Subscribe to Updates
Get the latest creative news from FooBar about art, design and business.
Author: roovari
08-03-2023, ಧರ್ಮಸ್ಥಳ: ‘ಸಾಹಿತ್ಯವನ್ನು ಪೋಷಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳ ಪಾಲೂ ಬಹುಮುಖ್ಯ’- ಡಾ.ಹೇಮಾವತಿ.ವೀ.ಹೆಗ್ಗಡೆ ‘ಬರೆಹಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತರ್ಜಾಲ ಲಭ್ಯವಾಗದ ಗ್ರಾಮೀಣ ಭಾಗಗಳಲ್ಲಿ ಓದಿಗೆ ಲಭ್ಯವಾಗುವ ಸ್ಥಳೀಯ ಪತ್ರಿಕೆಗಳು ಸುತ್ತಮುತ್ತಲಿನ ಘಟನೆಗಳ ಬಗ್ಗೆ ಮಾಹಿತಿಗಳನ್ನು ಕೊಡುವುದಲ್ಲದೆ ಜನರನ್ನು ಮತ್ತಷ್ಟು ಆತ್ಮೀಯರಾಗಲು ಸಹಕಾರಿಯಾಗುತ್ತದೆ. ಆದುದರಿಂದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು ಓದುಗರನ್ನು ಹೆಚ್ಚು ತಟ್ಟಬಲ್ಲದು. ಸ್ತ್ರೀಪರ ಚಿಂತನೆಗಳು ಅಂಕಣಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಕಟವಾಗಬೇಕಿದೆ’ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರು ಬರೆದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗಿ ರೈ ದತ್ತಿನಿಧಿ ಪುರಸ್ಕೃತ ಲೇಖನ ಸಂಕಲನ ‘ಅವಲಕ್ಕಿ ಪವಲಕ್ಕಿ’ ಬಿಡುಗಡೆ ಹಾಗೂ ಸಾಹಿತ್ಯ ಪ್ರಕಾಶನದ ಲಾಂಛನ ಅನಾವರಣಗೊಳಿಸಿ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅಕ್ಷತಾರಾಜ್ ಪೆರ್ಲ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ, ರೇಡಿಯೋ ನಿನಾದ ಸಮುದಾಯ ಬಾನುಲಿಯ ಕಾರ್ಯಕ್ರಮ ಸಂಯೋಜಕರಾದ ವಿ.ಕೆ ಕಡಬ,…
ವೀಣಾ ಶ್ರೀನಿವಾಸ್ ಅವರು ಮಂಗಳೂರಿನ ಪ್ರಖ್ಯಾತ ಚಿತ್ರ ಕಲಾವಿದೆಯಾಗಿದ್ದು, ಭಾರತದ ಕೊಂಕಣ ಕರಾವಳಿಯ ದೇವಾಲಯಗಳ ಒಳ ಮತ್ತು ಹೊರ ಗೋಡೆಯ ಮೇಲಿನ ಚಿತ್ರಕಲೆಯಾದ ಕಾವಿ ಮ್ಯೂರಲ್ ಪೇಂಟಿಂಗ್‌ಗಳಲ್ಲಿ ಆಸಕ್ತಿಯ ನವೀಕರಣವನ್ನು ಮಾಡುವ ಮತ್ತು ರಚಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ವೀಣಾ ಸ್ವತಃ ವಿವಿಧ ಕಲಾ ಪ್ರಕಾರಗಳಿಗೆ ಅಪರಿಚಿತರಲ್ಲದ ಕುಟುಂಬದಲ್ಲಿ ಜನಿಸಿದರು, ಅವರ ಅಜ್ಜ ದಿವಂಗತ ವೆಂಕಟರಾಯ ಕಾಮತ್, ಸಮರ್ಪಿತ ಶಿಕ್ಷಕರೂ ಹಾಗೂ ಮುಂಬೈನ ಪ್ರತಿಷ್ಠಿತ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನ ವಿದ್ಯಾರ್ಥಿಯೂ ಆಗಿದ್ದರು.ವೀಣಾ ಶ್ರೀನಿವಾಸ ಅವರು ಹಿರಿಯ ಕಲಾವಿದರಾದ ಶ್ರೀ ಮಾಧವ ರಾವ್ ಪಾವಂಜೆ ಅವರಿಂದ ಲಲಿತಕಲೆಗಳ ತರಬೇತಿಯನ್ನು ಪಡೆದರು. ಹದಿನಾರನೇ ಶತಮಾನದಲ್ಲಿ ಗೋವಾದ ಅನೇಕ ಹಿಂದೂ ದೇವಾಲಯಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಜಾನಪದ ಕಲೆಯ ಒಂದು ರೂಪವಾದ ಕಾವಿ ಮ್ಯೂರಲ್ ಪೇಂಟಿಂಗ್‌ಗಳಲ್ಲಿ ವೀಣಾರವರು ತನ್ನ ಸ್ಥಾನವನ್ನು ಕಂಡುಕೊಂಡರು. ಅವರು ಈ ರೀತಿಯ ಕಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ವ್ಯಾಪಕವಾಗಿ ಪ್ರಯಾಣಿಸಿದರು ಮತ್ತು ತೀವ್ರ ಸಂಶೋಧನೆಯೊಂದಿಗೆ ಅದನ್ನು ಅನುಸರಿಸಿದರು. ಈ ಪ್ರಕಾರದ ಕಲೆಗೆ ನಿರಂತರ…
“ಅಮಣೀ …. ಎಷ್ಟು ಹೊತ್ತು ಬೇಗ ತಯಾರಾಗು ಮಾಸ್ಟ್ರು ಬರ್ತಾರೆ” “ಆ … ಅಪ್ಪಯ್ಯ ಬಂದೆ ಬಂದೆ” “ಅಮಣೀ ಗಂಜಿಗೆ ತುಪ್ಪ ಹಾಕಿದ್ದೇನೆ ಆರಿ ತಣ್ಣಗಾಗ್ತದೆ” “ಈಗ ಹಸಿವಿಲ್ಲ, ಸ್ವಲ್ಪ ಮತ್ತೆ ಊಟ ಮಾಡ್ತೇನಮ್ಮಾ” ಈ ಸಂಭಾಷಣೆಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿವೆ. 1976ರಲ್ಲಿ ನಾನು ಉಡುಪಿಯಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದು ಲಾಲ್ ಬಾಗ್ ನ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದೆ. ನನ್ನ ಪತಿ ಬೈಕಾಡಿ ಜನಾರ್ದನ ಆಚಾರ್ ಸಂಗೀತದಲ್ಲಿ ನನಗಿದ್ದ ಆಸಕ್ತಿ ಕಂಡು ನನ್ನನ್ನು ಬಲ್ಲಾಳ್ ಬಾಗ್ ನಲ್ಲಿರುವ ಶಾರದಾಮಣಿಯ ಮನೆಗೆ ಕರೆತಂದು ಅವಳ ತಂದೆ ಎನ್.ಕೆ. ಸುಂದರಾಚಾರ್ ರನ್ನು ಪರಿಚಯಿಸಿದರು. ಮುಂದೆ ಇವರ ಸಂಸಾರದ ಸದಸ್ಯರಲ್ಲಿ ನಾನೂ ಒಬ್ಬಳಾದೆ. ಶ್ರೀ ಎನ್.