Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಯುಕ್ತಾಶ್ರಯದಲ್ಲಿ ನಡೆದ ಸುವರ್ಣ ಕರ್ನಾಟಕ- 50ರ ಸಂಭ್ರಮದ ನಿಮಿತ್ತ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರಿಗೆ ಭಾಷಣ ಸ್ಪರ್ಧೆಯನ್ನು ದಿನಾಂಕ 25-02-2024ರಂದು ಏರ್ಪಡಿಸಲಾಗಿತ್ತು. ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರಕಾರಿ ಪ್ರೌಢಶಾಲೆಯ ಕು. ಬೇಸಿಲ್ ಸಿ.ಬಿ. ಇವರಿಗೆ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಕಲೆ ಮತ್ತು ಸಾಹಿತ್ಯ ಬೆಳವಣಿಗೆ ಕುರಿತು ಮುಖ್ಯ ಭಾಷಣ ಮಾಡಿದ ಸಾಹಿತಿ ಡಾ. ಜೆ. ಸೋಮಣ್ಣ “ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಾಹಿತಿ ಭಾರತೀಸುತ ಅವರು ತಮ್ಮ ಕಥೆ, ಕವನ, ಕಾದಂಬರಿ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಕ್ಕಳಲ್ಲಿ ಪ್ರಾಥಮಿಕ…
ಬೆಂಗಳೂರು ದೂರದರ್ಶನದ ಪ್ರಸಾದನ ಕಲಾವಿದ, ರಂಗ ಭೂಮಿಯ ಕ್ರಿಯಾಶೀಲ ಉಮೇಶ್ ದಿನಾಂಕ 08-03-2024ರಂದು ನಿಧನರಾದರು. ನಮ್ಮ ದೂರದರ್ಶನ ಉಮೇಶ್ ಎಂದೇ ಖ್ಯಾತಿಯ, ಸಮುದಾಯ ಮತ್ತು ರಂಗನಿರಂತರ, ರಂಗ ಸಂಪದ ತಂಡಗಳೊಟ್ಟಿಗೆ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ನಡೆಸಿ, ದೂರದರ್ಶನದಲ್ಲಿ ಪ್ರಸಾದನ ಕಲಾವಿದ ಎಂಬ ಹುದ್ದೆಗೆ ಸೇರಿ, ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಸೇತೂರಾಂ ಅವರ ನಿರ್ದೇಶನದ ಹಲವಾರು ದಾರವಾಹಿಗಳಿಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ, ಬಹು ಜನರ ಶೋತೃವಾಗಿದ್ದ ಉಮೇಶ ಇನ್ನಿಲ್ಲ ಎಂಬ ದಾರುಣ ಸುದ್ದಿ ಗೆಳೆಯ ನಂದಕುಮಾರನಿಂದ ತಲುಪಿದೆ. ಇತ್ತೀಚಿನ ವರುಷಗಳಲ್ಲಿ ಅವನಿಗೆ ಅನಾರೋಗ್ಯ ತೀವ್ರವಾಗಿ ಕಾಡಿತ್ತು. ಫೆಬ್ರವರಿ 23ರಂದು ನಾನು ನನ್ನ ಮನೆಯವರನ್ನು ಆಸ್ಟ್ರೋ ಆರ್.ವಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಮಧ್ಯಾನ್ಹ 3-4ರ ಸುಮಾರಿಗೆ ಉಮೇಶನೂ ತನ್ನ ಆರೋಗ್ಯ ತಪಾಸಣೆಗೆ ಬಂದಿದ್ದ. ಅಸ್ಪಷ್ಟ ಮಾತುಗಳು ಮತ್ತು ಅಸಹಜ ದೈಹಿಕ ಕ್ರಿಯೆಗಳಿಂದ ಬಳಲುತಿದ್ದ ಉಮೇಶನ ಮುಂದೆ ನಿಲ್ಲಲು ನನಗೆ ಮನಸ್ಸಾಗಲಿಲ್ಲ. ಏನಾದರೂ ಸಹಾಯ ಬೇಕಾ ಎಂದಾಗ ಅವನ ಜೊತೆ ಇದ್ದವರು ಇಲ್ಲ…
