Author: roovari

ಮಂಗಳೂರು : ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 15ರಿಂದ ಅಕ್ಟೋಬರ್ 23ರವರೆಗೆ ವೈಭವದಿಂದ ನಡೆಯಲಿದ್ದು, ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ನಾನಾ ಸಾಂಸ್ಕೃತಿಕ ತಂಡಗಳು, ಕಲಾವಿದರು ತಮ್ಮ ತಮ್ಮ ಅರ್ಜಿಗಳನ್ನು ಆಗಸ್ಟ್ 30ರೊಳಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕಚೇರಿಗೆ ಅಥವಾ [email protected] ಕಳುಹಿಸಬಹುದಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಹೆಚ್‌.ಎಸ್. ಸಾಯಿರಾಂ ತಿಳಿಸಿದ್ದಾರೆ.

Read More

ಮಂಜೇಶ್ವರ : ಅಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಮ್ಸ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿ.ರವೀಂದ್ರನ್‌ ಕುಂಬಳೆ ಬರೆದಿರುವ ‘ತುರ್ತು ಪರಿಸ್ಥಿತಿಯ ಕರಾಳ ದಿನಗಳು’ ಪುಸ್ತಕದ ಕನ್ನಡ ಆವೃತ್ತಿಯ ಬಿಡುಗಡೆ ಸಮಾರಂಭವು ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ದಿನಾಂಕ 06-08-2023ರಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ. ಕೇಂದ್ರದ ಮಾಜಿ ಸಚಿವ ಮತ್ತು ಹಾಲಿ ಸಂಸದ ಶ್ರೀ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಪುಸ್ತಕವನ್ನು ಪರಿಚಯಿಸುವರು. ಕೃತಿಕಾರ ಶ್ರೀ ವಿ.ರವೀಂದ್ರನ್ ಕುಂಬಳೆ ಲೇಖಕರ ಮಾತುಗಳನ್ನಾಡುವರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀ ಪಿ.ಕೆ.ಕೃಷ್ಣದಾಸ್ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದು, ತುರ್ತು ಪರಿಸ್ಥಿತಿ ಸಂತ್ರಸ್ತ ಶ್ರೀ ಎಂ.ಕೆ.ಭಟ್ ಕಾಯರ್‌ಕಟ್ಟೆ ಪುಸ್ತಕವನ್ನು ಸ್ವೀಕರಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಆಮಂತ್ರಿತ ಸದಸ್ಯ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಧಾನ ಭಾಷಣ ಮಾಡುವರು. ಈ ಸಂದರ್ಭದಲ್ಲಿ ವಿವಿಧ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಇವರ ಜಂಟಿ ಸಹಭಾಗಿತ್ವದಲ್ಲಿ ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ‘ಉತ್ಸವ ಸಭಾಂಗಣ’ದಲ್ಲಿ ದಿನಾಂಕ 29-07-2023ರಂದು ‘ಅರಿವು – ತಿಳಿವು’ ಕಾರ್ಯಕ್ರಮವು ನಡೆಯಿತು. ಸಾಹಿತಿ ಹಾಗೂ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್ ‘ಲೂಸಿಯಾಡ್ಸ್ ಅಥವಾ ಭಾರತದ ಅನ್ವೇಷಣೆ’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ “ವಾಸ್ಕೋಡಾಗಾಮ ಭಾರತಕ್ಕೆ ಜಲಮಾರ್ಗವನ್ನು ಕಂಡು ಹುಡುಕಿದ ಕಥಾನಕವನ್ನು ಪುರಾಣಕಥೆಯಂತೆ ಹೇಳುವ ‘ಲೂಸಿಯಾಡ್ಸ್’ ಎಂಬ ಪೋರ್ಚುಗೀಸ್ ಮಹಾಕಾವ್ಯವು ವಿಶ್ವದ ಮಹತ್ವದ ಮಹಾಕಾವ್ಯಗಳಲ್ಲಿ ಒಂದಾಗಿದೆ. ಜಗತ್ತಿನ ಎಲ್ಲಾ ಭಾಷೆಗಳಿಗೂ ಇದು ಅನುವಾದಗೊಳ್ಳುವುದರೊಂದಿಗೆ ಕನ್ನಡಕ್ಕೂ ಅನುವಾದಗೊಂಡಿದ್ದು ಓದಲೇ ಬೇಕಾದ ಕಾವ್ಯ. ಕವಿ ಕಮೋಯಿಶ್ ಪೋರ್ಚುಗೀಸರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವಂತೆ ಈ ಸುಂದರ ಕಾವ್ಯವನ್ನೂ ದಶಕಗಳ ಕಾಲ ಬರೆದು ಪ್ರಕಟಿಸಿದ. ಇದರಲ್ಲಿ ಪೋರ್ಚುಗೀಸ್ ಇತಿಹಾಸದ ಜೊತೆಗೆ ಭಾರತದಲ್ಲಿ ಆಗ ನಡೆದಿದ್ದ ಘಟನೆಗಳನ್ನು ಮತ್ತು ಸಾಮಾಜಿಕ ವಿವರಗಳನ್ನು ಇತಿಹಾಸಕ್ಕೆ ನಿಷ್ಟವಾದ ನಿರೂಪಣೆಯೊಂದಿಗೆ ಕವಿಯು ಇಲ್ಲಿ ದಾಖಲಿಸಿದ್ದಾರೆ ಮತ್ತು ಐತಿಹಾಸಿಕವಾಗಿಯೂ ಇದೊಂದು ಮಹತ್ವದ…

Read More

ಬದಿಯಡ್ಕ : ರಾಮಾಯಣ ವಾರಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬಂದಂತೆ ಬದಿಯಡ್ಕ ನವ ಜೀವನ ವಿದ್ಯಾಲಯದ ಸಮೀಪದಲ್ಲಿರುವ ಶ್ರೀ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ರಾಮಾಯಣ ವಾರಾಚರಣೆ ಕಾರ್ಯಕ್ರಮವು ದಿನಾಂಕ 16-07-2023ರಂದು ಉದ್ಘಾಟನೆಗೊಂಡು ದಿನಾಂಕ 17-07-2023 ಮತ್ತು ದಿನಾಂಕ 23-07-2023ರಂದು ಕಾರ್ಯಕ್ರಮಗಳು ನಡೆದವು. ರಾಮಾಯಣ ವಾರಚರಣೆಯ ಆಗಸ್ಟ್ ತಿಂಗಳ ಕಾರ್ಯಕ್ರಮವು ದಿನಾಂಕ 06-08-2023, 12-08-2023, 13-08-2023 ಮತ್ತು 15-08-2023ರಂದು ನಡೆಯಲಿದ್ದು, ಈ ಸಂದರ್ಭ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 06-08-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರು ಧಾರ್ಮಿಕ ಮುಖಂಡರಾದ ಡಾ. ಶ್ರೀನಿಧಿ ಸರಳಾಯ ವಹಿಸಲಿದ್ದು, ಸಾಹಿತಿ ಶ್ರೀಮತಿ ಶಾರದಾ ಕಾಡಮನೆ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಖ್ಯಾತ ವೈದ್ಯರು ಧಾರ್ಮಿಕ ಮುಖಂಡರಾದ ಡಾ. ವಿಷ್ಣು ಪ್ರಕಾಶ್ ಬರೆಕರೆ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬದಿಯಡ್ಕದ ಸುನಾದ ಸಂಗೀತ ಕಲಾ ಶಾಲೆ ಇವರಿಂದ ಸುನಾದ ‘ಯುವ ಭಾರತಿ ಕಾರ್ಯಕ್ರಮ’ ನಡೆಯಲಿದೆ. ದಿನಾಂಕ…

Read More

ಕಾಸರಗೋಡು : ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿಚಿನ್ನಾರಿಯ 7ನೇ ಸರಣಿ ಕಾರ್ಯಕ್ರಮ ‘ಶ್ರಾವಣ ಧಾರಾ’ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ 30-07-2023ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಹಕ್ಕು ಸಂಘಟನೆ ಕಾಸರಗೋಡಿನ ರಾಜ್ಯಾಧ್ಯಕ್ಷೆ ಜುಲೇಖಾ ಮಾಹಿನ್ ನಾರಿಚಿನ್ನಾರಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಇದರ ಯಶಸ್ಸಿನ ಹಿಂದೆ ಸದಸ್ಯರ ಪರಿಶ್ರಮ ಎದ್ದು ಕಾಣುತ್ತದೆ ಎಂದು ಹೇಳಿದರು. ಆರೋಗ್ಯ ತಜ್ಞೆ ಡಾ. ಸಂಗೀತ ಸಚ್ಚಿದಾನಂದ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಾವ್ರತಿ ಮಂಜುಳಾ ರಾವ್ ಹಾಗೂ ಸಮಾಜ ಸೇವಕಿ ಚಂದ್ರಾವತಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಗೌರವಾಧ್ಯಕ್ಷೆ ತಾರಾ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಸವಿತಾ ಟೀಚರ್ ಅತಿಥಿಗಳಿಗೆ ಹೂ ಕುಂಕುಮದ ಆತಿಥ್ಯವನ್ನು ನೀಡಿದರು. ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಡಾ. ಸಂಗೀತ ಸಚ್ಚಿದಾನಂದ್ ಅವರು ‘ಮಳೆಗಾಲದ ಆಹಾರ…

Read More

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಂಗಳೂರು ಜರ್ನಿ ಥಿಯೇಟರ್ ಗ್ರೂಫ್ ಹಾಗೂ ಹಳೆ ವಿದ್ಯಾರ್ಥಿಸಂಘದ ಸಹಯೋಗದಲ್ಲಿ ನಡೆದ ಒಂದು ದಿನದ ರಂಗ ಚಟುವಟಿಕೆಗಳ ಕುರಿತ ಕಾರ್ಯಗಾರವು ದಿನಾಂಕ 23-07-2023ರಂದು ನಡೆಯಿತು. ಕಟೀಲು ದೇಗುಲದ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಪುರಾಣ, ಇತಿಹಾಸಗಳ ವಿಚಾರಗಳನ್ನು ತಿಳಿಸಿ ಚಿಂತನಾಶಕ್ತಿಯನ್ನು ಹೆಚ್ಚಿಸಿ ಬದುಕಿನ ಪಾಠ ಹೇಳಿಕೊಡುವ ಕಾರ್ಯವನ್ನು ರಂಗಭೂಮಿ, ನಾಟಕಗಳು ಮಾಡುತ್ತವೆ” ಎಂದು ಹೇಳಿದರು. ಶಿಬಿರಾರ್ಥಿಗಳಿಂದ ರಂಗಗೀತೆ ಹಾಗೂ ಕಿರು ಪ್ರಹಸನ ಪ್ರದರ್ಶನಗೊಂಡವು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕಟೀಲು ಪ.ಪೂ. ಕಾಲೇಜಿನ ಪ್ರಾಚಾರ್ಯೆ ಕುಸುಮಾವತಿ, ಶಿಕ್ಷಕರಾದ ರಾಜಶೇಖರ್, ಶೈಲಜಾ, ತನುಜಾ, ಜರ್ನಿ ಥಿಯೇಟರ್ ಗ್ರೂಪಿನ ಅರ್ಜುನ್ ಆಚಾರ್ಯ, ರಾಘವ ಸೂರಿ. ಸುಧೀಶ್ ಕೂಡ್ಲು, ರೋಹನ್. ಎಸ್. ಉಚ್ಚಿಲ್, ಚಿನ್ಮಯಿ. ವಿ. ಭಟ್ ಮತ್ತು ಶಶಾಂಕ್ ಐತಾಳ್ ಉಪಸ್ಥಿತರಿದ್ದರು.

Read More

ಹೊಸಕೋಟೆ : ಹೊಸಕೋಟೆಯ ನಿಂಬೆಕಾಯಿಪುರದ ‘ಜನಪದರು ರಂಗ ಮಂದಿರ’ದಲ್ಲಿ, ರಂಗಪಯಣ ತಂಡ ಬೆಂಗಳೂರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗಾಗಿ ಜುಲೈ 31ರಂದು 31 ಜಿಲ್ಲೆಗಳ 31 ರಂಗ ಮಂದಿರಗಳಲ್ಲಿ 31 ಕಲಾವಿದರು ಏಕಕಾಲದಲ್ಲಿ ನಿಗದಿತ ಸಮಯ ಸಂಜೆ 7-10ರಿಂದ 8-05ರವರೆಗೆ ರಾಜಗುರು ಹೊಸಕೋಟೆಯವರ ರಚನೆ – ಸಂಗೀತ – ನಿರ್ದೇಶನದಲ್ಲಿ – “55 ನಿಮಿಷದ ಒಂದು ಪ್ರೇಮ ಕಥೆ…” ನಾಟಕವನ್ನು ಬೆ೦ಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಜನಪದರು ತಂಡ’ದ ನಟ ನಾಗೇಶ್ ಬೋಧನ ಹೊಸಹಳ್ಳಿಯವರು ನಟಿಸಿ ಸೈ ಎನಿಸಿಕೊಂಡರು. ಪ್ರೇಕ್ಷಕರು ಕುತೂಹಲದಿಂದ ಏಕವ್ಯಕ್ತಿ ಪ್ರದರ್ಶನ ಸವಿದರು. ಅತಿಥಿಗಳಾಗಿ ಸಾಹಿತಿ ಡಾ. ಬಾಲಗುರುಮೂರ್ತಿ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ಎನ್. ನಾರಾಯಣಸ್ವಾಮಿ ಹಾಗೂ ಕಲಾವಿದ ನಾಗೇಶರನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ರ ಪಾಪಣ್ಣ ಕಾಟಂ ನಲ್ಲೂರು ಸನ್ಮಾನಿಸಿ ಗೌರವಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ದ ಬನಹಳ್ಳಿ, ಚಲಪತಿ ಹಾಗೂ ಮುನಿರಾಜು ಮತ್ತು ಇತರರು ಉಪಸ್ಥಿತರಿದ್ದರು. ನಾಗೇಶ್ ಬೋಧನ ಹೊಸಹಳ್ಳಿ ‘ಬಯಸಿದಂತೆ…

Read More

ಮಂಗಳೂರು : ಮಂಗಳೂರಿನ ಗದ್ದೆಕೇರಿ ರಸ್ತೆಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ, ತನ್ನ 101 ನೆಯ ವರ್ಷದಲ್ಲಿ ‘ ಶ್ರೀ ರಾಮ ಚರಿತಾಮೃತ’ ಎನ್ನುವ ಶ್ರೀ ರಾಮನ ಕಥಾನಕವನ್ನು ವರ್ಷ ಪೂರ್ತಿ ಪ್ರತಿ ಭಾನುವಾರ ವಿಶೇಷ ಕೂಟಗಳ ಮೂಲಕ ಪ್ರಸ್ತುತಪಡಿಸಿ ಈಗ ಶಿವ ಪುರಾಣದ ಕಥೆಗಳನ್ನು ಆಯ್ದುಕೊಂಡು ತನ್ನ 102 ನೆಯ ವರ್ಷದ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 30.07.2023ರಂದು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ‘ತ್ರಿಪುರ ಮಥನ’ ಯಕ್ಷಗಾನ ತಾಳಮದ್ದಳೆ ಜರಗಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಅಶೋಕ್ ಬೋಳೂರು ಹಾಗೂ ಶೋಭಾ ಐತಾಳ್, ಮದ್ದಳೆ ವಾದನದಲ್ಲಿ ಸಂಜಯ ಕುಮಾರ್, ಚೆಂಡೆ ವಾದನದಲ್ಲಿ ಶಿವಪ್ರಸಾದ್ ಪ್ರಭು, ಅರ್ಥಧಾರಿಗಳಾಗಿ ಶಿವಾನಂದ ಪೆರ್ಲಗುರಿ, ಪ್ರಭಾಕರ ಕಾಮತ್, ರಮೇಶ ಆಚಾರ್ಯ, ಸಂಜಯ ಕುಮಾರ್ ಮತ್ತು ಶ್ರೇಯಸ್ ಪಾಲ್ಗೊಂಡರು.

Read More

ದಿನಾಂಕ 10-07-2023ರಂದು ಒಂದು ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಹ ಅವಕಾಶ ನನಗೆ ಒದಗಿ ಬಂತು. ಇದು ತುಳುಲಿಪಿಯ ಪುನರುಜ್ಜೀವನದ ಕಾರ್ಯದಲ್ಲಿ ಐತಿಹಾಸಿಕ ಘಟನೆ ಎಂದರೆ ತಪ್ಪಾಗಲಾರದು ಎಂದು ಭಾವಿಸುತ್ತೇನೆ. ಯಾಕೆಂದರೆ ನಿನ್ನೆ ತುಳುಲಿಪಿಯ ಪ್ರಪ್ರಥಮ ಭಗವದ್ಗೀತೆ ಪುಸ್ತಕದ ಬಿಡುಗಡೆ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದಲ್ಲಿ ನಡೆಯಿತು. ಇದರ ಲೇಖಕರು ವಿದುಷಿ ಶ್ರೀಮತಿ ಅಪರ್ಣಾ ಕೊಡಂಕಿರಿಯವರು. ಇವರು ಮೂಲತಃ ನೃತ್ಯ ವಿದ್ವಾಂಸರಾದರೂ ಸಹ ತಮಗೆ ತುಳು ಭಾಷೆಯ ಮೇಲಿರುವ ಅಕ್ಕರೆಯನ್ನು, ಗ್ರಾಂಥಿಕವಾಗಿ ತುಳುನಾಡಿನ ಸಮಸ್ತ ಜನರಿಗೂ ಭಗವದ್ಗೀತೆ ಅನುವಾದದ ಮೂಲಕ ಸಮರ್ಪಿಸಿದರು. ಇವರ ಅನುಜ ಮುಕುಂದ ಉಂಗ್ರುಪುಳಿತ್ತಾಯ ಅವರು ಉಡುಪಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡುವಲ್ಲಿ ತುಳು ಲಿಪಿಯ ಪರಿಚಯವಾಯಿತು. ತಮ್ಮನಿಂದ ಕಲಿತ ಲಿಪಿಯನ್ನು ಹವ್ಯಾಸಕ್ಕಾಗಿ ಅಭ್ಯಾಸ ಮಾಡುತ್ತಿರುವಾಗ ಬಂದಂತಹ ಆಲೋಚನೆಯೇ ಈ ಪುಸ್ತಕದ ಹಿಂದಿನ ಸ್ಪೂರ್ತಿ. ಅಷ್ಟಕ್ಕೂ ಈ ಪುಸ್ತಕದಲ್ಲೇನಿದೆ ಮಹಾ! ಇನ್ನೊಂದು ಭಗವದ್ಗೀತೆಯ ಅನುವಾದವಷ್ಟೇ ಎಂದುಕೊಂಡರೆ ಮೂರ್ಖತನವಾಗುವುದು, ಏಕೆಂದರೆ, ಈ ಅನುವಾದ ತುಳು…

Read More

ಧಾರಾಕಾರವಾಗಿ ಮಳೆಸುರಿದು ತೊಯ್ದನೆಲ. ತುಂಬಿ ತುಳುಕಿ ಹರಿಯುತ್ತಿರುವ ನಂದಿನೀ ನದಿ. ಸೊಂಪಾಗಿ ಬೆಳೆದಿರುವ ಸಸ್ಯರಾಶಿ. ದಿನಾಂಕ 23-07-2023ರ ಷಷ್ಠಿ ತಿಥಿಯಂದು ಕಟೀಲಮ್ಮನ ದರ್ಶನಕ್ಕೆಂದು ಬಂದು ಹೋಗುತ್ತಿರುವ ಭಕ್ತ ಸಮೂಹ. ದೇವ ಸಾನಿಧ್ಯದಲ್ಲಿ ಯಾವತ್ತೂ ನಡೆಯುವ ಪೂಜೆ ಪುನಸ್ಕಾರಗಳು. ಶ್ರೀ ದುರ್ಗಾಪರಮೇಶ್ವರಿಯ ಆರಾಧನೆಯ ಸುತ್ತಮುತ್ತ ನಡೆಯುತ್ತಿದ್ದ ಈ ಎಲ್ಲ ಚಟುವಟಿಕೆಗಳ ಚಲನಶೀಲತೆಯೊಂದಿಗೆ ಮಧುರವಾಗಿ ವೇಣುವಾದನದ ಸ್ವರ ಸಮೂಹವೂ ಹುಮ್ಮಸ್ಸಿನಿಂದ ಮೇಳೈಸಿದ ಅನುಭವವನ್ನು ಇತ್ತೀಚೆಗೆ ನಾವು ಪಡೆಯುವಂತಾಯಿತು. ಸಂದರ್ಭವೊದಗಿದ್ದು ಹೀಗೆ- ಹಿರಿಯ ಸಂಗೀತ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಧುರಧ್ವನಿ-ಸುಪ್ರಭಾತ ಸೇವೆ’ ಎಂಬ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣ ಪವನ್ ಕುಮಾರರ ವೇಣುವಾದನ ಕಛೇರಿ. ಒಂದು ಗಂಟೆಯ ಅವಧಿಗೆ ಸೀಮಿತವಾಗಿದ್ದರೂ ಹದವರಿತ ಪ್ರಸ್ತುತಿ, ಯಾವುದೇ ಓಟ ಎಳೆತಗಳಿಲ್ಲ, ದೇವಸಾನ್ನಿಧ್ಯದ ಚಲನಶೀಲತೆಯ ಲಯದೊಂದಿಗೆ ಹೊಂದಿಕೊಂಡಿದ್ದರೂ ಶ್ರವಣೇಂದ್ರಿಯಗಳ ಮೂಲಕ ಚಿತ್ತವನ್ನು ಸೆಳೆದ ರಾಗಲಹರಿ. ಏಳು ಸಂಗೀತ ರಚನೆಗಳಿಂದ ಬದ್ಧವಾಗಿತ್ತು ಆ ಸುಪ್ರಭಾತ ಸಂಗೀತ ಸೇವೆ. ಎಲ್ಲವೂ ದೇವಿಯ ವಿವಿಧ ರೂಪಗಳ,…

Read More