Subscribe to Updates
Get the latest creative news from FooBar about art, design and business.
Author: roovari
ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕ ಮತ್ತು ವಿಶ್ವಮಂಗಳ ವಿದ್ಯಾ ಸಂಸ್ಥೆ ಮಂಗಳಗಂಗೋತ್ರಿ ಆಶ್ರಯದಲ್ಲಿ ವಿಶ್ವಮಂಗಳದಲ್ಲಿ ದಿನಾಂಕ 01-11-2023ರಂದು ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಲತಾ ಅಭಯ್ “ಎಲ್ಲರನ್ನು ಸಮಭಾವದಿಂದ ನೋಡುವ ಗೌರವಿಸುವ ಮನೋಭಾವ ಕನ್ನಡಿಗರದ್ದು. ಪರಧರ್ಮ, ಪರ ವಿಚಾರಗಳನ್ನೂ ಗೌರವಿಸುತ್ತಾ ಬಂದ ಸಹಿಷ್ಣು ಪರಂಪರೆ ಕನ್ನಡ ನಾಡಿನದ್ದು. ಕನ್ನಡ ಭಾಷೆ ಸಾಹಿತ್ಯದ ಕುರಿತಾದ ತಿಳುವಳಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ. ಪರಮೇಶ್ವರ ವಹಿಸಿದ್ದರು. ಸಮಾರಂಭದಲ್ಲಿ ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಉಳ್ಳಾಲ ಹೋಬಳಿ…
ಮಂಗಳೂರು: ದಿನಾಂಕ 31-10-2023 ರಂದು ಮೂಡುಬಿದಿರೆಯಲ್ಲಿ ನಿಧನರಾದ ಹಿರಿಯ ಸಾಧಕ ಹಾಗೂ ಸಾಮಾಜಿಕ ನೇತಾರ ಎಂ.ಆನಂದ ಆಳ್ವ ಮತ್ತು ಅದೇ ದಿನ ಸಾಯಂಕಾಲ ನಿಧನರಾದ ಯಕ್ಷಗಾನದ ಹಿರಿಯ ಹಾಸ್ಯ ದಿಗ್ಗಜ ಪೆರುವಡಿ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 01-11-2023 ರಂದು ಮಂಗಳೂರಿನ ‘ಯಕ್ಷಾಂಗಣ’ದಲ್ಲಿ ನಡೆಯಿತು. “ತಮ್ಮ ಶಿಸ್ತುಬದ್ಧ ಜೀವನ ಶೈಲಿಯಿಂದಾಗಿ 2023 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದಂದು 106 ವಸಂತಗಳ ತುಂಬು ಬದುಕನ್ನು ಪೂರೈಸಿದ್ದ ಮಿಜಾರುಗುತ್ತು ಆನಂದ ಆಳ್ವರು ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಶ್ರೇಷ್ಠ ಮಾದರಿ. ಶತಾಯುಷಿಗಳಾಗಿ ಆಗಲೇ ಅಮರತ್ವಕ್ಕೇರಿದ್ದ ಅವರು ಇದೀಗ ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಕೃಷಿ ಬದುಕಿನ ಉನ್ನತ ನಿದರ್ಶನವೂ ಸೇರಿದಂತೆ ಆಧುನಿಕ ಮೂಡಬಿದ್ರೆಯ ಶಿಲ್ಪಿ, ಕನ್ನಡ ನಾಡಿನ ಸಾಂಸ್ಕೃತಿಕ ವಕ್ತಾರ ಡಾ.ಎಂ.ಮೋಹನ ಆಳ್ವರೇ ಸ್ವಯಂ ಆನಂದ ಆಳ್ವರು ಸಮಾಜಕ್ಕೆ ಬಿಟ್ಟು ಹೋದ ದೊಡ್ಡ ಆಸ್ತಿ’. ” ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಹಾಸ್ಯರಸದ ಮೇರು ಪ್ರತಿಭೆ ಪೆರುವಡಿ: ಅದೇ ದಿನ…
ಬಂಟ್ವಾಳ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಹಾಗೂ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಮಕ್ಕಳ ಶಿಬಿರ ‘ಸಾಹಿತ್ಯ ಸಂಭ್ರಮ’ವು ದಿನಾಂಕ 28-10-2023 ಮತ್ತು 29-10-2023ರಂದು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಮಕ್ಕಳ ಶಿಬಿರವನ್ನು ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಇವರು ಉದ್ಘಾಟಿಸಿ “ಸಾಹಿತ್ಯ, ಬರಹಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಸಾಧನವಾಗಿವೆ. ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಒಲವು ತೋರಿಸಿದರೆ ಮುಂದಕ್ಕೆ ದೊಡ್ಡ ಸಾಧನೆ ಮಾಡಬಹುದು” ಎಂದು ಹೇಳಿದರು. ಮಕ್ಕಳ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷೆ ಪರಿಮಳ ಮಹೇಶ ರಾವ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ದೇವಿ ಪ್ರಸಾದ್ ಚೆಂಗಲ್ಪಾಡಿ, ಗೌರವ ಸಲಹೆಗಾರ ಬಾಲಕೃಷ್ಣ ಕಾರಂತ್ ಎರುಂಬು, ಶಾಲಾ ಮುಖ್ಯೋಪಾಧ್ಯಾಯ ಸುಶೀಲಾ ವಿಟ್ಲ, ಸಾಹಿತಿ ಹಾಗೂ ಪತ್ರಕರ್ತ ಜಯಾನಂದ ಪೆರಾಜೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ…
ಇರಾ : ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.), ಕುಂಡಾವು ಇರಾ, ಉಳ್ಳಾಲ ತಾಲೂಕು ಮತ್ತು ಸುವರ್ಣ ಮಹೋತ್ಸವ ಸಮಿತಿ, ಯುವಕ ಮಂಡಲ (ರಿ.) ಇರಾ ಉಳ್ಳಾಲ ತಾಲೂಕು, ದ.ಕ. – ಇವರ ಜಂಟಿ ಆಶ್ರಯದಲ್ಲಿ ‘ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ’ ಕಾರ್ಯಕ್ರಮ ದಿನಾಂಕ 29-10-2023ನೇ ಆದಿತ್ಯವಾರ ಅಪರಾಹ್ನ ಗಂಟೆ 2.00ರಿಂದ ಯಕ್ಷ ಕೈಲಾಸ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರ, ಕುಂಡಾವು ಇಲ್ಲಿ ನಡೆಯಿತು. ಸಂಸ್ಮರಣಾ ಕಾರ್ಯಕ್ರಮದಲ್ಲಿ ಖ್ಯಾತ ಹಿಮ್ಮೇಳ ಕಲಾವಿದರಾದ ಶ್ರೀ ಪೆರುವಾಯಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರೂ, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಕುಂಡಾವು ಇರಾ ಇದರ ಗೌರವ ಅಧ್ಯಕ್ಷರೂ ಆದ ಕಲ್ಲಾಡಿ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಆಡಳಿತ ಸಮಿತಿಯ ಸದಸ್ಯರೂ, ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ (ರಿ.) ಇರಾ ಇದರ ಪ್ರಧಾನ ಸಂಚಾಲಕರೂ ಆದ ಶ್ರೀ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ 19ನೇ ಗೌರಮ್ಮ ದತ್ತಿನಿಧಿ ಪ್ರಶಸ್ತಿಯನ್ನು ಸಾಹಿತಿ ಕಟ್ರತನ ಲಲಿತ ಅಯ್ಯಣ್ಣ ಮತ್ತು ಈರಮಂಡ ಹರಿಣ್ ವಿಜಯ್ ಅವರಿಗೆ ದಿನಾಂಕ 27-10-2023ರ ಶುಕ್ರವಾರ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧಾ ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕೊಡಗು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಕನ್ನಡ ಉಪನ್ಯಾಸಕರಾದ ಡಾ.ಜಮೀರ್ ಅಹ್ಮದ್ ಅವರು ಮಾತನಾಡಿ “ಕತೆಗಾರ್ತಿ ಕೊಡಗಿನ ಗೌರಮ್ಮ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಪೂರ್ವದಲ್ಲಿ ಸಣ್ಣ ಕತೆಗಳನ್ನು ಬರೆಯುವ ಮೂಲಕ ಮಹಿಳಾ ಸಬಲೀಕರಣ, ಸಮಾಜದಲ್ಲಿ ಸಮಾನತೆ ಹೀಗೆ ಹಲವು ವಿಚಾರಗಳ ಕುರಿತು ಕನ್ನಡ ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ಬದುಕಿದ 27 ವರ್ಷದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದ್ದರು. ಮಹಾತ್ಮ ಗಾಂಧೀಜಿಯವರು…