ಕೆ. ಸುಂದರಾಚಾರ್ ಹಾಗೂ ಶ್ರೀಮತಿ ವಸಂತಿ ಎಸ್. ಅಚಾರ್ ಇವರ ಸುಪುತ್ರಿ ಶ್ರೀಮತಿ ಶಾರದಾಮಣಿ. ಒಬ್ಬ ಅಣ್ಣ ಮೂರು ಜನ ತಮ್ಮಂದಿರ ಮಧ್ಯೆ ಜನಿಸಿದ ತಂದೆ-ತಾಯಿಯ ಪ್ರೀತಿಯ ಮಗಳು. ಬಾಲ್ಯದಿಂದಲೇ ನಿಧಾನದ ಮಾತು, ಯಾರ ಮನಸ್ಸನ್ನೂ ನೋಯಿಸುವ…
08 ಮಾರ್ಚ್ 2023, ಮಂಗಳೂರು: ಕಾಡು ಹಕ್ಕಿಯ ಪಾಡು …… ಈ ಹುಡುಗಿಗೆ ಏನೆಲ್ಲಾ ಗೊತ್ತು ? ಬಹುಶಃ 12 ವರ್ಷಗಳ ಮೊದಲು ನಾನು ಕೊಪ್ಪದಲ್ಲಿ ಮಕ್ಕಳ ಶಿಬಿರದ ಆಯೋಜನೆಯ ಯೋಚನೆಯಲ್ಲಿದ್ದೆ. ಆಗ ನೆನಪಾದವಳು ಅಕ್ಷತಾ. ಆ ಕಾಲಕ್ಕೆ ನೆನಪಿನ ಶಕ್ತಿಯ ಕಾರಣಕ್ಕೆ “ವಂಡರ್ ಕಿಡ್” ಎಂದೇ ಸುದ್ಧಿಯಲ್ಲಿದ್ದ ಅಕ್ಷತಾಳನ್ನು “ನಮ್ಮೂರಲ್ಲಿ ಮಕ್ಕಳಿಗೊಂದು ಕ್ಯಾಂಪ್ ಮಾಡ್ಲಿಕ್ಕಿದೆ, ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು” ಎಂದು ಕೇಳಿದ್ದೆ. ಕ್ಯಾಂಪ್ ಚಂದ ಮಾಡುವ ಸರ್ ಎಂದು ಬಂದವಳು ಇಡೀ ಕ್ಯಾಂಪ್ ನ ಜವಾಬ್ದಾರಿ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಳು. ಹಾಡು, ನೃತ್ಯ, ನಾಟಕ, ಮೆಮೊರಿ, ಯಕ್ಷಗಾನ ಅಬ್ಬಾ ಎಂಥ ಪ್ರತಿಭೆ ! ಎಂದು ಕಣ್ಣರಳಿಸಿ ನೋಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಆಕೆಯನ್ನು ಗಮನಿದ್ದೇನೆ. ಸದಾ ಏನಾದರೊಂದು ಹುಡುಕಾಟಗಳಲ್ಲಿ ವ್ಯಸ್ತಳಾಗಿರುವ ಅಕ್ಷತಾ ಉತ್ಸಾಹದ ಚಿಲುಮೆ. ತನ್ನ ಸುತ್ತಲಿನವರೊಡನೆ ಮಾತಾಡ್ತಾ, ಆ ಪರಿಸರದಲ್ಲೊಂದು ಜೀವಕಳೆಯನ್ನು ಸೃಷ್ಟಿಸುವ ಕಲೆ ಆಕೆಗೆ ಅನಾಯಸವಾಗಿ ಸಿದ್ದಿಸಿದೆ. ಕೈಯಲ್ಲೊಂದು ಟಮ್ಕಿ ಹಿಡಿದು ಹಾಡಿಗೆ ನಿಂತರೆ ಕಂಚಿನ ಕಂಠಕ್ಕೆ ಮನ…
08 ಮಾರ್ಚ್ 2023, ಮಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸರೋಜಿನಿ ಶೆಟ್ಟಿಯವರು ಕೈಯಾಡಿಸದ ರಂಗವಿಲ್ಲ ಅನ್ನೋ ಮಾತು ಸರೋಜಿನಿ ಶೆಟ್ಟಿಯವರಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತದೆ. ರಂಗಭೂಮಿಯನ್ನು ಅನೇಕ ಕಲಾವಿದರು ತಮ್ಮ ಅಭಿನಯದಿಂದ ಶ್ರೀಮಂತ ಗೊಳಿಸಿದ್ದಾರೆ. ಇಂತವರ ಸಾಲಿನಲ್ಲಿ ಮಿನುಗುತ್ತಿರುವ ತಾರೆ ಸರೋಜಿನಿ ಶೆಟ್ಟಿಯವರು, ಬಹುಭಾಷಾ ಅಭಿನೇತ್ರಿ, ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳು, ಸನ್ಮಾನಗಳು, ದಕ್ಷಿಣೋತ್ತರ ಮೇರು ಕಲಾವಿದರೊಂದಿಗೆ ಅಭಿನಯಿಸಿದ ಕೀರ್ತಿ, ಒಂದರ್ಥದಲ್ಲಿ ರಂಗವನ್ನಾಳಿದ ನಟಿಯಾದರೂ ಗತ್ತಿಲ್ಲ, ಅಹಂಕಾರವಿಲ್ಲ, ಸೊಡುಕಿನ ಮಾತಿಲ್ಲ, ಸಾಧನೆಯ ಶಿಖರವೇರಿದ್ದರೂ ಇನ್ನೂ ತಳದಲ್ಲೇ ಇದ್ದೇನೆಂಬ ವಿನೀತ ಭಾವನೆ, ವಿಧೇಯತೆ, ಮೃದುವಾದ ಮಾತು. ಇದು ಸರೋಜಿನಿ ಶೆಟ್ಟಿಯವರು. ಅಪರೂಪದಲ್ಲಿ ಅಪರೂಪ ಅನ್ನಬಹುದಾದ ಮೃಣ್ಮಯ ಮೂರ್ತಿ ಪೊಳಲಿಯ ಶ್ರೀ ರಾಜ ರಾಜೇಶ್ವರಿ ತಾಯಿಯ ಸನಿಹದ ಬೊಳ್ಳೂರು ಎಂಬಲ್ಲಿ ತಿಮ್ಮಪ್ಪ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಅಕ್ಕರೆಯ ಮಗಳಾಗಿ ಜನಿಸಿದ ಸರೋಜಿನಿ ಶೆಟ್ಟಿಯವರು ತಮ್ಮ ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಪದವಿಪೂರ್ವ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದರು.…
08 ಮಾರ್ಚ್ 2023, ಮಂಗಳೂರು: ಇತ್ತೀಚಿಗೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವ ಮೂಲಕ ಮಂಗಳೂರಿನ ಒಬ್ಬಳು ಹುಡುಗಿ ಸುದ್ದಿಯಾಗಿದ್ದಳು. ಆಕೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವುದಷ್ಟೇ ಅಲ್ಲ ಸುಂದರವಾಗಿ ಬರೆಯಬಲ್ಲಳು ಕೂಡ. ಎರಡು ಕೈಗಳಲ್ಲಿ ಏಕಕಾಲದಲ್ಲಿ ಅತ್ಯಂತ ವೇಗವಾಗಿ ಬರೆಯುವ ಮೂಲಕ ಆಕೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದಳು. ಆಶ್ಚರ್ಯವೆಂದರೆ ಇವೆಲ್ಲವನ್ನೂ ಈಕೆ ಸಾಧಿಸಿದ್ದು ಯಾವುದೇ ಮೆಂಟರ್ ಮೂಲಕ ಅಲ್ಲ, ಕರೋನ ಕಾಲದಲ್ಲಿ ಸ್ವ ಪ್ರಯತ್ನದ ಮೂಲಕ. ಮಂಗಳೂರು ನಗರದ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ದಂಪತಿಯ ಸುಪುತ್ರಿ ಆದಿ ಸ್ವರೂಪಳೇ ಆ ಹುಡುಗಿ. ಇದಕ್ಕಿಂತಲೂ ಮೊದಲು ಗುಂಪಿನಲ್ಲಿ ರುಬಿಕ್ ಕ್ಯೂಬ್ ಮೊಸೈಕ್ ನಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾಳೆ . ಆಬಳಿಕ ವರ್ಷಕ್ಕೊಂದರಂತೆ ವಿಶ್ವ ದಾಖಲೆಗಳನ್ನು ಮಾಡುತ್ತಾ ಬಂದಿದ್ದಾಳೆ. ಸತತ ಛಲ ಮತ್ತು ಪರಿಶ್ರಮದಿಂದ ಬರೆಯುವುದರಲ್ಲಿ ಸವ್ಯಸಾಚಿambidextrous ಎನಿಸಿಕೊಂಡ ಈಕೆ ಈಗ 20 ವಿವಿಧ ಶೈಲಿಗಳಲ್ಲಿ ಆರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲಳು. ಇನ್ನು ಅನೇಕ ಅಚ್ಚರಿಗಳು ಇವಳ ಜೀವನದ…
08 ಮಾರ್ಚ್ 2023, ಮಂಗಳೂರು: “ಸಾಧನೆಗೆ ಯಾವುದೇ ನ್ಯೂನತೆಯು ಅಡ್ಡಿಯಲ್ಲ” ಎಂಬಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿಯ ಚಿತ್ರಕಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕು. ಸುಧಾರತ್ನ ಕೆ.ಎಸ್. ಇವರು ತಮ್ಮ ದೈಹಿಕ ಅಸಾಮರ್ಥ್ಯ (ಕೈ ಕಾಲುಗಳ ನ್ಯೂನತೆ, ನರಗಳ ದೌರ್ಬಲ್ಯ)ದ ನಡುವೆಯೂ ಜೇನ್ ಪರಿಶ್ರಮ. ಆತ್ಮ ವಿಶ್ವಾಸ, ಸಹೃದಯಿಗಳ ಪ್ರೋತ್ಸಾಹದಿಂದ ಪ್ರಬುದ್ಧ ಕಲಾವಿದೆಯಾಗಿ ರಾಜ್ಯ ಸರಕಾರದ ಪುರಸ್ಕರಕ್ಕೆ ಭಾಜನರಾಗಿದ್ದಾರೆ. ಮಂಗಳೂರಿನ ನೆಕ್ಕಿಲ ಗುಡ್ಡೆಯ ಶ್ರೀ ಶಂಕರ ನಾರಾಯಣ ಭಟ್ ಕೆ. ಹಾಗೂ ಶ್ರೀಮತಿ ಶಂಕರಿ ಈ ದಂಪತಿಗಳ ಸುಪುತ್ರಿಯಾಗಿರುವ ಈಕೆ ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ಶ್ರೀಮತಿ ಶಾಲಿನಿ (ಚಿತ್ರಕಲಾ ಶಿಕ್ಷಕಿ) ಇವರ ಸಹನಾ ತರಬೇತಿ, ಅಣ್ಣನಾದ ರವಿಚಂದ್ರ ಕೆ. ಹಾಗೂ ಮನೆ, ಶಾಲೆಯವರೆಲ್ಲಾ ಸಹಾಯ ಸಹಕಾರ ಪ್ರೋತ್ಸಾಹದಿಂದ ಚಿತ್ರಕಲೆ ಅದರಲ್ಲಿಯೂ ಮುಖ್ಯವಾಗಿ ಜಲವರ್ಣದಲ್ಲಿ ಹೆಚ್ಚು ಪರಿಣತಿಯನ್ನು ಪಡೆದಿದ್ದಾರೆ. ಪೆನ್ಸಿಲ್ ಶೇಡಿಂಗ್, ತೈಲವರ್ಣ, ಫ್ಯಾಬ್ರಿಕ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್ ಮುಂತಾದ ಪ್ರಕಾರಗಳಲ್ಲಿಯೂ ಹೆಚ್ಚಿನ ಪರಿಣತಿಯನ್ನು…
