Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ನಾವೀನ್ಯತೆ (ಇನೋವೇಶನ್) ತಾರ್ಕಿಕ (ಸ್ಕಾಲ ಸ್ಟಿಕ್) ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳಿಗೆ ಜಿಲ್ಲಾಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 5 ರಿಂದ 18 ವರ್ಷದೊಳಗಿನವರು ತಮ್ಮ ಸಾಧನೆಯನ್ನು ದೃಢೀಕರಿಸುವ ದಾಖಲೆಗಳೊಂದಿಗೆ ದಿನಾಂಕ 31 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬೇಕು. ಜನನ-ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದಮಕ್ಕಳಿಗೆ ಅವಕಾಶವಿಲ್ಲ. ಮಾಹಿತಿ ಅಥವಾ ಅರ್ಜಿ ನಮೂನೆಯನ್ನು ಬಿಜೈ ನಲ್ಲಿರುವ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರ ಕಚೇರಿ ಯಿಂದ ಪಡೆಯಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಕಾಸರಗೋಡು : ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯುವ ‘ಚಿನ್ಮಯ ಫೆಸ್ಟ್’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 07 ಆಗಸ್ಟ್ 2025ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಕೇರಳ ಚಿನ್ಮಯ ಮಿಷನ್ ಇದರ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಜೀ. ಮಾತನಾಡಿ “ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಪ್ರತಿಯೊಬ್ಬ ಸ್ಪರ್ಧಿಯೂ ತನ್ನೊಂದಿಗೆ ಮಾತ್ರ ಸ್ಪರ್ಧಿಸಬೇಕು” ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಪ್ರಸಿದ್ಧ ಲೇಖಕಿ, ಜನತಾಂತ್ರಿಕ ಕಲಾ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷೆ, ಮಾನವ ಹಕ್ಕುಗಳ ಸಂಘದ ರಾಜ್ಯ ಕಾರ್ಯದರ್ಶಿಯೂ ಆಗಿರುವ ಡಾ. ಎಂ. ವಿ. ಮುಂಥಾಸ್ ಮಾತನಾಡಿ “ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಕಲೆಯ ಉದ್ದೇಶ” ಎಂದರು. ವಿದ್ಯಾಲಯದ ಪ್ರಾಂಶುಪಾಲರಾದ ಟಿ. ವಿ. ಸುಕುಮಾರನ್ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು. ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಪೂರ್ಣಿಮಾ ಎಸ್. ಆರ್., ಶ್ರೀಮತಿ ಸಿಂಧು ಶಶೀಂದ್ರನ್, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಾದ ಶೃಕ ಸನತ್…