ಕಾರ್ಕಳ : ಸಾಹಿತ್ಯಾಸಕ್ತರಿಗೆ ಹಾಗೂ ಓದುಗರಿಗೆ ಎಲ್ಲಾ ರೀತಿಯ ಪುಸ್ತಕಗಳು ಹಾಗೂ ಓದಿನ ಅಭಿರುಚಿಯನ್ನು ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕಾರ್ಕಳದ ಜೋಡುರಸ್ತೆಯ ಅದಿಧನ್ ಎನ್ಕ್ಲೇವ್ನಲ್ಲಿ ಬೃಹತ್ ಪುಸ್ತಕ ಮತ್ತು ಸ್ಟೇಶನರಿ ವಸ್ತುಗಳ ಮಳಿಗೆ ‘ಪುಸ್ತಕ ಮನೆ’ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶುಭಾರಂಭಗೊಂಡಿದೆ. ಎಲ್ಲಾ ತರಹದ ವಯೋಮಾನದ ವ್ಯಕ್ತಿಗಳಿಗೆ ಪುಸ್ತಕ ಪ್ರಿಯರಿಗೆ ರಿಯಾಯಿತಿ ದರದಲ್ಲಿ ದೊಡ್ಡ ಮಟ್ಟದ ಪುಸ್ತಕ ಸಂಗ್ರಹವಿದೆ. ಕೃತಿಗಳನ್ನು ಅಲ್ಲಿಯೇ ಓದುವ ಅವಕಾಶವನ್ನೂ ಗ್ರಂಥಾಲಯದ ರೂಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಪುಸ್ತಕಗಳನ್ನು ಅಥವಾ ಸಾಮಾಗ್ರಿಗಳನ್ನು ತರಲು ಕಷ್ಟವಾಗುವುದರಿಂದ ಕಾರ್ಕಳದಲ್ಲಿಯೇ ಒಂದು ಹೊಸ ಪರಿಕಲ್ಪನೆಯ “ಪುಸ್ತಕ ಮನೆ” ದಿನಾಂಕ 16-10-2023ರಂದು ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರಿಂದ ಉದ್ಘಾಟನೆಗೊಂಡಿದೆ. ವಿಶೇಷತೆ : ಕಾರ್ಕಳ ‘ಪುಸ್ತಕ ಮನೆ’ ಕ್ರಿಯೇಟಿವ್ ಸಂಸ್ಥೆಯ ಸಪ್ತ ಸಂಸ್ಥಾಪಕರ ಕನಸಿನ ಕೂಸು. ಕಾರ್ಕಳದ ಆಸುಪಾಸಿನ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಯಾವುದೇ ಲೇಖಕರ ಕೃತಿಗಳೂ ಸುಲಭದಲ್ಲಿ ಓದಲು ಸಿಗಬೇಕು ಮತ್ತು ಮುಂದಿನ ಪೀಳಿಗೆಯ ಜನರನ್ನು…
ಸುರತ್ಕಲ್ : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಭಾಗಿತ್ವದಲ್ಲಿ ಶೇಣಿ ಸಂಸ್ಮರಣೆ ಹಾಗೂ ಶೇಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 29-10-2023ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ “ಶ್ರೇಷ್ಠ ಕಲಾವಿದ ಶೇಣಿಯವರು ತಮ್ಮ ಕಲಾ ಚಿಂತನೆಯ ಮೂಲಕ ಯುವ ತಲೆಮಾರುಗಳನ್ನು ಪ್ರಭಾವಿಸಿದವರು” ಎಂದರು. ‘ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ವೇ.ಮೂ. ವಾದಿರಾಜ ಉಪಾದ್ಯಾಯ “ನಿಷ್ಕಲ್ಮಶ ಮನಸ್ಸಿನಿಂದ ಯಾವುದೇ ಕಾರ್ಯ ಮಾಡಿದರೂ ಅದರ ಪ್ರತಿಫಲ ಮತ್ತಷ್ಟು ಉತ್ತಮವಾಗಿಯೇ ಇರುತ್ತದೆ. ಅದಕ್ಕೆ ಶ್ರೇಣಿ ಗೋಪಾಲ ಕೃಷ್ಣ ಭಟ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿ” ಎಂದು ನುಡಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಇವರಿಗೆ…
ಯಕ್ಷಗಾನ ಗಂಡು ಕಲೆಯೆಂದೇ ಪ್ರತೀತಿ. ಆದರೆ ಇತ್ತೀಚಿಗೆ ಹೆಂಗೆಳೆಯರೂ ರಂಗಸ್ಥಳದಲ್ಲಿ ರಾರಾಜಿಸುತ್ತಿದ್ದಾರೆ. ಅಂಥಹ ಕಲಾವಿದರಲ್ಲಿ ಪ್ರಿಯಾಂಕ ಕೆ ಮೋಹನ ಕೂಡಾ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಸಾಫ್ಟ್ ವೇರ್ ಉದ್ಯೋಗಿಯಾಗಿ ಯಕ್ಷಗಾನವನ್ನು ಅರಾಧಿಸಿದ ರೀತಿ ಅನನ್ಯ. 3.11.1988ರಂದು ಮೋಹನ್ ಹೊಳ್ಳ ಹಾಗೂ ವೀಣಾ ಮೋಹನ್ ಇವರ ಮಗಳಾಗಿ ಜನನ. B.E Electronics ಇವರ ವಿದ್ಯಾಭ್ಯಾಸ. ತಂದೆ ಮೋಹನ್ ಹೊಳ್ಳ ಹಾಗೂ ಸುದರ್ಶನ್ ಉರಾಳ ಇವರ ಯಕ್ಷಗಾನ ಗುರುಗಳು. ಮನೆಯ ವಾತಾವರಣ ಹಾಗೂ ತಂದೆ ಕಟ್ಟಿದ ‘ಯಕ್ಷ ದೇಗುಲ’ ಸಂಸ್ಥೆ ಪ್ರಿಯಂಕಾರವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಪ್ರಸಂಗದ ಪದ್ಯ, ಸಾಹಿತ್ಯ ಹಾಗೂ ವಿಡಿಯೋ ಹಾಗೂ ಗುರುಗಳ ಬಳಿ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಿಯಾಂಕ. ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು. ಸುಭದ್ರೆ, ದ್ರೋಣ, ಧರ್ಮರಾಯ, ಕೃಷ್ಣ, ಭದ್ರಸೇನೆ, ಸುಧನ್ವ, ಅರ್ಜುನ ಇತ್ಯಾದಿ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ…
ಪುತ್ತೂರು : ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆರ್ಯಾಪು ಪುತ್ತೂರು, ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 16/10/2023 ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು. ಇದರ ವತಿಯಿಂದ “ರುಕ್ಮಾಂಗದ ಚರಿತ್ರೆ”ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ಮುಳಿಯಾಲ, ಶ್ರೀ ಆನಂದ ಸವಣೂರು,ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಜಯರಾಮ ಭಟ್ , ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ರುಕ್ಮಾಂಗದ),ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಧರ್ಮಾಂಗದ), ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಮೋಹಿನಿ), ಡಾ.ಶ್ರೀಪತಿ ಕಲ್ಲೂರಾಯ (ಸಂಧ್ಯಾವಳಿ) , ಶ್ರೀ ಸುಬ್ಬಪ್ಪ ಕೈಕಂಬ (ಮಹಾವಿಷ್ಣು)ಸಹಕರಿಸಿದರು. ಡಾ. ಶ್ರೀಪತಿ ಕಲ್ಲೂರಾಯ ಪ್ರಾಯೋಜಿಸಿದರು.
ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ 19ನೇ ಕಲಾಕಾರ್ ಪುರಸ್ಕಾರಕ್ಕೆ ಕೊಂಕಣಿಯ ಹಿರಿಯ ಸಂಗೀತಗಾರ ಆಪೊಲಿನಾರಿಸ್ ಡಿಸೋಜರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂಪಾಯಿ 50,೦೦೦/- ನಗದು, ಶಾಲು, ಫಲ-ಪುಷ್ಪ, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ . ಈ ಸನ್ಮಾನವನ್ನು 05-11-2023ರಂದು ಸಂಜೆ ಘಂಟೆ 6.00ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ 263ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. 2004ರಲ್ಲಿ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಅವರು ತನ್ನ ಕಾರ್ವಾಲ್ ಮನೆತನದ ಹೆಸರಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದು, ಕರ್ನಾಟಕ ಮೂಲದ ನೃತ್ಯ, ನಾಟಕ, ಸಂಗೀತ ಅಥವಾ ಜಾನಪದದಲ್ಲಿ ವಿಶೇಷ ಸಾಧನೆ ಮಾಡಿದ ಓರ್ವ ಕೊಂಕಣಿ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. 1953ರಲ್ಲಿ ಜನಿಸಿದ ಆಪೊಲಿನಾರಿಸ್ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ನಂತರ ಕೆಲಸಕ್ಕಾಗಿ ಓಮನ್ ಗೆ ತೆರಳಿದ ಅವರು ಓಮನ್ ಹಾಗೂ ಊರಿನಲ್ಲಿ ಸಂಗೀತ ಕ್ಷೇತ್ರಕ್ಕೆ ಅಪರಿಮಿತ ಸೇವೆ ಸಲ್ಲಿಸಿದ್ದಾರೆ. ಯುವಕ ರಾಗಿದ್ದ ಸಂದರ್ಭದಲ್ಲಿ…