-2023ರಿಂದ 26-11-2023ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22-11-2023ರಂದು ಸಂಜೆ ಗಂಟೆ 4.45ಕ್ಕೆ ಉದ್ಘಾಟನಾ ಸಮಾರಂಭ ಹಾಗೂ ಬೆಂಗಳೂರಿನ ಶ್ರೀಮತಿ ಗೀತಾ ರಮಾನಂದ್ ಇವರಿಂದ ವೀಣಾವಾದನ, ದಿನಾಂಕ 23-11-2023ರಂದು ಸಂಜೆ ಗಂಟೆ 5ಕ್ಕೆ ವಿಶಾಖಪಟ್ಟಣದ ಶ್ರೀಮತಿ ರಮ್ಯಾ ಕಿರಣ್ಮಯಿ ಚಗಂಟಿಯವರಿಂದ ಹಾಡುಗಾರಿಕೆ, ದಿನಾಂಕ 24-11-2023ರಂದು ಸಂಜೆ ಗಂಟೆ 5ಕ್ಕೆ ಬೆಂಗಳೂರಿನ ಶ್ರೀ ಹೇಮಂತ್ ಮತ್ತು ಶ್ರೀ ಹೇರಂಭ ಇವರಿಂದ ಕೊಳಲುವಾದನ, ದಿನಾಂಕ 25-11-2023ರಂದು ಮಧ್ಯಾಹ್ನ ಗಂಟೆ 3ಕ್ಕೆ ಚೆನ್ನೈಯ ಶ್ರೀ ಅನಿರುದ್ಧ್ ಸುಬ್ರಮಣಿಯನ್ ಇವರಿಂದ ಹಾಡುಗಾರಿಕೆ ಹಾಗೂ ಸಂಜೆ ಗಂಟೆ 5ಕ್ಕೆ ಪುತ್ತೂರಿನ ಶ್ರೀಮತಿ ಸುಚಿತ್ರಾ ಹೊಳ್ಳ ಇವರಿಂದ ಹಾಡುಗಾರಿಕೆ, ದಿನಾಂಕ 26-11-2023ರಂದು ಬೆಳಿಗ್ಗೆ ಗಂಟೆ 10ಕ್ಕೆ ಚೆನ್ನೈಯ ಶ್ರೀ ಪಾಲ್ಘಾಟ್…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಶ್ರೀ ಹರಿ ಚರಿತ್ರೆ’ ಏಕಾದಶ ಸರಣಿಯು ದಿನಾಂಕ 19-11-2023ರಿಂದ 25-11-2023ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ಈ ಸಮಾರಂಭದ ಕರೆಯೋಲೆಯನ್ನು ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದ ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ.ಜೆ. ಶೆಟ್ಟಿಯವರು ಮಾತನಾಡುತ್ತಾ “ಕರ್ನಾಟಕದಲ್ಲಿ ಪರಿಶುದ್ಧವಾದ ಕನ್ನಡ ಭಾಷೆಯನ್ನು ಬಳಸುವ ಒಂದು ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಕಳೆದ ಹತ್ತು ವರ್ಷಗಳಿಂದ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಪ್ರತೀ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆಯ…