Subscribe to Updates
Get the latest creative news from FooBar about art, design and business.
Author: roovari
ಮೂಡಬಿದರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ ದಿನಾಂಕ 06-02-2024ರ ಮಂಗಳವಾರದಂದು ನಡೆಯಿತು. ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ) ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಪ್ರೊ.ಎಂ.ಎ.ಹೆಗಡೆ ವೇದಿಕೆ) ತಂಡಗಳು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡವು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು ‘ದಶಾವತಾರ’ ಆಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು. ಗುರುಪುರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದೀವಿತ್ ಎಸ್. ಕೆ. ಪೆರಾಡಿ ನೇತೃತ್ವದ ತಂಡವು ‘ಶ್ರೀ ರಾಮಾಯಣ ದರ್ಶನಂ’ ಆಖ್ಯಾನಕ್ಕೆ ದ್ವಿತೀಯ ಹಾಗೂ ಹರೇಕಳದ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ‘ಕ್ಷೀರಾಬ್ಧಿ ಮಥನ’ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ…
ಸುರತ್ಕಲ್ : ವೀರಲೋಕ ಬುಕ್ಸ್, ಬೆಂಗಳೂರು ಮತ್ತು ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ಕಥೆಗಾರರಿಗೆ ಆಯೋಜಿಸಿದ್ದ ಎರಡು ದಿನಗಳ ‘ದೇಸಿ ಜಗಲಿ ಕಥಾಕಮ್ಮಟ’ದ ಉದ್ಘಾಟನಾ ಸಮಾರಂಭವು ದಿನಾಂಕ 03-02-2024 ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಕಥೆಗಾರ ರಮೇಶ್ ಭಟ್ ಬೆಳಗೋಡು “ಸಾಹಿತ್ಯ ಪ್ರಕಾರಗಳಲ್ಲಿ ಕಥೆ ನಿಜವಾದ ಸಾಮಾಜಿಕ ಅಭಿವ್ಯಕ್ತಿಯಾಗಿದೆ. ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿದರೆ ನೂರಾರು ಸಣ್ಣಕಥೆಗಳು ಸೃಷ್ಟಿಗೊಳ್ಳಬಹುದು.” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಕನ್ನಡ ಕಥನ ಪರಂಪರೆ ಅನನ್ಯವಾಗಿದ್ದು ಮಾನವೀಯ ಮೌಲ್ಯಗಳನ್ನು ಚಿತ್ರಿಸುವ ಕಥೆಗಳು ಮೂಡಿಬರಬೇಕು.” ಎಂದರು. ಮುಖ್ಯ ಅತಿಥಿಯಾಗಿದ್ದ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮಾತನಾಡಿ “ಸಾಹಿತ್ಯ ಸೃಷ್ಟಿ ವಿಶಿಷ್ಟ ಅನುಭವವಾಗಿದ್ದು ಉದಯೋನ್ಮುಖ ಕಥೆಗಾರರು ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕು ಎಂದರು.” ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ…
ಮಂಗಳೂರು : ಮಾಂಡ್ ಸೊಭಾಣ್ ಪ್ರವರ್ತಿತ ತಿಂಗಳ ವೇದಿಕೆ ಸರಣಿಯ 266ನೇ ಕಾರ್ಯಕ್ರಮ ದಿನಾಂಕ 04-02024ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಅನಿವಾಸಿ ರಂಗಕರ್ಮಿ ಆಲ್ವಿನ್ ಪಿಂಟೊ, ದುಬಾಯ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರಿಕಾರ ಎರಿಕ್ ಒಝೇರಿಯೊ, ಖಜಾಂಚಿ ಎಲ್ರೊನ್ ರೊಡ್ರಿಗಸ್ ವೇದಿಕೆಯಲ್ಲಿದ್ದರು. ನಂತರ ನಾಟಕ ಕಲಾಕುಲ್ ರೆಪರ್ಟರಿ ಹಾಗೂ ಮಾಂಡ್ ತಂಡದ ಕಲಾವಿದರುಗಳು ದಿ. ಜಾರ್ಜ್ ಪಿಂಟೊ ಐಕಳ ಇವರು ರಚಿಸಿದ 3 ಕಿರುನಾಟಕಗಳಾದ ಸಯ್ರಿಕ್, ಬಾಂದ್ ಹಾಗೂ ಭಿಜುಡ್ ಇವುಗಳನ್ನು ಪ್ರದರ್ಶಿಸಿದರು. ಈ ನಾಟಕಗಳನ್ನು ವಿಕಾಸ್ ಕಲಾಕುಲ್ ನಿರ್ದೇಶಿಸಿದ್ದರು. ನಾಟಕಗಳ ನಡುವೆ ಆಲ್ರಿಶಾ ರೊಡ್ರಿಗಸ್ ಕೈಕಂಬ ಮತ್ತು ಸೃಜನಾ ಮತಾಯಸ್ ಜಾರ್ಜ್ ಇವರ ಕವಿತೆಗಳನ್ನು ವಾಚಿಸಿದರು. ಕಲಾಕುಲ್ ರೆಪರ್ಟರಿಯ ವೆನಿಶ, ವಿನ್ಸನ್, ಡಾರ್ವಿನ್, ವರ್ಷಿತಾ, ಜೊಯ್ಸನ್ ಹಾಗೂ ಮಾಂಡ್ ನಾಟಕ ತಂಡದ ಸದಸ್ಯರಾದ ಸಂದೀಪ್, ಸವಿತಾ, ರಾಹುಲ್, ಕೇರನ್ ಮತ್ತು ವೆರಿನಾ ನಟಿಸಿದರು. ಜ್ಯಾಕ್ಸನ್ ಡಿಕುನ್ಹಾ ವೇದಿಕೆ ವಿನ್ಯಾಸ ಮಾಡಿದರೆ, ಜೀವನ್ ಸಿದ್ದಿ ಸಂಗೀತ ಹಾಗೂ ಆಮ್ರಿನ್…
ಕಾಸರಗೋಡು : ಕಾಸರಗೋಡಿನ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ನೀಡುವ ‘ಕಲಾ ಚೈತನ್ಯ’ ಪ್ರಶಸ್ತಿಗೆ ಸುಳ್ಯದ ಕಲಾ ಪ್ರತಿಭೆ ಅವನಿ ಎಂ. ಎಸ್. ಆಯ್ಕೆಯಾಗಿದ್ದಾಳೆ. ದ.ಕ ಜಿಲ್ಲೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿಗಳಾದ ಮೋಂಟಡ್ಕ ಶಶಿಧರ ಎಂ. ಜೆ. ಮತ್ತು ರೇಷ್ಮಾ ದಂಪತಿಗಳ ಮುದ್ದಿನ ಪುತ್ರಿಯಾದ ಕು. ಅವನಿ ಎಂ. ಎಸ್. ಪ್ರಸ್ತುತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಾಂಗಮಾಡುತ್ತಿದ್ದಾಳೆ. ತನ್ನ ಒಂಬತ್ತನೆಯ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಇವಳು ಎಲ್.ಕೆ.ಜಿ ಓದುತ್ತಿರುವಾಗಲೇ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಸಂಗೀತ, ಯೋಗ, ನೃತ್ಯ, ಚೆಸ್, ಚಿತ್ರಕಲೆ ಭರತನಾಟ್ಯ, ನಟನೆ, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವಳ ಹವ್ಯಾಸವಾಗಿದೆ. ತನ್ನ 4ನೇ ವಯಸ್ಸಿನಿಂದ ಸುಗಮ ಸಂಗೀತವನ್ನು ಗುರುಗಳಾದ ಡಾ. ಕಿರಣ್ ಕುಮಾರ್ ಗಾನಸಿರಿ ಪುತ್ತೂರು ಇವರಿಂದ ತರಬೇತಿಯನ್ನು ಪಡೆಯುತ್ತಿರುವ ಈಕೆ, ವಿದ್ವಾನ್ ಕಾಂಚನಾ…
ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಏರ್ಪಡಿಸಿದ್ದ ‘ಯಕ್ಷ ತ್ರಿವೇಣಿ’ ಕಾರ್ಯಕ್ರಮವನ್ನು ದಿನಾಂಕ 01-02-2024ರಂದು ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟಿಸಿದರು. ಅವರು ಮಾತನಾಡಿ “ಯಕ್ಷಗಾನಕ್ಕೆ ಜಾನಪದೀಯ-ಪಾರಂಪರಿಕ ಸೊಗಡಿದೆ. ಅದನ್ನು ಬೆಳೆಸಲು ಹಿಂದಿನವರು ಬಹಳ ಪ್ರಯತ್ನಿಸಿದ್ದಾರೆ. ಅದನ್ನು ಉಳಿಸಿ ಬೆಳೆಸುವಲ್ಲಿ ದಿ. ಲಕ್ಮೀನಾರಾಯಣ ಅಲೆವೂರಾಯರಂತಹಾ ಕಲಾವಿದರು ಬಹಳ ಕೊಡುಗೆ ಕೊಟ್ಟಿದ್ದಾರೆ. ಅಂತಹವರ ಸಂಸ್ಮರಣೆಯನ್ನು ಅಲೆವೂರಾಯ ಸಹೋದರರು ಮಾಡುತ್ತಾ ಬರುತ್ತಿದ್ದಾರೆ. ಈ ಏಳನೇ ವರ್ಷದಲ್ಲೂ ಹಿರಿಯರನ್ನು ಗೌರವಿಸುವ ಕಾರ್ಯ ಸ್ತುತ್ಯರ್ಹ. ಅದಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ನೆರವು ನೀಡುತ್ತೇವೆ” ಎಂದು ನುಡಿದರು. “ಶ್ರೀಕ್ಷೇತ್ರ ಶರವು ಎಲ್ಲಾ ಕಾರ್ಯಕ್ರಮಗಳಿಗೆ ತವರು ಮನೆ, ಯಕ್ಷಗಾನ – ನಾಟಕ- ಸಿನಿಮಾವೇ ಮೊದಲಾದ ಕಾರ್ಯಕ್ರಮಕ್ಕೆ ಶುಭಾರಂಭಿಕ ಆಶ್ರಯ ತಾಣ. ಶಾಸ್ತ್ರಗಳು ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲದಕ್ಕೂ ಮಾರ್ಗದರ್ಶನ ಮಾಡಿ ಹರಸುತ್ತಾರೆ. ಅವರ ಉದಾರತೆ, ಕಲೆಯ ಮೇಲಿನ ಪ್ರೀತಿ ಅಲೆವೂರಾಯ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರನ್ನು ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಪ್ರತಿಷ್ಠಾನದ…
ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ದ.ರಾ. ಬೇಂದ್ರೆ ಭವನದಲ್ಲಿ ದಿನಾಂಕ 31-01-2024ರಂದು ನಡೆದ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನಾಚರಣೆಯಲ್ಲಿ ಬೆಂಗಳೂರಿನ ಪ್ರೊ. ಬಸವರಾಜ ಕಲ್ಗುಡಿ ಅವರಿಗೆ 2024ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಪ್ರೊ. ಬಸವರಾಜ ಕಲ್ಗುಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಮತ್ತು ಫಲಪುಷ್ಪ ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಬಸವರಾಜ ಕಲ್ಗುಡಿ ಅವರು, “ಕುವೆಂಪು, ಡಾ. ದ.ರಾ. ಬೇಂದ್ರೆ ಅವರಿಗಿದ್ದ ಭಾಷೆಯ ಹೊಳಹು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಈ ಭಾಗದ ಕರ್ನಾಟಕ ಛಿದ್ರ ಛಿದ್ರವಾಗಿತ್ತು. ಎಲ್ಲೆಡೆ ಮರಾಠಿಮಯವಾಗಿದ್ದ ಅಂದಿನ ಕಾಲದಲ್ಲಿ ಕನ್ನಡದ ಅಸ್ಮಿತೆ ಎನ್ನುವುದು ತುಂಬಾ ವಿರಳ. ಒಂದು ಭಾಷೆಯನ್ನು ಸಾಮಾಜಿಕವಾಗಿ ಬಹುದಿನಗಳವರೆಗೆ ಬಳಕೆ ಮಾಡದೇ ಇದ್ದರೆ ಅದು ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬಿಡುತ್ತದೆ.…
ಉಡುಪಿ : ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ದಿನಾಂಕ 24-01-2024ರಂದು ವಿಸ್ಮಯ ಜಾದೂ ಪ್ರದರ್ಶನಗೊಂಡಿತು. ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ ಕುದ್ರೋಳಿಯವರು ನಿರಂತರ ಮೂರು ಗಂಟೆ ರಾಜಾಂಗಣದಲ್ಲಿ ಮಾಯಾಲೋಕವನ್ನೇ ನಿರ್ಮಿಸಿದ್ದರು. 2000ಕ್ಕೂ ಮಿಕ್ಕಿ ಸೇರಿದ್ದ ಪೇಕ್ಷಕರು ಗಣೇಶರವರ ಚಾಕಚಕ್ಯತೆಯನ್ನು ಮನಸಾರೆ ಕೊಂಡಾಡಿದರು. ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ ಯಕ್ಷಿಣಿ, ಸುಪ್ತ ಮನಸ್ಸಿನ ಚಮತ್ಕಾರ, ನವರಸಪೂರ್ಣ ಜಾದೂ, ಸಮಕಾಲೀನ ಮತ್ತು ಆಧುನಿಕ ಮ್ಯಾಜಿಕ್ ಇಲ್ಯೂಷನ್ ಸಂಗಮದ ಕಾರ್ಯಕ್ರಮ ಪುತ್ತಿಗೆ ಪರ್ಯಾಯಕ್ಕಾಗಿ ವಿಶೇಷವಾಗಿ ಸಿದ್ದಪಡಿಸಲಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೂಡಾ ತಮ್ಮ ಶಿಷ್ಯನೊಂದಿಗೆ…
ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಫೆಬ್ರವರಿ 11 ಕುಂದಾಪುರ : ಡಾ. ಸುಧಾಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಿತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಇದರ ಫೆಬ್ರವರಿ ತಿಂಗಳ ಕಾರ್ಯಕ್ರಮವು ದಿನಾಂಕ 11-02-2024ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಇಂದ್ರಾಳಿಯ ಶಿವಪ್ರಭಾ ಯಕ್ಷಗಾನ ಕೇಂದ್ರದವರಿಂದ ‘ವೈವಿಧ್ಯಮಯ ಕಾರ್ಯಕ್ರಮಗಳು’ ನಡೆಯಲಿರುವುದು. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟಿನ ಅಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಭಾಸ್ಕರ್ ಕೊಗ್ಗ ಕಾಮತ್ ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.
ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರ ಸಹಯೋಗದಲ್ಲಿ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಜನಪದ ಗಾಯಕ ಮಾಚಾರು ಗೋಪಾಲ ನಾಯ್ಕ ಹೇಳಿದ ತುಳು ಸಿರಿಕಾವ್ಯವನ್ನು ಪುಸ್ತಕ ರೂಪಕ್ಕಿಳಿಸಿದ ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಈ ಕೃತಿಯ ಲೇಖಕರಾಗಿದ್ದಾರೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀ ನಾರಾಯಣ ಕಾರಂತ ಇವರ ಉಪಸ್ಥಿತಿಯಲ್ಲಿ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಕೃತಿ ಅನಾವರಣ ಮಾಡಲಿದ್ದಾರೆ. ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಕೃತಿ ವಿಮರ್ಶೆ ಮಾಡಲಿದ್ದು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ದಿವಂಗತ ಮಾಚಾರು ಗೋಪಾಲ ನಾಯ್ಕ ಅವರು ತುಳು ಸಿರಿಕಾವ್ಯವನ್ನು ಹಲವು…
ಮಂಗಳೂರು : ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 04-02-2024ರಂದು ಕಲಾಸಕ್ತರಿಗೆ ಸರದೌತಣ ನೀಡುವ ಇಬ್ಬರು ಕಲಾವಿದರ ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರಿನ ನೃತ್ಯಗುರು ವಿದ್ವಾನ್ ಪ್ರವೀಣ್ ಕುಮಾರ್ ಅವರ ಶಿಷ್ಯೆ ನವ್ಯಶ್ರೀ ಕೆ.ಎನ್. ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು. ಮೊದಲಿಗೆ ಕಾಂಭೋಜಿ ರಾಗ-ಆದಿತಾಳದಲ್ಲಿ ‘ವರ್ಣಂ’ ಪ್ರದರ್ಶಿಸಿದ ಅವರು ಬಳಿಕ ‘ಜಗದೋದ್ಧಾರನ ಆಡಳಿಸಿದಳು ಯಶೋದೆ’ ಎಂಬ ಪುರಂದರದಾಸರ ಕೃತಿಯನ್ನು ಉತ್ತಮವಾಗಿ ಸಾದರಪಡಿಸಿದರು. ಬಳಿಕ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿ ಹಾಗೂ ನೃತ್ಯಗುರುಗಳಾದ ವಿದುಷಿ ರಾಧಿಕಾ ಶೆಟ್ಟಿ ‘ಮಾನುಷಿ’ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿದರು. ಸರಸ್ವತಿ ನದಿಯ ಅನ್ವೇಷಣೆಯಿಂದ ಆರಂಭವಾಗುವ ಈ ಪ್ರಸ್ತುತಿಯು ನದಿಯ ಹುಟ್ಟಿನಿಂದ ಹರಿವಿನವರೆಗೆಯ ಕುತೂಹಲಕಾರಿ ವ್ಯಾಖ್ಯಾನಗಳನ್ನು ಒಳಗೊಂಡಿತ್ತು. ಸರಸ್ವತಿ ಇನ್ನೂ ಹರಿಯುತ್ತಾಳೆಯೇ? ಅವಳು ಉತ್ಸಾಹಭರಿತಳೇ? ಎಂಬ ಪ್ರಶ್ನೆಗಳೊಂದಿಗೆ ಅನ್ವೇಷಣೆಯ ಪಥವನ್ನು ಮುಂದುವರಿಸುತ್ತ, ಮೀರಾಬಾಯಿಯ ಕಡೆಗೆ ಹೊರಳಿದರು. ಆಕೆಯ ಕೃಷ್ಣಾನ್ವೇಷಣೆಗೆ ಸಾಂತ್ವನ ಲಭಿಸಿತೇ ಎಂಬ ಪ್ರಶ್ನೆ ಎದುರಾಗುತ್ತ, ಮತ್ತೊಂದೆಡೆ ತಾಯ್ತನದ ವರ್ಣನಾತೀತ ಅನುಭವದಿಂದ ದೇವಕಿ ವಂಚಿತಳಾದ ಬಗ್ಗೆ ಕಲಾವಿದೆ ಬೆಳಕು ಚೆಲ್ಲುತ್ತಾರೆ.…