08 ಮಾರ್ಚ್ 2023, ಮಂಗಳೂರು: ಶಾಸ್ತ್ರೀಯ ಸಂಗೀತ ರಸ, ರಾಗ, ಲಯ, ಶ್ರುತಿ, ಸ್ವರ, ಭಾವ, ಆಧ್ಯಾತ್ಮದ ಮಿಳಿತಗಳ ನಿತ್ಯ ಸಂಜೀವಿನಿ, ತಾಯಿ ಸರಸ್ವತಿಯ ಅನುಗ್ರಹ, ಪ್ರಕೃತಿಯೊಂದಿಗೆ ಮನುಕುಲದ ಅವಿನಾಭಾವ ಸಂಬಂಧವೂ ಹೌದು, ಅದರಲ್ಲೂ ಭಾರತೀಯ ಸಂಸ್ಕೃತಿಯ ಮೂಲ ದ್ರವ್ಯ ಸಂಗೀತವನ್ನು ಕೇಳದ ಕಿವಿಗಳಿಲ್ಲ. ಕಲಾವಿದರ ಸಿರಿಕಂಠಗಳಿಗೆ, ನೈಪುಣ್ಯತೆಗೆ, ಬೆರಗಾಗದ ಮನಸ್ಸುಗಳಿಲ್ಲ. ಭಗವಂತನ ಸಾಕ್ಷಾತ್ಕಾರಕ್ಕೆ ಇದೂ ಒಂದು ಸಾಧನ. ಇಹಪರಗಳೊಡನೆ ನುಲಿ-ನಲಿದು ಹೊಯ್ದಾಡುವ ಮನಸುಗಳಿಗೆ, ಅದರಲ್ಲೂ ಕಲುಷಿತಗೊಂಡಿರುವ ಇಂದಿನ ಸಮಾಜದ ಪುನರ್‌ನಿರ್ಮಾಣಕ್ಕೆ ಸಂಗೀತ ದಾರಿ ದೀಪವಾಗಬಲ್ಲದು ಎಂದರೆ ಅತಿಶಯೋಕ್ತಿಯಲ್ಲ. ಮಂಗಳೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳಲ್ಲಿ ಹಿರಿಯ ಹಾಗೂ ಪ್ರೌಢ ಕಲಾವಿದೆಯಾದ. ವಿದುಷಿ ಶ್ರೀಮತಿ ಸತ್ಯವತಿ ಮುಡಂಬಡಿತ್ತಾಯ 1943 ರಲ್ಲಿ ಜನಿಸಿ, ತಮ್ಮ ಎಳವೆಯಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಅತ್ಯಂತ ಆಸಕ್ತರಾಗಿ ಕಲಾನಿಕೇತನ, ಸಂಗೀತ ಶಾಲೆಯ ಗುರುಗಳಾದ ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು, ಬಾಲ ಕಲಾವಿದರಾಗಿ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿರುವ ತಾವು ಕರ್ನಾಟಕ ಪ್ರೌಢ…
08 ಮಾರ್ಚ್ 2023, ಮಂಗಳೂರು: ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ. ಎಮ್. ರೋಹಿಣಿಯವರು ಕನ್ನಡಾಂಬೆಯ ಪ್ರತಿಭಾವಂತ ಸುಪುತ್ರಿ. ತನ್ನಲ್ಲಿರುವ ಕನ್ನಡದ ದಿವ್ಯ ಜ್ಯೋತಿಯಿಂದ ಕರಾವಳಿ ಲೇಖಕಿಯರ ವಾಚಿಕೆಯರ ಸಂಘದ ಮೂಲಕ ಅನೇಕ ಕಿರು ಹಣತೆಗಳನ್ನು ಹಚ್ಚಿ ನಾಡಿಗೆ ಸಮರ್ಪಿಸಿದ್ದಾರೆ. ಇಂದಿಗೂ ಈ ಕಾಯಕದಲ್ಲಿ ತೊಡಗಿಸಿಕೊಂಡ ಇವರ ಮಾರ್ಗದರ್ಶನದಿಂದ ಬೆಳಗಿದ ನೂರಾರು ಹಣತೆಗಳು ನಾಡಿನಾದ್ಯಂತ ಪಸರಿಸಿ ಕನ್ನಡದ ಬೆಳಕನ್ನು ಚೆಲ್ಲುತ್ತಿವೆ. ಅನ್ಯ ಭಾಷಾ ಹಾವಳಿಯಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಇಂದು ಬಿ.