ಮಂಗಳೂರು : ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ‘ಬ್ಯಾರಿ ಜನಾಂಗ- ಬ್ಯಾರಿ ಬದುಕು- ಸಂಶೋಧನಾತ್ಮಕ ಅಧ್ಯಯನ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವು ದಿನಾಂಕ 05-03-2024ರ ಮಂಗಳವಾರದಂದು ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ “ತುಳುನಾಡಿನ ಬ್ಯಾರಿಗಳು ಕೇವಲ ‘ಬ್ಯಾರ’ಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಭಿನ್ನ ಸಂಸ್ಕೃತಿಯ ಮಧ್ಯೆಯೂ ಏಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಬ್ಯಾರಿ ಜನಾಂಗದ ಹಿರಿಮೆಯಾಗಿದೆ. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆಯಲ್ಲಿ ಮಾತನಾಡಿದರೂ ಕೂಡ ಹೊರಗಡೆ ವ್ಯವಹಾರಿಕವಾಗಿ ತುಳು, ಕನ್ನಡ ಮಾತನಾಡುತ್ತಾರೆ. ಸಾಮರಸ್ಯಕ್ಕೆ ಒತ್ತು ನೀಡುತ್ತಾರೆ. ಇದು ಬ್ಯಾರಿಗಳ ವೈಶಿಷ್ಟವಾಗಿದೆ. ಇಂತಹ ಜನಾಂಗದ ಸಂಸ್ಕೃತಿಯ ಬಗ್ಗೆ ವಿಸ್ತ್ರತ ಅಧ್ಯಯನದ ಅಗತ್ಯವಿದೆ.” ಎಂದು ಹೇಳಿದರು. ಕಣಚೂರು ಇಸ್ಲಾಮಿಕ್ ಏಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಹಾಜಿ ಯು. ಕೆ.…
ಬೆಂಗಳೂರು: 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪಾಂಡಪ್ಪ ಲಕ್ಷ್ಮಣ ಹೂಗಾರ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಾಧಕರಾದ ಬೀದರ್ ಜಿಲ್ಲೆಯ ಅಕ್ಕ ಡಾ. ಅನ್ನಪೂರ್ಣ ತಾಯಿ ಮತ್ತು ಬೆಳಗಾವಿಯ ವಿನೋದ ಸುರೇಂದ್ರ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಮೂಲತ: ಬೀದರಿನ ಹಾರೂರಗೇರಿಯವರಾದ ಡಾ. ಅನ್ನಪೂರ್ಣ ತಾಯಿಯವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ವಿಷಯದಲ್ಲಿ ಪದವಿಯನ್ನು ಪಡೆದವರು. ಬಸವ ತತ್ವ ಪ್ರಸಾರಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿ ಕೊಂಡ ಇವರು ಸಮಾನತೆಯ ಸಮಾಜವನ್ನು ಕಟ್ಟಲು ಅಹರ್ನಿಶಿ ದುಡಿಯುತ್ತಿದ್ದಾರೆ. ವಚನಕ್ಕೊಂದು ಕತೆ, ಸಂಸಾರದಲ್ಲಿ ಸದ್ಗತಿ, ಗುರು ಕರುಣೆ, ಶ್ರಾವಣ ಸುಂದರ, ಬಸವ ಭಾವ ಮೊದಲಾದವು ಇವರ ಪ್ರಮುಖ ಕೃತಿಗಳು. ಬೆಳಗಾವಿಯ ಭರತೇಶ ಎಜ್ಯುಕೇಷನ್ ಟ್ರಸ್ಟಿನ ಕಾರ್ಯದರ್ಶಿಗಳಾದ ವಿನೋದ ಸುರೇಂದ್ರ ಅವರು ಮೂಲತ: ಸಂಶೋಧನಾ ವಿಜ್ಞಾನಿಗಳು, ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಬ್ಯಾರಿ ಮಹಿಳಾ ಕವಿಗೋಷ್ಠಿಯು ದಿನಾಂಕ 02-03-2024 ರಂದು ಮಂಗಳೂರಿನ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ ಝುಲೇಖಾ ಮುಲ್ತಾಝ್ “ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಾತೃಭಾಷೆಯನ್ನು ಮರೆಯದೆ ಮಕ್ಕಳಿಗೆ ಪರಿಚಯಿಸಿಕೊಡುವ ಜವಾಬ್ದಾರಿ ತಾಯಂದಿರದ್ದಾಗಿದೆ. ಮಕ್ಕಳಿಗೆ ಮಾತೃಭಾಷೆಯ ಹಿರಿಮೆ ಮತ್ತು ಮಹಿಮೆಯನ್ನು ತಿಳಿಹೇಳಬೇಕಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಉದ್ಯೋಗದ ಭಾಷೆಯಾಗಿದ್ದರೂ ಕೂಡ ಮಾತೃಭಾಷೆಯಲ್ಲಿ ಮಾತನಾಡಬೇಕು ಹಾಗೂ ಬರೆಯಬೇಕು. ಆಗ ಮಾತ್ರ ನಮ್ಮ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ. ಬ್ಯಾರಿ ಭಾಷೆಯ ಅಳಿವು, ಉಳಿವು ಕೂಡ ತಾಯಂದಿರ ಕೈಯಲ್ಲಿದೆ.” ಎಂದು ಝುಲೇಖಾ ಮುಮಾಝ್ ಹೇಳಿದರು. ಲೇಖಕಿ ಆಯಿಶಾ ಯು.ಕೆ. ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ ಕಾಮತ್ ಸ್ವಾಗತಿಸಿ, ಲೇಖಕಿ ಸಾರಾ ಅಲಿ ಪೆರ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಿಬ್ಬಂದಿ ರಂಝೀನಾ ವಂದಿಸಿದರು. ಕವಯತ್ರಿಗಳಾದ ಝುಲೇಖಾ ಮುಲ್ತಾಝ್,…
ಚನ್ನರಾಯಪಟ್ಟಣ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ನಿಲಯ ಚನ್ನರಾಯಪಟ್ಟಣ, ಹಾಗೂ ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ ಸಹಯೋಗದಲ್ಲಿ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 05-03-2024ರಂದು ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿರುವ ‘ರಂಗ ಲೋಕ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲೆ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಮುಖ್ಯಾಧಿಕಾರಿಯಾಗಿರುವ ಡಾ. ಎಸ್. ಎನ್. ವಾಸುದೇವನ್ ಮಾತನಾಡಿ “ಮಕ್ಕಳು ಇಂತಹ ಚಟುವಟಿಕೆಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ನಮ್ಮ ಹಿರಿಯರ ಸಂಸ್ಕೃತಿ, ಸಂಪ್ರದಾಯಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ ಅದನ್ನು ನಾವು ಸರಿಯಾಗಿ ಅರ್ಥೈಹಿಸಿಕೊಳ್ಳ ಬೇಕು. ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಮಕ್ಕಳ ಬೌದ್ಧಿಕ ಮಟ್ಟವೂ ಹೆಚ್ಚುತ್ತದೆ.” ಎಂದರು. ವೇದಿಕೆಯಲ್ಲಿ ವಿಸ್ತರಣಾಧಿಕಾರಿಗಳಾದ ರಾಜೇಶ್ ಚೌಹಾಣ್, ನಿಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ರಾಣಿ ಹಾಗೂ ನಿಲಯ ಪಾಲಕರಾದ ಶ್ರೀಮತಿ ಜೆ. ಎಮ್. ಪ್ರತಿಭಾ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಅರುಣ್ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕಂಸಾಳೆ, ರಂಗಕುಣಿತ, ಕಿರುನಾಟಕ,…
ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ‘ರಂಗಪಂಚಮಿ-2024’ ಐದು ದಿನಗಳ ನಾಟಕೋತ್ಸವದ ಸಮಾರೋಪ ಕಾರ್ಯಕ್ರಮವು ದಿನಾಂಕ 06-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ “ಜಾನಪದವೂ ಕೂಡ ಒಂದು ಧರ್ಮವಾಗಿದ್ದು ಇದು ನಾವು ಬದುಕುವ ರೀತಿಗೆ ಹತ್ತಿರದ ಸಂಬಂಧವಿದ್ದು, ಒಂದು ಜೀವನ ಧರ್ಮವಾಗಿದೆ. ಜಾನಪದ ಧರ್ಮವನ್ನು ನಾವು ಅರ್ಥಮಾಡಿಕೊಂಡು ಪಾಲಿಸಿದರೆ ಎಲ್ಲಾ ಕಾಲಮಾನದ ಬದಲಾವಣೆಗಳ ಮಧ್ಯೆ ಕೂಡ ನಮ್ಮ ಸಂಸ್ಕೃತಿ ಉಳಿಯುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣ, ನಮ್ಮ ಘನತೆಯ ವೈಭವೀಕರಣಕ್ಕಾಗಿ ದುರದೃಷ್ಟವಶಾತ್ ಜಾನಪದಧರ್ಮವನ್ನು ನಾವು ಇಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಉಳಿಸಿ ಬೆಳೆಸುವುದರ ಮೂಲಕ ಇದರೊಂದಿಗೆ ಕನ್ನಡ ಭಾಷೆಯು ಹೆಚ್ಚು ಬಳಕೆಗೆ ಬಂದು ಕನ್ನಡ ಪ್ರೇಮವು ಹೆಚ್ಚಾಗುತ್ತದೆ” ಎಂದರು. ಸಮೃದ್ಧ…
ನೀರಗೋಡು : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಶ್ರೀ ಕದಂಬೇಶ್ವರ ಯಕ್ಷಗಾನ ಕಲಾಪೋಷಕ ಗೆಳೆಯರ ಬಳಗ ನೀರಗೋಡು (ಹರಿಗಾರು) ಇವರ ಸಂಯೋಜನೆಯಲ್ಲಿ ದಿನಾಂಕ 12-03-2024ರಂದು ಸಂಜೆ ಗಂಟೆ 9.30ಕ್ಕೆ ಶ್ರೀ ಕದಂಬೇಶ್ವರ ದೇವಾಲಯ ನೀರಗೋಡು ಇದರ ಬಯಲು ಆವಾರದಲ್ಲಿ ‘ಯಕ್ಷಲೋಕ ವಿಜಯ’ ಮತ್ತು ‘ವೀರ ಬರ್ಭರಿಕ’ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಗೌರವ ಪ್ರವೇಶ ರೂ.500/- ಟಿಕೆಟ್ ದರ 300/-, 200/- ನೆಲ 100/-
ಕಾಸರಗೋಡು : ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ ಮತ್ತು ಶಂಪಾ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಆನಂದಕಂದ ಸಾಹಿತ್ಯ ಹಬ್ಬ ಕಾಸರಗೋಡು’ ದಿನಾಂಕ 16-03-2024 ಮತ್ತು 17-03-2024ರಂದು ಕಾಸರಗೋಡಿನ ಚೇವಾರ್ ವಯಾ ಉಪ್ಪಳ, ಕುಡಾಲ್, ಕುಡ್ತಡ್ಕ, ನಿಸರ್ಗ ಧಾಮದಲ್ಲಿ ನಡೆಯಲಿದೆ. ದಿನಾಂಕ 16-03-2024ರಂದು ಬೆಳಿಗ್ಗೆ 10-00 ಗಂಟೆಗೆ ಈ ಕಾರ್ಯಕ್ರಮವು ಲಕ್ಷ್ಮೀಶ ತೊಳ್ಪಾಡಿಯವರಿಂದ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 1ರಲ್ಲಿ ‘ಕವಿತೆ ವಾಚನ, ಗಾಯನ ಮನನ’ ಈ ಕಾರ್ಯಕ್ರಮದಲ್ಲಿ ಯು. ಮಹೇಶ್ವರಿ, ಚಂದ್ರಶೇಖರ ವಸ್ತ್ರದ, ಕಲ್ಲಚ್ಚು ಮಹೇಶ, ಸಿ.ಕೆ. ನಾವಲಗಿ ಮತ್ತು ವಿಭಾಶ್ರೀ ಬೆಳ್ಳಾರೆ ಮತ್ತು ಗೋಷ್ಠಿ 2ರಲ್ಲಿ ‘ಕಥೆ ವಾಚನ – ಮನನ’ ಈ ಕಾರ್ಯಕ್ರಮದಲ್ಲಿ ಪ್ರವೀಣ ಪದ್ಯಾಣ, ಮಹಾದೇವ ಹಡಪದ, ವಿಕಾಸ ಹೊಸಮನಿ ಇವರುಗಳು ಭಾಗವಹಿಸಲಿರುವರು. ಗೋಷ್ಠಿ 3ರಲ್ಲಿ ‘ಕನ್ನಡ ವಿಮರ್ಶೆ ಎತ್ತ ಸಾಗಿದೆ ?’ ಈ ಕಾರ್ಯಕ್ರಮದಲ್ಲಿ ಗಿರೀಶ ಭಟ್ಟ ಅಜಕ್ಕಳ, ಬಾಲಕೃಷ್ಣ ಹೊಸಂಗಡಿ ಮತ್ತು ವಿಕಾಸ ಹೊಸಮನಿ ಚರ್ಚೆಯಲ್ಲಿ ಪಾಲ್ಗೊಳ್ಳುವವರು. ಗೋಷ್ಠಿ 4ರಲ್ಲಿ ‘ಹಿರಿಯ…
ಉಡುಪಿ : ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಸಹಯೋಗದಲ್ಲಿ ಉಡುಪಿ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನ ದಿ. ತೋಮ ಶ್ಯಾನುಭಾಗ್ ವೇದಿಕೆಯ ‘ತ್ಯಾಗ ಮಂಟಪ’ದಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯು ದಿನಾಂಕ 10-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಸೂಡ ಇವರು ಮಾತನಾಡುತ್ತಾ “ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ. ಧಾರ್ಮಿಕ ಕ್ಷೇತ್ರವಾದ ಭಜನೆಯಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದರಿಂದ ಯುವಜನತೆಯನ್ನು ಭಜನೆಯತ್ತ ಆಕರ್ಷಿಸುವುದರೊಂದಿಗೆ ಭಜನೆಯ ಮಹತ್ವವನ್ನು ಎಲ್ಲೆಡೆ ಪಸರಿಸುವ ಆರೋಗ್ಯಕರ ಬೆಳವಣಿಗೆಯೂ ಮೂಡಿಸಿದಂತಾಗುತ್ತದೆ” ಎಂದು ನುಡಿದರು. ಮತ್ತೋರ್ವ ಮುಖ್ಯ ಅತಿಥಿ ಪ್ರಮೋದ್ ರೈ ಪಳಜೆ ಅವರು ಮಾತನಾಡಿ “ಭಜನಾ ಸ್ಪರ್ಧೆಗಳನ್ನು ಕಳೆದ ಹನ್ನೊಂದು ವರ್ಷಗಳಿಂದ ಪೆರ್ಡೂರಿನಲ್ಲಿ ನಡೆಸುತ್ತಿದ್ದು, ಈ ಸ್ಪರ್ಧೆಯು ಇಂದು ಜಿಲ್ಲಾ ಕೇಂದ್ರದಲ್ಲಿ ಜರಗುತ್ತಿದೆ. ಮುಂದೆ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸುವುದರ ಮೂಲಕ ಉಡುಪಿಯ…