ಕೋಟ : ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಇವರ ನಾಲ್ಕು ಕಥಾಸಂಕಲನಗಳ ಅನಾವರಣ ಕಾರ್ಯಕ್ರಮವು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಉಪೇಂದ್ರ ಸೋಮಯಾಜಿ ಮಾತನಾಡಿದರು. ‘ನಿನಗಾಗಿ ಹೇಳುವೆ ಕಥೆ ನೂರನು’ ಎಂಬ ಕಥಾಸಂಕಲನವನ್ನು ಹೊನ್ನಾವರದ ಸಹಶಿಕ್ಷಕ ಗಣೇಶ ಹೆಗಡೆ, ‘ಗೆಜ್ಜೆ’ ಕಥಾಸಂಕಲನವನ್ನು ಸುವ್ರತ ಅಡಿಗ, ‘ಹೆಜ್ಜೆ’ ಕಥಾಸಂಕಲನವನ್ನು ಸುಮನ ಹೇರಳೆ ಹಾಗೂ ‘ಹನಿ ಇಬ್ಬನಿ’ ಎಂಬ ಕಥಾ ಸಂಕಲನವನ್ನು ಮಂಜುನಾಥ ಮರವಂತೆ ಪರಿಚಯಿಸಿದರು. ಡಾ. ಟಿ.ಎಂ.ಎ. ವೈ ಮಹಾ ವಿದ್ಯಾಲಯದ ಸಮನ್ವಯಧಿಕಾರಿಗಳಾದ ಡಾ. ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲ ಡಾ. ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿಯವರು ಪುಸ್ತಕ ಅನಾವರಣಗೊಳಿಸಿದರು. ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ್, ಸಹಶಿಕ್ಷಕ ಸುರೇಶ ಮರಕಾಲ, ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕೋಟ ಸಿ.ಎ. ಬ್ಯಾಂಕ್ ಪ್ರಬಂಧಕ…
ಧಾರವಾಡ ಬೇಂದ್ರೆಯವರಷ್ಟು ಶ್ರಾವಣವನ್ನು ಕಂಡರಸಿದ ಕವಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಆ ಕಾರಣದಿಂದಲೇ, ಅಡಿಗರು ಬೇಂದ್ರೆಯನ್ನು ಶ್ರಾವಣ ಪ್ರತಿಭೆ ಎಂದದ್ದು. ಬೇಂದ್ರೆಯ ಪಾಲಿಗೆ ಶ್ರಾವಣ ಬರಿ ಮಾಸವಲ್ಲ. ಅದೊಂದು ಋತುವಿಲಾಸ. ಹುಟ್ಟಿನ ಗುಟ್ಟು ಕಂಡುಕೊಂಡ ಅನುಭವ, ಸೋಜಿಗ ಮತ್ತು ಸೌಂದರ್ಯ. ಶ್ರಾವಣ ಬೇಂದ್ರೆಯವರಿಗೆ ಮೆಚ್ಚಾದ ಬಗೆಗೆ ಅವರ ಮಾತುಗಳಲ್ಲೇ ಹೇಳುವುದಾದರೆ, “ನನ್ನ ಬಾಳುವೆಯದೊಂದು ಶ್ರಾವಣದ ಹಗಲು. ಶ್ರಾವಣ ನನಗೆ ಹೊಸತನವನ್ನು ತರುತ್ತದೆ”. ಈ ಹೊಸತನ- ಶ್ರಾವಣದ ವೈಭವ, ಶ್ರಾವಣ, ಮತ್ತೆ ಶ್ರಾವಣ, ಮತ್ತೆ ಶ್ರಾವಣಾ ಬಂದ, ಶ್ರಾವಣದ ಹಗಲು, ನಾದಲೀಲೆಯ ಶ್ರಾವಣ, ಹಾಡುಪಾಡಿನ ಶ್ರಾವಣ, ಬಂದಿಕಾರ ಶ್ರಾವಣ, ಪ್ರತಿವರ್ಷದಂತೆ ಬಂತು ಶ್ರಾವಣ ಕವಿತೆಗಳಲ್ಲೂ ಇದೆ. ಧಾರವಾಡದ ಜಿ. ಬಿ. ಮೆಮೋರಿಯಲ್ ಟ್ರಸ್ಟ್ ನಗರದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ “ಶ್ರಾವಣದ ಕವಿ ಬೇಂದ್ರೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ 22 ಆಗಸ್ಟ್ 2025ರ ಶುಕ್ರವಾರದಂದು ಹಮ್ಮಿಕೊಳ್ಳಲು ನಿಶ್ಚಯಿಸಿದೆ. ಈ ಕಾರ್ಯಕ್ರಮ ಮುಖ್ಯ ಉದ್ದೇಶ ಯುವಕರಿಗಾಗಿ, ಯುವಕರಲ್ಲಿ ಬೇಂದ್ರೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವದು. ಇದರಲ್ಲಿ…
ಕಿನ್ನಿಗೋಳಿ : ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ (ರಿ.) – ಯುಗಪುರುಷ ಕಿನ್ನಿಗೋಳಿ ಇದರ ವತಿಯಿಂದ ಯಕ್ಷಲಹರಿಯ 35ನೇ ವರ್ಷದ ಸಂಭ್ರಮ ಪ್ರಯುಕ್ತ ದಿನಾಂಕ 03 ಆಗಸ್ಟ್ 2025ರಂದು ನಡೆದ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸ್ಪರ್ಧಾ ಸಪ್ತಾಹ ‘ಶ್ರೀ ರಾಮಾ ಕಥಾಮಾಲಿಕಾ’ದಲ್ಲಿ ಜಯರಾಮ ದೇವಸ್ಯ ಮತ್ತು ಬಳಗ ಪ್ರಥಮ, ಯಕ್ಷ ಕಲಾ ಮಹಿಳಾ ತಂಡ ಸುರತ್ಕಲ್ ದ್ವಿತೀಯ ಹಾಗೂ ಸರಯೂ ಯಕ್ಷ ಬಳಗ ಕೋಡಿಕಲ್ ಮಂಗಳೂರು ತೃತೀಯ ಬಹುಮಾನ ಪಡೆದುಕೊಂಡವು. ಮೂಡಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಡಾ. ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರಾ, ಎಂ.ಆರ್.ಪಿ.ಎಲ್. ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ, ಸುರತ್ಕಲ್ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಶಾಖಾ ಪ್ರಬಂಧಕ ಯಾದವ ದೇವಾಡಿಗ, ಕದ್ರಿ ನವನೀತ ಶೆಟ್ಟಿ, ಅಶ್ವಥ್ ರಾವ್, ಆಕಾಶ್ ರಾವ್, ಸುಧಾಕರ…
ಮಂಗಳೂರು : ಕಲಾಸಾಧನ ಕೇಂದ್ರದ ವತಿಯಿಂದ ‘ಸ್ವರಧಾರಾ’ ಸಂಗೀತ ಉತ್ಸವವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 5-00 ಗಂಟೆಯಿಂದ ಮಂಗಳೂರಿನ ಕೊಡಿಯಾಲ್ ಬೈಲ್, ನವ ಭಾರತ್ ಸರ್ಕಲ್ ಫೆಸಿಫಿಕ್ 4, ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೂಸ್ತಾನಿ ಗಾಯಕ ಕುಮಾರ್ ಮರಡೂರ ಸಂಗೀತ ಕಛೇರಿ ನಡೆಸಿಕೊಡುವರು. ಕಿರಾಣಾ, ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಗಳನ್ನು ಬೆರೆಸಿ ತಮ್ಮದೇ ಆದ ಗಾಯನ ಪ್ರಸ್ತುತ ಪಡಿಸುವ ಇವರು, ಹಿಂದೂಸ್ತಾನಿ ಗಾಯಕ ಸೋಮನಾಥ ಮರ್ದೂರರ ಪುತ್ರ. ಅಕ್ಷಯ ಜೋಶಿ ಧಾರವಾಡ ತಬಲಾ ಮತ್ತು ಸತೀಶ್ ಭಟ್ ಹೆಗ್ಗಾರ್ ಹಾರ್ಮೊನಿಯಂ ಸಾಥ್ ನೀಡುವರು.
ಉಡುಪಿ : ಖ್ಯಾತ ರಂಗ ಕಲಾವಿದರಾದ ಟಿ. ಪ್ರಭಾಕರ್ ಕಲ್ಯಾಣಿ ದಿನಾಂಕ 08 ಆಗಸ್ಟ್ 2025 ರಂದು ನಿಧನರಾದರು. ಇವರು ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿಬಿದ್ದಿದ್ದರು. ಚಿಕಿತ್ಸೆ ಪಡೆದ ಇವರು ಇಂದು ಬೆಳಿಗ್ಗೆ 8:30 ಸುಮಾರಿಗೆ ಮನೆಯಲ್ಲಿ ಕೈಕಾಲು ನೋವು ಎಂದು ಪತ್ನಿ ಜೊತೆ ಹೇಳಿಕೊಂಡಿದ್ದರು. ಇನ್ನೇನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ನಿಧನರಾದರು. ರಂಗ ಕಲಾವಿದರಾಗಿ, ವಿವಿಧ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಭಾಕರ್ ಪತ್ನಿ ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 892ನೇ ಸಂಚಿಕೆಯು ದಿನಾಂಕ 09 ಆಗಸ್ಟ್ 2025 ಶನಿವಾರ ಸಂಜೆ ಗಂಟೆ 4-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ನಡೆಯಲಿದೆ. ಈ ವಾರದ ಕಥೆಗಾರರು ಮೈಸೂರಿನ ಕವಯಿತ್ರಿ, ಲೇಖಕಿ, ಅನುವಾದಕಿ ಹಾಗೂ ಗಾಯಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶ್ಯುಲ. ತಾವು ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. https://wwwyoutube.com/kalasuruchimysore ಇದು ಕಲಾಸುರುಚಿಯ ಯುಟ್ಯೂಬ್ ಚಾನೆಲ್ ನ ಲಿಂಕ್. ನೀವೂ ನೋಡಿ – ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು ಚಾನೆಲ್ ನ್ನು ಸಬ್ಸ್ ಕ್ರೈಬ್ ಮಾಡಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಕೊನೆಯಲ್ಲಿ ಪದಕೋಶ ಕಾರ್ಯಕ್ರಮವಿರುತ್ತದೆ. ದಯವಿಟ್ಟು ಪೋಷಕರಲ್ಲಿ ಒಂದು ಕಳಕಳಿಯ ಮನವಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಳುಹಿಸಿಕೊಡಿ. ಹೆಚ್ಚಿನ ಮಾಹಿತಿಗಾಗಿ 92435 81097 ಮತ್ತು 99459 43115 ಸಂಖ್ಯೆಯನ್ನು…
ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 09 ಆಗಸ್ಟ್ 2025ರಿಂದ 12 ಆಗಸ್ಟ್ 2025ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ದಿನ ಸಂಜೆ 6-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 09 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕುಮಾರಿ ಆತ್ಮಶ್ರೀ ಮತ್ತು ಕುಮಾರಿ ಆದಿಶ್ರೀ ಇವರ ಹಾಡುಗಾರಿಕೆಗೆ ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7-30 ಗಂಟೆಗೆ ಮಂಗಳೂರು ಕದ್ರಿಯ ನೃತ್ಯಭಾರತೀ ಪ್ರಸ್ತುತ ಪಡಿಸುವ ‘ಕೃಷ್ಣಾಂತರಂಗ –ನವರಾಸ ರಾಮ’ ನೃತ್ಯರೂಪಕವನ್ನು ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಸರಳಾಯ ಇವರು ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಮಾಡಿರುತ್ತಾರೆ. ದಿನಾಂಕ 10 ಆಗಸ್ಟ್ 2025ರಂದು ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಭಾರ್ಗವ ವಿಜಯ’ ಯಕ್ಷಗಾನ ಬಯಲಾಟ…
ಬ್ರಹ್ಮಾವರ : ಚೌಕಿಮನೆಯ ಭೀಷ್ಮ ದಿ. ಬಾಲಕೃಷ್ಣ ನಾಯಕ್ ಹಂದಾಡಿ (ಬಲ್ಲಣ್ಣ) ಇವರ ಪ್ರಥಮ ಸಂಸ್ಮರಣೆ, ಪುತ್ಥಳಿ ಅನಾವರಣ, ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ‘ನೆನಪು’ ಚೌಕಿಮನೆಯ ಬೆಳಕಿನಲಿ ದಿನಾಂಕ 09 ಆಗಸ್ಟ್ 2025ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಸಂಜೆ 3-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಜೇಶ್ ಶ್ಯಾನುಭೋಗ್ ಇವರಿಂದ ಭಾವ ನಮನ, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಶೆಟ್ಟಿ ಬಿರ್ತಿ ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ ಆಚಾರ್ಯ ಇವರನ್ನು ಸನ್ಮಾನಿಸಲಾಗುವುದು. ನಾಗಾನಂದ ವಾಸುದೇವ ಆಚಾರ್ಯ ಇವರು ಪುತ್ಥಳಿ ಅನಾವರಣಗೊಳಿಸಲಿದ್ದು, ಮುರಳಿ ಕಡೇಕಾರ್, ಪ್ರಸಾದ್ ಕುಮಾರ್ ಮೊಗೆಬೆಟ್ಟು, ನಾಗರಾಜ ಉಪಾಧ್ಯಾಯ, ನಾಗಭೂಷಣ್ ನಾಯಕ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.