ಎಂ ರೋಹಿಣಿಯವರಂತಹ ವ್ಯಕ್ತಿಗಳ ಮಾರ್ಗದರ್ಶನ ಬೇಕು. ನವ್ಯತೆಯ ಹೆಸರಿನಲ್ಲಿ ಇಂದು ಜನ ಭಾಷಾ ಶುದ್ಧತೆ ಹಾಗೂ ವ್ಯಾಕರಣ ಬದ್ಧತೆಯನ್ನು ಮರೆತಂತಿದೆ. ಇಂತಹ ಸನ್ನಿವೇಶದಲ್ಲಿ ಬಿಎಂ ರೋಹಿಣಿಯವರಂತಹ ಭಾಷಾ ಪ್ರಭುದ್ಧರ ಅವಶ್ಯಕತೆ ನಮಗಿದೆ. ಈ ನಿಟ್ಟಿನಲ್ಲಿ ಇವರ ಸೇವೆ ಶ್ಲಾಘನೀಯ. ಬಿ.ಎಂ ರೋಹಿಣಿಯವರು 19 44ರಲ್ಲಿ ಬಂಗ್ರಮಂಜೇಶ್ವರದಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ಬರಹ ಸಂಶೋಧನೆ ಹಾಗೂ ಅಧ್ಯಯನ ಇವರ ಪ್ರವೃತ್ತಿಗಳಾಗಿವೆ. ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ…
08 ಮಾರ್ಚ್ 2023, ಮಂಗಳೂರು : ಉರ್ವದ ಶ್ರೀಕೃಷ್ಣ ಮಂದಿರದಲ್ಲಿ ನಮ್ಮ ತಂಡದ ಪ್ರಥಮ ಯಕ್ಷಗಾನ ಕಾರ್ಯಕ್ರಮ “ಕೃಷ್ಣಾರ್ಜುನ ಕಾಳಗ” ಯಶಸ್ವಿಯಾಗಿ ನಡೆಯಿತು. ನಮ್ಮ ಬೋಳೂರು ಗ್ರಾಮದ ಕಲಾಸಕ್ತ ಮಹಿಳೆಯರನ್ನು ಸೇರಿಸಿ ನಾನು ನೇತೃತ್ವ ವಹಿಸಿದ್ದ ಕಾರ್ಯಕ್ರಮವದಾಗಿತ್ತು. ಕಾರ್ಯಕ್ರಮ ಮುಗಿದ ನಮ್ಮನ್ನು ಮಾತನಾಡಿಸಿದವರಲ್ಲಿ ಓರ್ವ ಮಹಿಳೆ ಎಷ್ಟೊಳ್ಳೆಯ ಕಾರ್ಯಕ್ರಮ. ನನಗೂ ವೇಷ ಮಾಡಬಹುದಿತ್ತು. ಒಮ್ಮೆ ಯಕ್ಷಗಾನದಲ್ಲಿ ವೇಷ ಹಾಕಿ ಕುಣಿಯಬೇಕೆಂಬ ಹಂಬಲವಿದೆ. ಬಾಲ್ಯದಲ್ಲಿ ಶಾಲಾ ಕಾರ್ಯಕ್ರಮದಲ್ಲಿ ನರ್ತಿಸಿದ ಅನುಭವವಿದೆ. ಧೈರ್ಯವಿದೆ. ಮುಂದಿನ ನಿಮ್ಮ ಕಾರ್ಯಕ್ರಮ ಇದ್ದಲ್ಲಿ ನನಗೂ ಪುಟ್ಟ ಅವಕಾಶ ಸಿಗಬಹುದೇ? 66 ವಯಸ್ಸಿನ ನನ್ನನ್ನು ತಂಡಕ್ಕೆ ಸೇರಿಸಲು ಸಾಧ್ಯ ಆದೀತೋ? ಎಂಬುದಾಗಿ ಕೇಳಿದರು. ಸಾಧನೆಗೆ ವಯಸ್ಸು ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಉತ್ತರಿಸಿ, ನೀವು ಬರ್ತೀರಾದರೆ ಅವಕಾಶ ಕೊಡೋಣ ಎಂದೆ. ಮುಂದಿನ ವರುಷದ ಅದೇ ಸ್ಥಳದ ಕಾರ್ಯಕ್ರಮದಲ್ಲಿ ಮತ್ತೆ ನಮ್ಮ ತಂಡಕ್ಕೆ ಅವಕಾಶ ದೊರೆತಾಗ ತಂಡಕ್ಕೆ ಆಹ್ವಾನಿಸಿ, ಆಗ ತಂಡಕ್ಕೆ ಯಕ್ಷಗಾನ ಶಿಕ್ಷಕರಾಗಿ ಮಾರ್ಗದರ್ಶನ ಮಾಡುತ್ತಿದ್ದ ಶ್ರೀ ರಾಕೇಶ್…